
ಕಾಲಿವುಡ್ ಸಿನ್ಮಾಕ್ಕೆ ಹೊಸ ಹುಡುಗ ವಿಕ್ರಂ ಪ್ರಭು ಬರುತ್ತಿದ್ದಾರೆ. ಅವರೇನ್ ವಿಶೇಷ ಅಂತ್ತೀರಾ...ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಶಿವಾಜಿ ಗಣೇಶನ್ ಈ ಹುಡುಗನಿಗೆ ಅಜ್ಜನಾಗಬೇಕು. ತಮಿಳಿನ ನಟ ಪ್ರಭು ತಂದೆಯಾಗಬೇಕು. ಇದು ವಿಕ್ರಂ ಪ್ರಭು ಅವರ ಶಾರ್ಟ್ ಇಂಟರ್ಡಕ್ಷನ್ ಮಾರ್ಕ್.
ನಮ್ಮ ಪಕ್ಕದ ಕಾಲಿವುಡ್ ಸಿನ್ಮಾ ಇಂಡಸ್ಟ್ರಿಗೆ ಹೊಸ ಹುಡುಗನ ಎಂಟ್ರಿಯಾಗಿದೆ. ಕಾಲಿವುಡ್ ಸಿನ್ಮಾ ಮಂದಿನೇ ಹಾಗೇ ಅಲ್ಲಿ ಅದ್ಧೂರಿತನದ ಜತೆಗೆ ಪ್ರತಿಭಾವಂತರಿಗಂತೂ ಮೊದಲ ಮಣೆ ಇದ್ದೇ ಇರುತ್ತದೆ. ಹೊಸ ಹೊಸ ಹುಡುಗರು ಬಂದು ಅಭಿಮಾನಿಗಳ ಸ್ಟಾರ್ಗಳಾಗಿ ಮಿಂಚಿದವರ ಸಂಖ್ಯೆ ಎಲ್ಲ ಇಂಡಸ್ಟ್ರಿಕ್ಕಿಂತ ಜಾಸ್ತಿ ಕಾಲಿವುಡ್ನಲ್ಲಿ ಕಾಣ ಸಿಗುತ್ತದೆ.
ಕಾಲಿವುಡ್ ಸಿನ್ಮಾದ ದೊಡ್ಡ ಮಾರ್ಕೆಟ್, ಗಲ್ಲಿ ಗಲ್ಲಿಯಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ಗಳಿಗಾಗಿ ಕಟ್ಟುವ ‘ಅಭಿಮಾನಿ ಸಂಘ’, ಅಲ್ಲಿ ತುಂಬಿ ತುಳುಕುವ ಸಿನ್ಮಾ ಕ್ರೇಜ್ ಟೋಟಲಿ ಸೂಪರ್ ಎಂದು ಇತರ ಸಿನ್ಮಾ ಇಂಡಸ್ಟ್ರಿಯವರೇ ಹೇಳಿಕೊಳ್ಳುವುದಿದೆ. ಇಂತಹ ಇಂಡಸ್ಟ್ರಿಗೆ ಈಗ ಹೊಸ ಹುಡುಗನ ಆಗಮನವಾಗಿದೆ. ಈ ಹುಡುಗನ ಬ್ಯಾಕ್ಗ್ರೌಂಡೇ ತುಂಬಾ ದೊಡ್ಡದಿದೆ.
ಅದೇನಪ್ಪಾ ಅಂದ್ರೆ ಒಂದು ಕಾಲದಲ್ಲಿ ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಶಿವಾಜಿ ಗಣೇಶನ್ ಈ ಹುಡುಗನಿಗೆ ಅಜ್ಜನಾಗಬೇಕು. ತಮಿಳಿನ ನಟ ಪ್ರಭು ತಂದೆಯಾಗಬೇಕು. ಹೌದು, ಇದು ವಿಕ್ರಂ ಪ್ರಭು ಅವರ ಶಾರ್ಟ್ ಇಂಟರ್ಡಕ್ಷನ್ ಮಾರ್ಕ್. ಅಂದಹಾಗೆ ವಿಕ್ರಂ ಪ್ರಭುರ ಚಿತ್ರವನ್ನು ತಮಿಳಿನ ಸೂಪರ್ ಹಿಟ್ ಚಿತ್ರ ‘ಮೈನಾ’ದ ನಿರ್ದೇಶಕ ಪ್ರಭು ಸಲೋಮನ್ ನಿರ್ದೇಶನ ಮಾಡುತ್ತಿದ್ದಾರೆ. ಟೋಟಲಿ ಈ ಎರಡು ವಿಚಾರಗಳಿಂದ ಚಿತ್ರ ಬರುವ ಮೊದಲೇ ಕುತೂಹಲದ ಹಬೆ ಎದ್ದು ಕೂತಿದೆ.
‘ಮೈನಾ’ ಚಿತ್ರಕ್ಕಿಂತ ಈ ಚಿತ್ರವನ್ನು ಬಹಳಷ್ಟು ಡಿಪರೆಂಟ್ ರೀತಿಯಲ್ಲಿ ತೋರಿಸಲು ಮುಂದೆ ಬಂದಿರುವ ಸಲೋಮನ್ ವಿಕ್ರಂ ಪ್ರಭುಗೆ ಈ ಚಿತ್ರದಲ್ಲಿ ಆನೆ ಮಾವುತನ ಪಾತ್ರ ನೀಡಲಾಗಿದೆ. ಅದಕ್ಕೆ ತಕ್ಕಂತೆ ವಿಕ್ರಂ ಕೂಡ ಕೇರಳದ ಆನೆ ಮಾವುತಗಳಿಂದ ತರಬೇತಿ ಪಡೆಯುತ್ತಿದ್ದಾರೆ. ವಿದೇಶಕ್ಕೆ ಹೋಗಿ ಮಾರ್ಶಲ್ ಆರ್ಟ್ಸ್ನಲ್ಲೂ ಸಖತ್ ಪರಿಣತಿ ಪಡೆದುಕೊಂಡು ಬಂದಿದ್ದಾರೆ.
ಇಡೀ ಚಿತ್ರ ವನ್ಯಲೋಕದ ವಿಶಿಷ್ಠ ಅಧ್ಯಾಯವನ್ನು ತೆರೆದಿಡುವ ಸಾಧ್ಯತೆ ಇದೆ ಎನ್ನೋದು ಸಲೋಮನ್ ಅವರ ಆಪ್ತ ವಲಯದ ಮಾತು. ಸಲೋಮನ್ ವನ್ಯ ಸಂರಕ್ಷಣಾ ಇಲಾಖೆಗೂ ಚಿತ್ರದ ಕತೆ ಕೊಟ್ಟು ಯಾವುದಾದರೂ ಅಡೆತಡೆಗಳಿವೆ ಎನ್ನುವುದನ್ನು ಖಾತ್ರಿ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬರುವ ಆನೆ ಕೇರಳ ರಾಜ್ಯದಾಗಿದ್ದು, ಮಾಧವನ್ ಎಂದು ಹೆಸರಿಡಲಾಗಿದೆ.
ಆಗಸ್ಟ್ ತಿಂಗಳ ಮೊದಲ ವಾರದಿಂದ ಚಿತ್ರೀಕರಣ ನಡೆಯುವ ಸಾಧ್ಯತೆಗಳಿವೆ. ಜೋಗ್ಪಾಲ್ಸ್, ಒಟ್ಟಾಪಲಂ ಮತ್ತು ಥಾಯ್ಲೆಂಡ್ನ ಚಾಂಗ್ ಮಯೀಯಲ್ಲೂ ಚಿತ್ರದ ಚಿತ್ರೀಕರಣ ನಡೆಯುತ್ತದೆ ಎನ್ನೋದು ಚಿತ್ರ ತಂಡದ ಮಾತು. ಸಲೋಮನ್ ಮೈನಾ ಮೇನಿಯಾ ಇಲ್ಲೂ ವರ್ಕ್ಔಟ್ ಆಗುತ್ತಾ, ವಿಕ್ರಂ ಪ್ರಭು ನಿಜಕ್ಕೂ ಕಾಲಿವುಡ್ ಇಂಡಸ್ಟ್ರಿಗೆ ಸೂಪರ್ ಹೀರೋ ಆಗುತ್ತಾರಾ ಎಂಬ ನಾನಾ ಪ್ರಶ್ನೆಗಳಿಗೆ ಉತ್ತರ ಚಿತ್ರ ಬಂದ ನಂತರ ಗೊತ್ತಾದೀತು ಅಲ್ವಾ...?
No comments:
Post a Comment