Thursday, May 10, 2012

ರೇಡಿಯೋ ‘ಮಿರ್ಚಿ’ ಯಲ್ಲಿ ಬ್ರೇಕಿಂಗ್ ನ್ಯೂಸ್ !

ನಂಬರ್‌ವನ್ ಖಾಸಗಿ ಎಪ್‌ಎಂವಾಹಿನಿ ರೇಡಿಯೋ ಮಿರ್ಚಿಯಲ್ಲಿ ಕಾರ‍್ಯಕ್ರಮಗಳಲ್ಲಿ ಕೇಳುವರಿಗೆ ಗುರುವಾರ ಬ್ರೇಕಿಂಗ್ ನ್ಯೂಸ್ ಕಾದಿತ್ತು. ಎಲೆಕ್ಕ್ರಾನಿಕ್ ಮಾಧ್ಯಮಗಳ ಜತೆಗಿನ ದಿನಾಲೂ ಒದ್ದಾಡುವ ಪದವೊಂದು ಯಾಕ್ ಅಂತಾ ರೇಡಿಯೋದಲ್ಲಿ ಬಂತು ಅಂತೀರಾ..? ಜಸ್ಟ್ ಡಿಟೇಲ್‌ಗೆ ಓದಿ ನೋಡಿ.... ನಗರದ ನಂಬರ್‌ವನ್ ಖಾಸಗಿ ಎಪ್‌ಎಂವಾಹಿನಿ ರೇಡಿಯೋ ಮಿರ್ಚಿಯಲ್ಲಿ ಕಾರ‍್ಯಕ್ರಮಗಳಲ್ಲಿ ಕೇಳುವರಿಗೆ ಗುರುವಾರ ಬ್ರೇಕಿಂಗ್ ನ್ಯೂಸ್ ಕಾದಿತ್ತು. ಎಲೆಕ್ಕ್ರಾನಿಕ್ ಮಾಧ್ಯಮಗಳ ಜತೆಗಿನ ದಿನಾಲೂ ಒದ್ದಾಡುವ ಪದವೊಂದು ಯಾಕ್ ಅಂತಾ ರೇಡಿಯೋದಲ್ಲಿ ಬಂತು ಅಂತೀರಾ..? ಅದರಲ್ಲೂ ರೇಡಿಯೋದಲ್ಲೂ ಇನ್ನೂ ಮುಂದೆ ಬ್ರೇಕಿಂಗ್ ನ್ಯೂಸ್ ಬರ‍್ತಾ..? ಎನ್ನುವ ಪ್ರಶ್ನೆಗಳ ಬಾಣವನ್ನು ಬಿಡುವ ಮೊದಲು ಜಸ್ಟ್ ಹೋಲ್ಡ್ ಆನ್ ಇದು ಬ್ರೇಕಿಂಗ್ ನ್ಯೂಸ್ ಚಿತ್ರದ ಕುರಿತು ಮಾತು. ಮಂಗಳೂರಿನ ಸ್ಟಾರ್ ರೇಡಿಯೋ ವಾಹಿನಿ ರೇಡಿಯೋ ಮಿರ್ಚಿಯ ದಿನಚರಿ ಗುರುವಾರ ಬದಲಾಗಿತ್ತು. ದಿನನಿತ್ಯದ ಕಾರ‍್ಯಕ್ರಮಗಳ ಜತೆಯಲ್ಲಿ ವಿಭಿನ್ನತೆಯನ್ನು ಕೊಡಲು ತಂಡ ವಿಶಿಷ್ಟ ರೂಪದ ಚಾಟ್ ಶೋ ಆಯೋಜಿಸಿತ್ತು. ಸ್ಯಾಂಡಲ್‌ವುಡ್ ಇಂಡಸ್ಟ್ರಿಯಲ್ಲಿ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್‌ಗಳ ಮೇಲೆ ಹೊಡೆತ ನೀಡಲು ಬರುತ್ತಿರುವ ನಾಗತಿಹಳ್ಳಿ ಮೇಷ್ಟ್ರು ನಿರ್ದೇಶನದ ಬ್ರೇಕಿಂಗ್ ನ್ಯೂಸ್ ತಂಡ ಸಖತ್ ಆಗಿ ಗಂಟೆ ಗಟ್ಟಲೆ ರೇಡಿಯೋ ಜಾಕಿಗಳ ಜತೆ ಮುಕ್ತ ವಾಗಿ ಮಾತಿಗೆ ನಿಂತಿತ್ತು. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಜತೆ ನಟ ಅಜೇಯ್‌ರಾವ್, ನಟಿ ರಾದಿಕಾ ಪಂಡಿತ್, ಚಿತ್ರದ ಸಂಗೀತ ನಿರ್ದೇಶಕ ಸ್ಟೀಪನ್ ಪ್ರಯೋಗ್ ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡು ಕೇಳುಗರಿಗೆ ಮನರಂಜನೆ ನೀಡುತ್ತಿದ್ದರು. ರಿವೈಂಡ್ ರಾಗದಲ್ಲಿ ರೇಡಿಯೋ ಮಿರ್ಚಿ ಜಾಕಿ ಜ್ಯೋತಿ ಸಾಲಿಗ್ರಾಮ ಸಖತ್ ಆಗಿ ಬ್ರೇಕಿಂಗ್ ನ್ಯೂಸ್ ತಂಡವನ್ನು ತುಂಟಾದ ಪ್ರಶ್ನೆಗಳ ಮೂಲಕ ಮಜಾ ನೀಡುತ್ತಿದ್ದರು. ಕನ್ನಡಬಿಟ್ಟ ಮೇಷ್ಟ್ರು: ಕನ್ನಡದ ಖ್ಯಾತ ನಿರ್ದೇಶಕರ ಸಾಲಿನಲ್ಲಿ ಸೇರಿಕೊಳ್ಳುವ ನಾಗತಿಹಳ್ಳಿ ಚಂದ್ರಶೇಖರ್ ಈ ಬಾರಿ ಕನ್ನಡವನ್ನು ಬಿಟ್ಟು ಬಿಟ್ಟಿದ್ದಾರೆ. ಈ ಹಿಂದೆ ಕನ್ನಡದ ಪದಗಳಲ್ಲಿಯೇ ಚಿತ್ರ ಶೀರ್ಷಿಕೆಯನ್ನು ಜೋಡಿಸಿಕೊಟ್ಟು ಕನ್ನಡ ಪ್ರೀತಿ ಮೆರೆಯುತ್ತಿದ್ದ ಮೇಷ್ಟ್ರು ಈ ಬಾರಿ ಆಂಗ್ಲ ವ್ಯಾಮೋಹಕ್ಕೆ ಸಿಲುಕಿಕೊಂಡಿದ್ದಾರೆ. ಕಾದಂಬರಿ, ಕವಿತೆಯ ಸಾಲಿನಲ್ಲಿ ಶೀರ್ಷಿಕೆಯನ್ನು ಇಟ್ಟು ಮೋಡಿ ಮಾಡುತ್ತಿದ್ದ ಮೇಷ್ಟ್ರು ಆಧುನಿಕ ಕಾಲಘಟ್ಟದಲ್ಲಿ ಕನ್ನಡದ ಜತೆಯಲ್ಲಿ ಆಂಗ್ಲನೂ ಇರಲಿ ಎನ್ನುವ ಮೂಲಾಜಿಗೆ ಬಿದ್ದುಕೊಂಡಿದ್ದಾರೆ. ಬ್ರೇಕಿಂಗ್ ನ್ಯೂಸ್ ಎನ್ನುವ ಪದ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸರಿಯಾದ ಅರ್ಥದಲ್ಲಿ ಬಳಕೆಯಾಗುತ್ತಿಲ್ಲ ಎನ್ನುವ ಕೊರಗಿನಲ್ಲಿ ಮೇಷ್ಟ್ರು ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಮಾಧ್ಯಮಗಳ ನಿಜವಾದ ಹೊಣೆಗಾರಿಕೆ ಹಾಗೂ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿಯ ಚಿತ್ರಣ ಈ ಚಿತ್ರದಲ್ಲಿ ಇರಲಿದೆಯಂತೆ. ಅದರಲ್ಲೂ ತಕ್ಕಮಟ್ಟಿಗೆ ಗ್ಲಾಮರ್ ಹಾಗೂ ಕಮರ್ಷಿಯಲ್ ಟಚ್ ಆಪ್ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಚಿತ್ರದಲ್ಲಿ ನಟ ಅಜೇಯ್ ರಾವ್ ವರದಿಗಾರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ರಾದಿಕಾ ಪಂಡಿತ್ ತುಂಬಾನೇ ಚೆಲ್ಲು ಚೆಲ್ಲಾದ ಪಾತ್ರದಲ್ಲಿ ಮಿಂಚಿದ್ದಾರೆ. ಇವರ ಜತೆಯಲ್ಲಿ ಅನಂತ್‌ನಾಗ್, ರಂಗಾಯಣ ರಘು, ಕಾಸರಗೋಡು ಚಿನ್ನಾ ಸೇರಿದಂತೆ ಬಹುತಾರಾಗಣ ಚಿತ್ರಕ್ಕಿದೆ. ರಾಗಕ್ಕೆ ಬಂತು ಜೀವ !: ಪ್ಯಾರಿಸ್ ಪ್ರಣಯದ ಮೂಲಕ ಕ್ಲಿಕ್ ಆದ ಸ್ಟೀಪನ್ ಪ್ರಯೋಗ್ ಈ ಚಿತ್ರಕ್ಕೆ ವಿಶಿಷ್ಟ ರೂಪದ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿರುವ ಆರು ಹಾಡುಗಳಲ್ಲಿಯೂ ಪ್ರಯೋಗ್ ಹೊಸ ರೀತಿಯ ಪ್ರಯೋಗ ಮಾಡಿದ್ದಾರೆ. ಚಿತ್ರಕ್ಕೆ ನಾಲ್ಕು ಹಾಡುಗಳನ್ನು ನಾಗತಿಹಳ್ಳಿ ಚಂದ್ರಶೇಖರ್ ಬರೆದಿದ್ದಾರೆ. ಒಂದು ಹಾಡನ್ನು ಮಂಗಳೂರಿನ ನಿವೃತ್ತ ಪ್ರಾಧ್ಯಾಪಕ ನಾ.ದಾಮೋದರ ಶೆಟ್ಟಿ ಬರೆದಿದ್ದಾರೆ. ಮತ್ತೊಂದು ಹಾಡನ್ನು ಯೋಗರಾಜ್ ಭಟ್ಟರು ಬರೆದಿದ್ದಾರೆ. ಸಂಬಂಧ ಎನ್ನುವ ಹಾಡುವ ಮೂಲಕ ಸಂಗೀತ ಲೋಕದಲ್ಲಿ ತೀರಾ ವಿರಳವಾಗಿ ಬಳಸುವ ಹಂಸನಾದರಾಗವನ್ನು ಬಳಸಲಾಗಿದೆ. ಕನ್ನಡದ ಇಂದಿನ ಸಿನಿಮಾಗಳಲ್ಲಿ ಈ ರಾಗವನ್ನು ಅಷ್ಟಾಗಿ ಬಳಕೆ ಮಾಡುತ್ತಿಲ್ಲ ಎನ್ನುವುದು ಮೇಷ್ಟ್ರು ಮಾತು. ಸಂಬಂಧ ಹಾಡನ್ನು ಇಲ್ಲಿ ಗುಜರಿ ಹಾಡೆಂದು ಕರೆಯಲಾಗಿದೆಯಂತೆ. ಕಾರಣ ಗುಜರಿ ವಸ್ತುಗಳ ನಡುವೆ ಇಡೀ ಹಾಡು ಚಿತ್ರೀಕರಣ ಮಾಡಲಾಗಿದೆ ಎನ್ನೋದು ಚಿತ್ರತಂಡ ತೆರೆದಿಟ್ಟ ಸಿಕ್ರೇಟ್ ಮಾತು. ಚಿತ್ರೀಕರಣ ನೋಡಿಕೊಂಡೇ ಪ್ರಯೋಗ್ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದರಂತೆ. ಹುಡುಗಿ ಬಾರೇ...ಓಡಿ ಹೋಗೋಣ..ಎನ್ನುವ ಹಾಡಿನ ಮೂಲಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಹಳೆಯ ಮಾಧುರ‍್ಯ ಹಾಡುಗಳಿಗೆ ಗುಡ್‌ಬಾಯ್ ಹೇಳಿ ಹೊಸ ಟಪೋರಿ ಮಾದರಿಯ ಹಾಡಿಗೆ ಶರಣಾಗಿದ್ದಾರೆ. ಇಂದಿನ ಯುವಜನತೆಗೆ ಈ ಹಾಡು ಬಹಳಷ್ಟು ಹಿಡಿಸಲಿದೆ ಎನ್ನೋದು ಮೇಷ್ಟ್ರು ಹೇಳುವ ಮಾತು. ಕೋಟ್ ಕಾರ್ನರ್: ಬ್ರೇಕಿಂಗ್ ನ್ಯೂಸ್ ಸಿನಿಮಾದ ಉದ್ದೇಶ ಬರೀ ಮನರಂಜನೆ ಮಾತ್ರವಲ್ಲ. ಇದು ತಲೆ ಹಾಗೂ ಹೃದಯಕ್ಕೆ ಒಂದೇ ಸಲ ಕೆಲಸ ಕೊಡುತ್ತದೆ. ಚಿತ್ರದಲ್ಲಿ ರಂಜನೆ ಇದೆ. ರಂಜನೆ ಇರೋದು ಚಿತ್ರದಲ್ಲಿ ಚಿಂತನೆಯಾಗಿ ಬದಲಾವಣೆಯಾಗುತ್ತದೆ. ಪ್ರತಿ ಪಾತ್ರನೂ ನಮ್ಮ ನಡುವೆ ಇರುವ ಪಾತ್ರದಂತೆ ಕಾಣುತ್ತದೆ. ಚಿತ್ರದ ನೋಡಿದ ನಂತರ ವಿಮರ್ಶೆಯ ಬೀಜ ಬಿತ್ತುತ್ತದೆ. - ನಾಗತಿಹಳ್ಳಿ ಚಂದ್ರಶೇಖರ್- ನಿರ್ದೇಶಕರು ಬ್ರೇಕಿಂಗ್ ನ್ಯೂಸ್ ...... ಕೋಟ್ ಕಾರ್ನರ್ ೨೪ ಗಂಟೆನೂ ಕೆಲಸ ಕಣ್ರಿ ಮಾಧ್ಯಮದ ಮಂದಿಯ ಮೇಲೆ ನನಗೆ ವಿಶೇಷ ಪ್ರೀತಿ. ಯಾಕ್ ಅಂತೀರಾ ಈ ಚಿತ್ರದಲ್ಲಿ ನಾನು ಕೂಡ ವರದಿಗಾರ ದಿನದ ೨೪*೭ನಂತೆ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ವರದಿಗಾರನ ಕೆಲಸವನ್ನು ಅಷ್ಟೇ ಸೂಕ್ಷ್ಮವಾಗಿ ಗಮನಿಸಿಕೊಂಡು ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ಕತೆ ಎಲ್ಲೂ ಲೂಸ್ ಆಗಿಲ್ಲ. ಸ್ಕ್ರೀಪ್ಟ್ ತುಂಬಾನೇ ಚೆನ್ನಾಗಿ ವರ್ಕ್ ಆಗಿದೆ ಎನ್ನುವ ಅಂಶವನ್ನು ಪ್ರೇಕ್ಷಕನೇ ಚಿತ್ರ ನೋಡಿ ನೀಡುತ್ತಾ ನೆ. - ಅಜೇಯ್ ರಾವ್, ನಟ ಬ್ರೇಕಿಂಗ್ ನ್ಯೂಸ್. ... ಕೋಟ್ ಕಾರ್ನರ್ ಶ್ರದ್ಧೆ ಇಲ್ಲದ ಹುಡುಗಿ ನನ್ನ ವೈಯಕ್ತಿಕ ಬದುಕಿಗೂ ಈ ಪಾತ್ರಕ್ಕೂ ತೀರಾ ಹತ್ತಿರದ ಹೋಲಿಕೆ ಇದೆ. ಚಿತ್ರದಲ್ಲಿ ನನಗೆ ಶ್ರದ್ಧಾ ಎನ್ನುವ ಹೆಸರಿಡಲಾಗಿದೆ. ಆದರೆ ಚಿತ್ರದ ತುಂಬಾ ಶ್ರದ್ಧೆಯನ್ನು ಬಿಟ್ಟು ಬಿಡುವ ಪಾತ್ರ. ಚಿತ್ರದ ಕುರಿತು ನಿರೀಕ್ಷೆ ಇದೆ. ಮೇಷ್ಟ್ರು ಜತೆ ಕೆಲಸ ಎಂದಾಗ ಶಿಸ್ತಿಗೆ ಜಾಸ್ತಿ ಮಹತ್ವ ಇದೆ. ಚಿತ್ರ ಮುಗಿಯುವ ವರೆಗೂ ನನಗೆ ಮನೆ ವಾತಾವರಣ ಎಂದೇ ಅನಿಸಿತ್ತು. - ರಾದಿಕಾ ಪಂಡಿತ್- ನಟಿ, ಬ್ರೇಕಿಂಗ್ ನ್ಯೂಸ್

No comments:

Post a Comment