Tuesday, May 15, 2012

ನನ್ನಪತ್ರಿಕೆ ನನ್ನ ಮಾತು..

ಸುಗತ ಶ್ರೀನಿವಾಸ್‌ರಾಜು
ನನ್ನ ಬದುಕಿಗೆ ರೂಪುಕೊಟ್ಟ ರಾಜ್ಯದ ನಂಬರ್‌ವನ್ ಪತ್ರಿಕೆ ವಿಜಯಕರ್ನಾಟಕದ ಹೊಸ ಸಂಪಾದಕರು. ಸುಗತ ಈಗಾಗಲೇ ಆಂಗ್ಲ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಔಟ್‌ಲುಕ್‌ನಲ್ಲಿ ದುಡಿದವರು. ಅದರಲ್ಲೂ ಮುಖ್ಯವಾಗಿ ಖ್ಯಾತ ಪತ್ರಕರ್ತರಾದ ವಿನೋದ್ ಮೆಹ್ತಾ ಅವರ ತಂಡದಲ್ಲಿದ್ದ ಉತ್ಸಾಹಿ ಪತ್ರಕರ್ತ. ವಿಜಯ ಕರ್ನಾಟಕ ಪತ್ರಿಕೆ ಮಾಡುತ್ತಿರುವ ಹೊಸ ಮಾದರಿ ಪ್ರಯತ್ನಗಳಿಂದ ಈಗಾಗಲೇ ರಾಜ್ಯದಲ್ಲಿಯೇ ಮೊದಲ ಸ್ಥಾನ ಉಳಿಸಿಕೊಂಡು ತನ್ನ ಸಾಮರ್ಥ್ಯ ಹಾಗೂ ಪ್ರಾಬಲ್ಯತೆಯನ್ನು ಮೆರೆದಿದೆ.
ಸುಗತ ಬಂದ ನಂತರನೂ ಈ ಕೆಲಸ ಮುಂದುವರಿಯುವ ಎಲ್ಲ ಸಾಧ್ಯತೆಗಳು ಮತ್ತಷ್ಟೂ ದಟ್ಟವಾಗುವ ಸಾಧ್ಯತೆ ಇದೆ. ಬರಹಗಾರನಾಗಿ, ಹವ್ಯಾಸಿ ಪತ್ರಕರ್ತರಾಗಿ ಅದಕ್ಕೂ ಮುಖ್ಯವಾಗಿ ಕ್ಯಾಮೆರಾದಲ್ಲಿ ಕಣ್ಣುಗಳನ್ನು ನೆಟ್ಟ ಸುಗತ ಶ್ರೀನಿವಾಸ್‌ರಾಜು ವಿ.ಕ.ದ ಪಾಲಿಗೊಂದು ವರದಾನ ಎಂದೇ ಹೇಳಬಹುದು. ಅಂದಹಾಗೆ ಸುಗತ ಕುರಿತು ಸರಿಯಾಗಿ ತಿಳಿಯಬೇಕಾದರೆ ಅವರ ಬ್ಲಾಗ್‌ಗೊಮ್ಮೆ ಭೇಟಿ ಕೊಟ್ಟು ನೋಡಿ. www.sugataraju.blogspot.com ಟೋಟಲಿ ಸುಗತ ಎನ್ನುವ ಸರಳ, ಧನಾತ್ಮಕ ಚಿಂತನೆಯ ವ್ಯಕ್ತಿಯೊಬ್ಬರು ಇಲ್ಲಿ ಕಾಣ ಸಿಗುತ್ತಾರೆ. ನನ್ನ ಹೊಸ ಬಾಸ್‌ಗೆ ಕಂಗ್ರಾಟ್ಸ್ .. ವಿ.ಕ.ದಲ್ಲಿ ಮತ್ತಷ್ಟೂ hosa ಅವತಾರವನ್ನು ತಾಳಲಿ ಎನ್ನೋದು ನನ್ನ ಕನಸು.. ಸ್ಟೀವನ್ ರೇಗೊ, ದಾರಂದಕುಕ್ಕು ರೇಗೋ ಬಾಲ್ಕನಿ

No comments:

Post a Comment