Tuesday, September 20, 2011

ನಿವೇದಿತಾ ನಿವೇದನೆ


ಯಾಕೋ ಸಿನ್ಮಾ ಎನ್ನುವ ಜಗತ್ತಿನಲ್ಲಿ ಲುಕ್, ಆಕ್ಟಿಂಗ್ ಜತೆಯಲ್ಲಿ ‘ಲಕ್’ ಕೂಡಾ ಬೇಕಂತೆ ಎನ್ನುವ ಮಾತಿದೆಯಲ್ಲ. ಈ ‘ಲಕ್’ನ ವಿಚಾರದಲ್ಲಿ ನಿವೇದಿತಾಗೆ ಕೊಂಚ ಪೆಟ್ಟು ಬಿದ್ದಿತ್ತು. ಆದರೂ ಈಗ ನಿಮ್ಮಿ ಮೇಡಂ ‘ಗಾಂಸ್ಮೈಲ್ಸ್’, ‘ಪರಿ’ ಮೂಲಕ ಸಿನ್ಮಾ ಲ್ಯಾಂಡ್ನಲ್ಲಿ ತನ್ನ ಇಮೇಜ್ ಮತ್ತೇ ರೀ- ಕ್ರಿಯೇಟ್ ಮಾಡಲು ಹೊರಟಿದ್ದಾರೆ.

ತುಟಿ ಅಂಚಿನಲ್ಲಿ ಮಿಂಚಿ ಮರೆಯಾಗುವ ನಗು. ದುಂಡುಮುಖದ ತುಂಬಾ ಎದ್ದು ಕಾಣುವ ಸೌಮ್ಯತೆ. ಯಾರನ್ನೋ ಹುಡುಕಾಟದಲ್ಲಿರುವ ಅಗಲವಾದ ನಯನಗಳು ಎಲ್ಲವೂ ಜತೆಯಾಗಿ ಸೇರಿಕೊಂಡರೆ ಅವಳೇ ನಿವೇದಿತಾ. ಕನ್ನಡದ ಪಾಲಿಗಂತೂ ಥೇಟ್ ಕೃಷ್ಣ ಸುಂದರಿ. ಯಾಕೋ ಸಿನ್ಮಾ ಎನ್ನುವ ಜಗತ್ತಿನಲ್ಲಿ ಲುಕ್, ಆಕ್ಟಿಂಗ್ ಜತೆಯಲ್ಲಿ ‘ಲಕ್’ ಕೂಡಾ ಬೇಕಂತೆ ಎನ್ನುವ ಮಾತಿದೆಯಲ್ಲ. ಈ ‘ಲಕ್’ನ ವಿಚಾರದಲ್ಲಿ ನಿವೇದಿತಾಗೆ ಕೊಂಚ ಪೆಟ್ಟು ಬಿದ್ದಿತ್ತು.
ಹೆಸರು ಬದಲಾಯಿಸಿ ಬಿಟ್ಟ್ರೆ ಎಲ್ಲವೂ ಸರಿಯಾಗುತ್ತೆ ಅಂತಾ ಹೇಳಿಕೊಂಡು ಸ್ಮಿತಾ ಎನ್ನುವ ಎರಡಕ್ಷರದ ನಾಮ್ಪ್ಲೇಟ್ ಚೇಂಜ್ ಮಾಡಿಕೊಂಡು ನಿವೇದಿತಾ ಅಂತಾ ಬದಲಾಗಿ ಹೋದರು. ಹೆಸರು ಬದಲಾದರೂ ಲಕ್ ನಿಮ್ಮಿಯ ಕೈಯಲ್ಲಿ ಇರಲೇ ಇಲ್ಲ ಅಂತಾ ಖುದ್ದು ನಿಮ್ಮಿನೇ ಬಾಯಿ ಬಿಟ್ಟು ಹೇಳಿ ಬಿಡುತ್ತಾರೆ. ‘ಎಲ್ಲರೂ ಈಗ ಕರೆಯೋದು ಸ್ಮಿತಾ ಅಂತಾಳೆ...ನಿವೇದಿತಾ ಎನ್ನಲು ಬಹಳಷ್ಟು ಮಂದಿಗೆ ಕಷ್ಟವಾಗಿ ಬಿಡುತ್ತದೆ. ಮತ್ತೆ ಹೆಸರು ಚೇಂಜ್ ಮಾಡಲು ಮನಸ್ಸು ಒಪ್ಪುವುದಿಲ್ಲ . ಅದಕ್ಕಾಗಿಯೇ ನಿವೇದಿತಾ ಎನ್ನುವ ಹೆಸರಿನ ಜತೆಯಲ್ಲಿ ಖುಷಿಯಾಗಿದ್ದೇನೆ ಎನ್ನುತ್ತಾಳೆ ನಿಮ್ಮಿ. ಈಗಲೂ ನಿವೇದಿತಾರಿಗೆ ಅವಕಾಶಗಳು ಕಾಲ ಬುಡದಲ್ಲಿ ಬಂದು ಬೀಳುತ್ತಿದೆಯಂತೆ. ಕನ್ನಡ, ತಮಿಳಿನಲ್ಲಿ ಆಫರ್ಗಳು ಜಾಸ್ತಿಯಾಗುತ್ತಿದೆ.
ಆದರೆ ಸಿನ್ಮಾಗಳ ಆಯ್ಕೆ ವಿಚಾರದಲ್ಲಂತೂ ನಿಮ್ಮಿ ಮೇಡಂ ಕೊಂಚ ಚ್ಯುಸಿಯಾಗುತ್ತಿದ್ದಾರೆ. ಆಯ್ಕೆ ಮಾಡಿಕೊಳ್ಳುವ ಸಿನ್ಮಾದಲ್ಲಿ ತನ್ನ ನಟನೆಗೆ ಹೆಚ್ಚು ಮಹತ್ವ ಕೊಡುವ ಪಾತ್ರ ಬೇಕು ಅನ್ನೋದು ನಿಮ್ಮಿಯ ಆಕ್ಟಿಂಗ್ ಕಂಡೀಷನ್. ಸಿನ್ಮಾ ಲ್ಯಾಂಡ್ನ ಆರಂಭದಲ್ಲಿ ಬೇಕಾಬಿಟ್ಟಿ ಸಿನ್ಮಾಗಳನ್ನು ಒಪ್ಪಿಕೊಂಡ ನಂತರ ನಿಮ್ಮಿ ಮೇಡಂ ಈ ಎಲ್ಲ ವಿಚಾರಗಳ ಮೇಲೆ ಸಾಕಷ್ಟು ಅನುಭವಗಳನ್ನು ಪಡೆದುಕೊಂಡು ಈ ರೀತಿ ಕಂಡೀಷನ್ ಹಾಕುತ್ತಿದ್ದಾರಂತೆ. ಅಂದಹಾಗೆ ನಿವೇದಿತಾ ಬಳಿಯಲ್ಲಿ ಟ್ಯಾಲೆಂಟ್ಗೇನೂ ಕಡಿಮೆಯಿಲ್ಲ. ಗ್ಲಾಮರ್ ಜತೆಯಲ್ಲಿ ಆಕ್ಟಿಂಗ್ ಪಾಠಗಳನ್ನು ಕಂಠ ಪಾಟ ಮಾಡಿಕೊಂಡು ಬಂದಿರುವ ನಿವೇದಿತಾ ಈಗ ಸುದ್ದಿಯ ಅಂಗಣದಲ್ಲಿ ಸದ್ದು ಮಾಡುತ್ತಿದ್ದಾರೆ. ಬಹಳಷ್ಟು ದಿನಗಳ ನಂತರ ಅತ್ತ ಆರ್ಟ್ ಮೂವೀನೂ ಅಲ್ಲ , ಇತ್ತ ಕಮರ್ಷಿಯಲ್ ಅಲ್ಲದ ಸಿನ್ಮಾಯೊಂದರಲ್ಲಿ ಭರ್ಜರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ದೇಶಕ ಕಮ್ ನಿರ್ಮಾಪಕ ಮಂಗಳೂರಿನ ರಾಘವೇಂದ್ರ ವಿ. ಕಾಮತ್ ‘ಗಾಂಸ್ಮೈಲ್ಸ್’ ಎನ್ನುವ ಚಿತ್ರ ಕೆಲವೇ ದಿನಗಳಲ್ಲಿ ಚಿತ್ರ ಮಂದಿರಗಳಿಗೆ ದಾಳಿ ಇಡುವ ಸೂಚನೆ ಬಂದಿದೆ. ಇತ್ತೀಚೆಗೆ ರಾಷ್ಟ್ರಪ್ರಶಸ್ತಿ ಸಾಲಿನಲ್ಲಿದ್ದ ೧೬೨ ಚಿತ್ರಗಳ ಪೈಕಿ ‘ಗಾಂಸ್ಮೈಲ್ಸ್’ ಕೂಡ ಒಂದು. ಅಂತಿಮ ಆಯ್ಕೆ ಸ್ಪರ್ಧೆಯಲ್ಲಿದ್ದ ೭ ಚಿತ್ರಗಳಲ್ಲೂ ಇದೂ ಒಂದಾಗಿತ್ತು. ಹೀಗೆ ನಾನಾ ಕಾರಣಗಳಿಂದ ಚಿತ್ರ ಸುದ್ದಿಯಲ್ಲಿರುವ ಜತೆಯಲ್ಲಿ ಕೃಷ್ಣ ಸುಂದರಿ ನಿವೇದಿತಾಗೂ ಈ ಚಿತ್ರದಲ್ಲಿ ಲೀಡ್ ರೋಲ್ ಇದೆ. ಜತೆಗೆ ಸುರ್ ಅತ್ತಾವರ್ ನಿರ್ದೇಶನದ ‘ಪರಿ’ಯಲ್ಲೂ ಒಂದು ಭಿನ್ನವಾದ ಪಾತ್ರವಿದೆ. ಈ ಎಲ್ಲ ಚಿತ್ರಗಳು ನಿವೇದಿತಾರ ಇಮೇಜ್ನ್ನು ಮತ್ತೇ ರೀ-ಕ್ರಿಯೇಟ್ ಮಾಡಲಿದೆಯಂತೆ.
ನಿವೇದಿತಾ ಹೇಳುವಂತೆ ತಾನು ಒಪ್ಪಿಕೊಳ್ಳುವ ಸಿನ್ಮಾದ ಪಾತ್ರಗಳು ಬಿಚ್ಚುವಿಕೆಗೆ ಜಾಸ್ತಿ ಮಹತ್ವ ಕೊಟ್ಟರೆ ತಾನು ಅದಕ್ಕೂ ರೆಡಿಯಾಗಿದ್ದೇನೆ. ಆದರೆ ಪಾತ್ರಗಳು ಬಿಚ್ಚುವಿಕೆಯನ್ನು ಬೇಡಬೇಕು. ಚಿತ್ರವನ್ನು ಮಾರಾಟ ಮಾಡಲು ನಾಯಕಿಯರು ಬಿಚ್ಚುವುದು ಸರಿಯಲ್ಲ. ಪಾತ್ರಕ್ಕೆ ತಕ್ಕಂತೆ ಬಿಚ್ಚಾಟದಲ್ಲಿ ಕೆಲವೊಂದು ಸಲ ರಾಜಿ ಮಾಡಿಕೊಳ್ಳಬೇಕು ಎನ್ನೋದು ಅವರ ಮಾತು.
ನಿವೇದಿತಾರಿಗೆ ಸಿನ್ಮಾಗಳು ಇಲ್ಲದೇ ಇದ್ದಾಗ ಬುಕ್ಸ್ ಓದುವ ಒಳ್ಳೆಯ ಅಭ್ಯಾಸವಿದೆ. ಆದರೆ ಅದಷ್ಟೂ ಇಂಗ್ಲಿಷ್ ಬುಕ್ಗಳಿಗೆ ಒಗ್ಗಿಕೊಂಡಿರುವ ನಿಮ್ಮಿ ಕಾದಂಬರಿ ಎಂದರೆ ಮಾರು ದೂರ ಓಡುತ್ತಾರೆ. ಬಹಳಷ್ಟು ಸಿನ್ಮಾಗಳ ಕತೆ ಕೇಳಿಕೊಂಡು ಬಂದಿರುವ ನಿಮ್ಮಿಗೆ ಕಾದಂಬರಿಗಳೆಂದರೆ ತುಂಬಾನೇ ಬೋರು ಅಂತೆ. ಈಗ ಸಧ್ಯಕ್ಕೆ ‘ಡಯಟ್ ಆಂಡ್ ಎಕ್ಸಾರ್ಸೈಜ್’ ಎನ್ನುವ ಆಂಗ್ಲ ಪುಸ್ತಕ ಓದುವುದರಲ್ಲಿ ತಲ್ಲೀನರಾಗಿದ್ದಾರೆ. ಅಂತೂ ಇಂತೂ ಇನ್ನೂ ಕೊಂಚ ಟೈಮ್ ಸಿಕ್ಕರೆ ಪ್ಯಾಮಿಲಿ ಜತೆಯಲ್ಲಿ ಲಾಂಗ್ ಟೂರ್ ಮಾಡುತ್ತಾರೆ. ಅದರಲ್ಲೂ ನಿಮ್ಮಿ ಮೇಡಂಗೆ ಡ್ರೈವ್ ಮಾಡೋದು ಎಂದರೆ ಬಹಳ ಖುಷಿ. ಲಾಂಗ್ ರೂಟ್ ಕಡೆ ಮುಖ ಮಾಡೋಣ ಎಂದರೆ ಬಾಯ್ಫ್ರೆಂಡ್ಗಳ ಕೊರತೆಯನ್ನು ನಿಮ್ಮಿ ಮೇಡಂ ಎದುರಿಸುತ್ತಿದ್ದಾರೆ.
ಯೋಗ, ಜಿಮ್, ಏರೋಬಿಕ್ಸ್ ಅಂತಾ ಹೇಳಿಕೊಂಡು ಫಿಗರ್ ಮೈನ್ಟೈನ್ ಮಾಡುತ್ತಿರುವ ನಿಮ್ಮಿಗೆ ಪರಿಸರದ ಮೇಲೆ ವಿಶೇಷ ಕಾಳಜಿ. ಎಂಜಿನಿಯರಿಂಗ್ ಮಾಡಿ ಇನಿಯಲ್ಲಿ ಕೆಲಸ ಮಾಡುತ್ತಿದ್ದಾಗ ನಿಮ್ಮಿ ಗ್ಲೋಬಲ್ ವಾರ್ಮಿಂಗ್ ಕುರಿತು ಬಹಳಷ್ಟು ತಿಳಿದುಕೊಂಡಿದ್ದರು. ಆದರೆ ಸಿನ್ಮಾ ಫೀಲ್ಡ್ಗೆ ಬಂದ ನಂತರ ಎಲ್ಲಕ್ಕೂ ಟೈಮ್ ಜೋಡಿಸಲು ನಿಮ್ಮಿ ವಿಫಲರಾದರಂತೆ !
‘ನನಗೇನೂ ದೊಡ್ಡ ಪ್ರಮಾಣದಲ್ಲಿ ಸಮಾಜ ಸೇವೆ ಮಾಡಲು ಗೊತ್ತಿಲ್ಲ. ಆದರೂ ಪರಿಸರದ ಕುರಿತು ಜಾಗೃತಿ ಹುಟ್ಟು ಹಾಕುವ ಕೆಲಸ ಮಾಡಬೇಕು. ಅದಕ್ಕಾಗಿ ಪುಟ್ಟ ಎನ್ಜಿಒ ಕಟ್ಟಬೇಕು ಎನ್ನೋದು ನನ್ನ ಮತ್ತೊಂದು ಕನಸ್ಸು ’ಎಂದು ಹೇಳುತ್ತಾ ನಿಮ್ಮಿ ಮೇಡಂ ಸಿನ್ಮಾದಿಂದ ಹಸಿರು ಜಾಗೃತಿ ಕಡೆ ಮುಖ ಮಾಡಿದರು. ಟೋಟಲಿ ನಿಮ್ಮಿ ಸಿನ್ಮಾದಲ್ಲಿ ಲಕಲಕನೇ ಹೊಳೆಯಲಿ ಎನ್ನುವುದೇ ಅವರ ಅಭಿಮಾನಿಗಳ ಹಾರೈಕೆ.

No comments:

Post a Comment