Tuesday, July 12, 2011

ದುಬಾರಿ ಇಂಧನ ಉಳಿಕೆಗೆ ಸುಲಭದ ವಿಧಾನ


ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ರಾಕೆಟ್ನಂತೆ ಓಡುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಪೆಟ್ರೋಲ್ ಬ್ಯಾರಲ್ ದರ ಏರುತ್ತಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಇತ್ತ ಕಡೆ ಕೇಂದ್ರವೇ ಪೆಟ್ರೋಲ್ ದರ ಏರಿಸಿ ಕೂತಿದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ನಿಜಕ್ಕೂ ಪೆಟ್ರೋಲ್ ದರ ಇಳಿಯುವ ಸಾಧ್ಯತೆಯಂತೂ ಕ್ಷೀಣಿಸುತ್ತಿದೆ. ಆದರೂ ಪೆಟ್ರೋಲ್ ಹಾಕಿ ವಾಹನ ಓಡಿಸುವ ಮಂದಿ ಯಾವ ರೀತಿಯಲ್ಲಿ ಇಂಧನ ಉಳಿಸಬಹುದು ಎಂಬುವುದಕ್ಕೆ ಇಲ್ಲಿ ಕೊಂಚ ಸರಳ ಟಿಪ್ಸ್ಗಳಿವೆ... ಪಾಲಿಸಿ ನೋಡಿ ಬಿಡಿ.

* ನಿಮ್ಮ ವಾಹನದ ಟಯರ್ಗಳಿಂದಲೂ ಇಂಧನ ಉಳಿಸಬಹುದು ಅಂತಾ ಗೊತ್ತಾ..? ಟಯರ್ಗಳ ಗಾಳಿಯನ್ನು ಯಾವಾಗಲೂ ಭರ್ತಿ ಇರುವಂತೆ ನೋಡಿಕೊಳ್ಳಿ. ಅದು ಅತ್ಯಂತ ಸರಳವಾಗಿ ಇಂಧನ ಉಳಿಸುವ ಮಾರ್ಗೋಪಾಯ. ಅತೀ ಹೆಚ್ಚು ಗಾಳಿ ಟಯರ್ಗಳಲ್ಲಿ ಇದ್ದರೆ ನಿಮ್ಮ ವಾಹನ ಹೆಚ್ಚು ಇಂಧನ ಕುಡಿಯುತ್ತದೆ ಎಂದು ಅರ್ಥ ಎನ್ನುವುದು ವಾಹನ ತಯಾರಕರ ಮಾತು.
* ಒಂದೇ ರೀತಿಯ ವೇಗದಿಂದ ವಾಹನಗಳನ್ನು ಓಡಿಸಿ. ಸಂಚಾರ ಕಡಿಮೆ ಇರುವ ರಸ್ತೆಗಳಲ್ಲಿ ಹೆಚ್ಚು ವೇಗದಿಂದ ವಾಹನವನ್ನು ಓಡಿಸಲು ಹೋಗಬೇಡಿ. ನಿಮ್ಮ ವಾಹನದ ವೇಗ ಹೆಚ್ಚಿದಂತೆ ಇಂಧನ ಕೂಡ ಹೆಚ್ಚಾಗುತ್ತದೆ ಎಂದು ತಿಳಿದಿರಲಿ. ನಿಮ್ಮ ಕಾರಿನ ವೇಗ ೧೦೦ ಕಿ.ಮೀ ದಾಟಿದೆ ಎಂದಾದರೆ ಶೇ ೧೫ರಷ್ಟು ಪೆಟ್ರೋಲ್ ಜಾಸ್ತಿ ಕುಡಿದಿದೆ ಎಂದಾರ್ಥ. ಅದಷ್ಟೂ ನಿಮ್ಮ ವಾಹನದ ವೇಗ ೫೦ ಕಿ.ಮೀಕ್ಕಿಂತ ಹೆಚ್ಚು ಇಲ್ಲದೇ ಇರಲಿ.
* ವಾಹನಗಳಲ್ಲಿ ತೆಳ್ಳಗಿನ ಟಯರ್(ಚಕ್ರ)ಗಳನ್ನು ಬಳಸಿಕೊಳ್ಳಿ. ಇದು ನಿಮ್ಮ ವಾಹನವನ್ನು ನಿಯಂತ್ರಣ ಮಾಡಲು ಸುಲಭ ಹಾಗೂ ಇಂಧನ ಉಳಿಕೆಕೂಡ ಸಾಧ್ಯ. ತೆಳ್ಳಗಿನ ಟಯರ್ಗಳು ಹೆಚ್ಚು ಬಾರಿ ರೋಲಿಂಗ್(ತಿರುಗುವ) ಸಾಮರ್ಥ್ಯವನ್ನು ಹೊಂದಿರುತ್ತದೆ.
* ವಾಹನ ಸ್ಟಾರ್ಟ್ ಆಗಿ ೩೦ ಸೆಕೆಂಡ್ಗಿಂತ ಹೆಚ್ಚು ಕಾಲ ರೈಸ್ ಮಾಡಿ ಇಟ್ಟುಕೊಳ್ಳಬೇಡಿ. ಜತೆಗೆ ವಾಹನದ ಗೇರ್ಗಳನ್ನು ಪದೇ ಪದೇ ಬದಲಾಯಿಸಲು ಹೋಗಬೇಡಿ ಎರಡು ಕೂಡ ಇಂಧನ ಉಳಿಕೆಗೆ ಮಾರಕ.
* ವಾಹನದಲ್ಲಿ ಅನಗತ್ಯವಾದ ಭಾರದ ವಸ್ತುಗಳನ್ನು ಹೊತ್ತುಕೊಂಡು ಹೋಗಬೇಡಿ. ನಿಮ್ಮ ವಾಹನದ ಭಾರಕ್ಕಿಂತ ದುಪ್ಪಟ್ಟು ಭಾರ ಶೇ.೨ರಷ್ಟು ಇಂಧನವನ್ನುತಿನ್ನುತ್ತದೆ ಎಂಬುವುದು ಗೊತ್ತಿರಲಿ. ವಾಹನವನ್ನು ಅತೀಯಾಗಿ ಅಲ್ಟ್ರೇಶನ್ ಮಾಡುವುದು ಕೂಡ ಈ ಪಟ್ಟಿಯಲ್ಲಿ ಸೇರಿಕೊಳ್ಳುತ್ತದೆ.
* ವಾಹನದ ಬ್ರೇಕ್ಗಳನ್ನು ಪದೇ ಪದೇ ಹಾಕುವುದು ಹಾಗೂ ಎಕ್ಸಿಲರೇಟರ್ ಪದೇ ಪದೇ ಕೊಡುವುದರಿಂದಲೂ ನಿಮ್ಮ ವಾಹನದ ಇಂಧನ ಉಳಿಕೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆ.
* ನೀವು ವಾಹನದಲ್ಲಿ ಬಳಸುವ ಎ.ಸಿ ಕೂಡ ಶೇ ೧೦ರಷ್ಟು ಇಂಧನವನ್ನು ನುಂಗುತ್ತದೆ. ವಾಹನದಲ್ಲಿ ೮೦ ಕಿ.ಮೀ ವೇಗದಲ್ಲಿ ಹೋಗುತ್ತಿದ್ದರೆ ವಾಹನದ ಕಿಟಿಕಿಗಳನ್ನು ಒಪನ್ ಮಾಡಿ ಇಟ್ಟುಕೊಳ್ಳಿ ಇದ್ದರಿಂದ ಇಂಧನ ಕೂಡ ಉಳಿತಾಯವಾಗುತ್ತದೆ.
* ನೀವು ಪೆಟ್ರೋಲ್ ಬಂಕ್ನಲ್ಲಿ ಇಂಧನ ಹಾಕುವ ವೇಳೆಯಿಂದಲೂ ಇಂಧನ ಉಳಿಸಲು ಸಾಧ್ಯವಿದೆ. ಬೆಳಗ್ಗಿನ ಹೊತ್ತುಹವಾಮಾನ ತಂಪಾಗಿರುತ್ತದೆ. ಈ ವೇಳೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ನಲ್ಲಿ ಹೆಚ್ಚು ಇಂಧನ ಶೇಖರಣೆಯಾಗುತ್ತದೆ. ಅದೇ ಮಧ್ಯಾಹ್ನ, ಸಂಜೆ ಹೊತ್ತು ಈ ರೀತಿ ನಡೆಯುವುದಿಲ್ಲ. ಒಂದು ಲೀಟರ್ ಪೆಟ್ರೋಲ್ ಹಾಕಿದರೆ ಅದು ಭರ್ತಿ ಒಂದು ಲೀಟರ್ ಯಾಗಿರುವುದಿಲ್ಲ.
* ಪೆಟ್ರೋಲ್ ಬಂಕ್ನಲ್ಲಿ ಇಂಧನ ಹಾಕುವ ವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಿ. ೧ ನಿಧಾನ,೨ ಮಧ್ಯಮ, ೩ ವೇಗ ಈ ರೀತಿಯಲ್ಲಿ ಪೆಟ್ರೋಲ್ ಬಂಕ್ನಲ್ಲಿ ಇಂಧನ ತುಂಬಿಸಲಾಗುತ್ತದೆ. ಮಧ್ಯಮ ಹಾಗೂ ವೇಗವಾಗಿ ಇಂಧನ ತುಂಬಿಸಲಾಗುತ್ತದೆ ಎಂದಾದರೆ ಜೋರಾಗಿ ಮೀಟರ್ ತಿರುಗುತ್ತದೆ ಹೊರತು,ನಿಮ್ಮ ಬೆಲೆಗೆ ತಕ್ಕ ಇಂಧನ ಸಿಕ್ಕಿಲ್ಲ ಎಂದಾರ್ಥ.
* ವಾಹನದ ಪೆಟ್ರೋಲ್ ಟ್ಯಾಂಕ್ ಅರ್ಧ ಇಂಧನ ಇದ್ದಾಗ ಅದರೊಳಗೆ ತುಂಬಿರುವ ಗಾಳಿಯ ಸಾಂದ್ರತೆ ಹೆಚ್ಚಾಗಿರುತ್ತದೆ. ಆಗ ಪೆಟ್ರೋಲ್ ಖರ್ಚಾಗುವುದು ಕೂಡ ಕಡಿಮೆಯಾಗಿರುತ್ತದೆ. ಆದರೆ ಪೂರ್ತಿ ಟ್ಯಾಂಕ್ ಪೆಟ್ರೋಲ್ ಇದ್ದಾಗ ಗಾಳಿಯ ಸಾಂದ್ರತೆ ಕಡಿಮೆ ವಾಹನ ಇಂಧನ ಕುಡಿಯುವ ಸಾಮರ್ಥ್ಯ ಕೂಡ ಹೆಚ್ಚಾಗಿರುತ್ತದೆ.
* ಇಂಧನ ಬೆಲೆ ಜಾಸ್ತಿ ಆಯಿತು ಎಂದುಕೊಂಡು ಪೆಟ್ರೋಲ್ ಬದಲಾಗಿ ಬೇರೆಕಳಪೆ ಇಂಧನ ಬಳಸಿದರೆ ವಾಹನ ಕೈ ಕೊಟ್ಟು ಬಿಟ್ಟಿತು. ಇದು ಉಳಿಕೆಯ ಬದಲು ಹಣ ಕಳೆದುಕೊಳ್ಳುವ ಮಾರ್ಗವಾಗಬಹುದು.
* ದ್ವಿಚಕ್ರ ವಾಹನವನ್ನು ಎಲ್ಲದರೂ ಪಾರ್ಕಿಂಗ್ ಮಾಡುವುದಾದರೆ ಸುಡುಬಿಸಿಲಿಗೆ ಪಾರ್ಕಿಂಗ್ ಮಾಡಬೇಡಿ. ಅದಷ್ಟೂ ಬಿಸಿಲು ಇಲ್ಲದ ಜಾಗ ನೋಡಿ ಪಾರ್ಕಿಂಗ್ ಮಾಡಿಬಿಡಿ. ಬಿಸಿಲಿಗೆ ಪಾರ್ಕಿಂಗ್ ಮಾಡಿದರೂ ಕೂq ಪೆಟ್ರೋಲ್ ಟ್ಯಾಂಕ್ ಮೇಲೆ ಒದ್ದೆ ಬಟ್ಟೆ ಹಾಕಿಬಿಡಿ. ಅದು ನಿಮ್ಮ ವಾಹನದ ಇಂಧನ ಉಳಿಸುತ್ತದೆ.
* ವಾಹನದ ಎಂಜಿನ್ ಕುರಿತು ಜಾಗೃತವಾಗಿರಿ. ಕೆಟ್ಟ ಎಂಜಿನ್ ನಿಮ್ಮ ವಾಹನದ ಮೈಲೇಜ್ ಕಿತ್ತುಕೊಳ್ಳುವುದರ ಜತೆಗೆಶೇ ೨೦ರಷ್ಟು ಇಂಧನವನ್ನುಕಸಿದುಬಿಡುತ್ತದೆ. ಎಂಜಿನ್ಗೆ ಹಾಕುವ ಲ್ಯೂಬ್ರಿಕೇಟ್ಸ್ಗಳು ಬ್ರಾಂಡೆಡ್ ಆಗಿರಲಿ. ವಾಹನದ ತಯಾರಕರು ಯಾವುದನ್ನು ಮಾನ್ಯ ಮಾಡಿರುತ್ತಾರೋ ಅದನ್ನೇ ಬಳಸಿಕೊಳ್ಳಿ. ಆಯಿಲ್ಗಳನ್ನು ಬದಲಾಯಿಸುವಾಗ ಮೊದಲು ಬಳಸಿದ ಆಯಿಲ್ಗಳನ್ನುತೊಳೆದುಬಿಡಿ. ಇದು ವಾಹನz ಎಂಜಿನ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
* ವಾಹನಗಳನ್ನು ಓಡಿಸುವಾಗ ಅದಷ್ಟೂ ಪ್ಲ್ಯಾನ್ ಮಾಡಿಕೊಂಡು ರಸ್ತೆಗೆ ಇಳಿಯಿರಿ. ಕೆಲವೊಂದು ಲಾಂಗ್ ರೂಟ್ಗಳು ವಾಹನದ ಇಂಧನ ಉಳಿಸುತ್ತದೆ. ಹತ್ತಿರದ ರೂಟ್ಗಳು ಟ್ರಾಫಿಕ್ನಿಂದಾಗಿ ಹೆಚ್ಚು ಇಂಧ ಖಾಲಿಯಾಗಬಹುದು.
* ಅದಷ್ಟೂ ಸಾರ್ವಜನಿಕ ವಾಹನಗಳನ್ನು ಬಳಸಿಕೊಳ್ಳಿ. ಅಪರೂಪಕ್ಕೊಂದು ಬಾರಿಯಾದರೂ ಕಚೇರಿಗೆ ಹೋಗುವಾಗಬಸ್ನಲ್ಲಿ ಪ್ರಯಾಣಿಸಿ. ಇದು ನಿಮ್ಮ ಹಣ ಉಳಿತಾಯ ಮಾಡುವುದರ ಜತೆಯಲ್ಲಿ ಟ್ರಾಫಿಕ್ ವ್ಯವಸ್ಥೆಗೂ ನೀವು ನೆರವಾಗುತ್ತೀರಿ.
* ಬಹಳ ಹತ್ತಿರದ ಸ್ಥಳಗಳಿಗೆ ವಾಹನ ಬಳಸಬೇಡಿ. ಇದು ಇಂಧನ ಉಳಿಕೆಗೆ ಮಾರಕ. ಹತ್ತಿರದ ಸ್ಥಳಗಳಿಗೆ ವಾಕಿಂಗ್ ಮಾಡಿ. ಇದು ಹಣ ಉಳಿತಾಯದ ಜತೆಯಲ್ಲಿ ನಿಮ್ಮ ಆರೋಗ್ಯಕ್ಕೂ ಉತ್ತಮ.
* ಇಂಧನದ ಬೆಲೆಏರುತ್ತಾ ಹೋಗುತ್ತಿರುವುದರಿಂದ ಪರ್ಯಾಯ ಇಂಧನದ ಕಡೆ ಗಮನ ಕೊಡಿ. ಪೆಟ್ರೋಲ್ ಬದಲಾಗಿ ಎಲ್ಪಿಜಿ/ಸಿಎನ್ಜಿಗಳನ್ನು ಬಳಸಿಕೊಳ್ಳಿ. ಇದು ಶೇ ೩೦ರಿಂದ ೪೦ರಷ್ಟು ಇಂಧನ ಉಳಿಕೆಗೆ ಸಹಕಾರಿಯಾಗುತ್ತದೆ.
-

No comments:

Post a Comment