Saturday, January 19, 2013
ಸ್ಟೀವನ್ ರೇಗೊಗೆ ಮೆಗಾ ಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿ
ಮಂಗಳೂರಿನ ಮೆಗಾ ಮೀಡಿಯಾ ನ್ಯೂಸ್ ಇದರ ಹತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಹಬ್ಬದಲ್ಲಿ ಮೆಗಾ ಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿಯನ್ನು ವಿಜಯ ಕರ್ನಾಟಕದ ವರದಿಗಾರ ಸ್ಟೀವನ್ ರೇಗೊ ದಾರಂದಕುಕ್ಕು ಅವರಿಗೆ ನೀಡಲಾಯಿತು. ಈ ಸಂದರ್ಭ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕರಾವಳಿ ಕಾಲೇಜುಗಳ ಅಧ್ಯಕ್ಷ ಗಣೇಶ್ ರಾವ್, ಕರ್ಣಾಟಕ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಮಹಾಬಲೇಶ್ವರ ರಾವ್, ಮೆಗಾ ಮೀಡಿಯಾದ ಆಡಳಿತ ನಿರ್ದೇಶಕ ಶಿವಪ್ರಸಾದ್ ನನಾ ಅತಿಥಿಗಳು ಉಪಸ್ಥಿತರಿದ್ದರು.
Sunday, January 13, 2013
ಸ್ಟೀವನ್ ರೇಗೊಗೆ ಪತ್ರಿಕೋದ್ಯಮ ಪ್ರಶಸ್ತಿ
ಮಂಗಳೂರು: ಮೆಗಾ ಮೀಡಿಯಾ ನ್ಯೂಸ್ ತನ್ನ ಹತ್ತನೇ ವರ್ಷದ ಸವಿನೆನಪಿಗಾಗಿ ನೀಡುವ ಮೆಗಾಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿಗೆ ಮಂಗಳೂರು ವಿಜಯ ಕರ್ನಾಟಕ ದಿನ ಪತ್ರಿಕೆ ಉಪಸಂಪಾದಕ ಹಾಗೂ ವರದಿಗಾರ ಸ್ಟೀವನ್ ರೇಗೊ ದಾರಂದಕುಕ್ಕು ಆಯ್ಕೆಯಾಗಿದ್ದಾರೆ.
ವಿಜಯ ಕರ್ನಾಟಕದ ನಮ್ಮ ಕರಾವಳಿಯಲ್ಲಿ ಬಂದ ‘ಕತ್ತಲಲ್ಲಿ ಮೂಡಿಬಂತು ಬೆಳಕು !’ ಲೇಖನ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು ಐದುಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಸನ್ಮಾನಿತ ಗೌರವಾದರಗಳನ್ನೊಳಗೊಂಡಿದೆ. ಸ್ಟೀವನ್ ರೇಗೊ ಅವರ ಗ್ರಾಮೀಣ ಪತ್ರಿಕೋದ್ಯಮಕ್ಕೆ ಈ ಹಿಂದೆ ಕಿನ್ನಿಗೋಳಿಯ ಕಡಂದಲೆ ಪ್ರಶಸ್ತಿ, ದಕ್ಷಿಣ ಕನ್ನಡ ಕಾರ‍್ಯನಿರತರ ಪತ್ರಕರ್ತರ ಸಂಘದ ಪ.ಗೋ ಪ್ರಶಸ್ತಿಗಳು ಸಿಕ್ಕಿದೆ. ದಾರಂದಕುಕ್ಕು ನಿವಾಸಿ ಇಗ್ನೇಶಿಯಸ್ ರೇಗೊ ಹಾಗೂ ಹಿಲ್ಡಾ ರೇಗೊ ಅವರ ಸುಪತ್ರ.
ಕುಡ್ಲ ಹುಡುಗರ ‘ಸಾದಿ’
ಸ್ಟೀವನ್ ರೇಗೊ, ದಾರಂದಕುಕ್ಕು
ಕುಡ್ಲದ ಹುಡುಗರು ಏನಾದರೂ ಮಾಡಿ ಯುವಜನತೆಯನ್ನು ಹಾದಿ ತರುವ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಪುಟ್ಟ ಟೆಲಿಚಿತ್ರದ ಮೂಲಕ ಜೋರಾಗಿ ಸೌಂಡ್ ಮಾಡಿ ಯುವಜನತೆಯನ್ನು ನಿದ್ದೆಯಿಂದ ಎಬ್ಬಿಸಿ ಕೂರಿಸಿದ್ದಾರೆ. ಸಾದಿಯ ಹಾದಿ ಹೇಗಿದೆ ನೋಡಿ...
‘ಸಾದಿ’ ಇದು ಸಾವಿನ ಕಡೆ ತೋರಿಸುವ ಹಾದಿ ಎನ್ನುವ ಟ್ಯಾಗ್‌ಲೈನ್‌ನಲ್ಲೇ ಕುಡ್ಲದ ಹುಡುಗರು ಕ್ಲಿಕ್ ಆಗಿದ್ದಾರೆ. ಕರಾವಳಿಯಲ್ಲಿ ಮಾತ್ರವಲ್ಲ ಇಡೀ ದೇಶದ ಯುವ ಪೀಳಿಗೆಯ ಕುರಿತು ಕುಡ್ಲದ ಹುಡುಗರು ಸಿರೀಯಸ್ ಆಗಿ ಸ್ಟಡಿ ಮಾಡಿದ್ದಾರೆ. ಎಲ್ಲರೂ ಅಧ್ಯಯನ ಮಾಡುವುದರಲ್ಲಿಯೇ ಕಾಲಕಳೆಯುವ ಹೊತ್ತಿಗೆ ಕುಡ್ಲದ ಹುಡುಗರು ಏನಾದರೂ ಮಾಡಿ ಯುವಜನತೆಯನ್ನು ಹಾದಿ ತರುವ ಕೆಲಸ ಮಾಡಿದ್ದಾರೆ. ತಮ್ಮದೇ ಪುಟ್ಟ ಟೆಲಿಚಿತ್ರದ ಮೂಲಕ ಜೋರಾಗಿ ಸೌಂಡ್ ಮಾಡಿ ಯುವಜನತೆಯನ್ನು ನಿದ್ದೆಯಿಂದ ಎಬ್ಬಿಸಿ ಕೂರಿಸಿದ್ದಾರೆ.
ಕಾಲೇಜಿನ ಮೆಟ್ಟಿಲಿಗೆ ಹೆಜ್ಜೆ ಹಾಕುತ್ತಿದ್ದಂತೆ ಯುವಜನತೆಯ ಹಾದಿ ತಪ್ಪುತ್ತಿದೆ ಎನ್ನುವ ಮಾತುಗಳೇ ಈಗ ಕೇಳಿಸಿಕೊಳ್ಳಲು ಆರಂಭವಾಗಿದೆ. ಮಾದಕ ದ್ರವ್ಯಗಳ ಸೇವನೆಯಿಂದ ಭವ್ಯ ಭವಿಷ್ಯದ ಪ್ರಜೆಗಳಾಗಬೇಕಾದವರೂ ಕೂಡ ಆಸ್ಪತ್ರೆಯಲ್ಲಿ ಬಂಧಿಯಾಗಿ ಚಿಕಿತ್ಸೆ ಪಡೆಯುವ ಹಂತಕ್ಕೂ ಬಂದು ತಲುಪಿದ್ದಾರೆ. ಅವರನ್ನು ಒಂದು ಹಾದಿಗೆ ತರುವ ಕೆಲಸ ನಮ್ಮಂತಹ ಯುವಕರಿಂದ ಆದರೆ ಅದು ನಮ್ಮ ಟೆಲಿಚಿತ್ರಕ್ಕೆ ಸಿಕ್ಕ ಯಶಸ್ಸು ಎಂದು ಸಾದಿಯನ್ನು ನಿರ್ದೇಶನ ಮಾಡಿದ ಯುವಕ ನಾಗರಾಜ್ ಅಂಬರ್ ಅವರ ಮಾತು.
ನಾಗರಾಜ್ ಸಾದಿಯ ಹುಟ್ಟು ಬೆಳವಣಿಗೆಯ ಕುರಿತು ಹೇಳುವ ಮಾತು ಹೀಗಿದೆ: ಕರಾವಳಿಯಲ್ಲಿ ಬಹಳಷ್ಟು ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ನನ್ನ ಸುತ್ತಮುತ್ತ ಇಂತಹ ಯುವಕರನ್ನು ಕಣ್ಣಾರೆ ಕಂಡು ಅವರ ನೋವು ನಾನು ಅನುಭವಿಸಿದ್ದೇನೆ. ಅವರನ್ನು ಬದಲಾಯಿಸುವ ಶಕ್ತಿ ನನ್ನ ಬಳಿ ಇಲ್ಲ. ಆದರೆ ಇಂತಹ ಹೊಸ ಯುವಪೀಳಿಗೆಯಂತೂ ಮತ್ತೆ ಅಂತಹ ಚಟಕ್ಕೆ ಗುರಿಯಾಗಬಾರದು ಎನ್ನುವ ಕಾಳಜಿಯಿಂದ ಈ ಟೆಲಿಚಿತ್ರ ರೂಪುಗೊಂಡಿತು ಎನ್ನೋದು ಸಾದಿಯ ಸಿಕ್ರೇಟ್ ಮಾತು.
ಸಾದಿ ಹಾದಿಗೆ ಬಂದು ನಿಂತಿತು:
ಕುಡ್ಲದ ತುಳು ಭಾಷೆಯಲ್ಲಿ ‘ಸಾದಿ’ ಎಂದರೆ ಹಾದಿ ಎನ್ನುವ ಅರ್ಥ ಬರುತ್ತದೆ. ಕರಾವಳಿಯ ಯುವಜನತೆ ಯಾವ ಪರಿಯಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಾರೆ ಎನ್ನುವ ಪುಟ್ಟ ಸ್ಟ್ರೀಮ್‌ಲೈನ್ ಇಟ್ಟುಕೊಂಡು ಒಂದು ಗಂಟೆಯ ಟೆಲಿಚಿತ್ರವನ್ನು ಮಾಡಲಾಗಿದೆ. ಕರಾವಳಿಯಲ್ಲಿ ಆಗಾಗ ಮಾದಕ ವ್ಯವಸನಕ್ಕೆ ಬಿದ್ದು ಮೃತಪಡುವ ಯುವಜನತೆ ರಹಸ್ಯವನ್ನು ಭೇದಿಸಲು ಆರು ಯುವಕರ ಜತೆಗೆ ಪೊಲೀಸ್ ಇಲಾಖೆಯಿಂದ ನಡೆಯುವ ಕಾರ‍್ಯಾಚರಣೆ ಎಲ್ಲವೂ ಸಾದಿಯಲ್ಲಿರುವ ಮುಖ್ಯ ಪಾಯಿಂಟ್‌ಗಳು.
ಈಗಾಗಲೇ ‘ಸಾದಿ’ಯ ಪ್ರೋಮೋಗಾಗಿ ಈಗಾಗಲೇ ಕತ್ರಿನಾ...ಎನ್ನುವ ರಾಕ್ ಸಾಂಗ್ ಯೂಟ್ಯೂಬ್ ಅಂಗಳದಲ್ಲಿ ಕ್ಲಿಕ್ ಆಗಲು ಆರಂಭವಾಗಿದೆ. ಇವುಗಳ ಜತೆಯಲ್ಲಿ ಟೆಲಿಚಿತ್ರದಲ್ಲಿ ನಾಲ್ಕು ಹಾಡುಗಳನ್ನು ನಾಲ್ಕು ವಿಭಿನ್ನ ಸಂಗೀತ ನಿರ್ದೇಶಕರಾದ ಸಂದೇಶ್, ಲಾಯ್ ವೆಲೆಂಟೈನ್, ಸಂದೀಪ್ ಬಳ್ಳಾಲ್, ವಿನೋದ್ ಸುವರ್ಣರಿಂದ ಮೂಡಿ ಬಂದಿದೆ. ಇಡೀ ಟೆಲಿ ಚಿತ್ರ ತುಳು ಭಾಷೆಯಲ್ಲಿರುವುದರಿಂದ ಕರಾವಳಿಯ ಜನತೆಗೆ ಮಾತ್ರ ಸೀಮಿತವಾಗಲಿದೆ.
ಈಗಾಗಲೇ ಯುವಜನತೆಯ ಲೋಕಲ್, ಇಂಟರ್ ನ್ಯಾಷನಲ್ ಅಡ್ಡಾ ಎಂದೇ ಗುರುತಿಸಿಕೊಳ್ಳುವ ಸಾಮಾಜಿಕ ತಾಣಗಳಲ್ಲಿ ಒಂದಾದ ಯೂ ಟ್ಯೂಬ್ ನಲ್ಲಿ ಈ ಸಾದಿ ಟೆಲಿಚಿತ್ರವನ್ನು ಹಾಕುವ ಕೆಲಸ ನಡೆಯುತ್ತಿದೆ. ಈ ಮೂಲಕ ದೇಶ- ವಿದೇಶದಲ್ಲಿರುವ ಕರಾವಳಿ ಮೂಲದ ಎಲ್ಲ ಯುವಜನತೆಯನ್ನು ತಲುಪಲು ಸಾಧ್ಯವಾಗುತ್ತದೆ ಎನ್ನುವ ಇರಾದೆ ಚಿತ್ರದ ನಿರ್ದೇಶಕ ನಾಗರಾಜ್ ಅಂಬರ ಅವರದ್ದು.
ಅಂದಹಾಗೆ ಚಿತ್ರದ ಸಿನಿಮಾಟೋಗ್ರಾಫಿ ಹಾಗೂ ಎಡಿಟಿಂಗ್ ಜಾಗದಲ್ಲಿ ಸಚಿನ್ ಶೆಟ್ಟಿ, ಸಾಹಿತ್ಯದಲ್ಲಿ ನಾಗರಾಜ್, ಕಲಾನಿರ್ದೇಶಕರಾಗಿ ಶಶಿ ನಾರ್ಣಕಜೆ, ಕೋರಿಗ್ರಾಫಿಯಲ್ಲಿ ಅವಿನಾಶ್ ಬಂಗೇರಾ, ಸಾಹಸದಲ್ಲಿ ಜಿತೇಂದ್ರ ಸಿಂಗ್ ಮಣಿಪುರ, ನಿರ್ಮಾಪಕರಾಗಿ ರೀಜು, ನಾಗರಾಜ್, ಸೂರಜ್, ಶ್ರೀಕುಮಾರ್ ಕೈ ಜೋಡಿಸಿದ್ದಾರೆ. ಜ.೧೧ರಿಂದ ಯ್ಯೂ ಟೂಬ್‌ನಲ್ಲಿ ಚಿತ್ರದ ಪ್ರೋಮೋಗಳು ಓಡುತ್ತಿದೆ. ತುಳು ರಂಗಭೂಮಿಯ ಕಲಾವಿದ ದಿನೇಶ್ ಅತ್ತಾವರ, ಲೀಲಾಧರ ಶೆಟ್ಟಿ ಕಾಪು ಸೇರಿದಂತೆ ಕುಡ್ಲದ ಯುವಕರಾದ ನಾಗರಾಜ್, ರಾಮಪ್ರಸಾದ್, ಸುಕೇಶ್, ದೀಪಕ್, ವರುಣ್, ಸೂರಜ್, ಯಶ್‌ರಾಜ್, ಶಶಿ ನಾರ್ಣಕಜೆ, ಜೀವನ್, ಸಂಶುದ್ಧೀನ್, ಪ್ರಸನ್ನ ನಟಿಸಿದ್ದಾರೆ.
ಟ್ಯಾಲೆಂಟ್ ಹುಡುಗನ ದಂಡಯಾತ್ರೆ:
ಖಾಸಗಿ ರೇಡಿಯೋ ವಾಹಿನಿಯೊಂದರಲ್ಲಿ ಆರ್‌ಜೆ ಆಗಿರುವ ನಾಗರಾಜ್ ಅಂಬರ್ ಪ್ರತಿಭಾವಂತ ಹುಡುಗ. ಮೂಲತಃ ಕಾಸರಗೋಡಿನ ನಾಗರಾಜ್ ಡ್ಯಾನ್ಸಿಂಗ್ ನಲ್ಲಿ ಎತ್ತಿ ಕೈ. ಈಗಾಗಲೇ ಸಾವಿರಕ್ಕೂ ಅಧಿಕ ನೃತ್ಯ ಪ್ರದರ್ಶನಗಳನ್ನು ನೀಡಿರುವ ನಾಗರಾಜ್ ನಾನಾ ಖಾಸಗಿ ವಾಹಿನಿಗಳ ಡ್ಯಾನ್ಸ್ ಶೋಗಳಿಂದ ಬಹುಮಾನ ಬಾಚಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ವಿಶೇಷ ಆಸಕ್ತಿ ಹೊಂದಿರುವ ನಾಗರಾಜ್ ಈಗಾಗಲೇ ‘ಭಾತ್ರತ್ವ’ ಎನ್ನುವ ಪುಟ್ಟ ಟೆಲಿ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇಂಗ್ಲೀಷ್ ನಲ್ಲಿ ‘ತ್ರೀಶೇಡ್ಸ್’ ಎನ್ನುವ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಖಾಸಗಿ ರೇಡಿಯೋ ವಾಹಿನಿಯಲ್ಲಿ ಕಾರ‍್ಯಕ್ರಮ ನೀಡುವ ನಾಗರಾಜ್‌ನ ಧ್ವನಿ ಕೇಳುವ ಅಭಿಮಾನಿಗಳ ವರ್ಗವೊಂದು ಸೃಷ್ಟಿಯಾಗಿದೆ. ಟೋಟಲಿ ಯುವಜನತೆಗಾಗಿ ಏನಾದರೂ ಮಾಡಬೇಕು ಎನ್ನುವ ಸಾಹಸದ ಕೆಲಸ ಹಿರಿಯರು ಮೆಚ್ಚಲೇ ಬೇಕು ಅಲ್ವಾ..?
......
vk lvk published dis article
......
ಬಾಲಿವುಡ್‌ನ ‘ಡಬ್ಬೂ ’ ಕ್ಯಾಲೆಂಡರ್
ಡಬ್ಬೂ ರತ್ನಾನಿ ಹೆಸರು ಬಾಲಿವುಡ್ ಅಂಗಳದಲ್ಲಿ ಸಾಣೇ ಕೇಳಿಸಿಕೊಳ್ಳುವ ಫ್ಯಾಶನ್ ಛಾಯಾಗ್ರಾಹಕನ ಹೆಸರು. ಮಹಾರಾಷ್ಟ್ರದ ಪುಟ್ಟ ಹಳ್ಳಿಯ ಕಡು ಬಡತನದಲ್ಲಿ ಬೆಳೆದ ಹುಡುಗ ನಂತರ ಮುಂಬಯಿಯ ಬಣ್ಣದ ಲೋಕದ ಕಣ್ಮಣಿಯಾದ ಕತೆನೇ ಕೊಂಚ ಭಿನ್ನ.
* ಸ್ಟೀವನ್ ರೇಗೊ, ದಾರಂದಕುಕ್ಕು
ಡಬ್ಬೂ ರತ್ನಾನಿ. ಇದು ಪ್ರತಿ ವರ್ಷದ ಆರಂಭದಲ್ಲಿ ಸುದ್ದಿಯಾಗುತ್ತಿರುವ ವ್ಯಕ್ತಿ. ಅಂದಹಾಗೆ ಇಡೀ ಬಾಲಿವುಡ್‌ನಲ್ಲಿ ಈತನ ಮಾತಿಗೆ ಒಂದು ಗತ್ತು ಇದೆ. ಅವರನ್ನು ತನ್ನ ತಾಳಕ್ಕೆ ತಕ್ಕಂತೆ ಬೆಂಡ್ ಮಾಡುವ ಧೈರ್ಯವಿದೆ. ಎಲ್ಲಕ್ಕೂ ಮುಖ್ಯವಾಗಿ ‘ಡಬ್ಬೂ ’ ಎನ್ನುವ ಮಾಸ್ಟರ್ ಫೀಸ್ ಮುಂದೆ ನಟ-ನಟಿಯರು ಸಿಕ್ಕಾಪಟ್ಟೆ ಬೋಲ್ಡ್‌ನೆಸ್‌ಗೆ ಮಾರು ಹೋಗುತ್ತಾರೆ. ಇದು ಡಬ್ಬೂ ರತ್ನಾನಿ ಎನ್ನುವ ಕ್ಯಾಮೆರಾಕಣ್ಣಿನ ಹೀರೋನ ಕತೆ. ಜತೆಗೆ ಪ್ರತಿ ವರ್ಷ ಆತ ಹೊರ ತರುವ ‘ಡಬ್ಬೂ ರತ್ನಾನಿ ಕ್ಯಾಲೆಂಡರ್’ ಎನ್ನುವ ಕನಸ್ಸಿನ ಕತೆ.
ಅಂದಹಾಗೆ ಡಬ್ಬೂ ರತ್ನಾನಿ ಹೆಸರು ಬಾಲಿವುಡ್ ಅಂಗಳದಲ್ಲಿ ಸಾಣೇ ಕೇಳಿಸಿಕೊಳ್ಳುವ ಫ್ಯಾಶನ್ ಛಾಯಾಗ್ರಾಹಕನ ಹೆಸರು. ಮಹಾರಾಷ್ಟ್ರದ ಪುಟ್ಟ ಹಳ್ಳಿಯ ಕಡು ಬಡತನದಲ್ಲಿ ಬೆಳೆದ ಹುಡುಗ ನಂತರ ಮುಂಬಯಿಯ ಬಣ್ಣದ ಲೋಕದ ಕಣ್ಮಣಿಯಾದ ಕತೆನೇ ಕೊಂಚ ಭಿನ್ನ. ೯೦ರ ದಶಕದಲ್ಲಿ ಮುಂಬಯಿಯ ಫ್ಯಾಶನ್ ಲೋಕದಲ್ಲಿ ಬಹಳ ಕೇಳಿಸಿಕೊಳ್ಳುತ್ತಿದ್ದ ಸುಮಿತ್ ಚೋಪ್ರಾ ಎನ್ನುವ ಫ್ಯಾಶನ್ ಫೋಟೋಗ್ರಾಫರ್ ನ ಹಿಂದೆ ಬಿದ್ದು ಫೋಟೋಗ್ರಾಫಿಯನ್ನು ಬಹಳ ಸಿರೀಯಸ್ ಆಗಿ ಅಧ್ಯಯನ ಮಾಡಿಕೊಂಡು ಹೊರಬಂದ ಡಬ್ಬೂ ನಂತರ ಗುರುವನ್ನು ಮೀರಿಸುವ ಶಿಷ್ಯನಾದ .
೯೪ರ ಹೊತ್ತಿಗೆ ಡಬ್ಬೂ ತನ್ನದೇ ಪುಟ್ಟ ಛಾಯಾಚಿತ್ರದ ಅಂಗಡಿ ತೆರೆದಿಟ್ಟ. ಬಾಲಿವುಡ್ ಸಿನಿಮಾಗಳ ಕಾರ‍್ಯಕ್ರಮಗಳಲ್ಲಿ ಡಬ್ಬೂ ರತ್ನಾನಿ ಎನ್ನುವ ಛಾಯಾಗ್ರಾಹಕನ ತಲೆ ಕಾಣಿಸಿಕೊಂಡ ನಂತರವಂತೂ ಬಾಲಿವುಡ್ ಬಣ್ಣದ ಸಿನಿಮಾಗಳಲ್ಲಿ ಡಬ್ಬೂ ಇಲ್ಲದೇ ಏನೂ ಇಲ್ಲ ಎನ್ನುವ ಮಟ್ಟ ಮುಟ್ಟಿನಿಂತಿತ್ತು. ಅದೇ ಡಬ್ಬೂ ಎನ್ನುವ ಕಲಾತ್ಮಕ ಹಾಗೂ ಗ್ಲಾಮರ್ ಲೋಕದ ಎರಡು ಶೇಡ್‌ಗಳ ಜತೆಯಲ್ಲಿ ಆಟವಾಡಿ ಪ್ರತಿ ವರ್ಷನೂ ಡಬ್ಬೂ ಕ್ಯಾಲೆಂಡರ್ ತರುವ ಯೋಜನೆಗೆ ಕೈ ಹಾಕಿ ಗೆದ್ದು ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾನೆ.
ಬಾಲಿವುಡ್‌ನ್ನು ಮಲಗಿಸುವ ಕ್ಯಾಲೆಂಡರ್ :
ಅದು ೨೦೦೪ ಬಾಲಿವುಡ್ ಅಂಗಳದಲ್ಲಿ ಮೊದಲ ಬಾರಿಗೆ ಡಬ್ಬೂ ಕ್ಯಾಲೆಂಡರ್ ಹೊರಬಂತು. ಈ ಮೊದಲು ಚಿಕ್ಕಪುಟ್ಟ ಗಿಮಿಕ್‌ಗಳ ಮೂಲಕವೇ ಹೆಸರುಗಳಿಸಿ ಉಳಿಸಿಕೊಂಡಿದ್ದ ಡಬ್ಬೂ ಈ ಕ್ಯಾಲೆಂಡರ್ ಮೂಲಕ ಬಣ್ಣದ ಲೋಕದಲ್ಲಿ ಹೊಸ ಕ್ರೇಜ್ ಹುಟ್ಟಿ ಹಾಕಿದ. ಮೊಡೆಲ್‌ಗಳ ಜತೆಯಲ್ಲಿ ಆಟಹಾಡಿಕೊಂಡಿದ್ದ ಡಬ್ಬೂ ೨೦೦೪ ರ ಬಳಿಕ ಬಾಲಿವುಡ್ ನಟ- ನಟಿಯರ ಜತೆಯಲ್ಲಿ ಆಟಕ್ಕೆ ಕೂತು ಬಿಟ್ಟ. ಈ ಹೊಸ ಪ್ರಯತ್ನ ಕ್ಲಿಕ್ ಆಗಿ ಹೋಯಿತು.
೨೦೦೪ರಲ್ಲಿ ಬಾಲಿವುಡ್‌ನ ಟಾಪ್ ತಾರೆಯನ್ನು ಒಟ್ಟು ಸೇರಿಸಿಕೊಂಡು ಕ್ಯಾಲೆಂಡರ್ ಹೊರ ತಂದ. ಅದರಲ್ಲಿ ಹಿರಿಯ ನಟರ ಜತೆಯಲ್ಲಿ ಬಾಲಿವುಡ್‌ನಲ್ಲಿ ಕಾಣಿಸಿಕೊಂಡ ಹೊಸಪ್ರತಿಭೆಗೂ ಜಾಗ ಮಾಡಿಕೊಟ್ಟ. ಬಾಲಿವುಡ್ ನಟ- ನಟಿಯರನ್ನು ಒಂದೇ ಪ್ಯಾಕೇಜ್‌ನಡಿಯಲ್ಲಿ ತಮ್ಮ ಅಭಿಮಾನಿಗಳ ಕೈ ಸೇರುವಂತೆ ಕ್ಯಾಲೆಂಡರ್ ತಯಾರಿಸಿಕೊಟ್ಟ ಡಬ್ಬೂ ತನ್ನ ಕ್ಯಾಲೆಂಡರ್‌ಗಳಲ್ಲಿ ೨೪ ಬಾಲಿವುಡ್ ಸೆಲೆಬ್ರಿಟಿಗಳನ್ನು ತಮ್ಮ ಕ್ಯಾಲೆಂಡರ್‌ಗಳಲ್ಲಿ ತೋರಿಸುತ್ತಾರೆ. ಡಬ್ಬೂ ರತ್ನಾನಿಯ ಕ್ಯಾಲೆಂಡರ್‌ಗಳಲ್ಲಿ ಕಾಯಂ ಜಾಗ ಪಡೆಯುವ ಮಂದಿಯಲ್ಲಿ ಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಬಚ್ಚನ್, ಶಾರೂಕ್ ಖಾನ್ ಸೇರಿಕೊಂಡಿರುತ್ತಾರೆ. ೨೦೧೦ರ ನಂತರ ತಂದ ಡಬ್ಬೂ ಕ್ಯಾಲೆಂಡರ್ ಗಳ ಶೂಟಿಂಗ್ ಚಿತ್ರವನ್ನು ಡಬ್ಬೂ ಯೂ ಟ್ಯೂಬ್‌ನಲ್ಲಿ ತುಂಬಿಸಿ ಬಿಡುವ ಪರಂಪರೆ ಆರಂಭ ಮಾಡಿದರು. ಬಾಲಿವುಡ್ ಪಾಲಿಗೆ ಡಬ್ಬೂ ಕ್ಯಾಲೆಂಡರ್‌ಗಳಷ್ಟು ಚರ್ಚೆಯಾಗುವಷ್ಟು ವಿಚಾರ ಬೇರೆ ಇಲ್ಲ ಎನ್ನುವ ಮಾತಿದೆ.
ಡಬ್ಬೂ ಎನ್ನುವ ಕ್ರಿಯೇಟರ್:
ಅಂದಹಾಗೆ ೨೦೧೩ರ ಡಬ್ಬೂ ಕ್ಯಾಲೆಂಡರ್ ಹೊರಬಂದಿದೆ. ಕಳೆದ ವರ್ಷದ ಡರ್ಟಿ ಹುಡುಗಿ ವಿದ್ಯಾಬಾಲನ್ ಹಾಗೂ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡ ಹೊಸ ತಾರೆ ವರುಣ್ ಧವನ್ ಡಬ್ಬೂ ಕ್ಯಾಲೆಂಡರ್‌ನಲ್ಲಿ ಈ ವರ್ಷದಲ್ಲಿ ಪ್ಲಸ್ ಆಗುವ ಐಟಂಗಳು. ಉಳಿದಂತೆ ಶಾರೂಕ್ ಖಾನ್, ಹೃತಿಕ್ ರೋಷನ್, ಕಾಜೋಲ್, ಬಾಲಿವುಡ್ ನಿರ್ದೇಶಕರಾದ ಅಬ್ಬಾಸ್- ಮಸ್ತಾನ್, ಅಲಿಯಾ ಭಟ್, ಮಧುರ್ ಭಂಡಾರ್‌ಕರ್, ಅಫ್ತಾಬ್ ಶಿವದಾಸನಿ, ಅರ್ಜುನ್ ರಾಂಪಾಲ್‌ನಂತಹ ನಟರು ಕ್ಯಾಲೆಂಡರ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರತಿ ವರ್ಷ ಡಬ್ಬೂ ಕ್ಯಾಲೆಂಡರ್‌ಗಳಲ್ಲಿ ಕಾಣಿಸಿಕೊಳ್ಳುವ ವಿಶೇಷತೆ ಏನಪ್ಪಾ ಅಂದರೆ ಕ್ಯಾಲೆಂಡರ್‌ಗಳಲ್ಲಿ ಕಾಣಿಸಿಕೊಳ್ಳುವ ಹೊಸ ಪ್ರತಿಭೆಗಳು ಇಡೀ ವರ್ಷ ಸಕ್ಸಸ್ ರೇಟಿನಲ್ಲಿರುತ್ತಾರೆ. ಕಳೆದ ವರ್ಷ ಹಾಟ್ ಆಗಿ ಕಾಣಿಸಿಕೊಂಡ ವಿದ್ಯಾ ಬಾಲನ್ ಡರ್ಟಿ ಪಿಕ್ಚರ್ ಹಾಗೂ ಕಹಾನಿ ಮೂಲಕ ಸಿಕ್ಕಾಪಟ್ಟೆ ಕ್ಲಿಕ್ ಆಗಿದ್ದಳು. ಈ ಬಾರಿಯ ಹೊಸ ಕ್ಯಾಲೆಂಡರ್‌ನಲ್ಲಿ ವರುಣ್ ಹಾಗೂ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಈ ವರ್ಷ ಬಾಲಿವುಡ್ ರಂಗದಲ್ಲಿ ಈ ತಾರೆಗಳು ಮಿಂಚಲಿದೆ ಎನ್ನುವ ಅಭಿಪ್ರಾಯ ಮೂಡಿದೆ.
..........................
vk lvk published dis article
ಮೋಲಿವುಡ್‌ನಲ್ಲಿ ಕಾಳಿದಾಸ
ರೀಲ್ ಗಳ ಜತೆಯಲ್ಲಿ ಸುತ್ತಾಟ ಮಾಡಿಕೊಂಡಿದ್ದ ಮಲಯಾಳಂ ಚಿತ್ರ ನಿರ್ದೇಶಕರು ಎಚ್‌ಡಿ ಫಾರ್ಮೆಟ್‌ಗೆ ಇಳಿದಿರುವುದು ಹೊಸ ತಂತ್ರಜ್ಞಾನದ ಬಳಕೆಯಲ್ಲಿ ಮಲಯಾಳಂ ಚಿತ್ರಗಳ ಗುಣಮಟ್ಟದಲ್ಲೂ ಸುಧಾರಣೆ ಕಾಣಿಸಿಕೊಂಡಿದೆ. ಟೋಟಲಿ ಮಲಯಾಳಂ ಚಿತ್ರ ನಗರಿಯಲ್ಲಿ ಎಲ್ಲ ಬದಲಾವಣೆಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಜತೆಯಲ್ಲಿ ಸಿನಿಮಾ ನಗರಿಗೆ ಬರುವ ಹೊಸ ಹುಡುಗರನ್ನು ಬೆನ್ನು ತಟ್ಟುತ್ತಿದ್ದಾರೆ. ಈಗ ಕಾಳಿದಾಸನ್ ಸರದಿ...
* ಸ್ಟೀವನ್ ರೇಗೊ, ದಾರಂದಕುಕ್ಕು
ಮೋಲಿವುಡ್ ಸಿನಿಮಾ ನಗರಿಯಲ್ಲಿ ಈಗ ಹೊಸ ಹವಾ ಎದ್ದು ನಿಂತಿದೆ. ಹೊಸ ನಾಯಕ- ನಾಯಕಿಯರನ್ನು ತಂದು ಸಿನಿಮಾ ಗೆಲ್ಲಿಸುವ ಪ್ರಯತ್ನಗಳು ಸಿಕ್ಕಾಪಟ್ಟೆ ಮೋಲಿವುಡ್ ಸಿನಿಮಾ ಜಗತ್ತಿಲ್ಲಿ ವರ್ಕ್ ಔಟ್ ಆಗುತ್ತಿದೆ. ಹೊಸ ತಂತ್ರಜ್ಞರು, ನಿರ್ದೇಶಕರು ತಮ್ಮದೇ ಆಂಗಲ್‌ನಲ್ಲಿ ಚಿತ್ರ ನಿರ್ಮಾಣ ಮಾಡಿಕೊಂಡು ಗೆದ್ದು ಬರುತ್ತಿರುವ ಉತ್ತಮ ಬೆಳವಣಿಗೆಯೊಂದು ಮೋಲಿವುಡ್ ಸಿನಿಮಾ ಜಗತ್ತಿನಲ್ಲಿ ಕಾಣಿಸಿಕೊಂಡಿದೆ. ಮೋಲಿವುಡ್ ಸಿನಿಮಾ ರಂಗದಲ್ಲಿ ಫ್ಯಾಮಿಲಿ ಬ್ಯುಸಿನೆಸ್‌ಗಳು ಹುಟ್ಟಿಕೊಂಡಿರುವುದು ಹಳೆಯ ನಾಯಕ-ನಾಯಕಿಯರ ಸಿನಿಮಾ ಅವಕಾಶಗಳಿಗೆ ಕತ್ತರಿ ಬೀಳುತ್ತಿದೆ. ಹೊಸ ನಾಯಕ- ನಾಯಕಿಯರಿಗೆ ನೀಡುತ್ತಿರುವ ಮೊದಲ ಮಣೆ ಕೂಡ ಮಲಯಾಳಂ ಚಿತ್ರ ವೀಕ್ಷಕರಿಂದಲೂ ಮನ್ನಣೆ ಸಿಗುತ್ತಿದೆ.
ಅಂದಹಾಗೆ ಇತ್ತೀಚೆಗೆ ಮೋಲಿವುಡ್ ಚಿತ್ರಗಳನ್ನು ಲೋ ಬಜೆಟ್‌ನಿಂದ ಎತ್ತಿಕೊಂಡು ಏಕ್ ದಂ ಹೈ ಬಜೆಟ್ ನತ್ತ ಮುಖ ಮಾಡುತ್ತಿರುವುದು ಕೂಡ ಇತರ ಚಿತ್ರರಂಗದಲ್ಲಿ ಮಲಯಾಳಂ ಚಿತ್ರಗಳು ಕೂಡ ಸ್ಪರ್ಧೆಯಲ್ಲಿ ಹೊಡೆದಾಡುವ ಪ್ರಮೇಯಗಳು ಕಾಣಿಸಿಕೊಂಡಿದೆ. ಈ ಹಿಂದೆ ರೀಲ್ ಗಳ ಜತೆಯಲ್ಲಿ ಸುತ್ತಾಟ ಮಾಡಿಕೊಂಡಿದ್ದ ಮಲಯಾಳಂ ಚಿತ್ರ ನಿರ್ದೇಶಕರು ಎಚ್‌ಡಿ ಫಾರ್ಮೆಟ್‌ಗೆ ಇಳಿದಿರುವುದು ಹೊಸ ತಂತ್ರಜ್ಞಾನದ ಬಳಕೆಯಲ್ಲಿ ಮಲಯಾಳಂ ಚಿತ್ರಗಳ ಗುಣಮಟ್ಟದಲ್ಲೂ ಸುಧಾರಣೆ ಕಾಣಿಸಿಕೊಂಡಿದೆ. ಟೋಟಲಿ ಮಲಯಾಳಂ ಚಿತ್ರ ನಗರಿಯಲ್ಲಿ ಎಲ್ಲ ಬದಲಾವಣೆಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಜತೆಯಲ್ಲಿ ಸಿನಿಮಾ ನಗರಿಗೆ ಬರುವ ಹೊಸ ಹುಡುಗರನ್ನು ಬೆನ್ನು ತಟ್ಟುತ್ತಿದ್ದಾರೆ.
ಸಿನಿಮಾ ಕುಟುಂಬದಲ್ಲಿ ಹುಟ್ಟಿದ ನಟ:
ಮೋಲಿವುಡ್ ಸಿನಿಮಾದ ಸೂಪರ್ ಸ್ಟಾರ್ ಮಮ್ಮುಟಿಯ ಪುತ್ರ ದುಲ್‌ವೀಕರ್ ಸಲ್ಮಾನ್ ಕಳೆದ ವರ್ಷವಷ್ಟೇ ಮಲಯಾಳಂ ಸಿನಿಮಾದಲ್ಲಿ ಕಣ್ಣು ಬಿಟ್ಟಿದ್ದರು. ತಮ್ಮ ‘ಸೆಕೆಂಡ್ ಶೋ’ ಚಿತ್ರದ ಮೂಲಕ ಸಾಧಾರಣ ಯಶಸ್ಸು ದಾಖಲಿಸಿಕೊಂಡಿದ್ದರು. ಈ ಬಳಿಕ ಬಂದ ಹಿರಿಯ ನಟ ತಿಲಕನ್‌ರ ಮೊಮ್ಮಗನ ಪಾತ್ರದಲ್ಲಿ ನಟಿಸಿದ ಸಲ್ಮಾನ್ ಚಿತ್ರ ‘ಉಸ್ತಾದ್ ಹೋಟೆಲ್’ ಮಲಯಾಳಂ ಸಿನಿಮಾದ ಬಾಕ್ಸಾಫೀಸ್‌ನಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿತ್ತು. ಇದೇ ರೀತಿಯಲ್ಲಿ ಮಲಯಾಳಂನ ಖ್ಯಾತ ನಟ ಶ್ರೀನಿವಾಸ್ ಅವರ ಪುತ್ರ ವಿನೀದ್ ನಟರಾಗಿ ನಂತರ ನಿರ್ದೇಶಕರಾಗಿ ಹೊರ ಬಂದರು. ಈಗ ಇದೇ ಸಾಲಿನಲ್ಲಿ ಕಾಳಿದಾಸನ್ ಸೇರುವ ಸಾಧ್ಯತೆ ಇದೆ.
ಅಂದಹಾಗೆ ಈ ಕಾಳಿದಾಸನ್ ಬೇರೆ ಯಾರು ಅಲ್ಲ. ಮಲಯಾಳಂನಲ್ಲಿ ಅತ್ತ ಆಕ್ಷನ್ ಗೂ ಸೈ ಇತ್ತ ಹಾಸ್ಯಕ್ಕೂ ಸೈ ಎಂದುಕೊಂಡು ನಿರ್ಮಾಪಕರು ತಮ್ಮ ಸಿನಿಮಾಕ್ಕೆ ಆರಿಸಿಕೊಳ್ಳುತ್ತಿದ್ದ ನಟ ಜಯರಾಮ್ ಅವರ ಪುತ್ರ. ಅಂದಹಾಗೆ ಕಾಳಿದಾಸನ್ ಮಲಯಾಳಂನ ಖ್ಯಾತ ಸಿನಿಮಾ ನಟಿ ಪಾರ್ವತಿಯ ಪುತ್ರ. ಈ ಹಿಂದೆ ಕಾಳಿದಾಸನ್ ಬಾಲ ನಟರಾಗಿ ಮೋಲಿವುಡ್ ಚಿತ್ರರಂಗದಲ್ಲಿ ಕಾಲೂರಿದ್ದರು. ಮಲಯಾಳಂನ ಖ್ಯಾತ ನಿರ್ದೇಶಕ ಸತ್ಯನ್ ಅಂತಿಕಾಡ್ ಅವರ ‘ ಕೊಚ್ಚು ಕೊಚ್ಚು ಸಂತೋಷಗಳ್’ ನಲ್ಲಿ ನಟ ಜಯರಾಮ್ ಅವರ ಪುತ್ರನಾಗಿ ಕಾಳಿದಾಸನ್ ಕಾಣಿಸಿಕೊಂಡು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು.
ಮೋಲಿವುಡ್ ಅಡ್ಡಾದಲ್ಲಿ ಪುತ್ರರ ಪೈಪೋಟಿ:
ಈ ವರ್ಷ ಮೋಲಿವುಡ್ ಚಿತ್ರರಂಗದಲ್ಲಿ ಅಂದುಕೊಂಡಂತೆ ಎಲ್ಲವೂ ನಡೆದರೆ ನಾಯಕ ನಟರ ಪುತ್ರರ ನಡುವೆ ಏಕ್‌ದಂ ಪೈಪೋಟಿ ಕಾಣಿಸಿಕೊಳ್ಳಲಿದೆ. ಒಂದೆಡೆ ಮಮ್ಮುಟಿಯ ಪುತ್ರ ಸಲ್ಮಾನ್‌ನ ಚಿತ್ರವೊಂದು ಬಿಡುಗಡೆಯ ಹಾದಿ ಕಾಯುತ್ತಿದೆ. ಮತ್ತೊಂದೆಡೆ ಶ್ರೀನಿವಾಸ್ ಪುತ್ರ ವಿನೀದ್ ಚಿತ್ರವೊಂದು ಥಿಯೇಟರ್ ಬಾಗಿಲಲ್ಲಿ ನಿಂತಿದೆ. ಮಲಯಾಳಂನ ಸೂಪರ್ ಸ್ಟಾರ್‌ರಲ್ಲಿ ಒಬ್ಬರಾದ ಮೋಹನ್ ಲಾಲ್ ಪುತ್ರ ಪ್ರಣವ್ ಕೂಡ ಮೋಲಿವುಡ್ ನಲ್ಲಿ ಬಣ್ಣದ ಬದುಕು ಕಟ್ಟಿಕೊಳ್ಳುವ ಸಾಹಸಕ್ಕೆ ಇಳಿಯಲಿದ್ದಾರೆ. ಇವರ ಜತೆಯಲ್ಲಿ ಜಯರಾಮ್ ಪುತ್ರ ಕಾಳಿದಾಸನ್ ಕೂಡ ಒಳ್ಳೆಯ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಇವರೆಲ್ಲರೂ ಈ ವರ್ಷದಲ್ಲಿ ಮಲಯಾಳಂ ಸಿನಿಮಾದ ಮುಕುಟ ಮಣಿಗಳಾಗುತ್ತಾರೆ ಎನ್ನೋದು ಸಿನಿಮಾ ನಗರಿಯ ಮಾತು. ಆದರೆ ಕಾಳಿದಾಸನ್ ಕುರಿತಾಗಿ ಅವರ ತಂದೆ ನಟ ಜಯರಾಮ್ ಹೇಳುವಂತೆ: ನಾವು ಮಗನ ಶಿಕ್ಷಣದ ಕುರಿತು ಹೆಚ್ಚಾಗಿ ಯೋಚಿಸುತ್ತಿದ್ದೇವೆ. ಚೆನ್ನೈಯಲ್ಲಿ ಅವನ ಶಿಕ್ಷಣ ಅಂತಿಮ ಹಂತದಲ್ಲಿದೆ. ಬರೀ ಶಿಕ್ಷಣ ಕಡೆ ಕಾಳಿ ಗಮನಕೊಟ್ಟರೆ ಸಾಕು ಎನ್ನೋದು ನಮ್ಮ ಹೆಬ್ಬಯಕೆ. ಅವಸರದಿಂದ ಸಿನಿಮಾ ನಗರಿಗೆ ಬರೋದು ಬೇಡ ಎನ್ನುವ ಸಲಹೆಯನ್ನು ನಾನು ಕಾಳಿಗೆ ನೀಡುತ್ತಾ ಬಂದಿದ್ದೇನೆ ಎಂದು ಜಯರಾಮ್ ಎಂದಿದ್ದಾರೆ. ಆದರೆ ಮಲಯಾಳಂ ಸಿನಿಮಾ ನಗರಿ ಈ ಹುಡುಗರಿಗಂತೂ ಕಾದು ನಿಂತಿದೆ ಎನ್ನುವ ಮಾತು ಹೊರ ಬಂದಿದೆ. ಅದರಲ್ಲೂ ಕಾಳಿದಾಸನ್ ತಂದೆಯಂತೆ ಎಲ್ಲ ಕಡೆಯಲ್ಲೂ ಸಲ್ಲುವ ಪಾತ್ರವಾಗುತ್ತಾರೆ ಎನ್ನೋದು ಮಲಯಾಳಂ ಸಿನಿ ಪ್ರೇಕ್ಷಕರ ಗಟ್ಟಿಮಾತು.
....
vk lvk published dis article.
ಬಾಲಿವುಡ್ ಫ್ಯಾಮಿಲಿ ಬಿಸಿನೆಸ್
ಬಾಲಿವುಡ್ ಎಂದಾಕ್ಷಣ ಅಲ್ಲಿ ಬಣ್ಣದ ಕನಸ್ಸುಗಳನ್ನು ಕಾಣುವ, ಮಾರುವ ಕೆಲಸಗಳು ಸಖತ್ ಆಗಿಯೇ ನಡೆಯುತ್ತದೆ. ಅಂದಹಾಗೆ ಈ ವರ್ಷವಂತೂ ಬಾಲಿವುಡ್‌ನ ಹಿರಿಯ ನಟರ ಪುತ್ರ- ಪುತ್ರಿಯರು ಸಖತ್ ಫಿಲ್ಮಿ ಫಾರ್ಮ್ ಗೆ ಬರಲಿದ್ದಾರೆ. ಏನಿದು ಕತೆ ಅಂತೀರಾ.. ಜಸ್ಟ್ ರೀಡ್ ಇಟ್
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಎಂದಾಕ್ಷಣ ಅಲ್ಲಿ ಬಣ್ಣದ ಕನಸ್ಸುಗಳನ್ನು ಕಾಣುವ, ಮಾರುವ ಕೆಲಸಗಳು ಸಖತ್ ಆಗಿಯೇ ನಡೆಯುತ್ತದೆ. ಹೊಸ ಹೊಸ ಪ್ರಯೋಗಶೀಲತೆಯ ಜತೆಯಲ್ಲಿ ಇತರ ಭಾಷೆಗಳ ಕಲಬೆರಕೆಯ ಮಾಲುಗಳ ಮೂಲಕ ವಿಶಿಷ್ಟ ಪ್ರಾಡಕ್ಟ್ ಗಳು ಜನ್ಮ ತಾಳುವುದನ್ನು ಇಲ್ಲಿಯೇ ನೋಡಿ ತಿಳಿಯಬೇಕು. ಸಖತ್ ಕಲರ್‌ಫುಲ್ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಬದಲಾವಣೆಯ ಹವಾ ತಾಗಿದೆ.
ಎಲ್ಲವೂ ಮೊಡರ್ನ್‌ನಿಟಿಗೆ ತಕ್ಕಂತೆ ಸಿನಿಮಾಗಳು ರಂಗೀನ್ ಆಗಿ ತೆರೆಗೆ ಬಂದು ಅಪ್ಪಳಿಸುತ್ತಿದೆ. ಬದಲಾಗುತ್ತಿರುವ ಬಾಲಿವುಡ್‌ನಲ್ಲಿ ಈಗ ಹೊಸ ಪರ್ವ ಹುಟ್ಟಿಕೊಂಡಿದೆ. ಅಂದಹಾಗೆ ಈ ಬದಲಾವಣೆ ಏನಪ್ಪಾ ಅಂದರೆ ಬಾಲಿವುಡ್ ಅಂಗಳದಲ್ಲಿ ಈಗ ಫ್ಯಾಮಿಲಿ ಬಿಸಿನೆಸ್ ನಡೆಯುತ್ತಿದೆ. ಹೊಸ ವರ್ಷದ ಆರಂಭದಲ್ಲಿಯೇ ಬಾಲಿವುಡ್ ಫ್ಯಾಮಿಲಿಗಳ ಕುಡಿಗಳು ತಮ್ಮ ಬಣ್ಣದ ಬದುಕು ಕಟ್ಟಿಕೊಡಲು ತಯಾರಿಯನ್ನು ತೆರೆಮರೆಯಲ್ಲಿ ನಡೆಸುತ್ತಿದ್ದಾರೆ.
ಬಾಲಿವುಡ್‌ನಲ್ಲಿ ಹೊಸ ವರುಣ:
ತೀರಾ ಇತ್ತೀಚೆಗೆ ನಿರ್ದೇಶಕ ಕಮ್ ನಿರ್ಮಾಪಕ ಕರಣ್ ಜೋಹರ್ ಅವರ ಈ ವರ್ಷ ಮೋಸ್ಟ್ ಸಕ್ಸಸ್ ಕಂಡ ಚಿತ್ರ ‘ಸ್ಟುಡೆಂಟ್ ಆಫ್ ದೀ ಇಯರ್’ ನಲ್ಲಿ ಮಿಂಚಿದ ನವತಾರೆ ವರುಣ್ ಧವನ್ ಈ ವರ್ಷ ಏಕ್ತಾ ಕಪೂರ್ ಅವರ ಬ್ಯಾನರ್‌ನಲ್ಲಿ ಮೂಡಿ ಬರುವ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳ ಸಿಗುತ್ತಿತ್ತು. ಈಗ ಈ ಸುದ್ದಿಗೆ ಮತ್ತೊಂದು ಬಂದು ಸೇರಿದೆ. ಅದೇನಪ್ಪಾ ಅಂದರೆ ವರುಣ್ ಧವನ್ ಜತೆಯಲ್ಲಿ ಅವರ ಅಪ್ಪ ನಿರ್ದೇಶಕ ಡೇವಿಡ್ ಧವನ್ ಕೂಡ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಚಿತ್ರಕ್ಕೆ ಏಕ್ತಾ ಕಪೂರ್
ಇಟ್ಟಿರುವ ಹೆಸರು ‘ಮೇ ತೇರಾ ಹೀರೋ’ ಎನ್ನುವುದು ಕೇಳಿ ಬಂದ ಮಾತು.
ಈ ಕುರಿತು ನಿರ್ದೇಶಕ ಡೇವಿಡ್ ಧವನ್ ಹೇಳುವ ಮಾತು ಹೀಗಿದೆ: ನಾನು ಬಾಲಿವುಡ್‌ನ ಬಹುತೇಕ ಮಂದಿಯ ಜತೆಯಲ್ಲಿ ಕೆಲಸ ಮಾಡಿದ್ದೇನೆ. ಅಮಿತಾಭ್‌ನಿಂದ ಹಿಡಿದು ವಿನೋದ್ ಖನ್ಹಾ, ಗೋವಿಂದ, ಸಲ್ಮಾನ್ ಎಲ್ಲರೂ ನನ್ನ ಕೆಲಸದಲ್ಲಿ ಸಾಥ್ ನೀಡಿದ್ದಾರೆ. ಆದರೆ ವರುಣ್ ಜತೆಯಲ್ಲಿ ಕೆಲಸ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ. ನಿರ್ಮಾಪಕಿ ಏಕ್ತಾ ಕಪೂರ್ ಬಂದು ಚಿತ್ರದ ಕತೆ ಹೇಳಿದಾಗ ಈ ಚಿತ್ರ ಮಾಡಲೇ ಬೇಕು ಎನ್ನುವ ಹೆಬ್ಬಯಕೆ ಮೂಡಿತು ಎಂದಿದ್ದಾರೆ.
ಟಾಲಿವುಡ್‌ನಿಂದ ಬಾಲಿವುಡ್‌ಗೆ ಚಿತ್ರ:
ಅಂದಹಾಗೆ ಬಾಲಿವುಡ್‌ನಲ್ಲಿ ತೆರೆ ಕಾಣಲಿರುವ ‘ಮೇ ತೇರಾ ಹೀರೋ’ ಚಿತ್ರ ನಿಜಕ್ಕೂ ತೆಲುಗಿನ ಸೂಪರ್ ಹಿಟ್ ಚಿತ್ರ ‘ಕಂದೀರಿಗಾ’ ದ ಪಡಿಯಚ್ಚು. ಇದನ್ನು ಬಾಲಿವುಡ್ ಶೈಲಿಗೆ ಬದಲಾಯಿಸಿಕೊಂಡು ಧವನ್ ಸಾಹೇಬ್ರು ಚಿತ್ರ ಹೊರತಾರುತ್ತಾರೆ. ಈ ಕುರಿತು ಡೇವಿಡ್ ಧವನ್ ಹೀಗೆ ಹೇಳುತ್ತಾರೆ: ಈ ಚಿತ್ರದ ಬಹುಮುಖ್ಯ ಭಾಗಗಳನ್ನು ಲಂಡನ್‌ನಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಚಿತ್ರವನ್ನು ಈ ವರ್ಷದ ಕೊನೆ ಭಾಗದಲ್ಲಿ ತೆರೆಗೆ ತರುವ ಕೆಲಸ ನಡೆಯುತ್ತದೆ. ಬಾಲಿವುಡ್ ನಲ್ಲಿ ಇದೊಂದು ಉತ್ತಮ ಮನರಂಜನೆಯಿಂದ ಕೂಡಿದ ಚಿತ್ರವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದಿದ್ದಾರೆ.
ಶತ್ರು ಪಾಳಯದಲ್ಲಿ ಹೊಸ ಬ್ಯಾನರ್:
ಬಾಲಿವುಡ್‌ನ ಹಿರಿಯ ನಟ ಶತ್ರುಘ್ನಾ ಸಿನ್ಹಾ ಅವರ ಪುತ್ರರಾದ ಲವ ಹಾಗೂ ಕುಶ ಜತೆಯಾಗಿ ‘ಶಾಟ್‌ಗನ್’ ಬ್ಯಾನರ್‌ನಡಿಯಲ್ಲಿ ಅವರ ಸಹೋದರಿ ನಟಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಕುಶ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇದೇ ಬ್ಯಾನರ್ ನಿಂದ ಜಾಕಿಶ್ರಾಫ್ ಚಿತ್ರ ಮೇರಾ ದಿಲ್ ಲೇಕೇ ದೇಕೋ ಎನ್ನುವ ಚಿತ್ರವೊಂದು ತೆರೆಗೆ ಬಂದಿತ್ತು. ಈ ಬಳಿಕ ಶಾಟ್‌ಗನ್ ಬ್ಯಾನರ್ ಹೊಸ ಚಿತ್ರಗಳನ್ನು ನಿರ್ಮಾಣ ಮಾಡುವುದರಲ್ಲಿ ಯಾವುದೇ ಆಸಕ್ತಿಯನ್ನು ತಾಳಲಿಲ್ಲ. ಈಗ ಸೋನಾಕ್ಷಿಯಿಂದ ಬ್ಯಾನರ್ ಮತ್ತೇ ಜೀವಕಳೆ ಬಂದಿದೆ.
ಬ್ಯಾನರ್ ಕುರಿತು ಹಿರಿಯ ನಟ ಶತ್ರು ಹೇಳುವಂತೆ ‘ ಇಬ್ಬರು ಸಹೋದರರ ಜತೆಯಲ್ಲಿ ಸೋನಾಕ್ಷಿ ಕೂಡ ಕೈ ಜೋಡಿಸುವುದರಿಂದ ಬ್ಯಾನರ್ ಮತ್ತೆ ಎದ್ದು ನಿಲ್ಲುತ್ತದೆ. ಅಂದಹಾಗೆ ಮೂವರಿಗೂ ನನ್ನ ಸಹಾಯದ ಅವಶ್ಯಕತೆ ಬೀಳೋದಿಲ್ಲ. ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ. ಈ ಹೊಸ ಚಿತ್ರದ ನಡುವೆ ಸೋನಾಕ್ಷಿ ಶಾಹೀದ್ ಕಪೂರ್ ಜತೆಯಲ್ಲಿ ರ‍್ಯಾಂಬೋ ರಾಜಕುಮಾರ್ ಹಾಗೂ ವನ್ಸ್ ಅಪನ್ ಟೈಮ್ ಇನ್ ಮುಂಬಯಿ -೨ ನ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದಾರೆ. ಈ ಬಳಿಕವಷ್ಟೇ ಸೋನಾಕ್ಷಿ ಸಿನ್ಹಾ ಕಾಲ್‌ಶೀಟ್ ಸಿಗೋದು ಈ ಮೂಲಕ ಶತ್ರು ಬ್ಯಾನರ್‌ನ ಚಿತ್ರ ಈ ವರ್ಷವಂತೂ ತೆರೆಗೆ ಬರುವ ಸಾಧ್ಯತೆ ಇಲ್ಲ ಎಂದಾಯಿತು.
....
vk lvk published dis article on 10.1.2013)
......
ಹಾಲಿವುಡ್ ನ "ಕಿಮ್’ ಎದೆಗಾರಿಕೆ
ಕಿಮ್ ಕದರ್ಶಿಯನ್ ಇದು ಪಕ್ಕಾ ಹಾಲಿವುಡ್ ಇಂಡಸ್ಟ್ರಿಯ ಹಾಟೇಸ್ಟ್ ಪ್ರಾಪರ್ಟಿ. ಕಿಮ್ ಎಂದರೆ ಹಾಗೇ ಚಳಿಗಾಲದಲ್ಲೂ ಪುರುಷ ಮೃಗಗಳ ದೇಹದಲ್ಲಿ ಬೆವರು ಹುಟ್ಟಿಕೊಳ್ಳುತ್ತದೆ. ಕಿಮ್ ಈಗ ತುಂಬು ಗರ್ಭಿಣಿ. ಆದರೆ ಮದುವೆಯಾಗುವ ಯೋಚನೆ ಇಟ್ಟುಕೊಂಡಿಲ್ಲ.
* ಸ್ಟೀವನ್ ರೇಗೊ, ದಾರಂದಕುಕ್ಕು
ಕಿಮ್ ಕದರ್ಶಿಯನ್ ಇದು ಪಕ್ಕಾ ಹಾಲಿವುಡ್ ಇಂಡಸ್ಟ್ರಿಯ ಹಾಟೇಸ್ಟ್ ಪ್ರಾಪರ್ಟಿ. ಕಿಮ್ ಎಂದರೆ ಹಾಗೇ ಚಳಿಗಾಲದಲ್ಲೂ ಪುರುಷ ಮೃಗಗಳ ದೇಹದಲ್ಲಿ ಬೆವರು ಹುಟ್ಟಿಕೊಳ್ಳುತ್ತದೆ. ಕಿಮ್ ಕದರ್ಶಿಯನ್ ಎನ್ನುವ ಪುಟ್ಟ ಹೆಸರನ್ನು ಹಾಗೆನೇ ಗೂಗಲ್ ಎನ್ನುವ ಜಾಲಾಡುವ ಬಲೆಯಲ್ಲಿ ಹಾಕಿಬಿಡಿ. ಥಟ್ ಅಂತಾ ಕಿಮ್ ಜನ್ಮ ಕುಂಡಳಿ ನಿಮ್ಮ ಮುಂದೆ ಹಾಜರಾಗಿ ಹೋಗುತ್ತದೆ. ಕಿಮ್ ಎನ್ನುವ ಸುಂದರಿಯನ್ನು ಬಹಳ ಜನ ಲೈಕ್ ಮಾಡುವುದು ಒಂದೇ ವಿಚಾರಕ್ಕೆ ಜಗತ್ತಿನಲ್ಲಿ ಅತ್ಯಂತ ಸುಂದರ ನಿತಂಬವುಳ್ಳ ನಟಿ ಎನ್ನುವ ಟ್ಯಾಗ್ ಲೈನ್ ಅವಳ ಹೆಸರಿನಲ್ಲಿ ಜತೆಯಲ್ಲಿ ಅಂಟಿಕೊಂಡಿದೆ.
ಸುಂದರ ನಿತಂಬಗಳ ಕುರಿತಾಗಿ ಹಾಲಿವುಡ್ ಅಂಗಳದಲ್ಲಿ ಸ್ಪರ್ಧೆಯೊಂದು ನಡೆದಿತ್ತು. ಅದರಲ್ಲಿ ಗೆಲ್ಲುವ ಕುದುರೆ ಯಾವುದು ಎನ್ನುವ ಕುತೂಹಲದ ಪ್ರಶ್ನೆಗೆ ಕಿಮ್ ಕರ್ದಶಿಯನ್ ಹಾಗೂ ಜೆನ್ನಿಫರ್ ಲೋಪೆಜ್ ಎಂಬ ಉತ್ತರ ಥಟ್ಟನೆ ಬಂದು ಬಿಟ್ಟಿತ್ತು. ಅದರಲ್ಲೂ ಕಿಮ್ ನಿತಂಬದ ನೈಜತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸುಂದರ ಶೇಪ್ ನ ಈ ನಿತಂಬದಲ್ಲಿ ನೈಜತೆ ಇಲ್ಲ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದರೂ ಇರಬಹುದು ಎಂದು ಸುದ್ದಿ ಹಬ್ಬಿತ್ತು.
ಕಿಮ್ ಸುಂದರ ನಿತಂಬಗಳ ರಹಸ್ಯ:
ಇದಕ್ಕೆ ಉತ್ತರವಾಗಿ ೩೨ ವರ್ಷದ ನಟಿ ಕಿಮ್ ತಮ್ಮ ನಿತಂಬದ ಎಕ್ಸ್ ರೇ ತೆಗೆಸಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಿ ಮುಗುಳು ನಕ್ಕಿದ್ದರು. ಈ ಮೂಲಕ ನನ್ನ ದೇಹದಲ್ಲಿ ಯಾವುದೇ ಭಾಗ ಸಿಲಿಕಾನ್ ಅಂಶ ಸೇರಿಸಿಲ್ಲ. ಪ್ಲಾಸ್ಟಿಕ್ ಸರ್ಜರಿ ಮೂಲಕ ನಿತಂಬದ ಗಾತ್ರ ಹಿಗ್ಗಿಸಿಲ್ಲ. ಬೇಕಾದರೆ ಎಕ್ಸ್ ರೇ ರಿಪೋರ್ಟ್ ಇದೆ ನೋಡಿ ಎಂದು ಅಭಿಮಾನಿಗಳಲ್ಲಿ ಕಳಕಳಿಯಿಂದ ಕೇಳಿಕೊಂಡಿದ್ದರು.
ಜನಪ್ರಿಯ ಸರಣಿ ಕೀಪಿಂಗ್ ಅಪ್ ವಿಥ್ ಕದರ್ಶಿಯನ್ಸ್ ನಲ್ಲಿ ತನ್ನ ಕರ್ವ್ ನೈಸರ್ಗಿಕವಾದದ್ದು ಎಂದು ಸಾಬೀತು ಪಡಿಸಿದ್ದಳು. ಕಿಮ್ ತಂಗಿ ಕೊಹ್ಲೆ ತನ್ನ ಟ್ವೀಟ್ ನಲ್ಲಿ ಅಕ್ಕನ ನಿತಂಬ ೧೦೦% ನೈಜವಾದದ್ದು ಎಂದು ಘೋಷಿಸಿಕೊಂಡಿದ್ದಳು. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿಲ್ಲ ಬೊಟೆಕ್ಸ್ ಇಂಜೆಕ್ಷನ್ ಬಳಸಿದ್ದೆ. ಆಮೇಲೆ ಅಲರ್ಜಿ ಆದ ಮೇಲೆ ಬಿಟ್ಟು ಬಿಟ್ಟೆ ಎಂದು ಕಿಮ್ ಟ್ವಿಟ್ ಲೋಕದಲ್ಲಿ ಮಾತುಕತೆಯ ಮೂಲಕ ಅಭಿಮಾನಿಗಳ ಎದೆಗೂಡಿನಲ್ಲಿ ಹವಾ ಹುಟ್ಟುಹಾಕುತ್ತಿದ್ದಳು.
ಕಿಮ್ ಮದುವೆಗೂ ಮುಂಚೆ ಗರ್ಭಿಣಿ:
ಆ ವಿಚಾರದಲ್ಲಿ ಹಾಗೆನೇ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತ ಗ್ಯಾರಂಟಿ. ಎಲ್ಲರೂ ಹೇಳಿಕೊಳ್ಳುತ್ತಿರುವ ಮಾತು ಒಂದೇ ಆಕೆ ಒಂಚೂರು ಜಾಗ್ರತೆ ವಹಿಸಬೇಕಾಗಿತ್ತು. ಬೇಡದ ಗರ್ಭ ತಡೆಯಲು ಎಷ್ಟೆಲ್ಲಾ ಮಾರ್ಗೋಪಾಯಗಳಿವೆ. ಈಕೆಗೆ ಅಷ್ಟೂ ಗೊತ್ತಾಗಲಿಲ್ಲವೆ? ಎಂದು ಆಕೆಯ ಅಭಿಮಾನಿಗಳು, ಹಿತೈಷಿಗಳು ಅವಳನ್ನು ಹುಡುಕಿಕೊಂಡು ಪ್ರಶ್ನೆ ಕೇಳುತ್ತಿದ್ದರು. ಹಾಲಿವುಡ್ ನ ಜನಪ್ರಿಯ ತಾರೆ ಕಿಮ್ ಕರ್ದಾಶಿಯನ್ ತುಂಬಿದ ಗರ್ಭಿಣಿ.
ಖ್ಯಾತ ಗಾಯಕ ಕೇನ್ ಸೆಟ್ ಜತೆ ಕೆಲ ತಿಂಗಳಿಂದ ಕಿಮ್ ಡೇಟಿಂಗ್ ಮಾಡುತ್ತಿದ್ದರು. ಆದರೆ ಇವರಿಬ್ಬರು ಅದ್ಯಾವ ಘಳಿಗೆಯಲ್ಲಿ ಮೈಮರೆತರೋ ಏನೋ, ತಪ್ಪು ನಡೆದುಹೋಗಿದೆ. ಈಕೆ ಈಗ ತುಂಬು ಗರ್ಭಿಣಿ. ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಕಿಮ್ ಬಾಯ್ ಫ್ರೆಂಡ್ ಕೇನ್ ವೆಸ್ಟ್ ಮಾತನಾಡುತ್ತಾ ಆಕೆ ಗರ್ಭಿಣಿ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ಮೂವತ್ತೆರಡರ ಹರೆಯದ ಕಿಮ್ ಹಾಗೂ ಕೇನ್ ವೆಸ್ಟ್ ಇಬ್ಬರ ನಡುವೆ ಹತ್ತು ವರ್ಷಗಳಷ್ಟು ಪರಿಚಯವಿದೆ. ಆದರೆ ಕಳೆದ ಕೆಲ ತಿಂಗಳಿಂದಷ್ಟೇ ಡೇಟಿಂಗ್ ಮಾಡುತ್ತಿದ್ದರು.
ಇದಕ್ಕೂ ಮುನ್ನ ಫುಟ್ ಬಾಲ್ ಪಟು ಕ್ರಿಸ್ ಹಂಪ್ರೆಸ್ ಅವರನ್ನು ಮದುವೆಯಾಗಿದ್ದರು. ಆದರೆ ಅದೇನಾಯಿತೋ ಏನೋ ಕೇವಲ ೭೨ ದಿನಗಳಲ್ಲೇ ವಿವಾಹ ವಿಚ್ಛೇದನದ ಮೂಲಕ ಇಬ್ಬರೂ ಬೇರ್ಪಟ್ಟರು. ಕೇನ್ ಜೊತೆ ಹೊಸ ಸಂಬಂಧ ಬೆಳೆಸಿದ ಕಿಮ್, ನಮ್ಮಿಬ್ಬರ ದಾಂಪತ್ಯ ಹಾಗೂ ಪ್ರಣಯ ಜೀವನ ಸುಖಕರವಾಗಿರುತ್ತದೆ. ಇದಕ್ಕೆ ನಮ್ಮಿಬ್ಬರ ನಡುವಿನ ಸ್ನೇಹ ಸಂಬಂಧ ಇನ್ನಷ್ಟು ಸಹಕರಿಸುತ್ತದೆ. ನಮ್ಮಿಬ್ಬರ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಶೀಘ್ರವೇ ನಮ್ಮ ಮದುವೆ ನಡೆಯುತ್ತದೆ ಎನ್ನುವ ಮೂಲಕ ತನ್ನ ಗರ್ಭಿಣಿತನಕ್ಕೆ ಉತ್ತರ ನೀಡಿದ್ದಳು.
ಕಿಮ್ ಹಾಗೂ ಸರಸ:
೨೦೦೭ರ ಫೆಬ್ರವರಿ ತಿಂಗಳಲ್ಲಿ ಕಿಮ್ ಹಾಗೂ ಸಿಂಗರ್ ರೇ ಜೇ ಜತೆಗಿನ ಸರಸ ಸಲ್ಲಾಪದ ವಿಡಿಯೋ ತುಣುಕೊಂದು ಬಟಾ ಬಯಲಾಗಿ ಹೋಯಿತು. ಇದು ಇಡೀ ಹಾಲಿವುಡ್ ಲೋಕದಲ್ಲಿಯೇ ಸಂಚಲನ ಮೂಡಿಸಿದ ಪ್ರಕರಣವಾಗಿ ನಂತರದ ದಿನಗಳಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಬಯಲು ಮಾಡಿದ ಕಂಪನಿಗೆ ಕಿಮ್ ನ್ಯಾಯಾಂಗದ ಮೂಲಕ ಉತ್ತರ ಕೊಟ್ಟು ಕಂಪನಿಯಿಂದ ಬರೋಬರಿ ೫ ಮಿಲಿಯನ್ ಡಾಲರ್ ತನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಇಳಿಸಿಕೊಂಡಳು. ೨೦೦೭ರ ಡಿಸೆಂಬರ್ ತಿಂಗಳ ಪ್ಲೇಬಾಯ್ ಪುರುಷರ ಮ್ಯಾಗಜೀನ್ ನ ಮುಖಪುಟದಲ್ಲಿ ತನ್ನ ಸಹಜ ಸೌಂದರ್ಯದ ಗಣಿಯನ್ನು ಬಿಚ್ಚಿ ಅಭಿಮಾನಿ ಸಮೂಹಕ್ಕೆ ಮತ್ತೆ ದಂಗು ಮೂಡಿಸಿ ಹೋದಳು. ಈ ಬಳಿಕ ಬಟ್ಟೆಯಂತೆ ಹುಡುಗರನ್ನು ಬದಲಾಯಿಸುತ್ತಾ ಹೋದ ಕಿಮ್ ನೆಚ್ಚಿನ ಗೆಳತಿ ಯಾರು ಗೊತ್ತಾ..? ಅವಳೇ ಸಕಲ ಕಲಾ ವಲ್ಲಭೆ ಪ್ಯಾರಿಸ್ ಹಿಲ್ಟನ್ !
ಚಳಿಗಾಲದಲ್ಲಿ ಹಾಟ್ ಮಾಲು:
ಅತ್ಯಂತ ಸಹಜ ನಿತಂಬಗಳ ಸುಂದರಿ ಎಂದು ಬಿಂಬಿಸಿಕೊಂಡಿರುವ ಹಾಲಿವುಡ್ ಬೆಡಗಿ ಕಿಮ್ ಕರ್ದಶಿಯನ್ ಚಳಿಗಾಲದಲ್ಲಿ ತೀರಾ ಹತ್ತಿರವಾಗಿ ಹೋಗುತ್ತಾರೆ. ಯಾಕ್ ಅಂತೀರಾ..ಚಳಿಗಾಲದಲ್ಲಿಯೇ ಕಿಮ್ ತನ್ನ ಬಿಕಿನಿ ಕಲೆಕ್ಷನ್ ಗಳ ಮಾಲನ್ನು ಹೊರಹಾಕುತ್ತಾರೆ. ಪ್ರತಿ ವರ್ಷನೂ ತಮ್ಮ ಮಾದಕ ಮೈಮಾಟವನ್ನು ದಟ್ಟ ನೀಲಿ ಬಿಕಿನಿಯಲ್ಲಿ ಪ್ರದರ್ಶಿಸುತ್ತಾರೆ. ಕಳೆದ ವರ್ಷ ಕರ್ದಶಿಯನ್ ಕಲೆಕ್ಷನ್ ನ ಈ ಈಜುಡುಗೆ ತೊಡುಗೆಗಳಲ್ಲಿ ಕಿಮ್ ತಮ್ಮ ಮಾದಕ ಮೈಮಾಟವನ್ನು ಪ್ರದರ್ಶಿಸಿದ್ದರು. ಜೊತೆಗೆ ಈಕೆಯ ಸಹೋದರಿಯರಾದ ಕೌರ್ಟ್ನಿ ಹಾಗೂ ಖೋಲ್ ಕೂಡ ಸಾಥ್ ನೀಡಿದ್ದರು. ವರ್ಷ ಪೂರ್ತಿ ಕಿಮ್ ಅಭಿಮಾನಿಗಳಿಗಂತೂ ಈ ಬಿಕಿನಿ ಚಿತ್ರಗಳು ಚಳಿಗಾಲದಲ್ಲಿ ಮದಿರೆಯ ಜತೆಗೆ ನಾಲಗೆ ಸವರಿಕೊಳ್ಳಲು ಸಾಥ್ ನೀಡುವ ಉಪ್ಪಿನ ಕಾಯಿಯಂತೆ ಮಜಬೂತಾಗಿರುತ್ತದೆ ಎನ್ನುವುದು ಅಭಿಮಾನಿಗಳಿಂದ ಹೊರ ಬಂದ ಮಾತು.
...
( vk lvk published dis article on 8.01.2013)
Subscribe to:
Posts (Atom)










