Saturday, July 16, 2011

ರಂಗೀಲಾ ಬೆಡಗಿ ಉರ್ಮಿಳೆ !


ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮರ ‘ನಾಟ್ ಎ ಲವ್ ಸ್ಟೋರಿ’ ವಿವಾದಗಳಿಂದ ಸುದ್ದಿಯಾಗುವ ಜತೆಯಲ್ಲಿ ಆರ್ಜಿವಿಯ ಜತೆಯಲ್ಲಿ ಮಾತು ಬಿಟ್ಟವರು ಕೂಡ ನಟಿಸುತ್ತಿದ್ದಾರೆ. ಅದೇ ಸಾಲಿನಲ್ಲಿ ರಂಗೀಲಾ ಬೆಡಗಿ ಉರ್ಮಿಳಾ ಐಟಂ ಸಾಂಗ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್ನ ದೊಡ್ಡ ಹಿಟ್ ಚಿತ್ರ ‘ರಂಗೀಲಾ’ ಬೆಡಗಿ ಉರ್ಮಿಳಾ ಮಾಂತೋಡ್ಕರ್ ರಾಮ್ಗೋಪಾಲ್ ವರ್ಮರ ಕ್ಯಾಂಪ್ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಮುಂಬಯಿ ಗಲ್ಲಿಯಲ್ಲಿ ಹರಿದಾಡುತ್ತಿದೆ. ೯೦ರ ದಶಕದಲ್ಲಿ ಇವರಿಬ್ಬರ ಕಾಂಬಿನೇಷನ್ನಲ್ಲಿ ತೆರೆಕಂಡ ಚಿತ್ರಗಳೆಲ್ಲವೂ ಹಿಟ್ ಅನ್ನಿಸಿಕೊಂಡಿತ್ತು.
೯೫ರಲ್ಲಿ ಬಿಡುಗಡೆಯಾದ ‘ರಂಗೀಲಾ’ ನಂತರ ಆರ್ಜಿವಿಯ ಜತೆಯಲ್ಲಿ ಉರ್ಮಿಳಾ ‘ದೌಡ್’, ‘ಸತ್ಯ’, ‘ಮಸ್ತ್’, ‘ಕೌನ್’, ‘ಜಂಗಲ್’ ಹಾಗೂ ‘ಬೂತ್’ನಲ್ಲಿ ಮಿಂಚಿದ್ದರು. ಆರ್ಜಿವಿಯ ಆರಂಭದ ಚಿತ್ರಗಳಲ್ಲಿ ಉರ್ಮಿಳಾರಿಗೆ ಸಿಗುತ್ತಿದ್ದ ಬಹುಮುಖ್ಯವಾದ ರೋಲ್ಗಳಿಂದ ಇಬ್ಬರ ನಡುವೆ ಸಿನ್ಮಾ ಬಿಟ್ಟು ಬೇರೆ ಸಂಬಂಧ ಇದೆ ಎನ್ನುವ ಗಾಸಿಪ್ ಕೂಡ ತೆರೆಮರೆಯಲ್ಲಿ ಕೇಳಿ ಬರುತ್ತಿತ್ತು.
ಈ ಎಲ್ಲ ವಿವಾದಗಳಿಂದ ದೂರ ಓಡುತ್ತಿದ್ದ ಎರಡು ಜೋಡಿಗಳು ಮತ್ತೆ ಮತ್ತೆ ಸಿನ್ಮಾದ ಮೂಲಕ ಒಂದಾಗುತ್ತಿದ್ದರು. ಆರ್ಜಿವಿ ಕ್ಯಾಂಪ್ನಲ್ಲಿ ಯಾವಾಗ ಹೊಸ ನಾಯಕಿಯರು ಕಾಣಿಸಿಕೊಳ್ಳಲಾರಂಭಿಸದರೋ ಅಲ್ಲಿಂದ ಉರ್ಮಿಳಾ ಸೈಡ್ನಲ್ಲಿ ಉಳಿಯಲಾರಂಭಿಸಿದರು.
ಶೋಲೆಯ ರಿಮೇಕ್ ಚಿತ್ರ ‘ರಾಮ್ ಗೋಪಾಲ್ ಕೀ ಅಗ್’ಯಲ್ಲಿ ಉರ್ಮಿಳಾ ‘ಮೆಹಬೂಬಾ ಮೆಹಬೂಬಾ’ ಎನ್ನುವ ಐಟಂ ಸಾಂಗ್ನಲ್ಲಿ ಮತ್ತೆ ಒಂದಾಗಿದ್ದರು. ನಂತರ ಬಂದ ಆರ್ಜಿವಿ ನಿರ್ದೇಶನದ ಚಿತ್ರಗಳಲ್ಲಿ ಉರ್ಮಿಳಾ ನಾಪತ್ತೆಯಾಗಿ ಹೋದರು.
ಈಗ ಉರ್ಮಿಳಾ ಮತ್ತೆ ರಾಮ್ ಗೋಪಾಲ್ ವರ್ಮರ ಜತೆಗೂಡಿದ್ದಾರೆ. ರಾಮ್ಗೋಪಾಲ್ ವರ್ಮರ ಬಹಳ ವಿವಾದದಿಂದ ಕೂಡಿದ ಮರಿಯಾ ಸುಸೈರಾಜ್ ಪ್ರಕರಣದಿಂದ ಪ್ರೇರಿತ ‘ನಾಟ್ ಎ ಲವ್ ಸ್ಟೋರಿ’ ಚಿತ್ರದ ಪ್ರಮುಖ ಐಟಂ ಸಾಂಗ್ನಲ್ಲಿ ಉರ್ಮಿಳಾ ಕುಣಿಯಲಿದ್ದಾರೆ ಎನ್ನುವುದು ಚಿತ್ರ ತಂಡದಿಂದ ಹೊರ ಬಂದ ಮಾಹಿತಿ.
ದಿಲ್ಲಿಯ ಕೆಲವೊಂದು ಭಾಗದಲ್ಲಿ ಈ ಚಿತ್ರದ ಹಾಡಿನ ಚಿತ್ರೀಕರಣ ಈಗಾಗಲೇ ನಡೆದಿದೆ. ಉಳಿದಂತೆ ಉರ್ಮಿಳಾ ಮಾಂತೋಡ್ಕರ್, ರಾಮ್ ಗೋಪಾಲ್ ವರ್ಮರ ಜತೆಯಲ್ಲಿ ಚಿತ್ರದ ಪರ ಪ್ರಮೋಶನ್ ಕಾರ್ಯಕ್ಕೆ ಇಳಿದಿದ್ದಾರೆ ಎನ್ನುವ ಸುದ್ದಿನೂ ಬಂದಿದೆ. ಮಾಧ್ಯಮಗಳಲ್ಲಿ ಇಬ್ಬರ ಸಂಬಂಧಗಳ ಕುರಿತು ಕೇಳಿ ಬರುತ್ತಿದ್ದ ಗಾಸಿಪ್ಗಳಿಗೆ ಬೆಲೆ ಕೊಡದ ಉರ್ಮಿಳಾ ಹೇಳುತ್ತಿದ್ದದ್ದು ಇಷ್ಟೇ : ನಾವಿಬ್ಬರು ಒಂದೇ ವೃತ್ತಿಯಲ್ಲಿರುವುದರಿಂದ ಇಂತಹ ಗಾಸಿಪ್ಗಳು ಕಾಮನ್. ಇದರಿಂದ ನಮ್ಮ ಸಂಬಂಧ ಹಾಳಾಗುವುದಿಲ್ಲ ಎಂದಿದ್ದರು.
ಇದೇ ರೀತಿಯ ಮಾತನ್ನು ಆರ್ಜಿವಿ ತನ್ನ ಹಿಂದಿನ ಚಿತ್ರ ‘ಏಕ್ ಹಸೀನಾ ತೀ’ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅಲ್ಲಿಗೆ ಮಾಧ್ಯಮಗಳು ಇಬ್ಬರ ಸಂಬಂಧಕ್ಕೆ ತೆರೆ ಎಳೆದು ಬಿಟ್ಟಿತು. ಆದರೆ ಈಗ ಆರ್ಜಿವಿ ಹಾಗೂ ಉರ್ಮಿಳೆ ಜತೆಗೂಡಿದ್ದಾರೆ. ಮತ್ತೆ ಮಾಧ್ಯಮಗಳಲ್ಲಿ ‘ಲವ್ವಿಡವ್ವಿ ’ ಸುದ್ದಿಗಳು ಹರಿದಾಡುವ ಸೂಚನೆಯಂತೂ ಬರಬಹುದೇನೋ..? ಕಾದು ಕೂರೋಣ...
......

No comments:

Post a Comment