Sunday, February 24, 2013

ಶಿಂಬು ಹಾಡಿಗೆ ಬರೀ ೨ ಲಕ್ಷ !

ಇಡೀ ವಿಶ್ವಕ್ಕೆ ಲವ್ ಆಂಥಂಮ್ ಕಲಿಸಿಕೊಟ್ಟ ಶಿಂಬು ಈಗ ತಮ್ಮ ಚಿತ್ರಗಳಿಗೆ ಮಾತ್ರವಲ್ಲ ಇತರ ಚಿತ್ರಗಳಿಗೂ ಹಾಡಲು ರೆಡಿಯಾಗಿದ್ದಾರೆ. ಅಂದಹಾಗೆ ಒಂದು ಹಾಡಿಗೆ ಶಿಂಬು ಕೇಳುವ ಸಂಭಾವನೆ ಬರೀ ೨ ಲಕ್ಷ ಮಾತ್ರ ! * ಸ್ಟೀವನ್ ರೇಗೊ, ದಾರಂದಕುಕ್ಕು ಕಾಲಿವುಡ್‌ನಲ್ಲಿ ಈಗ ಬದಲಾವಣೆಯ ಗಾಳಿ ತಣ್ಣಗೆ ಜೋರಾಗಿ ಹೊಡೆಯುತ್ತಿದೆ. ತಮ್ಮ ವಿಶಿಷ್ಟ ಸಿನಿಮಾಗಳ ಮೂಲಕ ಇಡೀ ಸಿನ್ಮಾ ರಂಗದಲ್ಲಿ ಹೊಸ ಹೆಜ್ಜೆ ಹಾಕಲು ಕಾಲಿವುಡ್ ಮಂದಿ ತುದಿಕಾಲಿನಲ್ಲಿ ನಿಮತು ಕುಣಿಯುತ್ತಿರುವಾಗ ಇಲ್ಲಿನ ನಾಯಕ ನಟ, ನಟಿಯರು ಮೈಕ್ ಹಿಡಿದುಕೊಂಡು ಹಾಡಲು ಮುಂದೆ ಬಂದಿದ್ದಾರೆ. ಈ ಮೂಲಕ ಕಾಲಿವುಡ್ ಹಿನ್ನೆಲೆ ಗಾಯಕ, ಗಾಯಕಿಯರಿಗೆ ಟಾಂಗ್ ಕೊಡುವ ಸೂಚನೆ ಜತೆಗೆ ಸಂಗೀತದಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ಸಮಯ ಬಂದಿದೆ. ಕಾಲಿವುಡ್‌ನ ಮಾಸ್ ಹಿಟ್ ಹಾಡು ‘ಕೊಲೆವೆರಿ ಡಿ’ ಯ ಮೂಲಕ ನಟ ಧನುಷ್ ಹೊಸ ಗಾಯಕನಾಗಿ ಕಾಲಿವುಡ್ ಪಡಸಾಲೆಯನ್ನು ಹೊಸ ಮಿಂಚು ಹರಿಸಿದ್ದು ಎಲ್ಲರಿಗೂ ಗೊತ್ತಿದೆ. ಮತ್ತೊಂದೆಡೆ ಖ್ಯಾತ ನಟ ಕಮಲ್ ಪುತ್ರಿ ಶ್ರುತಿ ಹಾಸನ್ ಕೂಡ ಕಾಲಿವುಡ್‌ನ ರಾಂಕಿಂಗ್ ಸಾಂಗ್ಸ್‌ಗಳ ಮೂಲಕ ಗಾಯಕಿಯಾಗಿ ಕಂಗೋಳಿಸುತ್ತಿರುವ ವಿಚಾರ ಕೂಡ ಈಗ ಬಹಿರಂಗವಾಗಿದೆ. ಈಗ ನಟ ಶಿಂಬು ಸರದಿ. ಆಲಿಯಾಸ್ ಟಿ. ಆರ್. ಶಿಲಬರಸನ್ . ಇಡೀ ವಿಶ್ವಕ್ಕೆ ಲವ್ ಆಂಥಂಮ್ ಕಲಿಸಿಕೊಟ್ಟ ಶಿಂಬು ಈಗ ತಮ್ಮ ಚಿತ್ರಗಳಿಗೆ ಮಾತ್ರವಲ್ಲ ಇತರ ಚಿತ್ರಗಳಿಗೂ ಹಾಡಲು ರೆಡಿಯಾಗಿದ್ದಾರೆ. ಅಂದಹಾಗೆ ಒಂದು ಹಾಡಿಗೆ ಶಿಂಬು ಕೇಳುವ ಸಂಭಾವನೆ ಬರೀ ೨ ಲಕ್ಷ ಮಾತ್ರ ! ಶಿಂಬು ಎನ್ನುವ ಹಾಡುಗಾರ: ನಟ ಶಿಂಬು ಎನ್ನುವ ಪಕ್ಕಾ ಆಕ್ಷನ್, ರೋಮ್ಯಾಂಟಿಕ್ ನಟ ಯಾಕೆ ಹಾಡುಗಾರನಾಗಲು ಹೋದ ಎನ್ನುವ ಕುರಿತು ಶಿಂಬು ಈ ರೀತಿ ಹೇಳುತ್ತಾರೆ: ನಾನು ಬದುಕಿನಲ್ಲಿ ಸಿರೀಯಸ್ ಸಿಂಗರ್ ಎನ್ನಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಸಂಗೀತವನ್ನು ಕೂಡ ನಾನು ಬಹಳ ಸಿರೀಯಸ್ ಆಗಿ ಅಧ್ಯಯನ ಕೂಡ ಮಾಡಿಲ್ಲ. ಆದರೆ ಬಾಲ್ಯದಲ್ಲಿ ಹೆತ್ತವರು ನನ್ನ ಪಾಕೆಟ್ ಮನಿಯನ್ನು ಕಟ್ ಮಾಡುತ್ತಿದ್ದಾಗ ಹಾಡುವ ಚಟ ಬೆಳೆಸಿಕೊಂಡೆ. ಇದು ಅನೇಕ ರಸಮಂಜರಿ ಕಾರ‍್ಯಕ್ರಮಗಳಿಂದ ಹಿಡಿದು ದೊಡ್ಡ ದೊಡ್ಡ ಸಮಾರಂಭಗಳ ವರೆಗೂ ಮುಂದುವರಿಯಿತು. ನಂತರ ನನ್ನ ಅಗತ್ಯಗಳಿಗೆ ಹೆತ್ತವರನ್ನು ಬಿಟ್ಟು ಹಾಡುಗಾರಿಕೆಯನ್ನು ಆಯ್ದು ಕೊಂಡು ಮುಂದುವರಿದೆ. ಇದೇ ನನ್ನ ಸಿಂಗರ್ ಹಿಂದಿನ ಕತೆ ಎನ್ನೋದು ಶಿಂಬು ಮಾತು. ನಟ ಶಿಂಬು ಬಳಿಯಲ್ಲಿ ಇರುವ ಅತ್ಯಾಧುನಿಕ ಗ್ಯಾಜೆಟ್‌ಗಳ ಹಿಂದೆ ತಮ್ಮ ಹಾಡುಗಾರಿಕೆಯಿಂದ ಬಂದ ಪಾಕೆಟ್ ಮನಿಯ ಕತೆ ಇದೆ ಎನ್ನೋದು ಶಿಂಬು ಟ್ವಿಟ್ಟರ್‌ನಲ್ಲಿ ಈ ಹಿಂದೆ ಬರೆದುಕೊಂಡಿದ್ದರು. ಈಗ ಇದೇ ಶಿಂಬು ಚಿತ್ರಗಳು ಇಲ್ಲದೇ ಇದ್ದಾಗ ಹಾಡುವ ಕೆಲಸ ಮಾಡುತ್ತಿದ್ದಾರೆ. ಹಿಂದೆ ತಮ್ಮ ಚಿತ್ರಗಳಿಗೆ ಮಾತ್ರ ಹಾಡುವ ಖಯಾಲಿ ಬೆಳೆಸಿಕೊಂಡ ಶಿಂಬು ಈಗ ಇತರ ಚಿತ್ರಗಳಿಗೂ ಹಾಡಲು ರೆಡಿ ಇದ್ದಾರೆ. ಕಾಲಿವುಡ್ ನಟ ಅಜಿತ್ ಚಿತ್ರವೊಂದರಲ್ಲಿ ಶಿಂಬು ಹಾಡುವ ಕುರಿತು ಸುದ್ದಿಯೊಂದು ಹೊರಚಿಮ್ಮಿದೆ. ಇದು ಶಿಂಬು ಬೆಳೆಸಿಕೊಮಡಿರುವ ಸೈಡ್ ಬ್ಯುಸಿನೆಸ್ ಎನ್ನುವುದರಲ್ಲಿ ಯಾವುದೇ ಡೌಟ್ ಇಲ್ಲ ತಾನೇ..? ಶಿಂಬು ಲವ್ ಸಾಂಗ್‌ನಲ್ಲಿ ಏನಿತ್ತು ಅಂತೀರಾ..? ವಿಶ್ವ ಶಾಂತಿ, ಪ್ರೇಮಕ್ಕಾಗಿ ತುಡಿಯುವ ಮನಸ್ಸುಗಳು ಈಗ ಬಹಳ ವಿರಳವಾಗುತ್ತಿದೆ. ಅದರಲ್ಲೂ ಒಬ್ಬರು ಇನ್ನೊಬ್ಬರನ್ನು ಪ್ರೀತಿಯಿಂದ ಕಾಣುವ ಸ್ಥಿತಿ ಇಲ್ಲದೇ ಹೋಗಿದೆ. ಇಂತಹ ಸಮಯದಲ್ಲಿ ವಿಶ್ವವೇ ಶಾಂತಿ, ಪ್ರೇಮವನ್ನು ಬಯಸುವ ಗೀತೆ ಬೇಕಾಗಿದೆ ಎನ್ನೋದು ನನ್ನ ಬಹಳ ದಿನಗಳ ಕನಸ್ಸು ಎಂದು ಶಿಂಬು ಹೇಳಿದ್ದರು. ಕಾಲಿವುಡ್‌ನ ಹಾಡಿನಿಂದ ವಿಶ್ವ ಪ್ರೇಮ ಸಾಧ್ಯನಾ..ಎನ್ನುವ ಪ್ರಶ್ನೆಗೆ ಶಿಂಬು ಕೊಡುವ ಉತ್ತರ ಇಲ್ಲಿದೆ: ಈ ಹಾಡಿನಿಂದ ವಿಶ್ವ ಶಾಂತಿ, ಪ್ರೇಮ ನಿರ್ಮಾಣವಾಗುತ್ತದೆ ಎನ್ನುವ ಪ್ರಶ್ನೆಗೆ ನನ್ನ ಬಳಿ ಸದ್ಯಕ್ಕಂತೂ ಉತ್ತರವಿಲ್ಲ. ಆದರೆ ಇಂತಹ ಪ್ರಯೋಗಗಳು ಮುಂದೆ ಕೂಡ ನಡೆಯಲಿ ಎನ್ನುವ ಸದಾಶಯ ನನ್ನದು. ಹೊಸ ಯೋಚನೆ, ಚಿಂತನೆಗಳು ಯುವಜನರಲ್ಲಿ ಇನ್ನಷ್ಟೂ ಮೂಡಿ ಬರಲಿ ಎನ್ನುವ ಕಾರಣಕ್ಕೆ ಈ ಹಾಡನ್ನು ಸಿದ್ಧಪಡಿಸಿದ್ದೇನೆ ಎನ್ನುವುದು ಶಿಂಬು ಮಾತು. ಈ ಹಾಡಿನ ಸಂಪೂರ್ಣ ಹೊಣೆಗಾರಿಕೆಯನ್ನು ಎಲಾನ್ ಮೋರಿಸನ್ ವಹಿಸಿಕೊಂಡಿದ್ದರು. ಈಗಾಗಲೇ ಎಲಾನ್ ಹೊಸ ಹಾಡುಗಾರರನ್ನು ಹುಡುಕಾಡಿಕೊಂಡು ಸಂಗೀತ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಟೋಟಲಿ ಶಿಂಬು ಲವ್ ಸಾಂಗ್ಸ್ ಅಂತೂ ಯೂಟ್ಯೂಬ್‌ನಲ್ಲಿ ಎರ್ರಾಬಿರ್ರಿ ಹಿಟ್ ಆಗಿದೆ ಎನ್ನೋದು ಶಿಂಬು ಅಭಿಮಾನಿಗಳ ಮಾತು. ..... (lvk published dis story)

No comments:

Post a Comment