Tuesday, September 20, 2011

‘ರಾಸ್ಕಲ್ಸ್’ ಕಮಾಲು ಕಂಗನಾ ಇನ್ ಬಿಕಿನಿ


ಬಾಲಿವುಡ್ ನಿರ್ದೇಶಕ ಡೇವಿಡ್ ಧವನ್ ಕಾಮೆಡಿ ಟ್ರೈನ್ ಮತ್ತೆ ಹೊರಟು ನಿಂತಿದೆ. ಇಬ್ಬರು ‘ರಾಸ್ಕಲ್ಸ್’ಗಳನ್ನು ಕೂರಿಸಿಕೊಂಡು ಥಿಯೇಟರ್ ಮುಂದೆ ಬಂದು ನಿಂತಿದ್ದಾರೆ. ಆದರೆ ಟೂ-ಫೀಸ್ ಹಾಕಲು ಹಿಂದೇಟು ಹಾಕುತ್ತಿದ್ದ ಕಂಗನಾ ಚಿತ್ರದಲ್ಲಿ ತನ್ನ ಬಿಳಿ ದೇಹಸಿರಿಯ ದರ್ಶನ ಭಾಗ್ಯವನ್ನು ಮುಕ್ತವಾಗಿ ಪ್ರೇಕ್ಷಕರಿಗೆ ನೀಡಿದ್ದಾಳೆಯಂತೆ!

‘ರಾಸ್ಕಲ್ಸ್’ ಅತೀ ಶೀಘ್ರದಲ್ಲೇ ದೇಶ ವಿದೇಶ ಚಿತ್ರಮಂದಿರಗಳಿಗೆ ಬಂದು ಧಾಂಗುಡಿ ಇಡಲಿದ್ದಾರೆ. ಇದಕ್ಕೂ ಮುನ್ನ, ಕೊಂಚ ತಮ್ಮ ಬದುಕು ಬವಣೆಗಳನ್ನು ಬಿಚ್ಚಿಡಲು ‘ರಾಸ್ಕಲ್ಸ್’, ತಂಡ ಮುಂಬಯಿಯಲ್ಲಿ ಮಾಧ್ಯಮದ ಮುಂದೆ ಕೂತಿತ್ತು. ಚಿತ್ರದ ನಾಯಕರಾದ ಸಂಜಯ್ದತ್ ಮತ್ತು ಅಜಯ್ ದೇವಗನ್ ಸೇರಿದಂತೆ ಚಿತ್ರತಂಡದ ಇನ್ನಿತರರೆಲ್ಲ ಅಲ್ಲಿದ್ದರು. ನಾಯಕಿ ಕಂಗನಾ ರಣಾವತ್ ಹಾಗೂ ನಿರ್ದೇಶಕ ಡೇವಿಡ್ ಧವನ್ ಮಾತ್ರ ಇನ್ನೂ ಬಂದಿರಲಿಲ್ಲ.
ಆಗ ಮಾಧ್ಯಮಗಳ ಪ್ರಶ್ನೆಗೆ ಎದುರು ನಿಂತ ಅಜಯ್ ದೇವಗನ್, ‘ಮತ್ತೊಮ್ಮೆ ನಿರ್ದೇಶಕ ಡೇವಿಡ್ ಧವನ್ ನಮ್ಮಿಂದ ಮಿಸ್ ಆಗಿದ್ದಾರೆ. ಇದು ಹೊಸತೇನಲ್ಲ. ಅವರದು ಯಾವಾಗಲೂ ಲೇಟ್. ಇಲ್ಲೂ ಅಷ್ಟೇ, ಅವರಿನ್ನೂ ಬರುವುದು ಎರಡು ತಾಸು ತಡವಾಗಲಿದೆ. ಸುಮ್ಮನೇ ಕೇಳುತ್ತಿದ್ದೇನೆ, ಧವನ್ ಈಗ ಎಲ್ಲಿದ್ದಾರೆ ಎಂಬುದು ಯಾರಿಗಾದರೂ ಗೊತ್ತಾ? .... ಅವರೀಗ ನಾಯಕಿಯ ಬಿಕಿನಿ ಖರೀದಿಯಲ್ಲಿ ಬಿಜಿಯಾಗಿದ್ದಾರೆ!’ ಈ ಹಾಸ್ಯ ಪ್ರಸಂಗಕ್ಕೆ ಮಾಧ್ಯಮ ಮಂದಿಯೆಲ್ಲ ಬಿದ್ದು ಬಿದ್ದು ನಕ್ಕರು. ಮುಂದೆ ನಿಂತು ಅವರನ್ನು ನೋಡುತ್ತಿದ್ದ ಅಭಿಮಾನಿಗಳೆಲ್ಲರೂ ಹಲ್ಲು ಕಿರಿದರು.
ಅಂದಹಾಗೆ ಅಜಯ್ ದೇವಗನ್ ಹೇಳಿದ ಮಾತು ಎಷ್ಟು ನಿಜನೋ, ಸುಳ್ಳೋ ಗೊತ್ತಿಲ್ಲ ಮಾರಾಯ್ರೆ. ಆದರೆ ಪ್ರೇಕ್ಷಕ ಮಾತ್ರ ಸದ್ಯದಲ್ಲೇ ‘ರಾಸ್ಕಲ್ಸ್’ ಪೈಕಿ ಒಬ್ಬರಾದ ಕಂಗನಾ ಕರಾಮತ್ತು ಕಂಡು ಕಣ್ಮುಚ್ಚಿಕೊಳ್ಳುವ ಅಥವಾ ಕಣ್ ಮುಚ್ಚದೇ ನೋಡುವ ಕಾಲವಂತೂ ದೂರವಿಲ್ಲ. ಯಾಕೆಂದರೆ, ಕಂಗನಾ ರಣಾವತ್ ಇಲ್ಲಿ ಅಂತಿಂಥ ಮೋಡಿ ಮಾಡಿಲ್ಲ. ಬಿಳಿ ಬಿಕಿನಿ ತೊಟ್ಟು ಪಡ್ಡೆಗಳ ಕಣ್ಣು ಕುಕ್ಕಿದ್ದಾರೆ.
ಕಂಗನಾ ರಣಾವತ್ ನಿಜಕ್ಕೂ ಬಿಕಿನಿ ತೊಟ್ಟು ಎಂದಿಗೂ ಸಿನ್ಮಾಗಳಲ್ಲಿ ನಟಿಸಿರಲಿಲ್ಲ. ಇದುವರೆಗೂ ಎಲ್ಲ ಸಿನ್ಮಾಗಳಲ್ಲಿ ಕಂಗನಾ ತುಂಬಾನೇ ನೀಟಾಗಿ ಡ್ರೆಸ್ ಮಾಡುತ್ತಿದ್ದಳು. ಕೆಲವೊಂದು ಪಾತ್ರಗಳಿಗಾಗಿ ಕೊಂಚ ಮೊಡರ್ನ್ ಟಚ್ ಕೊಟ್ಟು ಡ್ರೆಸ್ ಮಾಡಿದ್ದರೂ ಕಂಗನಾ ಈ ಪಾಟಿ ಇಳಿದು ಹೋಗಿರಲಿಲ್ಲ. ಅಂದಹಾಗೆ ಕಂಗನಾ ರಣಾವತ್ ‘ರಾಸ್ಕಲ್ಸ್’ ನಲ್ಲಿ ಬಿಕಿನಿ ತೊಟ್ಟುಕೊಂಡಿದ್ದು ಯಾಕೆ ಅಂತಾ ಬಹಳಷ್ಟು ಮಂದಿ ಪ್ರಶ್ನೆ ಕೇಳುತ್ತಿದ್ದರು. ಆದರೆ ಉತ್ತರ ನೀಡಲು ಮಾತ್ರ ಕಂಗನಾ ಮಾತ್ರ ಕಾಣಿಸುತ್ತಿಲ್ಲ.
ಚಿತ್ರದ ನಾಯಕರಾದ ಸಂಜು ಹಾಗೂ ಅಜಯ್ಯಲ್ಲಿ ಈ ಪ್ರಶ್ನೆ ಕೇಳಿದರೆ ಅವರು ಹೇಳುವುದಿಷ್ಟು: ಚಿತ್ರದಲ್ಲಿ ಪ್ರಮುಖ ದೃಶ್ಯವೊಂದಕ್ಕೆ ಕಂಗನಾ ಬಿಕಿನಿ ಹಾಕಿಕೊಳ್ಳಲೇ ಬೇಕಾಗಿತ್ತು. ಈ ಹಿನ್ನೆಲೆಯಲ್ಲಿ, ನಿರ್ದೇಶಕ ಧವನ್ ಅವರ ಕೋರಿಕೆಯನ್ನು ಕಂಗನಾ ಮಜಬೂತ್ತಾಗಿಯೇ ಈಡೇರಿಸುವ ಮನಸು ಮಾಡಿದರಂತೆ. ಹಾಗಾದರೆ ಈಗ ಉಳಿದು ಹೋಗಿರುವ ಪ್ರಶ್ನೆ ಒಂದೇ ಡೇವಿಡ್ ಧವನ್ ನಿಜಕ್ಕೂ ಬಿಕಿನಿ ಖರೀದಿಯಲ್ಲಿ ಬ್ಯುಸಿಯಾಗಿದ್ದಾರಾ..? ಎನ್ನೋದು.
ಅಂದಹಾಗೆ ಧವನ್ ಎಲ್ಲಿ ಹೋಗಿದ್ದಾರೆ ಎಂಬ ವಿಚಾರಕ್ಕೆ ಸದ್ಯಕ್ಕೆ ಬ್ರೇಕ್ ಕೊಟ್ಟುಬಿಡಿ. ಅ.೭ರಂದು ಥಿಯೇಟರ್ಗೆ ಬರುವ ‘ರಾಸ್ಕಲ್ಸ್’ ಚಿತ್ರದಲ್ಲಿ ಮಾತ್ರ ಕಂಗನಾ ಬಿಕಿನಿ ಸೀನ್ಸ್ ಮಾತ್ರ ಇರೋದು ಮಾತ್ರ ಗ್ಯಾರಂಟಿಯಂತೆ. ಈಗಾಗಲೇ ಸೆನ್ಸಾರ್ ಬೋರ್ಡ್ಗೂ ಲಗ್ಗೆ ಇಟ್ಟಿದ್ದ ‘ರಾಸ್ಕಲ್ಸ್’ ಅಲ್ಲೂ ಕಂಗನಾ ನೋಡಿ ಯಾವುದೇ ತಕರಾರು ಇಲ್ಲದೇ ಒಳ್ಳೆಯ ಸರ್ಟಿಫಿಕೇಟ್ ಕೊಟ್ಟುಬಿಟ್ಟಿದ್ದಾರೆ. ಇಡೀ ಚಿತ್ರ ಹಾಸ್ಯದ ಲೇಪವನ್ನು ಹಚ್ಚಿಕೊಂಡು ಬರುವ ಜತೆಯಲ್ಲಿ ಗ್ಲಾಮರ್, ಎಕ್ಸ್ಫೋಸಿಂಗ್ಗೂ ತಕ್ಕ ಮಟ್ಟಿನ ಮಾನ್ಯತೆ ನೀಡಲಾಗಿದೆ ಎನ್ನೋದು ಡೈರೆಕ್ಟರ್ ಡೆಸ್ಕ್ನಿಂದ ಬಂದ ಮಾಹಿತಿ. ರೆಡಿಯಾಗಿ ನಿಲ್ಲಿ ‘ರಾಸ್ಕಲ್ಸ್’ ನೀವು ಕೂಡ ಆಗಬಹುದು ಎನ್ನೋದು ಚಿತ್ರದ ಟ್ಯಾಗ್ಲೈನ್ಅಂತೆ!

No comments:

Post a Comment