Thursday, September 22, 2011

ರಾಗಿಣಿ ತೆಗೆದ ತುಪ್ಪ !


ಸ್ಯಾಂಡಲ್ವುಡ್ ಹಾಟ್ ಹುಡುಗಿ ರಾಗಿಣಿ ದ್ವಿವೇದಿ ಈಗ ಹಾಲಿನಿಂದ ತುಪ್ಪ ಮಾಡೋದನ್ನು ಹೇಳಿಕೊಡಲಿದ್ದಾರೆ. ಸೆ.೧೬ರಂದು ತೆರೆಗೆ ಬಂದು ಬೀಳುವ ‘ಕಳ್ಳ ಮಳ್ಳ ಸುಳ್ಳ’ ಚಿತ್ರದಲ್ಲಿ ರಾಗಿಣಿ ‘ತುಪ್ಪ ಬೇಕಾ ತುಪ್ಪ ’ ಎಂಬ ಹಾಡಿನ ಮೂಲಕ ಪಡ್ಡೆ ಹೈಕಳನ್ನು ಉತ್ತುಂಗಕ್ಕೆ ಏರಿಸುವ ಯೋಜನೆ ರೂಪಿಸಿದ್ದಾರೆ. ಈಗಾಗಲೇ ಹಾಡು ಮ್ಯೂಸಿಕ್ ಚಾನೆಲ್ಗಳಲ್ಲಿ ಹವಾ ಎಬ್ಬಿಸಿದೆ ಮುಂದೆ ನೀವೇ ನೋಡಿ ಬಿಡಿ.

ಸ್ಯಾಂಡಲ್ವುಡ್ ಹಾಟ್ ಆಂಡ್ ಬೋಲ್ಡ್ ಹುಡುಗಿ ರಾಗಿಣಿ ದ್ವಿವೇದಿ ಈಗ ಹಾಲಿನ ಬ್ರಾಂಡ್ ಅಂಬಾಸೀಡರ್ನಿಂದ ತುಪ್ಪದ ಅಂಬಾಸೀಡರ್ ಆಗಿ ಶಿಫ್ಟ್ ಆಗಿದ್ದಾರೆ ಎನ್ನುವ ಮಾತು ಗಾಂನಗರದ ಗಲ್ಲಿಯಲ್ಲಿ ಓಡುತ್ತಿದೆ. ಉದಯ ಪ್ರಕಾಶ್ ನಿರ್ದೇಶನದ ‘ಕಳ್ಳ ಮಳ್ಳ ಸುಳ್ಳ’ ಚಿತ್ರದ ‘ತುಪ್ಪ ಬೇಕಾ ತುಪ್ಪ’ದ ಹಾಡಿನಲ್ಲಿ ರಾಗಿಣಿ ಹಾಲಿನಿಂದ ತುಪ್ಪ ತೆಗೆದು ಪ್ರೇಕ್ಷಕರಿಗೆ ಕೊಟ್ಟಿದ್ದಾರೆ.
ಈಗಾಗಲೇ ಚಿತ್ರದ ಹಾಡು ಮ್ಯೂಸಿಕ್ ಚಾನೆಲ್ಗಳಲ್ಲಿ ಹರಿದು ಬರುತ್ತಿದೆ. ಗಾಯಕಿ ಜಯಶ್ರೀಯ ಕಂಠದಿಂದ ಹೊರ ಬಂದ ಈ ಹಾಡು ರಾಗಿಣಿ ತನ್ನ ಸುಂದರ ಮೈಮಾಟವನ್ನು ಎಗ್ಗಿಲ್ಲದೆ ಪ್ರದರ್ಶಿಸಿ, ಇಲ್ಲಿನ ಪಡ್ಡೆಗಳ ನಿದ್ದೆ ಗೆಡಿಸಲು ಬರುತ್ತಿದ್ದಾರೆ ಎನ್ನುವ ಸೂಚನೆ ಬಂದಿದೆ. ಕನ್ನಡದ ಮಟ್ಟಿಗೆ ಸಾಕಷ್ಟು ಹಾಟ್ ಹುಡುಗಿ ಎಂದೇ ಬಿಂಬಿತ ರಾಗಿಣಿ, ಸಖತ್ ಕಲರ್ಫುಲ್ ಆಗಿ ಮಿಂಚಿದ್ದಾರೆ ಎನ್ನುವ ಸುದ್ದಿ ಇದೆ.
ಇತ್ತೀಚೆಗೆ ಬಾಲಿವುಡ್ಗೆ ಬಂದು ಅಪ್ಪಳಿಸಿದ ಕಾಮೆಡಿ ಬೇಸ್ಡ್ ಚಿತ್ರ ‘ಡಬ್ಬಲ್ ಧಮಾಲ್’ನ ಮಲ್ಲಿಕಾ ಶೆರವಾತ್ರ ಸೆಕ್ಸಿ ಐಟಂ ಹಾಡು ‘ಜಿಲೇಬಿ ಬಾಯಿ’ ದಾಟಿಯಲ್ಲಿರುವ ಈ ಹಾಡು ಸಧ್ಯಕ್ಕಂತೂ ಕನ್ನಡ ಸಂಗೀತದ ಮಾರುಕಟ್ಟೆಯಲ್ಲಿ ಹೊಸ ಕಳೆ ತಂದಿದೆ.
‘ತುಪ್ಪ ಬೇಕಾ ತುಪ್ಪ. ನಾಟಿ ತುಪ್ಪ ಗಾಟಿ ತುಪ್ಪ. ಬಿಸಿ ಬಿಸಿ ತುಪ್ಪ. ಉಗುಳಂಗಿಲ್ಲ. ನುಂಗಂಗಿಲ್ಲ. ಬಾರಿ ಬಾರಿ ಶಾನೇ ತುಪ್ಪ’ ಎಂಬ ಹಾಡಿಗೆ ಸೆಕ್ಸಿ ಡ್ರೆಸ್ ಹಾಕಿ, ಮಾದಕತೆ ಹೆಚ್ಚಿಸುವಂತೆ ಸ್ಟೆಪ್ ಹಾಕಿದ್ದಾರೆ ರಾಗಿಣಿ. ಅಂದಹಾಗೆ ಇದೊಂದು ಐಟಂ ಸಾಂಗ್ನಂತೆ ಕಾಣಿಸಿಕೊಳ್ಳೋದಿಲ್ಲ. ಏನಿದ್ದರೂ ಕ್ಲಬ್ನಲ್ಲಿ ಚಿತ್ರೀಕರಣ ಮಾಡುವುದರಿಂದ ಇದನ್ನು ಕ್ಲಬ್ ಡ್ಯಾನ್ಸ್ನ ಮರ್ಯಾದೆ ಕೊಡಬಹುದು ಎನ್ನುವುದು ಗಾಂದಿನಗರದ ಮಾತು.
ಜಯಶ್ರೀ ಹಾಡಿರೋದರಿಂದ ಇಲ್ಲಿ ಕ್ಲಾಸಿಕಲ್ ಬೀಟ್ ಜತೆಯಲ್ಲಿ ದೇಸಿಯ ಸೊಗಡಿನ ಟಚ್ ಇದೆ. ಹಾಡಿನ ಉದ್ದಗಲಕ್ಕೂ ಮೊಡರ್ನ್ ಬೀಟ್ಗಳು ಅಲ್ಲಲ್ಲಿ ನುಸುಳಿಕೊಂಡಿರೋದರಿಂದ ಸಂಗೀತ ನಿರ್ದೇಶಕ ಪೌಲ್ ಅಲೆಕ್ಸ್ ಕನ್ನಡದಲ್ಲಿ ಈವರೆಗೆ ಬಂದಿರುವ ಹಾಡುಗಳಿಗಿಂತ ಕೊಂಚ ಭಿನ್ನವಾಗಿ ಈ ಹಾಡನ್ನು ಕೊಟ್ಟಿದ್ದಾರೆ ಎಂದು ಗಾಂನಗರದ ಮಂದಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ಅದೇನ್ ವಿಚಾರ ಇದ್ದರೂ ಇರಲಿ ಬಿಡಿ. ಇತ್ತೀಚೆಗಂತೂ ಸ್ಯಾಂಡಲ್ವುಡ್ನಲ್ಲಿ ಇಂತಹ ನಾಯಕಿಯರು ಐಟಂ, ಕ್ಲಬ್ ಡ್ಯಾನ್ಸ್ನಲ್ಲಿ ಕುಣಿಯೋದು ಹೆಚ್ಚಾಗುತ್ತಿದೆ. ತೀರಾ ಇತ್ತೀಚೆಗೆ ಬಿಡುಗಡೆಯಾಗಿ ಓಡುತ್ತಿರುವ ಪ್ರೀತಂ ಗುಬ್ಬಿ ನಿರ್ದೇಶನದ ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ಚಿತ್ರದಲ್ಲಿ ರಮ್ಯಾ ‘ಪದ್ಮಾವತಿ’ ಎನ್ನುವ ಹಾಡಿಗೆ ಸ್ಟೆಪ್ಟ್ ಹಾಕಿರೋದು ಇಲ್ಲಿ ಗಮನಿಸಬೇಕಾದ ಪಾಯಿಂಟ್.
ಇಂತಹ ಟ್ರೇಡ್ ಬರೀ ಬಾಲಿವುಡ್, ಕಾಲಿವುಡ್ನಲ್ಲಿ ಮಾತ್ರ ಓಡುತ್ತಿತ್ತು. ಈಗ ಸ್ಯಾಂಡಲ್ವುಡ್ನಲ್ಲೂ ಪ್ರೇಕ್ಷಕ ವರ್ಗವನ್ನು ತನ್ನ ಕಡೆ ಸೆಳೆಯುವ ತಂತ್ರಗಾರಿಕೆಯಾಗಿ ನಾಯಕಿಯರನ್ನು ಐಟಂ ಹಾಡಿನಲ್ಲಿ ಕುಣಿಸಲಾಗುತ್ತಿದೆ ಎನ್ನುವ ಮಾತಿದೆ. ಇಂತಹ ಹಾಡುಗಳಿಂದ ಚಿತ್ರ ಹಿಟ್ ಅಗುತ್ತೋ ಮುಗ್ಗರಿಸಿಕೊಂಡು ಬೀಳೂತ್ತೋ ಅದೆಲ್ಲ ಸೆಕೆಂಡರಿ ವಿಷ್ಯಾ ಆದರೆ ನಾಯಕಿರ ಡ್ಯಾನ್ಸ್ ನೋಡಿಕೊಂಡು ಖುಷಿ ಪಡುವ ಅಭಿಮಾನಿ ವರ್ಗವಂತೂ ಕ್ರಿಯೇಟ್ ಆಗಿರೋದು ದಿಟವಂತೆ.
ಅಂದಹಾಗೆ ರಾಗಿಣಿಯ ತುಪ್ಪದ ವಿಚಾರಕ್ಕೆ ಬರೋಣ. ರಾಗಿಣಿ ಕುಣಿಯುತ್ತಾ ಮಾರಾಟ ಮಾಡುವ ತುಪ್ಪದ ಹಾಡನ್ನು ಈಗ ಸಧ್ಯಕ್ಕೆ ಮ್ಯೂಸಿಕ್ ಚಾನೆಲ್ನಲ್ಲಿ ಕಾಣಬಹುದು. ಉಳಿದಂತೆ ರಾಗಿಣಿಯ ತುಪ್ಪದ ದರ್ಶನ ಪಡೆಯಬೇಕಾದರೆ ಸೆ.೧೬ರ ವರೆಗೆ ಕಾಯಬೇಕು. ಉಳಿದಂತೆ ತುಪ್ಪವನ್ನು ತಿಂದು ತೇಗೋದು ಪ್ರೇಕ್ಷಕರಿಗೆ ಬಿಟ್ಟ ವಿಚಾರ ಅಲ್ವಾ..?

No comments:

Post a Comment