
‘ಬಿ’ ಟೌನ್‌ನಲ್ಲಿ ಚಿಂಗಾರಿ ಹೊತ್ತಿಸಿದ ಬೇಬ್ಸ್‌ಗಳು ಇನ್ನೂ ಮುಂದೆ ‘ಬಿ ’ಟೌನ್‌ನ ಪಾವ್ ಬಾಜಿ ಬಿಟ್ಟು ತಿರುನಲ್‌ವೇಲ್ ಹಲ್ವಾ ತಿನ್ನುವ ಬಯಕೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ನಲ್ಲಿ ಕುಣಿದು ಕುಪ್ಪಳಿಸಿದ ನಾಯಕಿಯರು ಇನ್ನೂ ಕಾಲಿವುಡ್‌ನಲ್ಲಿ ಮಸಾಲೆ ಹರಿಯುವ ಸಾಧ್ಯತೆಗಳು ದಟ್ಟವಾಗಿದೆ.
ಕಾಲಿವುಡ್ ಸಿನ್ಮಾ ಇಂಡಸ್ಟ್ರಿ ಈಗ ಮುಂಚಿನಂತೆ ಇಲ್ಲ. ಬಾಲಿವುಡ್‌ನ ನೆತ್ತಿ ಮೇಲೆ ನಿಂತು ಕರಡಿಯಂತೆ ಕುಣಿಯಲು ಎಲ್ಲ ರೀತಿಯಿಂದಲೂ ಕಾಲಿವುಡ್ ಸಜ್ಜಾಗಿದೆ. ಒಂದು ಲೆಕ್ಕಚಾರದ ಪ್ರಕಾರ ಬಾಲಿವುಡ್ ಸಿನ್ಮಾ ನಗರಿಗೆ ಮೀಸೆ ತಿರುವಿಕೊಂಡು ಸವಾಲು ಹಾಕಿಬಿಡುವ ಛಾತಿ ಇರೋದು ಬರೀ ಕಾಲಿವುಡ್‌ಗೆ ಮಾತ್ರ ಎನ್ನುವ ವಿಷ್ಯಾವೇನೂ ಗುಪ್ತವಾಗಿ ಉಳಿದಿಲ್ಲ. ಇತ್ತೀಚಿನ ಕೆಲವು ವರ್ಷಗಳಿಂದ ತಮಿಳಿನ ಮೋಸ್ಟ್ ಸಕ್ಸಸ್ ರೇಟೆಡ್ ಸಿನ್ಮಾಗಳನ್ನು ತಂದು ಬಾಲಿವುಡ್‌ನಲ್ಲಿ ರಿಮೇಕ್ ಮಾಡುತ್ತಿರುವ ಪರಂಪರೆ ಹುಟ್ಟಿದೆ. ಇದರ ಅರ್ಥ ತಮಿಳಿನ ಚಿತ್ರಗಳು ಎಲ್ಲ ರೀತಿಯಿಂದಲೂ ಬಾಲಿವುಡ್ ಮಂದಿಯನ್ನು ಮೀರಿಸುವಂತಿದೆ ಎಂದಾಯಿತು.
ಈಗ ಮಾತಿನ ಅಂಗಣದೊಳಗೆ ಬನ್ನಿ. ‘ಬಿ’ ಟೌನ್‌ನಲ್ಲಿ ಚಿಂಗಾರಿ ಹೊತ್ತಿಸಿದ ಬೇಬ್ಸ್‌ಗಳು ಇನ್ನೂ ಮುಂದೆ ‘ಬಿ ’ಟೌನ್‌ನ ಪಾವ್ ಬಾಜಿ ಬಿಟ್ಟು ತಿರುನಲ್‌ವೇಲ್ ಹಲ್ವಾ ತಿನ್ನುವ ಬಯಕೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ನಲ್ಲಿ ಕುಣಿದು ಕುಪ್ಪಳಿಸಿದ ನಾಯಕಿಯರು ಇನ್ನೂ ಕಾಲಿವುಡ್‌ನಲ್ಲಿ ಮಸಾಲೆ ಹರಿಯುವ ಸಾಧ್ಯತೆಗಳು ದಟ್ಟವಾಗಿದೆ ಎನ್ನುವ ಮಾತು ಕಾಲಿವುಡ್ ಸಿನ್ಮಾ ಗಲ್ಲಿಯ ಮೂಲೆಯಿಂದ ರವಾನೆಯಾಗಿದೆ.
ಬಾಲಿವುಡ್ ನಟಿ ಪಿಂಕಿ ಆಲಿಯಾಸ್ ಪ್ರಿಯಾಂಕಾ ಚೋಪ್ರಾ(ಪಿಸಿ)ಯನ್ನು ಕಾಲಿವುಡ್ ನಿರ್ದೇಶಕ ಎ.ಆರ್. ಮುರುಗದಾಸ್ ತನ್ನ ಮುಂದಿನ ಚಿತ್ರ ‘ತೂಫಾಕಿ’ಗಾಗಿ ಪ್ರಯತ್ನ ಪಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಗಲ್ಲಿಗೆ ಬಂದಿದೆ. ಈ ಚಿತ್ರದಲ್ಲಿ ಇಳಯದಳಪತಿ ವಿಜಯ್ ನಟಿಸುತ್ತಿರುವುದರಿಂದ ಚಿತ್ರದ ಕುರಿತು ನಿರೀಕ್ಷೆಗಳು ಈಗಾಗಲೇ ಕಾಲಿವುಡ್‌ನಲ್ಲಿ ಬೆಳೆದುಬಿಟ್ಟಿದೆ. ಈಗಾಗಲೇ ಮುರುಗದಾಸ್‌ರನ್ನು ಸೆಟ್‌ನಲ್ಲಿ ಪಿಂಕಿ ಭೇಟಿಯಾಗಿ ಒಂದು ಸುತ್ತಿನ ಮಾತುಕತೆ ಕೂಡ ಮುಗಿಸಿದ್ದಾರೆ ಎನ್ನುವ ಸುದ್ದಿಗಳು ಗರಿಬಿಚ್ಚಿಕೊಂಡಿದೆ. ಒಂದು ಮೂಲದ ಪ್ರಕಾರ ಮುರುಗದಾಸ್ ಪಿಂಕಿಯನ್ನು ಬಿಟ್ಟು ಕಾಜಲ್ ಅಗರ್‌ವಾಲ್‌ರನ್ನು ಆಯ್ಕೆ ಮಾಡುವ ಸೂಚನೆ ಕೂಡ ಬಂದಿದೆ. ಆದರೆ ಫೈನಲ್ ನಾಯಕಿ ಯಾರು ಎನ್ನುವ ವಿಚಾರಕ್ಕೆ ಉತ್ತರವಂತೂ ಸಿಕ್ಕಿಲ್ಲ.
ಇದರ ಜತೆಯಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಮ್ ಕಪೂರ್( ಸನಿ)ಕೂಡ ಕಾಲಿವುಡ್‌ನಲ್ಲಿ ಎಂಟ್ರಿಯಾಗುವ ಸೂಚನೆ ಬಂದಿದೆ. ನಿರ್ದೇಶಕ ಎ.ಆರ್. ಮುರುಗದಾಸ್ ನಿರ್ದೇಶನದ ‘ತೂಫಾಕಿ’ ಚಿತ್ರದ ಸೆಕೆಂಡ್ ಹೀರೋಯಿನ್ ಪಟ್ಟಕ್ಕೆ ಸೋನಮ್‌ಗೆ ಆಫರ್ ನೀಡಲಾಗಿದೆ. ಅದರ ಜತೆಯಲ್ಲಿ ಕಮಲ್ ಹಾಸನ್ ನಟಿಸುವ ‘ವಿಶ್ವರೂಪಂ’, ಖ್ಯಾತ ನಿರ್ದೇಶಕ ಮಣಿರತ್ನಂರ ‘ಕಾದಲ್’, ಕಾಲಿವುಡ್ ನಿರ್ದೇಶಕ ವೆಂಕಟ್ ಪ್ರಭು ಅವರ ನಿರ್ದೇಶನದ ಚಿತ್ರವೊಂದರಲ್ಲಿ ಸೋನಮ್ ನಟಿಸುವುದು ಖಾತರಿಯಾಗಿದೆ. ವಿಶೇಷ ಏನಪ್ಪಾ ಅಂದರೆ ತನಗೆ ತಮಿಳು ಚಿತ್ರದಲ್ಲಿ ಪಾತ್ರಕೊಡಿ ಎಂದು ಎಲ್ಲಿಯೂ ಕೂಡ ಸೋನಮ್ ಕೇಳಿಕೊಂಡಿಲ್ಲ ಎನ್ನುವ ಮಾತನ್ನು ಸ್ವತಃ ಕಾಲಿವುಡ್ ನಿರ್ದೇಶಕರೇ ಹೇಳುತ್ತಿದ್ದಾರೆ.
ಸೋನಿ ಕುಡಿಯ ಬಾಲಿವುಡ್‌ನಲ್ಲಿ ಮಾಡಿದ ಪಾತ್ರಗಳು ಕಾಲಿವುಡ್ ನಿರ್ದೇಶಕರ ಮನಸ್ಸು ಕಚ್ಚಿ ಹಿಡಿದಿದೆ ಎನ್ನುವ ಕಾರಣಕ್ಕೆ ಸೋನಮ್‌ಗೆ ಪಾತ್ರ ನೀಡಲಾಗುತ್ತಿದೆ ಎನ್ನುವುದು ಕಾಲಿವುಡ್ ನಿರ್ದೇಶಕ ಮಾತು. ಆದರೆ ಮಣಿರತ್ನಂ ಚಿತ್ರದಿಂದ ಸೋನಮ್ ಕಪೂರ್ ಬದಲಾಗಿ ದೂಕೂಡು ಫೇಮ್ ಸಮಂತಾ ಹೆಸರು ಕೇಳಿ ಬರುತ್ತಿದೆ. ಆದರೆ ಈ ನಾಯಕಿ ಪಟ್ಟ ಇಬ್ಬರಲ್ಲಿ ಯಾರಿಗೆ ಎನ್ನೋದು ಇನ್ನೂ ಇತ್ಯರ್ಥವಾಗಿಲ್ಲ. ಟೋಟಲಿ ಬಾಲಿವುಡ್‌ನಲ್ಲಿ ಕುಣಿದು ಕುಪ್ಪಳಿಸುತ್ತಿರುವ ಬಣ್ಣದ ಚಿಟ್ಟೆಗಳು ಕಾಲಿವುಡ್ ಆಗಸದಲ್ಲಿ ಮನಸೋ ಬಿಚ್ಚಿ ಹಾರಾಡುತ್ತಾ ಎನ್ನುವ ಪ್ರಶ್ನೆ ಮಾತ್ರ ಚಿತ್ರಗಳು ತೆರೆಗೆ ಬಂದ ನಂತರವೇ ತಿಳಿಯಬೇಕು. ನಾಯಕಿಯರಿಗೆ ಬಾಲಿವುಡ್‌ನಲ್ಲಿರುವ ಭಾಷೆ, ನಟನೆಯ ಚಮಕ್ ಕಾಲಿವುಡ್‌ನಲ್ಲಿ ವರ್ಕ್ ಔಟ್ ಆಗುತ್ತಾ ಎನ್ನೋದು ಡಾಲರ್ ಪ್ರಶ್ನೆ.
ಬಾಲಿಯ ‘ಕತ್ರಿ’ಗೆ ದೊಡ್ಡ ಚಿತ್ರ
ಬಾಲಿವುಡ್‌ನ ಬಾರ್ಬಿ ಡಾಲ್ ಕತ್ರಿನಾ ಕೈಫ್ ರಜನಿಕಾಂತ್‌ರ ‘ಕೋಚಡಿಯಾನ್’ನಲ್ಲಿ ಹಾಗೂ ಕಮಲ್‌ಹಾಸನ್ ನಟಿಸುತ್ತಿರುವ ‘ವಿಶ್ವರೂಪಂ’ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಕಾಲಿವುಡ್ ಇತಿಹಾಸದಲ್ಲಿಯೇ ಈ ಎರಡು ಚಿತ್ರಗಳು ಈಗಾಗಲೇ ಭಾರೀ ಪ್ರಚಾರವನ್ನು ಪಡೆದುಕೊಂಡಿದೆ. ಜತೆಗೆ ಅತೀ ಹೆಚ್ಚು ಬಂಡವಾಳ ಹಾಕಿ ನಿರ್ಮಾಣ ಮಾಡುತ್ತಿರುವ ಚಿತ್ರ ಎನ್ನುವ ಹೆಗ್ಗಳಿಕೆ ಕೂಡ ಬಗಲಿಗಿದೆ. ಅದರಲ್ಲೂ ‘ವಿಶ್ವರೂಪಂ’ನ ವಿದ್ಯಾಬಾಲನ್, ಸೋನಮ್ ಹಾಗೂ ಕತ್ರಿನಾರ ಜಾಗಕ್ಕೆ ಪೂಜಾ ಕುಮಾರ್ ಅವರ ಹೆಸರು ಕೇಳಿ ಬರಲು ಆರಂಭವಾಗಿದೆ. ಕಾರಣ ಈ ಮೂರು ನಾಯಕಿಯರಲ್ಲಿ ಡೇಟ್ಸ್ ಕೊರತೆ ಕಾಣಿಸಿಕೊಂಡಿದೆ. ಆದರೂ ಕತ್ರಿನಾ ಈ ಎರಡು ಚಿತ್ರಗಳಿಗೆ ಓಕೆ ಎಂದಿದ್ದಾರೆ ಎನ್ನುವ ಮಾತು ಕೂಡ ಕಾಲಿವುಡ್‌ನಲ್ಲಿ ಓಡುತ್ತಿದೆ.
(vk lvk published dis article on 24.02.2012)