Tuesday, February 26, 2013

ಯುವಕರಿಗೆ ಮುತ್ತು ಕೊಡ್ತಾಳೆ ಮಲ್ಲಿ !

ವೀಣಾ ಮಲ್ಲಿಕ್ ಈ ರಿಯಾಲಿಟಿ ಶೋನಲ್ಲಿ ನಿರಂತರವಾಗಿ ಮುತ್ತಿನ ಸುರಿಮಳೆ ಸುರಿಸುವ ಚಾನ್ಸ್ ಇದೆ. ಹೌದು. ಒಂದು ನಿಮಿಷಗಳ ಕಾಲ ನಿರಂತರವಾಗಿ ಯುವಕರ ಗಲ್ಲದ ಮೇಲೆ ವೀಣಾ ಮಲ್ಲಿಕ್ ತನ್ನ ತುಟಿಯ ಮುದ್ರೆಯನ್ನು ಮುದ್ರಿಸಲಿದ್ದಾರೆ. ಸ್ಟೀವನ್ ರೇಗೊ, ದಾರಂದಕುಕ್ಕು ಪಾಕ್ ಮೂಲದ ಫೈಯರ್ ಬ್ರಾಂಡ್ ಮತ್ತೆ ಸದ್ದು ಮಾಡಿದೆ. ಚಳಿ, ಮಳೆಯಲ್ಲಿ ಮಾತ್ರ ಹಾಟ್‌ನೆಸ್‌ನಲ್ಲಿ ಮುಳುಗಿ ಬರುತ್ತಿರುವ ವೀಣಾ ಮಲ್ಲಿಕ್ ಈ ಬಾರಿ ಕೊಂಚ ಭಿನ್ನ ವಿಚಾರಕ್ಕೆ ಸುದ್ದಿ ಅಂಗಳದಲ್ಲಿ ತುಟಿ ಬಿಚ್ಚಿ ನಿಂತಿದ್ದಾಳೆ. ವೀಣಾ ಮಲ್ಲಿಕ್ ತನ್ನ ಬಟ್ಟೆಯ ಬಿಚ್ಚಾಟದಲ್ಲಿ ತೋರಿಸುತ್ತಿದ್ದ ದಮ್ ಈ ಬಾರಿ ಮುತ್ತಿನಲ್ಲಿ ತೋರಿಸುವ ಇರಾದೆ ಇಟ್ಟುಕೊಂಡಿದ್ದಾಳೆ. ವೀಣಾ ಮಲ್ಲಿಕ್ ತನ್ನ ಬರ್ತ್‌ಡೇ ದಿನದಂದು ಖಾಸಗಿ ಚಾನೆಲ್‌ವೊಂದರ ರಿಯಾಲಿಟಿ ಶೋವೊಂದರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ವೀಣಾ ಮಲ್ಲಿಕ್ ಈ ರಿಯಾಲಿಟಿ ಶೋನಲ್ಲಿ ನಿರಂತರವಾಗಿ ಮುತ್ತಿನ ಸುರಿಮಳೆ ಸುರಿಸುವ ಚಾನ್ಸ್ ಇದೆ. ಹೌದು. ಒಂದು ನಿಮಿಷಗಳ ಕಾಲ ನಿರಂತರವಾಗಿ ಯುವಕರ ಗಲ್ಲದ ಮೇಲೆ ವೀಣಾ ಮಲ್ಲಿಕ್ ತನ್ನ ತುಟಿಯ ಮುದ್ರೆಯನ್ನು ಮುದ್ರಿಸಲಿದ್ದಾರೆ. ಅದು ಕೂಡ ಲೈವ್ ರಿಯಾಲಿಟಿ ಶೋನಲ್ಲಿ ಇದರಲ್ಲಿ ಯಾವುದೇ ಟೇಕ್ ಹಾಗೂ ಕಟ್‌ಗಳು ಇರುವುದಿಲ್ಲ. ಒಂದು ನಿಮಿಷದಲ್ಲಿ ೧೦೦ ಮುತ್ತುಗಳನ್ನು ಯುವಕರ ಗಲ್ಲದ ಮೇಲೆ ಮೂಡಿಸುವ ಮೂಲಕ ವೀಣಾ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲೂ ದಾಖಲೆಯಾಗುತ್ತದೆ. ಮುತ್ತಿಗಾಗಿ ಯುವಕರ ಬೇಟೆ: ಈ ಮುತ್ತಿನ ಪ್ರಹಸನವನ್ನು ಕಣ್ಣಾರೆ ಕಾಣಲು ಗಿನ್ನೆಸ್ ರೆಕಾರ್ಡ್ ತಂಡ ಕೂಡ ರಿಯಾಲಿಟಿ ಶೋನಲ್ಲಿ ಬೀಡು ಬಿಡಲಿದೆ. ‘ದೀ ಸಿಟಿ ದಟ್ ನೆವರ್ ಸ್ಲೀಪ್ಸ್ ಬಾಲಿವುಡ್ ಹಂಟ್’ ಎನ್ನುವ ಖಾಸಗಿ ವಾಹಿನಿಯ ರಿಯಾಲಿಟಿ ಶೋಗಾಗಿ ಈಗಾಗಲೇ ಮುತ್ತಿಗಾಗಿ ಯುವಕರ ಬೇಟೆಯನ್ನು ಆರಂಭಿಸಿದೆ. ವೀಣಾ ಮಲ್ಲಿಕ್ ಹೇಳುವಂತೆ: ನಾನು ಈ ಸ್ಪರ್ಧೆಯ ಕುರಿತು ತೀರಾ ನಿರೀಕ್ಷೆಯಲ್ಲಿದ್ದೇನೆ. ನನ್ನ ಬರ್ತ್‌ಡೇ ದಿನದಂದು ಇಂತಹ ಗಿನ್ನೆಸ್ ರೆಕಾರ್ಡ್ ಬ್ರೇಕ್ ಮಾಡೋ ಚಾನ್ಸ್ ಸಿಕ್ಕಿರೋದು ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆಯಂತೆ. ಯುವಕರ ಗಲ್ಲದ ಮೇಲೆ ಮುತ್ತಿನ ಮತ್ತು ತೋರಿಸೋದು ನನಗೆ ಬಹಳ ಇಷ್ಟ. ಇದಕ್ಕಾಗಿ ರಿಯಾಲಿಟಿ ಶೋ ತಂಡದ ಜತೆಯಲ್ಲಿ ಚಿತ್ರ ನಿರ್ಮಾಪಕ ಸತೀಶ್ ರೆಡ್ಡಿ, ನಿರ್ದೇಶಕ ಹಾರೂನ್ ರಶೀದ್ ಅವರನ್ನು ನೆನೆಯಬೇಕು ಎಂದಿದ್ದಾರೆ. ಬಾಲಿವುಡ್‌ನ ಬ್ಯುಸಿ ಮಲ್ಲಿ: ನಟಿ ವೀಣಾ ಮಲ್ಲಿಕ್‌ಗೆ ಸದ್ಯ ನಿದ್ದೆ ಮಾಡಲೂ ಸಮಯವಿಲ್ಲ. ಒಂದರ ನಂತರ ಒಂದರಂತೆ ಆರು ಚಿತ್ರಗಳು ಬಿಡುಗಡೆಗೆ ಸಾಲುಗಟ್ಟುವಂತೆ ಚಿತ್ರೀಕರಣದಲ್ಲಿ ನಿರತರಾಗಿರುವುದೇ ಇದಕ್ಕೆ ಕಾರಣ. ಪಂಜಾಬಿ ಚಿತ್ರ ‘ಜಟ್ಸ್ ಗೋಲ್‌ಮಾಲ್’ ಚಿತ್ರದ ಮೂಲಕ ಆರ್ಯನ್ ಬಬ್ಬರ್‌ಗೆ ಜತೆಯಾಗಿ ಪಂಜಾಬಿ ಚಿತ್ರಲೋಕವನ್ನು ಪ್ರವೇಶಿಸುತ್ತಿದ್ದಾರೆ. ಹಿಂದಿ ಚಿತ್ರದಲ್ಲೂ ಬಬ್ಬರ್ ಜತೆಯಲ್ಲಿಯೇ ‘ಜಿಂದಗಿ ೫೦-೫೦’ಯಲ್ಲಿ ನಟಿಸುತ್ತಿದ್ದಾರೆ. ಬಿಗ್‌ಬಾಸ್ ರಿಯಾಲಿಟಿ ಶೋದಲ್ಲಿ ಸ್ನೇಹಿತರಾಗಿದ್ದ ಅಶ್ಮಿತ್ ಪಟೇಲ್ ಜೊತೆಗೆ ‘ಸೂಪರ್ ಮಾಡೆಲ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ೩ಡಿಯಲ್ಲಿ ಬರಲಿರುವ ಮುಂಬೈ ೧೨೫ ಕಿ.ಮೀ. ಎಂಬ ಥ್ರಿಲ್ಲರ್ ಚಿತ್ರದ ಚಿತ್ರೀಕರಣವೂ ನಡೆದಿದೆ. ಈ ಚಿತ್ರಗಳೂ ಸೇರಿದಂತೆ ಒಟ್ಟು ೬ ಚಿತ್ರಗಳು ೨೦೧೩ರಲ್ಲಿ ತೆರೆಗೆ ಬರಲಿವೆ. ಅಲ್ಪಾವಧಿಯಲ್ಲಿಯೇ ಇಷ್ಟೊಂದು ಅವಕಾಶಗಳು ಭಾರತದಲ್ಲಿ ದೊರೆತಿರುವುದು ಅದೃಷ್ಟ. ಭಾರತೀಯರ ಅಭಿಮಾನಕ್ಕೆ ಮೂಕಳಾಗಿದ್ದೇನೆ. ಅಭಾರಿಯಾಗಿದ್ದೇನೆ ಎಂದು ಭಾವುಕರಾಗಿ ನುಡಿದಿದ್ದಾರೆ ವೀಣಾ. ಭಾರತ ಹಾಗೂ ಪಾಕಿಸ್ತಾನೀಯರ ಎರಡು ಪ್ರಮುಖ ಆಕರ್ಷಣೆ ಎಂದರೆ ಒಂದು ಕ್ರಿಕೆಟ್, ಇನ್ನೊಂದು ಸಿನಿಮಾ. ನಾನು ಕ್ರಿಕೆಟ್ ಅಭಿಮಾನಿಯೂ ಹೌದು. ಸಿನಿಮಾ ನಟಿಯೂ ಹೌದು. ಕೇವಲ ಕಲೆ ಹಾಗೂ ಕ್ರೀಡೆ ಮಾತ್ರ ಎರಡೂ ದೇಶಗಳ ನಡುವಿನ ಕಹಿಯನ್ನು ನೀಗಿಸಬಲ್ಲದು ಎಂಬುವುದು ಅವರ ಅಭಿಪ್ರಾಯ. (vk lvk published dis article)

No comments:

Post a Comment