Tuesday, February 5, 2013
ಸಿನಿಮಾರಂಗದ ಸ್ಪೋರ್ಟ್ಸ್ ಸ್ಟಾರ‍್ಸ್ !
ಸಿನಿಮಾದಲ್ಲಿ ಸ್ಟಾರ್ ಆಗದೇ ಹೋದರೂ ಇಲ್ಲಿ ಮಾತ್ರ ಸ್ಪೋಟ್ಸ್ ಸ್ಟಾರ್ ಎನ್ನುವ ಪಟ್ಟ ಖಾಯಂ ಆಗಿ ಉಳಿದು ಬಿಡುತ್ತದೆ. ಇಂತಹ ಹತ್ತಾರು ಸ್ಪೋರ್ಟ್ಸ್ ಸ್ಟಾರ್‌ಗಳು ಸಿನಿಮಾ ರಂಗದಲ್ಲಿ ಗೆದ್ದು ಬಂದಿದ್ದಾರೆ. ಇನ್ನೂ ಕೆಲವರು ಸಿನಿಮಾ ಬಿಟ್ಟು ಬರೀ ಕ್ರೀಡಾ ಕ್ಷೇತ್ರವನ್ನೇ ಬಿಗಿಯಾಗಿ ಅಪ್ಪಿಕೊಂಡಿದ್ದಾರೆ.
* ಸ್ಟೀವನ್ ರೇಗೊ, ದಾರಂದಕುಕ್ಕು
ಬಣ್ಣದ ಲೋಕದ ಮಾತೇ ಭಿನ್ನ. ಇಲ್ಲಿ ಎಲ್ಲವೂ ಉಂಟು. ಆದರೆ ಏನಿಲ್ಲ ಎನ್ನುವ ಮಾತು ಹರಿದಾಡುತ್ತದೆ. ಅದಕ್ಕೂ ಮುಖ್ಯವಾಗಿ ಬಣ್ಣದ ಲೋಕದಲ್ಲಿ ಏನೋ ಮಾಡಲು ಬಂದು ನಂತರ ಏನೋ ಆಗಿ ಸೈಲೆಂಟ್ ಆಗಿ ಹೋಗುತ್ತಾರೆ. ಇನ್ನೂ ಕೆಲವರು ಬಣ್ಣದ ಲೋಕದಲ್ಲಿ ಮಿಂಚಿ ತಮ್ಮ ಇತರ ಕ್ಷೇತ್ರದಲ್ಲೂ ಸಾಧನೆ ಮೆರೆಯುತ್ತಾರೆ. ಯಾಕೋ ಗೊತ್ತಿಲ್ಲ ಇನ್ನೂ ಕೆಲವರು ಸಿನಿಮಾ ಬಿಟ್ಟು ಬರೀ ನೆಚ್ಚಿನ ಆಟೋಟಗಳಲ್ಲಿ ಗಮನ ಸೆಳೆಯುತ್ತಾರೆ.
ಅವರನ್ನು ಶಾರ್ಟ್ ಆಂಡ್ ಸ್ವೀಟ್ ಆಗಿ ಹೇಳುವುದು ಒಂದೇ ಮಾತು ಈ ವಾಸ್ ಎ ಸ್ಪೋರ್ಟ್ಸ್ ಸ್ಟಾರ್. ಸಿನಿಮಾದಲ್ಲಿ ಸ್ಟಾರ್ ಆಗದೇ ಹೋದರೂ ಇಲ್ಲಿ ಮಾತ್ರ ಸ್ಪೋಟ್ಸ್ ಸ್ಟಾರ್ ಎನ್ನುವ ಪಟ್ಟ ಖಾಯಂ ಆಗಿ ಉಳಿದು ಬಿಡುತ್ತದೆ. ಇಂತಹ ಹತ್ತಾರು ಸ್ಪೋರ್ಟ್ಸ್ ಸ್ಟಾರ್‌ಗಳು ಸಿನಿಮಾ ರಂಗದಲ್ಲಿ ಗೆದ್ದು ಬಂದಿದ್ದಾರೆ. ಇನ್ನೂ ಕೆಲವರು ಸಿನಿಮಾ ಬಿಟ್ಟು ಬರೀ ಕ್ರೀಡಾ ಕ್ಷೇತ್ರವನ್ನೇ ಬಿಗಿಯಾಗಿ ಅಪ್ಪಿಕೊಂಡಿದ್ದಾರೆ.
ಅಂದಹಾಗೆ ಬಾಲಿವುಡ್ ಅಂಗಳದ ನಟಿ ಚಿತ್ರಾಂಗದಾ ಸಿಂಗ್ ಸಿನಿಮಾದ ಶೂಟಿಂಗ್ ಇಲ್ಲದೇ ಹೋದರೆ ತಮ್ಮ ಉಳಿದ ಸಮಯವನ್ನು ಯಾವ ರೀತಿ ಕಳೆಯುತ್ತಾರೆ ಎನ್ನುವುದು ಬಹುತೇಕ ಮಂದಿಗೆ ಗೊತ್ತೇ ಇಲ್ಲ. ಚಿತ್ರಾಂಗದಾ ಪಾಲಿಗೆ ಸಿನಿಮಾಗಳು ಇಲ್ಲದೇ ಹೋದಾಗ ಶೂಟಿಂಗ್‌ನಲ್ಲಿ ತುಂಬಾನೇ ಬ್ಯುಸಿಯಾಗಿ ಉಳಿಯುತ್ತಾರೆ.
ಚಿತ್ರಾಂಗದಾ ಶೂಟಿಂಗ್ ಸ್ಪರ್ಧೆಯಲ್ಲಿ ಮಿಂಚಿದ ಪ್ರತಿಭೆ. ಈ ವರ್ಷದ ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಗಳ ಜತೆಯಲ್ಲಿ ಗುದ್ದಾಡುವ ಸ್ಪರ್ಧಿಯಾಗಿ ಚಿತ್ರಾಂಗದಾ ಕಾಣಿಸಿಕೊಳ್ಳುತ್ತಾರೆ. ಬಾಲಿವುಡ್‌ನಲ್ಲಿ ಚಿತ್ರಗಳು ಇರಲೀ ಹೋಗಲಿ ಚಿತ್ರಾಂಗದಾ ಮಾತ್ರ ಈ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದೇ ಇಲ್ಲ ಎನ್ನೋದು ಅವರ ಆಪ್ತ ಮೂಲಗಳ ಮಾತು. ಇದು ಒಂದು ನಟ, ನಟಿಯರ ಮಾತಲ್ಲ. ಸಿನಿಮಾವನ್ನು ಇವರು ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರೀತಿಯನ್ನು ಅವರು ತಮ್ಮ ನೆಚ್ಚಿನ ಕ್ರೀಡಾ ಕ್ಷೇತ್ರಗಳಲ್ಲಿ ಇಟ್ಟುಕೊಂಡಿದ್ದಾರೆ. ಸಿನಿಮಾ ರಂಗದವರಿಗೂ ಒಂಚೂರು ಹೇಳಿಕೊಳ್ಳದೇ ತಮ್ಮ ಕ್ರೀಡಾ ಕ್ಷೇತ್ರಗಳಲ್ಲಿ ಪದಕಗಳ ಮೇಲೆ ಪದಕಗಳನ್ನು ಹೊಡೆದು ತಮ್ಮ ಮನೆಯ ಶೋಕೇಸ್‌ನಲ್ಲಿ ಜೋಪಾನವಾಗಿ ತೂಗು ಹಾಕುತ್ತಾರೆ.
ಸಿನಿಮಾ ಲೋಕದ ವಿಶಿಷ್ಟ ಕ್ರೀಡೆಗಳು:
ಸಿನಿಮಾ ನಟ/ನಟಿಯರ ಫೀಟ್‌ನೆಸ್ ಕುರಿತು ತಜ್ಞರು ಹೇಳುವ ಮಾತು ಹೀಗಿದೆ: ಸಿನಿಮಾ ನಟರು ಯಾವುದಾದರೂ ಒಂದು ಕ್ರೀಡೆಯಲ್ಲಿ ಇದ್ದಾರೆ ಒಳ್ಳೆಯದು. ಈ ಮೂಲಕ ಅವರು ತಮ್ಮ ದೇಹದ ಮೇಲೆ ನಿಯಂತ್ರಣ ಇಟ್ಟುಕೊಳ್ಳಲು ಸಾಧ್ಯವಿದೆ. ಪಾತ್ರಗಳಲ್ಲೂ ಒಂದು ಹಿಡಿ ಜಾಸ್ತಿಯಾಗಿ ಭಾಗಿಯಾಗುವ ಕೆಲಸ ನಡೆಯುತ್ತದೆ ಎನ್ನುವುದು ಮಾತು.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆಯಂತೆ ಒಳ್ಳೆಯ ಶಟ್ಲ್ ಆಟಗಾರ್ತಿ. ಈಗಾಗಲೇ ರಾಜ್ಯ ಮಟ್ಟದ ಹಲವು ಶಟ್ಲ್ ಆಟಗಳಲ್ಲಿ ಪದಕ, ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕೆಲವೊಂದು ಬಾರಿ ತಂದೆಯ ಕ್ರೀಡೆಗೆ ಸಾಥ್ ಕೊಡಲು ದೀಪಿಕಾ ಮಾಧ್ಯಮಗಳ ಮುಂದೆ ನಿಂತು ಶಟ್ಲ್ ಆಡುವ ಚಿತ್ರಗಳನ್ನು ಬಹುತೇಕ ಮಂದಿ ಕಂಡಿರಬಹುದು. ಅದರಲ್ಲೂ ಬಣ್ಣದ ಲೋಕದಲ್ಲಿ ದೀಪಿಕಾ ಮೆಟ್ಟಲುಗಳ ಮೇಲೆ ಮೆಟ್ಟಲುಗಳನ್ನು ಏರುತ್ತಾ ಸಾಗುತ್ತಿದ್ದಂತೆ ಶಟ್ಲ್ ಆಟಗಳಿಂದ ದೀಪಿಕಾ ದೂರವಾಗುತ್ತಾ ಹೋದಳು.
ಬಾಲಿವುಡ್ ನಟಿ ನೀತೂ ಚಂದ್ರಾ ಪಕ್ಕಾ ಬಾಸ್ಕೆಟ್ ಬಾಲ್ ಆಟಗಾರ್ತಿ ಜತೆಗೆ ಕರಾಟೆಯಲ್ಲೂ ಬ್ಲ್ಯಾಕ್‌ಬೆಲ್ಟ್ ಪಡೆದಿರುವ ಹುಡುಗಿ. ರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾಟಗಳಲ್ಲಿ ಗೆದ್ದುಕೊಂಡು ಎನ್‌ಬಿಎಯಲ್ಲೂ ಕಾಲೂರಿದ ನಟಿ ನೀತೂ ಚಂದ್ರಾ ಸಿನಿಮಾದಲ್ಲೂ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಮೋಲಿವುಡ್ ಸ್ಟಾರ್ ಅನನ್ಯಾ ಕೂಡ ಬಿಲ್ಲುಗಾರಿಕೆಯಲ್ಲಿ ಎತ್ತಿದ ಕೈ. ಕೇರಳದಲ್ಲಿ ನಡೆಯುವ ರಾಜ್ಯ ಮಟ್ಟದ ಬಿಲ್ಲುಗಾರಿಕೆಯಲ್ಲಿ ಕೆಲವು ವರ್ಷಗಳಿಂದ ಅನನ್ಯಾ ಚಿನ್ನದ ಪದಕವನ್ನು ಗೆಲ್ಲುತ್ತಿದ್ದಾರೆ. ಮುಖ್ಯವಾಗಿ ಬಿಲ್ಲುಗಾರಿಕೆಯಿಂದ ರಾಷ್ಟ್ರೀಯ ಮಟ್ಟಕ್ಕೂ ಹೋಗಿರುವ ನಟಿ ಅನನ್ಯಾ ಸಿನಿಮಾದಲ್ಲೂ ಹೆಸರು ಬಲಪಡಿಸುತ್ತಿದ್ದಾರೆ.
ಕನ್ನಡದ ಧ್ಯಾನ್ ( ಸಮೀರ್ ದತ್ತಾನಿ) ನಟನೆಗಿಂತ ಮೊದಲು ಒಬ್ಬ ಒಳ್ಳೆಯ ಸ್ಕೇಟಿಂಗ್ ಆಟಗಾರ. ಬಹಳಷ್ಟು ಪದಕಗಳನ್ನು ಪಡೆದುಕೊಂಡು ರಾಷ್ಟ್ರೀಯ ಸ್ಕೇಟಿಂಗ್ ತಂಡದಲ್ಲೂ ಗುರುತಿಸಿಕೊಂಡಿರುವ ಪ್ರತಿಭೆ. ಬಾಲಿವುಡ್ ನಟ ನಾನಾ ಪಟೇಕರ್ ಬರೀ ನಟನೆಯಲ್ಲಿ ಮಾತ್ರವಲ್ಲ ತಮ್ಮ ಮಾತಿನ ಹರಿತದಂತೆ ಶೂಟಿಂಗ್‌ನಲ್ಲೂ ಕರಾಮತ್ತು ತೋರಿಸಿದ್ದಾರೆ. ಅಬ್ ತಕ್ ಚಪ್ಪನ್ ಸಿನಿಮಾದಲ್ಲೂ ನಾನಾ ರಿಯಲ್ ಗನ್ ಮೂಲಕ ಆಟವಾಡಿ ಈ ಹಿಂದೆ ಸುದ್ದಿಯಾಗಿದ್ದರು. ರಾಷ್ಟ್ರ ಮಟ್ಟದ ಶೂಟಿಂಗ್ ಸ್ಫರ್ಧೆಯಲ್ಲಿ ಪದಕ ಗೆಲ್ಲುವ ಹೆಸರುಗಳಲ್ಲಿ ನಾನಾ ಕೂಡ ಸೇರಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಾರ್ಶಲ್ ಆರ್ಟ್ಸ್‌ನಲ್ಲಿ ಪಳಗಿ ಬಂದವರು. ತಮ್ಮದೇ ಮಾರ್ಶಲ್ ಆರ್ಟ್ಸ್ ಶಾಲೆ, ಅಕಾಡೆಮಿಗಳನ್ನು ತೆರೆದು ಸಿನಿಮಾ ಶೂಟಿಂಗ್ ಇಲ್ಲದೇ ಹೋದಾಗ ಮಾರ್ಶಲ್ ಆರ್ಟ್ಸ್‌ನಲ್ಲಿ ಬಹಳ ಹೊತ್ತು ಕಳೆಯುತ್ತಾರೆ.
ರಾಹುಲ್ ಬೋಸ್ ಪಕ್ಕಾ ಫುಟ್ಬಾಲ್, ರಗ್ಬಿ ಆಟಗಾರ. ಸಿನಿಮಾ ರಂಗಕ್ಕೆ ಬರುವುದಕ್ಕಿಂತಲೂ ಮೊದಲು ಈ ಎಲ್ಲ ಕ್ರೀಡೆಗಳಲ್ಲಿ ಸಖತ್ ಕ್ಲಿಕ್ ಆದವರು. ರಗ್ಬಿಯಲ್ಲಂತೂ ಅಂತಾರಾಷ್ಟ್ರೀಯ ಮಟ್ಟದ ೨೦ಕ್ಕೂ ಅಧಿಕ ಪಂದ್ಯಾಟಗಳಲ್ಲಿ ರಾಹುಲ್ ಆಟವಾಡಿದ್ದಾರೆ. ಇಂತಹ ನಾನಾ ಕ್ರೀಡಾ ಪ್ರತಿಭೆಗಳು ಸಿನಿಮಾ ರಂಗದಲ್ಲಿ ಇವೆ ಆದರೆ ಅದು ಸಿನಿಮಾ ನೋಡುವ ಪ್ರೇಕ್ಷಕನಿಗಂತೂ ಕಾಣಿಸಿಕೊಳ್ಳುವುದೇ ಇಲ್ಲ ಎನ್ನುವುದು ಗಮನಿಸಬೇಕಾದ ವಿಷ್ಯಾ.
Subscribe to:
Post Comments (Atom)
No comments:
Post a Comment