
ಇದು ಬರೀಯ ಪ್ರೀತಿಯ ಹಾಡಲ್ಲ. ಇದೊಂದು ವಿಶ್ವ ಶಾಂತಿಯನ್ನು ಬಯಸುವ ಹಾಡು. ಪ್ರೀತಿಸುವ ಹೃದಯಕ್ಕೂ ಈ ಹಾಡಿನಲ್ಲಿ ಮದ್ದು ಇದೆ. ಕಾಲಿವುಡ್ ಸ್ಟಾರ್ ಶಿಂಬು ಈಗಾಗಲೇ ಈ ಹಾಡನ್ನು ಸಾಮಾಜಿಕ ತಾಣಗಳೆಂದು ಫೇಮಸ್ ಆದ ಯೂಟ್ಯೂಬ್ ಹಾಗೂ ಫೇಸ್‌ಬುಕ್‌ಗಳಲ್ಲಿ ಹಾಕಿದ್ದಾರೆ. ಒಂದ್ ಸಾರಿ ಕ್ಲಿಕ್ ಮಾಡಿ ನೋಡಿ...
‘ಕೊಲೆವೆರಿ ಡಿ’ ಹಾಡು ಈಗಲೂ ಸೂಪರ್ ರೋಮಿಂಗ್‌ನಲ್ಲಿದೆ. ಈ ಹಾಡನ್ನು ಕೇಳುವ ಕಿವಿಗಳು ಇನ್ನೂ ತಣಿದಿಲ್ಲ. ಡ್ಯಾನ್ಸ್ ಮಾಡಲು ಅಣಿಯಾಗುವ ಕಾಲುಗಳು ಇನ್ನೂ ನೆಲದ ಮೇಲೆ ನಿಲ್ಲಲು ರೆಡಿ ಇಲ್ಲ. ಆದರೆ ಈಗ ಇಂತಹ ಹಾಡನ್ನು ಸೈಡ್‌ಗೆ ಬಿಟ್ಟು ಮತ್ತೊಂದು ಹಾಡು ರೂಪುಗೊಂಡಿದೆ. ಅದರಲ್ಲೂ ಈ ಹಾಡು ಕಾಲಿವುಡ್‌ನಲ್ಲಿ ತಯಾರಾಗಿರೋದು ಮತ್ತೊಂದು ವಿಷ್ಯಾ. ಆದರೆ ಈ ಹಾಡು ಯುವಜನತೆಯನ್ನು ಮತ್ತೇರಿಸುವುದಿಲ್ಲ. ಬದಲಾಗಿ ಇಡೀ ವಿಶ್ವಕ್ಕೆ ಪ್ರೀತಿಯ ಸಂದೇಶ ಸಾರಲು ಅಣಿಯಾಗಿದೆ.
ಅಂದಹಾಗೆ ಪ್ರೀತಿಸುವ ಹೃದಯಕ್ಕೂ ಈ ಹಾಡಿನಲ್ಲಿ ಮದ್ದು ಇದೆ. ಟೋಟಲಿ ಹಾಡು ಬರೀ ಕಾಲಿವುಡ್‌ಗೆ ಮಾತ್ರ ಸೀಮಿತವಾಗಿಲ್ಲ. ಇಡೀ ವಿಶ್ವದಲ್ಲಿ ಈ ಹಾಡನ್ನು ಓಡಿಸುವ ಯೋಜನೆಯೊಂದು ಕಾಲಿವುಡ್ ಜಗುಲಿಯಲ್ಲಿ ಸಿದ್ಧವಾಗಿರೋದು ಖುಷಿಯ ವಿಷ್ಯಾ. ಕಾಲಿವುಡ್‌ನ ಯಂಗ್ ಸೂಪರ್ ಸ್ಟಾರ್ ಶಿಂಬು ಆಲಿಯಾಸ್ ಟಿ. ಆರ್. ಶಿಲಬರಸನ್ ಈ ಹಾಡಿನ ಹಿಂದಿರುವ ಮ್ಯಾಜಿಕ್ ದಂಡ. ಶಿಂಬು ಈಗಾಗಲೇ ಈ ಹಾಡನ್ನು ಸಾಮಾಜಿಕ ತಾಣಗಳೆಂದು ಫೇಮಸ್ ಆದ ಯೂಟ್ಯೂಬ್ ಹಾಗೂ ಫೇಸ್‌ಬುಕ್‌ಗಳಲ್ಲಿ ಹಾಕಿದ್ದಾರೆ. ಪ್ರೀತಿಯನ್ನು ಹಂಬಲಿಸುವ ಮನಸ್ಸುಗಳು ಈಗಾಗಲೇ ಸಾಕಷ್ಟು ಕ್ಲಿಕ್ ಮಾಡಿಕೊಂಡು ಹೋಗಿದ್ದಾರೆ ಎನ್ನುವುದು ರೆಕಾರ್ಡ್ ಬುಕ್ ಹೇಳುತ್ತಿದೆ.
ಶಿಂಬು ತನ್ನ ಫೇಸ್ ಬುಕ್‌ನಲ್ಲಿ ಹೇಳಿಕೊಂಡಿರುವಂತೆ : ಪ್ರೀತಿಯ ಮಾಧ್ಯಮ ಬಂಧುಗಳಲ್ಲಿ ಕೆಲವೊಂದು ವಿಚಾರವನ್ನು ಹೇಳ ಬಯಸುತ್ತೇನೆ. ಖ್ಯಾತ ಪಾಪ್ ಗಾಯಕಿ ಶಕೀರಾ ‘ಪೋಡಾ- ಪೋಡಿ’ ಎಂದು ಹಾಡು ಹೇಳಿಕೊಂಡು ಕುಣಿದಾಡೋದಿಲ್ಲ. ಅದಕ್ಕಾಗಿ ನಾವೊಂದು ಲವ್ ಆಂಥೆಮ್ ಸಿದ್ಧಪಡಿಸಿದ್ದೇವೆ. ಇದು ಬರೀಯ ಪ್ರೀತಿಯ ಹಾಡಲ್ಲ. ಇದೊಂದು ವಿಶ್ವ ಶಾಂತಿಯನ್ನು ಬಯಸುವ ಹಾಡು. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎನ್ನೋದು ನನ್ನ ಅಭಿಪ್ರಾಯ. ಯುವಜನತೆ ಈ ಹಾಡಿಗೆ ಧ್ವನಿಗೂಡಿಸುತ್ತಾರೆ ಎನ್ನುವುದು ನನ್ನ ನಂಬಿಕೆ. ನಾವು ಭಾರತೀಯರು/ ತಮಿಳರೆಂದು ಹೆಮ್ಮೆಪಡಿ. ಎಲ್ಲರೂ ಬಯಸೋದು ಪ್ಯಾರ್, ಪ್ರೇಮ್, ಕಾದಲ್ ಹಾಗೂ ಎಲ್ಲರ ಸಹಕಾರಕ್ಕೂ ನನ್ನ ಧನ್ಯವಾದಗಳು. ನೀವು ಇಲ್ಲದೇ ನಾನಿಲ್ಲ....
ಹಾಡಿನಲ್ಲಿ ಏನಿದೆ ಅಂತೀರಾ..?
ವಿಶ್ವ ಶಾಂತಿ, ಪ್ರೇಮಕ್ಕಾಗಿ ತುಡಿಯುವ ಮನಸ್ಸುಗಳು ಈಗ ಬಹಳ ವಿರಳವಾಗುತ್ತಿದೆ. ಅದರಲ್ಲೂ ಒಬ್ಬರು ಇನ್ನೊಬ್ಬರನ್ನು ಪ್ರೀತಿಯಿಂದ ಕಾಣುವ ಸ್ಥಿತಿ ಇಲ್ಲದೇ ಹೋಗಿದೆ. ಇಂತಹ ಸಮಯದಲ್ಲಿ ವಿಶ್ವವೇ ಶಾಂತಿ, ಪ್ರೇಮವನ್ನು ಬಯಸುವ ಗೀತೆ ಬೇಕಾಗಿದೆ ಎನ್ನೋದು ನನ್ನ ಬಹಳ ದಿನಗಳ ಕನಸ್ಸು ಎಂದು ಶಿಂಬು ತನ್ನ ಫೇಸ್‌ಬುಕ್‌ನಲ್ಲಿ ಅಭಿಮಾನಿಗಳಿಗೆ ಹೇಳಿಕೊಂಡಿದ್ದಾರೆ.
ಕಾಲಿವುಡ್‌ನ ಹಾಡಿನಿಂದ ವಿಶ್ವ ಪ್ರೇಮ ಸಾಧ್ಯನಾ..ಎನ್ನುವ ಪ್ರಶ್ನೆಗೆ ಶಿಂಬು ಕೊಡುವ ಉತ್ತರ ಇಲ್ಲಿದೆ: ಈ ಹಾಡಿನಿಂದ ವಿಶ್ವ ಶಾಂತಿ, ಪ್ರೇಮ ನಿರ್ಮಾಣವಾಗುತ್ತದೆ ಎನ್ನುವ ಪ್ರಶ್ನೆಗೆ ನನ್ನ ಬಳಿ ಸದ್ಯಕ್ಕಂತೂ ಉತ್ತರವಿಲ್ಲ. ಆದರೆ ಇಂತಹ ಪ್ರಯೋಗಗಳು ಮುಂದೆ ಕೂಡ ನಡೆಯಲಿ ಎನ್ನುವ ಸದಾಶಯ ನನ್ನದು. ಹೊಸ ಯೋಚನೆ, ಚಿಂತನೆಗಳು ಯುವಜನರಲ್ಲಿ ಇನ್ನಷ್ಟೂ ಮೂಡಿ ಬರಲಿ ಎನ್ನುವ ಕಾರಣಕ್ಕೆ ಈ ಹಾಡನ್ನು ಸಿದ್ಧಪಡಿಸಿದ್ದೇನೆ ಎನ್ನುವುದು ಶಿಂಬು ಮಾತು.
ಈ ಹಾಡಿನ ಸಂಪೂರ್ಣ ಹೊಣೆಗಾರಿಕೆಯನ್ನು ಎಲಾನ್ ಮೋರಿಸನ್ ವಹಿಸಿಕೊಂಡಿದ್ದಾರೆ. ಈಗಾಗಲೇ ಎಲಾನ್ ಹೊಸ ಹಾಡುಗಾರರನ್ನು ಹುಡುಕಾಡಿಕೊಂಡು ಸಂಗೀತ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಹಾಡಿಗೆ ದೃಶ್ಯಗಳನ್ನು ಪೋಣಿಸುವ ಕೆಲಸ ಲಾಸ್ ಏಂಜೇಲಿಸ್ ಸ್ಟುಡಿಯೋದಲ್ಲಿ ನಡೆದಿತ್ತು. ಟೋಟಲಿ ಈ ಹಾಡು ಲೋಕಲ್ ಲೆವಲ್‌ನಲ್ಲಿ ಸಿದ್ಧಪಡಿಸಿಕೊಂಡಿದ್ದರೂ ಕೂಡಾ ಇಂಟರ್‌ನ್ಯಾಷನಲ್ ಲೆವಲ್‌ನಲ್ಲಂತೂ ಹೆಸರು ಮಾಡುತ್ತೆ ಎನ್ನುವ ಧೈರ‍್ಯ ಶಿಂಬು ಮನಸ್ಸಿನಲ್ಲಿ ಬಂದು ಕೂತಿದೆ. ಟೋಟಲಿ ಈ ವರ್ಷವಂತೂ ಈ ಹಾಡಿನ ಗುಂಗು ಕಿವಿಯಲ್ಲಿ ಕೇಳಿಸುವುದಂತೂ ಖಾಯಂ ಆಗಿದೆ ಬಿಡಿ.
(vk lvk puravani publised dis article 0n 10.2.2012)
No comments:
Post a Comment