Sunday, May 20, 2012
ಹುಡುಗರು ಮಾಡಿದ ರೇಡಿಯೋ ಇಡ್ಲಿ !
ರೇಡಿಯೋ ಇಡ್ಲಿ ! ಇದು ಖಂಡಿತವಾಗಿಯೂ ತಿನ್ನುವ ಇಡ್ಲಿ ಅಲ್ಲ ಮಾರಾಯ್ರೆ. ಕುಡ್ಲದ ಇಬ್ಬರು ಹುಡುಗರು ರೇಡಿಯೋ ಇಡ್ಲಿ ಮೂಲಕ ಜಸ್ಟ್ ಕ್ಲಿಕ್ ಆಗಿದ್ದಾರೆ. ಪುಟ್ಟ ಕೊಂಕಣಿ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಕೊಡಿಸುತ್ತಿದ್ದಾರೆ. ಓವರ್ ಟು ಬಾಯ್ಸ್...
ತುಂಬಾನೇ..ನಾಜೂಕು ಅಷ್ಟೇ ಮೃದು...ಕೊಂಚ ಪರಿಮಳ ಜತೆಯಲ್ಲಿ ಒಂದಿಷ್ಟು ಆಯತಪ್ಪಿದ ಆಕೃತಿ. ಇದು ಇಡ್ಲಿಯ ಬಗ್ಗೆ ಸಾಮಾನ್ಯನ ತಲೆಯೊಳಗೆ ಮೂಡುವ ಕಾನ್ಸೆಪ್ಟ್ ತಾನೇ..? ಈಗ ಇಡ್ಲಿಯ ಮಾತು ಬದಿಗಿಡಿ. ಕರಾವಳಿ ಮೂಲದ ಹುಡುಗರಿಬ್ಬರು ಇದೇ ಕುಡ್ಲದ ಟೇಸ್ಟಿ ವಿದ್ ಸಾಫ್ಟಿ ಇಡ್ಲಿಯನ್ನು ಮಾರಾಟ ಮಾಡುತ್ತಿದ್ದಾರೆ.
ಮೂಲ್ಕಿ ಹಾಗೂ ಕಾಸರಗೋಡಿನ ಟಚ್ ಇದ್ದ ಮುಂಬಯಿಯ ಜಿಎಸ್‌ಬಿ ಹುಡುಗ ನಾಗೇಶ್ ರಾಮಚಂದ್ರ ಪೈ ಹಾಗೂ ಮುಂಬಯಿಯಲ್ಲಿ ಹುಟ್ಟಿ ಬೆಳೆದು ಈಗ ಅಮೆರಿಕದ ಖ್ಯಾತ ಸಾಫ್ಟ್‌ವೇರ್ ಕಂಪನಿಯಲ್ಲಿ ದುಡಿಯುತ್ತಿರುವ ಕೃಷ್ಣಾನಂದ ನಾಯಕ್ ( ಸಂಕಲ್ಪ ನಾಯಕ್) ಈ ರೀತಿಯ ಇಡ್ಲಿ ಮಾರಾಟದಲ್ಲಿ ತಲ್ಲೀನರಾಗಿದ್ದಾರೆ.
ಜಿಎಸ್‌ಬಿ ಸಮುದಾಯದ ಭಾಷೆಗಾಗಿ ೨೦೦೭ರಲ್ಲಿ ‘ರೇಡಿಯೋ ಇಡ್ಲಿ’ ಎಂಬ ಹೊಸ ಬ್ಲಾಗ್ ಕಣ್ಣು ತೆರೆಯಿತು. ೨೦೦೮ರಲ್ಲಿ ಇದೇ ‘ರೇಡಿಯೋ ಇಡ್ಲಿ ’ ಸೈಟ್ ರೂಪಕ್ಕೆ ತಿರುಗಿತು. ಈಗ ಈ ಸೈಟ್‌ಗೆ ಭೇಟಿ ನೀಡುವ ಮಂದಿ ದಿನವೊಂದಕ್ಕೆ ಸುಮಾರು ೩ ಸಾವಿರ ದಾಟ ಬಹುದು.
ಕಳೆದ ಮೂರು ವರ್ಷಗಳಿಂದ ಈ ಸೈಟ್‌ನ ಮೂಲಕ ಜಿಎಸ್‌ಬಿ ಸಮುದಾಯದ ಪ್ರತಿಭಾವಂತ ಗಾಯಕ- ಗಾಯಕಿಯರಿಗೆ ಒಂದು ವೇದಿಕೆಯನ್ನು ನೀಡಿದ್ದಾರೆ. ವಿದೇಶದಲ್ಲಿ ಕೂತು ಕೂಡ ರಥಬೀದಿಯಲ್ಲಿರುವ ವೆಂಕಟರಮಣ ದೇವರ ತೇರು ಯೂ ಟ್ಯೂಬ್ ಮೂಲಕ ನೋಡುವ ಭಾಗ್ಯವನ್ನು ಈ ಸೈಟ್ ಕರುಣಿಸಿದೆ. ಜಿಎಸ್‌ಬಿಯ ಅಡುಗೆ ಮನೆಯಲ್ಲಿ ಶಾಲಿನಿ ಗಡಿಯಾರ್ ಅವರ ಕೈಯಲ್ಲಿ ಜಿಎಸ್‌ಬಿಯ ವೈವಿಧ್ಯಪೂರ್ಣವಾದ ಖಾದ್ಯಗಳು ತಯಾರಾಗುತ್ತಿದೆ. ಈ ಖಾದ್ಯಗಳಿಗೆ ತಕ್ಕಂತೆ ಡಯಾಟಿಷನ್‌ನಿಂದ ಸಲಹೆ ಸೂಚನೆಗಳಿವೆ.
ಯೂತ್ ಬೇಸ್ಡ್ ಫೇಸ್ ಬುಕ್, ಟ್ವಿಟ್ಟರ್, ಕಲ್ಚರಲ್ ಇವೆಂಟ್ ಹೀಗೆ ಬೇರೆ ಸೈಟ್‌ಗಳಿಗಿಂತ ಭಿನ್ನರೂಪದಲ್ಲಿ ರೇಡಿಯೋ ಇಡ್ಲಿ ಕಾಣಿಸಿಕೊಳ್ಳುತ್ತದೆ. ಜಿಎಸ್‌ಬಿ ಮಾತ್ರವಲ್ಲದೇ ಚಿತ್ಪಾವನ್ ಬ್ರಾಹ್ಮಣ ಹಾಗೂ ಇತರ ಸಬ್ ಕಾಸ್ಟ್‌ಗಳ ವಿಶೇಷ ರೀತಿಯ ಕಲಾವೈವಿಧ್ಯ, ಸಂಸ್ಕೃತಿ, ಭಾಷಾ ಸೊಗಡು ಜತೆಯಲ್ಲಿ ದೇವಸ್ಥಾನದ ತೇರು, ಲೈವ್ ಕಾನ್ಸರ್ಟ್‌ಗಳು, ವಿಶೇಷ ವರದಿಗಳು, ಪ್ರತಿಭಾವಂತ ಜಿಎಸ್‌ಬಿ ಗಾಯಕ- ಗಾಯಕಿಯರ ಧ್ವನಿ ಸುರುಳಿಗಳಿಂದ ಹಾಡುಗಳು ಎಲ್ಲವೂ ಒಂದೇ ತಾಣದಲ್ಲಿ ರೆಡಿ ಮೇಡ್ ಆಗಿ ಸಿಗುತ್ತದೆ.
ಕರಾವಳಿಯ ಕೊಂಕಣಿ ಪರಂಪರೆಯ ಬಗ್ಗೆ ಹಿರಿಯ ಕೊಂಕಣಿ ವಿದ್ವಾಂಸರು ಬರೆದ ಲೇಖನಗಳು ಸೈಟ್‌ಗೆ ಭೇಟಿ ನೀಡುವ ವೀಕ್ಷಕರಿಗೆ ಲಭ್ಯವಾಗುತ್ತಿದೆ. ಜಿಎಸ್‌ಬಿ ಕೊಂಕಣಿ ಸಮುದಾಯದ ಪುಟ್ಟ ಗ್ರಂಥಾಲಯದಂತೆ ಈ ಸೈಟ್ ಕೆಲಸಮಾಡುತ್ತಿದೆ. ಅಂದಹಾಗೆ ರೇಡಿಯೋ ಇಡ್ಲಿಗೆ ಬರುವವರು ಕ್ಲಿಕ್ ಮಾಡಿ. ಡಿಡಿಡಿ.Zbಜಿಟಜಿbಜಿ.ಛಿಠಿ ?eಠಿಠಿm://ಡಿಡಿಡಿ.Zbಜಿಟಜಿbಜಿ.ಛಿಠಿ/|
ರೇಡಿಯೊ ಇಡ್ಲಿ ಎಲ್ಲಿಂದ ಬಂತು !
ಮುಂಬಯಿಯ ಮಾಟುಂಗಾದಲ್ಲಿ ‘ಇಡ್ಲಿ ಹೌಸ್’ಎಂಬ ಚೈನ್ ಹೋಟೆಲ್‌ಗಳಿವೆ. ಅಲ್ಲಿ ಐವತ್ತಕ್ಕಿಂತ ಹೆಚ್ಚು ಬಗೆಯ ಇಡ್ಲಿ ಹಾಗೂ ಫಿಲ್ಟರ್ ಕಾಫಿಯನ್ನು ನೀಡಲಾಗುತ್ತದೆ. ಮುಂಬಯಿಯಲ್ಲಿ ಉಡುಪಿ ಹೊಟೇಲ್‌ಗಳ ಜನಕ ಎಂದೇ ಖ್ಯಾತರಾದ ರಾಮ ನಾಯಕ್ ಅವರ ಮಾಲೀಕತ್ವದಲ್ಲಿ ಈ ಹೊಟೇಲ್‌ಗಳು ಕುಡ್ಲ, ಉಡುಪಿ ಶೈಲಿಯ ಆಹಾರವನ್ನು ನೀಡುತ್ತಿದೆ. ಸಂಕಲ್ಪ ಹಾಗೂ ನಾಗೇಶ್ ಈ ಹೊಟೇಲ್‌ಗೆ ಒಂದು ಬಾರಿ ಭೇಟಿ ನೀಡಿ ಇಡ್ಲಿ ತಿನ್ನುತ್ತಿದ್ದಾಗ ಅವರ ತಲೆಯಲ್ಲಿ ಇಡ್ಲಿಯ ಮೇಲೆ ಒಂದು ಸೈಟ್ ಮಾಡುವ ಯೋಚನೆ ಬಂತು ಅಂತೆ!
ಕರಾವಳಿ ಹಾಗೂ ಇತರ ಪ್ರದೇಶದಲ್ಲಿ ಹರಡಿಕೊಂಡಿರುವ ಜಿಎಸ್‌ಬಿ ಸಮುದಾಯವನ್ನು ಅಭಿವೃದ್ಧಿ ಪಡಿಸುವ ಹಾಗೂ ಅದರಲ್ಲಿರುವ ಪ್ರತಿಭಾವಂತರನ್ನು ಹೊರಗೆ ತರುವ ಕಾರ‍್ಯಕ್ಕೆ ರೇಡಿಯೋ ಇಡ್ಲಿ ಎಂಬ ಸೈಟ್ ಕ್ಲಿಕ್ ಆಯಿತು. ನಂತರ ಜಿಎಸ್‌ಬಿ ಸಮುದಾಯದ ಯುವ ಗಾಯಕ- ಗಾಯಕಿಯರ ಹಾಡುಗಳನ್ನು ರೆಕಾರ್ಡ್ ಮಾಡಿ ಈ ಸೈಟ್‌ನಲ್ಲಿ ಆಪ್‌ಲೋಡ್ ಮಾಡಿ ನಾನಾ ದೇಶಗಳಲ್ಲಿ ಹರಡಿಕೊಂಡಿರುವ ಜಿಎಸ್‌ಬಿ ಸಮುದಾಯಕ್ಕೆ ಕಳುಹಿಸುವ ಮಧ್ಯವರ್ತಿಗಳಾಗಿ ಕಾರ‍್ಯ ನಿರ್ವಹಣೆಗೆ ಇಳಿಯಿತು ಎನ್ನುತ್ತಾರೆ ಇದರ ರೇಡಿಯೋ ಇಡ್ಲಿಯ ಮುಖ್ಯಸ್ಥ ನಾಗೇಶ್ ಆರ್. ಪೈ.
ರೇಡಿಯೊದಲ್ಲಿ ಹೊಸತು ಏನಿದೆ..?
ನಾಗೇಶ್ ಹಾಗೂ ಸಂಕಲ್ಪ ಇಬ್ಬರು ತುಂಬಾ ಬ್ಯುಸಿ ಪರ್ಸನ್‌ಗಳು. ನಾಗೇಶ್ ಎಸ್‌ಬಿಐ ಮ್ಯೂಚುವಲ್ ಪಂಡ್‌ನಲ್ಲಿ ಇಂಟರ್‌ನೆಟ್ ಸೆಕ್ಷನ್‌ನ ಹೆಡ್ ಆಗಿ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಕಲ್ಪ ನಾಯಕ್ ಐಟಿಯವರು ಈಗ ಅಮೆರಿಕದಲ್ಲಿದ್ದಾರೆ. ಇಬ್ಬರು ಇಂಟರ್‌ನೆಟ್ ಮೂಲಕ ಚಾಟಿಂಗ್ ಮಾಡಿಕೊಂಡು ಈ ರೇಡಿಯೊ ಇಡ್ಲಿಯನ್ನು ಈಗ ನಡೆಸುತ್ತಿದ್ದಾರೆ. ಆದರೆ ಮೊದಲು ೧೫ ದಿನಗಳಿಗೊಮ್ಮೆ ಈ ಸೈಟ್ ಆಪ್‌ಲೋಡ್ ಮಾಡುವ ಪ್ರಮೇಯ ಇತ್ತು. ಈಗ ಪ್ರತಿ ವಾರಕ್ಕೊಂದು ಸಾರಿ ವೀಕೆಂಡ್ ಟೈಮ್‌ನಲ್ಲಿ ಆಪ್‌ಲೋಡ್ ಮಾಡುವ ಪರಂಪರೆ ಬಂದಿದೆ.
............
* ಸ್ಟೀವನ್ ರೇಗೊ, ದಾರಂದಕುಕ್ಕು
...............
Wednesday, May 16, 2012
ಕುಡ್ಲದ ಹುಡುಗರ ‘ಪಾಣಿಘಾಸ್’
ಬ್ಲರ್ಬ್:
ಸಂಗೀತದ ಮೇಲೆ ವಿಶೇಷ ಹುಚ್ಚು ಹಿಡಿಸಿ ಕೊಂಡ ಯುವಕರ ತಂಡದ ಕತೆಯಿದು. ಬೆಂಗಳೂರಿನ ಕಾರ್ಪೋರೇಟ್ ರಂಗದಲ್ಲಿ ಪಾಣಿಘಾಸ್ ಎಂದಾಕ್ಷಣ ಕೇಳುವ ಕಿವಿಗಳು ಒಂದ್ ಸಾರಿ ನೆಟ್ಟಗೆ ನಿಂತು ಕೇಳಿಸಿ ಕೊಳ್ಳೋಣ ಮಾರಾಯ್ರೆ ಎನ್ನುತ್ತದೆ. ಬನ್ನಿ ಹುಡುಗರ ಮಾತಿನಲ್ಲೇ ಕೇಳಿ ಬಿಡೋಣ...
ಬ್ಲರ್ಬ್:
ಈಗಷ್ಟೇ ಶಿಕ್ಷಣ ಮುಗಿಸಿ ಕೆಲಸ ಸೇರಿಕೊಳ್ಳುವ ಜೋಶ್. ಹಳ್ಳಿಯ ಗೂಡಿನಿಂದ ಹುಡುಗರು ಪಟ್ಟಣ ಸೇರುವ ಹುಮ್ಮಸ್ಸು. ದಿನನಿತ್ಯದ ಕೆಲಸದ ನಡುವೆ ಒಂಚೂರು ಟೈಮ್ ಸಿಕ್ಕಾಗ ತಮ್ಮ ಪ್ರವೃತ್ತಿಗೆ ಕೀ ಕೊಡುವ ಉತ್ಸಾಹ. ಸಂಗೀತದ ಮೇಲೆ ಇಟ್ಟುಕೊಂಡ ಅಪಾರ ಪ್ರೀತಿ. ಎಲ್ಲವೂ ಸೇರಿಕೊಂಡಾಗ ಅದರ ಹೆಸರೇ ಪಾಣಿಘಾಸ್. ಇದು ಟೋಟಲಿ ಸಂಗೀತ ಕೇಳುವ ಕಿವಿಗಳಿಗೆ ಸಿಗುವ ಮನರಂಜನೆ. ಇಂತಹ ಒಂದು ತಂಡವನ್ನು ಕಟ್ಟಿ ಕಾರ್ಪೋರೇಟ್ ದುನಿಯಾದಲ್ಲಿ ಮಿಂಚು ಹರಿಸುವ ಹುಡುಗರೆಲ್ಲರೂ ಕರಾವಳಿಯ ತಟದವರು.
ಕಳೆದ ಒಂದು ವರ್ಷದಿಂದ ಬೆಂಗಳೂರಿನ ಕಾರ್ಪೋರೇಟ್ ರಂಗದಲ್ಲಿ ಈ ಹುಡುಗರು ಹೆಸರು ಮಾಡುತ್ತಿದ್ದಾರೆ. ಪಾಣಿಘಾಸ್ ಎಂದಾಕ್ಷಣವೇ ಅಲ್ಲೊಂದು ಸಂಗೀತದ ಅಲೆ ನಿಧಾನವಾಗಿ ಮೈಚಾಚಿಕೊಳ್ಳುತ್ತದೆ. ನಿಜವಾದ ಸಂಗೀತದ ಅಭಿಮಾನಿಗಳು ಪಾಣಿಘಾಸ್ ತಂಡದ ಸಂಗೀತ ಕೇಳಿದಾಕ್ಷಣ ಒಂದು ಸಾರಿ ಕಿವಿ ನಿಮಿರಿ ನಿಲ್ಲುತ್ತದೆ. ಇದು ಪಾಣಿಘಾಸ್ ಕ್ರಿಯೇಟ್ ಮಾಡಿದ ಸಂಗೀತ ಲೋಕದ ಹೊಸ ಕ್ರೇಜ್.
ಅಂದಹಾಗೆ ‘ಪಾಣಿಘಾಸ್’ ಯಾಕೆ ಇತರ ಸಂಗೀತ ಬ್ಯಾಂಡ್‌ಗಳಿಗಿಂತ ಭಿನ್ನ ಅಂತೀರಾ..? ಹಾಗಾದರೆ ನಿಮ್ಮ ಪ್ರಶ್ನೆಯ ಮೊಣಚಿನಲ್ಲಿಯೇ ಉತ್ತರ ಕೂಡ ಇದೆ ಅನ್ನಬಹುದು. ‘ಪಾಣಿಘಾ’ ಇದು ಪಕ್ಕಾ ಸಂಸ್ಕೃತ ಪದಕೋಶದಿಂದ ಬಳಕೆಯಾದ ಪದ ಎನ್ನುವುದು ತಂಡದ ಮಾತು. ಆಂಗ್ಲ ಭಾಷೆಯಲ್ಲಿಯೇ ಇದರ ಅರ್ಥವನ್ನು ಹೇಳುವುದಾದರೆ ಪರ್ಕಸನಿಷ್ಟ್. ಅಚ್ಚ ಕನ್ನಡ ಭಾಷೆಯಲ್ಲಿ ಹೇಳುವುದಾದರೆ ಬರೀ ಕೈಯಲ್ಲಿಯೇ ಸಂಗೀತ ಪರಿಕರಗಳನ್ನು ಬಡಿಯುವವರಿಗೆ ‘ಪಾಣಿಘಾ’ ಎನ್ನಲಾಗುತ್ತದೆ. ಪಾಣಿಘಾಸ್ ಎಂದರೆ ಬರೀ ಕೈಯಲ್ಲಿ ಸಾಧನಾ ಬಡಿಯುವ ಹುಡುಗರು ಎನ್ನುವ ಅರ್ಥ ಬರುತ್ತದೆ.
ಹುಡುಕಾಟದ ಹುಡುಗರು:
ಪಾಣಿಘಾಸ್ ಟೋಟಲಿ ಭಿನ್ನ. ಇಲ್ಲಿ ದೇಶ- ವಿದೇಶಗಳಲ್ಲಿ ಬಳಸುವ ಸಂಗೀತ ಪರಿಕರಕಗಳೇ ಮುಖ್ಯ ಐಟಂಗಳು. ಅರೇಬಿಯನ್ ದೇಶಗಳಲ್ಲಿ ಜಾಸ್ತಿಯಾಗಿ ಕಂಡು ಬರುವ ಬೆಲ್ಲಿ ಡ್ಯಾನ್ಸ್‌ಗೆ ಬಳಸಲಾಗುವ ದರುಬೂಕಾ ಎನ್ನುವ ವಿಶಿಷ್ಟ ಮಾದರಿಯ ಸಂಗೀತ ಪರಿಕರಕವನ್ನು ತಂಡ ಹೊಂದಿದೆ. ಇದರ ಜತೆಯಲ್ಲಿ ಆಪ್ರಿಕನ್ ದೇಶದಿಂದ ಜಂಬೆ, ಕ್ಯೂಬಾ ರಾಷ್ಟ್ರದಿಂದ ತಂದ ಪೊಂಗೋ ಎನ್ನುವ ಸಂಗೀತ ಸಾಧನ ತಂಡದ ಮುಖ್ಯ ಬೇಸ್ ಪಾಯಿಂಟ್.
ಇದರ ಜತೆಗೆ ದೇಶದಲ್ಲಿರುವ ನಾನಾ ಅದಿವಾಸಿ ಸಮುದಾಯದಿಂದ ತಂದ ಸಂಗೀತ ಪರಿಕರಕಗಳು, ಲೋಕಲ್ ಆಗಿ ಸಿಗುವ ಚೆಂಡೆ, ತಾಸೆ, ಜಾಗಟೆಯಂತಹ ಐಟಂಗಳು ಈ ತಂಡದಲ್ಲಿದೆ. ಡಿಜಿರೆಡೋ ಆಸೀಸ್‌ನ ಅದಿವಾಸಿ ಸಂಗೀತ ಪರಿಕರಕಗಳು, ಕರಾವಳಿ ಮೂಲದ ದುಡಿ ಎಲ್ಲವೂ ಪಾಣಿಘಾಸ್ ತಂಡದ ಸೊತ್ತುಗಳು. ಈಗಲೂ ಇಂತಹ ಸಂಗೀತ ಸಾಧನಾಗಳನ್ನು ಹುಡುಕಾಟದಲ್ಲಿಯೇ ಹುಡುಗರು ಸಂಪೂರ್ಣ ಮಗ್ನವಾಗಿದ್ದಾರೆ.
ಒಂದೊಂದು ಸಂಗೀತ ಸಾಧನಕ್ಕಾಗಿ ಬರೋಬರಿ ಎರಡು- ಮೂರು ತಿಂಗಳು ಸುತ್ತಾಟ ಮಾಡಿದ್ದು ಇದೆ ಎನ್ನುತ್ತಾರೆ ಪಾಣಿಘಾಸ್ ತಂಡದ ಸದಸ್ಯ ಕಬೀರ್ ಮಾನವ್. ಸಂಗೀತ ಸಾಧನಗಳು ಹೆಚ್ಚು ಕಡಿಮೆ ಬೆಲೆಬಾಳುವಂತವುಗಳು.. ಮೊದಲು ತಿಂಗಳ ಸಂಬಳ ಕೊಟ್ಟು ಇಡೀ ಒಂದು ತಿಂಗಳು ಉಪವಾಸ ವೃತ್ತ ಮಾಡಿದ ಕತೆಯನ್ನು ಕಬೀರ್ ಬಿಚ್ಚಿಡುತ್ತಾ ರೆ. ಪಾಣಿಘಾಸ್ ತಂಡದಲ್ಲಿರುವ ಒಂದೊಂದು ಸಂಗೀತ ಸಾಧನಗಳು ಒಂದೊಂದು ಕತೆಯನ್ನು ಹೇಳುತ್ತದೆ.
ಸಂಗೀತ ಪರಿಕರಕಗಳ ಹುಡುಕಾಟ, ಆರ್ಥಿಕ ಮುಗ್ಗಟ್ಟು, ತಂಡದ ತರಬೇತಿ ಸಮಯದಲ್ಲಿ ಅಕ್ಕಪಕ್ಕದವರು ಮಾಡುವ ಕಿರಿಕಿರಿ ಬಹಳಷ್ಟು ಸಲ ತಂಡವನ್ನು ಘಾಸಿ ಮಾಡಿದ ನೆನಪುಗಳನ್ನು ಕಬೀರ್ ನಿದಾನವಾಗಿ ಬಿಚ್ಚಿಡುತ್ತಾರೆ. ಆದರೆ ತಂಡ ಕಳೆದ ಒಂದು ವರ್ಷದಲ್ಲಿ ಈ ಎಲ್ಲ ಕಹಿ ನೆನಪುಗಳನ್ನು ಮರೆತು ಬಿಟ್ಟು ಹೊಸ ಪರಂಪರೆಯನ್ನು ಹುಟ್ಟಿ ಹಾಕಿದೆ ಎಂದಾಗ ಕಬೀರ್ ಸಂತೃಪ್ತಿಯ ನಗು ಪಸರಿಸುತ್ತಾರೆ.
ಪಾಣಿಘಾದ ಬಾಯ್ಸ್ ಝೋನ್:
‘ಪಾಣಿಘಾಸ್’ ಹುಟ್ಟಿದ ಕತೆನೇ ತುಂಬಾನೇ ಭಿನ್ನ. ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಪದವಿ ಪಡೆದ ಕಬೀರ್ ಮಾನವ್ ಹಾಗೂ ಬೆಂಗಳೂರಿನ ಆಂಟೆನಾ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ದುಡಿಯುತ್ತಿರುವ ಮಂಜೇಶ್ವರ ಮೂಲದ ವೆಂಕಟ್ ಇಬ್ಬರಿಗೂ ಸಂಗೀತ ಮೇಲೆ ವಿಶೇಷ ಮೋಹ. ಏನಾದರೂ ಸಾಸಿ ಬಿಡಬೇಕೇನ್ನುವ ಚಟ. ಇದೇ ಮೋಹ ಚಟದ ಪರಿಣಾಮ ‘ಪಾಣಿಘಾ’ ಎನ್ನುವ ಟೋಟಲಿ ಭಿನ್ನ ತಂಡವೊಂದು ಹುಟ್ಟಿಕೊಂಡಿತು.
ಇದೇ ಆಸಕ್ತಿಯಿಂದ ಬೆಂಗಳೂರಿನಲ್ಲಿ ಸುತ್ತಾಡಿಕೊಂಡಿದ್ದ ಶೈಲೇಶ್, ದಿನೇಶ್, ಧನುಷ್, ಆಂಜೋ ಜೋಕೆಬ್, ಅರ್ಜುನ್ ಕಜೆ, ರಾಮಕೃಷ್ಣ ಜತೆ ಸೇರಿದರು. ಪಾಣಿಘಾಸ್‌ನ ಟೀಮ್ ಮ್ಯಾನೇಜರ್ ಕೋರಮಂಗಲದಲ್ಲಿದ್ದ ದಿನೇಶ್ ಭಟ್ ಅವರ ಫ್ಲ್ಯಾಟ್ ಮೇಲೆ ಪ್ರತಿ ವಾರಕ್ಕೊಮ್ಮೆ ತರಬೇತಿ ಆರಂಭವಾಯಿತು. ವೆಂಕಟ್ ದುಡಿಯುತ್ತಿದ್ದ ಸಾಫ್ಟ್‌ವೇರ್ ಕಂಪನಿಯಲ್ಲಿ ಪಾಣಿಘಾ ತಂಡ ತನ್ನ ಮೊದಲ ಕಾರ‍್ಯಕ್ರಮ ನೀಡಿತು.
ಈ ಬಳಿಕ ಕೋರಮಂಗಲದ ಪಾರ್ಕ್‌ನಲ್ಲಿ ಫ್ಲಾಶ್ ಮೋಬ್, ಮಹಮ್ಮದ್ ಬೊಳುವಾರು ಅವರ ಕೃತಿ ಬಿಡುಗಡೆಯ ಸಮಯದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇವರ ಅತೀ ದೊಡ್ಡ ಕಾರ‍್ಯಕ್ರಮ ಆಯೋಜಿಸಲಾಗಿತ್ತು. ಈ ಬಳಿಕ ಪಾಣಿಘಾ ತಂಡಕ್ಕೆ ದೊಡ್ಡ ಮಟ್ಟದ ಬ್ರೇಕ್ ಸಿಕ್ಕಿತು ಎನ್ನುತ್ತಾರೆ ಕಬೀರ್ ಮಾನವ್. ಹುಡುಗರ ಸತತ ಹೋರಾಟ ಹಾಗೂ ಸಾಸಬೇಕೇನ್ನುವ ಛಲ ಪಾಣಿಘಾಸ್ ತಂಡದ ಹೈಲೇಟ್ ಎನ್ನಬಹುದು. ಟೋಟಲಿ ಹೊಸ ಹುಡುಗರ ಪ್ರಯತ್ನಕ್ಕಂತೂ ಶಹಬ್ಬಾಸ್ ಎನ್ನಲೇ ಬೇಕು.
......
ಕೋಟ್ ಕಾರ್ನರ್
‘ಸಂಗೀತವನ್ನು ನಮ್ಮ ತಂಡ ಯಾವತ್ತೂ ಕೂಡ ಸಿರೀಯಸ್ ಆಗಿ ಸ್ಟಡಿ ಮಾಡಿಲ್ಲ. ಯಾವುದೇ ಉಪಕರಣ ಕೊಟ್ಟರೂ ಅದರಿಂದ ಸಂಗೀತ ಕೇಳಿಸುವಂತಹ ತಾಕತ್ತು ನಮ್ಮಲ್ಲಿದೆ. ಸಂಗೀತದ ಕುರಿತು ನಮ್ಮಲ್ಲಿ ಹುಟ್ಟಿಕೊಂಡ ವಿಶೇಷ ಪ್ರೀತಿಯೇ ಈ ತಂಡದ ರಚನೆಗೆ ಕಾರಣವಾಯಿತು. ವಿನಾಶದ ಅಂಚಿನಲ್ಲಿರುವ ಬಹಳ ಹಳೆಯ ಸಂಗೀತ ಪರಿಕರಕಗಳನ್ನು ಒಂದಾಗಿ ಸೇರಿಸಿಕೊಂಡು ಸಂಸ್ಕೃತಿಯ ಜತೆಗೆ ಕೂಡಿಸುವ ಕೆಲಸ ನಮ್ಮಿಂದ ನಡೆಯುತ್ತಿದೆ ಎನ್ನುವ ಹೆಮ್ಮೆ ನಮ್ಮ ತಂಡದಲ್ಲಿದೆ.
- ಕಬೀರ್ ಮಾನವ್, ಪಾಣಿಘಾಸ್ ತಂಡದ ಸದಸ್ಯ.
......................
ವಿಜಯ ಕರ್ನಾಟಕ-ಯುವಘರ್ಜನೆ-೧೨-೧೬-೦೫-೧೨
* ಸ್ಟೀವನ್ ರೇಗೊ, ದಾರಂದಕುಕ್ಕು
Tuesday, May 15, 2012
ನನ್ನಪತ್ರಿಕೆ ನನ್ನ ಮಾತು..
ಸುಗತ ಶ್ರೀನಿವಾಸ್‌ರಾಜು
ನನ್ನ ಬದುಕಿಗೆ ರೂಪುಕೊಟ್ಟ ರಾಜ್ಯದ ನಂಬರ್‌ವನ್ ಪತ್ರಿಕೆ ವಿಜಯಕರ್ನಾಟಕದ ಹೊಸ ಸಂಪಾದಕರು. ಸುಗತ ಈಗಾಗಲೇ ಆಂಗ್ಲ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಔಟ್‌ಲುಕ್‌ನಲ್ಲಿ ದುಡಿದವರು. ಅದರಲ್ಲೂ ಮುಖ್ಯವಾಗಿ ಖ್ಯಾತ ಪತ್ರಕರ್ತರಾದ ವಿನೋದ್ ಮೆಹ್ತಾ ಅವರ ತಂಡದಲ್ಲಿದ್ದ ಉತ್ಸಾಹಿ ಪತ್ರಕರ್ತ. ವಿಜಯ ಕರ್ನಾಟಕ ಪತ್ರಿಕೆ ಮಾಡುತ್ತಿರುವ ಹೊಸ ಮಾದರಿ ಪ್ರಯತ್ನಗಳಿಂದ ಈಗಾಗಲೇ ರಾಜ್ಯದಲ್ಲಿಯೇ ಮೊದಲ ಸ್ಥಾನ ಉಳಿಸಿಕೊಂಡು ತನ್ನ ಸಾಮರ್ಥ್ಯ ಹಾಗೂ ಪ್ರಾಬಲ್ಯತೆಯನ್ನು ಮೆರೆದಿದೆ.
ಸುಗತ ಬಂದ ನಂತರನೂ ಈ ಕೆಲಸ ಮುಂದುವರಿಯುವ ಎಲ್ಲ ಸಾಧ್ಯತೆಗಳು ಮತ್ತಷ್ಟೂ ದಟ್ಟವಾಗುವ ಸಾಧ್ಯತೆ ಇದೆ. ಬರಹಗಾರನಾಗಿ, ಹವ್ಯಾಸಿ ಪತ್ರಕರ್ತರಾಗಿ ಅದಕ್ಕೂ ಮುಖ್ಯವಾಗಿ ಕ್ಯಾಮೆರಾದಲ್ಲಿ ಕಣ್ಣುಗಳನ್ನು ನೆಟ್ಟ ಸುಗತ ಶ್ರೀನಿವಾಸ್‌ರಾಜು ವಿ.ಕ.ದ ಪಾಲಿಗೊಂದು ವರದಾನ ಎಂದೇ ಹೇಳಬಹುದು. ಅಂದಹಾಗೆ ಸುಗತ ಕುರಿತು ಸರಿಯಾಗಿ ತಿಳಿಯಬೇಕಾದರೆ ಅವರ ಬ್ಲಾಗ್‌ಗೊಮ್ಮೆ ಭೇಟಿ ಕೊಟ್ಟು ನೋಡಿ. www.sugataraju.blogspot.com ಟೋಟಲಿ ಸುಗತ ಎನ್ನುವ ಸರಳ, ಧನಾತ್ಮಕ ಚಿಂತನೆಯ ವ್ಯಕ್ತಿಯೊಬ್ಬರು ಇಲ್ಲಿ ಕಾಣ ಸಿಗುತ್ತಾರೆ. ನನ್ನ ಹೊಸ ಬಾಸ್‌ಗೆ ಕಂಗ್ರಾಟ್ಸ್ .. ವಿ.ಕ.ದಲ್ಲಿ ಮತ್ತಷ್ಟೂ hosa ಅವತಾರವನ್ನು ತಾಳಲಿ ಎನ್ನೋದು ನನ್ನ ಕನಸು..
ಸ್ಟೀವನ್ ರೇಗೊ, ದಾರಂದಕುಕ್ಕು
ರೇಗೋ ಬಾಲ್ಕನಿ
Thursday, May 10, 2012
ರೇಡಿಯೋ ‘ಮಿರ್ಚಿ’ ಯಲ್ಲಿ ಬ್ರೇಕಿಂಗ್ ನ್ಯೂಸ್ !
ನಂಬರ್‌ವನ್ ಖಾಸಗಿ ಎಪ್‌ಎಂವಾಹಿನಿ ರೇಡಿಯೋ ಮಿರ್ಚಿಯಲ್ಲಿ ಕಾರ‍್ಯಕ್ರಮಗಳಲ್ಲಿ ಕೇಳುವರಿಗೆ ಗುರುವಾರ ಬ್ರೇಕಿಂಗ್ ನ್ಯೂಸ್ ಕಾದಿತ್ತು. ಎಲೆಕ್ಕ್ರಾನಿಕ್ ಮಾಧ್ಯಮಗಳ ಜತೆಗಿನ ದಿನಾಲೂ ಒದ್ದಾಡುವ ಪದವೊಂದು ಯಾಕ್ ಅಂತಾ ರೇಡಿಯೋದಲ್ಲಿ ಬಂತು ಅಂತೀರಾ..? ಜಸ್ಟ್ ಡಿಟೇಲ್‌ಗೆ ಓದಿ ನೋಡಿ....
ನಗರದ ನಂಬರ್‌ವನ್ ಖಾಸಗಿ ಎಪ್‌ಎಂವಾಹಿನಿ ರೇಡಿಯೋ ಮಿರ್ಚಿಯಲ್ಲಿ ಕಾರ‍್ಯಕ್ರಮಗಳಲ್ಲಿ ಕೇಳುವರಿಗೆ ಗುರುವಾರ ಬ್ರೇಕಿಂಗ್ ನ್ಯೂಸ್ ಕಾದಿತ್ತು. ಎಲೆಕ್ಕ್ರಾನಿಕ್ ಮಾಧ್ಯಮಗಳ ಜತೆಗಿನ ದಿನಾಲೂ ಒದ್ದಾಡುವ ಪದವೊಂದು ಯಾಕ್ ಅಂತಾ ರೇಡಿಯೋದಲ್ಲಿ ಬಂತು ಅಂತೀರಾ..? ಅದರಲ್ಲೂ ರೇಡಿಯೋದಲ್ಲೂ ಇನ್ನೂ ಮುಂದೆ ಬ್ರೇಕಿಂಗ್ ನ್ಯೂಸ್ ಬರ‍್ತಾ..? ಎನ್ನುವ ಪ್ರಶ್ನೆಗಳ ಬಾಣವನ್ನು ಬಿಡುವ ಮೊದಲು ಜಸ್ಟ್ ಹೋಲ್ಡ್ ಆನ್ ಇದು ಬ್ರೇಕಿಂಗ್ ನ್ಯೂಸ್ ಚಿತ್ರದ ಕುರಿತು ಮಾತು.
ಮಂಗಳೂರಿನ ಸ್ಟಾರ್ ರೇಡಿಯೋ ವಾಹಿನಿ ರೇಡಿಯೋ ಮಿರ್ಚಿಯ ದಿನಚರಿ ಗುರುವಾರ ಬದಲಾಗಿತ್ತು. ದಿನನಿತ್ಯದ ಕಾರ‍್ಯಕ್ರಮಗಳ ಜತೆಯಲ್ಲಿ ವಿಭಿನ್ನತೆಯನ್ನು ಕೊಡಲು ತಂಡ ವಿಶಿಷ್ಟ ರೂಪದ ಚಾಟ್ ಶೋ ಆಯೋಜಿಸಿತ್ತು. ಸ್ಯಾಂಡಲ್‌ವುಡ್ ಇಂಡಸ್ಟ್ರಿಯಲ್ಲಿ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್‌ಗಳ ಮೇಲೆ ಹೊಡೆತ ನೀಡಲು ಬರುತ್ತಿರುವ ನಾಗತಿಹಳ್ಳಿ ಮೇಷ್ಟ್ರು ನಿರ್ದೇಶನದ ಬ್ರೇಕಿಂಗ್ ನ್ಯೂಸ್ ತಂಡ ಸಖತ್ ಆಗಿ ಗಂಟೆ ಗಟ್ಟಲೆ ರೇಡಿಯೋ ಜಾಕಿಗಳ ಜತೆ ಮುಕ್ತ ವಾಗಿ ಮಾತಿಗೆ ನಿಂತಿತ್ತು.
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಜತೆ ನಟ ಅಜೇಯ್‌ರಾವ್, ನಟಿ ರಾದಿಕಾ ಪಂಡಿತ್, ಚಿತ್ರದ ಸಂಗೀತ ನಿರ್ದೇಶಕ ಸ್ಟೀಪನ್ ಪ್ರಯೋಗ್ ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡು ಕೇಳುಗರಿಗೆ ಮನರಂಜನೆ ನೀಡುತ್ತಿದ್ದರು. ರಿವೈಂಡ್ ರಾಗದಲ್ಲಿ ರೇಡಿಯೋ ಮಿರ್ಚಿ ಜಾಕಿ ಜ್ಯೋತಿ ಸಾಲಿಗ್ರಾಮ ಸಖತ್ ಆಗಿ ಬ್ರೇಕಿಂಗ್ ನ್ಯೂಸ್ ತಂಡವನ್ನು ತುಂಟಾದ ಪ್ರಶ್ನೆಗಳ ಮೂಲಕ ಮಜಾ ನೀಡುತ್ತಿದ್ದರು.
ಕನ್ನಡಬಿಟ್ಟ ಮೇಷ್ಟ್ರು:
ಕನ್ನಡದ ಖ್ಯಾತ ನಿರ್ದೇಶಕರ ಸಾಲಿನಲ್ಲಿ ಸೇರಿಕೊಳ್ಳುವ ನಾಗತಿಹಳ್ಳಿ ಚಂದ್ರಶೇಖರ್ ಈ ಬಾರಿ ಕನ್ನಡವನ್ನು ಬಿಟ್ಟು ಬಿಟ್ಟಿದ್ದಾರೆ. ಈ ಹಿಂದೆ ಕನ್ನಡದ ಪದಗಳಲ್ಲಿಯೇ ಚಿತ್ರ ಶೀರ್ಷಿಕೆಯನ್ನು ಜೋಡಿಸಿಕೊಟ್ಟು ಕನ್ನಡ ಪ್ರೀತಿ ಮೆರೆಯುತ್ತಿದ್ದ ಮೇಷ್ಟ್ರು ಈ ಬಾರಿ ಆಂಗ್ಲ ವ್ಯಾಮೋಹಕ್ಕೆ ಸಿಲುಕಿಕೊಂಡಿದ್ದಾರೆ. ಕಾದಂಬರಿ, ಕವಿತೆಯ ಸಾಲಿನಲ್ಲಿ ಶೀರ್ಷಿಕೆಯನ್ನು ಇಟ್ಟು ಮೋಡಿ ಮಾಡುತ್ತಿದ್ದ ಮೇಷ್ಟ್ರು ಆಧುನಿಕ ಕಾಲಘಟ್ಟದಲ್ಲಿ ಕನ್ನಡದ ಜತೆಯಲ್ಲಿ ಆಂಗ್ಲನೂ ಇರಲಿ ಎನ್ನುವ ಮೂಲಾಜಿಗೆ ಬಿದ್ದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎನ್ನುವ ಪದ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸರಿಯಾದ ಅರ್ಥದಲ್ಲಿ ಬಳಕೆಯಾಗುತ್ತಿಲ್ಲ ಎನ್ನುವ ಕೊರಗಿನಲ್ಲಿ ಮೇಷ್ಟ್ರು ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಮಾಧ್ಯಮಗಳ ನಿಜವಾದ ಹೊಣೆಗಾರಿಕೆ ಹಾಗೂ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿಯ ಚಿತ್ರಣ ಈ ಚಿತ್ರದಲ್ಲಿ ಇರಲಿದೆಯಂತೆ. ಅದರಲ್ಲೂ ತಕ್ಕಮಟ್ಟಿಗೆ ಗ್ಲಾಮರ್ ಹಾಗೂ ಕಮರ್ಷಿಯಲ್ ಟಚ್ ಆಪ್ ಚಿತ್ರದಲ್ಲಿ ಕಾಣಿಸಿಕೊಂಡಿದೆ.
ಚಿತ್ರದಲ್ಲಿ ನಟ ಅಜೇಯ್ ರಾವ್ ವರದಿಗಾರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ರಾದಿಕಾ ಪಂಡಿತ್ ತುಂಬಾನೇ ಚೆಲ್ಲು ಚೆಲ್ಲಾದ ಪಾತ್ರದಲ್ಲಿ ಮಿಂಚಿದ್ದಾರೆ. ಇವರ ಜತೆಯಲ್ಲಿ ಅನಂತ್‌ನಾಗ್, ರಂಗಾಯಣ ರಘು, ಕಾಸರಗೋಡು ಚಿನ್ನಾ ಸೇರಿದಂತೆ ಬಹುತಾರಾಗಣ ಚಿತ್ರಕ್ಕಿದೆ.
ರಾಗಕ್ಕೆ ಬಂತು ಜೀವ !:
ಪ್ಯಾರಿಸ್ ಪ್ರಣಯದ ಮೂಲಕ ಕ್ಲಿಕ್ ಆದ ಸ್ಟೀಪನ್ ಪ್ರಯೋಗ್ ಈ ಚಿತ್ರಕ್ಕೆ ವಿಶಿಷ್ಟ ರೂಪದ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿರುವ ಆರು ಹಾಡುಗಳಲ್ಲಿಯೂ ಪ್ರಯೋಗ್ ಹೊಸ ರೀತಿಯ ಪ್ರಯೋಗ ಮಾಡಿದ್ದಾರೆ.
ಚಿತ್ರಕ್ಕೆ ನಾಲ್ಕು ಹಾಡುಗಳನ್ನು ನಾಗತಿಹಳ್ಳಿ ಚಂದ್ರಶೇಖರ್ ಬರೆದಿದ್ದಾರೆ. ಒಂದು ಹಾಡನ್ನು ಮಂಗಳೂರಿನ ನಿವೃತ್ತ ಪ್ರಾಧ್ಯಾಪಕ ನಾ.ದಾಮೋದರ ಶೆಟ್ಟಿ ಬರೆದಿದ್ದಾರೆ. ಮತ್ತೊಂದು ಹಾಡನ್ನು ಯೋಗರಾಜ್ ಭಟ್ಟರು ಬರೆದಿದ್ದಾರೆ. ಸಂಬಂಧ ಎನ್ನುವ ಹಾಡುವ ಮೂಲಕ ಸಂಗೀತ ಲೋಕದಲ್ಲಿ ತೀರಾ ವಿರಳವಾಗಿ ಬಳಸುವ ಹಂಸನಾದರಾಗವನ್ನು ಬಳಸಲಾಗಿದೆ.
ಕನ್ನಡದ ಇಂದಿನ ಸಿನಿಮಾಗಳಲ್ಲಿ ಈ ರಾಗವನ್ನು ಅಷ್ಟಾಗಿ ಬಳಕೆ ಮಾಡುತ್ತಿಲ್ಲ ಎನ್ನುವುದು ಮೇಷ್ಟ್ರು ಮಾತು. ಸಂಬಂಧ ಹಾಡನ್ನು ಇಲ್ಲಿ ಗುಜರಿ ಹಾಡೆಂದು ಕರೆಯಲಾಗಿದೆಯಂತೆ. ಕಾರಣ ಗುಜರಿ ವಸ್ತುಗಳ ನಡುವೆ ಇಡೀ ಹಾಡು ಚಿತ್ರೀಕರಣ ಮಾಡಲಾಗಿದೆ ಎನ್ನೋದು ಚಿತ್ರತಂಡ ತೆರೆದಿಟ್ಟ ಸಿಕ್ರೇಟ್ ಮಾತು. ಚಿತ್ರೀಕರಣ ನೋಡಿಕೊಂಡೇ ಪ್ರಯೋಗ್ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದರಂತೆ.
ಹುಡುಗಿ ಬಾರೇ...ಓಡಿ ಹೋಗೋಣ..ಎನ್ನುವ ಹಾಡಿನ ಮೂಲಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಹಳೆಯ ಮಾಧುರ‍್ಯ ಹಾಡುಗಳಿಗೆ ಗುಡ್‌ಬಾಯ್ ಹೇಳಿ ಹೊಸ ಟಪೋರಿ ಮಾದರಿಯ ಹಾಡಿಗೆ ಶರಣಾಗಿದ್ದಾರೆ. ಇಂದಿನ ಯುವಜನತೆಗೆ ಈ ಹಾಡು ಬಹಳಷ್ಟು ಹಿಡಿಸಲಿದೆ ಎನ್ನೋದು ಮೇಷ್ಟ್ರು ಹೇಳುವ ಮಾತು.
ಕೋಟ್ ಕಾರ್ನರ್:
ಬ್ರೇಕಿಂಗ್ ನ್ಯೂಸ್ ಸಿನಿಮಾದ ಉದ್ದೇಶ ಬರೀ ಮನರಂಜನೆ ಮಾತ್ರವಲ್ಲ. ಇದು ತಲೆ ಹಾಗೂ ಹೃದಯಕ್ಕೆ ಒಂದೇ ಸಲ ಕೆಲಸ ಕೊಡುತ್ತದೆ. ಚಿತ್ರದಲ್ಲಿ ರಂಜನೆ ಇದೆ. ರಂಜನೆ ಇರೋದು ಚಿತ್ರದಲ್ಲಿ ಚಿಂತನೆಯಾಗಿ ಬದಲಾವಣೆಯಾಗುತ್ತದೆ. ಪ್ರತಿ ಪಾತ್ರನೂ ನಮ್ಮ ನಡುವೆ ಇರುವ ಪಾತ್ರದಂತೆ ಕಾಣುತ್ತದೆ. ಚಿತ್ರದ ನೋಡಿದ ನಂತರ ವಿಮರ್ಶೆಯ ಬೀಜ ಬಿತ್ತುತ್ತದೆ.
- ನಾಗತಿಹಳ್ಳಿ ಚಂದ್ರಶೇಖರ್- ನಿರ್ದೇಶಕರು ಬ್ರೇಕಿಂಗ್ ನ್ಯೂಸ್
......
ಕೋಟ್ ಕಾರ್ನರ್
೨೪ ಗಂಟೆನೂ ಕೆಲಸ ಕಣ್ರಿ
ಮಾಧ್ಯಮದ ಮಂದಿಯ ಮೇಲೆ ನನಗೆ ವಿಶೇಷ ಪ್ರೀತಿ. ಯಾಕ್ ಅಂತೀರಾ ಈ ಚಿತ್ರದಲ್ಲಿ ನಾನು ಕೂಡ ವರದಿಗಾರ ದಿನದ ೨೪*೭ನಂತೆ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ವರದಿಗಾರನ ಕೆಲಸವನ್ನು ಅಷ್ಟೇ ಸೂಕ್ಷ್ಮವಾಗಿ ಗಮನಿಸಿಕೊಂಡು ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ಕತೆ ಎಲ್ಲೂ ಲೂಸ್ ಆಗಿಲ್ಲ. ಸ್ಕ್ರೀಪ್ಟ್ ತುಂಬಾನೇ ಚೆನ್ನಾಗಿ ವರ್ಕ್ ಆಗಿದೆ ಎನ್ನುವ ಅಂಶವನ್ನು ಪ್ರೇಕ್ಷಕನೇ ಚಿತ್ರ ನೋಡಿ ನೀಡುತ್ತಾ ನೆ.
- ಅಜೇಯ್ ರಾವ್, ನಟ ಬ್ರೇಕಿಂಗ್ ನ್ಯೂಸ್.
...
ಕೋಟ್ ಕಾರ್ನರ್
ಶ್ರದ್ಧೆ ಇಲ್ಲದ ಹುಡುಗಿ
ನನ್ನ ವೈಯಕ್ತಿಕ ಬದುಕಿಗೂ ಈ ಪಾತ್ರಕ್ಕೂ ತೀರಾ ಹತ್ತಿರದ ಹೋಲಿಕೆ ಇದೆ. ಚಿತ್ರದಲ್ಲಿ ನನಗೆ ಶ್ರದ್ಧಾ ಎನ್ನುವ ಹೆಸರಿಡಲಾಗಿದೆ. ಆದರೆ ಚಿತ್ರದ ತುಂಬಾ ಶ್ರದ್ಧೆಯನ್ನು ಬಿಟ್ಟು ಬಿಡುವ ಪಾತ್ರ. ಚಿತ್ರದ ಕುರಿತು ನಿರೀಕ್ಷೆ ಇದೆ. ಮೇಷ್ಟ್ರು ಜತೆ ಕೆಲಸ ಎಂದಾಗ ಶಿಸ್ತಿಗೆ ಜಾಸ್ತಿ ಮಹತ್ವ ಇದೆ. ಚಿತ್ರ ಮುಗಿಯುವ ವರೆಗೂ ನನಗೆ ಮನೆ ವಾತಾವರಣ ಎಂದೇ ಅನಿಸಿತ್ತು.
- ರಾದಿಕಾ ಪಂಡಿತ್- ನಟಿ, ಬ್ರೇಕಿಂಗ್ ನ್ಯೂಸ್
Tuesday, May 8, 2012
Monday, May 7, 2012
ಕುಡ್ಲದ ಯಂಗ್ ಡೈರೆಕ್ಟರ್ !
ಬ್ಲರ್ಬ್:
ಬಾಲಿವುಡ್‌ನ ಪಡಸಾಲೆಯಲ್ಲಿಕೂತು ಸಿನ್ಮಾದ ಕುರಿತು ಅಧ್ಯಯನ ಮಾಡಿಕೊಂಡು ತುಳು ಮಾತೃಭಾ ಷೆಯಲ್ಲಿ ಚಿತ್ರ ನಿರ್ದೇಶನ ಮಾಡಿ ಗೆದ್ದು ಬಂದ ಯುವಕನೊಬ್ಬನ ಕತೆ ಮುಂದಿದೆ.
ಬ್ಲರ್ಬ್:
ಬಾಲಿವುಡ್‌ಗೆಸಿನಿಮಾ ಇಂಡಸ್ಟ್ರಿಗೆ ಮುಂಬಯಿ ಇದೆ. ಟಾಲಿವುಡ್ ಸಿನಿಮಾಗಳಿಗೆ ಹೈದರಾಬಾದ್ ಇದೆ. ಕಾಲಿವುಡ್ ಸಿನಿಮಾಗಳಿಗೆಚೆನ್ನೈ ಇದೆ. ಸ್ಯಾಂಡಲ್‌ವುಡ್‌ಗೆ ಗಾಂಽನಗರವಿದೆ. ಕೋಸ್ಟಲ್‌ವುಡ್ ಸಿನ್ಮಾಗೆ ಇಡೀ ಕರಾವಳಿಯೇ ಇದೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಈ ಇಂಡಸ್ಟ್ರಿಯಲ್ಲಿ ಬದಲಾವಣೆ ಎನ್ನೋದು ಸುಲಭದ ಮಾತಲ್ಲ. ಇಲ್ಲಿನ ಸೀಮಿತ ಮಾರುಕಟ್ಟೆ, ಸೀಮಿತ ಪ್ರೇಕ್ಷಕ ವರ್ಗದಿಂದ ಚಿತ್ರದಗೆಲುವು- ಸೋಲು ಸದಾ ಕಾಲ ಅನಿಶ್ಚಿತ.
ಆದರೆಈಗ ಕಾಲ ಬದಲಾಗಿದೆ. ಅದರಲ್ಲೂಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಇಡೀ ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿಯೇ ಬೆರಗು ಕಣ್ಣಿ ನಿಂದ ನೋಡುವಂತಹ ಯುವ ನಿರ್ದೇಶಕರೊಬ್ಬರು ಬಂದಿದ್ದಾರೆ.
ಬಾಲಿವುಡ್‌ನ ಪಡಸಾಲೆಯಲ್ಲಿಕೂತು ಸಿನ್ಮಾದ ಕುರಿತು ಅಧ್ಯಯನ ಮಾಡಿಕೊಂಡು ತಮ್ಮ ಮಾತೃಭಾ ಷೆಯಲ್ಲಿ ಚಿತ್ರ ನಿರ್ದೇಶನ ಮಾಡಿ ಗೆದ್ದು ಬಂದ ಯುವಕನೊಬ್ಬನ ಕತೆ ಮುಂದಿದೆ. ಅದರಲ್ಲೂಬಾಲಿವುಡ್ ಅಂಗಣದಲ್ಲಿ ಕುಣಿದು ಕುಪ್ಪಳಿಸಬೇಕಾದ ಪ್ರತಿಭೆ ಲೋಕಲ್ ಸಿನಿಮಾ ರಂಗದಲ್ಲಿ ಮಿಂಚುತ್ತಿರುವುದು ಕೋಸ್ಟಲ್‌ವುಡ್ ಸಿನಿಮಾ ನಗರಿಯ ಅದೃಷ್ಟನೇ ಸರಿ.
ಲೋಕಲ್ ಹೀರೋ :
ಅದೇನೋ ಸಿನಿಮಾದ ಕುರಿತು ಕಲಿಯಬೇಕೆನ್ನುವಅತೀ ಉತ್ಸಾಹ. ಕಿನ್ನಿಗೋಳಿಯ ಮುಂಡ್ಕೂರುನ ರಂಜನ್ ರಾಘು ಶೆಟ್ಟಿ ಎನ್ನುವ ಹುಡುಗ ಮುಂಬಯಿಯಲ್ಲಲ್ಲಿ ಕನಸ್ಸು ಕಾಣುತ್ತಾನೆ. ಕನಸ್ಸಿನ ಮುಂದುವರಿದ ಭಾಗದಂತೆ ಬಾಲಿವುಡ್‌ನ ದಿಗ್ಗಜ ಸುಭಾಷ್ ಘಾಯ್ ಸಿನ್ಮಾ ಸ್ಕೂಲ್ ವಿಸ್ಟ್‌ಲಿಂಗ್‌ವುಡ್ಸ್ ಇಂಟರ್‌ನ್ಯಾಷನಲ್ ಎಂಟ್ರಿ ಪಡೆಯುತ್ತಾನೆ.
ಏಷ್ಯಾದಲ್ಲಿ ಅತೀ ದೊಡ್ಡ ಸಿನ್ಮಾ ಸ್ಕೂಲ್ ಎನ್ನುವ ಹಣೆಪಟ್ಟಿ ಇದರ ಪಾಲಿಗಿದೆ. ಟಿವಿ, ಆನಿಮೇಷನ್, ನಟನೆ, ಸಿನಿಮಾ ಅಟೋಗ್ರಾಫಿ, ಡೈರೆಕ್ಷನ್, ಎಡಿಟಿಂಗ್, ಪ್ರಾಡಕ್ಷನ್ ಸೇರಿದಂತೆ ಸಿನ್ಮಾದ ಕುರಿತು ಏನೆಲ್ಲ ಬೇಕೋ ಅದನೆಲ್ಲ ಈ ಶಿಕ್ಷಣ ದೇಗುಲದಲ್ಲಿ ವರ್ಲ್ಡ್ ಕ್ಲಾಸ್ ಗುರುಗಳಿಂದ ಕಲಿಸಲಾಗುತ್ತದೆ. ಇಲ್ಲಿಯ ಶಿಕ್ಷಣ ಜತೆಯಲ್ಲಿರಂಜನ್ ನಿರ್ಮಿಸಿದ ನಾನಾ ಡಾಕ್ಯುಮೆಂಟರಿಯ ಮೂಲಕ ಕೆನಡಾ, ಈಜಿಪ್ಟ್, -ನ್ಸ್ ಮೊದಲಾದ ವಿದೇಶಿ ದೇಶಗಳಲ್ಲಿ ಸ್ಕ್ರೀನಿಂಗ್ ಮಾಡಿಸಿಕೊಂಡು ಒಳ್ಳೆಯ ಹೆಸರು ಸಂಪಾದಿಸುತ್ತಾನೆ.
೨೦೦೭ರಲ್ಲಿ ನೋಕಿಯಾ ಎನ್ ಸಿರೀಸ್ ಕಂಪನಿ ನಡೆಸಿದ ಸ್ಪರ್ಧೆಯಲ್ಲಿ ರಂಜನ್ ಮೊಬೈಲ್‌ನಲ್ಲಿ ಮೂರು ನಿಮಿಷಗಳ ಕಾಲ ಚಿತ್ರಿಸಿದ ‘ಸೋಲಿಟ್ಯೂಟ್ ಡ್ರೀಮ್ಸ್’ಗೆ ಪ್ರಥಮ ಸ್ಥಾನ ಲಭ್ಯವಾಗುತ್ತದೆ. ಅಲ್ಲಿಂದಲೇ ಸಿನಿಮಾದ ಕುರಿತು ರಂಜನ್ ಮತ್ತಷ್ಟೂಸಿರೀಯಸ್ ಆಗಿ ಹೋದರಂತೆ !
ಅದೇ ಸಮಯದಲ್ಲಿ ಸಹಪಾಟಿಯಾಗಿದ್ದಸೂರ್ಯ ಮೆನನ್ ಹಾಗೂ ರಂಜನ್ ಸೇರಿಕೊಂಡು ಮಾತೃಭಾಷೆಯಲ್ಲಿ ಸಿನಿಮಾ ಮಾಡುವ ಕುರಿತು ದೊಡ್ಡ ಯೋಜನೆಯನ್ನು ಹಾಕಿಕೊಂಡಿದ್ದರು. ರಂಜನ್ ನಿರ್ದೇಶನದ ಜವಾಬ್ದಾರಿ ಹೊತ್ತು ಮೆನನ್ ನಿರ್ಮಾಪಕರಾಗಿ ‘ಅಮೇಟ್ ಅಸಲ್ ಈಮೇಟ್ ಕುಸಲ್’( ಆ ಕಡೆ ಅಸಲಿ ಈ ಕಡೆ ನಕಲಿ) ಎನ್ನುವ ತುಳು ಚಿತ್ರ ಈಗ ಕರಾವಳಿಯ ತುಂಬಾ ಸುದ್ದಿಯಲ್ಲಿದೆ. ಚಿತ್ರ ಬಿಡುಗಡೆಯಾದ ನಂತರವಂತೂ ಈ ಇಬ್ಬರು ಯುವಕರು ಕೋಸ್ಟಲ್‌ವುಡ್‌ನಲ್ಲಿ ಹೀರೋಗಳಾಗಿ ಮಿಂಚಿದ್ದಾರೆ.
ಅಸಲಿಗೂ ಚಿತ್ರದಲ್ಲಿ ಏನಿದೆ:
ಆಂಗ್ಲ ಭಾಷೆಯ ಖ್ಯಾತ ನಾಟಕಕಾರ ಶೇಕ್‌ಸ್ಪಿಯರ್‌ನ ‘ಎ ಕಾಮೆಡಿ ಆ- ಎರ್ರಾರಾಸ್’ನ ಮೂಲ ಕತೆಗೆ ಕರಾವಳಿಯ ಕಾಮೆಡಿ ಟಚ್ ಕೊಟ್ಟು ಈ ಚಿತ್ರವನ್ನು ಮಾಡಲಾಗಿದೆ. ಸೂರ್ಯ ಮೆನನ್ ಇಂಗ್ಲೀಷ್‌ನಲ್ಲಿ ಚಿತ್ರ ಕತೆಯನ್ನು ರೆಡಿ ಮಾಡಿದ್ದರು. ಈ ಚಿತ್ರಕತೆಗೆ ತುಳುವಿನ ಟಚ್ ಕೊಟ್ಟವರು ಕರಾವಳಿಯ ರಂಗಭೂಮಿ ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಹಾಗೂ ಎಂ. ಸಾಯಿಕೃಷ್ಣ.
ಬಾಲಿವುಡ್ ಹಿನ್ನೆಲೆ ಗಾಯಕಿ ಚiಕ್ ಚಲ್ಲೋ -ಮ್ ಹಂಸಿಕಾ ಅಯ್ಯರ್ ಈ ಚಿತ್ರಕ್ಕೆ ಹಾಡೊಂದನ್ನು ಹಾಡಿದ್ದಾರೆ. ಚಿತ್ರಕ್ಕೆ ಸಂಗೀತವನ್ನುರಂಜನ್ ಸಹಪಾಟಿ ಅಕಾಶ್ ಪ್ರಜಾಪತಿ ಹಾಗೂ ಹುಮಾಂಗ್ ದೋಶಿ ನೀಡಿದ್ದಾರೆ. ಛಾಯಾಗ್ರಹಣವನ್ನು ಸಾಹೀಲ್ ಪತಾಕ್ ನಿರ್ವಹಿಸಿದ್ದಾರೆ.
ಅದರಲ್ಲೂ ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಶಂಕರ್ ಮಹಾದೇವನ್ ಅವರ ಪುತ್ರ ಸಿದ್ದಾರ್ಥ್‌ರನ್ನು ಮೊದಲ ಬಾರಿಗೆ ಕರಾವಳಿ ಚಿತ್ರವೊಂದಕ್ಕೆ ಹಾಡಿಸಿದ ಖ್ಯಾತಿ ಈ ಚಿತ್ರ ತಂಡಕ್ಕೆ ಸಲ್ಲುತ್ತಿದೆ. ಈ ತುಳು ಚಿತ್ರದ ಮೂಲಕ ಸಿದ್ದಾರ್ಥ್‌ರನ್ನು ಲಾಂಚ್ ಮಾಡಲಾಗಿದೆ. ಇದೆಲ್ಲವೂ ಕೋಸ್ಟಲ್‌ವುಡ್ ಪಾಲಿಗೆ ಮೊತ್ತ ಮೊದಲ ಪ್ರಯತ್ನ. ಟೋಟಲಿ ದೂರದ ಹುಡುಗರು ಕರಾವಳಿಯಲ್ಲಿ ಮಾಡಿದ ಕೆಲಸ ಪ್ರೇಕ್ಷಕರ ಮುಂದೆ ನಿಂತಿದೆ.
..................
ಕೋಟ್ ಕಾರ್ನರ್
ಆರಂಭದಲ್ಲಿ ಸಾಹಸ ಪ್ರಧಾನ ಚಿತ್ರ ಮಾಡುವ ಯೋಜನೆ ಇತ್ತು. ಆದರೆ ಕರಾವಳಿಯ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಬಂದ ನಂತರವಂತೂ ಸಾಹಸ ಪ್ರಧಾನ ಚಿತ್ರಕ್ಕಿಂತ ಹಾಸ್ಯ ಪ್ರಧಾನ ಚಿತ್ರ ಮಾಡಿದರೆ ಮಾರುಕಟ್ಟೆ ಸ್ವಾಗತ ಮಾಡುತ್ತದೆ ಎಂದುಕೊಂಡು ಅಸಲ್-ಕುಸಲ್ ಮಾಡಲು ಯೋಜನೆಹಾಕಿಕೊಂಡೇವು
-------ರಂಜನ್ ರಾಘು ಶೆಟ್ಟಿ
ನಿರ್ದೇಶಕಅಮೇಟ್ ಅಸಲ್ ಈಮೇಟ್ ಕುಸಲ್
...
ಕೋಟ್ ಕಾರ್ನರ್
ತುಳು ಚಿತ್ರದ ಮೂಲಕ ಮತ್ತಷ್ಟೂ ಉತ್ಸಾಹ ಬಂದಿದೆ. ಬರುವ ವರ್ಷ ಹಿಂದಿಯಲ್ಲಿ ಚಿತ್ರ ನಿರ್ದೇಶನ ಹಾಗೂ ನಿರ್ಮಾಣ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ. ಎರಡು ವರ್ಷದ ನಂತರ ಮತ್ತೊಂದು ತುಳು ಚಿತ್ರ ನಿರ್ಮಾಣ ಮಾಡುವ ಕನಸ್ಸು ಇದೆ.
---ಸೂರ್ಯ ಮೆನನ್, ನಿರ್ಮಾಪಕಅಮೇಟ್ ಅಸಲ್ ಈಮೇಟ್ ಕುಸಲ್
................
* ಸ್ಟೀವನ್ ರೇಗೊ, ದಾರಂದಕುಕ್ಕು
...
ಕರಾವಳಿಯ ಡಾಕ್ಯುಮೆಂಟರಿ ಹುಡುಗ !
ಯುವಘರ್ಜನೆ-11
ಬ್ಲರ್ಬ್:
ಕಾಸರಗೋಡಿನ ಹುಡುಗನೊಬ್ಬ ಡಾಕ್ಯುಮೆಂಟರಿಗೆ ಕೈ ಹಾಕಿದ್ದಾನೆ. ಅದರ ಹೆಸರು ‘ದಿ ಎಂಡ್’ ಅಂತಾ. ಇದು ಬರೀಯ ಡಾಕ್ಯುಮೆಂಟರಿಯಾದರೆ ದೊಡ್ಡ ವಿಚಾರವೇ ಅಲ್ಲ. ಸಮಾಜಶಾಸ್ತ್ರಜ್ಞರಿಗೆ ಹಾಗೂ ಮಾನಸಿಕ ತಜ್ಞರಿಗೂ ಸದಾ ಕಾಲ ಜಟಿಲವಾಗಿ ಕಾಡುತ್ತಿರುವ ಆತ್ಮಹತ್ಯೆಯಂತಹ ಪ್ರಕರಣವನ್ನು ಈ ಹುಡುಗ ತನ್ನ ಡಾಕ್ಯುಮೆಂಟರಿಯಲ್ಲಿ ಎತ್ತಿಕೊಂಡಿದ್ದಾನೆ. ಮೋರ್ ಡಿಟೇಲ್ ಮುಂದೆ ಓದಿ....
ಬ್ಲರ್ಬ್:
ಸರಿಯಾಗಿ ಮೂರು ವರ್ಷದ ಹಿಂದೆ ಅಂದರೆ ನವೆಂಬರ್ ೨೯,೨೦೦೯ ರಂದು ರಾಜ್ಯದ ನಂಬರ್ ವನ್ ಕನ್ನಡ ದೈನಿಕ ‘ವಿಜಯ ಕರ್ನಾಟಕ’ದ ಸಾಪ್ತಾಹಿಕದಲ್ಲಿ ಪ್ರಕಟವಾದ ಒಂದು ಲೇಖನದ ವಸ್ತು ಈ ಹುಡುಗನ ಡಾಕ್ಯಮೆಂಟರಿಗೆ ಆಹಾರವಾಗಿತ್ತು. ಪುತ್ತೂರಿನಿಂದ ಮಾರು ದೂರ ಇರುವ ಕೆಯ್ಯೂರು-ಕಣಿಯೂರಿನ ಕಾಡಿನಲ್ಲಿರುವ ಕುಕ್ಕ ಎನ್ನುವ ಶ್ರೀಸಾಮಾನ್ಯ ವ್ಯಕ್ತಿಯನ್ನು ಇಟ್ಟುಕೊಂಡು ಕಾಸರಗೋಡಿನ ಹುಡುಗನೊಬ್ಬ ಡಾಕ್ಯುಮೆಂಟರಿ ತಯಾರಿಸಿದ್ದು ಮಾತ್ರವಲ್ಲ ಅದನ್ನು ಇಟ್ಟುಕೊಂಡು ಇಂಟರ್‌ನ್ಯಾಷನಲ್ ಲೆವೆಲ್‌ಗೂ ಸಾಗಿಸಿ ಹೆಸರು ಸಂಪಾದಿಸಿಕೊಂಡು ಬಂದಿದ್ದು ಈಗ ಬರೀ ಇತಿಹಾಸ.
ಆದರೆ ಇದೇ ಹುಡುಗ ಮತ್ತೆ ಡಾಕ್ಯುಮೆಂಟರಿಗೆ ಕೈ ಹಾಕಿದ್ದಾನೆ. ಅದರಲ್ಲೂ ಈ ಬಾರಿಯ ಡಾಕ್ಯುಮೆಂಟರಿ ನಾನಾ ಕಾರಣಗಳಿಂದ ಸುಂದರ ಸಮಾಜದಲ್ಲಿ ತಲ್ಲಣ ಎಬ್ಬಿಸುವ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಸಮಾಜಶಾಸ್ತ್ರಜ್ಞರಿಗೆ ಹಾಗೂ ಮಾನಸಿಕ ತಜ್ಞರಿಗೂ ಸದಾ ಕಾಲ ಜಟಿಲವಾಗಿ ಕಾಡುತ್ತಿರುವ ಆತ್ಮಹತ್ಯೆಯಂತಹ ಪ್ರಕರಣವನ್ನು ಈ ಹುಡುಗ ತನ್ನ ಡಾಕ್ಯುಮೆಂಟರಿಯಲ್ಲಿ ಎತ್ತಿಕೊಂಡಿದ್ದಾನೆ. ಈ ಮೂಲಕ ಆತ್ಮಹತ್ಯೆಯ ಹಾದಿ ಹಿಡಿಯುವ ಯುವ ಮನಸ್ಸುಗಳಿಗೆ ಗಟ್ಟಿಯಾದ ಸಂದೇಶ ನೀಡಲು ರೆಡಿಯಾಗಿದ್ದಾನೆ.
ಪ್ರತಿಭೆಯ ಖನಿ ಅಭಿ:
ಅಂದಹಾಗೆ ಈ ಹುಡುಗನ ಹೆಸರು ಅಭಿಷೇಕ್ ಕಾಸರಗೋಡು. ರಾಜ್ಯದ ಹಿರಿಯ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಹಿರಿಯ ಪುತ್ರ ಅಭಿಷೇಕ್ ತಂದೆಯಂತೆ ಪ್ರತಿಭಾವಂತ. ಬೆಂಗಳೂರಿನಲ್ಲಿರುವ ಸಿನಿಮಾ ಹಾಗೂ ಟೆಲಿವಿಷನ್ ಇನ್ಸ್‌ಸ್ಟಿಟ್ಯೂಟ್‌ನಲ್ಲಿ ೨೦೦೮-೦೯ರಲ್ಲಿ ಡಿಪ್ಲೋಮಾ ಮಾಡಿಕೊಂಡು ನೇರವಾಗಿ ಇಳಿದ್ದು ಗಾಂನಗರದ ಅಡ್ಡಾಕ್ಕೆ.. ಅದರಲ್ಲೂ ತಂದೆಯ ಬರವಣಿಗೆಯನ್ನು ಬಿಟ್ಟು ಅಭಿಷೇಕ್ ಮುತ್ತಿಕೊಂಡಿದ್ದು ಬಣ್ಣದ ಲೋಕವನ್ನು ಕ್ಯಾಮರೆಮನ್ ಸತ್ಯ ಹೆಗ್ಗಡೆ, ಅಶೋಕ್ ಕಶ್ಯಪ್ ಸೇರಿದಂತೆ ನಾನಾ ಕ್ಯಾಮರೆಮನ್‌ಗಳ ಕೈಯಲ್ಲಿ ಸಾಕಷ್ಟು ಕಲಿದ ಹುಡುಗ ಅಭಿಷೇಕ್ ‘ಕುಕ್ಕು ಹೇಳಿದ ಮರದ ಕತೆ’ಯ ಮೂಲಕ ಮೊದಲ ಬಾರಿಗೆ ಡಾಕ್ಯುಮೆಂಟರಿಯೊಂದಕ್ಕೆ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದರು.
ಆತ್ಮಹತ್ಯೆ ಮಾಡುವರಿಗೊಂದು ಪಾಠ:
‘ದಿ ಎಂಡ್’ ಎನ್ನುವ ಶಿರೋನಾಮೆಯಲ್ಲಿ ಲೈಫ್ ಸಮ್ ಟೈಮ್ಸ್ ಹಾರ್ಡ್ ಆಂಡ್ ಪೂವರ್ ಬಟ್ ಈಟ್ ಇಸ್ ಪ್ಯಾರಡೈಸ್ ಇನ್ ಕಂಪ್ಯಾರೀಶನ್ ವಿದ್ ಡೆತ್ ಎನ್ನುವ ಟ್ಯಾಗ್‌ಲೈನ್ ಇಟ್ಟುಕೊಂಡು ಬಂದಿರುವ ಈ ಡಾಕ್ಯುಮೆಂಟರಿಯಲ್ಲಿ ನಿರ್ದೇಶಕರಾದ ಅಶೋಕ್ ಕಶ್ಯಪ್ ಅವರ ಪ್ರೀತಿಯಿಂದ ಧಾರಾವಾಹಿಯ ಪಾತ್ರಧಾರಿ ಗಿರೀಶ್ ಕೃಷ್ಣ ಎನ್ನುವವರು ಆತ್ಮಹತ್ಯೆ ಮಾಡುವ ಸನ್ನಿವೇಶವನ್ನು ಈ ಡಾಕ್ಯುಮೆಂಟರಿಯಲ್ಲಿ ಚಿತ್ರಿಸಲಾಗಿದೆ. ಡಾಕ್ಯುಮೆಂಟರಿಗೆ ಚಿತ್ರಕತೆಯನ್ನು ಅಭಿಷೇಕ್ ಕಾಸರಗೋಡು ಹಾಗೂ ಚರಣ್ ವೀರ್‌ನಾಗ್ ಮಾಡಿದ್ದಾರೆ.
ಇನ್ನೂಳಿದಂತೆ ಸಂಕಲನದಲ್ಲೂ ಅಭಿ, ಚರಣ್ ಹಾಗೂ ಪ್ರವೀಣ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕ್ಯಾಮೆರಾ ಹಾಗೂ ನಿರ್ದೇಶಕನ ಜವಾಬ್ದಾರಿಯನ್ನು ಖುದ್ದು ಅಭಿಷೇಕ್ ಕಾಸರಗೋಡು ವಹಿಸಿಕೊಂಡಿದ್ದಾರೆ. ಎರಡು ಕ್ಯಾಮೆರಾಗಳ ಜತೆ ಚಿತ್ರೀಕರಣ ಮಾಡಲಾಗಿರುವ ಈ ಡಾಕ್ಯುಮೆಂಟರಿಗೆ ಈ ಯುವಕರು ಅತೀ ಹೆಚ್ಚು ಶ್ರಮ ಹಾಕಿರುವ ದಾಖಲೆ ಡಾಕ್ಯುಮೆಂಟರಿ ನೋಡಿದ ಪ್ರತಿಯೊಬ್ಬನಿಗೂ ಕಾಣಿಸಿಕೊಳ್ಳುತ್ತದೆ. ಅಭಿಷೇಕ್‌ರ ಮನೆಯ ಕೋಣೆಯೊಂದರಲ್ಲಿ ಸಂಪೂರ್ಣ ಚಿತ್ರಿತವಾಗಿರುವ ‘ದಿ ಎಂಡ್’ ನಂತರದ ದಿನಗಳಲ್ಲಿ ಸಾಮಾಜಿಕ ತಾಣಗಳಲ್ಲಿ ಪ್ರಚಾರ ಮಾಡಿ ಆತ್ಮಹತ್ಯೆ ಮಾಡುವವರು ಈ ಕೃತ್ಯದಿಂದ ಹಿಂದೆ ಸರಿಯುವಂತೆ ಮಾಡುವ ಯೋಚನೆ ಇವರಲ್ಲಿದೆ.
ಕುಕ್ಕ ಎನ್ನುವ ಡಾಕ್ಯುಮೆಂಟರಿ:
ಕುಕ್ಕ ಒಬ್ಬ ಶ್ರೀಸಾಮಾನ್ಯ ವ್ಯಕ್ತಿ. ಆತನ ವರ್ಕಿಂಗ್ ಪ್ಲೇಸ್ ಕೆಯ್ಯೂರಿನ ಕಣಿಯೂರಿನ ದಟ್ಟವಾದ ಕಾಡು. ಚಿತ್ರದ ಕತೆ ಆರಂಭವಾಗೋದು ಇಲ್ಲಿಂದ, ಕುಕ್ಕ ತನ್ನ ಬದುಕಿನ ನಾಲ್ಕು ಕತೆಗಳನ್ನು ಹೇಳುತ್ತಾನೆ. ಅದರಲ್ಲಿ ಕುಕ್ಕನ ಬದುಕು, ತನ್ನ ಸುತ್ತಮುತ್ತಲಿನ ಪ್ರಪಂಚ, ಕಾಣಿಯೂರಿನ ಸ್ಥಳೀಯರ ಜತೆಯಲ್ಲಿರುವ ಬಹಳ ಗಟ್ಟಿಯಾದ ಆತನ ಸಂಬಂಧಗಳು, ಕಾಡಿನ ಬಗ್ಗೆ ಇರುವ ಆತನ ಕಾಳಜಿ ಎಲ್ಲವೂ ಇಲ್ಲಿ ಕೌಂಟ್ ಆಗಿ ಚಿತ್ರ ಮುಂದುವರಿಯುತ್ತದೆ.
ಚಿತ್ರ ವೀಕ್ಷಿಸುತ್ತಾ ಸಾಗುತ್ತಿದ್ದಾಗ ಕುಕ್ಕನ ಬಗ್ಗೆ ಇರುವ ದೃಷ್ಟಿಕೋನಗಳು ಬದಲಾಗುತ್ತಾ ಸಾಗುತ್ತದೆ.
ಕುಕ್ಕನ ಪರಿಚಯ ಚಿತ್ರದ ಮೂಲಕ ಹೊರ ಬರುತ್ತಿದ್ದಂತೆಯೇ ಅಲ್ಲೊಂದು ಸಂದೇಶ ರವಾನೆಯಾಗುತ್ತದೆ. ‘ ನಿಜಕ್ಕೂ ಕುಕ್ಕ ಪಟ್ಟಣದಲ್ಲಿರುವ ಒಬ್ಬ ಶಿಕ್ಷಿತ ವ್ಯಕ್ತಿಗಿಂತ ಭಿನ್ನ ರೀತಿಯಲ್ಲಿ ಕಾಣಿಸುತ್ತಾನೆ. ಅದರಲ್ಲೂ ಮುಖ್ಯವಾಗಿ ಶಿಕ್ಷಿತ ವರ್ಗ ಮಾಡದೇ ಇರುವ ಕೆಲಸವನ್ನು ಕುಕ್ಕ ಕಾಡಿನಲ್ಲಿ ನಿಂತು ಮಾಡುವ ಮೂಲಕ ಪರಿಸರದ ಕುರಿತು ಕೊಂಚ ನಿಧಾನವಾಗಿ ವೀಕ್ಷಕರತ್ತ ಸಂದೇಶ ರವಾನಿಸುವಂತೆ ಭಾಸವಾಗುತ್ತದೆ.
ಈ ಚಿತ್ರ ೨೪ ನಿಮಿಷಗಳ ಕಾಲ ವೀಕ್ಷಕರನ್ನು ಎಳೆದಿಟ್ಟುಕೊಂಡು ಮುಂದುವರಿಯುತ್ತದೆ. ಈ ಡಾಕ್ಯುಮೆಂಟರಿ ಈಗಾಗಲೇ ದೇಶ-ವಿದೇಶದ ನಾನಾ ಫೆಸ್ಟಿವಲ್‌ಗೆ ಹೋಗಿ ಹೆಸರುಗಳಿಸಿಕೊಂಡು ವಾಪಾಸು ಬಂದಿದೆ. ಟೋಟಲಿ ಅಭಿಷೇಕ್ ಎನ್ನುವ ಪ್ರತಿಭಾವಂತ ಹುಡುಗ ತನ್ನದೇ ವ್ಯಾಪ್ತಿಯಲ್ಲಿ ಹೊಸ ಹೊಸ ಯೋಚನಾಲಹರಿಯನ್ನು ಬಿಚ್ಚಿಡುತ್ತಿದ್ದಾರೆ. ಗಾಂನಗರದ ಮಂದಿ ಸಾತ್ ಕೊಡುತ್ತಾರೋ ಗೊತ್ತಿಲ್ಲ. ಆದರೆ ಅಭಿಷೇಕ್‌ನಿಗಂತೂ ಉಜ್ವಲ ಭವಿಷ್ಯವಂತೂ ಕಾದಿದೆ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯುವುದಿಲ್ಲ.
...
ಕೋಟ್ ಕಾರ್ನರ್.....
ಯುವಜನತೆಯಲ್ಲಿ ಇತ್ತೀಚೆಗೆ ಮೌನ ಹಾಗೂ ಗಂಭೀರತೆಯ ಕೊರತೆ ಎದ್ದು ಕಾಣುತ್ತಿದೆ. ಆದರೆ ಅಭಿಷೇಕ್ ವಿಚಾರದಲ್ಲಿ ಮಾತ್ರ ಇದು ತಪ್ಪಾಗಿದೆ. ಅಭಿಷೇಕ್‌ನಲ್ಲಿ ವಯಸ್ಸಿಗೆ ಮೀರಿದ ಗಂಭೀರತೆ ಇದೆ. ಆತನ ಮೌನದಿಂದ ಬಹಳಷ್ಟು ವಿಚಾರಗಳನ್ನು ನಿರೀಕ್ಷೆಇಟ್ಟುಕೊಳ್ಳಬಹುದು.
- ನರೇಂದ್ರ ರೈ ದೇರ್ಲ, ಖ್ಯಾತ ಬರಹಗಾರ
...............
ಕೋಟ್ ಕಾರ್ನರ್
ಆತ್ಮಹತ್ಯೆ ತುಂಬಾನೇ ಸೂಕ್ಷ್ಮವಾದ ವಿಚಾರ. ಸಮಾಜದಲ್ಲಿ ದಿನನಿತ್ಯ ನಡೆಯುತ್ತಿರುವ ನೂರಾರು ಆತ್ಮಹತ್ಯೆಗಳ ಪ್ರಕರಣಗಳು ಮಾಧ್ಯಮಗಳ ಮೂಲಕ ಕಣ್ಣ ಮುಂದೆ ಯಾವಾಗಲೂ ಬರುತ್ತಿತ್ತು. ಇಂತಹ ಆತ್ಮಹತ್ಯೆಗೆ ಕಾರಣ ಹಾಗೂ ಕೊನೆಕ್ಷಣದಲ್ಲಿ ವ್ಯಕ್ತಿಯ ಮನಸ್ಸಿನಲ್ಲಿ ನಡೆಯುವ ತಳಮಳಗಳನ್ನು ಚಿತ್ರೀಕರಣಮಾಡಬೇಕು ಎನ್ನೋದು ನನ್ನ ಬಹಳ ದಿನಗಳ ಕನಸ್ಸು. ದಿ ಎಂಡ್ ಮೂಲಕ ಇದು ಈಡೇರಿದೆ.
- ಅಭಿಷೇಕ್ ಕಾಸರಗೋಡು, ದಿ ಎಂಡ್ ನಿರ್ದೇಶಕ
..............
* ಸ್ಟೀವನ್ ರೇಗೊ, ದಾರಂದಕುಕ್ಕು
................
Subscribe to:
Posts (Atom)