Sunday, February 24, 2013

ಬಾಲಿವುಡ್‌ಗೆ ಮತ್ತೆ ಬಂದರು ಸುಬ್ಬು !

ಸುಭಾಷ್ ಘಾಯ್ ಎನ್ನುವ ಮಹಾನ್ ಸಿನಿಮಾ ಮಾಂತ್ರಿಕ ಯಾಕೆ ಸುಮ್ಮನೆ ನಾಲ್ಕು ವರ್ಷ ಕೂತಿದ್ದರು ಎನ್ನುವುದು ಅವರ ಆಪ್ತ ವಲಯಕ್ಕೆ ಮಾತ್ರ ಗೊತ್ತು. ಈಗ ಈ ರಹಸ್ಯನೂ ಬಾಲಿವುಡ್ ಅಂಗಳಕ್ಕೆ ಬಿದ್ದು ಸಿಕ್ಕಿದೆ. ಸುಭಾಷ್ ಘಾಯ್ ಬಾಲಿವುಡ್‌ಗೆ ಮತ್ತೊಂದು ಅದ್ಭುತ ಕೊಡುಗೆ ನೀಡಲಿದ್ದಾರೆ. * ಸ್ಟೀವನ್ ರೇಗೊ, ದಾರಂದಕುಕ್ಕು ಒಂದಲ್ಲ ಎಡರಲ್ಲ ಬರೋಬರಿ ನಾಲ್ಕು ವರ್ಷಗಳಿಂದ ಸುಭಾಷ್ ಘಾಯ್ ಅವರ ಸಿನಿಮಾಗಳು ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡಿಲ್ಲ. ಬಹಳ ನಿರೀಕ್ಷೆಯಿಂದ ಹುಟ್ಟಿಕೊಂಡ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿಯ ಸಿನಿಮಾ ‘ಯುವರಾಜ’ನೇ ಘಾಯ್ ಸಾಹೇಬ್ರು ಬಾಲಿವುಡ್‌ಗೆ ಕೊಟ್ಟ ಕೊನೆಯ ಸಿನಿಮಾ ಎನ್ನುವುದು ಅವರ ಅಭಿಮಾನಿಗಳಿಗೆ ಸರಿಯಾಗಿ ಗೊತ್ತಿದೆ. ಆದರೂ ಸುಭಾಷ್ ಘಾಯ್ ಎನ್ನುವ ಮಹಾನ್ ಸಿನಿಮಾ ಮಾಂತ್ರಿಕ ಯಾಕೆ ಸುಮ್ಮನೆ ನಾಲ್ಕು ವರ್ಷ ಕೂತಿದ್ದರು ಎನ್ನುವುದು ಅವರ ಆಪ್ತ ವಲಯಕ್ಕೆ ಮಾತ್ರ ಗೊತ್ತು. ಈಗ ಈ ರಹಸ್ಯನೂ ಬಾಲಿವುಡ್ ಅಂಗಳಕ್ಕೆ ಬಿದ್ದು ಸಿಕ್ಕಿದೆ. ಸುಭಾಷ್ ಘಾಯ್ ಬಾಲಿವುಡ್‌ಗೆ ಮತ್ತೊಂದು ಅದ್ಭುತ ಕೊಡುಗೆ ನೀಡಲಿದ್ದಾರೆ. ಅಂದಹಾಗೆ ಚಿತ್ರದ ಹೆಸರೇ ‘ಕಾಂಚಿ’. ಈ ಹಿಂದೆ ಯುವರಾಜ್ ಚಿತ್ರದ ಮುಂದುವರಿದ ಭಾಗದಂತೆ ಇಲ್ಲೂ ಸಂಗೀತದ ಸುರಿಮಳೆಯೇ ನಡೆಯಲಿದೆ. ಸುಭಾಷ್ ಚಿತ್ರಗಳೆಂದರೆ ಅಲ್ಲಿ ಸಂಗೀತದ ಜತೆಗೆ ಪ್ರೇಮಿಗಳಿಗೂ ಸಾಮಾನ್ಯ ಆದ್ಯತೆ ನೀಡುತ್ತಾರೆ. ಕಾಂಚಿಯಲ್ಲೂ ಇದೇ ವರಸೆ ಮುಂದುವರಿದಿದೆ. ಅಂದಹಾಗೆ ಬಾಲಿವುಡ್‌ನ ಯಾವುದೇ ನಾಯಕ/ ನಾಯಕಿಯನ್ನು ತೆಗೆದುಕೊಳ್ಳದೇ ಘಾಯ್ ಸಾಹೇಬ್ರು ಹೊಸ ನಾಯಕ ಹಾಗೂ ಹೊಸ ನಾಯಕಿಯನ್ನು ಹುಡುಕಿಕೊಂಡು ತಂದಿದ್ದಾರೆ. ಘಾಯ್ ಸಾಹೇಬ್ರು ಹೇಳುವಂತೆ ‘ ನಾಲ್ಕು ವರ್ಷಗಳಿಂದ ನಾನು ಬಾಲಿವುಡ್ ಚಿತ್ರಗಳಿಂದ ದೂರ ಇದ್ದೆ. ಹೊಸ ಕಾಲಕ್ಕೆ ತಕ್ಕಂತೆ ಹೊಸ ಕತೆ, ಹೊಸ ನಾಯಕ/ ನಾಯಕಿಯರನ್ನು ಹುಡುಕಾಟದಲ್ಲಿಯೇ ಇಷ್ಟೂ ಸಮಯವಾಯಿತು. ನನ್ನ ಹಿಂದಿನ ಎಲ್ಲ ಚಿತ್ರಗಳಿಗಿಂತಲೂ ಈ ಚಿತ್ರ ಭಿನ್ನವಾಗಲಿದೆ. ಸಂಗೀತದ ವಿಚಾರದಲ್ಲಂತೂ ಈ ಚಿತ್ರ ಮೈಲುಗಲ್ಲು ಹಾಕುವುದರಲ್ಲಿ ಯಾವುದೇ ಸಂದೇಹ ಇಲ್ಲ . ನನ್ನ ಆರಂಭದ ಚಿತ್ರ ಕಾಳೀಚರಣ್ ತೆಗೆದಾಗಲೂ ಇದೇ ರೀತಿಯ ಹುಮ್ಮಸ್ಸು ಇತ್ತು. ಈಗಲೂ ಕಾಂಚಿಯಲ್ಲೂ ಅದು ಮುಂದುವರಿದಿದೆ. ಚಿತ್ರದ ಕತೆಯಲ್ಲಿ ನಾಯಕಿ ಸಾಹಸ ಕಾರ‍್ಯದಲ್ಲಿ ತೊಡಗುತ್ತಾಳೆ. ಇದು ನನ್ನ ಚಿತ್ರಗಳಲ್ಲಿಯೇ ಭಿನ್ನ ಎಂದು ಘಾಯ್ ಹೇಳಿಕೊಂಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ರಿಶಿ ಕಪೂರ್, ಮಿಥುನ್ ಚಕ್ರವರ್ತಿಯ ಜತೆಯಲ್ಲಿ ಹೊಸ ನಾಯಕ ಕಾರ್ತಿಕ್ ತಿವಾರಿ ಹಾಗೂ ಬಂಗಾಳಿ ಹುಡುಗಿ ಮಿಶ್ತಿ ಕಾಣಿಸಿಕೊಳ್ಳಲಿದ್ದಾರೆ. ಸುಭಾಷ್ ಘಾಯ್‌ಯ ‘ಕರ್ಮಾ’ ಚಿತ್ರ ಬಿಡುಗಡೆ ಕಂಡ ದಿನವೇ ಅಂದರೆ ಆಗಸ್ಟ್ ೧೫, ೨೦೧೩ರಲ್ಲಿ ಚಿತ್ರವನ್ನು ತೆರೆಗೆ ತರುವ ಕೆಲಸ ನಡೆಯಲಿದೆ. ಈ ಬಳಿಕ ಹೊಸ ಚಿತ್ರಕ್ಕೆ ಕತೆ ಸಿದ್ಧ ಪಡಿಸಿಕೊಳ್ಳುತ್ತಿದ್ದೇನೆ ಎಂದು ಘಾಯ್ ಸಾಹೇಬ್ರು ಟ್ವಿಟ್ಟರ್‌ನಲ್ಲಿ ಹೇಳಿಬಿಟ್ಟಿದ್ದಾರೆ. ಕಾಂಚಿಯಲ್ಲಿ ಹೊಸ ಮುಖ: ಬಾಲಿವುಡ್‌ನಲ್ಲಿ ಸಣ್ಣಗೆ ನಿರೀಕ್ಷೆ ಹುಟ್ಟಿಸಿದ ಚಿತ್ರ ಆಕಾಶವಾಣಿಯಲ್ಲಿ ನಟಿಸಿದ ಕಾರ್ತಿಕ್ ತಿವಾರಿಗೆ ‘ಕಾಂಚಿ’ ಎರಡನೇ ಚಿತ್ರ. ಸುಭಾಷ್ ಘಾಯ್ ಕಳೆದ ಒಂಬತ್ತು ತಿಂಗಳಿಂದ ‘ಕಾಂಚಿ’ಯ ನಾಯಕನಿಗೆ ಹುಟುಕಾಟ ಆರಂಭಿಸಿದ್ದರು. ಕಾರ್ತಿಕ್ ಸುಭಾಷ್ ಘಾಯ್ ಅವರ ವಿಸ್ಟಿಲಿಂಗ್ ವುಡ್ಸ್‌ನಲ್ಲಿ ನಟನಾ ತರಬೇತಿ ಪಡೆಯುತ್ತಿದ್ದಾಗ ಘಾಯ್‌ಕಣ್ಣಿಗೆ ಬಿದ್ದರು. ಅಲ್ಲಿಂದ ಕಾಂಚಿಯ ನಾಯಕನಿಗಾಗಿ ಹುಡುಕಾಟ ನಿಂತಿತು. ಬಂಗಾಳಿ ಹುಡುಗಿ ಮಿಶ್ತಿ ಸುಭಾಷ್‌ಘಾಯ್ ಕಾಂಚಿ ಚಿತ್ರದ ಲೀಡ್ ನಾಯಕಿ. ಈ ಹಿಂದೆ ಸುಭಾಷ್ ಘಾಯ್ ಮೀನಾಕ್ಷಿ, ಮಾಧುರಿ ಹಾಗೂ ಮಹಿಮಾರ ನಂತರ ಈಗ ಇದೇ ‘ಎಂ’ ಎನ್ನುವ ಪದಕೋಶದ ಬಂಗಾಳಿ ಹುಡುಗಿ ಮಿಶ್ತಿ ನಾಯಕಿ ಸ್ಥಾನಕ್ಕೆ ಬುಕ್ ಆಗಿದ್ದಾಳೆ. ಬಂಗಾಳಿ ಭಾಷೆಯಲ್ಲಿ ‘ಮಿಶ್ತಿ’ ಎಂದರೆ ಸಿಹಿ ತಿಂಡಿ ಎಂದಾರ್ಥವಂತೆ ! ಅಂದಹಾಗೆ ಕರ್ಜ್ ಚಿತ್ರದ ನಂತರ ರಿಶಿ ಕಪೂರ್ ಮೊದಲ ಬಾರಿಗೆ ಘಾಯ್ ಜತೆ ಸೇರಿದ್ದಾರೆ. ಇವರ ಜತೆಯಲ್ಲಿ ಮಿಥುನ್ ಚಕ್ರವರ್ತಿ ಕೂಡ ಬಣ್ಣ ಹಾಕುವ ಸಾಧ್ಯತೆ ಇದೆ. ಅಂದಹಾಗೆ ಚಿತ್ರದಲ್ಲಿ ಇಬ್ಬರು ವಿಲನ್ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನೋದು ಗಮನಿಸಿಕೊಳ್ಳಬೇಕಾದ ವಿಷ್ಯಾ. ಚಿತ್ರಕ್ಕೆ ಸಂಗೀತವನ್ನು ಇಸ್ಮಾಯಿಲ್ ದರ್ಬಾರ್ ಹಾಗೂ ಸಲೀಂ ಸುಲೈಮಾನ್ ನೀಡಿದ್ದಾರೆ. ಉತ್ತರಖಂಡಾದ ಸಾಮಾನ್ಯ ಹುಡುಗಿಯೊಬ್ಬಳ ಕತೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸೈನ್ಯದಲ್ಲಿರುವ ಹುಡುಗಿಯ ತಂದೆ ವಿರೋಧಿ ಸೈನಿಕರ ಗುಂಡೇಟಿಗೆ ಬಲಿಯಾಗುವ ನಂತರದಲ್ಲಿ ಹುಡುಗಿ ಬದುಕಿನಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳೇ ಚಿತ್ರದ ಜೀವಾಳ. ಬರೋಬರಿ ೩೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುಭಾಷ್ ಘಾಯ್ ನಿರ್ದೇಶನದ ಚಿತ್ರ ಕಾಂಚಿ ನಿಜಕ್ಕೂ ಬಿಡುಗಡೆಯ ಮೊದಲೇ ಹೊಸ ಹವಾ ಸೃಷ್ಟಿ ಮಾಡಿದೆ. .... lvk published dis article

No comments:

Post a Comment