
ಜ್ಯೋತಿಷ್ಯಶಾಸ್ತ್ರಕ್ಕೆ ಸಂಬಂಸಿದ ಕಥಾ ವಸ್ತುವನ್ನು ಇಟ್ಟುಕೊಂಡು ತುಳುವಿನಲ್ಲಿ ಧಾರಾವಾಹಿಯೊಂದು ನಿರ್ಮಾಣವಾಗುತ್ತಿದೆ. ರಾಷ್ಟ್ರಮಟ್ಟದ ಕಿರುಚಿತ್ರ ನಿರ್ದೇಶಕ ಎ.ವಿ.ಜಯರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉಳಿದ ಮಾಹಿತಿ ಮುಂದೆ ಓದಿ ಬಿಡಿ.
ಕರಾವಳಿ ಕರ್ನಾಟಕ ಭಾಗದಲ್ಲಿ ಧಾರಾವಾಹಿಗೂ ಒಂದು ಸುಂದರ ಬದುಕಿದೆ ಎಂದು ತೋರಿಸಿಕೊಟ್ಟ ಮೊದಲ ಧಾರಾವಾಹಿ ‘ಪಿರ್ಕಿಬಿತ್ತಿಲ್’ ಎನ್ನುವುದು ಬಹಳ ಮಂದಿಗೆ ಗೊತ್ತು. ‘ಪಿರ್ಕಿಬಿತ್ತಿಲ್’ ಉಂದೆಟ್ ಒಂಜೆಕ್ಲಾ ಸಮ ಇಜ್ಜಿ ಎಂಬ ಟ್ಯಾಗ್ ಲೈನ್ ಹೊತ್ತುಕೊಂಡು ಬಂದ ತುಳು ಧಾರಾವಾಹಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೊಸ ಸಂಚಲನವನ್ನೇ ಮೂಡಿಸಿತ್ತು.
‘ಪಿರ್ಕಿ ಬಿತ್ತಿಲ್’ ಧಾರಾವಾಹಿ ಖಾಸಗಿ ವಾಹಿನಿಯಲ್ಲಿ ೮೮ಕ್ಕೂ ಅಕ ಸಂಚಿಕೆಗಳ ಮೂಲಕ ಜನಮನ ಗೆದ್ದಿತ್ತು. ನಮ್ಮ ಸುತ್ತಮುತ್ತಲೂ ಪ್ರತಿನಿತ್ಯ ನಡೆಯುವ ವಿದ್ಯಮಾನಗಳನ್ನೇ ವಿಡಂಬನಾತ್ಮಕ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನ ಯಶಸ್ವಿಯಾಗಿತ್ತು. ತುಳು ಧಾರವಾಹಿಗಳು ೧೦ ಸಂಚಿಕೆ ಕಳೆಯುವಷ್ಟರಲ್ಲೇ ಮರೆಯಾಗುತ್ತಿದ್ದ ಆ ಕಾಲದಲ್ಲಿ ‘ಪಿರ್ಕಿಬಿತ್ತಿಲ್’ ಹೊಸ ದಾಖಲೆಯನ್ನು ಸೃಷ್ಟಿ ಮಾಡಿತ್ತು.
ಈಗ ಇದೇ ತಂಡ ಹೊಸ ಪ್ರಯತ್ನಕ್ಕೆ ಕೈಹಾಕುತ್ತಿದೆ. ಜ್ಯೋತಿಶಾಸ್ತ್ರಕ್ಕೆ ಸಂಬಂಸಿದ ಕಥಾ ವಸ್ತುವೊಂದನ್ನು ಧಾರಾವಾಹಿಯಾಗಿಸಿ ಉಪಗ್ರಹವಾಹಿನಿಯೊಂದರಲ್ಲಿ ಪ್ರಸಾರ ಮಾಡುವ ಪ್ರಯತ್ನದಲ್ಲಿದೆ. ಆ ನಿಟ್ಟಿನಲ್ಲಿ ಇದೀಗ ನಟನಟಿಯರ ಆಯ್ಕೆ ಪ್ರಕಿಯೆ ನಡೆಯುತ್ತಿದೆ. ಹೊಸಮುಖಗಳಿಗೆ ಮೆಣೆ ಹಾಕುವ ಮೂಲಕ ಪ್ರತಿಭಾನ್ವೇಷಣೆ ಮಾಡಬೇಕು ಎನ್ನೋದು ‘ಪಿರ್ಕಿಬಿತ್ತಿಲ್’ ನಿರ್ದೇಶಕ ಎ.ವಿ.ಜಯರಾಜ್ ಅವರ ಮಾತು.
ಸಾವಿನ ನೆರಳಲ್ಲಿ ಬದುಕು:
ಜ್ಯೋತಿಷ್ಯ ಶಾಸ್ತ್ರದಲ್ಲಿ ವಸುಪಂಚಕ ಎನ್ನುವ ಒಂದು ನಕ್ಷತ್ರದ ಕತೆಯನ್ನು ಮೂಲವಾಗಿ ಇಟ್ಟುಕೊಂಡು ಇಡೀ ಸೀರಿಯಲ್ಲೂ ಬಿಚ್ಚಿಕೊಳ್ಳಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗುವ ಕೊನೆಯ ನಾಲ್ಕುವರೆ ನಕ್ಷತ್ರಗಳಲ್ಲಿ (ಧನಿಷ್ಟಾದ ಉತ್ತರಾರ್ಧ, ಶತಭಿಷಾ, ಪೂರ್ವಾಭಾದ್ರಾ, ಉತ್ತರಾಭಾದ್ರ, ರೇವತಿ) ಯಾರಾದರೂ ಮರಣಿಸಿದರೆ ‘ಧನಿಷ್ಟಾ ಪಂಚಕ’ಯೋಗ ಅಥವಾ ‘ವಸುಪಂಚಕ’ ಯೋಗ ಬಂದಿದೆ ಎಂದರ್ಥ. ಇದರ ಫಲ ವಂಶಾರಿಷ್ಟ. ಆತನ ಅಥವಾ ಆಕೆಯ ವಂಶದ ಐದು ಜನಕ್ಕೆ ಸದ್ಯೋ ಭವಿಷ್ಯದಲ್ಲಿ ಮರಣ ಸಂಭವ ಇದೆ ಎನ್ನುವುದು ಈ ನಕ್ಷತ್ರದ ಮಹಿಮೆ.
ವಸುಪಂಚಕ ತುಳು ಸಾಮಾಜಿಕ ಧಾರಾವಾಹಿ. ಭಯಾನಕ, ಭೀಭತ್ಸ, ಕರುಣಾರಸಗಳ ಸಮ್ಮಿಲನದೊಂದಿಗೆ ಕ್ಷಣಕ್ಷಣಕ್ಕೂ ರೋಮಾಂಚನ, ಕುತೂಹಲಕಾರಿಯಾಗಿ ಮೂಡಿ ಬರಲಿದೆ ಎನ್ನೋದು ನಿರ್ದೇಶಕ ಎ.ವಿ. ಜಯರಾಜ್ ಅವರ ಮಾತು. ಸುರತ್ಕಲ್ನ ಜಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಚಿತ್ರೀಕರಣಗೊಳ್ಳಲಿರುವ ಈ ಧಾರಾವಾಹಿಯ ಛಾಯಾಗ್ರಹಣವನ್ನು ಮಹಾಬಲೇಶ್ವರ ಹೊಳ್ಳ, ಸಂಕಲನ ಸುಬ್ರಹ್ಮಣ್ಯ ಹೊಳ್ಳ ಮಾಡುತ್ತಿದ್ದಾರೆ.
ಧಾರಾವಾಹಿಯ ಚಿತ್ರಕಥೆ-ಸಂಭಾಷಣೆ ಮಹೇಶ್ ಮೂರ್ತಿ ಸುರತ್ಕಲ್ ಬರೆಯಲಿದ್ದಾರೆ. ರಾಷ್ಟ್ರೀಯ ಪುರಸ್ಕಾರ ವಿಜೇತ ಕಿರುಚಿತ್ರ ನಿರ್ದೇಶಕ ಎ.ವಿ. ಜಯರಾಜ್ ಕತೆ- ನಿರ್ದೇಶನದ ಕುರ್ಚಿಯಲ್ಲಿ ಕೂರಲಿದ್ದಾರೆ. ಈ ಮೂಲಕ ತುಳು ಧಾರಾವಾಹಿ ಲೋಕದಲ್ಲಿ ಮತ್ತೊಂದು ಮಿಂಚು ಕಾಣಿಸಿಕೊಳ್ಳೋದು ಗ್ಯಾರಂಟಿ ಎನ್ನಬಹುದು ಅಲ್ವಾ..?
No comments:
Post a Comment