ಭಟ್ಟರ ಕ್ಯಾಂಪ್ನಿಂದ ಹೊರಬಂದ ನಾಯಕಿಯನ್ನು ಮತ್ತೆ ಹತ್ತಿರಕ್ಕೆ ಸೇರಿಸಿಕೊಳ್ಳುವ ಪ್ರಮೇಯ ಬಹಳಷ್ಟು ಕಡಿಮೆ. ಆದರೆ ಈ ವಿಚಾರದಲ್ಲಿ ಬಿಪಾಶಾ ಬಸು ಲಕ್ಕಿ ಹುಡುಗಿ ಎನ್ನಬಹುದು. ಆದರೆ ಇದೇ ಚಾನ್ಸು ಮರ್ಡರ್ ಹುಡುಗಿ ಮಲ್ಲಿಕಾ ಶೆರವಾತ್ಗೆ ಸಿಗಲೇ ಇಲ್ಲ ಎನ್ನುವುದು ಇಲ್ಲಿ ಗಮನಿಸಬೇಕು ಮಾರಾಯ್ರೆ. ಬಾಲಿವುಡ್ನ ಕೃಷ್ಣ ಸುಂದರಿ ಬಿಪಾಶಾ ಬಸು ಮತ್ತೆ ತನ್ನ ಮೂಲ ಮನೆಯ ಕಡೆ ಮುಖ ಮಾಡಿದ್ದಾರೆ ಎನ್ನುವ ಸುದ್ದಿ ಬಣ್ಣದ ನಗರಿಯಿಂದ ಹೊರಬಿದ್ದಿದೆ. ಅರೇ..ಬಿಪಾಶಾ ಬಸುವಿನ ಮೂಲ ಮನೆಯಂದರೆ ಅದು ಮಹೇಶ್ ಭಟ್ರ ಗರಡಿ ಮಾರಾಯ್ರೆ. ಬಿಪಾಶಾ ಬಸು ಫುಲ್ ಟೈಮ್ ನಾಯಕಿಯಾಗಿ ಮಿಂಚಲು ಈ ಭಟ್ಟರೇ ಕಾರಣ ಅಂತಾ ಸಿನ್ಮಾ ಇಂಡಸ್ಟ್ರಿಯಲ್ಲಿರುವ ಎಲ್ಲರಿಗೂ ಗೊತ್ತು.
ಆದರೆ ಭಟ್ಟರ ಕ್ಯಾಂಪ್ನಿಂದ ಹೊರಬಂದ ನಾಯಕಿಯನ್ನು ಮತ್ತೆ ಹತ್ತಿರಕ್ಕೆ ಸೇರಿಸಿಕೊಳ್ಳುವ ಪ್ರಮೇಯ ಬಹಳಷ್ಟು ಕಡಿಮೆ. ಆದರೆ ಈ ವಿಚಾರದಲ್ಲಿ ಬಿಪಾಶಾ ಬಸು ಲಕ್ಕಿ ಹುಡುಗಿ ಎನ್ನಬಹುದು. ಆದರೆ ಇದೇ ಚಾನ್ಸು ಮರ್ಡರ್ ಹುಡುಗಿ ಮಲ್ಲಿಕಾ ಶೆರವಾತ್ಗೆ ಸಿಗಲೇ ಇಲ್ಲ ಎನ್ನುವುದು ಇಲ್ಲಿ ಗಮನಿಸಬೇಕು ಮಾರಾಯ್ರೆ. ಅಂದಹಾಗೆ ಒಂದು ಸಿನಿಮಾದ ಮುಂದುವರಿದ ಭಾಗ ಮಾಡುವುದರಲ್ಲಿ ಬಾಲಿವುಡ್ ಮಂದಿ ನಿಸ್ಸೀಮರು.
ಸಿನಿಮಾ ತೆರೆಕಂಡು ತಕ್ಕಮಟ್ಟಿಗೆ ಕ್ಲಿಕ್ ಆಗುತ್ತಿದ್ದಂತೆ ಆದರ ಸೀಕ್ವೆಲ್ಗೆ ಸ್ಕ್ರಿಪ್ಟ್ ರೆಡಿಯಾಗಿರುತ್ತದೆ. ಈಗ ಇದೇ ರೀತಿ ಸೀಕ್ವೆಲ್ ಒಂದರ ಮೂಲಕ ಒಂದಷ್ಟು ಮಂದಿ ಒಟ್ಟಾಗುತ್ತಿದ್ದಾರೆ. ಅದು ‘ರಾಝ್-೩’ ಮೂಲಕ. ೨೦೦೨ರಲ್ಲಿ ತೆರೆಕಂಡ ‘ರಾಝ್’ ಚಿತ್ರ ಅಲ್ಲಿ ಸಿಕ್ಕಾಪಟ್ಟೆ ಕ್ಲಿಕ್ ಆಗಿತ್ತು. ಹಸಿಬಿಸಿಯಾಗಿ ಬಿಪಾಶಾ ಬಸು, ಡಿನೋ ಮೊರಿಯಾ ನಟಿಸಿದ ಈ ಚಿತ್ರವನ್ನು ಮುಖೇಶ್ ಭಟ್ ನಿರ್ಮಿಸಿ, ವಿಕ್ರಂ ಭಟ್ ನಿರ್ದೇಶಿಸಿದ್ದರು.
ಆ ನಂತರ ನಿರ್ಮಾಪಕ ಮುಖೇಶ್ ಭಟ್ ಇದರ ಮುಂದುವರಿದ ಭಾಗವಾಗಿ ‘ರಾಝ್-೨’ ಮಾಡಿದರು. ಆದರೆ ಅಲ್ಲಿ ನಿರ್ದೇಶಕ ವಿಕ್ರಂ ಭಟ್ ಆಗಲಿ, ನಾಯಕಿ ಬಿಪಾಶಾ ಬಸು ಆಗಲಿ ಇರಲಿಲ್ಲ. ಅವರ ಜಾಗದಲ್ಲಿ ಮೋಹಿತ್ ಸೂರಿ, ಇಮ್ರಾನ್ ಹಶ್ಮಿ ಹಾಗೂ ಕಂಗನಾ ರಾಣವತ್ ಇದ್ದರು. ಆದರೆ ಈಗ ಮತ್ತೆ ಹಳೆ ಜೋಡಿ ಒಂದಾಗುತ್ತಿದೆ. ಮಹೇಶ್ ಭಟ್ ‘ರಾಝ್-೩’ ಮಾಡಲು ನಿರ್ಧರಿಸಿದ್ದಾರೆ.
ಈ ಸಿನಿಮಾವನ್ನು ವಿಕ್ರಂ ಭಟ್ ನಿರ್ದೇಶಿಸಲಿದ್ದು, ಬಿಪಾಶಾ ಕೂಡ ನಟಿಸಲು ಒಪ್ಪಿಕೊಂಡಿದ್ದಾಳೆ.
ಈ ಬಾರಿ ಬಿಪಾಶಾ ಜತೆ ತುಟಿಯಂಚಿಕೊಳ್ಳಲಿರುವ ನಾಯಕ ಇಮ್ರಾನ್ ಹಶ್ಮಿ. ಬಿಪಾಶಾ ಮತ್ತೆ ‘ರಾಝ್’ ಟೀಂನಲ್ಲಿ ನಟಿಸಲು ಒಪ್ಪಿಕೊಂಡಿರುವುದು ಮುಖೇಶ್ ಭಟ್ ಅವರಿಗೆ ತುಂಬಾ ಖುಷಿ ತಂದಿದೆ. ‘ರಾಝ್ ಚಿತ್ರಕ್ಕೆ ಒಂದು ಹೆಸರು ತಂದುಕೊಡುವಲ್ಲಿ ಬಿಪಾಶಾಳ ಪಾತ್ರ ಮಹತ್ವದ್ದಾಗಿತ್ತು. ಈಗ ಈ ಸಿನಿಮಾದಲ್ಲಿ ಬಿಪಾಶಾಗೆ ಒಳ್ಳೆಯ ಪಾತ್ರವಿದೆ. ಮತ್ತೊಮ್ಮೆ ಆಕೆಯ ಜತೆ ಕೆಲಸ ಮಾಡಲು ಖುಷಿಯಾಗುತ್ತಿದೆ’ ಎಂದಿದ್ದಾರೆ ಮುಖೇಶ್ ಭಟ್.
‘ರಾಝ್ -೩’ಯಲ್ಲಿ ನಟಿಸುತ್ತಿರುವುದನ್ನು ಬಿಪ್ಸ್ ಕೂಡ ಟ್ವಿಟ್ ಮೂಲಕ ಖಚಿತಪಡಿಸಿದ್ದಾಳೆ. ‘ಮತ್ತೊಮ್ಮೆ ಆ ಟೀಂನೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಖುಷಿ ತಂದಿದೆ. ರಾಝ್-೩ಲ್ಲಿನ ನನ್ನ ಪಾತ್ರ ತುಂಬಾ ಚಾಲೆಂಜಿಂಗ್ ಆಗಿದೆ’ ಎಂದಿದ್ದಾಳೆ. ಟೋಟಲಿ ಬಿಪ್ಸ್ ಮತ್ತೊಂದು ‘ರಾಝ್’ ಮೂಲಕ ಪಡ್ಡೆ ಹೈಕಳನ್ನು ನಿದ್ರೆ ಮಾಡಲು ಬಿಡುತ್ತಾಳಾ..? ಎಂದು ಕಾದು ನೋಡಬೇಕು. ದೊಡ್ಡ ಹಿಟ್ ಚಿತ್ರಗಳಿಲ್ಲದೇ ಒದ್ದಾಡುತ್ತಿರುವ ಬಿಪ್ಸ್ಗೂ ಬಾಲಿವುಡ್ನಲ್ಲಿ ಒಂದು ದೊಡ್ಡ ಬ್ರೇಕ್ ಬೇಕಾಗಿದೆ. ‘ರಾಝ್-೩’ ಬಿಪ್ಸ್ ಬಾಲಿವುಡ್ನಲ್ಲಿ ನೆಲೆ ನಿಲ್ಲಲು ಹೆಲ್ಪ್ ಮಾಡುತ್ತಾ ಎನ್ನೋದು ಪ್ರೇಕ್ಷಕ ಮಹಾಪ್ರಭುವೇ ಹೇಳಬೇಕು.
ಬೆನಗಲ್ ಪಾರ್ಟಿಯಲ್ಲಿ ಬಸು ನೈಜ ವಸ್ತವನ್ನಿಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ ನಿರ್ದೇಶಕ ಶ್ಯಾಮ್ ಬೆನಗಲ್. ಈಗಾಗಲೇ ಹಲವು ವಿಷಯಗಳ ಮೇಲೆ ಸಿನಿಮಾ ಮಾಡಿರುವ ಶ್ಯಾಂ ಬೆನಗಲ್ ಈ ಬಾರಿ ಅವರು ಆಯ್ಕೆ ಮಾಡಿಕೊಂಡಿರುವುದು ನಟಿಯೊಬ್ಬಳ ಕಥೆ. ಹಾಗಂತ ಯಾವುದೇ ಒಬ್ಬ ನಟಿಯ ಬಗ್ಗೆ ಅವರು ಸಿನಿಮಾ
ಮಾಡುತ್ತಿಲ್ಲ. ಬದಲಾಗಿ, ಸ್ಟಾರ್ನಟಿಯೊಬ್ಬಳು ಉದ್ಯಮದಲ್ಲಿ ಎದುರಿಸುವ ಕಷ್ಟಗಳು, ಅವಳು ಅನುಭವಿಸುವ ಶೋಷಣೆಗಳ ಕುರಿತು ಶ್ಯಾಂ ಬೆನಗಲ್ ಸಿನಿಮಾ ಮಾಡಲಿದ್ದಾರೆ. ಅವರ ಈ ಕಲ್ಪನೆಗೆ ಜೀವ ತುಂಬಲಿರುವುದು ಬಾಲಿವುಡ್ ನ ಹಾಟ್ ಬೇಬಿ ಬಿಪಾಶಾ ಬಸು. ಈಗಾಗಲೇ ಕಥೆ ಕೇಳಿ ಇಂಪ್ರೆಸ್
ಆಗಿರುವ ಬಿಪಾಶಾ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾಳಂತೆ. ಗ್ಲಾಮರಸ್ ಹಾಗೂ ಒಳ್ಳೆಯ ಟ್ಯಾಲೆಂಟ್ ಇರುವ ಬೆಡಗಿ ಬೇಕಾದ್ದರಿಂದ ಬಿಪಾಶಾಳಿಗೆ ಜೈ ಅನ್ನಲಾಯಿತಂತೆ.