Sunday, May 20, 2012

ಹುಡುಗರು ಮಾಡಿದ ರೇಡಿಯೋ ಇಡ್ಲಿ !

ರೇಡಿಯೋ ಇಡ್ಲಿ ! ಇದು ಖಂಡಿತವಾಗಿಯೂ ತಿನ್ನುವ ಇಡ್ಲಿ ಅಲ್ಲ ಮಾರಾಯ್ರೆ. ಕುಡ್ಲದ ಇಬ್ಬರು ಹುಡುಗರು ರೇಡಿಯೋ ಇಡ್ಲಿ ಮೂಲಕ ಜಸ್ಟ್ ಕ್ಲಿಕ್ ಆಗಿದ್ದಾರೆ. ಪುಟ್ಟ ಕೊಂಕಣಿ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಕೊಡಿಸುತ್ತಿದ್ದಾರೆ. ಓವರ್ ಟು ಬಾಯ್ಸ್...
ತುಂಬಾನೇ..ನಾಜೂಕು ಅಷ್ಟೇ ಮೃದು...ಕೊಂಚ ಪರಿಮಳ ಜತೆಯಲ್ಲಿ ಒಂದಿಷ್ಟು ಆಯತಪ್ಪಿದ ಆಕೃತಿ. ಇದು ಇಡ್ಲಿಯ ಬಗ್ಗೆ ಸಾಮಾನ್ಯನ ತಲೆಯೊಳಗೆ ಮೂಡುವ ಕಾನ್ಸೆಪ್ಟ್ ತಾನೇ..? ಈಗ ಇಡ್ಲಿಯ ಮಾತು ಬದಿಗಿಡಿ. ಕರಾವಳಿ ಮೂಲದ ಹುಡುಗರಿಬ್ಬರು ಇದೇ ಕುಡ್ಲದ ಟೇಸ್ಟಿ ವಿದ್ ಸಾಫ್ಟಿ ಇಡ್ಲಿಯನ್ನು ಮಾರಾಟ ಮಾಡುತ್ತಿದ್ದಾರೆ. ಮೂಲ್ಕಿ ಹಾಗೂ ಕಾಸರಗೋಡಿನ ಟಚ್ ಇದ್ದ ಮುಂಬಯಿಯ ಜಿಎಸ್‌ಬಿ ಹುಡುಗ ನಾಗೇಶ್ ರಾಮಚಂದ್ರ ಪೈ ಹಾಗೂ ಮುಂಬಯಿಯಲ್ಲಿ ಹುಟ್ಟಿ ಬೆಳೆದು ಈಗ ಅಮೆರಿಕದ ಖ್ಯಾತ ಸಾಫ್ಟ್‌ವೇರ್ ಕಂಪನಿಯಲ್ಲಿ ದುಡಿಯುತ್ತಿರುವ ಕೃಷ್ಣಾನಂದ ನಾಯಕ್ ( ಸಂಕಲ್ಪ ನಾಯಕ್) ಈ ರೀತಿಯ ಇಡ್ಲಿ ಮಾರಾಟದಲ್ಲಿ ತಲ್ಲೀನರಾಗಿದ್ದಾರೆ. ಜಿಎಸ್‌ಬಿ ಸಮುದಾಯದ ಭಾಷೆಗಾಗಿ ೨೦೦೭ರಲ್ಲಿ ‘ರೇಡಿಯೋ ಇಡ್ಲಿ’ ಎಂಬ ಹೊಸ ಬ್ಲಾಗ್ ಕಣ್ಣು ತೆರೆಯಿತು. ೨೦೦೮ರಲ್ಲಿ ಇದೇ ‘ರೇಡಿಯೋ ಇಡ್ಲಿ ’ ಸೈಟ್ ರೂಪಕ್ಕೆ ತಿರುಗಿತು. ಈಗ ಈ ಸೈಟ್‌ಗೆ ಭೇಟಿ ನೀಡುವ ಮಂದಿ ದಿನವೊಂದಕ್ಕೆ ಸುಮಾರು ೩ ಸಾವಿರ ದಾಟ ಬಹುದು. ಕಳೆದ ಮೂರು ವರ್ಷಗಳಿಂದ ಈ ಸೈಟ್‌ನ ಮೂಲಕ ಜಿಎಸ್‌ಬಿ ಸಮುದಾಯದ ಪ್ರತಿಭಾವಂತ ಗಾಯಕ- ಗಾಯಕಿಯರಿಗೆ ಒಂದು ವೇದಿಕೆಯನ್ನು ನೀಡಿದ್ದಾರೆ. ವಿದೇಶದಲ್ಲಿ ಕೂತು ಕೂಡ ರಥಬೀದಿಯಲ್ಲಿರುವ ವೆಂಕಟರಮಣ ದೇವರ ತೇರು ಯೂ ಟ್ಯೂಬ್ ಮೂಲಕ ನೋಡುವ ಭಾಗ್ಯವನ್ನು ಈ ಸೈಟ್ ಕರುಣಿಸಿದೆ. ಜಿಎಸ್‌ಬಿಯ ಅಡುಗೆ ಮನೆಯಲ್ಲಿ ಶಾಲಿನಿ ಗಡಿಯಾರ್ ಅವರ ಕೈಯಲ್ಲಿ ಜಿಎಸ್‌ಬಿಯ ವೈವಿಧ್ಯಪೂರ್ಣವಾದ ಖಾದ್ಯಗಳು ತಯಾರಾಗುತ್ತಿದೆ. ಈ ಖಾದ್ಯಗಳಿಗೆ ತಕ್ಕಂತೆ ಡಯಾಟಿಷನ್‌ನಿಂದ ಸಲಹೆ ಸೂಚನೆಗಳಿವೆ. ಯೂತ್ ಬೇಸ್ಡ್ ಫೇಸ್ ಬುಕ್, ಟ್ವಿಟ್ಟರ್, ಕಲ್ಚರಲ್ ಇವೆಂಟ್ ಹೀಗೆ ಬೇರೆ ಸೈಟ್‌ಗಳಿಗಿಂತ ಭಿನ್ನರೂಪದಲ್ಲಿ ರೇಡಿಯೋ ಇಡ್ಲಿ ಕಾಣಿಸಿಕೊಳ್ಳುತ್ತದೆ. ಜಿಎಸ್‌ಬಿ ಮಾತ್ರವಲ್ಲದೇ ಚಿತ್ಪಾವನ್ ಬ್ರಾಹ್ಮಣ ಹಾಗೂ ಇತರ ಸಬ್ ಕಾಸ್ಟ್‌ಗಳ ವಿಶೇಷ ರೀತಿಯ ಕಲಾವೈವಿಧ್ಯ, ಸಂಸ್ಕೃತಿ, ಭಾಷಾ ಸೊಗಡು ಜತೆಯಲ್ಲಿ ದೇವಸ್ಥಾನದ ತೇರು, ಲೈವ್ ಕಾನ್ಸರ್ಟ್‌ಗಳು, ವಿಶೇಷ ವರದಿಗಳು, ಪ್ರತಿಭಾವಂತ ಜಿಎಸ್‌ಬಿ ಗಾಯಕ- ಗಾಯಕಿಯರ ಧ್ವನಿ ಸುರುಳಿಗಳಿಂದ ಹಾಡುಗಳು ಎಲ್ಲವೂ ಒಂದೇ ತಾಣದಲ್ಲಿ ರೆಡಿ ಮೇಡ್ ಆಗಿ ಸಿಗುತ್ತದೆ. ಕರಾವಳಿಯ ಕೊಂಕಣಿ ಪರಂಪರೆಯ ಬಗ್ಗೆ ಹಿರಿಯ ಕೊಂಕಣಿ ವಿದ್ವಾಂಸರು ಬರೆದ ಲೇಖನಗಳು ಸೈಟ್‌ಗೆ ಭೇಟಿ ನೀಡುವ ವೀಕ್ಷಕರಿಗೆ ಲಭ್ಯವಾಗುತ್ತಿದೆ. ಜಿಎಸ್‌ಬಿ ಕೊಂಕಣಿ ಸಮುದಾಯದ ಪುಟ್ಟ ಗ್ರಂಥಾಲಯದಂತೆ ಈ ಸೈಟ್ ಕೆಲಸಮಾಡುತ್ತಿದೆ. ಅಂದಹಾಗೆ ರೇಡಿಯೋ ಇಡ್ಲಿಗೆ ಬರುವವರು ಕ್ಲಿಕ್ ಮಾಡಿ. ಡಿಡಿಡಿ.Zbಜಿಟಜಿbಜಿ.ಛಿಠಿ ?eಠಿಠಿm://ಡಿಡಿಡಿ.Zbಜಿಟಜಿbಜಿ.ಛಿಠಿ/| ರೇಡಿಯೊ ಇಡ್ಲಿ ಎಲ್ಲಿಂದ ಬಂತು ! ಮುಂಬಯಿಯ ಮಾಟುಂಗಾದಲ್ಲಿ ‘ಇಡ್ಲಿ ಹೌಸ್’ಎಂಬ ಚೈನ್ ಹೋಟೆಲ್‌ಗಳಿವೆ. ಅಲ್ಲಿ ಐವತ್ತಕ್ಕಿಂತ ಹೆಚ್ಚು ಬಗೆಯ ಇಡ್ಲಿ ಹಾಗೂ ಫಿಲ್ಟರ್ ಕಾಫಿಯನ್ನು ನೀಡಲಾಗುತ್ತದೆ. ಮುಂಬಯಿಯಲ್ಲಿ ಉಡುಪಿ ಹೊಟೇಲ್‌ಗಳ ಜನಕ ಎಂದೇ ಖ್ಯಾತರಾದ ರಾಮ ನಾಯಕ್ ಅವರ ಮಾಲೀಕತ್ವದಲ್ಲಿ ಈ ಹೊಟೇಲ್‌ಗಳು ಕುಡ್ಲ, ಉಡುಪಿ ಶೈಲಿಯ ಆಹಾರವನ್ನು ನೀಡುತ್ತಿದೆ. ಸಂಕಲ್ಪ ಹಾಗೂ ನಾಗೇಶ್ ಈ ಹೊಟೇಲ್‌ಗೆ ಒಂದು ಬಾರಿ ಭೇಟಿ ನೀಡಿ ಇಡ್ಲಿ ತಿನ್ನುತ್ತಿದ್ದಾಗ ಅವರ ತಲೆಯಲ್ಲಿ ಇಡ್ಲಿಯ ಮೇಲೆ ಒಂದು ಸೈಟ್ ಮಾಡುವ ಯೋಚನೆ ಬಂತು ಅಂತೆ! ಕರಾವಳಿ ಹಾಗೂ ಇತರ ಪ್ರದೇಶದಲ್ಲಿ ಹರಡಿಕೊಂಡಿರುವ ಜಿಎಸ್‌ಬಿ ಸಮುದಾಯವನ್ನು ಅಭಿವೃದ್ಧಿ ಪಡಿಸುವ ಹಾಗೂ ಅದರಲ್ಲಿರುವ ಪ್ರತಿಭಾವಂತರನ್ನು ಹೊರಗೆ ತರುವ ಕಾರ‍್ಯಕ್ಕೆ ರೇಡಿಯೋ ಇಡ್ಲಿ ಎಂಬ ಸೈಟ್ ಕ್ಲಿಕ್ ಆಯಿತು. ನಂತರ ಜಿಎಸ್‌ಬಿ ಸಮುದಾಯದ ಯುವ ಗಾಯಕ- ಗಾಯಕಿಯರ ಹಾಡುಗಳನ್ನು ರೆಕಾರ್ಡ್ ಮಾಡಿ ಈ ಸೈಟ್‌ನಲ್ಲಿ ಆಪ್‌ಲೋಡ್ ಮಾಡಿ ನಾನಾ ದೇಶಗಳಲ್ಲಿ ಹರಡಿಕೊಂಡಿರುವ ಜಿಎಸ್‌ಬಿ ಸಮುದಾಯಕ್ಕೆ ಕಳುಹಿಸುವ ಮಧ್ಯವರ್ತಿಗಳಾಗಿ ಕಾರ‍್ಯ ನಿರ್ವಹಣೆಗೆ ಇಳಿಯಿತು ಎನ್ನುತ್ತಾರೆ ಇದರ ರೇಡಿಯೋ ಇಡ್ಲಿಯ ಮುಖ್ಯಸ್ಥ ನಾಗೇಶ್ ಆರ್. ಪೈ. ರೇಡಿಯೊದಲ್ಲಿ ಹೊಸತು ಏನಿದೆ..? ನಾಗೇಶ್ ಹಾಗೂ ಸಂಕಲ್ಪ ಇಬ್ಬರು ತುಂಬಾ ಬ್ಯುಸಿ ಪರ್ಸನ್‌ಗಳು. ನಾಗೇಶ್ ಎಸ್‌ಬಿಐ ಮ್ಯೂಚುವಲ್ ಪಂಡ್‌ನಲ್ಲಿ ಇಂಟರ್‌ನೆಟ್ ಸೆಕ್ಷನ್‌ನ ಹೆಡ್ ಆಗಿ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಕಲ್ಪ ನಾಯಕ್ ಐಟಿಯವರು ಈಗ ಅಮೆರಿಕದಲ್ಲಿದ್ದಾರೆ. ಇಬ್ಬರು ಇಂಟರ್‌ನೆಟ್ ಮೂಲಕ ಚಾಟಿಂಗ್ ಮಾಡಿಕೊಂಡು ಈ ರೇಡಿಯೊ ಇಡ್ಲಿಯನ್ನು ಈಗ ನಡೆಸುತ್ತಿದ್ದಾರೆ. ಆದರೆ ಮೊದಲು ೧೫ ದಿನಗಳಿಗೊಮ್ಮೆ ಈ ಸೈಟ್ ಆಪ್‌ಲೋಡ್ ಮಾಡುವ ಪ್ರಮೇಯ ಇತ್ತು. ಈಗ ಪ್ರತಿ ವಾರಕ್ಕೊಂದು ಸಾರಿ ವೀಕೆಂಡ್ ಟೈಮ್‌ನಲ್ಲಿ ಆಪ್‌ಲೋಡ್ ಮಾಡುವ ಪರಂಪರೆ ಬಂದಿದೆ. ............ * ಸ್ಟೀವನ್ ರೇಗೊ, ದಾರಂದಕುಕ್ಕು ...............

1 comment:

  1. Steevan Rego ,
    Great to see your blog ! I often read your articles in VK!

    cheers,
    Archana

    ReplyDelete