Saturday, February 15, 2014
ಪ್ರಿಯಾದರ್ಶನ್ ಬದುಕಿನಲ್ಲಿ ಬಿರುಗಾಳಿ !
* ಸ್ಟೀವನ್ ರೇಗೊ, ದಾರಂದಕುಕ್ಕು
ಇದು ಪಕ್ಕಾ ಪ್ರೇಮಿಗಳಿಬ್ಬರ ಮಾತು. ಯಾಕೋ ಗೊತ್ತಿಲ್ಲ ೨೪ ವರ್ಷದ ಸುಮಧುರ ದಾಂಪತ್ಯ ಗೀತೆಯೇ ಈಗ ಮುಗಿದು ಹೋಗುವ ಹಂತಕ್ಕೆ ಬಂದು ತಲುಪಿದೆಯಾ ಎನ್ನುವ ಸಂದೇಹ ಮೂಡಿಬಂದಿದೆ. ಹೌದು ಇದು ಖ್ಯಾತ ನಿರ್ದೇಶಕ ಪ್ರಿಯಾದರ್ಶನ್ ಹಾಗೂ ಅವರ ಪತ್ನಿ ನಟಿ ಲಿಜಿ ಅವರ ಖಾಸ್‌ಬಾತ್.
ಆದರೆ ಮನೆಯೊಳಗೆ ಇದ್ದ ಈ ಮಾತು ಈಗ ಹೊರ ಪ್ರಪಂಚದಲ್ಲಿ ತೇಲಾಡುತ್ತಿದೆ. ಇಬ್ಬರು ಬೇರೆಯಾಗುವ ನಿರ್ಧಾರಕ್ಕೆ ಬಂದು ಮುಟ್ಟಿದ್ದಾರೆ ಎನ್ನುವ ಮಾತು ಮಲಯಾಳಂ ಚಿತ್ರರಂಗದ ಗಲ್ಲಿಯಿಂದ ಹರಿದುಬಂದಿದೆ.
ಪ್ರೇಮಿಗಳ ದಿನದಂದು ಈ ಇಬ್ಬರು ಜತೆಯಾಗಿದ್ದರು.
ಆದರೆ ಇದೇ ಪ್ರೇಮಿಗಳ ದಿನದಂದು ಈ ಇಬ್ಬರು ಬೇರೆಯಾಗುವ ವಿಚಾರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನುವ ಮಾತು ಬಂದಿದೆ. ಈಗಾಗಲೇ ನಟಿ ಲಿಜಿ ಕಾನೂನು ಮೆಟ್ಟಿಲು ಏರಿಕೊಂಡು ಡೈವೋರ್ಸ್‌ಗೆ ಅರ್ಜಿ ಗುಜರಾಯಿಸಿದ್ದಾರೆ. ಮತ್ತೊಂದೆಡೆ ಪ್ರಿಯಾದರ್ಶನ್ ಕೂಡ ಮಾಧ್ಯಮಗಳಿಂದ ಕಣ್ಣು ತಪ್ಪಿಸಿಕೊಂಡು ಓಡಾಟ ಆರಂಭಿಸಿದ್ದಾರೆ.
ನಟಿ ಲಿಜಿ ಕೂಡ ಮಾಧ್ಯಮದ ಮುಂದೆ ಬಂದು ‘ದಯವಿಟ್ಟು ಇದೊಂದು ಕೌಟುಂಬಿಕ ವಿಚಾರ ಈ ಕುರಿತು ಹೆಚ್ಚು ಮಾತನಾಡಲು ಬಯಸುವುದಿಲ್ಲ’ ಎಂದು ಹೇಳಿಕೊಂಡು ಮರೆಯಾಗಿದ್ದಾರೆ. ಮತ್ತೊಂದೆಡೆ ಕೋರ್ಟ್ ಕಟ್ಟಳೆಯಲ್ಲಿ ಇಬ್ಬರಿಗೂ ಬುಲಾವ್ ಬಂದಿದೆ. ಈ ಮೂಲಕ ಚಿತ್ರರಂಗದಲ್ಲಿ ಗಟ್ಟಿಯಾಗಿ ಬೆಳೆದ ಇಬ್ಬರು ಪ್ರೇಮಿಗಳು ದೂರವಾಗುವ ಕಾಲ ಬಂದಿದೆ ಎನ್ನಲಾಗುತ್ತಿದೆ.
ಪ್ರಿಯಾ ಬದುಕಿನಲ್ಲಿ ಲಿಜಿಯಾಟ:
೧೯೮೪ರಲ್ಲಿ ಮಲಯಾಳಂನ ‘ಅಲಾರಿಯಂ’ ಚಿತ್ರವೊಂದರಿಂದ ಹೊರ ಬಂದ ನಟಿ ಲಿಜಿ ತಿರುವನಂತಪುರದಲ್ಲಿ ಚಿತ್ರವೊಂದರ ಸೆಟ್‌ನಲ್ಲಿ ಪ್ರಿಯಾದರ್ಶನ್‌ಗೆ ಭೇಟಿಯಾಗುತ್ತಾರೆ. ಈ ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಇಲ್ಲಿಂದ ಇಬ್ಬರ ಸಿನಿ ಬದುಕು ಕೂಡ ಆರಂಭವಾಗುತ್ತದೆ. ನಿರ್ದೇಶಕ ಪ್ರಿಯಾದರ್ಶನ್ ನಿರ್ದೇಶನ ಮಾಡಿದ ೨೨ ಚಿತ್ರಗಳಲ್ಲಿ ಲಿಜಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ೧೯೯೦ರಲ್ಲಿ ಇಬ್ಬರು ವಿವಾಹ ಬಂಧನದಲ್ಲಿ ಬಂಽಯಾಗುತ್ತಾರೆ.
ಈ ಬಳಿಕ ಲಿಜಿ ತನ್ನ ಸಿನಿಮಾ ಬದುಕಿನ ಹೆಸರನ್ನು ಲಕ್ಷ್ಮಿ ಎಂದು ಬದಲಾಯಿಸಿಕೊಂಡರು. ಇಬ್ಬರಿಗೆ ಕಲ್ಯಾಣಿ ಹಾಗೂ ಸಿದ್ದಾರ್ಥ್ ಎನ್ನುವ ಮಕ್ಕಳಿದ್ದಾರೆ. ಇಬ್ಬರು ಉನ್ನತ ವ್ಯಾಸಂಗಕ್ಕಾಗಿ ವಿದೇಶದಲ್ಲಿಯೇ ನೆಲೆ ನಿಂತಿದ್ದಾರೆ. ಪ್ರಿಯಾ ಬದುಕಿನಲ್ಲಿ ಲಿಜಿ ಬಹಳ ಮುಖ್ಯವಾದ ಪಾತ್ರವಹಿಸಿದ್ದಾರೆ. ಎರಡು ಕಂಪನಿಗಳ ಮಾಲೀಕರಾಗಿರುವ ಲಿಜಿ ಸಿಸಿಎಲ್‌ನಲ್ಲೂ ತಮ್ಮ ಆಸ್ತಿತ್ವವನ್ನು ಇಟ್ಟುಕೊಂಡಿದ್ದರು.
ಈ ಎಲ್ಲವೂಗಳ ನಡುವೆ ಇಬ್ಬರು ಬೇರೆಯಾಗಲು ಇರುವ ಕಾರಣ ಏನೂ ಎನ್ನೋದು ಇಬ್ಬರು ಎಲ್ಲಿಯೂ ಹೇಳಿಕೊಂಡಿಲ್ಲ. ಕೆಲವು ಮೂಲಗಳ ಪ್ರಕಾರ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಆದರೆ ಚಿತ್ರರಂಗದ ಮಾಹಿತಿಯ ಪ್ರಕಾರ ನಾಯಕಿ ನಟಿಯೊಬ್ಬಳು ಇಬ್ಬರ ನಡುವೆ ವಿರಸ ಮೂಡಲು ಕಾರಣ ಎನ್ನಲಾಗುತ್ತಿದೆ. ನಿಜಕ್ಕೂ ಇಬ್ಬರ ನಡುವೆ ನಡೆದದ್ದು ಏನೂ ಎನ್ನೋದು ಮುಂಬರುವ ದಿನಗಳೇ ಹೇಳಬೇಕು.
Tuesday, February 11, 2014
‘ನಿರೆಲ್’ ಚಿತ್ರಕ್ಕೆ ದುಬಾಯಿ ಮಾರ್ಕೆಟ್ !
* ಸ್ಟೀವನ್ ರೇಗೊ, ದಾರಂದಕುಕ್ಕು
ಕೋಸ್ಟಲ್‌ವುಡ್ ಸಿನಿಮಾ ಲ್ಯಾಂಡ್ ಏಕ್‌ದಂ ಎದ್ದು ಕೂತಿದೆ. ವರ್ಷವಿಡೀ ಚಿತ್ರೀಕರಣ ಮಾಡಿಕೊಂಡು ಚಿತ್ರ ಮಂದಿರಕ್ಕೆ ನುಗ್ಗಲು ರೆಡಿಯಾದ ಹತ್ತಕ್ಕೂ ಅಧಿಕ ಚಿತ್ರಗಳ ಜತೆ ಜತೆಗೆ ಭರ್ಜರಿ ವೆಚ್ಚದಲ್ಲಿ ನಿರ್ಮಾಣವಾದ ‘ನಿರೆಲ್’( ನೆರಳು) ತುಳು ಚಿತ್ರ ಮೊದಲ ಬಾರಿಗೆ ದುಬಾಯಿಯ ಸಿನಿಮಾ ಮಂದಿರದಲ್ಲಿ ಪ್ರದರ್ಶನ ಕಾಣುವ ಯೋಗ್ಯತೆಯನ್ನು ಗಳಿಸಿಕೊಂಡಿದೆ. ಅಂದಹಾಗೆ ನಿರೆಲ್ ಚಿತ್ರ ತನ್ನ ಮೇಕಿಂಗ್‌ಗಾಗಿಯೇ ಈ ಹಿಂದೆ ಬಹಳ ಸುದ್ದಿಯಾಗಿತ್ತು.
ಇಡೀ ಚಿತ್ರವೇ ದುಬಾಯಿಯಲ್ಲಿ ಚಿತ್ರೀಕರಣಗೊಂಡಿದ್ದು ಮಾತ್ರವಲ್ಲ ಅದಕ್ಕೂ ಮುಖ್ಯವಾಗಿ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರಾದ ರಮೇಶ್ ಅರವಿಂದ್ ಕೂಡ ಈ ಚಿತ್ರದಲ್ಲಿ ಪಾತ್ರ ಮಾಡುವ ಮೂಲಕ ತುಳು ಸಿನಿಮಾದಲ್ಲಿ ಕನ್ನಡದ ನಟರ ಆಗಮನಕ್ಕೆ ಮುನ್ನುಡಿ ಬರೆದು ಹಾಕಿದ್ದರು. ಕರಾವಳಿಯಲ್ಲಿ ಬೆಳೆದ ನಟ- ನಟಿಯರನ್ನು ಸೇರಿಸಿಕೊಂಡು ದುಬಾಯಿಯಲ್ಲಿ ಸೇರಿಸಿಕೊಂಡು ಚಿತ್ರ ಮಾಡಿದ್ದು ‘ನಿರೆಲ್’ನ ವಿಶೇಷತೆಗಳಲ್ಲಿ ಒಂದಾಗಿದೆ.
ಕೆಲಸದ ಜತೆಯಲ್ಲಿ ಚಿತ್ರ ಮಾಡಿದರು:
ಕರಾವಳಿಯಲ್ಲಿ ಹುಟ್ಟಿ ಬೆಳೆದ ಯುವಕರು ತಮ್ಮ ಬಿಡುವಿನ ಸಮಯದಲ್ಲಿ ಚಿತ್ರ ಮಾಡುವ ಕನಸ್ಸು ಕಂಡರು. ಬರೀ ಕನಸ್ಸಿನ ಜತೆಯಲ್ಲಿ ದುಬಾಯಿಯಲ್ಲಿ ವಾಸವಾಗಿರುವ ಕರಾವಳಿ ಮೂಲದ ಶೋಧನ್ ಪ್ರಸಾದ್ ಚಿತ್ರ ನಿರ್ಮಾಣ ಮಾಡುವ ಯೋಜನೆಗೆ ಬೆಂಬಲ ಕೊಟ್ಟಾಗ ‘ನಿರೆಲ್’ ಸಿನಿಮಾ ಹುಟ್ಟಿಬಂತು ಎನ್ನುತ್ತದೆ ನಿರೆಲ್ ಚಿತ್ರದ ಹಿಂದಿನ ಕತೆ. ಹೀಗೆ ವಾರವಿಡೀ ದುಡಿದು ಉಳಿದ ವೀಕೇಂಡ್ ದಿನಗಳಲ್ಲಿ ಈ ಯುವಕರು ಸಿನಿಮಾಕ್ಕೆ ಇಳಿದರು. ಅದುವೇ ಈಗ ಸಿನಿಮಾ ಆಗಿ ಮುಂದೆ ನಿಂತಿದೆ,
ಕೋಸ್ಟಲ್‌ವುಡ್ ಸಿನಿಮಾ ಇತಿಹಾಸದಲ್ಲಿಯೇ ನಿರೆಲ್ ಚಿತ್ರ ಅನೇಕ ರೀತಿಯಲ್ಲಿ ದಾಖಲೆಗಳನ್ನು ಒತ್ತಿದೆ. ಮೊದಲ ಅಂತಾರಾಷ್ಟ್ರೀಯ ಮಟ್ಟದ ತುಳು ಚಿತ್ರ ಎನ್ನುವ ಹೆಗ್ಗಳಿಕೆ ಒಂದೆಡೆಯಾದರೆ ಮೊದಲ ಬಾರಿಗೆ ಕನ್ನಡದ ನಟರೊಬ್ಬರನ್ನು ತಂದು ತುಳು ಸಿನಿಮಾಕ್ಕೆ ತಂದು ನಟಿಸುವಂತೆ ಮಾಡಿದ್ದು ಕೂಡ ಒಂದು ದಾಖಲೆ. ಅದರಲ್ಲೂ ನಾನಾ ಭಾಷೆಗಳ ಚಿತ್ರಗಳ ನಡುವೆ ದುಬಾಯಿಯಲ್ಲಿ ಸಿನಿಮಾ ತೆರೆ ಕಾಣುತ್ತಿರುವುದು ಕೂಡ ಒಂದು ದಾಖಲೆಯಾಗಿ ನಿಂತಿದೆ.
ಪ್ರತಿಭಾವಂತ ಹುಡುಗನ ಕೈಚಳಕ:
‘ನಿರೆಲ್’ ಚಿತ್ರ ಎಂದಾಕ್ಷಣ ಚಿತ್ರದ ನಿರ್ದೇಶಕ ರಂಜೀತ್ ಬಜಪೆ ಹೆಸರು ಮೊದಲು ಕಾಣಿಸಿಕೊಳ್ಳುತ್ತದೆ. ಮೂಲತಃ ಮಂಗಳೂರಿನ ಬಜಪೆಯ ಯುವಕನೊಬ್ಬ ದುಬಾಯಿ ಕೇಬಲ್ ಕಂಪನಿಯಲ್ಲಿ ಪ್ಲಾನ್ನಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಹುಟ್ಟಿಕೊಂಡ ಕತೆಯೇ ಈ ನಿರೆಲ್ ಚಿತ್ರಕ್ಕೆ ಷರಾ ಬರೆಯಿತು. ನಿರೆಲ್ ಚಿತ್ರದ ನಿರ್ದೇಶಕ ರಂಜೀತ್ ಬಜಪೆ ಸಿನಿಮಾ ಲ್ಯಾಂಡ್‌ಗೆ ಬಂದ ಕತೆಯನ್ನು ಈ ರೀತಿ ಹೇಳುತ್ತಾರೆ:
ನನ್ನ ತಂದೆಯವರು ಯಕ್ಷಗಾನ ಪ್ರಿಯರಾಗಿದ್ದರು. ಅವರೊಂದಿಗೆ ಆಕಾಶವಾಣಿಯಲ್ಲಿ ಪ್ರತಿ ಬುಧವಾರ ಪ್ರಸಾರವಾಗುವ ಯಕ್ಷಗಾನ ಕೇಳುತ್ತಿದ್ದೆ. ಅಷ್ಟೇ ಅಲ್ಲದೆ ನನ್ನ ಅಣ್ಣ ನಾಟಕದಲ್ಲಿ ಅಭಿನಯ ಮತ್ತು ನಿರ್ದೇಶನ ಮಾಡುತ್ತಿದ್ದರು. ಇವೆಲ್ಲ ನನ್ನಲ್ಲಿ ಕಲೆಯ ಬಗ್ಗೆ ಅಭಿರುಚಿ ಬೆಳೆಸಿತು. ಮೊದಲಿನಿಂದಲೂ ಚಲನ ಚಿತ್ರಗಳ ಬಗ್ಗೆ ಅತೀವ ಆಸಕ್ತಿ ಇತ್ತು. ಆದರೆ ಚಲನ ಚಿತ್ರ ನಿರ್ದೇಶಕನಾಗುವೆ ಎಂದು ಯಾವತ್ತು ಕನಸು ಕಂಡಿರಲಿಲ್ಲ. ಕನ್ನಡ ಚಿತ್ರ ರಂಗದ ಬಗೆ ಅತೀವ ಅಭಿಮಾನ ಇತ್ತು. ಕನ್ನಡದ ಯೋಗರಾಜ್ ಭಟ್, ಪವನ್ ಕುಮಾರ್, ಸೂರಿ ಇವರ ಚಿತ್ರಗಳು ನನಗೆ ಪ್ರೇರಣೆ ನೀಡಿತು.
ದುಬಾಯಿ ಗೆ ಬಂದ ನಂತರ ಇಲ್ಲಿ ಗೆಳೆಯರ ಜೊತೆ ಸೇರಿ ಕನ್ನಡ ಮತ್ತು ತುಳು ವಿಡಿಯೋ ಆಲ್ಬಂ ಮಾಡಲು ಪ್ರಾರಂಭಿಸಿದೆ. ಫೇಸ್ ಬುಕ್ ಮೂಲಕ ಕೆಲವು ಸಮಾನ ಮನಸ್ಕ ಗೆಳೆಯರ ಪರಿಚಯವೂ ಅಯಿತು. ಹೀಗೆ ಚಲನ ಚಿತ್ರ ನಿರ್ದೇಶಕನಾಗ ಬೇಕೆಂಬ ತುಡಿತ ಪ್ರಾರಂಭವಾಯಿತು.
ದುಬಾಯಿಯಲ್ಲಿ ನಮ್ಮ ತುಳುವೆರ್ ಸಂಘಟನೆಯು ‘ತುಳು ಪರ್ಬ’ ಆಯೋಜಿಸಿದ್ದಾಗ, ನನ್ನ ಗೆಳೆಯರಾದ ಸಾನ್ ಪೂಜಾರಿ, ರಜನೀಶ್ ಅಮೀನ್ ಮತ್ತು ಸಚಿನ್ ಪಡೀಲ್ ಸೇರಿ ಒಂದು ಕಿರು ಚಿತ್ರ ಮಾಡಲು ಯೋಚಿಸಿದ್ದೆವು, ಅದಕ್ಕೆ ಶೋಧನ ಪ್ರಸಾದ್ ಇವರ ಬೆಂಬಲವೂ ಇತ್ತು. ಗೆಳೆಯ ಸಾನ್ ಪೂಜಾರಿ ಇವರ ಒತ್ತಾಸೆಯೇ, ಕಿರು ಚಿತ್ರದ ಯೋಜನೆ ಪೂರ್ಣ ಪ್ರಮಾಣದ ಚಲನ ಚಿತ್ರ ಮಾಡಲು ಪ್ರೇರೇಪಿಸಿತು. ಹಾಗೆ ನಿರೆಲ್ ಸಿದ್ಧವಾಯಿತು ಎನ್ನುವುದು ರಂಜೀತ್ ಅವರ ಮಾತು. ಟೋಟಲಿ ತುಳುವಿನಲ್ಲೂ ಮೊದಲ ಬಾರಿಗೆ ಬಿಗ್ ಬಜೆಟ್ ಚಿತ್ರದ ಜತೆಯಲ್ಲಿ ದುಬಾಯಿ ಮಾರುಕಟ್ಟೆಯಲ್ಲೂ ತುಳು ಭಾಷೆಯೊಂದು ಲಗ್ಗೆ ಹಾಕಿದೆ ಎನ್ನುವ ಹೆಮ್ಮೆ ಕೂಡ ಬಗಲಿಗೆ ನಿಂತಿದೆ.
ಕೋಟ್ ಕಾರ್ನರ್
‘ನಿರೆಲ್‌ನ ಫಲಿತಾಂಶದ ಬಗ್ಗೆ ತುಂಬಾ ಆತ್ಮ ವಿಶ್ವಾಸ ಇದೆ. ತುಳುವರು ಗುಣಮಟ್ಟಕ್ಕೆ ಯಾವುತ್ತೂ ಬೆಲೆ ಕೊಡುತ್ತಾರೆ. ಪ್ರಾಮಾಣಿಕರಾಗಿ ಈ ಚಿತ್ರ ಮಾಡಿದ್ದೇವೆ. ಈ ಚಿತ್ರದ ಫಲಿತಾಂಶ ಚಿತ್ರರಂಗದಲ್ಲಿ ಬದಲಾವಣೆಗೆ ನಾಂದಿಯಾಗುತ್ತದೆ ಎಂದು ನಂಬಿಕೆ ಇದೆ’
- ರಂಜೀತ್ ಬಜಪೆ, ನಿರೆಲ್ ಚಿತ್ರದ ನಿರ್ದೇಶಕ.
............
ಕೋಸ್ಟಲ್‌ವುಡ್‌ನಲ್ಲಿ ‘ಹುಲಿ’ ಓಡಾಟ !
* ಸ್ಟೀವನ್ ರೇಗೊ, ದಾರಂದಕುಕ್ಕು
ಕೋಸ್ಟಲ್‌ವುಡ್ ಸಿನಿಮಾದ ಹಿಸ್ಟರಿ ಪುಟದಲ್ಲಿ ಇದು ಮೊದಲ ಪ್ರಯತ್ನ ಎನ್ನುವುದು ಸಿನಿಮಾ ಗಲ್ಲಿಯಲ್ಲಿ ಓಡಾಡುತ್ತಿರುವ ಪ್ರತಿಯೊಬ್ಬರು ಹೇಳುವ ಮಾತು. ಯಾಕ್ ಅಂತೀರಾ ‘ಹುಲಿ’ಯ ಕತೆಯನ್ನೇ ಇಟ್ಟುಕೊಂಡು ತುಳುವಿನಲ್ಲಿ ಚಿತ್ರವೊಂದು ಹೊರಬರುತ್ತಿದೆ. ಕೋಸ್ಟಲ್‌ವುಡ್ ಸಿನಿಮಾ ಫೀಲ್ಡ್‌ನಲ್ಲಿ ಇಷ್ಟರ ವರೆಗೆ ಬರೀ ಪ್ರೇಮಕತೆ, ಕೌಟುಂಬಿಕ ವಿಚಾರ ಹಾಗೂ ನಾಟಕಗಳ ಕತೆಯನ್ನು ಮೂಲವಾಗಿಟ್ಟುಕೊಂಡು ಚಿತ್ರಗಳು ಹೊರ ಬರುತ್ತಿತ್ತು. ಆದರೆ ಕೋಸ್ಟಲ್ ವುಡ್‌ನಲ್ಲಿ ‘ರೌಡಿಸಂ’ಗೆ ಮುನ್ನುಡಿ ಬರೆದ ಚಿತ್ರವೊಂದು ತೆರೆಗೆ ಬರುವುದು ಅಪರೂಪ.
ಯುವ ನಿರ್ದೇಶಕ ಭರತ್‌ಕೃಷ್ಣ ನಿರ್ದೇಶನದ‘ ಬರ್ಕೆ’ ಸಿನಿಮಾ ಎಲ್ಲವೂ ರೌಡಿಸಂ ಕಥಾ ಹಂದರವನ್ನು ಇಟ್ಟುಕೊಂಡಿರುವ ಚಿತ್ರ. ಮಂಗಳೂರಿನ ‘ಬರ್ಕೆ’ ಎನ್ನುವ ಪ್ರದೇಶ ಈಗಾಗಲೇ ಹುಲಿಗಳಿಗೆ ಖ್ಯಾತಿ ಗಳಿಸಿತ್ತು. ನವರಾತ್ರಿಯ ಸಮಯದಲ್ಲಿ‘ ಬರ್ಕೆ’ಯಲ್ಲಿ ನಾನಾ ಹುಲಿ ವೇಷಧಾರಿಗಳು ತಂಡ ಕಟ್ಟಿಕೊಂಡು ಕರಾವಳಿಯ ಸುತ್ತಮುತ್ತ ಹುಲಿ ಕುಣಿತ ಮಾಮಾಲಿಯಾಗಿತ್ತು.
ಇದೇ ಒಂದೇ ಪಾಯಿಂಟ್ ಇಟ್ಟುಕೊಂಡು ಭರತ್‌ಕೃಷ್ಣ ಹುಲಿಗಳ ಜತೆಯಲ್ಲಿ ಮಂಗಳೂರು ಭೂಗತ ಲೋಕವನ್ನು ಕೂಡ ಟಚ್ ಮಾಡಿದ್ದಾರೆ. ಟೋಟಲಿ ಇಡೀ ಚಿತ್ರದಲ್ಲಿ ಯುವಜನತೆ ಯಾವ ರೀತಿಯಲ್ಲಿ ಭೂಗತ ಲೋಕವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಇದರ ಜತೆಯಲ್ಲಿ ಚಿತ್ರದ ತುಂಬಾ ಸ್ಪೆಸ್ಪನ್ಸ್ ಹಾಗೂ ಲೋಕಲ್ ಭಾಷೆಯಲ್ಲಿ ಮುದ ನೀಡುವ ಡೈಲಾಗ್‌ಗಳು ಈ ಚಿತ್ರವನ್ನು ಮತ್ತಷ್ಟೂ ಗರಿಬಿಚ್ಚುವಂತೆ ಮಾಡಿದೆ.
ಕರಾವಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಚಿತ್ರೀಕರಿಸಲಾಗಿರುವ ‘ಬರ್ಕೆ’ ಫೆ.೧೪ರಂದು ಕರಾವಳಿ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ಬರ್ಕೆ ಚಿತ್ರದಲ್ಲಿ ಕರಾವಳಿಯ ಹೊಸ ಪ್ರತಿಭೆಗಳಿಗೆ ಮೊದಲ ಮಣೆ ನೀಡಲಾಗಿದೆ. ಈಗಾಗಲೇ ಹತ್ತಾರು ಡಾಕ್ಯುಮೆಂಟರಿಗಳಲ್ಲಿ ಹೆಸರು ಉಳಿಸಿಕೊಂಡ ಭರತ್‌ಕೃಷ್ಣ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಬರುತ್ತಿದ್ದಾರೆ.
ಕೋಟ್ ಕಾರ್ನರ್:
‘ ಇದೊಂದು ಹೊಸ ಪ್ರಯತ್ನ. ವಿನೂತನ ರೀತಿಯ ಸಂಭಾಷಣೆ ಜತೆಗೆ ಡೈಲಾಗ್ ಡೆಲಿವರಿ ಚಿತ್ರದ ಮುಖ್ಯ ಪ್ಲಸ್ ಪಾಯಿಂಟ್ ಎನ್ನಬಹುದು. ಅದಕ್ಕೂ ಮುಖ್ಯವಾಗಿ ಕರಾವಳಿಯ ಸಿನಿಮಾ ಇತಿಹಾಸದಲ್ಲಿ ಯಾರು ಕೂಡ ಮಂಗಳೂರು ಭೂಗತ ಲೋಕವನ್ನು ಟಚ್ ಮಾಡಿರಲಿಲ್ಲ. ಈ ಚಿತ್ರದ ಮೂಲಕ ಇಂತಹ ಒಂದು ಪ್ರಯತ್ನ ಮಾಡಲಾಗಿದೆ. ಚಿತ್ರದಲ್ಲಿ ಹುಲಿಗಳ ಕುರಿತು ಹೇಳಲಾಗಿದೆ. ಅದಕ್ಕೂ ಮುಖ್ಯವಾಗಿ ರೌಡಿಸಂನ ಕರಾಳ ಮುಖಗಳು ಚಿತ್ರದ ಮೂಲಕ ಅನಾವರಣಗೊಳ್ಳಲಿದೆ.’
- ಭರತ್ ಕೃಷ್ಣ, ಚಿತ್ರದ ನಿರ್ದೇಶಕರು.

Friday, February 7, 2014
ಕುಡ್ಲದ ಕಡಲತೀರಕ್ಕೆ ನಟರ ಠಿಕಾಣಿ !
* ಸ್ಟೀವನ್ ರೇಗೊ, ದಾರಂದಕುಕ್ಕು
ಒಂದೆಡೆ ಕೋಸ್ಟಲ್‌ವುಡ್ ಸಿನಿಮಾ ನಗರಿ ಗರಿ ಬಿಚ್ಚಿಕೊಳ್ಳುತ್ತಿದ್ದಂತೆ ಮತ್ತೊಂದು ಕಡೆ ಕರಾವಳಿ ಪ್ರವಾಸಿ ತಾಣಗಳು ಇತರ ಭಾಷೆಗಳ ಸಿನಿಮಾ ಲೋಕದ ಮಂದಿ ಕಣ್ಣು ಹಾಕಿ ಕೂತಿದ್ದಾರೆ ಎನ್ನುವ ಮಾಹಿತಿ ಕುಡ್ಲದಲ್ಲಿ ಕಾಣ ಸಿಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕನ್ನಡದ ಸಿನಿಮಾ ಮಂದಿಯ ಜತೆಗೆ ಮಲಯಾಳಂ ಸಿನಿಮಾ ನಿರ್ದೇಶಕರು ಕೂಡ ಕರಾವಳಿಯ ಪ್ರವಾಸಿ ತಾಣಗಳು ಮೆಚ್ಚುಗೆಯಾಗುತ್ತಿದೆ.
ಕಳೆದ ಒಂದು ವಾರದಿಂದ ಮಲಯಾಳಂ ನಟ ಮೋಹನ್ ಲಾಲ್ ತನ್ನ ಚಿತ್ರವೊಂದಕ್ಕೆ ಕರಾವಳಿಯ ಪ್ರವಾಸಿ ತಾಣಗಳಲ್ಲಿ ಬೆವರು ಇಳಿಸಿಕೊಳ್ಳುತ್ತಿದ್ದಾರೆ. ಕೇರಳದ ಬಾಣಸಿಗನ ಕತೆಯನ್ನು ಆಧರಿಸಿಕೊಂಡು ಬರುತ್ತಿರುವ ‘ರಸಂ’ ಚಿತ್ರಕ್ಕಾಗಿ ನಿರ್ದೇಶಕ ರಾಜೀವ್ ನಾಥ್ ಜತೆಗೆ ಮೋಹನ್ ಲಾಲ್ ಕರಾವಳಿಯಲ್ಲಿ ಓಡಾಡುತ್ತಿದ್ದಾರೆ. ಮತ್ತೊಂದೆಡೆಯಲ್ಲಿ ಮಮ್ಮುಟ್ಟಿ ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ‘ ಮಂಗ್ಲೀಸ್’ ಚಿತ್ರಕ್ಕೆ ಕರಾವಳಿಯ ತಾಣವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
‘ಮಂಗ್ಲೀಸ್’ ಚಿತ್ರದಲ್ಲಿ ನಟ ಮಮ್ಮುಟ್ಟಿ ಮೀನುಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಚಿತ್ರತಂಡ ಕರಾವಳಿಯ ಮೀನುಗಾರಿಕೆ ಪ್ರದೇಶಗಳಲ್ಲಿ ಕ್ಯಾಮೆರಾ ಹೊಂದಿಸಿಕೊಳ್ಳಲು ವರ್ಕ್ ಔಟ್ ಮಾಡಿಕೊಳ್ಳುತ್ತಿದೆ. ‘ಮಂಗ್ಲೀಸ್’ ಚಿತ್ರವನ್ನು ಮಲಯಾಳಂನ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಸಲಾಂ ಬಾಪು ಮಾಡುತ್ತಿದ್ದಾರೆ. ಕರಾವಳಿಯ ಮೀನುಗಾರಿಕೆ ಹಾಗೂ ಬೀಚ್‌ಗಳಲ್ಲಿ ಚಿತ್ರದ ಬಹುಭಾಗ ಚಿತ್ರೀಕರಣ ನಡೆಯಲಿದೆ.
ಇದರ ಜತೆಯಲ್ಲಿ ಕಳೆದ ವರ್ಷ ಹಿಂದಿಯಲ್ಲಿ ಬಂದ ‘ಡೇವಿಡ್’ ಚಿತ್ರದ ಬಹುಭಾಗ ಕರಾವಳಿಯಲ್ಲಿ ಚಿತ್ರೀಕರಣವಾಗಿತ್ತು. ಚಿತ್ರದ ನಾಯಕ ನಟ ಚಿಯನ್ ವಿಕ್ರಂ ಹಾಗೂ ಬಾಲಿವುಡ್ ನಟಿ ತಬು ಕರಾವಳಿ ತೀರದಲ್ಲಿ ಹದಿನೈದು ದಿನಗಳ ಕಾಲ ತಂಗಿದ್ದರು. ಕನ್ನಡದ ೧೫ ಚಿತ್ರಗಳಲ್ಲಿ ೨ರಿಂದ ೩ ಚಿತ್ರಗಳು ಕರಾವಳಿಯ ಪ್ರವಾಸಿ ತಾಣಗಳನ್ನೇ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಕೆಲಸ ನಡೆಯುತ್ತಿದೆ.
ಕರಾವಳಿ ಪ್ರವಾಸಿ ತಾಣ ಯಾಕೆ ಇಷ್ಟ:
ಕರಾವಳಿಯಲ್ಲಿರುವ ಪ್ರವಾಸಿ ತಾಣಗಳು ಸಿನಿಮಾ ಮಂದಿಗೆ ಬೇಕಾದ ರೀತಿಯಲ್ಲಿ ಸಿಗುತ್ತದೆ. ಚಿತ್ರೀಕರಣಕ್ಕೆ ಜಾಸ್ತಿ ಒದ್ದಾಟ ನಡೆಸುವ ಅನಿವಾರ್ಯತೆ ಇರೋದಿಲ್ಲ. ಎಲ್ಲವೂ ರೆಡಿಮೇಡ್ ಆಗಿ ಕರಾವಳಿಯಲ್ಲಿ ಸಿಗುತ್ತದೆ ಎನ್ನುವುದು ‘ಚೆಲ್ಲಾಪಿಳ್ಳಿ’ ಚಿತ್ರದ ನಿರ್ದೇಶಕ ಸಾಯಿಕೃಷ್ಣ ಹೇಳುವ ಮಾತು.
ಅವರು ಈ ಹಿಂದೆ ‘ಚೆಲ್ಲಾಪಿಳ್ಳಿ’ಯ ಮುಕ್ಕಾಲು ಭಾಗವನ್ನು ಕರಾವಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದರು. ಕರಾವಳಿಯ ಬಹುಮುಖ್ಯ ರಂಗಭೂಮಿ ಕಲಾವಿದರನ್ನೇ ಬಳಸಿಕೊಂಡು ಚಿತ್ರ ನಿರ್ದೇಶನ ಮಾಡಿ ಗೆದ್ದು ಬಂದಿದ್ದರು.
‘ಕರಾವಳಿ ಪ್ರವಾಸಿ ತಾಣಗಳು ಎಲ್ಲರಿಗೂ ಇಷ್ಟವಾಗುತ್ತದೆ. ಕಡಿಮೆ ಬಜೆಟ್‌ನಲ್ಲಿ ಚಿತ್ರ ಮಾಡಬೇಕಾದರೆ ಕರಾವಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಗಾಟ, ವಸತಿ, ಚಿತ್ರೀಕರಣಕ್ಕೆ ಬೇಕಾದ ವಸ್ತುಗಳು ಶೀಘ್ರದಲ್ಲಿ ಲಭ್ಯವಾಗುವ ತಾಣ ಎಂದೇ ಪರಿಗಣಿಸಬಹುದು ಎನ್ನುತ್ತಾರೆ ಖ್ಯಾತ ಕ್ಯಾಮೆರಾಮನ್ ರಾಮದಾಸ್ ಸಸಿಹಿತ್ಲು ಅವರು. ಈಗಾಗಲೇ ಐವತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ದುಡಿದಿರುವ ರಾಮದಾಸ್ ತಮ್ಮಲ್ಲಿಗೆ ಬರುವ ಚಿತ್ರ ನಿರ್ದೇಶಕರಿಗೆ ಕರಾವಳಿಯ ಪ್ರವಾಸಿ ತಾಣಗಳನ್ನೇ ಚಿತ್ರಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಈಗಾಗಲೇ ಕೋಸ್ಟಲ್‌ವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ೪೦ಕ್ಕೂ ಅಧಿಕ ಚಿತ್ರಗಳು ಕರಾವಳಿಯ ನಾನಾ ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣವಾಗುತ್ತಿದೆ. ಇದು ಕರಾವಳಿಯ ಗತ್ತನ್ನು ಎತ್ತಿ ಹಿಡಿಯುತ್ತಿದೆ.

Thursday, February 6, 2014
ಕುಡ್ಲದ ಬೆಡಗಿಗೆ ಲಾಲ್ ರಸಂ
* ಸ್ಟೀವನ್ ರೇಗೊ, ದಾರಂದಕುಕ್ಕು
ಕೋಸ್ಟಲ್ ವುಡ್ ಸಿನಿಮಾ ನಗರಿಗೆ ಸಿಹಿ ಸುದ್ದಿಯೊಂದು ರವಾನೆಯಾಗಿದೆ. ಅದೇನಪ್ಪಾ ಅಂದರೆ ಕೋಸ್ಟಲ್‌ವುಡ್ ಸಿನಿಮಾ ಇತಿಹಾಸದಲ್ಲಿಯೇ ಅತೀ ಹೆಚ್ಚು ಬಜೆಟ್ ಹೊತ್ತುಕೊಂಡು ಬರುತ್ತಿರುವ ದುಬಾಯಿಯಲ್ಲಿ ನಿರ್ಮಾಣವಾದ ‘ನಿರೆಲ್’(ನೆರಳು) ಚಿತ್ರದ ಲೀಡ್ ನಾಯಕಿ ವರುಣ ಶೆಟ್ಟಿಗೆ ಮಲಯಾಳಂ ಭಾಷೆಯಿಂದ ಆಫರ್ ಬಂದಿದೆ. ಅದು ಕೂಡ ಮಲಯಾಳಂನ ಸ್ಟಾರ್ ನಟರಾದ ಮೋಹನ್ ಲಾಲ್ ಹಾಗೂ ಇಂದ್ರಜೀತ್ ನಟಿಸುತ್ತಿರುವ ‘ರಸಂ’ ಚಿತ್ರದಲ್ಲಿ ವರುಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೇರಳದ ಬಾಣಸಿಗರೊಬ್ಬರ ಕತೆಯನ್ನು ಹೊತ್ತುಕೊಂಡು ಬರುತ್ತಿರುವ ‘ರಸಂ’ಗಾಗಿ ಕೇರಳ ಸೇರಿದಂತೆ ನಾನಾ ಕಡೆ ಹೊಸ ನಾಯಕಿಗೆ ಶೋಧ ಕಾರ‍್ಯ ಆರಂಭವಾಗಿತ್ತು. ಅದರಲ್ಲೂ ಚಿತ್ರದ ಕತೆಗೆ ಒಪ್ಪುವಂತಹ ನಾಯಕಿಯ ಅಗತ್ಯ ಇದೆ ಎಂದುಕೊಂಡು ರಸಂ ಚಿತ್ರದ ನಿರ್ದೇಶಕ ರಾಜೀವ್ ನಾಥ್ ಕೊನೆಗೆ ದುಬಾಯಿ ಕಡೆಗೆ ಕಣ್ಣು ಹಾಕಿದರು. ಇದೇ ಸಮಯದಲ್ಲಿ ‘ನಿರೆಲ್’ ಚಿತ್ರದಿಂದ ಕ್ಲಿಕ್ ಆಗಿರುವ ಹುಡುಗಿ ವರುಣ ಕಣ್ಣಿಗೆ ಬಿದ್ದರು ಎನ್ನುತ್ತಿದ್ದಾರೆ ರಸಂ ಚಿತ್ರತಂಡ.
‘ರಸಂ’ ಚಿತ್ರದಲ್ಲಿ ವರುಣ ಶೆಟ್ಟಿ ನೃತ್ಯಗಾರ್ತಿಯ ಪಾತ್ರ ಮಾಡುತ್ತಿದ್ದಾರೆ.ದುಬಾಯಿಯಲ್ಲಿ ನೃತ್ಯಗಾರ್ತಿಯಾಗಿ ಚಿತ್ರದೊಳಗೆ ವರುಣ ಎಂಟ್ರಿ ಪಡೆಯುತ್ತಾರೆ. ಅವರು ದೇವನ್(ನಡುಮುಡಿ ವೇಣು) ಅವರ ಪುತ್ರಿಯಾಗಿ ಇಂದ್ರಜೀತ್ ಅವರನ್ನು ವಿವಾಹವಾಗುತ್ತಾರೆ. ದೇವನ್ ಅವರ ಸ್ನೇಹಿತರಾಗಿ ಮೋಹನ್ ಲಾಲ್ ಕಾಣಿಸಿಕೊಳ್ಳುತ್ತಾರೆ ಎಂದು ಚಿತ್ರದ ನಿರ್ದೇಶಕ ರಾಜೀವ್ ನಾಥ್ ಹೇಳುತ್ತಾರೆ. ಈಗಾಗಲೇ ಚಿತ್ರದ ಮುಹೂರ್ತ ನಡೆದು ತಿರುವನಂತಪುರದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಹಾಡಿಗೆ ಸರಿಸುಮಾರು ೨೫೦ ನೃತ್ಯಗಾರ್ತಿಯರನ್ನು ಬಳಸಿಕೊಳ್ಳಲಾಗುತ್ತಿದೆ. ಚಿತ್ರದ ಬಹುಭಾಗ ಕತಾರ್, ದುಬಾಯಿ ಹಾಗೂ ಕೇರಳದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನುವುದು ಚಿತ್ರತಂಡದ ಮಾತು.
ಅಂದಹಾಗೆ ವರುಣ ಶೆಟ್ಟಿ ಮೂಲತಃ ಪಡುಬಿದ್ರಿಯ ಹುಡುಗಿ. ತೀರಾ ಇತ್ತೀಚೆಗೆ ಎಂಬಿಎ ಶಿಕ್ಷಣ ಮುಗಿಸಿಕೊಂಡು ದುಬಾಯಿಯಲ್ಲಿ ಹೆತ್ತವರ ಜತೆಗೆ ವಾಸವಾಗಿದ್ದಾರೆ.ಅದರಲ್ಲೂ ಸಿನಿಮಾದ ಕುರಿತು ಅತೀವ ಆಸಕ್ತಿ ಹೊತ್ತುಕೊಂಡಿರುವ ವರುಣ ಫ್ಯಾಶನ್ ಲೋಕದಲ್ಲೂ ಸಾಕಷ್ಟು ಗುರುತಿಸಿಕೊಂಡಿದ್ದಾರೆ.ಓದುವುದರ ಜತೆಯಲ್ಲಿ ಶಾಪಿಂಗ್ ಮಾಡುವುದು ಎಂದರೆ ವರುಣ ಶೆಟ್ಟಿಗೆ ಹೆಚ್ಚು ಇಷ್ಟ.
ನಿರೆಲ್‌ನಲ್ಲಿ ಬಂತು ಅವಕಾಶ:
ದುಬಾಯಿಯಲ್ಲಿ ಚಿತ್ರೀಕರಣಗೊಂಡು ಫೆ.೧೪ರಂದು ಪ್ರೇಮಿಗಳ ದಿನದಂದು ದುಬಾಯಿಯಲ್ಲೇ ತೆರೆಗೆ ಬರುತ್ತಿರುವ ‘ನಿರೆಲ್’ ಚಿತ್ರದಲ್ಲಿ ವರುಣ ಶೆಟ್ಟಿಗೆ ಬಹುಮುಖ್ಯವಾದ ಪಾತ್ರವಿದೆ. ಗೆಳೆತನ ಹಾಗೂ ಸಂಬಂಧಗಳ ಸುತ್ತ ನಡೆಯುವ ನಿರೆಲ್ ಚಿತ್ರವನ್ನು ಮಂಗಳೂರು ಮೂಲದ ರಂಜೀತ್ ಬಜಪೆ ನಿರ್ದೇಶನ ಮಾಡುತ್ತಿದ್ದಾರೆ. ಕೋಸ್ಟಲ್‌ವುಡ್ ಸಿನಿಮಾ ನಗರಿಯಲ್ಲೇ ‘ನಿರೆಲ್’ ಚಿತ್ರ ಬಹು ವೆಚ್ಚದಾಗಿದೆ ಎನ್ನುವುದು ನಿರ್ಮಾಪಕರ ಮಾತು. ಚಿತ್ರದ ಮುಕ್ಕಾಲು ಭಾಗ ದುಬಾಯಿಯಲ್ಲಿ ಚಿತ್ರೀಕರಣಗೊಂಡಿರುವ ನಿರೆಲ್‌ನಲ್ಲಿ ಕನ್ನಡದ ನಟ ರಮೇಶ್ ಅರವಿಂದ್ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
Wednesday, February 5, 2014
ಸುಮನ್ ಗೆ ಬಾಲಿವುಡ್ ಟಿಕೆಟ್
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್‌ನಲ್ಲಿ ‘ಗಬ್ಬರ್’ಅಬ್ಬರಿಸುವ ಎಲ್ಲ ಸಾಧ್ಯತೆಗಳು ದಟ್ಟವಾಗುತ್ತಿದೆ. ಈಗಾಗಲೇ ಮೂರು ಭಾಷೆಯಲ್ಲಿ ಭರ್ಜರಿಯಾಗಿ ಖಾತೆ ತೆರೆದ ಚಿತ್ರವನ್ನು ತೆಲುಗಿನ ಖ್ಯಾತ ನಿರ್ದೇಶಕ ಕ್ರಿಶ್ ಬಾಲಿವುಡ್ ಅಂಗಳದಲ್ಲಿ ತಂದು ಕೂರಿಸಿದ್ದಾರೆ. ಅಂದಹಾಗೆ ಯಾವುದು ಈ ಚಿತ್ರ ಎನ್ನುವ ಡೌಟ್ ಬಂದರೆ ೨೦೦೨ರಲ್ಲಿ ತಮಿಳಿನಲ್ಲಿ ವಿಜಯಕಾಂತ್ ನಟಿಸಿದ ‘ರಾಮಣ್ಣ’ ಚಿತ್ರವೇ ಹಿಂದಿಯಲ್ಲಿ ಬರುತ್ತಿರುವ ‘ಗಬ್ಬರ್’ಎನ್ನುವುದು ಮಾಹಿತಿ. ಈ ಚಿತ್ರದ ಮೂಲಕ ಪಂಚಭಾಷೆ ತಾರೆ ಸುಮನ್ ಬಾಲಿವುಡ್ ಅಂಗಳಕ್ಕೆ ಅಧಿಕೃತವಾಗಿ ಟಿಕೆಟ್ ಪಡೆದುಕೊಂಡಿದ್ದಾರೆ.
ಈ ಹಿಂದೆ ಈ ಚಿತ್ರಕ್ಕೆ ಖ್ಯಾತ ನಟ ಪ್ರಕಾಶ್ ರಾಜ್ ಹಾಗೂ ಸೋನು ಸೂದ್ ಆಯ್ಕೆಯಾಗಿದ್ದರು. ತೆಲುಗಿನ ಚಿತ್ರವೊಂದನ್ನು ನೋಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸುಮನ್ ತಮ್ಮ ಚಿತ್ರದಲ್ಲಿ ನಟಿಸಬೇಕು ಎಂದು ಪಟ್ಟು ಹಿಡಿದರು. ಇದೇ ಕಾರಣದಿಂದ ಸುಮನ್ ‘ಗಬ್ಬರ್’ ಚಿತ್ರ ತಂಡದಲ್ಲಿ ಸೇರುವ ಚಾನ್ಸ್ ಗಿಟ್ಟಿಸಿಕೊಂಡರು ಎನ್ನುತ್ತದೆ ಚಿತ್ರದ ತಂಡ. ‘ಗಬ್ಬರ್’ ಚಿತ್ರದಲ್ಲಿ ಅಕ್ಷಯ್ ಕುಮಾರ್, ಶ್ರುತಿಹಾಸನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಸುಮನ್ ಚಿತ್ರದಲ್ಲಿ ನೆಗೆಟೀವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಕರೀನಾ ಕಪೂರ್ ಚಿತ್ರದ ಮುಖ್ಯ ಭಾಗವೊಂದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಸಿಗುತ್ತಾರೆ.
೭೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಗಬ್ಬರ್’ ಚಿತ್ರ ಈ ವರ್ಷದ ಕೊನೆ ಭಾಗದಲ್ಲಿ ತೆರೆಗೆ ತರುವ ಕೆಲಸ ನಡೆಯುತ್ತಿದೆ. ಈ ಚಿತ್ರವನ್ನು ತಮಿಳಿನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ಮಾಡಬೇಕಾಗಿತ್ತು. ಆದರೆ ಮುರುಗದಾಸ್ ತನ್ನದೇ ಚಿತ್ರವೊಂದರಲ್ಲಿ ಬ್ಯುಸಿಯಾಗಿರುವ ಕಾರಣ ತೆಲುಗಿನ ನಿರ್ದೇಶಕ ಕ್ರಿಶ್ ಹೆಗಲಿಗೆ ಜವಾಬ್ದಾರಿ ಬಂದು ಬಿದ್ದಿದೆ. ಚಿತ್ರವನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಣ ಹಾಕುವ ಕೆಲಸ ಹೊತ್ತುಕೊಂಡಿದ್ದಾರೆ.
ನಟ ಸುಮನ್ ‘ಗಬ್ಬರ್’ ಕುರಿತು ಹೇಳುವುದು ಹೀಗೆ: ಗಬ್ಬರ್ ಚಿತ್ರದಲ್ಲಿ ಒಳ್ಳೆಯ ಪಾತ್ರ. ಮುಖ್ಯ ಪಾತ್ರದ ಜತೆಯಲ್ಲಿಯೇ ನನ್ನ ಪಾತ್ರ ಸಾಗುತ್ತದೆ. ನಿರ್ದೇಶಕ ಕ್ರಿಶ್ ಜತೆಗೆ ಈ ಹಿಂದೆ ತೆಲುಗಿನ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದೆ. ನನ್ನ ಗೆಳೆಯನ ವಿವಾಹದ ದಿನವೇ ನನಗೆ ಈ ಅವಕಾಶ ಬಂದಿರುವುದು ನನಗೆ ಅತೀವ ಸಂತೋಷವಾಗಿದೆ.
ಅಂದಹಾಗೆ ನಟ ಸುಮನ್ ಬಾಲಿವುಡ್ ಚಿತ್ರದ ಜತೆ ತೆಲುಗಿನ ಬಹುಕೋಟಿ ವೆಚ್ಚದ ‘ರುದ್ರಮ್ಮ ದೇವಿ’, ನಟ ಬಾಲಕೃಷ್ಣ ಜತೆಗೆ ‘ಲೆಜೇಂಡ್’ ಹಾಗೂ ನಟ ನಾಗಚೈತನ್ಯ ಜತೆಯಲ್ಲೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ತಮಿಳು ಹಾಗೂ ಕನ್ನಡ ಚಿತ್ರಕ್ಕೆ ಸುಮನ್ ಬುಕ್ ಆಗಿದ್ದಾರೆ. ಟೋಟಲಿ ಸುಮನ್ ಪಾಲಿಗೆ ಈ ವರ್ಷ ವರವಾಗುವ ಸಾಧ್ಯತೆಗಳೇ ಜಾಸ್ತಿ.
Tuesday, February 4, 2014
ಕೋಸ್ಟಲ್‌ವುಡ್‌ನಲ್ಲಿ ಮನೋಹರ ಆಟಕ್ಕೆ ಬ್ರೇಕ್
ಸ್ಟೀವನ್ ರೇಗೊ, ದಾರಂದಕುಕ್ಕು
ಕೋಸ್ಟಲ್‌ವುಡ್ ಸಿನಿಮಾ ನಗರಿ ಏಕ್‌ದಂ ಕಿಕ್ ಏರಿಸಿಕೊಳ್ಳುತ್ತಿದೆ. ಕಳೆದ ವರ್ಷದ ಕೊನೆಯಲ್ಲಿಯೇ ಸರಿಸುಮಾರು ೪೦ಕ್ಕೂ ಅಧಿಕ ಸಿನಿಮಾಗಳು ನೋಂದಣಿಯಾಗಿತ್ತು.ಈ ಬಾರಿ ಮತ್ತೆ ಹೊಸ ಸಿನಿಮಾಗಳು ನೋಂದಣಿಗಾಗಿ ಕಾದು ಕೂತಿದೆ. ಕೋಸ್ಟಲ್‌ವುಡ್‌ನಲ್ಲಿ ಒಳ್ಳೆಯ ಪೈಪೋಟಿಯ ಜತೆಗೆ ಗುಣ ಮಟ್ಟದ ಚಿತ್ರಗಳು ಬರುವ ಸಾಧ್ಯತೆಗಳು ಈ ಬಾರಿ ದಟ್ಟವಾಗುತ್ತಿದೆ. ಹೊಸ ವರ್ಷದ ಅಂತ್ಯದೊಳಗೆ ತಿಂಗಳಿಗೆ ಒಂದರಂತೆ ತುಳು ಸಿನಿಮಾಗಳು ಥಿಯೇಟರ್‌ನ ಮುಂದೆ ಬರಲು ದೊಂಬಾಲು ಬಿದ್ದಿದೆ. ಇದರ ನಡುವೆ ಕೋಸ್ಟಲ್‌ವುಡ್‌ನಲ್ಲಿ ಮತ್ತೊಂದು ಬಿರುಗಾಳಿಯೊಂದು ಎದ್ದು ಕೂತಿದೆ.
ಕನ್ನಡದ ಸಂಗೀತ ನಿರ್ದೇಶಕ ವಿ.ಮನೋಹರ್ ತುಳು ಚಿತ್ರ ‘ಚಾಳಿಪೋಲಿ’ಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಇಡೀ ಚಿತ್ರ ತಂಡವೇ ವಿ.ಮನೋಹರ್ ತುಳು ಚಿತ್ರಕ್ಕೆ ಬರುತ್ತಾರೆ ಎನ್ನುವ ಸುದ್ದಿಯನ್ನು ಸುನಾಮಿಯಂತೆ ಎಬ್ಬಿಸಿ ಕೂತಿದ್ದರು. ಚಿತ್ರದ ಕತೆಯಿಂದ ಹಿಡಿದು ಚಿತ್ರ ತಾರಾಗಣ ಎಲ್ಲವನ್ನು ಆಯ್ಕೆ ಮಾಡುವ ವರೆಗೂ ವಿ. ಮನೋಹರ್ ನಿರ್ದೇಶಕರಾಗಿಯೇ ಉಳಿದು ಬಿಟ್ಟಿದ್ದರು. ಯಾಕೋ ‘ಚಾಳಿಪೋಲಿ’ ಚಿತ್ರದ ಚಿತ್ರೀಕರಣ ಆರಂಭ ಮಾಡಬೇಕು ಎನ್ನುವಷ್ಟರಲ್ಲಿ ವಿ.ಮನೋಹರ್ ಅವರ ನಿರ್ದೇಶಕನ ಸ್ಥಾನಕ್ಕೆ ಸಂಕಟ ಬಂದಿದೆ. ಅವರ ಜಾಗಕ್ಕೆ ಈಗ ಹೊಸ ಹೆಸರು ಕೇಳಿ ಬಂದಿದೆ.
‘ಚಾಳಿಪೋಲಿ’ಯ ಕತೆ ಬರೆದವರಲ್ಲಿ ಒಬ್ಬರಾದ ಕಾವೂರಿನ ವೀರೇಂದ್ರ ಶೆಟ್ಟಿ. ಚಿತ್ರದ ಸೂತ್ರಧಾರನಾಗುವ ಚಾನ್ಸ್ ಸಿಕ್ಕಿದೆ ಎನ್ನುವುದು ಚಿತ್ರ ತಂಡದ ಗುಪ್ತ ಮಾಹಿತಿ. ಈ ಹಿಂದೆ ಚಿತ್ರಕ್ಕೆ ನಿರ್ದೇಶಕರಾಗಿ ಆಯ್ಕೆಗೊಂಡಿದ್ದ ವಿ.ಮನೋಹರ್ ಬರೀ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ಹಾಗೂ ಸಂಗೀತ ನಿರ್ದೇಶಕರಾಗಿ ಉಳಿದುಬಿಟ್ಟಿದ್ದಾರೆ. ಕನ್ನಡದ ನಿರ್ದೇಶಕರೊಬ್ಬರು ತುಳು ಸಿನಿಮಾಕ್ಕೆ ಬರುವ ಕ್ಷಣಕ್ಕೆ ಮುಹೂರ್ತ ಕೂಡಿಬಂದಿಲ್ಲ ಎನ್ನುವುದು ಈ ಮೂಲಕ ಸ್ವಷ್ಟವಾಗುತ್ತಿದೆ.
ಚಾಳಿಪೋಲಿಯಲ್ಲಿ ಕಿರಿಕ್ ಆಯಿತಾ..?
ತುಳು ಸಿನಿಮಾಗಳು ಒಂದರ ಹಿಂದೆ ಒಂದರಂತೆ ನೋಂದಣಿಯಾಗುತ್ತಿದ್ದಾಗ ‘ಚಾಳಿಪೋಲಿ’ ಎನ್ನುವ ಟೈಟಲ್ ಕಾರ್ಡ್ ಏಕ್‌ದಂ ರಿಜಿಸ್ಟ್ರಾರ್ ಆಯಿತು. ಚಿತ್ರದಲ್ಲಿ ಹೊಸ ಕಲಾವಿದರು ಹಾಗೂ ಹೊಸ ಕತೆ ಇಟ್ಟುಕೊಂಡೇ ಸಿನಿಮಾ ಮಾಡಲಾಗುತ್ತಿದೆ ಎಂದೇ ಚಿತ್ರದ ನಿರ್ಮಾಪಕರು ಹೇಳಿಕೊಂಡು ಬಂದಿದ್ದರು. ಅದರಂತೆ ಸಿನಿಮಾದ ಕುರಿತು ಸಹಜವಾಗಿಯೇ ಕೋಸ್ಟಲ್‌ವುಡ್‌ನಲ್ಲಿ ನಿರೀಕ್ಷೆಗಳಿತ್ತು. ಚಿತ್ರಕ್ಕೆ ಖ್ಯಾತನಾಮರನ್ನು ಹುಡುಕಿಕೊಂಡು ತಂದುಕೂರಿಸುವ ಕೆಲಸಗಳು ಭರದಿಂದ ನಡೆಯುತ್ತಾ ಸಾಗುತ್ತಿತ್ತು. ಇದೇ ಸಮಯದಲ್ಲಿ ವಿ. ಮನೋಹರ್ ನಿರ್ದೇಶಕರಾಗಿ ಮಾಡುವ ಕೆಲಸ ನಡೆಯಿತು.
ಕನ್ನಡ ಸಂಗೀತ ನಿರ್ದೇಶಕ ವಿ.ಮನೋಹರ್ ಹೇಳುವಂತೆ ‘ ಚಾಳಿಪೋಲಿ ಚಿತ್ರ ತಂಡದ ಜತೆಗೆ ಯಾವುದೇ ಗೊಂದಲಗಳಿಲ್ಲ. ನನಗೆ ಖಾಸಗಿ ವಾಹಿನಿಯೊಂದು ರಿಯಾಲಿಟಿ ಶೋವೊಂದಕ್ಕೆ ಜಡ್ಜ್ ಆಗಿ ಬುಕ್ ಮಾಡಿದ್ದಾರೆ. ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಾನು ಈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಬೇಕಾಗಿದೆ.ಅದಕ್ಕೂ ಮುಖ್ಯವಾಗಿ ಚಿತ್ರಕ್ಕೆ ನಾನೇ ಸಂಗೀತ ನಿರ್ದೇಶಕ. ಈಗಾಗಲೇ ಹಿನ್ನೆಲೆ ಸಂಗೀತ ನೀಡಿದ್ದೇನೆ. ೫ ಹಾಡುಗಳಿಗೆ ಟ್ಯೂನ್ ಕಳಿಸಿಕೊಟ್ಟಿದ್ದೇನೆ. ತುಳು ಸಿನಿಮಾ ಮಾಡುವಾಗ ಮಂಗಳೂರಿನಲ್ಲೇ ಇರಬೇಕಾಗುತ್ತದೆ. ಚಿತ್ರಕ್ಕೆ ನ್ಯಾಯ ಒದಗಿಸಲು ಆಗುತ್ತಿಲ್ಲ ಎನ್ನುವ ಕಾರಣಕ್ಕೆ ನಾನೇ ನಿರ್ದೇಶಕನ ಸ್ಥಾನದಿಂದ ಕಿತ್ತು ಹಾಕಿ ಎಂದು ನಿರ್ಮಾಪಕರಿಗೆ ಹೇಳಿದ್ದೆ ಅದರಂತೆ ಅವರು ಮಾಡಿದ್ದಾರೆ ಎನ್ನುತ್ತಾರೆ ಅವರು.
ಆದರೆ ಮತ್ತೊಂದು ಮೂಲದ ಪ್ರಕಾರ ‘ಚಾಳಿಪೋಲಿ’ಯಲ್ಲಿ ಮನೋಹರ್ ಮೂಲ ಕತೆಯಲ್ಲಿ ಬದಲಾವಣೆ ಮಾಡುವ ಮೂಲಕ ಚಿತ್ರದ ಬಜೆಟ್ ಏರಿಸಿದ್ದಾರೆ ಎನ್ನುವ ಆಧಾರದಲ್ಲಿ ಚಿತ್ರದ ನಿರ್ದೇಶಕನ ಸ್ಥಾನದಿಂದ ವಂಚಿತನಾಗಬೇಕಾಯಿತು ಎನ್ನುವ ಮಾತು ಕೂಡ ಕೋಸ್ಟಲ್‌ವುಡ್ ಗಲ್ಲಿಯಲ್ಲಿ ಜೋರಾಗಿ ಕೇಳಿಸಿಕೊಳ್ಳುತ್ತಿದೆ. ಯಾವುದು ಸತ್ಯ ಯಾವುದು ಮಿಥ್ಯ ಎನ್ನುವ ಪ್ರಶ್ನೆ ಮಾತ್ರ ಬಾಕಿ ಉಳಿದಿದೆ.
ತುಳುವಿಗೆ ಬರುತ್ತಾರಾ ಮನೋಹರ್?:
ಮೂಲತಃ ಪುತ್ತೂರಿನ ವಿಟ್ಲ ನಿವಾಸಿಯಾದ ವಿ.ಮನೋಹರ್ ಬೆಳೆದದ್ದು ಎಲ್ಲವೂ ಕನ್ನಡದಲ್ಲಿ ಎನ್ನುವುದು ಚಿತ್ರ ರಸಿಕರಿಗೆ ಗೊತ್ತಿರುವ ವಿಚಾರ. ಆದರೆ ತುಳುವಿನ ಚಿತ್ರಗಳಿಗೆ ಹಾಡು ಬರೆದುಕೊಡುವ ಜತೆಗೆ ಸಂಗೀತ ನೀಡುವ ಕೆಲಸವನ್ನು ನಿಯತ್ತಿನಿಂದ ಮಾಡುತ್ತಿರುವ ಮನೋಹರ್ ತುಳು ಚಿತ್ರವನ್ನು ನಿರ್ಮಾಣ, ನಿರ್ದೇಶನ ಮಾಡುವ ಕೆಲಸಕ್ಕೆ ಎಂದಿಗೂ ಕೈ ಹಾಕಿಲ್ಲ. ಈಗ ಬಂದ ಅವಕಾಶವನ್ನು ಕೂಡ ನಯವಾಗಿಯೇ ತಿರಸ್ಕಾರ ಮಾಡಿದ್ದಾರೆ. ಈ ಮೂಲಕ ಮನೋಹರ್ ತುಳು ಸಿನಿಮಾಕ್ಕೆ ಬರುವ ವಿಚಾರ ಸಧ್ಯಕ್ಕಂತೂ ಬ್ರೇಕ್ ಬಿದ್ದಿದೆ.

Subscribe to:
Posts (Atom)