
‘ಡೇವಿಡ್’ ಚಿತ್ರದಲ್ಲಿ ನಾನೊಂದು ನೃತ್ಯಗಾರ್ತಿಯ ಪಾತ್ರ ಮಾಡುತ್ತಿದ್ದೇನೆ. ಈ ಚಿತ್ರ ಕಾಮೆಡಿ ಬೇಸ್ಡ್ ಇರುವುದರಿಂದ ಕತೆಗೆ ತಕ್ಕಂತೆ ಸಾಲ್ಸಾ ನೃತ್ಯದ ಅಗತ್ಯ ಇತ್ತು. ಇದಕ್ಕಾಗಿ ನಾನು ಸಾಲ್ಸಾವನ್ನು ಸಿರೀಯಸ್ ಆಗಿ ಸ್ಟಡಿ ಮಾಡುತ್ತಿದ್ದೇನೆ. ಜತೆಗೆ ಡೇವಿಡ್‌ನ ಒಂದು ಹಾಡಿಗೆ ಧ್ವನಿಗೂಡಿಸಿದ್ದೇನೆ. ಟೋಟಲಿ ಒಳ್ಳೆಯ ಎಕ್ಸ್‌ಪಿರೀಯನ್ಸ್ ಎಂದರು ಬಾಲಿವುಡ್ ನಟಿ ತಬು.
ಕಳೆದ ಒಂದು ವರ್ಷದಿಂದ ಮುಂಬಯಿಯ ಮಾರುಕಟ್ಟೆಯಲ್ಲಿ ತಬು ಎನ್ನುವ ನಾಯಕಿಯ ಹೆಸರು ಓಡುತ್ತಿಲ್ಲ. ನಲವತ್ತು ದಾಟಿದರೂ ಇನ್ನೂ ಕೂಡ ಹದಿನೆಂಟರ ಅಸುಪಾಸು ನನ್ನ ವಯಸ್ಸು ಎಂದು ಕಿವಿ ಮೇಲೆ ಹೂ ಇಡುವ ತಬುವಿಗೆ ಬಾಲಿವುಡ್ ಇಂಡಸ್ಟ್ರಿ ಟೋಟಲಿ ಗೇಟ್ ಪಾಸ್ ಕೊಟ್ಟಿದ್ದೆ ಎನ್ನೋದು ಮುಂಬಯಿ ಪಂಡಿತರ ಮಾತು. ಈ ಒಂದು ವಿಚಾರಕ್ಕಾಗಿ ಮುಂಬಯಿಯಲ್ಲಿದ್ದ ತಮ್ಮ ನಿವಾಸವನ್ನು ಹೈದರಾಬಾದ್‌ಗೆ ಶಿಫ್ಟ್ ಮಾಡಿದ್ದಾರೆ ಎನ್ನುವ ಗುಸುಗುಸು ಮಾತು ಹರಡಿದೆ.
೨೦೧೧ರಲ್ಲಿ ತೆರೆಕಂಡ ‘ಊರ್ಮಿ’ ಚಿತ್ರವೊಂದನ್ನು ಬಿಟ್ಟರೆ ತಬು ಫಿಲ್ಮೋಗ್ರಾಫಿ ೨೦೧೧ರಲ್ಲಿ ಟೋಟಲಿ ಝೀರೋ ಎನ್ನುವುದು ಅವರ ಕೆರಿಯರ್ ಪಾಯಿಂಟ್ ಆಫ್ ವೀವ್‌ನಿಂದ ತಿಳಿದುಬರುತ್ತಿದೆ. ಹೈದರಾಬಾದ್‌ನಲ್ಲಿ ನೆಲೆನಿಂತ ತಬುವನ್ನು ಟಾಲಿವುಡ್ ಸಿನ್ಮಾ ಇಂಡಸ್ಟ್ರಿ ಸಿರೀಯಸ್ ಆಗಿ ತೆಗೆದುಕೊಂಡಿಲ್ಲ . ಅದಕ್ಕಾಗಿ ಪಕ್ಕದ ರಾಜ್ಯದಿಂದ ತಬುವಿಗೆ ಆಫರ್‌ವೊಂದು ಬಂದು ಮುಟ್ಟಿದೆ. ನಿರ್ದೇಶಕ ಬಿಜೋಯಿ ನಂಬಿಯಾರ್ ಅವರ ನಿರ್ದೇಶನದ ತಮಿಳು ಕಮ್ ತೆಲುಗು ಚಿತ್ರ ‘ಡೇವಿಡ್’ನ ಚಿತ್ರೀಕರಣ ಕಡಲತಡಿಯಲ್ಲಿ ಆರಂಭವಾಗಿದೆ.
ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಂ ಡೇವಿಡ್ ಎನ್ನುವ ಡಾನ್ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಡಾನ್‌ಗೆ ನಾಯಕಿಯಾಗಿ ತಬು ಕಾಣಿಸಿಕೊಳ್ಳುತ್ತಿದ್ದಾರೆ. ಕಡಲತಡಿಯಲ್ಲಿ ಚಿತ್ರೀಕರಣದ ವಿರಾಮದ ವೇಳೆ ಆರಾಮವಾಗಿ ಮಾತಿಗೆ ಕೂತ ತಬು ಚಿತ್ರಕ್ಕಾಗಿ ಏನೇನೂ ಮಾಡುತ್ತಿದ್ದಾರೆ ಎನ್ನುವ ಸಿಕ್ರೇಟ್ಸ್‌ಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದರು. ಚೀನಿ ಕಮ್(೨೦೦೭)ಸಿನ್ಮಾದ ನಂತರ ಬಾಲಿವುಡ್‌ನಲ್ಲಿ ನಿರೀಕ್ಷಿತ ಪಾತ್ರ ಹಾಗೂ ಚಿತ್ರಗಳು ಸಿಕ್ಕಿಲ್ಲ. ಆದರೂ ಕೆಲವೊಂದು ಚಿತ್ರಗಳಲ್ಲಿ ನನಗೆ ಖುಷಿ ಕೊಡುವ ಪಾತ್ರಗಳು ಇವೆ ಎಂದುಕೊಂಡು ನಟಿಸಿದೆ. ಆದರೆ ಇಂತಹ ಚಿತ್ರಗಳಿಂದ ನನ್ನ ಮಾರುಕಟ್ಟೆ ಏಕ್‌ದಂ ಆಗಿ ಕುಸಿಯಿತು. ಅದಕ್ಕಾಗಿ ಮುಂಬಯಿ ಬಿಟ್ಟು ಹೈದರಾಬಾದ್ ಗಾಡಿ ಹಿಡಿದೆ ಎಂದು ಹೇಳಿ ತಬು ನಸು ನಕ್ಕರು.
ಬಾಲಿವುಡ್ ಸಹವಾಸ ಬೇಡ ಎಂದುಕೊಂಡು ಸೌತ್ ಸಿನ್ಮಾ ಕಡೆಗೆ ಮುಖ ಮಾಡೋಣ ಅಂದುಕೊಳ್ಳುತ್ತಿದ್ದೆ.. ಇದೇ ಸಮಯಕ್ಕೆ ಗೆಳೆಯ ಬಿಜೋಯಿ ‘ಡೇವಿಡ್’ ಚಿತ್ರಕ್ಕೆ ಆಫರ್ ಕೊಟ್ಟ . ನಾನು ಓಕೆ ಅಂದೆ. ಬಹಳ ದಿನಗಳ ನಂತರ ಒಳ್ಳೆಯ ಪಾತ್ರಕ್ಕಾಗಿ ಕಾದು ಕೂತಿದ್ದೆ. ಜತೆಗೆ ಒಳ್ಳೆಯ ಕೋ- ಆಕ್ಟರ್. ಚಿತ್ರದ ಕತೆ ಕೂಡ ಎಲ್ಲಕ್ಕಿಂತ ಭಿನ್ನವಾಗಿದೆ ಎನ್ನೋದು ನನ್ನ ಅಭಿಪ್ರಾಯ ಎನ್ನೋದು ತಬು ಎನ್ನುವ ಸುಂದರಿಯ ಮಾತು. ‘ಡೇವಿಡ್’ ಚಿತ್ರದಲ್ಲಿ ನಾನೊಂದು ನೃತ್ಯಗಾರ್ತಿಯ ಪಾತ್ರ ಮಾಡುತ್ತಿದ್ದೇನೆ. ಈ ಚಿತ್ರ ಕಾಮೆಡಿ ಬೇಸ್ಡ್ ಇರುವುದರಿಂದ ಕತೆಗೆ ತಕ್ಕಂತೆ ಸಾಲ್ಸಾ ನೃತ್ಯದ ಅಗತ್ಯ ಇತ್ತು. ಇದಕ್ಕಾಗಿ ನಾನು ಸಾಲ್ಸಾವನ್ನು ಸಿರೀಯಸ್ ಆಗಿ ಸ್ಟಡಿ ಮಾಡುತ್ತಿದ್ದೇನೆ. ಜತೆಗೆ ಡೇವಿಡ್‌ನ ಒಂದು ಹಾಡಿಗೆ ಧ್ವನಿಗೂಡಿಸಿದ್ದೇನೆ. ಟೋಟಲಿ ಒಳ್ಳೆಯ ಎಕ್ಸ್‌ಪಿರೀಯನ್ಸ್ ಎಂದರು ತಬು.
ಕಡಲತಡಿಯ ಕುರಿತು ಮಾತನಾಡಿ ಎಂದಾಗ ತಬು ಹೇಳಿದಿಷ್ಟು: ಕರಾವಳಿಗೆ ಬಹಳಷ್ಟು ಸಲ ಬಂದಿದ್ದೇನೆ. ಸಂಗೀತ ನಿರ್ದೇಶಕ ಸಂದೀಪ್ ಚೌಟರ ಒಂದು ಪ್ರಾಜೆಕ್ಟ್‌ಗಾಗಿ ಇಲ್ಲಿಯೇ ತುಂಬಾ ದಿನಗಳವರೆಗೆ ತಂಗಿದ್ದೇನೆ. ಅದು ಬಹಳ ವರ್ಷಗಳ ಹಿಂದೆ. ಈಗ ಕರಾವಳಿ ತುಂಬಾ ಬದಲಾಗಿದೆ. ಹಸಿರು, ಕಾಡು- ನೀರು ಎಲ್ಲವನ್ನು ತುಂಬಾ ಹತ್ತಿರದಿಂದ ನೋಡಬೇಕಾದರೆ ಇಲ್ಲಿಗೆ ಒಂದ್ ಸಲವಾದರೂ ಬರಬೇಕು ಎನ್ನೋದು ನನ್ನ ಸಲಹೆ ಎಂದು ಹೇಳಿ ಮೇಕಪ್‌ಮ್ಯಾನ್ ಕಡೆ ಮುಖ ತಿರುಗಿಸಿಕೊಂಡು ಬಣ್ಣ ಹಚ್ಚಲು ರೆಡಿಯಾದರು ತಬು. ಬಿಜೋಯಿ ಮತ್ತೊಂದು ದೃಶ್ಯದ ಕುರಿತು ತಬುವಿಗೆ ವಿವರಣೆ ನೀಡುತ್ತಿದ್ದರು. ತಬುವನ್ನು ಕಣ್ಣಾರೆ ನೋಡಲು ಬಂದ ಜನ ಅಟೋಗ್ರಾಫ್‌ಗಾಗಿ ಮೂಗಿ ಬೀಳುತ್ತಿದ್ದರು. ತಬು ಮತ್ತೆ ಬಣ್ಣದ ಲೋಕದ ಕಡೆ ಗಮನ ಕೊಡಲು ಆರಂಭ ಮಾಡಿದ್ದಾರೆ ಎನ್ನುವ ಸೂಚನೆ ಈ ಮೂಲಕ ಹೊರಬಂತು.
ಕರಾವಳಿಯ ಫುಡ್ ಟೋಟಲಿ ಭಿನ್ನ !
ತಬುವಿಗೆ ನಾನ್‌ವೆಜ್ ಐಟಂಗಳೆಂದರೆ ಪಂಚಪ್ರಾಣ. ಹೈದರಾಬಾದ್‌ನಲ್ಲಿ ಸಿಗುತ್ತಿದ್ದ ‘ಹೈದರಾಬಾದ್ ಬಿರಿಯಾನಿ’ ತಬು ಅವರ ಮೆನು ಕಾರ್ಡ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಕರಾವಳಿಗೆ ಬಂದರೆ ಹೆಚ್ಚಾಗಿ ತಿನ್ನುವ ಐಟಂಗಳೆಂದರೆ ಸೀ ಫುಡ್, ಕೋರಿ ರೊಟ್ಟಿ, ಕೋರಿ ಪುಲಿ ಮುಂಚಿಯಂತೆ ! ಈ ಮೊದಲು ಕರಾವಳಿಗೆ ಬಂದಾಗ ಸಂದೀಪ್ ಚೌಟ ಈ ಐಟಂಗಳನ್ನು ಟೇಸ್ಟ್ ಮಾಡಲು ಸಲಹೆ ನೀಡಿದ್ದರು. ಈ ಐಟಂಗಳನ್ನು ತಯಾರಿಸುವ ವಿಧಾನಗಳನ್ನು ತುಳುನಾಡಿನಿಂದ ಕಲಿತುಕೊಂಡು ಮುಂಬಯಿಯಲ್ಲೂ ಒಂದೆರಡು ಬಾರಿ ಟ್ರೈ ಮಾಡಿಕೊಂಡಿದ್ದರಂತೆ. ಆದರೆ ಕರಾವಳಿಯ ಟೇಸ್ಟ್‌ನಂತೆ ಫುಡ್ ತಯಾರಿಸಲು ಆಗಿಲ್ಲ ಎಂದು ಮುಗುಳುನಗುತ್ತಾರೆ ತಬು.
ಡ್ರೀಮ್ ರೋಲ್ ಸಿಕ್ಕಿಲ್ಲ !
ತಬು ಚಿತ್ರದ ಚಿತ್ರೀಕರಣ ಇಲ್ಲದ ಸಮಯದಲ್ಲಿ ಆಂಗ್ಲ ಭಾಷೆಯ ಕಾದಂಬರಿಗಳನ್ನು ಜಾಸ್ತಿಯಾಗಿ ಓದುತ್ತಾರೆ. ಕೆಲವೊಂದು ನೈಟ್ ಪಾರ್ಟಿ ಹಾಗೂ ಕಾರ್ಪೊರೇಟ್ ವಲಯದ ಪಾರ್ಟಿಗಳಲ್ಲಿ ಭಾಗವಹಿಸುವುದು ತಬುನ ಖಯಾಲಿಗಳಲ್ಲಿ ಒಂದಾಗಿದೆ. ಚಿತ್ರರಂಗದಲ್ಲಿ ಎಲ್ಲ ಪಾತ್ರಗಳನ್ನು ಮಾಡಿಕೊಂಡು ಬಂದಿರುವ ತಬುವಿಗೆ ಭಿನ್ನ ಪಾತ್ರಗಳ ಮೇಲೆಯೇ ಆಸಕ್ತಿ ಜಾಸ್ತಿ. ತನ್ನ ಡ್ರೀಮ್ ರೋಲ್ ಇನ್ನೂ ಕೂಡ ಸಿಕ್ಕಿಲ್ಲ ಎನ್ನುವ ಕೊರಗು ಕಾಡುತ್ತಿದೆ. ಅದಕ್ಕಾಗಿ ಸಿನ್ಮಾಗಳ ಆಯ್ಕೆಯ ವಿಚಾರದಲ್ಲಿಯೂ ಬಹಳ ಚ್ಯುಸಿಯಾಗುತ್ತೇನೆ ಎಂದು ಬೋಲ್ಡ್ ಆಗಿ ತಬು ಹೇಳಿ ಬಿಡುತ್ತಾರೆ.
(vk lvk published dis article on 20.02.2012)
No comments:
Post a Comment