Friday, January 25, 2013
‘ಲಿಟಲ್ ಹಾರ್ಟ್’ ಮೌನ ಒಡೆದು ಮಾತಾಯಿತು!
ಸಿನಿಮಾ ಎಂದರೆ ಬೇಕುಗಳ ಸಮುದ್ರ ಎನ್ನೋದು ಸಿನಿಮಾ ಪಂಡಿತರ ಮಾತು. ಒಂದು ಸಿನಿಮಾ ನಿರ್ಮಾಣವಾಗಬೇಕಾದರೆ ಬಂಡವಾಳ ಬೇಕು, ನಟ-ನಟಿಯರು ಬೇಕು, ಭರ್ಜರಿ ಲೊಕೇಷನ್ ಬೇಕು, ಮಾತು ಬೇಕು... ಆದರೆ ಇವು ಇಲ್ಲದೇ ಸಿನಿಮಾ ಮಾಡಬಹುದು ಎನ್ನೋದಕ್ಕೆ ಕರಾವಳಿ ಹುಡುಗರು ಇಲ್ಲಿದ್ದಾರೆ.
* ಸ್ಟೀವನ್ ರೇಗೊ, ದಾರಂದಕುಕ್ಕು
ಸಿನಿಮಾ ಎಂದರೆ ಬೇಕುಗಳ ಸಮುದ್ರ ಎನ್ನೋದು ಸಿನಿಮಾ ಪಂಡಿತರ ಮಾತು. ಒಂದು ಸಿನಿಮಾ ನಿರ್ಮಾಣವಾಗಬೇಕಾದರೆ ಬಂಡವಾಳ ಬೇಕು, ನಟ-ನಟಿಯರು ಬೇಕು, ಭರ್ಜರಿ ಲೊಕೇಷನ್ ಬೇಕು, ಮಾತು ಬೇಕು... ಹೀಗೆ ಬೇಕುಗಳ ನಡುವೆ ಸಿನಿಮಾ ನಿರ್ಮಾಣವಾಗಿ ಹೊರಬರುವ ಪ್ರಸಂಗಗಳೇ ಜಾಸ್ತಿ. ಆದರೆ ವಿಪರ್ಯಾಸ ಎಂದರೆ ಈ ಬೇಕುಗಳಿಲ್ಲದೇ ಸಿನಿಮಾ ನಿರ್ಮಾಣ ಮಾಡಬಹುದು ಎನ್ನುವ ಸತ್ಯ ಮಾತ್ರ ಅರಿವಿಗೆ ಬರೋದು ಬಹಳ ಕಷ್ಟ.
ಆದರೆ ಕರಾವಳಿಯಲ್ಲಿ ಇಂತಹ ಬೇಕುಗಳನ್ನು ಬದಿಗೊತ್ತಿದ ಯುವಕರು ಸದ್ದು ಮಾಡಿದ್ದಾರೆ. ಲಿಟಲ್ ಹಾರ್ಟ್ ಮಾತುಗಳೇ ಇಲ್ಲದ ಸುಂದರ ಚಿತ್ರವೊಂದು ಈಗಾಗಲೇ ಯೂ ಟ್ಯೂಬ್ನಲ್ಲಿ ಸಖತ್ ಕ್ಲಿಕ್ ಆಗುತ್ತಿದೆ. ಯುವಕರು ಮಾಡಿದ ಪುಟ್ಟ ಚಿತ್ರವೊಂದು ಬಹಳಷ್ಟು ಮಂದಿಯನ್ನು ಮೋಡಿ ಮಾಡಿದೆ ಎನ್ನುವುದಕ್ಕೆ ಕ್ಲಿಕ್ ಆಗುತ್ತಿರುವ ಸಂಖ್ಯೆಯ ಲೆಕ್ಕಚಾರವೇ ಹೇಳುತ್ತಿದೆ.
ಮೌನ ಹೇಗೆ ಮಾತಾಯಿತು:
‘ಲಿಟಲ್ ಹಾರ್ಟ್’ ಬರೀ ಹನ್ನೆರಡು ನಿಮಿಷಗಳ ಪುಟ್ಟ ಚಿತ್ರ. ಅಂದಹಾಗೆ ಇಲ್ಲಿ ಮೈಲು ಉದ್ದ ಗಾತ್ರದ ಸಂಭಾಷಣೆಗಳಿಲ್ಲ. ಪ್ರೇಕ್ಷಕರನ್ನು ಕಿರಿಕಿರಿ ಮಾಡುವ ಪದ ಪ್ರಯೋಗಗಳಿಲ್ಲ. ಇಲ್ಲಿ ಇರುವುದು ಬರೀ ಮೌನ. ಚಿತ್ರದ ಜತೆಯಲ್ಲಿ ಸಾಗುವ ಹಿನ್ನೆಲೆ ಸಂಗೀತ ನೋಡುವ ಪ್ರೇಕ್ಷಕನನ್ನು ಮೋಡಿ ಮಾಡುತ್ತದೆ. ಭಿಕ್ಷುಕ ಹುಡುಗ (ಬಸಪ್ಪ) ಮತ್ತು ಸಾಮಾನ್ಯ ಮಧ್ಯಮ ವರ್ಗದ ಹುಡುಗ(ಶಾನನ್)ನ ಮುಗ್ಧತೆ ಮತ್ತು ತೀರಾ ವಿರಳ ಎನ್ನುವಂತಹ ಗೆಳೆತನವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಸ್ನೇಹಕ್ಕೆ, ಮಾನವೀಯತೆಗೆ ಜಾತಿ, ಧರ್ಮ, ಹಣ, ಅಂತಸ್ತಿನ ಅಡ್ಡಿಯಿಲ್ಲ ಎನ್ನುವುದನ್ನು ಈ ಕಿರು ಚಿತ್ರ ಮತ್ತೇ ಮತ್ತೇ ಗಟ್ಟಿಯಾಗಿ ಹೇಳುವಂತಿದೆ. ಈ ಜಗತ್ತಿನಲ್ಲಿ ನಮಗೆ ಹತ್ತಿರವಾದವರು ಎಷ್ಟೇ ಜನ ಇದ್ದರೂ ಕೆಲವೊಬ್ಬರು ಮಾತ್ರ ಮರೆಯಲಾರದಷ್ಟು ಹತ್ತಿರವಾಗುತ್ತಾರೆ. ಬಹುಶಃ ಇಂತಹ ಮನಸ್ಥಿತಿ ಹೆಚ್ಚಾಗಿ ಮಕ್ಕಳಲ್ಲಿ ಮಾತ್ರ ಮೂಡಿಬರಲು ಸಾಧ್ಯ ಎನ್ನೋದು ಕಿರುಚಿತ್ರ ಹೇಳುತ್ತಿರುವ ಮಾತು. ಚಿತ್ರದಲ್ಲಿ ಬಿಜಾಪುರದ ಪ್ರಸ್ತುತ ಮಂಗಳೂರಿನಲ್ಲಿ ಹೈಸ್ಕೂಲ್ ಓದುತ್ತಿರುವ ಬಸಪ್ಪ, ಅತ್ತಾವರದ ಶಾನನ್ ವಿದ್ಯಾರ್ಥಿಗಳಾದ ಆರನ್ ಮತ್ತು ಅನುಷ್, ಚಂದ್ರಹಾಸ್,ಲತಾ, ನಿತಿನ್ ನಟಿಸಿದ್ದಾರೆ. ಚಿತ್ರವನ್ನು ಟ್ರೈಬಲ್ ಇಮ್ಯಾಜಿನೇಶನ್ ಫಿಲಂಸ್ ನಿರ್ಮಾಣ ಮಾಡಿದೆ. ಕ್ಯಾಮೆರಾದಲ್ಲಿ ಆರ್.ಕೆ .ಮಂಗಳೂರು, ಸಂಗೀತದಲ್ಲಿ ಪುಷ್ಪರಾಜ್ . ಆರ್ .ಎಸ್, ಕಲಾ ನಿರ್ದೇಶನದಲ್ಲಿ ವಿಕಾಸ್ ಮತ್ತು ಮೊನೀಶ್ ಶೆಟ್ಟಿ ಹಾಗೂ ಪ್ರಾಜೆಕ್ಟ್ ಅಂಡ್ ಟೆಕ್ನಿಕಲ್ ಹೆಡ್ಗಳಾಗಿ ಪ್ರದೀಪ್ ರಾಯ್ ,ಸಂತೋಷ್ ಶೆಟ್ಟಿ , ಪುಷ್ಪರಾಜ್ .ಆರ್.ಎಸ್ ಹಾಗೂ ಕಥೆ ,ಚಿತ್ರಕಥೆ ,ನಿರ್ದೇಶನದಲ್ಲಿ ನಾಗೇಶ್ ಪುತ್ತೂರು ದುಡಿದಿದ್ದಾರೆ.
ನಾಗೇಶ್ ಎನ್ನುವ ಪ್ರತಿಭಾವಂತ:
ಮಂಗಳೂರಿನ ಎಂಜಿ ರಸ್ತೆಯಲ್ಲಿರುವ ಟ್ರೈಬಲ್ ಟ್ಯಾಟೂವಿನಲ್ಲಿ ದುಡಿಯುತ್ತಿರುವ ನಾಗೇಶ್ ಪುತ್ತೂರು ಪ್ರತಿಭಾವಂತ ಹುಡುಗ. ಟ್ಯಾಟೂ ಸೇರಿದಂತೆ ೩ಡಿಯಲ್ಲಿ ವಿಶೇಷ ಪರಿಣತಿಯನ್ನು ಪಡೆದಿರುವ ನಾಗೇಶ್ ಈ ಹಿಂದೆ ಕೂಡ ಇಂತಹ ಕಿರುಚಿತ್ರಗಳ ಹಾಗೂ ಚಿತ್ರಗಳ ನಿರ್ಮಾಣದಲ್ಲಿ ದುಡಿದವರು. ತಮ್ಮ ಸ್ನೇಹಿತರ ಬೆಂಬಲದಿಂದ ಕಡಿಮೆ ಖರ್ಚಿನಲ್ಲಿ ‘ಲಿಟಲ್ ಹಾರ್ಟ್’ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ.
ಇತ್ತೀಚೆಗೆ ಕನ್ನಡದ ಹಿರಿಯ ನಟ ವಿಷ್ಣುವರ್ಧನ್ ಅವರ ಮೂರನೇ ಪುಣ್ಯತಿಥಿಯ ಅಂಗವಾಗಿ,ವಿಭಾ ಚಾರಿಟೇಬಲ್ ಟ್ರಸ್ಟ್ , ಡ್ಯುಯಲ್ ಥಾಟ್ಸ್ ನ ಸಹಯೋಗದೊಂದಿಗೆ ನಡೆದ ‘ಕಿರುಚಿತ್ರ ಸ್ಪರ್ಧೆ’ಯಲ್ಲಿ ‘ಲಿಟಲ್ ಹಾರ್ಟ್’ ಕಿರುಚಿತ್ರ ಮಕ್ಕಳಿಗಾಗಿ ರಚಿಸಲಾದ ಅತ್ಯುತ್ತಮ ಕಿರುಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಬಹುಮಾನ ಲಭಿಸಿದೆ. ೫೦ ಸಾವಿರಕ್ಕೂ ಅಧಿಕ ಎಂಟ್ರಿಗಳ ನಡುವೆ ಮೊದಲ ಸುತ್ತಿನಲ್ಲಿ ೪೩ ಹಾಗೂ ಎರಡನೇ ಸುತ್ತಿನಲ್ಲಿ ೧೦ ಆಯ್ಕೆಗಳ ಜತೆಯಲ್ಲಿ ಲಿಟಲ್ ಹಾರ್ಟ್ ವಿಶೇಷ ಬಹುಮಾನ ಪಡೆದಿದೆ. ಟೋಟಲಿ ಕಡಿಮೆ ಖರ್ಚಿನಲ್ಲೂ ಸಿನಿಮಾ ಮಾಡಿ ತೋರಿಸಬಹುದು ಎನ್ನುವುದಕ್ಕೆ ಈ ಹುಡುಗರೇ ದೊಡ್ಡ ಸ್ಯಾಂಪಲ್.
...
Tuesday, January 22, 2013
ಟ್ವಿಟ್ಟರ್ ಹುಡುಗ ಜಸ್ಟಿನ್ !
ಅಮೆರಿಕದ ಸಂಗೀತ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ ‘ಮೈ ವಲ್ಡ್ ’ ಸಂಗೀತ ಆಲ್ಬಂವಂತೂ ಜಸ್ಟಿನ್ ಎನ್ನುವ ಪೋರನನ್ನು ಪಾಪ್ ಲೋಕದ ಧ್ರುವ ತಾರೆಯನ್ನಾಗಿ ಮಾಡಿತು. ಅಂದಹಾಗೆ ಜಸ್ಟಿನ್ ಈಗಷ್ಟೇ ೧೮ರ ಅಸುಪಾಸಿನಲ್ಲಿರುವ ಹುಡುಗ. ಆದರೆ ಆತನ ಫಾಲೋ ಗ್ರೂಫ್ ನೋಡಿದರೆ ದಂಗು ಮೂಡುತ್ತದೆ.
ಸ್ಟೀವನ್ ರೇಗೊ, ದಾರಂದಕುಕ್ಕು
ಪಾಪ್ ಲೋಕದಲ್ಲಿ ಜಸ್ಟಿನ್ ಬೀಬರ್ ಹೆಸರು ತೀರಾ ಪರಿಚಿತ. ಆತ ಪಾಪ್ ಲೋಕದಲ್ಲಿ ಮಾಡಿದ ಕೆಲಸಗಳೆಲ್ಲವೂ ಸಿಕ್ಕಾಪಟ್ಟೆ ಹಿಟ್ ಮೇಲೆ ಹಿಟ್. ಅದರಲ್ಲೂ ಅಮೆರಿಕದ ಸಂಗೀತ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ ‘ಮೈ ವಲ್ಡ್ ’ ಸಂಗೀತ ಆಲ್ಬಂವಂತೂ ಜಸ್ಟಿನ್ ಎನ್ನುವ ಪೋರನನ್ನು ಪಾಪ್ ಲೋಕದ ಧ್ರುವ ತಾರೆಯನ್ನಾಗಿ ಮಾಡಿತು. ಅಂದಹಾಗೆ ಜಸ್ಟಿನ್ ಈಗಷ್ಟೇ ೧೮ರ ಅಸುಪಾಸಿನಲ್ಲಿರುವ ಹುಡುಗ. ಆದರೆ ಆತನ ಫಾಲೋ ಗ್ರೂಫ್ ನೋಡಿದರೆ ದಂಗು ಮೂಡುತ್ತದೆ.
ಅದರಲ್ಲೂ ಸಾಮಾಜಿಕ ತಾಣಗಳಲ್ಲಿ ಒಂದಾದ ಟ್ವಿಟ್ಟರ್ ಸಾಮಾಜಿಕ ತಾಣದಲ್ಲಿ ಅವನಿಗೆ ಇರುವ ಅಭಿಮಾನಿಗಳ ಸಂಖ್ಯೆ ಎಷ್ಟು ಗೊತ್ತಾ..? ಬರೋಬ್ಬರಿ ೩೩,೩೨೬,೬೨೪. ಇದು ಟ್ವಟ್ಟಿರ್ ನಲ್ಲಿಯೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ವ್ಯಕ್ತಿ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತೇ ಇರಲು ಸಾಧ್ಯವಿಲ್ಲ. ಕಾರಣ ಜಸ್ಟಿನ್ ಸಾಮಾಜಿಕ ತಾಣಗಳಲ್ಲಿ ಅತೀ ಹೆಚ್ಚು ಜನಪ್ರಿಯ ವ್ಯಕ್ತಿ.
ಆತನ ಹಾಡುಗಳು ಎಷ್ಟು ಜನಪ್ರಿಯವಾಗಿರುತ್ತದೆಯೋ ಅದೇ ರೀತಿಯಲ್ಲಿ ಆತನ ಟ್ವಿಟ್ಟ್ಗಳು ಅಷ್ಟೇ ಮಜಬೂತಾಗಿರುತ್ತದೆ. ಇದೇ ಜನಪ್ರಿಯವನ್ನೇ ಬಂಡವಾಳ ಇಟ್ಟುಕೊಂಡು ಬಂದಿರುವ ಜಸ್ಟಿನ್ ಬೀಬರ್ ‘ಬೀಲಿವ್ ಅಕೋಸ್ಟಿಕ್’ ಎನ್ನುವ ಹೊಸ ಆಲ್ಬಂವೊಂದನ್ನು ಈ ವರ್ಷ ಬಿಡುಗಡೆ ಮಾಡುವ ಸರದಿಯಲ್ಲಿ ನಿಂತಿದ್ದಾನೆ.
ಅಂದಹಾಗೆ ಇತನ ಜತೆಯಲ್ಲಿ ಟ್ವಿಟ್ಟರ್ನಲ್ಲಿ ಸ್ಪರ್ಧೆಗೆ ಬಿದ್ದಿರೋದು ಬೇರೆ ಯಾರು ಅಲ್ಲ. ಪಾಪ್ ಲೋಕದ ತಾರೆ ಲೇಡಿ ಗಾಗಾ, ಇವರ ಜತೆಗೆ ಹಾಲಿವುಡ್ ನಟಿ ಕೇಟ್ ಪೆರ್ರಿ, ಪಾಪ್ ಗಾಯಕಿ ರಿಹಾನಾ, ಬರಾಕ್ ಒಬಾಮಾ, ಬ್ರಿಟ್ನಿ ಸ್ಪಿಯರ್, ಟೇಲರ್ ಸ್ಫೀಟ್, ಶಕೀರಾ, ಕಿಮ್ ಕದರ್ಶಿಯನ್ ಎಲ್ಲರೂ ಒಂದರ ಹಿಂದೆ ಒಬ್ಬರನ್ನು ಫಾಲೋ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ.
ಯುವ ಜನತೆಗೆ ಮಾದರಿ ಜಸ್ಟಿನ್ :
ಪಾಪ್ ಲೋಕದ ಜಸ್ಟಿನ್ ಬೀಬರ್ ಒಂದು ಲೆಕ್ಕಚಾರದ ಪ್ರಕಾರ ಯೂತ್ ಬ್ರಿಗೇಡ್ ಗೆ ರೋಲ್ ಮಾಡೆಲ್. ಕಾರಣ ಅತೀ ಸಣ್ಣ ವಯಸ್ಸಿನಲ್ಲೇ ಬೀಬರ್ ಪಾಪ್ ಲೋಕದಲ್ಲಿ ಮೆರೆದಾಡಿದ್ದು ನೋಡಿದರೆ ಪಾಪ್ ಲೋಕದಲ್ಲಿದ್ದವರು ಕೂಡ ಬೀಬರ್ ಕಂಡು ಬೆರಗು ಗೊಂಡಿದ್ದರು. ೨೦೧೨ರ ಫ್ರೋಬ್ಸ್ ಮ್ಯಾಗಜೀನ್ ಕವರ್ ಪೇಜ್ನಲ್ಲಿ ಬೀಬರ್ ಚಿತ್ರ ಹಾಕಿ ವಿಶ್ವದ ಪ್ರಬಲ ವ್ಯಕ್ತಿಗಳ ಸಾಲಿನಲ್ಲಿ ತಂದು ಕೂರಿಸಲಾಯಿತು. ಬೀಬರ್ ಅಲ್ಬಂಗಳಂತೂ ಒಂದಕ್ಕಿಂತ ಒಂದು ಹಿಟ್ ಕೊಡುವ ಮೂಲಕ ಒಂದೇ ವರ್ಷದಲ್ಲಿ ೧೫ ಬಿಲಿಯನ್ ಆಲ್ಬಂಗಳನ್ನು ಬಿಕರಿ ಮಾಡುವ ಮೂಲಕ ದಾಖಲೆ ಮಾಡಿದ ಪೋರ.
ಒಂದೇ ವರ್ಷದಲ್ಲಿ ೫೫ ಮಿಲಿಯನ್ ಡಾಲರ್ ತನ್ನ ಕೆಲಸಕ್ಕೆ ಪಡೆದ ಸಾಹಸಿ ಬೀಬರ್ ಟ್ವಿಟ್ಟರ್ ಲೋಕದಲ್ಲಿ ಭಿನ್ನ ಸಾಹಸಿಗ ಅದರಲ್ಲೂ ಆತನ ಒಂದು ಟ್ವಿಟ್ ವಿಶ್ವದಲ್ಲಿಯೇ ಬಹಳ ಕೋಲಾಹಲ ಮಾಡಿತ್ತು. ಜಸ್ಟಿನ್ ಹೇಳುವಂತೆ ‘ ನೀವು ಯಾರ ಜತೆಯಲ್ಲೂ ಸೆಕ್ಸ್ ಮಾಡಲು ಇಚ್ಚಿಸುತ್ತೀರಿ ಎಂದಾದರೆ ನೀವು ಅವರನ್ನು ಪ್ರೀತಿಸುತ್ತೀರಿ ಎಂದಾರ್ಥ’ ಇದು ಟ್ವಿಟ್ ಮಾತುಗಳು ಜಸ್ಟಿನ್ ಟ್ವಿಟ್ಟರ್ ಅಕೌಂಟ್ನ್ಲಲಿ ಬೇಜಾನ್ ಕಾಣ ಸಿಗುತ್ತದೆ. ಅದಕ್ಕೂ ಮುಖ್ಯವಾಗಿ ಜಸ್ಟಿನ್ ಬೀಬರ್ ತನ್ನ ಟ್ವಿಟ್ ಗಳ ಮೂಲಕ ಹರೆಯದವರಿಗೂ ಇಷ್ಟವಾಗುತ್ತಾನೆ.
...
ಚಿತ್ರ: ಜಸ್ಟಿನ್ ಬೀಬರ್
.......
(vk lvk published dis article on 24.1.2013)
Sunday, January 20, 2013
ಬಾಲಿವುಡ್ನ ವಿವೇಕ ಸ್ವಾಮಿ !
ಭಕ್ತಿಯ ಭಾವದ ನಡುವೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಒಂಚೂರು ಭಿನ್ನವಾಗಿ ನಿಲ್ಲುತ್ತಾರೆ. ಕಾರಣ ಇಷ್ಟೇ ವಿವೇಕ್ಗೆ ದೇವರ ಮೇಲೆ ಅಪಾರ ನಂಬಿಕೆ. ಯಾವುದೇ ಕೆಲಸಗಳಲ್ಲೂ ವಿವೇಕ್ ದೇವರನ್ನು ನಂಬಿಕೆ ಇಟ್ಟುಕೊಂಡೇ ಮುಂದುವರಿಯುತ್ತಾರೆ.
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಎಂದಾಕ್ಷಣ ಇಲ್ಲಿ ನಂಬಿಕೆ ಎನ್ನುವ ಪದಕ್ಕೆ ಜಾಸ್ತಿ ಅರ್ಥ ಇರುತ್ತದೆ ಎನ್ನೋದು ಬಾಲಿವುಡ್ ಪಂಡಿತರ ಮಾತು. ಇದೇ ನಂಬಿಕೆಯ ಮೇಲೆಯೇ ಬಾಲಿವುಡ್ನಲ್ಲಿ ಚಿತ್ರಗಳ ನಿರ್ಮಾಣ, ವಿತರಣೆ, ಸೋಲು- ಗೆಲುವು ಎಲ್ಲವೂ ಲೆಕ್ಕಚಾರಗಳು ನಡೆಯುತ್ತದೆ. ಈ ನಂಬಿಕೆಯ ಜತೆಯಲ್ಲಿ ಬಾಲಿವುಡ್ ನಟ- ನಟಿಯರಿಗೆ ದೇವರ ಮೇಲೆ ಅಪಾರ ನಂಬಿಕೆ ಇದೆ. ಮುಂಬಯಿಯ ಗಣೇಶೋತ್ಸವದಲ್ಲಿ ಬಾಲಿವುಡ್ ನಟ-ನಟಿಯರು ಹಮ್ಮಿಕೊಳ್ಳುವ ಗಣಪತಿ ಹಬ್ಬದ ಸಂಭ್ರಮ ಕಳೆಕಟ್ಟುತ್ತದೆ.
ಆದರೆ ಇಂತಹ ಭಕ್ತಿಯ ಭಾವದ ನಡುವೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಒಂಚೂರು ಭಿನ್ನವಾಗಿ ನಿಲ್ಲುತ್ತಾರೆ. ಕಾರಣ ಇಷ್ಟೇ ವಿವೇಕ್ಗೆ ದೇವರ ಮೇಲೆ ಅಪಾರ ನಂಬಿಕೆ. ಯಾವುದೇ ಕೆಲಸಗಳಲ್ಲೂ ವಿವೇಕ್ ದೇವರನ್ನು ನಂಬಿಕೆ ಇಟ್ಟುಕೊಂಡೇ ಮುಂದುವರಿಯುತ್ತಾರೆ. ಅದರಲ್ಲೂ ದೇಶದಲ್ಲಿರುವ ಎಲ್ಲ ಪುಣ್ಯಕ್ಷೇತ್ರಗಳಿಗೆ ವಿವೇಕ್ ಹೋಗಿ ಬಂದಿದ್ದಾರೆ. ಇಷ್ಟರಲ್ಲೂ ಕೇರಳದಲ್ಲಿರುವ ಶಬರಿಮಲೆಯ ಸ್ವಾಮಿ ಅಯ್ಯಪ್ಪ ಎಂದರೆ ವಿವೇಕ್ಗೆ ಒಂಚೂರು ಭಕ್ತಿ ಜಾಸ್ತಿ. ಇದೇ ಕಾರಣದಿಂದ ವಿವೇಕ್ ಒಬೆರಾಯ್ ತಪ್ಪದೇ ಕಳೆದ ೧೨ ವರ್ಷಗಳಿಂದ ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ.
ಈ ಬಾರಿಯ ವಿವೇಕ ದರ್ಶನ ರಹಸ್ಯ ಏನೂ:
ತೀರಾ ಇತ್ತೀಚೆಗೆ ಮುಂಬಯಿಯಲ್ಲಿ ವಿವೇಕ್ ಸಹೋದರಿ ಮೇಘನಾ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ ಮತ್ತೊಂದೆಡೆ ಫೆಬ್ರವರಿ ಮಧ್ಯಭಾಗದಲ್ಲಿ ವಿವೇಕ್ ಪತ್ನಿ ಪ್ರಿಯಾಂಕಾ ಕೂಡ ಡೆಲಿವರಿ ಡೇಟ್ ಗಳು ಸನಿಹಕ್ಕೆ ಬಂದು ನಿಂತಿದೆ. ಪ್ರಿಯಾಂಕಾ ಹಾಗೂ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಲು ವಿವೇಕ್ ಈ ಬಾರಿ ಶಬರಿಮಲೆಯ ಆಯ್ಯಪ್ಪ ಸ್ವಾಮಿಯ ದರ್ಶನ ಮಾಡುತ್ತಿದ್ದಾರೆ ಎನ್ನೋದು ಸಿಕ್ರೇಟ್ ಮಾತು.
ಇತ್ತಕಡೆ ಈ ಕುರಿತು ವಿವೇಕ್ ಒಬೆರಾಯ್ ಮಾತ್ರ ಯಾವುದೇ ಮಾತಿಗೆ ತಲೆಯಾಡಿಸುತ್ತಿಲ್ಲ. ದೇವರ ದರ್ಶನವೇ ತನ್ನ ಮೂಲ ಪ್ರಯಾಣದ ಉದ್ದೇಶ . ಈ ಕಾರಣದಿಂದ ನನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಶಬರಿಮಲೆಯ ಯಾತ್ರೆ ಕೈಗೊಳ್ಳುತ್ತಿದ್ದೇನೆ ಎಂದು ವಿವೇಕ್ ಒಬೆರಾಯ್ ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿದ್ದಾರೆ.
ಬಾಲಿವುಡ್ ನಟ ವಿವೇಕ್ ಒಬೆರಾಯ್ ಈ ಬಾರಿ ೧೩ ವರ್ಷನೇ ಆಯ್ಯಪ್ಪ ಸ್ವಾಮಿಯ ಭಕ್ತನಾಗಿ ಮಲೆ ಕಡೆಗೆ ಹೋಗಿದ್ದರು. ಅಂದಹಾಗೆ ಅವರು ಪ್ರತಿ ಬಾರಿಯೂ ಮಕರ ಸಂಕ್ರಾಂತಿ ಸಮಯದಲ್ಲಿಯೇ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ೪೧ ದಿನಗಳ ಕಾಲ ಮಾಲೆ ಧರಿಸುವ ವಿವೇಕ್ ಒಬೆರಾಯ್ ಅಯ್ಯಪ್ಪ ಭಕ್ತನೊಬ್ಬ ಯಾವ ರೀತಿಯ ಕಟ್ಟು ನಿಟ್ಟು ಪಾಲಿಸುತ್ತಾರೋ ಅಷ್ಟೇ ಕಟ್ಟುನಿಟ್ಟಿನ ಬದುಕಿಗೆ ವಿವೇಕ್ ಶರಣಾಗುತ್ತಾರೆ.
ಶಬರಿಮಲೆಯ ಕುರಿತು ವಿವೇಕ್ ಒಬೆರಾಯ್ ಈ ರೀತಿ ಹೇಳುತ್ತಾರೆ : ಶಬರಿಮಲೆಯ ಯಾತ್ರೆ ಒಂದು ಮನಸ್ಸಿಗೆ ತೃಪ್ತಿ ನೀಡುವ ಕೇಂದ್ರ. ಮನಸ್ಸೊಂದು ಮೊಬೈಲ್ ಬ್ಯಾಟರಿಯಂತಿರುತ್ತದೆ. ಶಬರಿಮಲೆ ಚಾರ್ಜ್ ಮಾಡುವ ಸ್ಟೇಷನ್ನಂತಿರುತ್ತದೆ. ಇಂತಹ ಚಾರ್ಜಿಂಗ್ ಸ್ಟೇಷನ್ನಿಂದ ನನ್ನ ಮನಸ್ಸು ಶಾಂತಿಯ ಕಡೆ ಕೇಂದ್ರೀಕೃತವಾಗುತ್ತದೆ. ಧನಾತ್ಮಕ ಚಿಂತನೆಗಳನ್ನು ಜಾಸ್ತಿಯಾಗಿ ಚಿಂತಿಸುವಂತೆ ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಈ ವರ್ಷ ಇಡೀ ಯಶಸ್ಸು ನನ್ನ ಕೈಯಲ್ಲಿರುತ್ತದೆ ಎನ್ನುವ ನಂಬಿಕೆ ಬೆಳೆಯುತ್ತದೆ. ಕಪ್ಪು ಬಟ್ಟೆ ಧರಿಸಿಕೊಂಡು ಅಯ್ಯಪ್ಪ ಸ್ವಾಮಿಯ ಯಾತ್ರೆ ಕೈಗೊಳ್ಳುವ ಪರಂಪರೆ ವಿವೇಕ್ ಮುಂದೇನೂ ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನೋದು ಅವರ ಮಾತು.
(vk lvk published dis articl on 21.01.2013)
ಶರ್ಲಿನ್ ಬೋಲ್ಡ್ ಸೂತ್ರ !
*ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ನಲ್ಲಿ ನಗ್ನತೆಗೆ ವಿಶೇಷ ಮನ್ನಣೆ ಇದೆ. ಮಲ್ಲಿಕಾ ಶೆರವಾತ್, ಪೂನಂ ಪಾಂಡೆ, ರಾಖಿ ಸಾವಂತ್ ಎನ್ನುವ ಬಿಚ್ಚು ನಟಿಯರ ಮುಂದೆ ಶರ್ಲಿನ್ ಎನ್ನುವ ಹಾಟ್ ಹುಡುಗಿ ಬಂದು ನಿಂತಿದ್ದಾಳೆ. ಅದು ಕೂಡ ಹೇಗೆ ಅಂತೀರಾ ಟೋಟಲಿ ನೇಕೇಡ್ !
ನಗ್ನತೆ ಎನ್ನೋದು ಸಿನಿಮಾ ನಗರಿಗೆ ಹೊಸ ವ್ಯಾಖೆಯಲ್ಲ. ಸಿನಿಮಾದ ಜತೆಯಲ್ಲಿ ನಗ್ನತೆಗೂ ಗಟ್ಟಿಯಾದ ತಳಹದಿ ಇದೆ. ಸಿನಿಮಾದ ಜತೆಯಲ್ಲಿ ಮಸಾಲೆ ಹಾಗೂ ಕೊಂಚ ನಗ್ನತೆ ಎನ್ನುವ ಎರಡು ಐಟಂಗಳು ಜತೆಗೂಡಿದಾಗ ಸಿನಿಮಾ ಒಂದು ರೀತಿಯ ಪ್ರಚಾರಕ್ಕೆ ಬಂದು ಮುಟ್ಟುತ್ತದೆ ಎನ್ನೋದು ಸಿನಿಮಾ ಮಂದಿಯ ಅನುಭವ ನುಡಿಗಟ್ಟು. ಅದರಲ್ಲೂ ಬಾಲಿವುಡ್ ನಲ್ಲಿ ನಗ್ನತೆಗೆ ವಿಶೇಷ ಮನ್ನಣೆ ಇದೆ.
ಮಲ್ಲಿಕಾ ಶೆರವಾತ್, ಪೂನಂ ಪಾಂಡೆ, ರಾಖಿ ಸಾವಂತ್ ಎನ್ನುವ ಬಿಚ್ಚು ನಟಿಯರ ಮುಂದೆ ಶರ್ಲಿನ್ ಎನ್ನುವ ಹಾಟ್ ಹುಡುಗಿ ಬಂದು ನಿಂತಿದ್ದಾಳೆ. ಅದು ಕೂಡ ಹೇಗೆ ಅಂತೀರಾ ಟೋಟಲಿ ನೇಕೇಡ್ ! ಹೌದು. ಶರ್ಲಿನ್ ಚೋಪ್ರಾ ಹೆಸರಿನ ಜತೆಯಲ್ಲಿಯೇ ಹಾಟ್ನೆಸ್ ಸೇರಿಕೊಳ್ಳುತ್ತದೆ. ಬಾಲಿವುಡ್ ಪಡಸಾಲೆಯಲ್ಲಿ ಏನೋ ನಟಿಯಾಗಬೇಕು ಎನ್ನುವ ಕನಸ್ಸುಗಳನ್ನು ಕಟ್ಟಿಕೊಂಡು ಬಂದ ಹುಡುಗಿಯೊಬ್ಬಳು ಮುಂಬಯಿ ಗಲ್ಲಿಯಲ್ಲಿಯೇ ಬೆತ್ತಲಾಗಿ ಕಾಣಿಸಿಕೊಂಡಳು.
ಸಿನಿಮಾಗಳಲ್ಲಿ ಅವಕಾಶ ಇಲ್ಲ ಎನ್ನುವ ನೇಮ್ ಪ್ಲೇಟ್ ನೋಡಿದ ಹುಡುಗಿ ಹಾಲಿವುಡ್ ಮಟ್ಟದಲ್ಲೂ ಬಿಚ್ಚಾಟದಲ್ಲಿ ಯಾರಿಗೂ ಕಮ್ಮಿಯಿಲ್ಲ ಎನ್ನುವ ಪುರಾವೆ ಈ ಹಿಂದೆ ಕೂಡ ಹೊರ ಬಂದಿತ್ತು. ಪದೇ ಪದೇ ಬಟ್ಟೆ ಬಿಚ್ಚು ಖಯಾಲಿಯ ಶರ್ಲಿನ್ ಚೋಪ್ರಾ ಈಗ ಕಾಮಸೂತ್ರ ೩ಡಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಹಾಟ್ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ. ಈ ಫೋಟೋದಲ್ಲಿ ಶೆರ್ಲಿನ್ ಸಂಪೂರ್ಣ ನಗ್ನವಾಗಿದ್ದು, ತಮ್ಮ ಚಿತ್ರದ ಗುಟ್ಟುಗಳನ್ನು ಒಂದೊಂದೇ ಬಿಚ್ಚಿಟ್ಟಿದ್ದಾರೆ. ಚಿತ್ರದ ಹೆಸರೇ ಕಾಮಸೂತ್ರ. ಪ್ರೇಕ್ಷಕರು ಇನ್ನೇನು ನಿರೀಕ್ಷಿಸಲು ಸಾಧ್ಯ. ಅವರ ನಿರೀಕ್ಷೆಗೆ ತಕ್ಕಂತೆ ಶೆರ್ಲಿನ್ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದಾರೆ.
ರುಪೇಶ್ ಪೌಲ್ ಎಂಬ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಕ್ಯಾನೆ ಚಿತ್ರೋತ್ಸವದಲ್ಲಿ ಈ ಚಿತ್ರದ ಬಗ್ಗೆ ಈಗಾಗಲೇ ಪ್ರಕಟಿಸಲಾಗಿದೆ. ಶೆರ್ಲಿನ್ ಚೋಪ್ರಾ ಜೊತೆ ಬಾಲಿವುಡ್ ನ ಇನ್ನಿಬ್ಬರು ತಾರೆಗಳು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರಂತೆ. ವಾತ್ಸಾಯನ ಬರೆದ ಭಾರತದ ಅತ್ಯಂತ ಪ್ರಾಚೀನ ಗ್ರಂಥ ‘ಕಾಮಸೂತ್ರ’ ಮೂಲಾಧಾರವಾಗಿಟ್ಟುಕೊಂಡು ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.
ಶರ್ಲಿನ್ ಯಾಕೆ ಬಿಚ್ಚುತ್ತಾರೆ ಗೊತ್ತಾ? :
ಹಾಟ್ ಬೆಡಗಿಯರಾದ ಪೂನಂ ಪಾಂಡೆ ಹಾಗೂ ವೀಣಾ ಮಲಿಕ್ ಪ್ರವರ್ಧಮಾನಕ್ಕೆ ಬಂದ ಮೇಲಂತೂ ಶರ್ಲಿನ್ರನ್ನು ಮೂಸಿ ನೋಡುವವರೇ ಇಲ್ಲದಂತಾಗಿತ್ತು. ಇದ್ದಕ್ಕಿದ್ದಂತೆ ಈಕೆ ಮೈಮೇಲೆ ರತಿಮನ್ಮಥರನ್ನು ಆವಾಹಿಸಿಕೊಂಡಂತೆ ಆಡುತ್ತಿದ್ದಾರೆ ಶೆರ್ಲಿನ್ ಅಂತಾರಾಷ್ಟ್ರೀಯ ಪುರುಷರ ನಿಯತಕಾಲಿಕೆ ಪ್ಲೇಬಾಯ್ ಗೆ ಹುಟ್ಟುಡುಗೆಯ ಫೋಟೋಗಳನ್ನು ನೀಡುವ ಮೂಲಕ ಪಡ್ಡೆಗಳ ಹೃದಯಕ್ಕೆ ಲಗ್ಗೆ ಹಾಕಿದ್ದಾರೆ.
ಇದುವರೆಗೂ ಬಹಳಷ್ಟು ಬಾಲಿವುಡ್ ತಾರೆಗಳು ಪ್ಲೇಬಾಯ್ ಮುಖಪುಟ ಅಲಂಕರಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಆದರೆ ಶೆರ್ಲಿನ್ ವಿಶೇಷ ಎಂದರೆ ಪ್ಲೇಬಾಯ್ ಮುಖಪುಟ ಅಲಂಕರಿಸುತ್ತಿರುವ ಮೊಟ್ಟ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆ ಪಾತ್ರರಾಗಿರುವುದು.
ಪ್ಲೇಬಾಯ್ ನಿಯತಕಾಲಿಕೆಯಲ್ಲಿ ತಮ್ಮ ದೇಹ ಸೌಂದರ್ವವನ್ನು ಪ್ರದರ್ಶಿಸಬೇಕು ಎಂದು ಬಹಳಷ್ಟು ಮಂದಿ ಮಹಿಳೆಯರು ಕನಸು ಕಾಣುತ್ತಲೇ ಇದ್ದಾರೆ. ಆದರೆ ಎಲ್ಲರ ಕನಸು ನೆರವೇರಲ್ಲ. ಬಟ್ಟೆ ಬಿಚ್ಚುವವರನ್ನೆಲ್ಲಾ ಪ್ಲೇಬಾಯ್ ಪ್ರದರ್ಶಿಸುವುದೂ ಇಲ್ಲ. ಇದುವರೆಗೂ ತನ್ನನ್ನು ತಾನು ಪ್ಲೇಬಾಯ್ ಗರ್ಲ್ ಎಂದೇ ಶೆರ್ಲಿನ್ ಬಿಂಬಿಸಿಕೊಂಡಿದ್ದರು.
ಸೆಕ್ಸ್ ನನಗೆ ಬಹಳ ಇಷ್ಟ:
ಒಂದು ಕಾಲದಲ್ಲಿ ತಾನು ಹಲವರೊಂದಿಗೆ ಹಾಸಿಗೆ ಹಂಚಿಕೊಂಡಿದ್ದೇನೆ. ಆದರೆ ಅದು ದುಡ್ಡಿಗಾಗಿ ಎಂಬ ಸತ್ಯವನ್ನು ಹೇಳಿಕೊಳ್ಳುವ ಮೂಲಕ ಶರ್ಲಿನ್ ಚೋಪ್ರಾ ಬಿರುಗಾಳಿ ಎಬ್ಬಿಸಿದ್ದರು. ಈ ರೀತಿ ಹೇಳಿಕೊಳ್ಳುತ್ತಿರುವುದು ಯಾವುದೇ ಸಾರ್ವಜನಿಕ ಅನುಕಂಪಕ್ಕಾಗಲಿ ಅಥವಾ ಯಾರನ್ನಾದರೂ ಹುಬ್ಬೇರಿಸುವುದಾಗಲಿ ಅಥವಾ ಕೆಟ್ಟ ಹುಡುಗಿ ಒಳ್ಳೆಯಳಾದಳು ಎನ್ನಿಸಿಕೊಳ್ಳಲಾಗಲಿ ಅಲ್ಲವೇ ಅಲ್ಲ. ಕೆಲವೊಂದು ವಿಷಯಗಳನ್ನು ಹೇಳಬೇಕಾಗಿತ್ತು ಅಷ್ಟೇ. ಅದಕ್ಕಾಗಿ ಹೇಳುತ್ತಿದ್ದೇನೆ ಎನ್ನುವ ಮೂಲಕ ತಮ್ಮ ಧೈರ್ಯ ಮೆರೆದಿದ್ದಳು.
ತಾನು ಬೋಲ್ಡ್ ಆಗಿ ಇರಲು ಇಷ್ಟಪಡುತ್ತೇನೆ. ಕಾಮಕೆರಳಿಸುವ ಛಾಯಾಚಿತ್ರಗಳಲ್ಲಿ ಹಾಗೂ ವಿಡಿಯೋಗಳಲ್ಲಿ ಕಾಣಿಸಿಕೊಳ್ಳಲು ಆನಂದಿಸುತ್ತೇನೆ. ಚುಡಾಯಿಸುವುದೆಂದರೆ ನಂಗಿಷ್ಟ. ಒಂದು ವೇಳೆ ತಡೆದುಕೊಳ್ಳಲಾರದಷ್ಟು ಕಾಮ ಬಯಕೆ ಅಥವಾ ಆಕರ್ಷಣೆ ಉಂಟಾದರೆ ಸೆಕ್ಸ್ ನಲ್ಲಿ ಪಾಲ್ಗೊಳ್ಳುತ್ತೇನೆ. ಆದರೆ ದುಡ್ಡಿಗಾಗಿ ಮಾತ್ರ ಇಲ್ಲ ಎಂದು ಬಿಚ್ಚು ಮಾತನಾಡಿ ಶರ್ಲಿನ್ ಪಡ್ಡೆ ಹೈಕಳನ್ನು ಒದ್ದೆ ಮಾಡಿದ್ದರು. ಇಂತಹ ಶರ್ಲಿನ್ ಈಗ ಕಾಮಸೂತ್ರದಲ್ಲಿ ಬಂದಿದ್ದಾರೆ. ಮುಂದಿನ ಶರ್ಲಿನ್ ಅವತಾರ ಕಾದು ನೋಡಬೇಕು.
Saturday, January 19, 2013
ಸ್ಟೀವನ್ ರೇಗೊಗೆ ಮೆಗಾ ಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿ
ಮಂಗಳೂರಿನ ಮೆಗಾ ಮೀಡಿಯಾ ನ್ಯೂಸ್ ಇದರ ಹತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಹಬ್ಬದಲ್ಲಿ ಮೆಗಾ ಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿಯನ್ನು ವಿಜಯ ಕರ್ನಾಟಕದ ವರದಿಗಾರ ಸ್ಟೀವನ್ ರೇಗೊ ದಾರಂದಕುಕ್ಕು ಅವರಿಗೆ ನೀಡಲಾಯಿತು. ಈ ಸಂದರ್ಭ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕರಾವಳಿ ಕಾಲೇಜುಗಳ ಅಧ್ಯಕ್ಷ ಗಣೇಶ್ ರಾವ್, ಕರ್ಣಾಟಕ ಬ್ಯಾಂಕ್ನ ಜನರಲ್ ಮ್ಯಾನೇಜರ್ ಮಹಾಬಲೇಶ್ವರ ರಾವ್, ಮೆಗಾ ಮೀಡಿಯಾದ ಆಡಳಿತ ನಿರ್ದೇಶಕ ಶಿವಪ್ರಸಾದ್ ನನಾ ಅತಿಥಿಗಳು ಉಪಸ್ಥಿತರಿದ್ದರು.
Sunday, January 13, 2013
ಸ್ಟೀವನ್ ರೇಗೊಗೆ ಪತ್ರಿಕೋದ್ಯಮ ಪ್ರಶಸ್ತಿ
ಮಂಗಳೂರು: ಮೆಗಾ ಮೀಡಿಯಾ ನ್ಯೂಸ್ ತನ್ನ ಹತ್ತನೇ ವರ್ಷದ ಸವಿನೆನಪಿಗಾಗಿ ನೀಡುವ ಮೆಗಾಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿಗೆ ಮಂಗಳೂರು ವಿಜಯ ಕರ್ನಾಟಕ ದಿನ ಪತ್ರಿಕೆ ಉಪಸಂಪಾದಕ ಹಾಗೂ ವರದಿಗಾರ ಸ್ಟೀವನ್ ರೇಗೊ ದಾರಂದಕುಕ್ಕು ಆಯ್ಕೆಯಾಗಿದ್ದಾರೆ.
ವಿಜಯ ಕರ್ನಾಟಕದ ನಮ್ಮ ಕರಾವಳಿಯಲ್ಲಿ ಬಂದ ‘ಕತ್ತಲಲ್ಲಿ ಮೂಡಿಬಂತು ಬೆಳಕು !’ ಲೇಖನ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು ಐದುಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಸನ್ಮಾನಿತ ಗೌರವಾದರಗಳನ್ನೊಳಗೊಂಡಿದೆ. ಸ್ಟೀವನ್ ರೇಗೊ ಅವರ ಗ್ರಾಮೀಣ ಪತ್ರಿಕೋದ್ಯಮಕ್ಕೆ ಈ ಹಿಂದೆ ಕಿನ್ನಿಗೋಳಿಯ ಕಡಂದಲೆ ಪ್ರಶಸ್ತಿ, ದಕ್ಷಿಣ ಕನ್ನಡ ಕಾರ್ಯನಿರತರ ಪತ್ರಕರ್ತರ ಸಂಘದ ಪ.ಗೋ ಪ್ರಶಸ್ತಿಗಳು ಸಿಕ್ಕಿದೆ. ದಾರಂದಕುಕ್ಕು ನಿವಾಸಿ ಇಗ್ನೇಶಿಯಸ್ ರೇಗೊ ಹಾಗೂ ಹಿಲ್ಡಾ ರೇಗೊ ಅವರ ಸುಪತ್ರ.
ಕುಡ್ಲ ಹುಡುಗರ ‘ಸಾದಿ’
ಸ್ಟೀವನ್ ರೇಗೊ, ದಾರಂದಕುಕ್ಕು
ಕುಡ್ಲದ ಹುಡುಗರು ಏನಾದರೂ ಮಾಡಿ ಯುವಜನತೆಯನ್ನು ಹಾದಿ ತರುವ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಪುಟ್ಟ ಟೆಲಿಚಿತ್ರದ ಮೂಲಕ ಜೋರಾಗಿ ಸೌಂಡ್ ಮಾಡಿ ಯುವಜನತೆಯನ್ನು ನಿದ್ದೆಯಿಂದ ಎಬ್ಬಿಸಿ ಕೂರಿಸಿದ್ದಾರೆ. ಸಾದಿಯ ಹಾದಿ ಹೇಗಿದೆ ನೋಡಿ...
‘ಸಾದಿ’ ಇದು ಸಾವಿನ ಕಡೆ ತೋರಿಸುವ ಹಾದಿ ಎನ್ನುವ ಟ್ಯಾಗ್ಲೈನ್ನಲ್ಲೇ ಕುಡ್ಲದ ಹುಡುಗರು ಕ್ಲಿಕ್ ಆಗಿದ್ದಾರೆ. ಕರಾವಳಿಯಲ್ಲಿ ಮಾತ್ರವಲ್ಲ ಇಡೀ ದೇಶದ ಯುವ ಪೀಳಿಗೆಯ ಕುರಿತು ಕುಡ್ಲದ ಹುಡುಗರು ಸಿರೀಯಸ್ ಆಗಿ ಸ್ಟಡಿ ಮಾಡಿದ್ದಾರೆ. ಎಲ್ಲರೂ ಅಧ್ಯಯನ ಮಾಡುವುದರಲ್ಲಿಯೇ ಕಾಲಕಳೆಯುವ ಹೊತ್ತಿಗೆ ಕುಡ್ಲದ ಹುಡುಗರು ಏನಾದರೂ ಮಾಡಿ ಯುವಜನತೆಯನ್ನು ಹಾದಿ ತರುವ ಕೆಲಸ ಮಾಡಿದ್ದಾರೆ. ತಮ್ಮದೇ ಪುಟ್ಟ ಟೆಲಿಚಿತ್ರದ ಮೂಲಕ ಜೋರಾಗಿ ಸೌಂಡ್ ಮಾಡಿ ಯುವಜನತೆಯನ್ನು ನಿದ್ದೆಯಿಂದ ಎಬ್ಬಿಸಿ ಕೂರಿಸಿದ್ದಾರೆ.
ಕಾಲೇಜಿನ ಮೆಟ್ಟಿಲಿಗೆ ಹೆಜ್ಜೆ ಹಾಕುತ್ತಿದ್ದಂತೆ ಯುವಜನತೆಯ ಹಾದಿ ತಪ್ಪುತ್ತಿದೆ ಎನ್ನುವ ಮಾತುಗಳೇ ಈಗ ಕೇಳಿಸಿಕೊಳ್ಳಲು ಆರಂಭವಾಗಿದೆ. ಮಾದಕ ದ್ರವ್ಯಗಳ ಸೇವನೆಯಿಂದ ಭವ್ಯ ಭವಿಷ್ಯದ ಪ್ರಜೆಗಳಾಗಬೇಕಾದವರೂ ಕೂಡ ಆಸ್ಪತ್ರೆಯಲ್ಲಿ ಬಂಧಿಯಾಗಿ ಚಿಕಿತ್ಸೆ ಪಡೆಯುವ ಹಂತಕ್ಕೂ ಬಂದು ತಲುಪಿದ್ದಾರೆ. ಅವರನ್ನು ಒಂದು ಹಾದಿಗೆ ತರುವ ಕೆಲಸ ನಮ್ಮಂತಹ ಯುವಕರಿಂದ ಆದರೆ ಅದು ನಮ್ಮ ಟೆಲಿಚಿತ್ರಕ್ಕೆ ಸಿಕ್ಕ ಯಶಸ್ಸು ಎಂದು ಸಾದಿಯನ್ನು ನಿರ್ದೇಶನ ಮಾಡಿದ ಯುವಕ ನಾಗರಾಜ್ ಅಂಬರ್ ಅವರ ಮಾತು.
ನಾಗರಾಜ್ ಸಾದಿಯ ಹುಟ್ಟು ಬೆಳವಣಿಗೆಯ ಕುರಿತು ಹೇಳುವ ಮಾತು ಹೀಗಿದೆ: ಕರಾವಳಿಯಲ್ಲಿ ಬಹಳಷ್ಟು ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ನನ್ನ ಸುತ್ತಮುತ್ತ ಇಂತಹ ಯುವಕರನ್ನು ಕಣ್ಣಾರೆ ಕಂಡು ಅವರ ನೋವು ನಾನು ಅನುಭವಿಸಿದ್ದೇನೆ. ಅವರನ್ನು ಬದಲಾಯಿಸುವ ಶಕ್ತಿ ನನ್ನ ಬಳಿ ಇಲ್ಲ. ಆದರೆ ಇಂತಹ ಹೊಸ ಯುವಪೀಳಿಗೆಯಂತೂ ಮತ್ತೆ ಅಂತಹ ಚಟಕ್ಕೆ ಗುರಿಯಾಗಬಾರದು ಎನ್ನುವ ಕಾಳಜಿಯಿಂದ ಈ ಟೆಲಿಚಿತ್ರ ರೂಪುಗೊಂಡಿತು ಎನ್ನೋದು ಸಾದಿಯ ಸಿಕ್ರೇಟ್ ಮಾತು.
ಸಾದಿ ಹಾದಿಗೆ ಬಂದು ನಿಂತಿತು:
ಕುಡ್ಲದ ತುಳು ಭಾಷೆಯಲ್ಲಿ ‘ಸಾದಿ’ ಎಂದರೆ ಹಾದಿ ಎನ್ನುವ ಅರ್ಥ ಬರುತ್ತದೆ. ಕರಾವಳಿಯ ಯುವಜನತೆ ಯಾವ ಪರಿಯಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಾರೆ ಎನ್ನುವ ಪುಟ್ಟ ಸ್ಟ್ರೀಮ್ಲೈನ್ ಇಟ್ಟುಕೊಂಡು ಒಂದು ಗಂಟೆಯ ಟೆಲಿಚಿತ್ರವನ್ನು ಮಾಡಲಾಗಿದೆ. ಕರಾವಳಿಯಲ್ಲಿ ಆಗಾಗ ಮಾದಕ ವ್ಯವಸನಕ್ಕೆ ಬಿದ್ದು ಮೃತಪಡುವ ಯುವಜನತೆ ರಹಸ್ಯವನ್ನು ಭೇದಿಸಲು ಆರು ಯುವಕರ ಜತೆಗೆ ಪೊಲೀಸ್ ಇಲಾಖೆಯಿಂದ ನಡೆಯುವ ಕಾರ್ಯಾಚರಣೆ ಎಲ್ಲವೂ ಸಾದಿಯಲ್ಲಿರುವ ಮುಖ್ಯ ಪಾಯಿಂಟ್ಗಳು.
ಈಗಾಗಲೇ ‘ಸಾದಿ’ಯ ಪ್ರೋಮೋಗಾಗಿ ಈಗಾಗಲೇ ಕತ್ರಿನಾ...ಎನ್ನುವ ರಾಕ್ ಸಾಂಗ್ ಯೂಟ್ಯೂಬ್ ಅಂಗಳದಲ್ಲಿ ಕ್ಲಿಕ್ ಆಗಲು ಆರಂಭವಾಗಿದೆ. ಇವುಗಳ ಜತೆಯಲ್ಲಿ ಟೆಲಿಚಿತ್ರದಲ್ಲಿ ನಾಲ್ಕು ಹಾಡುಗಳನ್ನು ನಾಲ್ಕು ವಿಭಿನ್ನ ಸಂಗೀತ ನಿರ್ದೇಶಕರಾದ ಸಂದೇಶ್, ಲಾಯ್ ವೆಲೆಂಟೈನ್, ಸಂದೀಪ್ ಬಳ್ಳಾಲ್, ವಿನೋದ್ ಸುವರ್ಣರಿಂದ ಮೂಡಿ ಬಂದಿದೆ. ಇಡೀ ಟೆಲಿ ಚಿತ್ರ ತುಳು ಭಾಷೆಯಲ್ಲಿರುವುದರಿಂದ ಕರಾವಳಿಯ ಜನತೆಗೆ ಮಾತ್ರ ಸೀಮಿತವಾಗಲಿದೆ.
ಈಗಾಗಲೇ ಯುವಜನತೆಯ ಲೋಕಲ್, ಇಂಟರ್ ನ್ಯಾಷನಲ್ ಅಡ್ಡಾ ಎಂದೇ ಗುರುತಿಸಿಕೊಳ್ಳುವ ಸಾಮಾಜಿಕ ತಾಣಗಳಲ್ಲಿ ಒಂದಾದ ಯೂ ಟ್ಯೂಬ್ ನಲ್ಲಿ ಈ ಸಾದಿ ಟೆಲಿಚಿತ್ರವನ್ನು ಹಾಕುವ ಕೆಲಸ ನಡೆಯುತ್ತಿದೆ. ಈ ಮೂಲಕ ದೇಶ- ವಿದೇಶದಲ್ಲಿರುವ ಕರಾವಳಿ ಮೂಲದ ಎಲ್ಲ ಯುವಜನತೆಯನ್ನು ತಲುಪಲು ಸಾಧ್ಯವಾಗುತ್ತದೆ ಎನ್ನುವ ಇರಾದೆ ಚಿತ್ರದ ನಿರ್ದೇಶಕ ನಾಗರಾಜ್ ಅಂಬರ ಅವರದ್ದು.
ಅಂದಹಾಗೆ ಚಿತ್ರದ ಸಿನಿಮಾಟೋಗ್ರಾಫಿ ಹಾಗೂ ಎಡಿಟಿಂಗ್ ಜಾಗದಲ್ಲಿ ಸಚಿನ್ ಶೆಟ್ಟಿ, ಸಾಹಿತ್ಯದಲ್ಲಿ ನಾಗರಾಜ್, ಕಲಾನಿರ್ದೇಶಕರಾಗಿ ಶಶಿ ನಾರ್ಣಕಜೆ, ಕೋರಿಗ್ರಾಫಿಯಲ್ಲಿ ಅವಿನಾಶ್ ಬಂಗೇರಾ, ಸಾಹಸದಲ್ಲಿ ಜಿತೇಂದ್ರ ಸಿಂಗ್ ಮಣಿಪುರ, ನಿರ್ಮಾಪಕರಾಗಿ ರೀಜು, ನಾಗರಾಜ್, ಸೂರಜ್, ಶ್ರೀಕುಮಾರ್ ಕೈ ಜೋಡಿಸಿದ್ದಾರೆ. ಜ.೧೧ರಿಂದ ಯ್ಯೂ ಟೂಬ್ನಲ್ಲಿ ಚಿತ್ರದ ಪ್ರೋಮೋಗಳು ಓಡುತ್ತಿದೆ. ತುಳು ರಂಗಭೂಮಿಯ ಕಲಾವಿದ ದಿನೇಶ್ ಅತ್ತಾವರ, ಲೀಲಾಧರ ಶೆಟ್ಟಿ ಕಾಪು ಸೇರಿದಂತೆ ಕುಡ್ಲದ ಯುವಕರಾದ ನಾಗರಾಜ್, ರಾಮಪ್ರಸಾದ್, ಸುಕೇಶ್, ದೀಪಕ್, ವರುಣ್, ಸೂರಜ್, ಯಶ್ರಾಜ್, ಶಶಿ ನಾರ್ಣಕಜೆ, ಜೀವನ್, ಸಂಶುದ್ಧೀನ್, ಪ್ರಸನ್ನ ನಟಿಸಿದ್ದಾರೆ.
ಟ್ಯಾಲೆಂಟ್ ಹುಡುಗನ ದಂಡಯಾತ್ರೆ:
ಖಾಸಗಿ ರೇಡಿಯೋ ವಾಹಿನಿಯೊಂದರಲ್ಲಿ ಆರ್ಜೆ ಆಗಿರುವ ನಾಗರಾಜ್ ಅಂಬರ್ ಪ್ರತಿಭಾವಂತ ಹುಡುಗ. ಮೂಲತಃ ಕಾಸರಗೋಡಿನ ನಾಗರಾಜ್ ಡ್ಯಾನ್ಸಿಂಗ್ ನಲ್ಲಿ ಎತ್ತಿ ಕೈ. ಈಗಾಗಲೇ ಸಾವಿರಕ್ಕೂ ಅಧಿಕ ನೃತ್ಯ ಪ್ರದರ್ಶನಗಳನ್ನು ನೀಡಿರುವ ನಾಗರಾಜ್ ನಾನಾ ಖಾಸಗಿ ವಾಹಿನಿಗಳ ಡ್ಯಾನ್ಸ್ ಶೋಗಳಿಂದ ಬಹುಮಾನ ಬಾಚಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ವಿಶೇಷ ಆಸಕ್ತಿ ಹೊಂದಿರುವ ನಾಗರಾಜ್ ಈಗಾಗಲೇ ‘ಭಾತ್ರತ್ವ’ ಎನ್ನುವ ಪುಟ್ಟ ಟೆಲಿ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇಂಗ್ಲೀಷ್ ನಲ್ಲಿ ‘ತ್ರೀಶೇಡ್ಸ್’ ಎನ್ನುವ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಖಾಸಗಿ ರೇಡಿಯೋ ವಾಹಿನಿಯಲ್ಲಿ ಕಾರ್ಯಕ್ರಮ ನೀಡುವ ನಾಗರಾಜ್ನ ಧ್ವನಿ ಕೇಳುವ ಅಭಿಮಾನಿಗಳ ವರ್ಗವೊಂದು ಸೃಷ್ಟಿಯಾಗಿದೆ. ಟೋಟಲಿ ಯುವಜನತೆಗಾಗಿ ಏನಾದರೂ ಮಾಡಬೇಕು ಎನ್ನುವ ಸಾಹಸದ ಕೆಲಸ ಹಿರಿಯರು ಮೆಚ್ಚಲೇ ಬೇಕು ಅಲ್ವಾ..?
......
vk lvk published dis article
......
Subscribe to:
Posts (Atom)







