Friday, July 15, 2011

ಬಾಲಿವುಡ್ನಲ್ಲಿ ‘ಐಟಂ ಹುಡುಗ್ರು’



ಬಾಲಿವುಡ್ನಲ್ಲಿ ಇನ್ನೂ ಮುಂದೆ ಐಟಂ ಹುಡುಗಿಯರ ಜಮಾನ ಎಂಡ್ ಆಗುತ್ತೇ... ಅವರ ಜಾಗದಲ್ಲಿ ಹೊಸ ‘ಐಟಂ ಹುಡುಗ್ರು’ ಸಿಲ್ವರ್ ಸ್ಕ್ರೀನ್ ಮೇಲೆ ಕುಣಿದು ಕುಪ್ಪಳಿಸಿ ಪ್ರೇಕ್ಷಕ ವರ್ಗವನ್ನು ಮೋಡಿ ಮಾಡಲಿದ್ದಾರೆ. ಬನ್ನಿ ವಿಷ್ಯಾಕ್ಕೆ ಬರೋಣ...

ಬಾಲಿವುಡ್ ಪಡಸಾಲೆಯಲ್ಲಿ ತುಂಡು ಬಟ್ಟೆ ಉಟ್ಟು ...ದೇಹ ಸೌಂದರ್ಯ ಪ್ರೇಕ್ಷಕರಿಗೆ ಕೊಟ್ಟು ... ಮಸ್ತ್ ಆಗಿ ಮಸಾಲೆ ಅರೆದುಕೊಡುತ್ತಿದ್ದ ಐಟಂ ಹುಡುಗಿಯರಿಗೆ ಇನ್ನೂ ಮುಂದೆ ಬ್ರೇಕ್ ಬೀಳಲಿದೆ. ಬಾಲಿವುಡ್ ಸಿನ್ಮಾ ರಂಗದಲ್ಲಿ ಐಟಂ ಹುಡುಗಿಯರ ಮೋಡಿಯಿಲ್ಲದೇ ಪ್ರೇಕ್ಷಕ ವರ್ಗ ಕಂಗಾಲು ಆಗಲಿದೆ ಎನ್ನೋದು ಗೊತ್ತಿಲ್ಲ. ಆದರೆ ‘ಐಟಂ ಹುಡುಗ್ರು’ ಮಾತ್ರ ಸುದ್ದಿಯಲ್ಲಿದ್ದಾರೆ.
೨೦೧೦ ಬಾಲಿವುಡ್ನಲ್ಲಿ ‘ಮುನ್ನಿ’ ಬಂದು ಕುಣಿದಿದ್ದಳು. ಶೀಲಾ ಬಂದು ಜವಾನಿ ತೋರಿಸಿ ಹೋಗಿದ್ದಳು. ಆದರೆ ೨೦೧೧ರಲ್ಲಿ ‘ಐಟಂ ಹುಡುಗ್ರು’ ಬಂದಿದ್ದಾರೆ. ಆದರೆ ಇವರು ಐಟಂ ಹುಡುಗಿಯರಂತೆ ದೇಹದ ಯಾವುದೇ ಸ್ಪೇರ್ ಪಾರ್ಟ್ಸ್ ತೋರಿಸುವುದಿಲ್ಲ. ಇದ್ದ ಪಾರ್ಟ್ಸ್ಗಳನ್ನು ಮುಚ್ಚಿಟ್ಟುಕೊಂಡು ಹ್ಯಾಂಕಿಪ್ಯಾಂಕಿ ಡ್ರೆಸ್ ಕೋಡ್ನಿಂದ ಸಿಲ್ವರ್ ಸ್ಕ್ರೀನ್ ಮೇಲೆ ಅಂಕುಡೊಂಕು ರೀತಿಯಲ್ಲಿ ಕುಣಿದುಕುಪ್ಪಳಿಸಿ ಪ್ರೇಕ್ಷಕ ವರ್ಗವನ್ನು ಮೋಡಿ ಮಾಡುತ್ತಿದ್ದಾರೆ.
ಇದು ಐಟಂ ಹುಡುಗರ ಹಕೀಕತ್ತು. ಮಸಾಲೆ ಪ್ಲಸ್ ಗ್ಲಾಮರ್ ಹದವಾಗಿ ಬರಿತ ಬಾಲಿವುಡ್ನಲ್ಲಿ ಈಗ ಐಟಂ ಹುಡುಗರದೇ ಎಲ್ಲ ಕಡೆ ಮಾತು ಹರಿದಾಡುತ್ತಿದೆ. ಇತ್ತೀಚೆಗೆ ತೆರೆಕಂಡು ಸ್ಕ್ರೀನ್ ಮೇಲೆ ಟೊಂಕುತ್ತಿರುವ ಅಮೀರ್ ಖಾನ್ ಬ್ಯಾನರ್ನ ‘ದೆಲ್ಲಿಬೆಲ್ಲಿ’ ಚಿತ್ರದಲ್ಲಿ ಅಮೀರ್ ಐಟಂ ಹಾಡೊಂದರಲ್ಲಿ ಮಿಂಚಿದ್ದಾರೆ.
ದೆಲ್ಲಿಬೆಲ್ಲಿಯ ‘ಐ ಹೇಟ್ ಯೂ, ಲೈಕ್ ಐ ಲವ್ ಯೂ’ ಎಂಬ ಐಟಂ ಹಾಡಿಗೆ ೭೦ರ ದಶಕದ ನಾಯಕರಂತೆ ಡ್ರೆಸ್ ತೊಟ್ಟು ಅಮೀರ್ ಸೊಂಟ ಬಳುಕಿಸಿದ್ದಾರೆ. ೭೦ರ ದಶಕದಲ್ಲಿರುವ ಎಲ್ಲ ನಾಯಕರ ಸ್ಟೈಲ್ಗಳನ್ನು ಆಮೀರ್ ತನ್ನ ಒಂದು ಐಟಂ ಹಾಡಿನ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಐಟಂ ಹಾಡಿಗೂ ಸಿನ್ಮಾಕ್ಕೂ ಯಾವುದೇ ಲಿಂಕ್ ಇಲ್ಲ ಎನ್ನುವುದು ಬೇರೆ ವಿಷ್ಯಾ. ಚಿತ್ರದಲ್ಲಿರುವ ಈ ಹಾಡು ಮಾತ್ರ ಎಲ್ಲರಿಗೂ ಕಿಕ್ ಕೊಟ್ಟಿದೆ ಎನ್ನೋದು ನಿಜ.
ಇತ್ತೀಚೆಗೆ ತೆರೆಕಂಡು ಸುದ್ದಿಮಾಡಿದ ಸಲ್ಮಾನ್ ಖಾನ್ ನಿರ್ಮಾಣದ ಮಕ್ಕಳ ಚಿತ್ರ ‘ಚಿಲ್ಲರ್ ಪಾರ್ಟಿ’ಯ ‘ಟಾಯ್ ಟಾಯ್ ಪೀಸ್ಸ್....’ನಲ್ಲಿ ಠಪೋರಿ ಡ್ರೆಸ್ ಕೋಡ್ನಲ್ಲಿ ರಣಬೀರ್ ಕಪೂರ್ ಮಿಂಚಿದ್ದಾರೆ. ಇದು ರಣ್ಬೀರ್ ಕಪೂರ್ರ ಮೊದಲ ಐಟಂ ಹಾಡು. ರಣ್ಬೀರ್ ಕಪೂರ್ ತನ್ನ ತಂದೆ ನಟ ರಿಶಿ ಕಪೂರ್ರ ‘ಅಮರ್ ಅಕ್ಬರ್ ಅಂತೋನಿ ’ ಚಿತ್ರದ ಸ್ಟೈಲ್ಗಳನ್ನು ಯಥಾವತ್ತಾಗಿ ನಕಲು ಮಾಡಿದ್ದಾರೆ. ಚಿಲ್ಲರ್ ಪಾರ್ಟಿಯ ಈ ಹಾಡು ಈಗಾಗಲೇ ಸಾಂಗ್ ರೇಟಿಂಗ್ನಲ್ಲಿ ಬಹಳ ಮುಂದೆ ನಿಂತಿದೆ.
ಬಾಲಿವುಡ್ನಲ್ಲಿ ಇಂತಹ ಐಟಂ ಹುಡುಗರು ಈಗಾಗಲೇ ಬೇಕಾದಷ್ಟು ಮಂದಿ ಬಂದು ಹೋಗಿದ್ದಾರೆ. ಬಂದವರು ಮಿಂಚಿದ್ದಾರೆ. ಇದೇ ಮಿಂಚು ಹೊಸ ಐಟಂ ಹುಡುಗರ ಪ್ರವೇಶಕ್ಕೆ ನಾಂದಿ ಹಾಡಿದೆ ಎನ್ನೋದು ಗಮನಿಸಿಕೊಳ್ಳಬೇಕಾದ ವಿಷ್ಯಾ. ಶಾರುಕ್ ಖಾನ್ ಈಗಾಗಲೇ ಅತೀ ಹೆಚ್ಚು ಐಟಂ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಬಿಲ್ಲು ಬಾರ್ಬರ್ನಲ್ಲಿ ‘ದರ್ದೆ ಡಿಸ್ಕೋ’ ‘ಕ್ರೇಜಿ-೪’ ಹಾಗೂ ‘ಅಲ್ವೇಸ್ ಕಬಿ ಕಬಿ’ ಯಲ್ಲೂ ಐಟಂ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಐಟಂ ಹುಡುಗರ ಸಾಲಿನಲ್ಲಿ ನಂತರದ ಸ್ಥಾನಮಾನ ಹೃತಿಕ್ ರೋಷನ್, ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್ ಸಿಗುತ್ತದೆ. ಬಾಲಿವುಡ್ನಲ್ಲಿ ಬಹಳ ವರ್ಷಗಳ ವರೆಗೂ ಐಟಂ ಸಾಂಗ್ನಲ್ಲಿ ಮಹಿಳೆಯರೇ ಜಾಸ್ತಿಯಾಗಿ ಕಾಣಿಸಿಕೊಂಡು ಪ್ರಾಬಲ್ಯ ಮೆರೆದು ಕೂತಿದ್ದರು. ಈಗ ಅವರ ಜಾಗದಲ್ಲಿ ‘ಐಟಂ ಹುಡುಗ್ರು’ ಬರುತ್ತಿದ್ದಾರೆ. ಬದಲಾವಣೆ ಜಗದ ನಿಯಮ ಎನ್ನೋದು ಇದಕ್ಕೆ ಇರಬಹುದು ಅಲ್ವಾ...?

No comments:

Post a Comment