Monday, May 7, 2012

ಕರಾವಳಿಯ ಡಾಕ್ಯುಮೆಂಟರಿ ಹುಡುಗ !

ಯುವಘರ್ಜನೆ-11 ಬ್ಲರ್ಬ್: ಕಾಸರಗೋಡಿನ ಹುಡುಗನೊಬ್ಬ ಡಾಕ್ಯುಮೆಂಟರಿಗೆ ಕೈ ಹಾಕಿದ್ದಾನೆ. ಅದರ ಹೆಸರು ‘ದಿ ಎಂಡ್’ ಅಂತಾ. ಇದು ಬರೀಯ ಡಾಕ್ಯುಮೆಂಟರಿಯಾದರೆ ದೊಡ್ಡ ವಿಚಾರವೇ ಅಲ್ಲ. ಸಮಾಜಶಾಸ್ತ್ರಜ್ಞರಿಗೆ ಹಾಗೂ ಮಾನಸಿಕ ತಜ್ಞರಿಗೂ ಸದಾ ಕಾಲ ಜಟಿಲವಾಗಿ ಕಾಡುತ್ತಿರುವ ಆತ್ಮಹತ್ಯೆಯಂತಹ ಪ್ರಕರಣವನ್ನು ಈ ಹುಡುಗ ತನ್ನ ಡಾಕ್ಯುಮೆಂಟರಿಯಲ್ಲಿ ಎತ್ತಿಕೊಂಡಿದ್ದಾನೆ. ಮೋರ್ ಡಿಟೇಲ್ ಮುಂದೆ ಓದಿ.... ಬ್ಲರ್ಬ್:
ಸರಿಯಾಗಿ ಮೂರು ವರ್ಷದ ಹಿಂದೆ ಅಂದರೆ ನವೆಂಬರ್ ೨೯,೨೦೦೯ ರಂದು ರಾಜ್ಯದ ನಂಬರ್ ವನ್ ಕನ್ನಡ ದೈನಿಕ ‘ವಿಜಯ ಕರ್ನಾಟಕ’ದ ಸಾಪ್ತಾಹಿಕದಲ್ಲಿ ಪ್ರಕಟವಾದ ಒಂದು ಲೇಖನದ ವಸ್ತು ಈ ಹುಡುಗನ ಡಾಕ್ಯಮೆಂಟರಿಗೆ ಆಹಾರವಾಗಿತ್ತು. ಪುತ್ತೂರಿನಿಂದ ಮಾರು ದೂರ ಇರುವ ಕೆಯ್ಯೂರು-ಕಣಿಯೂರಿನ ಕಾಡಿನಲ್ಲಿರುವ ಕುಕ್ಕ ಎನ್ನುವ ಶ್ರೀಸಾಮಾನ್ಯ ವ್ಯಕ್ತಿಯನ್ನು ಇಟ್ಟುಕೊಂಡು ಕಾಸರಗೋಡಿನ ಹುಡುಗನೊಬ್ಬ ಡಾಕ್ಯುಮೆಂಟರಿ ತಯಾರಿಸಿದ್ದು ಮಾತ್ರವಲ್ಲ ಅದನ್ನು ಇಟ್ಟುಕೊಂಡು ಇಂಟರ್‌ನ್ಯಾಷನಲ್ ಲೆವೆಲ್‌ಗೂ ಸಾಗಿಸಿ ಹೆಸರು ಸಂಪಾದಿಸಿಕೊಂಡು ಬಂದಿದ್ದು ಈಗ ಬರೀ ಇತಿಹಾಸ. ಆದರೆ ಇದೇ ಹುಡುಗ ಮತ್ತೆ ಡಾಕ್ಯುಮೆಂಟರಿಗೆ ಕೈ ಹಾಕಿದ್ದಾನೆ. ಅದರಲ್ಲೂ ಈ ಬಾರಿಯ ಡಾಕ್ಯುಮೆಂಟರಿ ನಾನಾ ಕಾರಣಗಳಿಂದ ಸುಂದರ ಸಮಾಜದಲ್ಲಿ ತಲ್ಲಣ ಎಬ್ಬಿಸುವ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಸಮಾಜಶಾಸ್ತ್ರಜ್ಞರಿಗೆ ಹಾಗೂ ಮಾನಸಿಕ ತಜ್ಞರಿಗೂ ಸದಾ ಕಾಲ ಜಟಿಲವಾಗಿ ಕಾಡುತ್ತಿರುವ ಆತ್ಮಹತ್ಯೆಯಂತಹ ಪ್ರಕರಣವನ್ನು ಈ ಹುಡುಗ ತನ್ನ ಡಾಕ್ಯುಮೆಂಟರಿಯಲ್ಲಿ ಎತ್ತಿಕೊಂಡಿದ್ದಾನೆ. ಈ ಮೂಲಕ ಆತ್ಮಹತ್ಯೆಯ ಹಾದಿ ಹಿಡಿಯುವ ಯುವ ಮನಸ್ಸುಗಳಿಗೆ ಗಟ್ಟಿಯಾದ ಸಂದೇಶ ನೀಡಲು ರೆಡಿಯಾಗಿದ್ದಾನೆ. ಪ್ರತಿಭೆಯ ಖನಿ ಅಭಿ: ಅಂದಹಾಗೆ ಈ ಹುಡುಗನ ಹೆಸರು ಅಭಿಷೇಕ್ ಕಾಸರಗೋಡು. ರಾಜ್ಯದ ಹಿರಿಯ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಹಿರಿಯ ಪುತ್ರ ಅಭಿಷೇಕ್ ತಂದೆಯಂತೆ ಪ್ರತಿಭಾವಂತ. ಬೆಂಗಳೂರಿನಲ್ಲಿರುವ ಸಿನಿಮಾ ಹಾಗೂ ಟೆಲಿವಿಷನ್ ಇನ್ಸ್‌ಸ್ಟಿಟ್ಯೂಟ್‌ನಲ್ಲಿ ೨೦೦೮-೦೯ರಲ್ಲಿ ಡಿಪ್ಲೋಮಾ ಮಾಡಿಕೊಂಡು ನೇರವಾಗಿ ಇಳಿದ್ದು ಗಾಂನಗರದ ಅಡ್ಡಾಕ್ಕೆ.. ಅದರಲ್ಲೂ ತಂದೆಯ ಬರವಣಿಗೆಯನ್ನು ಬಿಟ್ಟು ಅಭಿಷೇಕ್ ಮುತ್ತಿಕೊಂಡಿದ್ದು ಬಣ್ಣದ ಲೋಕವನ್ನು ಕ್ಯಾಮರೆಮನ್ ಸತ್ಯ ಹೆಗ್ಗಡೆ, ಅಶೋಕ್ ಕಶ್ಯಪ್ ಸೇರಿದಂತೆ ನಾನಾ ಕ್ಯಾಮರೆಮನ್‌ಗಳ ಕೈಯಲ್ಲಿ ಸಾಕಷ್ಟು ಕಲಿದ ಹುಡುಗ ಅಭಿಷೇಕ್ ‘ಕುಕ್ಕು ಹೇಳಿದ ಮರದ ಕತೆ’ಯ ಮೂಲಕ ಮೊದಲ ಬಾರಿಗೆ ಡಾಕ್ಯುಮೆಂಟರಿಯೊಂದಕ್ಕೆ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದರು.
ಆತ್ಮಹತ್ಯೆ ಮಾಡುವರಿಗೊಂದು ಪಾಠ: ‘ದಿ ಎಂಡ್’ ಎನ್ನುವ ಶಿರೋನಾಮೆಯಲ್ಲಿ ಲೈಫ್ ಸಮ್ ಟೈಮ್ಸ್ ಹಾರ್ಡ್ ಆಂಡ್ ಪೂವರ್ ಬಟ್ ಈಟ್ ಇಸ್ ಪ್ಯಾರಡೈಸ್ ಇನ್ ಕಂಪ್ಯಾರೀಶನ್ ವಿದ್ ಡೆತ್ ಎನ್ನುವ ಟ್ಯಾಗ್‌ಲೈನ್ ಇಟ್ಟುಕೊಂಡು ಬಂದಿರುವ ಈ ಡಾಕ್ಯುಮೆಂಟರಿಯಲ್ಲಿ ನಿರ್ದೇಶಕರಾದ ಅಶೋಕ್ ಕಶ್ಯಪ್ ಅವರ ಪ್ರೀತಿಯಿಂದ ಧಾರಾವಾಹಿಯ ಪಾತ್ರಧಾರಿ ಗಿರೀಶ್ ಕೃಷ್ಣ ಎನ್ನುವವರು ಆತ್ಮಹತ್ಯೆ ಮಾಡುವ ಸನ್ನಿವೇಶವನ್ನು ಈ ಡಾಕ್ಯುಮೆಂಟರಿಯಲ್ಲಿ ಚಿತ್ರಿಸಲಾಗಿದೆ. ಡಾಕ್ಯುಮೆಂಟರಿಗೆ ಚಿತ್ರಕತೆಯನ್ನು ಅಭಿಷೇಕ್ ಕಾಸರಗೋಡು ಹಾಗೂ ಚರಣ್ ವೀರ್‌ನಾಗ್ ಮಾಡಿದ್ದಾರೆ. ಇನ್ನೂಳಿದಂತೆ ಸಂಕಲನದಲ್ಲೂ ಅಭಿ, ಚರಣ್ ಹಾಗೂ ಪ್ರವೀಣ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕ್ಯಾಮೆರಾ ಹಾಗೂ ನಿರ್ದೇಶಕನ ಜವಾಬ್ದಾರಿಯನ್ನು ಖುದ್ದು ಅಭಿಷೇಕ್ ಕಾಸರಗೋಡು ವಹಿಸಿಕೊಂಡಿದ್ದಾರೆ. ಎರಡು ಕ್ಯಾಮೆರಾಗಳ ಜತೆ ಚಿತ್ರೀಕರಣ ಮಾಡಲಾಗಿರುವ ಈ ಡಾಕ್ಯುಮೆಂಟರಿಗೆ ಈ ಯುವಕರು ಅತೀ ಹೆಚ್ಚು ಶ್ರಮ ಹಾಕಿರುವ ದಾಖಲೆ ಡಾಕ್ಯುಮೆಂಟರಿ ನೋಡಿದ ಪ್ರತಿಯೊಬ್ಬನಿಗೂ ಕಾಣಿಸಿಕೊಳ್ಳುತ್ತದೆ. ಅಭಿಷೇಕ್‌ರ ಮನೆಯ ಕೋಣೆಯೊಂದರಲ್ಲಿ ಸಂಪೂರ್ಣ ಚಿತ್ರಿತವಾಗಿರುವ ‘ದಿ ಎಂಡ್’ ನಂತರದ ದಿನಗಳಲ್ಲಿ ಸಾಮಾಜಿಕ ತಾಣಗಳಲ್ಲಿ ಪ್ರಚಾರ ಮಾಡಿ ಆತ್ಮಹತ್ಯೆ ಮಾಡುವವರು ಈ ಕೃತ್ಯದಿಂದ ಹಿಂದೆ ಸರಿಯುವಂತೆ ಮಾಡುವ ಯೋಚನೆ ಇವರಲ್ಲಿದೆ. ಕುಕ್ಕ ಎನ್ನುವ ಡಾಕ್ಯುಮೆಂಟರಿ: ಕುಕ್ಕ ಒಬ್ಬ ಶ್ರೀಸಾಮಾನ್ಯ ವ್ಯಕ್ತಿ. ಆತನ ವರ್ಕಿಂಗ್ ಪ್ಲೇಸ್ ಕೆಯ್ಯೂರಿನ ಕಣಿಯೂರಿನ ದಟ್ಟವಾದ ಕಾಡು. ಚಿತ್ರದ ಕತೆ ಆರಂಭವಾಗೋದು ಇಲ್ಲಿಂದ, ಕುಕ್ಕ ತನ್ನ ಬದುಕಿನ ನಾಲ್ಕು ಕತೆಗಳನ್ನು ಹೇಳುತ್ತಾನೆ. ಅದರಲ್ಲಿ ಕುಕ್ಕನ ಬದುಕು, ತನ್ನ ಸುತ್ತಮುತ್ತಲಿನ ಪ್ರಪಂಚ, ಕಾಣಿಯೂರಿನ ಸ್ಥಳೀಯರ ಜತೆಯಲ್ಲಿರುವ ಬಹಳ ಗಟ್ಟಿಯಾದ ಆತನ ಸಂಬಂಧಗಳು, ಕಾಡಿನ ಬಗ್ಗೆ ಇರುವ ಆತನ ಕಾಳಜಿ ಎಲ್ಲವೂ ಇಲ್ಲಿ ಕೌಂಟ್ ಆಗಿ ಚಿತ್ರ ಮುಂದುವರಿಯುತ್ತದೆ. ಚಿತ್ರ ವೀಕ್ಷಿಸುತ್ತಾ ಸಾಗುತ್ತಿದ್ದಾಗ ಕುಕ್ಕನ ಬಗ್ಗೆ ಇರುವ ದೃಷ್ಟಿಕೋನಗಳು ಬದಲಾಗುತ್ತಾ ಸಾಗುತ್ತದೆ. ಕುಕ್ಕನ ಪರಿಚಯ ಚಿತ್ರದ ಮೂಲಕ ಹೊರ ಬರುತ್ತಿದ್ದಂತೆಯೇ ಅಲ್ಲೊಂದು ಸಂದೇಶ ರವಾನೆಯಾಗುತ್ತದೆ. ‘ ನಿಜಕ್ಕೂ ಕುಕ್ಕ ಪಟ್ಟಣದಲ್ಲಿರುವ ಒಬ್ಬ ಶಿಕ್ಷಿತ ವ್ಯಕ್ತಿಗಿಂತ ಭಿನ್ನ ರೀತಿಯಲ್ಲಿ ಕಾಣಿಸುತ್ತಾನೆ. ಅದರಲ್ಲೂ ಮುಖ್ಯವಾಗಿ ಶಿಕ್ಷಿತ ವರ್ಗ ಮಾಡದೇ ಇರುವ ಕೆಲಸವನ್ನು ಕುಕ್ಕ ಕಾಡಿನಲ್ಲಿ ನಿಂತು ಮಾಡುವ ಮೂಲಕ ಪರಿಸರದ ಕುರಿತು ಕೊಂಚ ನಿಧಾನವಾಗಿ ವೀಕ್ಷಕರತ್ತ ಸಂದೇಶ ರವಾನಿಸುವಂತೆ ಭಾಸವಾಗುತ್ತದೆ. ಈ ಚಿತ್ರ ೨೪ ನಿಮಿಷಗಳ ಕಾಲ ವೀಕ್ಷಕರನ್ನು ಎಳೆದಿಟ್ಟುಕೊಂಡು ಮುಂದುವರಿಯುತ್ತದೆ. ಈ ಡಾಕ್ಯುಮೆಂಟರಿ ಈಗಾಗಲೇ ದೇಶ-ವಿದೇಶದ ನಾನಾ ಫೆಸ್ಟಿವಲ್‌ಗೆ ಹೋಗಿ ಹೆಸರುಗಳಿಸಿಕೊಂಡು ವಾಪಾಸು ಬಂದಿದೆ. ಟೋಟಲಿ ಅಭಿಷೇಕ್ ಎನ್ನುವ ಪ್ರತಿಭಾವಂತ ಹುಡುಗ ತನ್ನದೇ ವ್ಯಾಪ್ತಿಯಲ್ಲಿ ಹೊಸ ಹೊಸ ಯೋಚನಾಲಹರಿಯನ್ನು ಬಿಚ್ಚಿಡುತ್ತಿದ್ದಾರೆ. ಗಾಂನಗರದ ಮಂದಿ ಸಾತ್ ಕೊಡುತ್ತಾರೋ ಗೊತ್ತಿಲ್ಲ. ಆದರೆ ಅಭಿಷೇಕ್‌ನಿಗಂತೂ ಉಜ್ವಲ ಭವಿಷ್ಯವಂತೂ ಕಾದಿದೆ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯುವುದಿಲ್ಲ. ... ಕೋಟ್ ಕಾರ್ನರ್..... ಯುವಜನತೆಯಲ್ಲಿ ಇತ್ತೀಚೆಗೆ ಮೌನ ಹಾಗೂ ಗಂಭೀರತೆಯ ಕೊರತೆ ಎದ್ದು ಕಾಣುತ್ತಿದೆ. ಆದರೆ ಅಭಿಷೇಕ್ ವಿಚಾರದಲ್ಲಿ ಮಾತ್ರ ಇದು ತಪ್ಪಾಗಿದೆ. ಅಭಿಷೇಕ್‌ನಲ್ಲಿ ವಯಸ್ಸಿಗೆ ಮೀರಿದ ಗಂಭೀರತೆ ಇದೆ. ಆತನ ಮೌನದಿಂದ ಬಹಳಷ್ಟು ವಿಚಾರಗಳನ್ನು ನಿರೀಕ್ಷೆಇಟ್ಟುಕೊಳ್ಳಬಹುದು. - ನರೇಂದ್ರ ರೈ ದೇರ್ಲ, ಖ್ಯಾತ ಬರಹಗಾರ ............... ಕೋಟ್ ಕಾರ್ನರ್ ಆತ್ಮಹತ್ಯೆ ತುಂಬಾನೇ ಸೂಕ್ಷ್ಮವಾದ ವಿಚಾರ. ಸಮಾಜದಲ್ಲಿ ದಿನನಿತ್ಯ ನಡೆಯುತ್ತಿರುವ ನೂರಾರು ಆತ್ಮಹತ್ಯೆಗಳ ಪ್ರಕರಣಗಳು ಮಾಧ್ಯಮಗಳ ಮೂಲಕ ಕಣ್ಣ ಮುಂದೆ ಯಾವಾಗಲೂ ಬರುತ್ತಿತ್ತು. ಇಂತಹ ಆತ್ಮಹತ್ಯೆಗೆ ಕಾರಣ ಹಾಗೂ ಕೊನೆಕ್ಷಣದಲ್ಲಿ ವ್ಯಕ್ತಿಯ ಮನಸ್ಸಿನಲ್ಲಿ ನಡೆಯುವ ತಳಮಳಗಳನ್ನು ಚಿತ್ರೀಕರಣಮಾಡಬೇಕು ಎನ್ನೋದು ನನ್ನ ಬಹಳ ದಿನಗಳ ಕನಸ್ಸು. ದಿ ಎಂಡ್ ಮೂಲಕ ಇದು ಈಡೇರಿದೆ. - ಅಭಿಷೇಕ್ ಕಾಸರಗೋಡು, ದಿ ಎಂಡ್ ನಿರ್ದೇಶಕ .............. * ಸ್ಟೀವನ್ ರೇಗೊ, ದಾರಂದಕುಕ್ಕು ................

No comments:

Post a Comment