
ಬರ್ಮಾದಿಂದ ರಫ್ತಾದ ಬಿಳಿ ತೊಗಲಿನ ಹುಡುಗಿ ಹೆಲೆನ್ ಇಲ್ಲ ಎಂದಾದರೆ ಅಂದಿನ ಕಾಲದಲ್ಲಿ ಬಾಲಿವುಡ್ ಸಿನ್ಮಾಗಳೇ ಮಂಕಾಗಿ ಕಾಣುತ್ತಿತ್ತು. ಹೆಲೆನ್‌ರ ಐಟಂ ಸಾಂಗ್ ನೋಡಲು ಥಿಯೇಟರ್‌ಗೆ ಬರುತ್ತಿದ್ದ ಪ್ರೇಕ್ಷಕ ವರ್ಗ ಅವಳ ಡ್ಯಾನ್ಸ್ ಮುಗಿಯುತ್ತಿದ್ದಂತೆ ಅಲ್ಲಿಂದ ಹೊರ ಬೀಳುತ್ತಿದ್ದ ದೃಶ್ಯಗಳೇ ಜಾಸ್ತಿಯಾಗಿರುತ್ತಿತ್ತು. ಇಂತಹ ಹೆಲೆನ್ ಈಗ ವಾಪಾಸು ಬಾಲಿವುಡ್‌ಗೆ ಬರುತ್ತಿದ್ದಾರೆ ಎನ್ನುವ ಸುದ್ದಿ ಬಂದಿದೆ.
ಹೆಲೆನ್ ಎನ್ನುವ ಹೆಸರು ನಾಲಗೆ ಮೇಲೆ ಬಂದು ಬಿಟ್ಟರೆ ಸಾಕು. ಸೀನಿಯರ್ ಸಿಟಿಜನ್ ಬೆಂಚಿನಲ್ಲಿ ಕುಳಿತುಕೊಂಡು ಹಿರಿ ಜೀವಗಳು ನಾಲಗೆ ಹೊರಚಾಚಲು ಆರಂಭ ಮಾಡುತ್ತಾರೆ. ನಶೆಯ ಅದೇವತೆ ಹೆಲೆನ್ ಮೇಡಂರ ಐಟಂ ಸಾಂಗ್ ಎಂದರೆ ನೀರು ಸೇರಿಸದೇ ಬರೀ ವೋಡ್ಕಾ ತೆಗೆದುಕೊಂಡು ಕಕ್ಕಾಬಿಕ್ಕಿಯಾಗುವ ಸ್ಥಿತಿ ಇಂದಿಗೂ ಇದೆ.
ಬರ್ಮಾದಿಂದ ರಫ್ತಾದ ಬಿಳಿ ತೊಗಲಿನ ಹುಡುಗಿ ಹೆಲೆನ್ ಇಲ್ಲ ಎಂದಾದರೆ ಅಂದಿನ ಕಾಲದಲ್ಲಿ ಬಾಲಿವುಡ್ ಸಿನ್ಮಾಗಳೇ ಮಂಕಾಗಿ ಕಾಣುತ್ತಿತ್ತು. ಹೆಲೆನ್‌ರ ಐಟಂ ಸಾಂಗ್ ನೋಡಲು ಥಿಯೇಟರ್‌ಗೆ ಬರುತ್ತಿದ್ದ ಪ್ರೇಕ್ಷಕ ವರ್ಗ ಅವಳ ಡ್ಯಾನ್ಸ್ ಮುಗಿಯುತ್ತಿದ್ದಂತೆ ಅಲ್ಲಿಂದ ಹೊರ ಬೀಳುತ್ತಿದ್ದ ದೃಶ್ಯಗಳೇ ಜಾಸ್ತಿಯಾಗಿರುತ್ತಿತ್ತು. ಇಂತಹ ಹೆಲೆನ್ ಈಗ ವಾಪಾಸು ಬಾಲಿವುಡ್‌ಗೆ ಬರುತ್ತಿದ್ದಾರೆ ಎನ್ನುವ ಸುದ್ದಿ ಬಂದಿದೆ.
ಪಿಯಾ ತೂ ಅಬ್ ತೋ ಅಜಾ.... ಎಂದು ಸಿಕ್ಕಾಪಟ್ಟೆ ಕುಣಿದು ಪ್ರೇಕ್ಷಕ ವರ್ಗದಲ್ಲಿ ಮಿಂಚು ಹರಿಸಿದ ಹೆಲೆನ್ ಈಗ ಏಜ್ ಬಾರ್ ಗಡಿರೇಖೆ ದಾಟಿದರೂ ಕೂಡ ನಟ ಮಾಧವನ್ ಹಾಗೂ ಬಿಪಾಷ ಬಸು ನಟಿಸುವ ನಿರ್ದೇಶಕ ಅಶ್ವಿನ್ ಚೌಧುರಿ ಅವರ ‘ಜೋಡಿ ಬ್ರೇಕರ್’ ಚಿತ್ರದಲ್ಲಿ ಬಣ್ಣ ಬಳಿದು ಕುಣಿದಿದ್ದಾರೆ ಎನ್ನುವ ಮಾತು ಚಿತ್ರತಂಡದಿಂದ ಹೊರಬಂದಿದೆ. ಚಿತ್ರದಲ್ಲಿ ಮಿಲಾನ್ ಸೋಮನ್ ಅವರ ಅಜ್ಜಿ ಪಾತ್ರದಲ್ಲಿ ಹೆಲೆನ್ ಬಂದು ಹೋಗುವ ಸನ್ನಿವೇಶವನ್ನು ನಿರ್ದೇಶಕ ಅಶ್ವಿನ್ ಸೃಷ್ಟಿಸಿದ್ದಾರೆ.
ಅಜ್ಜಿ ಬರೀ ಮೊಮ್ಮಗನ ಕಷ್ಟ ಸುಖದಲ್ಲಿ ಭಾಗಿಯಾಗುವ ಜತೆಯಲ್ಲಿ ಮೊಮ್ಮಗನ ಜತೆ ಸ್ಟೆಪ್ಸ್ ಹಾಕುವ ಕೆಲಸವನ್ನು ಕೂಡ ಮಾಡುತ್ತಾರೆ ಎನ್ನುವ ಸತ್ಯಾಂಶವನ್ನು ಹೆಲೆನ್ ಚಿತ್ರದಲ್ಲಿ ಬಿಚ್ಚಿಟ್ಟಿದ್ದಾರೆ ಎನ್ನುವುದು ನಿರ್ದೇಶಕ ಅಶ್ವಿನ್ ಅವರ ಮಾತು. ‘ಮೊಹಬ್ಬತೇ’ ಚಿತ್ರದ ನಂತರ ಹೆಲೆನ್ ಬಾಲಿವುಡ್ ಸಿನ್ಮಾ ನಗರಿ ಬಿಟ್ಟು ಹೋಗಿದ್ದರು. ಆದರೆ ಈ ಬಾರಿ ಅಶ್ವಿನ್‌ರ ಒತ್ತಾಯದ ಮೇರೆಗೆ ನಟಿಸಬೇಕಾಗಿ ಬಂತು ಎಂದು ಹೆಲೆನ್ ಹೇಳಿಕೊಳ್ಳುತ್ತಾರೆ.
ಅಂದಹಾಗೆ ಈ ಚಿತ್ರದಲ್ಲಿ ಹೆಲೆನ್ ಡ್ಯಾನ್ಸ್ ಟೀಚರ್‌ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೆಲೆನ್ ಹೇಳುವಂತೆ ‘ ಈಗಂತೂ ಡ್ಯಾನ್ಸ್‌ಬಿಟ್ಟು ಬಹಳ ವರ್ಷಗಳೇ ಆಯಿತು. ‘ಮೊಹಬ್ಬತೇ’ ಸಿನ್ಮಾದಲ್ಲಿ ಕುಣಿದದ್ದು ಬಿಟ್ಟರೆ ಮತ್ತೆ ಕುಣಿಯುವ ಕೆಲಸಕ್ಕೆ ಇಳಿದಿರಲಿಲ್ಲ. ಆದರೆ ಚಿತ್ರದಲ್ಲಿ ಮಾಧುವನ್, ಬಿಪಾಷ, ಮಿಲನ್ ಎಲ್ಲರೂ ಸೇರಿ ನನಗೆ ಕುಣಿಯಲು ಕಳಿಸಿದರು. ಈ ಮೂಲಕ ಮತ್ತೆ ನಾನು ಕುಣಿಯಲು ರೆಡಿಯಾದೆ ಎಂದು ಹೇಳಿಕೊಂಡಿದ್ದಾರೆ.
ಯೋಗವನ್ನು ಸಿರೀಯಸ್ ಆಗಿ ಮಾಡುತ್ತಿರುವುದರಿಂದ ಏಜ್ ಬಾರ್‌ನಲ್ಲೂ ಯಂಗ್‌ಜೋಶ್ ಬಂದು ಬಿಡುತ್ತದೆ ಎನ್ನೋದು ಹೆಲೆನ್‌ರ ಮಾತು. ಕೆಲವೊಮ್ಮೆ ಟೈಂ ಸಿಕ್ಕಾಗ ದೂರಕ್ಕೆ ವಾಕ್ ಹೋಗುವುದು. ದೂರ ದೂರದ ಗೆಳೆಯರ ಜತೆಯಲ್ಲಿ ಮಾತಿಗೆ ಇಳಿಯುವುದು. ಆಂಗ್ಲ ಭಾಷೆಯ ಪುಸ್ತಕಗಳನ್ನು ಓದುವುದು ಹೆಲೆನ್‌ನ ಫ್ರಿ ಟೈಂ ಖಯಾಲಿಗಳು.
ಬೆಂಕಿಯಲ್ಲಿ ಬೆಂದ ಹುಡುಗಿ
ಹೆಲೆನ್ ಮೂಲತಃ ಬರ್ಮಾ ದೇಶದವರು. ತಂದೆ ಆಂಗ್ಲೋ- ಇಂಡಿಯನ್ ತಾಯಿ ಬರ್ಮಾ ಮೂಲದವರು. ಎರಡನೇ ಮಹಾಯುದ್ಧದ ಸಮಯದಲ್ಲಿ ತಂದೆ ತೀರಿಕೊಂಡಿದ್ದರು. ನಂತರ ಹೆಲೆನ್‌ರ ಕುಟುಂಬ ಮುಂಬಯಿ ಕಡೆ ಪ್ರಯಾಣ ಬೆಳೆಸಿತು. ತಾಯಿ ಮುಂಬಯಿಯಲ್ಲಿ ದಾದಿಯಾಗಿ ಕೆಲಸದಲ್ಲಿದ್ದರು. ತಾಯಿಯ ಸಂಬಳ ಮನೆಯ ಖರ್ಚಿಗೆ ಸಾಲುತ್ತಿರಲಿಲ್ಲ. ಶಾಲೆಯಲ್ಲಿ ಬಹಳ ಚೂಟಿಯಾಗಿದ್ದ ಹೆಲೆನ್ ಪುಟ್ಟ ಹರೆಯದಲ್ಲಿ ಶಾಲೆ ಬಿಟ್ಟು ಕುಟುಂಬ ನಿರ್ವಹಣೆಗೆ ನಿಂತುಬಿಟ್ಟರು. ಸಿಕ್ಕ ಸಿಕ್ಕಲ್ಲಿ ಕೆಲಸ ಮಾಡುತ್ತಾ ಸಂಜೆ ಹೊತ್ತು ನೃತ್ಯ ಶಾಲೆಯಲ್ಲಿ ಕುಣಿಯುತ್ತಿದ್ದ ಹೆಲೆನ್ ನಂತರ ಐಟಂ ಹುಡುಗಿಯರ ಜಾಗದಲ್ಲಿ ಬಂದು ನಿಂತರು.
ಹೆಲೆನ್ ಸಲ್ಲುಮಿಯರ ಮಲತಾಯಿ !
ಬಾಲಿವುಡ್ ನಿರ್ದೇಶಕ ಪಿಎನ್ ಅರೋರಾ ಅವರ ಹೆಲೆನ್ ಮೊದಲು ಜತೆಯಾಗಿ ಬದುಕು ಕಟ್ಟುತ್ತಿದ್ದರು. ಆದರೆ ನಂತರ ನಟ ಸಲ್ಮಾನ್ ಖಾನ್ ಅವರ ತಂದೆ ಖ್ಯಾತ ಸಿನಿಮಾ ಬರಹಗಾರ ಸಲೀಮ್ ಖಾನ್ ಜತೆ ಹೆಲೆನ್ ವಿವಾಹ ಬಂಧನದಲ್ಲಿ ಜತೆಗೂಡಿದರು. ಸಲೀಮ್‌ರಿಗೆ ಇದು ಎರಡನೇ ವಿವಾಹವಾಗಿತ್ತು. ಸಲೀಮ್ ಖಾನ್ ಹಾಗೂ ಹೆಲೆನ್ ದಂಪತಿ ಅರ್ಪಿತಾ ಎನ್ನುವ ಹುಡುಗಿಯನ್ನು ದತ್ತು ತೆಗೆದುಕೊಂಡರು. ಸಲೀಮ್ ಖಾನ್‌ರ ಒತ್ತಾಯದ ಮೇರೆಗೆ ವಿವಾಹವಾದ ನಂತರನೂ ಹೆಲೆನ್ ಬಣ್ಣದ ಲೋಕದಲ್ಲಿ ಮಿಂಚಿದ್ದರು. ಇದರ ಜತೆಗೆ ಸಲ್ಮಾನ್ ಖಾನ್‌ರ ಐದಾರು ಚಿತ್ರಗಳಲ್ಲಿ ಮಲತಾಯಿ ಹೆಲೆನ್ ನಟಿಸಿದ್ದಾರೆ.
(vk lvk puravani published dis article on 24.02.2012)
No comments:
Post a Comment