
ಹಾಲಿವುಡ್ ದುನಿಯಾದಲ್ಲಿ ನಾಲ್ಕೈದು ದಿನಗಳಿಗೆ ನಟ-ನಟಿಯರ ಅದಲು-ಬದಲು, ಬ್ರೇಕ್ ಆಫ್, ಲಿಂಕ್ ಆಫ್‌ಗಳ ಸುದ್ದಿಯಲ್ಲಿದ್ದವರಿಗೂ ಹೊಟ್ಟೆಕಿಚ್ಚು ತರುವಂತೆ ನಡೆದುಕೊಂಡವರು ಈಗ ಬೇರೆಯಾಗಲು ನಿರ್ಧಾರ ಮಾಡಿದ್ದಾರೆ. ಈ ವಿಷ್ಯಾ ಕೇಳಿದ ಕೂಡಲೇ ಅವರನ್ನು ಮಾದರಿಯಾಗಿ ಇಟ್ಟುಕೊಂಡವರ ಹೃದಯ ನೊಂದು ಬಿಡುತ್ತದೆ. ಮನಸ್ಸು ಭಾರವಾಗಿ ಬಿಡುತ್ತದೆ.
ಒಂದಲ್ಲ ಎರಡಲ್ಲ ಬರೋಬರಿ ಏಳು ವರ್ಷ. ತುಂಬಾನೇ ಸುಂದರವಾಗಿ ಬದುಕು ಕಟ್ಟಿಕೊಂಡವರು. ನನಗೆ ನೀನು ನಿನಗೆ ನಾನು ಜತೆಗೆ ಮೂವರು ಮಕ್ಕಳು ಎನ್ನುವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡವರು. ಹಾಲಿವುಡ್ ದುನಿಯಾದಲ್ಲಿ ನಾಲ್ಕೈದು ದಿನಗಳಿಗೆ ನಟ-ನಟಿಯರು ಅದಲು-ಬದಲು, ಬ್ರೇಕ್ ಆಫ್, ಲಿಂಕ್ ಆಫ್‌ಗಳ ಸುದ್ದಿಯಲ್ಲಿದ್ದವರಿಗೂ ಹೊಟ್ಟೆಕಿಚ್ಚು ತರುವಂತೆ ನಡೆದುಕೊಂಡವರು ಈಗ ಬೇರೆಯಾಗಲು ನಿರ್ಧಾರ ಮಾಡಿದ್ದಾರೆ. ಈ ವಿಷ್ಯಾ ಕೇಳಿದ ಕೂಡಲೇ ಅವರನ್ನು ಮಾದರಿಯಾಗಿ ಇಟ್ಟುಕೊಂಡವರ ಹೃದಯ ನೊಂದು ಬಿಡುತ್ತದೆ. ಮನಸ್ಸು ಭಾರವಾಗಿ ಬಿಡುತ್ತದೆ.
ಇದು ಅಮೆರಿಕದ ಸೂಪರ್ ಮೊಡೆಲ್ ಹೈಡಿ ಕ್ಲುಮ್ ಹಾಗೂ ಅಮೆರಿಕದ ಸೋಲೋ ಗಾಯಕ ಎಂದೇ ಖ್ಯಾತಿ ಉತ್ತುಂಗದಲ್ಲಿರುವ ಸೀಲ್ ದಂಪತಿಗಳ ಬ್ರೇಕ್ ಆಫ್ ಕತೆ. ಇಬ್ಬರು ಸೆಲೆಬ್ರಿಟಿಯ ಕಾಲಂಗಳಲ್ಲಿ ಮಿಂಚುತ್ತಿದ್ದವರು ಯಾಕೋ ಗೊತ್ತಿಲ್ಲ.... ನೀನು ಬೇರೆ ಇದ್ದುಬಿಡು ನಾನು ಬೇರೆಯಾಗಿ ಬದುಕುತ್ತೇನೆ ಎನ್ನುವ ಏಕಾಂಗಿತನದ ಮಾತುಗಳನ್ನು ಜತೆಯಲ್ಲಿಯೇ ಕೋರಸ್ ಹಾಡುತ್ತಿದ್ದಾರೆ. ಆದರೆ ಈ ಇಬ್ಬರು ಬೇರೆಯಾಗುವ ನಿರ್ಧಾರದಿಂದ ಬಡಪಾಯಿ ಮೂರು ಮಕ್ಕಳಿಗೆ ಹೆತ್ತವರು ಇದ್ದರೂ ಇಲ್ಲದಂತೆ ಬದುಕುವ ಸ್ಥಿತಿ.
‘ನಾವಿಬ್ಬರೂ ಏಳು ವರ್ಷಗಳ ಕಾಲ ಜತೆಯಾಗಿ ಬದುಕು ಕಟ್ಟಿದ್ದೇವೆ. ಪ್ರೀತಿ, ಪ್ರಾಮಾಣಿಕತೆ ಎಲ್ಲವೂ ನಮ್ಮ ವೈವಾಹಿಕ ಸಂಬಂಧದಲ್ಲಿ ಜತೆಯಲ್ಲಿತ್ತು. ಆದರೆ ವೈವಾಹಿಕ ಬದುಕು ಸಾಕು ಎನ್ನಿಸುತ್ತಿದೆ. ಯಾವುದೇ ರಸ ಇಲ್ಲದ ಸಂಸಾರದೊಂದಿಗೆ ನಾವಿಬ್ಬರೂ ಬದುಕುವುದು ಇನ್ನೂ ಸುಲಭವಿಲ್ಲ ಎನ್ನುವ ನಿರ್ಧಾರಕ್ಕೆ ಬಂದು ಮುಟ್ಟಿದ್ದೇವೆ. ಅದಕ್ಕಾಗಿ ನಾವಿಬ್ಬರೂ ಬೇರೆ ಬೇರೆಯಾಗಿ ಇರಲು ನಿರ್ಧಾರ ಮಾಡಿದ್ದೇವೆ. ನಮ್ಮ ಏಳು ವರ್ಷಗಳ ಸಂಬಂಧದ ಕುರಿತು ನನಗೆ ಅಪಾರ ಗೌರವವಿದೆ. ಇನ್ನೂ ಮುಂದೆನೂ ಇಬ್ಬರ ನಡುವೆ ಅದೇ ರೀತಿಯ ಗೌರವ, ಪ್ರೀತಿಯ ಭಾವನೆ ಇದ್ದೇ ಇದೆ. ಆದರೆ ಜತೆಯಾಗಿ ಮಾತ್ರ ಬದುಕುವುದು ಸಾಧ್ಯವಿಲ್ಲ ಎಂದು ಸೂಪರ್ ಮೊಡೆಲ್ ಹೈಡಿ ಕ್ಲುಮ್ ಮಾಧ್ಯಮಗಳಲ್ಲಿ ಬಾಯಿ ಬಿಟ್ಟಿದ್ದಾರೆ.
ಅಂದಹಾಗೆ ವಿಕ್ಟೋರಿಯಾ ಸಿಕ್ರೇಟ್ ಫೇಮ್ ಹೈಡಿಗೆ ಈ ಮೊದಲೇ ಮದುವೆಯಾಗಿತ್ತು. ಮೊದಲ ಮದುವೆಯಲ್ಲಿ ಒಂದು ಹೆಣ್ಣು ಮಗು ಕೂಡ ಇದೆ. ನಂತರ ಹೈಡಿ ಸೋಲ್ ಸಿಂಗರ್ ಸೀಲ್ ಜತೆಯಲ್ಲಿ ೨೦೦೫ರಲ್ಲಿ ಮೆಕ್ಸಿಕೋದಲ್ಲಿ ಮದುವೆಯಾಯಿತು. ಕೆಲವು ತಿಂಗಳ ನಂತರ ಇಬ್ಬರೂ ಭಾರತಕ್ಕೆ ಪ್ರವಾಸ ಬಂದಿದ್ದಾಗ ಇಲ್ಲಿಯೇ ಶಾಸ್ತ್ರ ಬದ್ಧವಾಗಿ ಮದುವೆ ಕೂಡ ಆಗಿದ್ದರು. ಆದರೆ ಹಾಲಿವುಡ್‌ನಲ್ಲಿ ದಂಪತಿಗಳು ಬೇರೆಯಾಗುವುದು ತೀರಾ ಕಾಮನ್. ಆದರೆ ಮದುವೆಯ ಲಾಂಗ್ ಜರ್ನಿಯಲ್ಲಿದ್ದ ದಂಪತಿಗಳಿಬ್ಬರು ಬೇರೆಯಾಗುತ್ತಿರುವುದು ಮಾತ್ರ ತುಂಬಾ ಬೇಸರದ ವಿಷ್ಯಾ .
ಹೈಡಿಯ ರಂಗೀನ್ ಬದುಕು:
ಸೂಪರ್ ಮೊಡೆಲ್ ಹೈಡಿ ನಿಜಕ್ಕೂ ರಂಗೀನ್ ದುನಿಯಾ ಕಂಡ ಹುಡುಗಿ. ಹೈಡಿಯ ಮೊದಲ ಮದುವೆ ಸ್ಟೈಲಿಷ್ಟ್ ರಿಚಿ ಪಿಪಿನೋ ಜತೆಯಲ್ಲಿ ನಡೆದಿತ್ತು. ಅದು ಬಹಳ ಕಾಲ ಬಾಳ್ವಿಕೆ ಬಂದಿರಲಿಲ್ಲ. ಇದೇ ಹೊತ್ತಲ್ಲಿ ಫಾರ್ಮೂಲಾ ವನ್ ಟೀಮ್‌ವೊಂದನ್ನು ಇಟ್ಟುಕೊಂಡು ಉದ್ಯಮಿಯಾಗಿದ್ದ ಫ್ಲೆವಿಯೋ ಜತೆಯಲ್ಲೂ ಲಿಂಕ್ ಆಫ್ ಕಾಣಿಸಿಕೊಂಡು ಹೈಡಿ ಗರ್ಭಿಣೆಯಾಗಿದ್ದಳು. ಇದೇ ಹೊತ್ತಲ್ಲಿ ಅಮೆರಿಕದ ಸೋಲ್ ಸಿಂಗರ್ ಸೀಲ್ ಕೂಡ ಹೈಡಿಯ ಮೋಹಕ್ಕೆ ಸಿಕ್ಕಿಕೊಂಡು ಏಳು ವರ್ಷಗಳ ಕಾಲ ಸಂಸಾರದ ರಥವನ್ನು ಓಡಿಸಿದ. ಈಗ ಹೈಡಿ ಬೇರೆಯೊಬ್ಬನ ತೆಕ್ಕೆಯನ್ನು ಬಯಸುತ್ತಿದ್ದಾಳೆ ಎನ್ನೋದು ಅಮೆರಿಕದ ಪಾಪರಾಜಿಗಳ ಮಾಹಿತಿ.
ಆದರೆ ಕಲೆ, ಫ್ಯಾಶನ್, ಸಮಾಜ ಸೇವೆಯಂತಹ ನಾನಾ ಚಟುವಟಿಕೆಗಳಲ್ಲಿ ಬ್ಯುಸಿ ಇರುವ ಹೈಡಿ ನಿಜಕ್ಕೂ ಸೀಲ್‌ನನ್ನು ಅರ್ಧದಲ್ಲಿಯೇ ಬಿಟ್ಟು ಹೋಗುತ್ತಿರುವುದು ಯಾಕೆ ಎನ್ನುವ ರಹಸ್ಯವಾದ ವಿಚಾರವನ್ನು ಎಲ್ಲೂ ಹೇಳಿಕೊಂಡಿಲ್ಲ. ಆದರೆ ಹೈಡಿ ಹೇಳುತ್ತಿರುವುದು ಒಂದೇ ವಿಷ್ಯಾ ಮಾರಾಯ್ರೆ. ನನಗೆ ಈಗ ಸಾಂಗಾತಿ ಜೀವನ ಸಾಕಾಗಿ ಹೋಗಿದೆ. ಬದುಕಿನಲ್ಲಿ ಹೊಸತನದ ಹುಡುಕಾಟ ಮಾಡುತ್ತಿದ್ದೇನೆ. ಅಂದಹಾಗೆ ಇದು ಹೊಸ ಸಾಂಗಾತಿಯ ಹುಡುಕಾಟ ಸೂಚನೆ ಅಲ್ಲ ತಾನೇ..? ಎನ್ನುವ ಕುತೂಹಲ ಅವರ ಮಾಜಿ ಪತಿ ಸೀಲ್‌ಗೆ ಬರದೇ ಹೋದರೂ, ಅವರ ಅಭಿಮಾನಿಗಳ ಮೂಗಿಗಂತೂ ಬಡಿದಿರುವುದು ದಿಟ ಅಲ್ವಾ..?
No comments:
Post a Comment