Monday, July 18, 2011

ಫನ್ಗ್ಯಾಲರಿ ‘ಕೇರಾಫ್’ ಪ್ರಕಾಶ್ ಶೆಟ್ಟಿ !


ದೇಶದ ಎಲ್ಲ ರಾಜ್ಯಗಳನ್ನು ಸುತ್ತಾಡಿಕೊಂಡು ಬಂದರೂ ‘ಫನ್ ಗ್ಯಾಲರಿ’ ಕಾನ್ಸೆಪ್ಟ್ ಎಲ್ಲೂ ಕಾಣ ಸಿಗೋಲ್ಲ. ಅದನ್ನು ಬೆಂಗಳೂರಿನಲ್ಲಿ ಹುಡುಕಬೇಕು. ವೀಕೆಂಡ್ ಡೇಸ್ನಲ್ಲಿ ಫನ್ಗ್ಯಾಲರಿಗೊಮ್ಮೆ ವಿಸೀಟ್ ಕೊಟ್ಟು ನೋಡಿ.

‘ಮನಯ ಗೋಡೆಯಲ್ಲಿಡುವುದಕ್ಕೆ ಈ ಫ್ಯಾಮಿಲಿ ಕ್ಯಾರಿಕೇಚರ್ಸ್ ಎಷ್ಟು ಚೆನ್ನಾಗಿದೆ ನೋಡಿ ! ಮೂಡ್ ಔಟ್ ಆದಾಗಲೆಲ್ಲ ನೋಡಿ ಖುಷಿ ಪಡಬಹುದು’ ಎಂದವರು ಬೆಂಗಳೂರು ನೆಲಮಂಗಳದ ನಿವಾಸಿ ಜಯಮಾಲಾ.
‘ಇಲ್ನೋಡಿ ನಾನು ಯಾವತ್ತು ಲ್ಯಾಪ್ಟಾಪ್ ಮುಂದೆ ಕೂತಿರುತ್ತೇನೆ. ಅದನ್ನೇ ಬರೆದುಬಿಟ್ಟಿದ್ದಾರೆ. ನನ್ನ ಹೆಂಡ್ತಿ ಅಡುಗೆ ಎಕ್ಸ್ಪರ್ಟ್ ಅಂತಲೂ ಅವರಿಗೆ ಗೊತ್ತಾಗಿದೆ. ಮಗಳಿಗೆ ಪುಸ್ತಕ ಓದುವ ಹವ್ಯಾಸ ಇರೋದು ಎಲ್ಲವನ್ನು ಅಷ್ಟು ಚೆನ್ನಾಗಿ ನಾವು ಹೇಳದೇ ಬರೆದುಬಿಟ್ಟಿದ್ದಾರೆ’ ಎನ್ನುತ್ತಾರೆ ಬೆಂಗಳೂರಿನ ಐಟಿಯಲ್ಲಿ ದುಡಿಯುತ್ತಿರುವ ಸಾಫ್ಟ್ವೇರ್ ಎಂಜಿನಿಯರ್ ರಾಜೇಶ್ ಜೇವಿಯನ್ ಡಿಸೋಜ.
ಹೌದು..ಇದು ಫನ್ಗ್ಯಾಲರಿಯ ಕರಾಮತ್ತು. ದೇಶದ ಎಲ್ಲ ರಾಜ್ಯಗಳನ್ನು ಇಡಿ ಬಿಡಿಯಾಗಿ ಸುತ್ತಾಡಿಕೊಂಡು ಬಂದರೂ ‘ಫನ್ ಗ್ಯಾಲರಿ’ ಕಾನ್ಸೆಪ್ಟ್ ಎಲ್ಲೂ ಕಾಣ ಸಿಗೋಲ್ಲ. ಅದು ಸಿಗಬೇಕಾದರೆ ನಮ್ಮ ರಾಜ್ಯದ ಬೆಂಗಳೂರಿನಲ್ಲಿಯೇ ಹುಡುಕಬೇಕು. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಗೋಕುಲ್ ಆರ್ಕೆಡ್ ಮಾಲ್ನ ಸೂರಿನೊಳಗೆ ವಿಶಿಷ್ಟ ರೀತಿಯ ಫನ್ಗ್ಯಾಲರಿ ಎದ್ದು ನಿಂತು ಬರೋಬರಿ ಒಂದು ವರ್ಷ ಆಗಿದೆ.
ಇಂತಹ ಫನ್ಗ್ಯಾಲರಿಯ ವಿಶಿಷ್ಟತೆ ಹುಡುಕಿಕೊಂಡು ಗೂಗಲ್ ಸರ್ಚ್ ಎಂಜಿನ್ಗೂ ಮೊರೆ ಹೋಗಿ ಬಂದವರಿದ್ದಾರೆ. ಮೆಟ್ರೋ ಸಿಟಿಗಳ ವಿಶಿಷ್ಟ ಪರಂಪರೆಯಲ್ಲಿ ಒಂದಾದ ‘ವೀಕೆಂಡ್ ಡೇಸ್’ನಲ್ಲಿ ಫನ್ಗ್ಯಾಲರಿಯೊಳಗೆ ಯುವಜನತೆಯ ಸಾಲೇ ಜಮಾಯಿಸಿರುತ್ತದೆ. ಐಟಿ- ಬಿಟಿಯ ಓವರ್ ವರ್ಕ್ ಲೋಡ್ನಿಂದ ಇಳಿದುಕೊಂಡು ಬರುವ ಯುವಜನತೆ ಫನ್ಗ್ಯಾಲರಿಯಲ್ಲಿ ಕೂತು ಒಂಚೂರು ನಕ್ಕು ವಾಪಸಾಗುತ್ತಿದೆ. ಇದು ಬೆಂಗಳೂರಿನಲ್ಲಿರುವ ‘ಫನ್ಗ್ಯಾಲರಿ’ ಬೆಳೆಸಿಕೊಂಡು ಬಂದಿರುವ ಕಿಮ್ಮತ್ತು !
ಏನೂಂಟು ಮಾರಾಯ್ರೆ:
‘ಫನ್ಗ್ಯಾಲರಿ’ ಸಬ್ಜೆಕ್ಟ್ ತುಂಬಾನೇ ಡಿಫರೆಂಟ್. ಯಾಕ್ ಅಂತ್ತೀರಾ..? ಇಲ್ಲಿ ಬರುವವರು ಹೊಟ್ಟೆ ತುಂಬಾ ನಕ್ಕು ಹೊರ ಹೋಗುತ್ತಾರೆ. ಶಾರೂಕ್, ಚಾಪ್ಲಿನ್, ಸಚಿನ್ರಂತಹ ಕ್ಯಾರಿಕೇಚರ್ಗಳು ನಿಮಷಾರ್ಧದಲ್ಲಿ ತಯಾರಾಗಿ ನಿಮ್ಮ ಮನೆ ಸೇರುತ್ತದೆ. ಟೀ -ಶರ್ಟ್ ಮೇಲೆ ನೀವೇ ಕ್ಯಾರಿಕೇಚರ್ ರೂಪದಲ್ಲಿ ನಿಂತು ದಿನಾಲೂ ನಗುವ ಚಾನ್ಸ್ ಎಲ್ಲಿ ತಾನೇ ಸಿಗಬಹುದು. ಆದರೆ ಅಂತಹ ಚಾನ್ಸ್ ಇಲ್ಲಿ ಗ್ಯಾರಂಟಿಯಾಗಿ ಸಿಗುತ್ತದೆ.
ಮದುವೆ, ವಿದಾಯ, ಹುಟ್ಟುಹಬ್ಬಕ್ಕೆ ವಿಭಿನ್ನ ರೂಪದ ಕಾರ್ಟೂನ್ಗಳು ಸಿದ್ಧವಾಗಿ ಪಡೆದುಕೊಂಡವರು ಸದಾ ಕಾಲ ನಗೆಕಡಲಿನಲ್ಲಿ ತೂಗಾಡುವಂತೆ ಮಾಡುವ ಕೆಲಸ ಇಲ್ಲಿ ದಿನಾಲೂ ನಡೆಯುತ್ತಿದೆ. ಇಂತಹ ವಿಚಿತ್ರ ಐಡಿಯಾಗಳ ಹಿಂದೆ ಕರಾವಳಿ ಮೂಲದ ಖ್ಯಾತ ಕಾರ್ಟೂನಿಷ್ಟ್ ಪ್ರಕಾಶ್ ಶೆಟ್ಟಿ ಇದ್ದಾರೆ. ತನ್ನ ಕ್ಯಾರಿಕೇಚರ್ ಮೂಲಕ ಭಿನ್ನ ರೀತಿಯ ಸುದ್ದಿ ಮಾಡುವ ಪ್ರಕಾಶ್ ಶೆಟ್ಟರು ಈ ಫನ್ಗ್ಯಾಲರಿಯಿಂದ ಹೊಸ ಟ್ರೆಂಡ್ ಮಾಡಲು ಸಿದ್ಧರಾಗಿದ್ದಾರೆ.
ಈ ಫನ್ಗ್ಯಾಲರಿಯ ಕುರಿತು ಪ್ರಕಾಶ್ ಶೆಟ್ಟಿ ಹೇಳುವುದಿಷ್ಟು: ನಾನು ನನ್ನ ಕಲೆಯನ್ನು ಬದುಕುವ ಕಲೆಯನ್ನಾಗಿ ಸ್ವೀಕರಿಸುವುದರ ಹಿಂದೆ ಒಂದು ಕಾರಣವಿದೆ. ಎಲ್ಲರೂ ಕ್ಯಾರಿಕೇಚರ್ನ್ನು ಒಂದು ಪ್ರವೃತ್ತಿಯಾಗಿ ಪ್ರೀತಿಸುತ್ತಿದ್ದಾರೆ. ನಾನು ಹಾಸ್ಯಸೇವೆ ಎಂದು ಭಾವಿಸಿಕೊಂಡಿದ್ದೇನೆ. ನಮ್ಮ ಕಲಾವಿದರು ಜನರನ್ನು ಮುಟ್ಟುವ ಪ್ರಯತ್ನ ಸರಿಯಾಗಿ ಮಾಡುತ್ತಿಲ್ಲ . ಶ್ರೀಸಾಮಾನ್ಯ ವಲಯಕ್ಕೂ ನಾನು ಮುಟ್ಟಬೇಕು ಎನ್ನುವ ಉದ್ದೇಶದಿಂದ ಈ ಫನ್ಗ್ಯಾಲರಿಗೆ ಇಳಿದಿದ್ದೇನೆ ಎನ್ನುತ್ತಾರೆ ಅವರು.
ಮೆಟ್ರೋ ಸಿಟಿಯ ಓವರ್ ಒತ್ತಡದಿಂದ ಬಳಲುತ್ತಿರುವವರು, ನಗಲು ಮರೆತು ಕೂತವರು ಇನ್ನಾದರೂ ಎದ್ದು ನಿಂತು ಫನ್ಗ್ಯಾಲರಿಗೆ ವಿಸೀಟ್ ಕೊಡಬಹುದು. ಪ್ರಕಾಶ್ ಶೆಟ್ಟರ ಕ್ಯಾರಿಕೇಚರ್ ಬಿಡಿಸುವ ಮೋಡಿಗೆ ಸಿಲುಕದೇ ವಾಪಸು ಮನೆ ಸೇರುವ ಮಾತೇ ಇಲ್ಲ ಎನ್ನೋದು ಬಹುತೇಕ ಫನ್ಗ್ಯಾಲರಿ ಪ್ರಿಯರ ಒಕ್ಕೊರಲಿನ ಮಾತು.
(Vk daily lvk puravani Published dis article 19.07.2011)

No comments:

Post a Comment