Sunday, February 3, 2013

ಬಾಲಿವುಡ್‌ಗೆ ಹಿಮ್ಮತ್ ಕೊಡುವ ಖಾನ್

ಗಬ್ಬರ್ ಪಾತ್ರಕ್ಕೆ ಅಮ್ಜಾದ್ ಖಾನ್‌ರೇ ಸೂಟೇಬಲ್ ಮ್ಯಾನ್ ಎಂದೇ ನೂರು ವರ್ಷ ತುಂಬಿದ ಹಿಂದಿ ಸಿನಿಮಾ ರಂಗ ಕನವರಿಕೆ ಮಾಡಿಕೊಳ್ಳುತ್ತಿದೆ. ಅಂದಹಾಗೆ ಈಗ ಅಮ್ಜಾದ್ ಖಾನ್ ಮತ್ತೇ ಸಿನಿಮಾ ರಂಗದಲ್ಲಿಲ್ಲ. ಆದರೆ ಅಮ್ಜಾದ್ ಖಾನ್ ಅವರ ಕೊನೆಯ ಪುತ್ರ ಸೀಮಾಬ್ ಖಾನ್ ಚಿತ್ರರಂಗದಲ್ಲಿ ಅಂಬೆಕಾಲು ಹಾಕುತ್ತಿದ್ದಾರೆ. * ಸ್ಟೀವನ್ ರೇಗೊ, ದಾರಂದಕುಕ್ಕು
ಅಮ್ಜಾದ್ ಖಾನ್ ಇಡೀ ಬಾಲಿವುಡ್ ಅಂಗಳದಲ್ಲಿ ಅಬ್ಬರಿಸಿದ ನಟ. ಶೋಲೆಯ ಗಬ್ಬರ್‌ಸಿಂಗ್ ಪಾತ್ರವಂತೂ ಅಮ್ಜಾದ್ ಖಾನ್‌ನನ್ನು ಪದೇ ಪದೇ ಜೀವಂತವಾಗಿಡುತ್ತಿದೆ. ಅಮ್ಜಾದ್ ಖಾನ್ ಸಿನಿಮಾ ಲೋಕ ಬಿಟ್ಟು ಹತ್ತಾರು ವರ್ಷಗಳೇ ಆಗಿರಬಹುದು ಆದರೆ ಶೋಲೆಯ ಪಾತ್ರವಂತೂ ಸಿನಿಮಾ ಪ್ರೇಕ್ಷಕನಿಗೆ ಸದಾ ಕಾಡುತ್ತಾ ಸಾಗುತ್ತಿದೆ. ಇದು ಸಿನಿಮಾಕ್ಕೆ ಇರುವ ಶಕ್ತಿಯೋ ಇಲ್ಲವೇ ಅಮ್ಜಾದ್‌ಗೆ ಇರುವ ತಾಕತ್ತೋ ಗೊತ್ತಿಲ್ಲ. ಗಬ್ಬರ್ ಪಾತ್ರಕ್ಕೆ ಅಮ್ಜಾದ್ ಖಾನ್‌ರೇ ಸೂಟೇಬಲ್ ಮ್ಯಾನ್ ಎಂದೇ ನೂರು ವರ್ಷ ತುಂಬಿದ ಹಿಂದಿ ಸಿನಿಮಾ ರಂಗ ಕನವರಿಕೆ ಮಾಡಿಕೊಳ್ಳುತ್ತಿದೆ. ಅಂದಹಾಗೆ ಈಗ ಅಮ್ಜಾದ್ ಖಾನ್ ಮತ್ತೇ ಸಿನಿಮಾ ರಂಗದಲ್ಲಿಲ್ಲ. ಆದರೆ ಅಮ್ಜಾದ್ ಖಾನ್ ಅವರ ಕೊನೆಯ ಪುತ್ರ ಸೀಮಾಬ್ ಖಾನ್ ಚಿತ್ರರಂಗದಲ್ಲಿ ಅಂಬೆಕಾಲು ಹಾಕುತ್ತಿದ್ದಾರೆ. ಯಾಕೋ ಗೊತ್ತಿಲ್ಲ . ಅಪ್ಪ ಹೇಳಿಕೊಟ್ಟ ನಟನೆಯನ್ನು ಬಿಟ್ಟು ನಿರ್ದೇಶಕನಾಗಿ ಕುಳಿತುಕೊಳ್ಳಲು ಸೀಮಾಬ್ ಖಾನ್ ಯೋಚನೆ ಮಾಡಿದ್ದಾರೆ. ಅದರಲ್ಲೂ ಸಹಾಯಕ ನಿರ್ದೇಶಕನಾಗಿ ಈಗ ಸಿನಿಮಾವೊಂದನ್ನು ಹಿರಿತೆರೆಗೆ ತರುತ್ತಿದ್ದಾರೆ ಎನ್ನೋದು ಗಮನಿಸಬೇಕಾದ ವಿಷ್ಯಾ. ಹಿಮ್ಮತ್‌ವಾಲಾದಲ್ಲಿ ಖಾನ್ ವರಸೆ: ಬಾಲಿವುಡ್ ನಲ್ಲಿ ಸದ್ಯಕ್ಕೆ ಸುದ್ದಿಯಾಗುತ್ತಿರುವ ಚಿತ್ರ ‘ಹಿಮ್ಮತ್‌ವಾಲಾ’ ಕಾರಣ ಈ ಹಿಂದೆ ಇದೇ ಚಿತ್ರ ಹಿಂದಿಯಲ್ಲಿ ಬಂದಿತ್ತು. ಅದಕ್ಕೂ ಮುಖ್ಯವಾಗಿ ಖ್ಯಾತ ನಟ ಜೀತೇಂದ್ರ ಹಾಗೂ ಶ್ರೀದೇವಿಯ ಭರ್ಜರಿ ನಟನೆಯಿಂದ ಚಿತ್ರವಂತೂ ಬಾಕ್ಸಾಫೀಸ್‌ನಲ್ಲಿ ಲಗ್ಗೆ ಹಾಕಿತ್ತು. ನಂತರ ಇಬ್ಬರ ಜೋಡಿ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೇ ಬೇಡಿಕೆ ಕೂಡ ಗಳಿಸಿದ್ದು ಈಗ ಒಂದು ತಿಹಾಸ ಸೇರಬೇಕಾದ ಪುಟ. ಆದರೆ ಬಾಲಿವುಡ್ ನಿರ್ದೇಶಕ ಸಜೀದ್ ಖಾನ್ ಇದೇ ಹೆಸರಿನಲ್ಲಿ ಚಿತ್ರವನ್ನು ಹೊರತರುತ್ತಿದ್ದಾರೆ. ಅಲ್ಲಿ ಜಿತೇಂದ್ರ ಕಾಣಿಸಿಕೊಂಡರೆ ಇಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡಿದ್ದಾರೆ. ಶ್ರೀದೇವಿಯ ಜಾಗದಲ್ಲಿ ತಮ್ನಾನಾ ಬಂದು ಕೂತಿದ್ದಾಳೆ. ಕತೆಯಲ್ಲೂ ಕೊಂಚ ಮಸಾಲೆ ಅರಿಯಲಾಗಿದೆ. ಈ ಹಿಂದೆ ಹಿಂದಿಯಲ್ಲಿ ಬಂದಿದ್ದ ‘ಅಗ್ನಿಪಥ್’ ಸಿನಿಮಾ ದಂತೆ ಇದರಲ್ಲೂ ಎರ್ರಾಬಿರ್ರಿಯಾಗಿ ಹೊಸತನದ ಅಂಟು ಮೆತ್ತಿಸಲಾಗಿದೆ. ನಿರ್ದೇಶಕ ಸಜೀದ್ ಖಾನ್ ಎಂದಾಗಲೇ ಅಲ್ಲಿ ಮಸಾಲೆ ಜತೆಯಲ್ಲೂ ಕೊಂಚ ಕಾಮಿಡಿಗೂ ಜಾಗ ನೀಡಲಾಗುತ್ತದೆ ಎನ್ನುವ ಗ್ಯಾರಂಟಿ ಮಾತು ಸಜೀದ್ ಖಾನ್‌ರ ಈ ಹಿಂದಿನ ಮಾತುಗಳು ಬಲಿಷ್ಟಗೊಳ್ಳುತ್ತದೆ. ಸಜೀದ್ ಹಿಡಿದ ಪ್ರತಿಭಾವಂತ ಖಾನ್:
ಬಾಲಿವುಡ್ ಅಂಗಳದಲ್ಲಿ ದೂರವೇ ನಿಂತು ನೋಡುತ್ತಿದ್ದ ಅಮ್ಜಾದ್ ಖಾನ್‌ರ ಕೊನೆಯ ಪುತ್ರ ಸೀಮಾಬ್ ಖಾನ್ ಅವರನ್ನು ಹುಡುಕಾಡಿಕೊಂಡು ಬಂದದ್ದು ಬೇರೆ ಯಾರು ಅಲ್ಲ. ‘ಹಿಮ್ಮತ್‌ವಾಲಾ’ದ ನಿರ್ದೇಶಕ ಸಜೀದ್ ಖಾನ್. ಸಜೀದ್‌ಗೆ ಅಮ್ಜಾದ್ ಖಾನ್ ಎನ್ನುವ ಹಿರಿಯ ನಟನ ಮೇಲೆ ವಿಶೇಷ ಪ್ರೀತಿ. ಅದಕ್ಕೂ ಮುಖ್ಯವಾಗಿ ಹಿರಿಯ ನಟನ ಪುತ್ರ ಸಿನಿಮಾದಿಂದ ದೂರ ಉಳಿದುಬಿಡೋದು ಸಜೀದ್‌ಗೆ ಸುತಾರಂ ಇಷ್ಟವಿರಲಿಲ್ಲ. ಈ ಕಾರಣವನ್ನೇ ಮುಂದೆ ಹಾಕಿಕೊಂಡು ಸೀಮಾಬ್ ರನ್ನು ತನ್ನ ಚಿತ್ರದ ಸಹಾಯಕ ನಿರ್ದೇಶಕನ ಕುರ್ಚಿಯಲ್ಲಿ ತಂದು ಕೂರಿಸಿದ್ದಾರೆ. ಚಿತ್ರ ಈಗಾಗಲೇ ಸಂಪೂರ್ಣವಾಗಿ ತೆರೆಗೆ ದಾಳಿ ಮಾಡಲು ರೆಡಿಯಾಗಿದೆ. ಮತ್ತೊಂದೆಡೆ ಸಜೀದ್‌ರ ಖಾಸಾ ಗೆಳೆಯ ಸಾಬಾಬ್ ಕೂಡ ಈ ಚಿತ್ರದ ಹಿಂದೆ ನಿಂತಿದ್ದಾರೆ. ಅಂದಹಾಗೆ ಸಾಬಾಬ್ ಬೇರೆ ಯಾರು ಅಲ್ಲ. ಸೀಮಾಬ್ ಅವರ ಹಿರಿಯ ಸಹೋದರ. ಅಮ್ಜಾದ್ ಖಾನ್‌ರ ಹಿರಿಯ ಪುತ್ರ. ಸೀಮಾಬ್ ಮುಂಬಯಿ ವಿವಿಯ ಕ್ರಿಕೆಟ್ ಟೀಮ್‌ನಲ್ಲಿ ಬೌಲರ್ ಆಗಿದ್ದವರು. ಸಿನಿಮಾ ರಂಗಕ್ಕೆ ಕಾಣಿಸಿಕೊಳ್ಳದಿದ್ದಾರೆ ಸೀಮಾಬ್ ಕ್ರಿಕೆಟ್ ರಂಗದಲ್ಲಿ ಮಿಂಚುತ್ತಿದ್ದರು. ಚಿತ್ರದ ಕುರಿತು ಸೀಮಾಬ್ ಅವರಲ್ಲಿ ಕೇಳಿದಾಗ ‘ ನನ್ನ ತಂದೆ ಈ ಹಿಂದಿ ಚಿತ್ರದಲ್ಲಿ ಪಾತ್ರ ಮಾಡಿದ್ದರು. ಅದೇ ಪಾತ್ರವನ್ನು ನಿರ್ದೇಶಕ ಮಹೇಶ್ ಮಾಂಜ್ರೇಕರ್ ಮಾಡುತ್ತಿದ್ದಾರೆ. ತಂದೆಯ ಚಿತ್ರದಲ್ಲಿ ಸಹಾಯಕನಾಗಿ ದುಡಿದಿದ್ದೇನೆ. ಅದೇ ಅನುಭವ ಇಲ್ಲೂ ಅಳವಡಿಸಿದ್ದೇನೆ ಎನ್ನುತ್ತಾರೆ ಅವರು. ಟೋಟಲಿ ಹಿರಿಯ ನಟನ ಪುತ್ರನೊಬ್ಬ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರೋದು ಅಮ್ಜಾದ್ ಅಭಿಮಾನಿಗಳಿಗೆ ಖುಷಿಕೊಡಬಹುದು. (vk lvk publishe dis ariticle on 5.02.2013)

No comments:

Post a Comment