Tuesday, February 12, 2013
ರಾಜಮೌಳಿ ಕಟ್ಟುವ ಬಾಹುಬಲಿ
‘ಈಗ’ದ ನಿರ್ದೇಶಕ ರಾಜಮೌಳಿ ಮತ್ತೆ ನಿರ್ದೇಶಕನ ಕುರ್ಚಿಯಲ್ಲಿ ಬಂದು ಕೂರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಬಾಹುಬಲಿ ಎನ್ನುವ ಶೀರ್ಷಿಕೆ ನೀಡಲಾಗಿದೆ. ಅದೊಂದು ಜಸ್ಟ್ ವರ್ಕಿಂಗ್ ಟೈಟಲ್ ಉಳಿದಂತೆ ಚಿತ್ರ ಟೈಟಲ್ ಕಾರ್ಡ್ ಬದಲಾಯಿಸುವ ಯೋಜನೆ ಕೂಡ ಇದೆ ಎಂದು ರಾಜಮೌಳಿ ಟ್ವಿಟ್ಟರ್‌ನಲ್ಲಿ ಮಾಹಿತಿ ಹರಿಬಿಟ್ಟಿದ್ದಾg.
* ಸ್ಟೀವನ್ ರೇಗೊ, ದಾರಂದಕುಕ್ಕು
ಇಡೀ ಭಾರತೀಯ ಸಿನಿಮಾ ಲೋಕದಲ್ಲಿ ಒಂದು ನೋಣ ಕಳೆದ ವರ್ಷ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಬಾಲಿವುಡ್ ಜತೆಗೆ ಹಾಲಿವುಡ್ ಮಂದಿನೂ ಕದ್ದುಮುಚ್ಚಿಕೊಂಡು ಸಿನ್ಮಾ ನೋಡಿ ಸಖತ್ ಇದೆ ಎಂದು ಸಲಾಂ
ಹಾಕಿಕೊಂಡು ಹೋದದ್ದು ಈಗಲೂ ಅಲ್ಲಿ ಇಲ್ಲಿ ಕೇಳಿಸಿಕೊಳ್ಳುತ್ತಿದೆ. ಅಂದಹಾಗೆ ಅದು ತೆಲುಗಿನ ‘ಈಗ’ ಚಿತ್ರ ಹಾಲಿವುಡ್ ಶೈಲಿಯನ್ನು ಮುಟ್ಟಿ ಭಾರತೀಯ ಚಿತ್ರಗಳ ಮೈನ್ ಪಾಯಿಂಟ್ ಪ್ರೀತಿಯನ್ನು ಇಟ್ಟುಕೊಂಡು ಬಂದ ‘ಈಗ’ ಚಿತ್ರವಂತೂ ಬಾಲಿವುಡ್ ನಲ್ಲಿ ‘ಮಕ್ಕಿ’ ಬಾಕ್ಸಾಫೀಸ್‌ನಲ್ಲಿ ಸಖತ್ ಕಲೆಕ್ಷನ್ ಒಟ್ಟು ಹಾಕಿತ್ತು.
ಇದೇ ‘ಈಗ’ದ ನಿರ್ದೇಶಕ ರಾಜಮೌಳಿ ಮತ್ತೆ ನಿರ್ದೇಶಕನ ಕುರ್ಚಿಯಲ್ಲಿ ಬಂದು ಕೂರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಬಾಹುಬಲಿ ಎನ್ನುವ ಶೀರ್ಷಿಕೆ ನೀಡಲಾಗಿದೆ. ಅದೊಂದು ಜಸ್ಟ್ ವರ್ಕಿಂಗ್ ಟೈಟಲ್ ಉಳಿದಂತೆ ಚಿತ್ರ ಟೈಟಲ್ ಕಾರ್ಡ್ ಬದಲಾಯಿಸುವ ಯೋಜನೆ ಕೂಡ ಇದೆ ಎಂದು ರಾಜಮೌಳಿ ಟ್ವಿಟ್ಟರ್‌ನಲ್ಲಿ ಮಾಹಿತಿ ಹರಿಬಿಟ್ಟಿದ್ದಾರೆ ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಹಾಲಿವುಡ್ ಮಾದರಿಯಲ್ಲಿ ಚಿತ್ರವೊಂದು ಸಿದ್ಧಗೊಳ್ಳುತ್ತಿದೆ ಎನ್ನುವ ಮಾಹಿತಿಗೆ ಪುಷ್ಠಿ ಕೊಟ್ಟಿದ್ದಾರೆ.
ರಾಜಮೌಳಿಯ ಹೊಸ ಗಿಮಿಕ್:
ಟಾಲಿವುಡ್ ಚಿತ್ರರಂಗದಲ್ಲಿ ಸದ್ಯಕ್ಕೆ ಸ್ಟಾರ್‌ಗಳ ನಡುವೆ ಪೈಪೋಟಿ ಆರಂಭವಾಗಿದೆ. ಟಾಲಿವುಡ್ ಮಹೇಶ್ ಬಾಬು ಜತೆಗೆ ಸರಿಯಾಗಿ ಪೈಪೋಟಿ ನೀಡುವಂತಹ ನಟ ಎಂದು ಬಿಂಬಿಸಲಾಗುತ್ತಿರುವ ಮಿರ್ಚಿಯ ನಾಯಕ, ರೆಬೆಲ್ ಸ್ಟಾರ್ ಪ್ರಭಾಸ್ ರಾಜಮೌಳಿಯ ಬಾಹುಬಲಿ ಚಿತ್ರದ ನಾಯಕರಲ್ಲಿ ಒಬ್ಬರು. ಇವರ ಜತೆಗೆ ರಾಣಾ ದಗ್ಗುಬಟ್ಟಿ ಕೂಡ ಲೀಡ್ ರೋಲ್‌ನಲ್ಲಿ ಇರುವುದರಿಂದ ಚಿತ್ರದ ಕುರಿತು ಈಗಾಗಲೇ ನಿರೀಕ್ಷೆಯ ಮೂಟೆ ಗರಿಬಿಚ್ಚಿಕೊಂಡಿದೆ. ನಾಯಕಿಯಾಗಿ ಅನುಷ್ಕಾ ಶರ್ಮ ಕಾಣಿಸಿಕೊಳ್ಳುವುದರಿಂದ ಗ್ಲಾಮರ್ ಹಾಗೂ ಮಸಾಲೆ ವಸ್ತುಗಳಿಗೆ ಚಿತ್ರದಲ್ಲಿ ಬರ ಇರುವುದಿಲ್ಲ ಎನ್ನುವ ಮಾತು ಖಾತರಿಯಾಗಿದೆ.
ಚಿತ್ರದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ರಾಣಾ ಇಬ್ಬರು ಸಹೋದರರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನೋದು ರಾಜಮೌಳಿ ಹರಿಯಬಿಟ್ಟಿರುವ ಮಾತು. ಚಿತ್ರದ ಎರಡನೇ ಹಂತದಲ್ಲಿ ಇಬ್ಬರು ಸಹೋದರರು ವಿಲನ್ ರೂಪಕ್ಕೆ ತಿರುಗುವುದು, ಕ್ಲೈಮಾಕ್ಸ್‌ನಲ್ಲಿ ಇಟ್ಟಿರುವ ಟ್ವಿಸ್ಟ್ ಎಲ್ಲವೂ ಚಿತ್ರದ ಕುರಿತು ಹೊಸ ಹೈಫ್ ಕ್ರಿಯೇಟ್ ಮಾಡಿಬಿಡುತ್ತದೆ. ಚಿತ್ರದಲ್ಲಿ ಹಾಲಿವುಡ್ ಸಾಹಸ ನಿರ್ದೇಶಕ ಪೀಟರ್ ಹೇನ್ ಕಾಣಿಸಿಕೊಳ್ಳುವುದರಿಂದ ಸಿಕ್ಕಾಪಟ್ಟೆ ಆಕ್ಷನ್ ದೃಶ್ಯಗಳಿಗೆ ಜಾಗ ನೀಡುವ ಕುರಿತು ಮೊದಲೇ ಊಹಿಸಿಕೊಳ್ಳಬಹುದು. ಬಾಹುಬಲಿಯ ಕತೆಯನ್ನು ಆಧುನಿಕ ಜಗತ್ತಿನಲ್ಲಿ ವಿಶಿಷ್ಟ ಮಾದರಿಯಲ್ಲಿ ತೋರಿಸಲು ಹೊರಟಿರುವ ರಾಜಮೌಳಿ ಚಿತ್ರದ ಮಾಹಿತಿಗಳನ್ನು ಅದಷ್ಟೂ ಗೌಪ್ಯವಾಗಿಡಲು ಬಯಸಿದ್ದಾರೆ. ಅಂದಹಾಗೆ ಚಿತ್ರವನ್ನು ಪ್ರಸಾದ್ ದೇವಿನೀನಿ ಹಾಗೂ ಎಸ್. ಯಾರಾಗಾಡು ನಿರ್ಮಾಣ ಮಾಡುತ್ತಿದ್ದಾರೆ. ಎಂ.ಎಂ. ಕೀರವಾಣಿ ಸಂಗೀತ ನೀಡುತ್ತಿದ್ದಾರೆ. ಏಪ್ರಿಲ್ ೨೦೧೩ರ ಹೊತ್ತಿಗೆ ಚಿತ್ರೀಕರಣ ಆರಂಭವಾಗಲಿದೆ. ಉಳಿದಂತೆ ಚಿತ್ರವನ್ನು ೨೦೧೪ರ ಹೊತ್ತಿಗೆ ಹೊರ ತರುವ ಯೋಜನೆ ರಾಜಮೌಳಿ ರೂಪಿಸಿದ್ದಾರೆ. ಈ ಹಿಂದಿನ ‘ಈಗ’ ದಂತೆ ಬಾಹುಬಲಿ ಚಿತ್ರ ಕೂಡ ತಮಿಳು, ತೆಲುಗು ಹಾಗೂ ಹಿಂದಿಯಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
‘ಬಾಹುಬಲಿ’ಗೆ ಕರ್ನಾಟಕದ ಲೋಕೇಷನ್:
ಚಿತ್ರದ ನಿರ್ದೇಶಕ ರಾಜಮೌಳಿಯ ಹೊಸ ಚಿತ್ರ ‘ಬಾಹುಬಲಿ’ಯನ್ನು ತಮಿಳುನಾಡು, ಕೇರಳ ಸೇರಿದಂತೆ ಕರ್ನಾಟಕದಲ್ಲಿ ಚಿತ್ರೀಕರಣ ಮಾಡಲು ಯೋಜನೆ ರೂಪಿಸಿದ್ದಾರೆ. ಅದರಲ್ಲೂ ಕನ್ನಡಿಗರಾದ ರಾಜಮೌಳಿ ಕರ್ನಾಟಕದ ವಿಶಿಷ್ಟ ತಾಣಗಳನ್ನು ತನ್ನ ಚಿತ್ರದಲ್ಲಿ ತೋರಿಸಲು ಉತ್ಸುಕತೆ ತೋರಿಸಿದ್ದಾರೆ ಎನ್ನುವುದು ಅವರ ಆಪ್ತ ಮೂಲಗಳಿಂದ ಹೊರ ಬಂದ ಮಾತು.
‘ಬಾಹುಬಲಿ’ ಚಿತ್ರ ಐತಿಹಾಸಿಕ ಹಿನ್ನೆಲೆಯಲ್ಲಿ ಕಾಣಿಸಿಕೊಳ್ಳುವುದರಿಂದ ಕರ್ನಾಟಕದ ಬಹುತೇಕ ಹಳೆಯ ರಾಜಮನೆತನದ ದೇವಸ್ಥಾನ, ಅರಮನೆ ಹಾಗೂ ಪ್ರವಾಸಿ ತಾಣಗಳನ್ನು ಚಿತ್ರದಲ್ಲಿ ಕಾಣಬಹುದು. ಈಗಾಗಲೇ ರಾಜಮೌಳಿ ತನ್ನ ತಂಡದ ಜತೆಯಲ್ಲಿ ರಾಜ್ಯದ ಕೆಲವು ಪ್ರವಾಸಿ ತಾಣಗಳನ್ನು ಚಿತ್ರಕ್ಕಾಗಿ ಬುಕ್ ಮಾಡಿದ್ದಾರೆ ಎಂಬ ಮಾತು ಕೇಳಿಸಿಕೊಳ್ಳುತ್ತಿದೆ. ಇದೇ ಕಾರಣದಿಂದ ಚಿತ್ರದ ನಾಯಕರಾದ ರಾಣಾ ಹಾಗೂ ಪ್ರಭಾಸ್‌ರನ್ನು ರಾಜ್ಯದ ಕುಸ್ತಿ ಹಾಗೂ ಮಲ್ಲಕಂಬ ಏರುವ ನಾನಾ ಸ್ಪರ್ಧೆಗಳಿಗೆ ಸಿದ್ಧ ಮಾಡುತ್ತಿದ್ದಾರೆ. ಅದರಲ್ಲೂ ಪ್ರಭಾಸ್‌ರನ್ನು ಈ ಚಿತ್ರಕ್ಕಾಗಿ ದೇಹದ ತೂಕ ಕಡಿಮೆ ಮಾಡಿಸಿಕೊಳ್ಳುವ ಷರತ್ತು ಕೂಡ ಹಾಕಲಾಗಿದೆ. ಬಾಲಿವುಡ್‌ನ ಓಂ ಶಾಂತಿ ಓಂ ಹಾಗೂ ರಾ.ವನ್, ಎಂದಿರನ್ ಚಿತ್ರಕ್ಕೆ ದುಡಿದ ಸಿನಿಮಾಟೋಗ್ರಾಫರ್ ಸಾಬು ಸಿರೀಲ್ ಈ ಚಿತ್ರದಲ್ಲಿ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಬಹುತಾರಾಗಣದ ಜತೆಯಲ್ಲಿ ಬಹು ತಂತ್ರಜ್ಞರ ಮೂಲಕ ಟಾಲಿವುಡ್‌ನ ಬಿಗ್ ಬಜೆಟ್ ಚಿತ್ರವಾಗಲಿದೆ ಎನ್ನೋದು ಗುಪ್ತ ಮಾತು. ಅಂದಹಾಗೆ ಬಾಹುಬಲಿ ಚಿತ್ರ ನಿರ್ಮಾಣಕ್ಕೆ ಸುರಿಯುತ್ತಿರುವ ಹಣ ಬರೋಬರಿ ೭೦ ಕೋಟಿ ರೂಪಾಯಿಗಳು ! ಇದು ಇನ್ನಷ್ಟೂ ಹೆಚ್ಚುವ ಸಾಧ್ಯತೆ ಕೂಡ ದಟ್ಟವಾಗಿದೆ. ಟೋಟಲಿ ಬಾಹುಬಲಿ ಚಿತ್ರೀಕರಣಕ್ಕೂ ಮೊದಲು ಸುದ್ದಿಯಾಗುತ್ತಿದೆ.
(vk lvk published dis article on 13.02.2013)
Subscribe to:
Post Comments (Atom)
No comments:
Post a Comment