Sunday, January 13, 2013

ಬಾಲಿವುಡ್‌ನ ‘ಡಬ್ಬೂ ’ ಕ್ಯಾಲೆಂಡರ್

ಡಬ್ಬೂ ರತ್ನಾನಿ ಹೆಸರು ಬಾಲಿವುಡ್ ಅಂಗಳದಲ್ಲಿ ಸಾಣೇ ಕೇಳಿಸಿಕೊಳ್ಳುವ ಫ್ಯಾಶನ್ ಛಾಯಾಗ್ರಾಹಕನ ಹೆಸರು. ಮಹಾರಾಷ್ಟ್ರದ ಪುಟ್ಟ ಹಳ್ಳಿಯ ಕಡು ಬಡತನದಲ್ಲಿ ಬೆಳೆದ ಹುಡುಗ ನಂತರ ಮುಂಬಯಿಯ ಬಣ್ಣದ ಲೋಕದ ಕಣ್ಮಣಿಯಾದ ಕತೆನೇ ಕೊಂಚ ಭಿನ್ನ. * ಸ್ಟೀವನ್ ರೇಗೊ, ದಾರಂದಕುಕ್ಕು
ಡಬ್ಬೂ ರತ್ನಾನಿ. ಇದು ಪ್ರತಿ ವರ್ಷದ ಆರಂಭದಲ್ಲಿ ಸುದ್ದಿಯಾಗುತ್ತಿರುವ ವ್ಯಕ್ತಿ. ಅಂದಹಾಗೆ ಇಡೀ ಬಾಲಿವುಡ್‌ನಲ್ಲಿ ಈತನ ಮಾತಿಗೆ ಒಂದು ಗತ್ತು ಇದೆ. ಅವರನ್ನು ತನ್ನ ತಾಳಕ್ಕೆ ತಕ್ಕಂತೆ ಬೆಂಡ್ ಮಾಡುವ ಧೈರ್ಯವಿದೆ. ಎಲ್ಲಕ್ಕೂ ಮುಖ್ಯವಾಗಿ ‘ಡಬ್ಬೂ ’ ಎನ್ನುವ ಮಾಸ್ಟರ್ ಫೀಸ್ ಮುಂದೆ ನಟ-ನಟಿಯರು ಸಿಕ್ಕಾಪಟ್ಟೆ ಬೋಲ್ಡ್‌ನೆಸ್‌ಗೆ ಮಾರು ಹೋಗುತ್ತಾರೆ. ಇದು ಡಬ್ಬೂ ರತ್ನಾನಿ ಎನ್ನುವ ಕ್ಯಾಮೆರಾಕಣ್ಣಿನ ಹೀರೋನ ಕತೆ. ಜತೆಗೆ ಪ್ರತಿ ವರ್ಷ ಆತ ಹೊರ ತರುವ ‘ಡಬ್ಬೂ ರತ್ನಾನಿ ಕ್ಯಾಲೆಂಡರ್’ ಎನ್ನುವ ಕನಸ್ಸಿನ ಕತೆ. ಅಂದಹಾಗೆ ಡಬ್ಬೂ ರತ್ನಾನಿ ಹೆಸರು ಬಾಲಿವುಡ್ ಅಂಗಳದಲ್ಲಿ ಸಾಣೇ ಕೇಳಿಸಿಕೊಳ್ಳುವ ಫ್ಯಾಶನ್ ಛಾಯಾಗ್ರಾಹಕನ ಹೆಸರು. ಮಹಾರಾಷ್ಟ್ರದ ಪುಟ್ಟ ಹಳ್ಳಿಯ ಕಡು ಬಡತನದಲ್ಲಿ ಬೆಳೆದ ಹುಡುಗ ನಂತರ ಮುಂಬಯಿಯ ಬಣ್ಣದ ಲೋಕದ ಕಣ್ಮಣಿಯಾದ ಕತೆನೇ ಕೊಂಚ ಭಿನ್ನ. ೯೦ರ ದಶಕದಲ್ಲಿ ಮುಂಬಯಿಯ ಫ್ಯಾಶನ್ ಲೋಕದಲ್ಲಿ ಬಹಳ ಕೇಳಿಸಿಕೊಳ್ಳುತ್ತಿದ್ದ ಸುಮಿತ್ ಚೋಪ್ರಾ ಎನ್ನುವ ಫ್ಯಾಶನ್ ಫೋಟೋಗ್ರಾಫರ್ ನ ಹಿಂದೆ ಬಿದ್ದು ಫೋಟೋಗ್ರಾಫಿಯನ್ನು ಬಹಳ ಸಿರೀಯಸ್ ಆಗಿ ಅಧ್ಯಯನ ಮಾಡಿಕೊಂಡು ಹೊರಬಂದ ಡಬ್ಬೂ ನಂತರ ಗುರುವನ್ನು ಮೀರಿಸುವ ಶಿಷ್ಯನಾದ . ೯೪ರ ಹೊತ್ತಿಗೆ ಡಬ್ಬೂ ತನ್ನದೇ ಪುಟ್ಟ ಛಾಯಾಚಿತ್ರದ ಅಂಗಡಿ ತೆರೆದಿಟ್ಟ. ಬಾಲಿವುಡ್ ಸಿನಿಮಾಗಳ ಕಾರ‍್ಯಕ್ರಮಗಳಲ್ಲಿ ಡಬ್ಬೂ ರತ್ನಾನಿ ಎನ್ನುವ ಛಾಯಾಗ್ರಾಹಕನ ತಲೆ ಕಾಣಿಸಿಕೊಂಡ ನಂತರವಂತೂ ಬಾಲಿವುಡ್ ಬಣ್ಣದ ಸಿನಿಮಾಗಳಲ್ಲಿ ಡಬ್ಬೂ ಇಲ್ಲದೇ ಏನೂ ಇಲ್ಲ ಎನ್ನುವ ಮಟ್ಟ ಮುಟ್ಟಿನಿಂತಿತ್ತು. ಅದೇ ಡಬ್ಬೂ ಎನ್ನುವ ಕಲಾತ್ಮಕ ಹಾಗೂ ಗ್ಲಾಮರ್ ಲೋಕದ ಎರಡು ಶೇಡ್‌ಗಳ ಜತೆಯಲ್ಲಿ ಆಟವಾಡಿ ಪ್ರತಿ ವರ್ಷನೂ ಡಬ್ಬೂ ಕ್ಯಾಲೆಂಡರ್ ತರುವ ಯೋಜನೆಗೆ ಕೈ ಹಾಕಿ ಗೆದ್ದು ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾನೆ. ಬಾಲಿವುಡ್‌ನ್ನು ಮಲಗಿಸುವ ಕ್ಯಾಲೆಂಡರ್ : ಅದು ೨೦೦೪ ಬಾಲಿವುಡ್ ಅಂಗಳದಲ್ಲಿ ಮೊದಲ ಬಾರಿಗೆ ಡಬ್ಬೂ ಕ್ಯಾಲೆಂಡರ್ ಹೊರಬಂತು. ಈ ಮೊದಲು ಚಿಕ್ಕಪುಟ್ಟ ಗಿಮಿಕ್‌ಗಳ ಮೂಲಕವೇ ಹೆಸರುಗಳಿಸಿ ಉಳಿಸಿಕೊಂಡಿದ್ದ ಡಬ್ಬೂ ಈ ಕ್ಯಾಲೆಂಡರ್ ಮೂಲಕ ಬಣ್ಣದ ಲೋಕದಲ್ಲಿ ಹೊಸ ಕ್ರೇಜ್ ಹುಟ್ಟಿ ಹಾಕಿದ. ಮೊಡೆಲ್‌ಗಳ ಜತೆಯಲ್ಲಿ ಆಟಹಾಡಿಕೊಂಡಿದ್ದ ಡಬ್ಬೂ ೨೦೦೪ ರ ಬಳಿಕ ಬಾಲಿವುಡ್ ನಟ- ನಟಿಯರ ಜತೆಯಲ್ಲಿ ಆಟಕ್ಕೆ ಕೂತು ಬಿಟ್ಟ. ಈ ಹೊಸ ಪ್ರಯತ್ನ ಕ್ಲಿಕ್ ಆಗಿ ಹೋಯಿತು. ೨೦೦೪ರಲ್ಲಿ ಬಾಲಿವುಡ್‌ನ ಟಾಪ್ ತಾರೆಯನ್ನು ಒಟ್ಟು ಸೇರಿಸಿಕೊಂಡು ಕ್ಯಾಲೆಂಡರ್ ಹೊರ ತಂದ. ಅದರಲ್ಲಿ ಹಿರಿಯ ನಟರ ಜತೆಯಲ್ಲಿ ಬಾಲಿವುಡ್‌ನಲ್ಲಿ ಕಾಣಿಸಿಕೊಂಡ ಹೊಸಪ್ರತಿಭೆಗೂ ಜಾಗ ಮಾಡಿಕೊಟ್ಟ. ಬಾಲಿವುಡ್ ನಟ- ನಟಿಯರನ್ನು ಒಂದೇ ಪ್ಯಾಕೇಜ್‌ನಡಿಯಲ್ಲಿ ತಮ್ಮ ಅಭಿಮಾನಿಗಳ ಕೈ ಸೇರುವಂತೆ ಕ್ಯಾಲೆಂಡರ್ ತಯಾರಿಸಿಕೊಟ್ಟ ಡಬ್ಬೂ ತನ್ನ ಕ್ಯಾಲೆಂಡರ್‌ಗಳಲ್ಲಿ ೨೪ ಬಾಲಿವುಡ್ ಸೆಲೆಬ್ರಿಟಿಗಳನ್ನು ತಮ್ಮ ಕ್ಯಾಲೆಂಡರ್‌ಗಳಲ್ಲಿ ತೋರಿಸುತ್ತಾರೆ. ಡಬ್ಬೂ ರತ್ನಾನಿಯ ಕ್ಯಾಲೆಂಡರ್‌ಗಳಲ್ಲಿ ಕಾಯಂ ಜಾಗ ಪಡೆಯುವ ಮಂದಿಯಲ್ಲಿ ಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಬಚ್ಚನ್, ಶಾರೂಕ್ ಖಾನ್ ಸೇರಿಕೊಂಡಿರುತ್ತಾರೆ. ೨೦೧೦ರ ನಂತರ ತಂದ ಡಬ್ಬೂ ಕ್ಯಾಲೆಂಡರ್ ಗಳ ಶೂಟಿಂಗ್ ಚಿತ್ರವನ್ನು ಡಬ್ಬೂ ಯೂ ಟ್ಯೂಬ್‌ನಲ್ಲಿ ತುಂಬಿಸಿ ಬಿಡುವ ಪರಂಪರೆ ಆರಂಭ ಮಾಡಿದರು. ಬಾಲಿವುಡ್ ಪಾಲಿಗೆ ಡಬ್ಬೂ ಕ್ಯಾಲೆಂಡರ್‌ಗಳಷ್ಟು ಚರ್ಚೆಯಾಗುವಷ್ಟು ವಿಚಾರ ಬೇರೆ ಇಲ್ಲ ಎನ್ನುವ ಮಾತಿದೆ. ಡಬ್ಬೂ ಎನ್ನುವ ಕ್ರಿಯೇಟರ್: ಅಂದಹಾಗೆ ೨೦೧೩ರ ಡಬ್ಬೂ ಕ್ಯಾಲೆಂಡರ್ ಹೊರಬಂದಿದೆ. ಕಳೆದ ವರ್ಷದ ಡರ್ಟಿ ಹುಡುಗಿ ವಿದ್ಯಾಬಾಲನ್ ಹಾಗೂ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡ ಹೊಸ ತಾರೆ ವರುಣ್ ಧವನ್ ಡಬ್ಬೂ ಕ್ಯಾಲೆಂಡರ್‌ನಲ್ಲಿ ಈ ವರ್ಷದಲ್ಲಿ ಪ್ಲಸ್ ಆಗುವ ಐಟಂಗಳು. ಉಳಿದಂತೆ ಶಾರೂಕ್ ಖಾನ್, ಹೃತಿಕ್ ರೋಷನ್, ಕಾಜೋಲ್, ಬಾಲಿವುಡ್ ನಿರ್ದೇಶಕರಾದ ಅಬ್ಬಾಸ್- ಮಸ್ತಾನ್, ಅಲಿಯಾ ಭಟ್, ಮಧುರ್ ಭಂಡಾರ್‌ಕರ್, ಅಫ್ತಾಬ್ ಶಿವದಾಸನಿ, ಅರ್ಜುನ್ ರಾಂಪಾಲ್‌ನಂತಹ ನಟರು ಕ್ಯಾಲೆಂಡರ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿ ವರ್ಷ ಡಬ್ಬೂ ಕ್ಯಾಲೆಂಡರ್‌ಗಳಲ್ಲಿ ಕಾಣಿಸಿಕೊಳ್ಳುವ ವಿಶೇಷತೆ ಏನಪ್ಪಾ ಅಂದರೆ ಕ್ಯಾಲೆಂಡರ್‌ಗಳಲ್ಲಿ ಕಾಣಿಸಿಕೊಳ್ಳುವ ಹೊಸ ಪ್ರತಿಭೆಗಳು ಇಡೀ ವರ್ಷ ಸಕ್ಸಸ್ ರೇಟಿನಲ್ಲಿರುತ್ತಾರೆ. ಕಳೆದ ವರ್ಷ ಹಾಟ್ ಆಗಿ ಕಾಣಿಸಿಕೊಂಡ ವಿದ್ಯಾ ಬಾಲನ್ ಡರ್ಟಿ ಪಿಕ್ಚರ್ ಹಾಗೂ ಕಹಾನಿ ಮೂಲಕ ಸಿಕ್ಕಾಪಟ್ಟೆ ಕ್ಲಿಕ್ ಆಗಿದ್ದಳು. ಈ ಬಾರಿಯ ಹೊಸ ಕ್ಯಾಲೆಂಡರ್‌ನಲ್ಲಿ ವರುಣ್ ಹಾಗೂ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಈ ವರ್ಷ ಬಾಲಿವುಡ್ ರಂಗದಲ್ಲಿ ಈ ತಾರೆಗಳು ಮಿಂಚಲಿದೆ ಎನ್ನುವ ಅಭಿಪ್ರಾಯ ಮೂಡಿದೆ. .......................... vk lvk published dis article

ಮೋಲಿವುಡ್‌ನಲ್ಲಿ ಕಾಳಿದಾಸ

ರೀಲ್ ಗಳ ಜತೆಯಲ್ಲಿ ಸುತ್ತಾಟ ಮಾಡಿಕೊಂಡಿದ್ದ ಮಲಯಾಳಂ ಚಿತ್ರ ನಿರ್ದೇಶಕರು ಎಚ್‌ಡಿ ಫಾರ್ಮೆಟ್‌ಗೆ ಇಳಿದಿರುವುದು ಹೊಸ ತಂತ್ರಜ್ಞಾನದ ಬಳಕೆಯಲ್ಲಿ ಮಲಯಾಳಂ ಚಿತ್ರಗಳ ಗುಣಮಟ್ಟದಲ್ಲೂ ಸುಧಾರಣೆ ಕಾಣಿಸಿಕೊಂಡಿದೆ. ಟೋಟಲಿ ಮಲಯಾಳಂ ಚಿತ್ರ ನಗರಿಯಲ್ಲಿ ಎಲ್ಲ ಬದಲಾವಣೆಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಜತೆಯಲ್ಲಿ ಸಿನಿಮಾ ನಗರಿಗೆ ಬರುವ ಹೊಸ ಹುಡುಗರನ್ನು ಬೆನ್ನು ತಟ್ಟುತ್ತಿದ್ದಾರೆ. ಈಗ ಕಾಳಿದಾಸನ್ ಸರದಿ... * ಸ್ಟೀವನ್ ರೇಗೊ, ದಾರಂದಕುಕ್ಕು
ಮೋಲಿವುಡ್ ಸಿನಿಮಾ ನಗರಿಯಲ್ಲಿ ಈಗ ಹೊಸ ಹವಾ ಎದ್ದು ನಿಂತಿದೆ. ಹೊಸ ನಾಯಕ- ನಾಯಕಿಯರನ್ನು ತಂದು ಸಿನಿಮಾ ಗೆಲ್ಲಿಸುವ ಪ್ರಯತ್ನಗಳು ಸಿಕ್ಕಾಪಟ್ಟೆ ಮೋಲಿವುಡ್ ಸಿನಿಮಾ ಜಗತ್ತಿಲ್ಲಿ ವರ್ಕ್ ಔಟ್ ಆಗುತ್ತಿದೆ. ಹೊಸ ತಂತ್ರಜ್ಞರು, ನಿರ್ದೇಶಕರು ತಮ್ಮದೇ ಆಂಗಲ್‌ನಲ್ಲಿ ಚಿತ್ರ ನಿರ್ಮಾಣ ಮಾಡಿಕೊಂಡು ಗೆದ್ದು ಬರುತ್ತಿರುವ ಉತ್ತಮ ಬೆಳವಣಿಗೆಯೊಂದು ಮೋಲಿವುಡ್ ಸಿನಿಮಾ ಜಗತ್ತಿನಲ್ಲಿ ಕಾಣಿಸಿಕೊಂಡಿದೆ. ಮೋಲಿವುಡ್ ಸಿನಿಮಾ ರಂಗದಲ್ಲಿ ಫ್ಯಾಮಿಲಿ ಬ್ಯುಸಿನೆಸ್‌ಗಳು ಹುಟ್ಟಿಕೊಂಡಿರುವುದು ಹಳೆಯ ನಾಯಕ-ನಾಯಕಿಯರ ಸಿನಿಮಾ ಅವಕಾಶಗಳಿಗೆ ಕತ್ತರಿ ಬೀಳುತ್ತಿದೆ. ಹೊಸ ನಾಯಕ- ನಾಯಕಿಯರಿಗೆ ನೀಡುತ್ತಿರುವ ಮೊದಲ ಮಣೆ ಕೂಡ ಮಲಯಾಳಂ ಚಿತ್ರ ವೀಕ್ಷಕರಿಂದಲೂ ಮನ್ನಣೆ ಸಿಗುತ್ತಿದೆ. ಅಂದಹಾಗೆ ಇತ್ತೀಚೆಗೆ ಮೋಲಿವುಡ್ ಚಿತ್ರಗಳನ್ನು ಲೋ ಬಜೆಟ್‌ನಿಂದ ಎತ್ತಿಕೊಂಡು ಏಕ್ ದಂ ಹೈ ಬಜೆಟ್ ನತ್ತ ಮುಖ ಮಾಡುತ್ತಿರುವುದು ಕೂಡ ಇತರ ಚಿತ್ರರಂಗದಲ್ಲಿ ಮಲಯಾಳಂ ಚಿತ್ರಗಳು ಕೂಡ ಸ್ಪರ್ಧೆಯಲ್ಲಿ ಹೊಡೆದಾಡುವ ಪ್ರಮೇಯಗಳು ಕಾಣಿಸಿಕೊಂಡಿದೆ. ಈ ಹಿಂದೆ ರೀಲ್ ಗಳ ಜತೆಯಲ್ಲಿ ಸುತ್ತಾಟ ಮಾಡಿಕೊಂಡಿದ್ದ ಮಲಯಾಳಂ ಚಿತ್ರ ನಿರ್ದೇಶಕರು ಎಚ್‌ಡಿ ಫಾರ್ಮೆಟ್‌ಗೆ ಇಳಿದಿರುವುದು ಹೊಸ ತಂತ್ರಜ್ಞಾನದ ಬಳಕೆಯಲ್ಲಿ ಮಲಯಾಳಂ ಚಿತ್ರಗಳ ಗುಣಮಟ್ಟದಲ್ಲೂ ಸುಧಾರಣೆ ಕಾಣಿಸಿಕೊಂಡಿದೆ. ಟೋಟಲಿ ಮಲಯಾಳಂ ಚಿತ್ರ ನಗರಿಯಲ್ಲಿ ಎಲ್ಲ ಬದಲಾವಣೆಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಜತೆಯಲ್ಲಿ ಸಿನಿಮಾ ನಗರಿಗೆ ಬರುವ ಹೊಸ ಹುಡುಗರನ್ನು ಬೆನ್ನು ತಟ್ಟುತ್ತಿದ್ದಾರೆ. ಸಿನಿಮಾ ಕುಟುಂಬದಲ್ಲಿ ಹುಟ್ಟಿದ ನಟ:
ಮೋಲಿವುಡ್ ಸಿನಿಮಾದ ಸೂಪರ್ ಸ್ಟಾರ್ ಮಮ್ಮುಟಿಯ ಪುತ್ರ ದುಲ್‌ವೀಕರ್ ಸಲ್ಮಾನ್ ಕಳೆದ ವರ್ಷವಷ್ಟೇ ಮಲಯಾಳಂ ಸಿನಿಮಾದಲ್ಲಿ ಕಣ್ಣು ಬಿಟ್ಟಿದ್ದರು. ತಮ್ಮ ‘ಸೆಕೆಂಡ್ ಶೋ’ ಚಿತ್ರದ ಮೂಲಕ ಸಾಧಾರಣ ಯಶಸ್ಸು ದಾಖಲಿಸಿಕೊಂಡಿದ್ದರು. ಈ ಬಳಿಕ ಬಂದ ಹಿರಿಯ ನಟ ತಿಲಕನ್‌ರ ಮೊಮ್ಮಗನ ಪಾತ್ರದಲ್ಲಿ ನಟಿಸಿದ ಸಲ್ಮಾನ್ ಚಿತ್ರ ‘ಉಸ್ತಾದ್ ಹೋಟೆಲ್’ ಮಲಯಾಳಂ ಸಿನಿಮಾದ ಬಾಕ್ಸಾಫೀಸ್‌ನಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿತ್ತು. ಇದೇ ರೀತಿಯಲ್ಲಿ ಮಲಯಾಳಂನ ಖ್ಯಾತ ನಟ ಶ್ರೀನಿವಾಸ್ ಅವರ ಪುತ್ರ ವಿನೀದ್ ನಟರಾಗಿ ನಂತರ ನಿರ್ದೇಶಕರಾಗಿ ಹೊರ ಬಂದರು. ಈಗ ಇದೇ ಸಾಲಿನಲ್ಲಿ ಕಾಳಿದಾಸನ್ ಸೇರುವ ಸಾಧ್ಯತೆ ಇದೆ. ಅಂದಹಾಗೆ ಈ ಕಾಳಿದಾಸನ್ ಬೇರೆ ಯಾರು ಅಲ್ಲ. ಮಲಯಾಳಂನಲ್ಲಿ ಅತ್ತ ಆಕ್ಷನ್ ಗೂ ಸೈ ಇತ್ತ ಹಾಸ್ಯಕ್ಕೂ ಸೈ ಎಂದುಕೊಂಡು ನಿರ್ಮಾಪಕರು ತಮ್ಮ ಸಿನಿಮಾಕ್ಕೆ ಆರಿಸಿಕೊಳ್ಳುತ್ತಿದ್ದ ನಟ ಜಯರಾಮ್ ಅವರ ಪುತ್ರ. ಅಂದಹಾಗೆ ಕಾಳಿದಾಸನ್ ಮಲಯಾಳಂನ ಖ್ಯಾತ ಸಿನಿಮಾ ನಟಿ ಪಾರ್ವತಿಯ ಪುತ್ರ. ಈ ಹಿಂದೆ ಕಾಳಿದಾಸನ್ ಬಾಲ ನಟರಾಗಿ ಮೋಲಿವುಡ್ ಚಿತ್ರರಂಗದಲ್ಲಿ ಕಾಲೂರಿದ್ದರು. ಮಲಯಾಳಂನ ಖ್ಯಾತ ನಿರ್ದೇಶಕ ಸತ್ಯನ್ ಅಂತಿಕಾಡ್ ಅವರ ‘ ಕೊಚ್ಚು ಕೊಚ್ಚು ಸಂತೋಷಗಳ್’ ನಲ್ಲಿ ನಟ ಜಯರಾಮ್ ಅವರ ಪುತ್ರನಾಗಿ ಕಾಳಿದಾಸನ್ ಕಾಣಿಸಿಕೊಂಡು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು. ಮೋಲಿವುಡ್ ಅಡ್ಡಾದಲ್ಲಿ ಪುತ್ರರ ಪೈಪೋಟಿ:
ಈ ವರ್ಷ ಮೋಲಿವುಡ್ ಚಿತ್ರರಂಗದಲ್ಲಿ ಅಂದುಕೊಂಡಂತೆ ಎಲ್ಲವೂ ನಡೆದರೆ ನಾಯಕ ನಟರ ಪುತ್ರರ ನಡುವೆ ಏಕ್‌ದಂ ಪೈಪೋಟಿ ಕಾಣಿಸಿಕೊಳ್ಳಲಿದೆ. ಒಂದೆಡೆ ಮಮ್ಮುಟಿಯ ಪುತ್ರ ಸಲ್ಮಾನ್‌ನ ಚಿತ್ರವೊಂದು ಬಿಡುಗಡೆಯ ಹಾದಿ ಕಾಯುತ್ತಿದೆ. ಮತ್ತೊಂದೆಡೆ ಶ್ರೀನಿವಾಸ್ ಪುತ್ರ ವಿನೀದ್ ಚಿತ್ರವೊಂದು ಥಿಯೇಟರ್ ಬಾಗಿಲಲ್ಲಿ ನಿಂತಿದೆ. ಮಲಯಾಳಂನ ಸೂಪರ್ ಸ್ಟಾರ್‌ರಲ್ಲಿ ಒಬ್ಬರಾದ ಮೋಹನ್ ಲಾಲ್ ಪುತ್ರ ಪ್ರಣವ್ ಕೂಡ ಮೋಲಿವುಡ್ ನಲ್ಲಿ ಬಣ್ಣದ ಬದುಕು ಕಟ್ಟಿಕೊಳ್ಳುವ ಸಾಹಸಕ್ಕೆ ಇಳಿಯಲಿದ್ದಾರೆ. ಇವರ ಜತೆಯಲ್ಲಿ ಜಯರಾಮ್ ಪುತ್ರ ಕಾಳಿದಾಸನ್ ಕೂಡ ಒಳ್ಳೆಯ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಇವರೆಲ್ಲರೂ ಈ ವರ್ಷದಲ್ಲಿ ಮಲಯಾಳಂ ಸಿನಿಮಾದ ಮುಕುಟ ಮಣಿಗಳಾಗುತ್ತಾರೆ ಎನ್ನೋದು ಸಿನಿಮಾ ನಗರಿಯ ಮಾತು. ಆದರೆ ಕಾಳಿದಾಸನ್ ಕುರಿತಾಗಿ ಅವರ ತಂದೆ ನಟ ಜಯರಾಮ್ ಹೇಳುವಂತೆ: ನಾವು ಮಗನ ಶಿಕ್ಷಣದ ಕುರಿತು ಹೆಚ್ಚಾಗಿ ಯೋಚಿಸುತ್ತಿದ್ದೇವೆ. ಚೆನ್ನೈಯಲ್ಲಿ ಅವನ ಶಿಕ್ಷಣ ಅಂತಿಮ ಹಂತದಲ್ಲಿದೆ. ಬರೀ ಶಿಕ್ಷಣ ಕಡೆ ಕಾಳಿ ಗಮನಕೊಟ್ಟರೆ ಸಾಕು ಎನ್ನೋದು ನಮ್ಮ ಹೆಬ್ಬಯಕೆ. ಅವಸರದಿಂದ ಸಿನಿಮಾ ನಗರಿಗೆ ಬರೋದು ಬೇಡ ಎನ್ನುವ ಸಲಹೆಯನ್ನು ನಾನು ಕಾಳಿಗೆ ನೀಡುತ್ತಾ ಬಂದಿದ್ದೇನೆ ಎಂದು ಜಯರಾಮ್ ಎಂದಿದ್ದಾರೆ. ಆದರೆ ಮಲಯಾಳಂ ಸಿನಿಮಾ ನಗರಿ ಈ ಹುಡುಗರಿಗಂತೂ ಕಾದು ನಿಂತಿದೆ ಎನ್ನುವ ಮಾತು ಹೊರ ಬಂದಿದೆ. ಅದರಲ್ಲೂ ಕಾಳಿದಾಸನ್ ತಂದೆಯಂತೆ ಎಲ್ಲ ಕಡೆಯಲ್ಲೂ ಸಲ್ಲುವ ಪಾತ್ರವಾಗುತ್ತಾರೆ ಎನ್ನೋದು ಮಲಯಾಳಂ ಸಿನಿ ಪ್ರೇಕ್ಷಕರ ಗಟ್ಟಿಮಾತು. .... vk lvk published dis article.

ಬಾಲಿವುಡ್ ಫ್ಯಾಮಿಲಿ ಬಿಸಿನೆಸ್

ಬಾಲಿವುಡ್ ಎಂದಾಕ್ಷಣ ಅಲ್ಲಿ ಬಣ್ಣದ ಕನಸ್ಸುಗಳನ್ನು ಕಾಣುವ, ಮಾರುವ ಕೆಲಸಗಳು ಸಖತ್ ಆಗಿಯೇ ನಡೆಯುತ್ತದೆ. ಅಂದಹಾಗೆ ಈ ವರ್ಷವಂತೂ ಬಾಲಿವುಡ್‌ನ ಹಿರಿಯ ನಟರ ಪುತ್ರ- ಪುತ್ರಿಯರು ಸಖತ್ ಫಿಲ್ಮಿ ಫಾರ್ಮ್ ಗೆ ಬರಲಿದ್ದಾರೆ. ಏನಿದು ಕತೆ ಅಂತೀರಾ.. ಜಸ್ಟ್ ರೀಡ್ ಇಟ್ * ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಎಂದಾಕ್ಷಣ ಅಲ್ಲಿ ಬಣ್ಣದ ಕನಸ್ಸುಗಳನ್ನು ಕಾಣುವ, ಮಾರುವ ಕೆಲಸಗಳು ಸಖತ್ ಆಗಿಯೇ ನಡೆಯುತ್ತದೆ. ಹೊಸ ಹೊಸ ಪ್ರಯೋಗಶೀಲತೆಯ ಜತೆಯಲ್ಲಿ ಇತರ ಭಾಷೆಗಳ ಕಲಬೆರಕೆಯ ಮಾಲುಗಳ ಮೂಲಕ ವಿಶಿಷ್ಟ ಪ್ರಾಡಕ್ಟ್ ಗಳು ಜನ್ಮ ತಾಳುವುದನ್ನು ಇಲ್ಲಿಯೇ ನೋಡಿ ತಿಳಿಯಬೇಕು. ಸಖತ್ ಕಲರ್‌ಫುಲ್ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಬದಲಾವಣೆಯ ಹವಾ ತಾಗಿದೆ. ಎಲ್ಲವೂ ಮೊಡರ್ನ್‌ನಿಟಿಗೆ ತಕ್ಕಂತೆ ಸಿನಿಮಾಗಳು ರಂಗೀನ್ ಆಗಿ ತೆರೆಗೆ ಬಂದು ಅಪ್ಪಳಿಸುತ್ತಿದೆ. ಬದಲಾಗುತ್ತಿರುವ ಬಾಲಿವುಡ್‌ನಲ್ಲಿ ಈಗ ಹೊಸ ಪರ್ವ ಹುಟ್ಟಿಕೊಂಡಿದೆ. ಅಂದಹಾಗೆ ಈ ಬದಲಾವಣೆ ಏನಪ್ಪಾ ಅಂದರೆ ಬಾಲಿವುಡ್ ಅಂಗಳದಲ್ಲಿ ಈಗ ಫ್ಯಾಮಿಲಿ ಬಿಸಿನೆಸ್ ನಡೆಯುತ್ತಿದೆ. ಹೊಸ ವರ್ಷದ ಆರಂಭದಲ್ಲಿಯೇ ಬಾಲಿವುಡ್ ಫ್ಯಾಮಿಲಿಗಳ ಕುಡಿಗಳು ತಮ್ಮ ಬಣ್ಣದ ಬದುಕು ಕಟ್ಟಿಕೊಡಲು ತಯಾರಿಯನ್ನು ತೆರೆಮರೆಯಲ್ಲಿ ನಡೆಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಹೊಸ ವರುಣ: ತೀರಾ ಇತ್ತೀಚೆಗೆ ನಿರ್ದೇಶಕ ಕಮ್ ನಿರ್ಮಾಪಕ ಕರಣ್ ಜೋಹರ್ ಅವರ ಈ ವರ್ಷ ಮೋಸ್ಟ್ ಸಕ್ಸಸ್ ಕಂಡ ಚಿತ್ರ ‘ಸ್ಟುಡೆಂಟ್ ಆಫ್ ದೀ ಇಯರ್’ ನಲ್ಲಿ ಮಿಂಚಿದ ನವತಾರೆ ವರುಣ್ ಧವನ್ ಈ ವರ್ಷ ಏಕ್ತಾ ಕಪೂರ್ ಅವರ ಬ್ಯಾನರ್‌ನಲ್ಲಿ ಮೂಡಿ ಬರುವ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳ ಸಿಗುತ್ತಿತ್ತು. ಈಗ ಈ ಸುದ್ದಿಗೆ ಮತ್ತೊಂದು ಬಂದು ಸೇರಿದೆ. ಅದೇನಪ್ಪಾ ಅಂದರೆ ವರುಣ್ ಧವನ್ ಜತೆಯಲ್ಲಿ ಅವರ ಅಪ್ಪ ನಿರ್ದೇಶಕ ಡೇವಿಡ್ ಧವನ್ ಕೂಡ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಚಿತ್ರಕ್ಕೆ ಏಕ್ತಾ ಕಪೂರ್
ಇಟ್ಟಿರುವ ಹೆಸರು ‘ಮೇ ತೇರಾ ಹೀರೋ’ ಎನ್ನುವುದು ಕೇಳಿ ಬಂದ ಮಾತು. ಈ ಕುರಿತು ನಿರ್ದೇಶಕ ಡೇವಿಡ್ ಧವನ್ ಹೇಳುವ ಮಾತು ಹೀಗಿದೆ: ನಾನು ಬಾಲಿವುಡ್‌ನ ಬಹುತೇಕ ಮಂದಿಯ ಜತೆಯಲ್ಲಿ ಕೆಲಸ ಮಾಡಿದ್ದೇನೆ. ಅಮಿತಾಭ್‌ನಿಂದ ಹಿಡಿದು ವಿನೋದ್ ಖನ್ಹಾ, ಗೋವಿಂದ, ಸಲ್ಮಾನ್ ಎಲ್ಲರೂ ನನ್ನ ಕೆಲಸದಲ್ಲಿ ಸಾಥ್ ನೀಡಿದ್ದಾರೆ. ಆದರೆ ವರುಣ್ ಜತೆಯಲ್ಲಿ ಕೆಲಸ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ. ನಿರ್ಮಾಪಕಿ ಏಕ್ತಾ ಕಪೂರ್ ಬಂದು ಚಿತ್ರದ ಕತೆ ಹೇಳಿದಾಗ ಈ ಚಿತ್ರ ಮಾಡಲೇ ಬೇಕು ಎನ್ನುವ ಹೆಬ್ಬಯಕೆ ಮೂಡಿತು ಎಂದಿದ್ದಾರೆ. ಟಾಲಿವುಡ್‌ನಿಂದ ಬಾಲಿವುಡ್‌ಗೆ ಚಿತ್ರ: ಅಂದಹಾಗೆ ಬಾಲಿವುಡ್‌ನಲ್ಲಿ ತೆರೆ ಕಾಣಲಿರುವ ‘ಮೇ ತೇರಾ ಹೀರೋ’ ಚಿತ್ರ ನಿಜಕ್ಕೂ ತೆಲುಗಿನ ಸೂಪರ್ ಹಿಟ್ ಚಿತ್ರ ‘ಕಂದೀರಿಗಾ’ ದ ಪಡಿಯಚ್ಚು. ಇದನ್ನು ಬಾಲಿವುಡ್ ಶೈಲಿಗೆ ಬದಲಾಯಿಸಿಕೊಂಡು ಧವನ್ ಸಾಹೇಬ್ರು ಚಿತ್ರ ಹೊರತಾರುತ್ತಾರೆ. ಈ ಕುರಿತು ಡೇವಿಡ್ ಧವನ್ ಹೀಗೆ ಹೇಳುತ್ತಾರೆ: ಈ ಚಿತ್ರದ ಬಹುಮುಖ್ಯ ಭಾಗಗಳನ್ನು ಲಂಡನ್‌ನಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಚಿತ್ರವನ್ನು ಈ ವರ್ಷದ ಕೊನೆ ಭಾಗದಲ್ಲಿ ತೆರೆಗೆ ತರುವ ಕೆಲಸ ನಡೆಯುತ್ತದೆ. ಬಾಲಿವುಡ್ ನಲ್ಲಿ ಇದೊಂದು ಉತ್ತಮ ಮನರಂಜನೆಯಿಂದ ಕೂಡಿದ ಚಿತ್ರವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದಿದ್ದಾರೆ. ಶತ್ರು ಪಾಳಯದಲ್ಲಿ ಹೊಸ ಬ್ಯಾನರ್: ಬಾಲಿವುಡ್‌ನ ಹಿರಿಯ ನಟ ಶತ್ರುಘ್ನಾ ಸಿನ್ಹಾ ಅವರ ಪುತ್ರರಾದ ಲವ ಹಾಗೂ ಕುಶ ಜತೆಯಾಗಿ ‘ಶಾಟ್‌ಗನ್’ ಬ್ಯಾನರ್‌ನಡಿಯಲ್ಲಿ ಅವರ ಸಹೋದರಿ ನಟಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಕುಶ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇದೇ ಬ್ಯಾನರ್ ನಿಂದ ಜಾಕಿಶ್ರಾಫ್ ಚಿತ್ರ ಮೇರಾ ದಿಲ್ ಲೇಕೇ ದೇಕೋ ಎನ್ನುವ ಚಿತ್ರವೊಂದು ತೆರೆಗೆ ಬಂದಿತ್ತು. ಈ ಬಳಿಕ ಶಾಟ್‌ಗನ್ ಬ್ಯಾನರ್ ಹೊಸ ಚಿತ್ರಗಳನ್ನು ನಿರ್ಮಾಣ ಮಾಡುವುದರಲ್ಲಿ ಯಾವುದೇ ಆಸಕ್ತಿಯನ್ನು ತಾಳಲಿಲ್ಲ. ಈಗ ಸೋನಾಕ್ಷಿಯಿಂದ ಬ್ಯಾನರ್ ಮತ್ತೇ ಜೀವಕಳೆ ಬಂದಿದೆ. ಬ್ಯಾನರ್ ಕುರಿತು ಹಿರಿಯ ನಟ ಶತ್ರು ಹೇಳುವಂತೆ ‘ ಇಬ್ಬರು ಸಹೋದರರ ಜತೆಯಲ್ಲಿ ಸೋನಾಕ್ಷಿ ಕೂಡ ಕೈ ಜೋಡಿಸುವುದರಿಂದ ಬ್ಯಾನರ್ ಮತ್ತೆ ಎದ್ದು ನಿಲ್ಲುತ್ತದೆ. ಅಂದಹಾಗೆ ಮೂವರಿಗೂ ನನ್ನ ಸಹಾಯದ ಅವಶ್ಯಕತೆ ಬೀಳೋದಿಲ್ಲ. ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ. ಈ ಹೊಸ ಚಿತ್ರದ ನಡುವೆ ಸೋನಾಕ್ಷಿ ಶಾಹೀದ್ ಕಪೂರ್ ಜತೆಯಲ್ಲಿ ರ‍್ಯಾಂಬೋ ರಾಜಕುಮಾರ್ ಹಾಗೂ ವನ್ಸ್ ಅಪನ್ ಟೈಮ್ ಇನ್ ಮುಂಬಯಿ -೨ ನ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದಾರೆ. ಈ ಬಳಿಕವಷ್ಟೇ ಸೋನಾಕ್ಷಿ ಸಿನ್ಹಾ ಕಾಲ್‌ಶೀಟ್ ಸಿಗೋದು ಈ ಮೂಲಕ ಶತ್ರು ಬ್ಯಾನರ್‌ನ ಚಿತ್ರ ಈ ವರ್ಷವಂತೂ ತೆರೆಗೆ ಬರುವ ಸಾಧ್ಯತೆ ಇಲ್ಲ ಎಂದಾಯಿತು. .... vk lvk published dis article on 10.1.2013) ......

ಹಾಲಿವುಡ್ ನ "ಕಿಮ್’ ಎದೆಗಾರಿಕೆ

ಕಿಮ್ ಕದರ್ಶಿಯನ್ ಇದು ಪಕ್ಕಾ ಹಾಲಿವುಡ್ ಇಂಡಸ್ಟ್ರಿಯ ಹಾಟೇಸ್ಟ್ ಪ್ರಾಪರ್ಟಿ. ಕಿಮ್ ಎಂದರೆ ಹಾಗೇ ಚಳಿಗಾಲದಲ್ಲೂ ಪುರುಷ ಮೃಗಗಳ ದೇಹದಲ್ಲಿ ಬೆವರು ಹುಟ್ಟಿಕೊಳ್ಳುತ್ತದೆ. ಕಿಮ್ ಈಗ ತುಂಬು ಗರ್ಭಿಣಿ. ಆದರೆ ಮದುವೆಯಾಗುವ ಯೋಚನೆ ಇಟ್ಟುಕೊಂಡಿಲ್ಲ. * ಸ್ಟೀವನ್ ರೇಗೊ, ದಾರಂದಕುಕ್ಕು
ಕಿಮ್ ಕದರ್ಶಿಯನ್ ಇದು ಪಕ್ಕಾ ಹಾಲಿವುಡ್ ಇಂಡಸ್ಟ್ರಿಯ ಹಾಟೇಸ್ಟ್ ಪ್ರಾಪರ್ಟಿ. ಕಿಮ್ ಎಂದರೆ ಹಾಗೇ ಚಳಿಗಾಲದಲ್ಲೂ ಪುರುಷ ಮೃಗಗಳ ದೇಹದಲ್ಲಿ ಬೆವರು ಹುಟ್ಟಿಕೊಳ್ಳುತ್ತದೆ. ಕಿಮ್ ಕದರ್ಶಿಯನ್ ಎನ್ನುವ ಪುಟ್ಟ ಹೆಸರನ್ನು ಹಾಗೆನೇ ಗೂಗಲ್ ಎನ್ನುವ ಜಾಲಾಡುವ ಬಲೆಯಲ್ಲಿ ಹಾಕಿಬಿಡಿ. ಥಟ್ ಅಂತಾ ಕಿಮ್ ಜನ್ಮ ಕುಂಡಳಿ ನಿಮ್ಮ ಮುಂದೆ ಹಾಜರಾಗಿ ಹೋಗುತ್ತದೆ. ಕಿಮ್ ಎನ್ನುವ ಸುಂದರಿಯನ್ನು ಬಹಳ ಜನ ಲೈಕ್ ಮಾಡುವುದು ಒಂದೇ ವಿಚಾರಕ್ಕೆ ಜಗತ್ತಿನಲ್ಲಿ ಅತ್ಯಂತ ಸುಂದರ ನಿತಂಬವುಳ್ಳ ನಟಿ ಎನ್ನುವ ಟ್ಯಾಗ್ ಲೈನ್ ಅವಳ ಹೆಸರಿನಲ್ಲಿ ಜತೆಯಲ್ಲಿ ಅಂಟಿಕೊಂಡಿದೆ. ಸುಂದರ ನಿತಂಬಗಳ ಕುರಿತಾಗಿ ಹಾಲಿವುಡ್ ಅಂಗಳದಲ್ಲಿ ಸ್ಪರ್ಧೆಯೊಂದು ನಡೆದಿತ್ತು. ಅದರಲ್ಲಿ ಗೆಲ್ಲುವ ಕುದುರೆ ಯಾವುದು ಎನ್ನುವ ಕುತೂಹಲದ ಪ್ರಶ್ನೆಗೆ ಕಿಮ್ ಕರ್ದಶಿಯನ್ ಹಾಗೂ ಜೆನ್ನಿಫರ್ ಲೋಪೆಜ್ ಎಂಬ ಉತ್ತರ ಥಟ್ಟನೆ ಬಂದು ಬಿಟ್ಟಿತ್ತು. ಅದರಲ್ಲೂ ಕಿಮ್ ನಿತಂಬದ ನೈಜತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸುಂದರ ಶೇಪ್ ನ ಈ ನಿತಂಬದಲ್ಲಿ ನೈಜತೆ ಇಲ್ಲ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದರೂ ಇರಬಹುದು ಎಂದು ಸುದ್ದಿ ಹಬ್ಬಿತ್ತು. ಕಿಮ್ ಸುಂದರ ನಿತಂಬಗಳ ರಹಸ್ಯ: ಇದಕ್ಕೆ ಉತ್ತರವಾಗಿ ೩೨ ವರ್ಷದ ನಟಿ ಕಿಮ್ ತಮ್ಮ ನಿತಂಬದ ಎಕ್ಸ್ ರೇ ತೆಗೆಸಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಿ ಮುಗುಳು ನಕ್ಕಿದ್ದರು. ಈ ಮೂಲಕ ನನ್ನ ದೇಹದಲ್ಲಿ ಯಾವುದೇ ಭಾಗ ಸಿಲಿಕಾನ್ ಅಂಶ ಸೇರಿಸಿಲ್ಲ. ಪ್ಲಾಸ್ಟಿಕ್ ಸರ್ಜರಿ ಮೂಲಕ ನಿತಂಬದ ಗಾತ್ರ ಹಿಗ್ಗಿಸಿಲ್ಲ. ಬೇಕಾದರೆ ಎಕ್ಸ್ ರೇ ರಿಪೋರ್ಟ್ ಇದೆ ನೋಡಿ ಎಂದು ಅಭಿಮಾನಿಗಳಲ್ಲಿ ಕಳಕಳಿಯಿಂದ ಕೇಳಿಕೊಂಡಿದ್ದರು. ಜನಪ್ರಿಯ ಸರಣಿ ಕೀಪಿಂಗ್ ಅಪ್ ವಿಥ್ ಕದರ್ಶಿಯನ್ಸ್ ನಲ್ಲಿ ತನ್ನ ಕರ್ವ್ ನೈಸರ್ಗಿಕವಾದದ್ದು ಎಂದು ಸಾಬೀತು ಪಡಿಸಿದ್ದಳು. ಕಿಮ್ ತಂಗಿ ಕೊಹ್ಲೆ ತನ್ನ ಟ್ವೀಟ್ ನಲ್ಲಿ ಅಕ್ಕನ ನಿತಂಬ ೧೦೦% ನೈಜವಾದದ್ದು ಎಂದು ಘೋಷಿಸಿಕೊಂಡಿದ್ದಳು. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿಲ್ಲ ಬೊಟೆಕ್ಸ್ ಇಂಜೆಕ್ಷನ್ ಬಳಸಿದ್ದೆ. ಆಮೇಲೆ ಅಲರ್ಜಿ ಆದ ಮೇಲೆ ಬಿಟ್ಟು ಬಿಟ್ಟೆ ಎಂದು ಕಿಮ್ ಟ್ವಿಟ್ ಲೋಕದಲ್ಲಿ ಮಾತುಕತೆಯ ಮೂಲಕ ಅಭಿಮಾನಿಗಳ ಎದೆಗೂಡಿನಲ್ಲಿ ಹವಾ ಹುಟ್ಟುಹಾಕುತ್ತಿದ್ದಳು. ಕಿಮ್ ಮದುವೆಗೂ ಮುಂಚೆ ಗರ್ಭಿಣಿ: ಆ ವಿಚಾರದಲ್ಲಿ ಹಾಗೆನೇ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತ ಗ್ಯಾರಂಟಿ. ಎಲ್ಲರೂ ಹೇಳಿಕೊಳ್ಳುತ್ತಿರುವ ಮಾತು ಒಂದೇ ಆಕೆ ಒಂಚೂರು ಜಾಗ್ರತೆ ವಹಿಸಬೇಕಾಗಿತ್ತು. ಬೇಡದ ಗರ್ಭ ತಡೆಯಲು ಎಷ್ಟೆಲ್ಲಾ ಮಾರ್ಗೋಪಾಯಗಳಿವೆ. ಈಕೆಗೆ ಅಷ್ಟೂ ಗೊತ್ತಾಗಲಿಲ್ಲವೆ? ಎಂದು ಆಕೆಯ ಅಭಿಮಾನಿಗಳು, ಹಿತೈಷಿಗಳು ಅವಳನ್ನು ಹುಡುಕಿಕೊಂಡು ಪ್ರಶ್ನೆ ಕೇಳುತ್ತಿದ್ದರು. ಹಾಲಿವುಡ್ ನ ಜನಪ್ರಿಯ ತಾರೆ ಕಿಮ್ ಕರ್ದಾಶಿಯನ್ ತುಂಬಿದ ಗರ್ಭಿಣಿ. ಖ್ಯಾತ ಗಾಯಕ ಕೇನ್ ಸೆಟ್ ಜತೆ ಕೆಲ ತಿಂಗಳಿಂದ ಕಿಮ್ ಡೇಟಿಂಗ್ ಮಾಡುತ್ತಿದ್ದರು. ಆದರೆ ಇವರಿಬ್ಬರು ಅದ್ಯಾವ ಘಳಿಗೆಯಲ್ಲಿ ಮೈಮರೆತರೋ ಏನೋ, ತಪ್ಪು ನಡೆದುಹೋಗಿದೆ. ಈಕೆ ಈಗ ತುಂಬು ಗರ್ಭಿಣಿ. ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಕಿಮ್ ಬಾಯ್ ಫ್ರೆಂಡ್ ಕೇನ್ ವೆಸ್ಟ್ ಮಾತನಾಡುತ್ತಾ ಆಕೆ ಗರ್ಭಿಣಿ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ಮೂವತ್ತೆರಡರ ಹರೆಯದ ಕಿಮ್ ಹಾಗೂ ಕೇನ್ ವೆಸ್ಟ್ ಇಬ್ಬರ ನಡುವೆ ಹತ್ತು ವರ್ಷಗಳಷ್ಟು ಪರಿಚಯವಿದೆ. ಆದರೆ ಕಳೆದ ಕೆಲ ತಿಂಗಳಿಂದಷ್ಟೇ ಡೇಟಿಂಗ್ ಮಾಡುತ್ತಿದ್ದರು. ಇದಕ್ಕೂ ಮುನ್ನ ಫುಟ್ ಬಾಲ್ ಪಟು ಕ್ರಿಸ್ ಹಂಪ್ರೆಸ್ ಅವರನ್ನು ಮದುವೆಯಾಗಿದ್ದರು. ಆದರೆ ಅದೇನಾಯಿತೋ ಏನೋ ಕೇವಲ ೭೨ ದಿನಗಳಲ್ಲೇ ವಿವಾಹ ವಿಚ್ಛೇದನದ ಮೂಲಕ ಇಬ್ಬರೂ ಬೇರ್ಪಟ್ಟರು. ಕೇನ್ ಜೊತೆ ಹೊಸ ಸಂಬಂಧ ಬೆಳೆಸಿದ ಕಿಮ್, ನಮ್ಮಿಬ್ಬರ ದಾಂಪತ್ಯ ಹಾಗೂ ಪ್ರಣಯ ಜೀವನ ಸುಖಕರವಾಗಿರುತ್ತದೆ. ಇದಕ್ಕೆ ನಮ್ಮಿಬ್ಬರ ನಡುವಿನ ಸ್ನೇಹ ಸಂಬಂಧ ಇನ್ನಷ್ಟು ಸಹಕರಿಸುತ್ತದೆ. ನಮ್ಮಿಬ್ಬರ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಶೀಘ್ರವೇ ನಮ್ಮ ಮದುವೆ ನಡೆಯುತ್ತದೆ ಎನ್ನುವ ಮೂಲಕ ತನ್ನ ಗರ್ಭಿಣಿತನಕ್ಕೆ ಉತ್ತರ ನೀಡಿದ್ದಳು. ಕಿಮ್ ಹಾಗೂ ಸರಸ: ೨೦೦೭ರ ಫೆಬ್ರವರಿ ತಿಂಗಳಲ್ಲಿ ಕಿಮ್ ಹಾಗೂ ಸಿಂಗರ್ ರೇ ಜೇ ಜತೆಗಿನ ಸರಸ ಸಲ್ಲಾಪದ ವಿಡಿಯೋ ತುಣುಕೊಂದು ಬಟಾ ಬಯಲಾಗಿ ಹೋಯಿತು. ಇದು ಇಡೀ ಹಾಲಿವುಡ್ ಲೋಕದಲ್ಲಿಯೇ ಸಂಚಲನ ಮೂಡಿಸಿದ ಪ್ರಕರಣವಾಗಿ ನಂತರದ ದಿನಗಳಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಬಯಲು ಮಾಡಿದ ಕಂಪನಿಗೆ ಕಿಮ್ ನ್ಯಾಯಾಂಗದ ಮೂಲಕ ಉತ್ತರ ಕೊಟ್ಟು ಕಂಪನಿಯಿಂದ ಬರೋಬರಿ ೫ ಮಿಲಿಯನ್ ಡಾಲರ್ ತನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಇಳಿಸಿಕೊಂಡಳು. ೨೦೦೭ರ ಡಿಸೆಂಬರ್ ತಿಂಗಳ ಪ್ಲೇಬಾಯ್ ಪುರುಷರ ಮ್ಯಾಗಜೀನ್ ನ ಮುಖಪುಟದಲ್ಲಿ ತನ್ನ ಸಹಜ ಸೌಂದರ್ಯದ ಗಣಿಯನ್ನು ಬಿಚ್ಚಿ ಅಭಿಮಾನಿ ಸಮೂಹಕ್ಕೆ ಮತ್ತೆ ದಂಗು ಮೂಡಿಸಿ ಹೋದಳು. ಈ ಬಳಿಕ ಬಟ್ಟೆಯಂತೆ ಹುಡುಗರನ್ನು ಬದಲಾಯಿಸುತ್ತಾ ಹೋದ ಕಿಮ್ ನೆಚ್ಚಿನ ಗೆಳತಿ ಯಾರು ಗೊತ್ತಾ..? ಅವಳೇ ಸಕಲ ಕಲಾ ವಲ್ಲಭೆ ಪ್ಯಾರಿಸ್ ಹಿಲ್ಟನ್ ! ಚಳಿಗಾಲದಲ್ಲಿ ಹಾಟ್ ಮಾಲು: ಅತ್ಯಂತ ಸಹಜ ನಿತಂಬಗಳ ಸುಂದರಿ ಎಂದು ಬಿಂಬಿಸಿಕೊಂಡಿರುವ ಹಾಲಿವುಡ್ ಬೆಡಗಿ ಕಿಮ್ ಕರ್ದಶಿಯನ್ ಚಳಿಗಾಲದಲ್ಲಿ ತೀರಾ ಹತ್ತಿರವಾಗಿ ಹೋಗುತ್ತಾರೆ. ಯಾಕ್ ಅಂತೀರಾ..ಚಳಿಗಾಲದಲ್ಲಿಯೇ ಕಿಮ್ ತನ್ನ ಬಿಕಿನಿ ಕಲೆಕ್ಷನ್ ಗಳ ಮಾಲನ್ನು ಹೊರಹಾಕುತ್ತಾರೆ. ಪ್ರತಿ ವರ್ಷನೂ ತಮ್ಮ ಮಾದಕ ಮೈಮಾಟವನ್ನು ದಟ್ಟ ನೀಲಿ ಬಿಕಿನಿಯಲ್ಲಿ ಪ್ರದರ್ಶಿಸುತ್ತಾರೆ. ಕಳೆದ ವರ್ಷ ಕರ್ದಶಿಯನ್ ಕಲೆಕ್ಷನ್ ನ ಈ ಈಜುಡುಗೆ ತೊಡುಗೆಗಳಲ್ಲಿ ಕಿಮ್ ತಮ್ಮ ಮಾದಕ ಮೈಮಾಟವನ್ನು ಪ್ರದರ್ಶಿಸಿದ್ದರು. ಜೊತೆಗೆ ಈಕೆಯ ಸಹೋದರಿಯರಾದ ಕೌರ್ಟ್ನಿ ಹಾಗೂ ಖೋಲ್ ಕೂಡ ಸಾಥ್ ನೀಡಿದ್ದರು. ವರ್ಷ ಪೂರ್ತಿ ಕಿಮ್ ಅಭಿಮಾನಿಗಳಿಗಂತೂ ಈ ಬಿಕಿನಿ ಚಿತ್ರಗಳು ಚಳಿಗಾಲದಲ್ಲಿ ಮದಿರೆಯ ಜತೆಗೆ ನಾಲಗೆ ಸವರಿಕೊಳ್ಳಲು ಸಾಥ್ ನೀಡುವ ಉಪ್ಪಿನ ಕಾಯಿಯಂತೆ ಮಜಬೂತಾಗಿರುತ್ತದೆ ಎನ್ನುವುದು ಅಭಿಮಾನಿಗಳಿಂದ ಹೊರ ಬಂದ ಮಾತು. ... ( vk lvk published dis article on 8.01.2013)

ಮುಂಬಯಿಯಲ್ಲಿ ‘ರಿನೋ ’ ಮ್ಯಾಜಿಕ್ !

ರೊನಾಲ್ಡಿನೋ ಎಂದಾಕ್ಷಣ ಫುಟ್ಬಾಲ್ ಆಟಗಾರರ ಕಣ್ಣು, ಕಿವಿ ನೆಟ್ಟಗೆ ನಿಂತು ಬಿಡುತ್ತದೆ. ಅವರ ಕಾಲ ಬುಡಕ್ಕೆ ಫುಟ್ಬಾಲ್ ಚೆಂಡು ಬಂದು ಮುಟ್ಟಿದರೆ ಸಾಕು... ಗೋಲು ಆಗಿಯೇ ಹೋಗುತ್ತದೆ ಎನ್ನುವ ಮಾತುಗಳು ಈ ಹಿಂದೆ ಬ್ರೆಜಿಲ್ ಫುಟ್ಬಾಲ್ ತಂಡ ಫಾರ್ಮ್‌ನಲ್ಲಿದ್ದಾಗ ಕೇಳಿಸಿಕೊಳ್ಳಲು ಆರಂಭವಾಗಿತ್ತು. ಈ ಬಳಿಕ ಕೂಡ ನಾನಾ ಫುಟ್ಬಾಲ್ ಕ್ಲಬ್ ಗಳಲ್ಲಿ ಆಡಿರುವ ರಿನೋ ಗೆ ಈಗ ಬಣ್ಣದ ಲೋಕದ ನಂಟು ಹುಟ್ಟಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಬಹುತೇಕ ಫುಟ್ಬಾಲ್ ಪ್ರಿಯರಿಗೆ ಇದ್ದೇ ಇದೆ. * ಸ್ಟೀವನ್ ರೇಗೊ, ದಾರಂದಕುಕ್ಕು
ಫುಟ್ಬಾಲ್ ಎಂದಾಕ್ಷಣ ಬ್ರೆಜಿಲ್ ದೇಶದ ನಕಾಶೆ ಕಣ್ಣ ಮುಂದೆ ಸುಳಿದು ಬಿಡುತ್ತದೆ. ಬ್ರೆಜಿಲ್‌ನ ನರನಾಡಿಯಲ್ಲಿ ಫುಟ್ಬಾಲ್ ಆಟ ಮಿಲಿತಗೊಂಡಿದೆ. ಇಲ್ಲಿನ ಪ್ರತಿಯೊಬ್ಬರು ಫುಟ್ಬಾಲ್ ಆಟ ಎಂದಾಕ್ಷಣ ಕಾಲ ಬುಡದಲ್ಲಿ ಫುಟ್ಬಾಲ್ ಹುಡುಕಾಡಲು ಆರಂಭ ಮಾಡುತ್ತಾರೆ. ಇಂತಹ ನಾಡಿನಲ್ಲಿ ಬೆಳೆದವರು ರಿನೋ ಅರ್ಥಾತ್ ರೊನಾಲ್ಡಿನೋ ತೀರಾ ಇತ್ತೀಚೆಗೆ ಮುಂಬಯಿಗೆ ಬಂದು ಇಳಿದಿದ್ದರು. ಮುಂಬಯಿಯ ಗಲ್ಲಿ ಗಲ್ಲಿಯಲ್ಲೂ ಕಣ್ಣಾಡಿಸಿಕೊಂಡು ಹೋದ ರೊನಾಲ್ಡಿನೋಗೆ ಭಾರತದಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ ಎನ್ನೋದು ಬಹುತೇಕ ಮಂದಿಗೆ ಗೊತ್ತೇ ಇಲ್ಲ. ಭಾರತಕ್ಕೆ ಈ ಹಿಂದೆ ರಿನೋ ಬಂದಿದ್ದಾಗ ವರ್ಷದಲ್ಲಿ ಒಂದೆರಡು ಬಾರಿಯಾದರೂ ಇಲ್ಲಿಗೆ ಬಂದು ನಿಲ್ಲಬೇಕು ಎನ್ನುವ ಕನಸ್ಸುಗಳಿತ್ತು. ತನ್ನ ನೆಚ್ಚಿನ ಫುಟ್ಬಾಲ್ ಆಟವನ್ನು ಭಾರತದಲ್ಲೂ ಭರ್ಜರಿಯಾಗಿ ನಿಲ್ಲುವಂತೆ ಮಾಡಬೇಕು ಎನ್ನುವ ಕಿಚ್ಚು ಮೊಳೆದಿತ್ತು. ಮುಂಬಯಿಯ ಗಲ್ಲಿಯಲ್ಲಿ ಎದ್ದು ನಿಂತ ಬೃಹತ್ ಗಾತ್ರದ ಸಿನಿಮಾ ಕಟೌಟ್‌ಗಳನ್ನು ನೋಡಿ ತಾನು ಕೂಡ ಇದೇ ಮಾದರಿಯಲ್ಲಿ ನಿಲ್ಲಬೇಕು ಎನ್ನುವ ಬಯಕೆ ಹುಟ್ಟಿಕೊಂಡಿತ್ತು ಎಂದು ಖುದ್ದು ರಿನೋ ಮಾಧ್ಯಮಗಳಲ್ಲಿ ಈ ಹಿಂದೆ ಬಂದಾಗ ಹೇಳಿಕೊಂಡಿದ್ದರು. ಈಗ ಇದೆಲ್ಲವೂ ದಿಟವಾಗಿದೆ. ಹೌದು.. ಈಗ ರಿನೋ ಬಾಲಿವುಡ್ ಅಂಗಳದಲ್ಲಿ ಹೀರೋ ಆಗುವ ಕನಸ್ಸಿನ ಮೇಲೆ ಇಲ್ಲಿಗೆ ಬಂದಿದ್ದಾರೆ. ಫುಟ್ಬಾಲ್ ಲೋಕದ ಧ್ರುವತಾರೆ ರಿನೋ ಬಾಲಿವುಡ್ ಬೇಸ್ಡ್ ಆನಿಮೇಷನ್ ಚಿತ್ರವೊಂದರಲ್ಲಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನೋದು ಹೊರ ಬಂದ ಮಾಹಿತಿ. ಅಂದಹಾಗೆ ರೊನಾಲ್ಡಿನೋ ಎಂದಾಕ್ಷಣ ಫುಟ್ಬಾಲ್ ಆಟಗಾರರ ಕಣ್ಣು, ಕಿವಿ ನೆಟ್ಟಗೆ ನಿಂತು ಬಿಡುತ್ತದೆ. ಅವರ ಕಾಲ ಬುಡಕ್ಕೆ ಫುಟ್ಬಾಲ್ ಚೆಂಡು ಬಂದು ಮುಟ್ಟಿದರೆ ಸಾಕು... ಗೋಲು ಆಗಿಯೇ ಹೋಗುತ್ತದೆ ಎನ್ನುವ ಮಾತುಗಳು ಈ ಹಿಂದೆ ಬ್ರೆಜಿಲ್ ಫುಟ್ಬಾಲ್ ತಂಡ ಫಾರ್ಮ್‌ನಲ್ಲಿದ್ದಾಗ ಕೇಳಿಸಿಕೊಳ್ಳಲು ಆರಂಭವಾಗಿತ್ತು. ಈ ಬಳಿಕ ಕೂಡ ನಾನಾ ಫುಟ್ಬಾಲ್ ಕ್ಲಬ್ ಗಳಲ್ಲಿ ಆಡಿರುವ ರಿನೋ ಗೆ ಬಣ್ಣದ ಲೋಕ ನಂಟು ಹುಟ್ಟಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಬಹುತೇಕ ಫುಟ್ಬಾಲ್ ಪ್ರಿಯರಿಗೆ ಇದ್ದೇ ಇದೆ. ಇದಕ್ಕೆ ಉತ್ತರ ಇಲ್ಲಿದೆ...ಭಾರತೀಯ ಮೂಲದ ಖ್ಯಾತ ಪೌಲ್ಡ್ರಿ ಕಂಪನಿ ವೆಂಕಿ ರಿನೋಗಾಗಿ ಆನಿಮೇಷನ್ ಚಿತ್ರವೊಂದನ್ನು ಸಿದ್ಧಪಡಿಸುತ್ತಿದ್ದಾರೆ. ವೆಂಕಿ ಈ ಹಿಂದೆ ಕೂಡ ರಿನೋನ ಫುಟ್ಬಾಲ್ ಆಟಕ್ಕೆ ಸಹಾಯ ಹಸ್ತ ನೀಡುತ್ತಾ ಬಂದಿದೆ. ಇದೇ ಸಲುಗೆಯಲ್ಲಿ ವೆಂಕಿ ಕಂಪನಿಗೆ ಕಟ್ಟಿಬಿದ್ದು ರಿನೋ ಆನಿಮೇಷನ್ ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆ ಎನ್ನುವುದು ಹೊರ ಬಂದ ಮಾತು. ‘ರೊನಾಲ್ಡಿನೋ ವರ್ಸಸ್ ಏಲಿಯನ್ಸ್ ’ ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಚಿತ್ರದ ಮೂಲ ಕತೆಯೇ ಬಾಹ್ಯಾಕಾಶದ ಟ್ರಾಫಿಕ್ ಸಮಸ್ಯೆಗಳ ಕುರಿತಾಗಿ ಅನ್ಯಗ್ರಹದ ಜೀವಿಗಳು ಹಾಗೂ ರಿನೋ ಜತೆ ನಡೆಯುವ ಕತೆಯೇ ಚಿತ್ರದ ಮುಖ್ಯ ಪಾಯಿಂಟ್. ಚಿತ್ರದಲ್ಲಿ ರಿನೋ ಮುಖ್ಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆನಿಮೇಷನ್ ಚಿತ್ರವಾಗಿದ್ದರ ಪರಿಣಾಮ ರಿನೋ ನಟನೆಗಿಂತ ಹೆಚ್ಚಾಗಿ ಧ್ವನಿಗೆ ಜಾಸ್ತಿ ಮಹತ್ವ ಸಿಗಲಿದೆ. ಅದರಲ್ಲೂ ಮುಖ್ಯವಾಗಿ ಫುಟ್ಬಾಲ್ ರಂಗದಲ್ಲಿ ಎರಡು ಬಾರಿ ಫಿಫಾ ವರ್ಷದ ಆಟಗಾರನಾಗಿ ಹೊರಬಂದ ರಿನೋ ಮೊದಲ ಬಾರಿಗೆ ಆನಿಮೇಷನ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವುದರಿಂದ ನಿರೀಕ್ಷೆಯ ಮೂಟೆಯಂತೂ ಇದ್ದೇ ಇದೆ . ಮತ್ತೊಂದೆಡೆ ಫುಟ್ಬಾಲ್ ಆಟಗಾರ ರಿನೋ ಹೇಳುವಂತೆ ಬ್ರೆಜಿಲ್ ಈ ವರ್ಷ ವಿಶ್ವಕಪ್ ಗೆದ್ದೇ ಗೆಲ್ಲುತ್ತೇ..ಅದರಲ್ಲಿ ನಾನು ಕೂಡ ಆಡಬೇಕು ಎನ್ನುವ ಹಂಬಲವಿದೆ. ಅಂದಹಾಗೆ ಭಾರತ ನನಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ನನ್ನ ಹೊಸ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತೆ ಎನ್ನುವ ನಂಬಿಕೆ ಇದೆ ಎಂದು ಮಾಧ್ಯಮಗಳಿಗೆ ಮಾತು ಬಿಟ್ಟಿದ್ದಾರೆ. ಅಂದಹಾಗೆ ಹೊಸ ವರ್ಷದಲ್ಲಿ ರಿನೋ ಚಿತ್ರಕ್ಕೆ ಕಾದು ಕುಳಿತುಕೊಳ್ಳುವ ಸರದಿಯಂತೂ ರಿನೋ ಅಭಿಮಾನಿಗೆ ಬಂದು ಬಿಡಬಹುದು. ( vk lvk published dis article 0n 7.1.2013)

ಪ್ರಭುದೇವ ಧೂಳ್ ಟಕ್ಕರ್

* ಸ್ಟೀವನ್ ರೇಗೊ, ದಾರಂದಕುಕ್ಕು
ಪ್ರಭುದೇವ ಯಾರಿಗೊತ್ತಿಲ್ಲ ಹೇಳಿ.. ನಟ, ನಿರ್ದೇಶಕ ಕಮ್ ಡಾನ್ಸ್ ಮಾಸ್ಟರ್ ನಾನಾ ಕೆಟಗರಿಯಲ್ಲಿ ನಾನಾ ಆ್ಯಂಗಲ್ ಗಳಲ್ಲಿ ನಿಂತು ನೋಡಿದಾಗ ಪ್ರಭುದೇವ ಟೋಟಲಿ ಭಿನ್ನ ಮನುಷ್ಯ. ಸದಾ ಕಾಲ ಡಾನ್ಸ್ ಎಂದಾಗ ಪ್ರಭು ದೇಹದಲ್ಲಿ ವೈಬ್ರೇಶನ್ ಸ್ಟಾರ್ಟ್ ಆಗಿ ಹೋಗುತ್ತದೆ. ಪ್ರಭು ಪಾಲಿನ ಪ್ರತಿಯೊಂದು ಚಿತ್ರಗಳು ಕೂಡ ನೃತ್ಯಕ್ಕೆ ಹೆಚ್ಚಿನ ಮಹತ್ವ ಇರುತ್ತದೆ. ಸಿನಿಮಾ ರಂಗದಲ್ಲಿ ದುಡಿಯುವ ಬಹಳಷ್ಟು ನಟಿಯರು ಪ್ರಭುದೇವರ ಜತೆಯಲ್ಲಿ ನಟಿಸಲು ಹಿಂದೇಟು ಹಾಕುತ್ತಾರೆ. ತೀರಾ ಕಷ್ಟಕರವಾದ ಸ್ಟೆಪ್‌ಗಳನ್ನು ಬಾಳೆಹಣ್ಣಿನ ಸಿಪ್ಪೆ ತೆಗೆದು ತಿಂದಂತೆ ನೃತ್ಯ ಮಾಡುವ ಪ್ರಭುವನ್ನು ಕಂಡು ಬಹಳಷ್ಟು ನಟಿಯರು ಪ್ರಭು ಚಿತ್ರವೊಂದು ಬೇಡ ಎಂದು ಕೂತ ಕತೆಗಳಿವೆ. ಗಾಳಿಯಲ್ಲಿಯೇ ಗುದ್ದಾಟ ನಡೆಸುವ ಪ್ರಭುದೇವರದ ಸ್ಟೆಪ್ ಗೆ ಮನ ಸೋಲಾದ ವ್ಯಕ್ತಿಯೇ ಇಲ್ಲ ಎನ್ನುವುದು ಅವರಿಗೆ ಅಂಟಿಕೊಂಡ ಟ್ಯಾಗ್‌ಲೈನ್. ಕಾವೇರಿಯ ಹುಡುಗ ಪ್ರಭು: ಎಲ್ಲಕ್ಕೂ ಮುಖ್ಯವಾಗಿ ಪ್ರಭುದೇವ ಅಪ್ಪಟ ಕನ್ನಡಿಗರು. ಮೈಸೂರಿನಲ್ಲಿ ಹರಿಯುತ್ತಿರುವ ಕಾವೇರಿ ನೀರು ಕುಡಿದು ಬೆಳೆದ ಹುಡುಗ ಚೆನ್ನೈಗೆ ಹೋದ ನಂತರವೇ ಸಿನಿಮಾ ರಂಗದಲ್ಲಿ ಮಿಂಚಿದ್ದು ಎನ್ನುವುದು ಪ್ರಭುದೇವರ ಹಳೆಯ ಬದುಕಿನ ಪುಟಗಳಲ್ಲಿ ಕಾಣ ಸಿಕ್ಕ ಮಾಹಿತಿ. ಸಿನಿಮಾ ರಂಗದ ಖ್ಯಾತ ಡ್ಯಾನ್ಸ್ ಮಾಸ್ಟರ್ ಮುಗೂರು ಸುಂದರಂ ಅವರ ಮೂವರು ಪುತ್ರರಲ್ಲಿ ಪ್ರಭು ಮೊದಲಿಗರು ಉಳಿದಂತೆ ನಟರಾದ ರಾಜು ಸುಂದರಂ ಹಾಗೂ ನಾಗೇಂದ್ರ ಪ್ರಸಾದ್. ಮೂವರು ನೃತ್ಯವನ್ನು ಅರಿದು ಕುಡಿದವರು. ಮೂವರು ಈಗ ಸಿನಿಮಾ ರಂಗದಲ್ಲಿ ಬಹಳ ಬೇಡಿಕೆ ಕಂಡುಕೊಂಡ ಕೋರಿಯೋಗ್ರಾಫರ್ಸ್‌ಗಳು. ಅಂದಹಾಗೆ ಬಹಳ ಮಂದಿಗೆ ಗೊತ್ತಿರದ ಸತ್ಯವೆಂದರೆ ಪ್ರಭುದೇವ ಭರತನಾಟ್ಯವನ್ನು ಕಲಿತದ್ದು ಕರಾವಳಿ ಮೂಲದ ಖ್ಯಾತ ಭರತನಾಟ್ಯ ಕಲಾವಿದ ಉಡುಪಿ ಮೂಲದ ಲಕ್ಷ್ಮಿ ನಾರಾಯಣನನ್ ಹಾಗೂ ಧರ್ಮರಾಜ್ ಅವರಿಂದ... ಇದೇ ಕಾರಣದಿಂದ ಆಗಾಗ ಸದ್ದಿಲ್ಲದೇ ಮೈಸೂರು ಹಾಗೂ ಉಡುಪಿಯಲ್ಲಿರುವ ನೃತ್ಯ ಗುರುವಿನ ಮನೆಗೆ ಪ್ರಭುದೇವ ಕದ್ದು ಮುಚ್ಚಿ ಬರುತ್ತಾ ಇರುತ್ತಾರೆ ಎನ್ನುವುದು ಅವರನ್ನು ನೋಡಿದ ಅಭಿಮಾನಿಗಳ ಮಾತು. ನಾಯಕಿಯರು ತೆರೆಗೆ ಸರಿದು ಹೋದರು: ನಟ ಪ್ರಭುದೇವ ಅವರಿಗೆ ನಟನೆ ಬರೋದಿಲ್ಲ.. ಜತೆಗೆ ಅವರ ಜತೆಯಲ್ಲಿ ನಟಿಸಿದ ನಾಯಕಿಯರು ಮತ್ತೆ ತೆರೆಯಿಂದ ಮರೆಯಾಗುತ್ತಾರೆ ಎನ್ನುವ ಅಪವಾದವೊಂದು ಅವರನ್ನು ಸದಾ ಕಾಲ ಕಾಡುತ್ತಾ ಇದೆ. ಪ್ರಭುದೇವ ಜತೆಯಲ್ಲಿ ಆರಂಭಿಕ ಚಿತ್ರಗಳಲ್ಲಿ ನಟಿಸಿದ ನಗ್ಮಾ, ಭೂಮಿಕಾ, ಜ್ಯೋತಿಕಾ ಹೀಗೆ ಐದಾರು ನಾಯಕಿಯರು ಪ್ರಭುದೇವ ಅವರ ಜತೆಯಲ್ಲಿ ನಟಿಸಿದ ನಂತರ ಏಕ್‌ದಂ ಮರೆಯಾಗಿ ಹೋದರು. ಪ್ರಭುದೇವ ಚಿತ್ರಗಳು ಬರೀ ಡ್ಯಾನ್ಸ್ ಮಾತ್ರ ಮೊದಲ ಅದ್ಯತೆ ನೀಡುತ್ತಾರೆ ಎನ್ನುವ ಕಾರಣಕ್ಕೆ ಪ್ರಭು ಅವರ ಚಿತ್ರಗಳು ಸಾಧಾರಣ ಓಟ ದಾಖಲಿಸಿಕೊಂಡಿದೆ. ಪ್ರಭುದೇವ ಅವರ ವೈವಾಹಿಕ ಬದುಕು ಕೂಡ ನೆಟ್ಟಗೆ ಉಳಿದಿಲ್ಲ. ಪ್ರಭು ಅವರ ಆರಂಭಿಕ ಪತ್ನಿ ರಮಾಲತಾ ಬಿಟ್ಟು ನಟಿ ನಯನಾತಾರಾ ಅವರ ಸೀರೆ ಹಿಡಿದುಕೊಂಡು ಪ್ರಭು ಮದುವೆ ಹಂತಕ್ಕೆ ತಲುಪಿದಾಗ ವಿವಾಹ ಮುರಿದುಬಿತ್ತು. ಕೊನೆಗೆ ಯಾವುದು ಬೇಡ ಎಂದುಕೊಂಡು ಪ್ರಭುದೇವ ವೈವಾಹಿಕ ಬದುಕಿನಲ್ಲಿ ಸುಮ್ಮನೆ ಕೂತು ಸಿನಿಮಾ ರಂಗದಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದಾರೆ. ಪ್ರಭುದೇವ ನಿರ್ದೇಶನದ ಬಹುತೇಕ ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಹೊಸ ಹವಾವನ್ನೇ ಸೃಷ್ಟಿಸಿದೆ. 'ವಾಟೆಂಡ್', 'ರೌಡಿ ರಾಥೋಡ್' ಚಿತ್ರಗಳನ್ನು ಬಾಲಿವುಡ್ ಗೆ ಕೊಟ್ಟು ಬಾಲಿವುಡ್ ಪ್ರೇಕ್ಷಕ ವರ್ಗಕ್ಕೆ ಹೊಸ ಕ್ರೇಜ್ ಹುಟ್ಟುಹಾಕಿದರು. ಮತ್ತೊಂದೆಡೆ ತಮಿಳು, ತೆಲುಗಿನಲ್ಲೂ ವರ್ಷಕ್ಕೆ ಒಂದರೆಡು ಚಿತ್ರಗಳನ್ನು ಮಾಡಿ ನಿರ್ದೇಶಕರಾಗಿ ಒಳ್ಳೆಯ ಹೆಸರು ಸಂಪಾದನೆ ಮಾಡುತ್ತಿದ್ದಾರೆ. ಸಚಿನ್ ಅಭಿಮಾನಿ ಪ್ರಭು: ಪ್ರಭುದೇವ ಸಚಿನ್ ತೆಂಡುಲ್ಕರ್ ಅವರ ಅಪ್ಪಟ ಅಭಿಮಾನಿ. ಭಾರತ ಕ್ರಿಕೆಟ್ ತಂಡದಿಂದ ಸಚಿನ್ ನಿವೃತ್ತಿ ಘೋಷಣೆ ಮಾಡಿದಾಗ ಪುಟ್ಟ ಮಗುವಿನಂತೆ ಪ್ರಭು ಅತ್ತು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಸಚಿನ್ ನಿವೃತ್ತಿಯಾಗಬಾರದಿತ್ತು ಎನ್ನುವ ನೋವಿನಲ್ಲೇ ಪ್ರಭು ಸಚಿನ್ ಅಭಿಮಾನಿಗಳಿಗೆ ಯೂಟ್ಯೂಬ್‌ನಲ್ಲಿ ಹಾಡೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಹಾಡು ವಿಶೇಷವಾಗಿ ಸಚಿನ್‌ಗಾಗಿ ಹಾಗೂ ಅವರ ಅಭಿಮಾನಿಗಳಿಗೆ ಅದಕ್ಕಾಗಿ 'ಧೂಳ್ ಟಕ್ಕರ್' ಹೆಸರಿಟ್ಟಿದ್ದೇನೆ ಎಂದು ಟ್ವಿಟ್ಟರ್‌ನಲ್ಲಿ ಪ್ರಭು ಬರೆದುಹಾಕಿದ್ದರು. ಇದರಲ್ಲಿ ತೆಂಡುಲ್ಕರ್ ಕುರಿತ ಗೀತೆಯೊಂದಿದೆ. ಈ ವೀಡಿಯೋದಲ್ಲಿ ತೆಂಡುಲ್ಕರ್ ಡ್ರೈವ್‌ಗಳು, ವಿಶಿಷ್ಟ ಹೊಡೆತಗಳನ್ನು ತೋರಿಸಿದ್ದಾರೆ. ಪ್ರಭುದೇವ್ ಗೀತೆಗೆ ಎಲ್.ವಿ. ಗಣೇಶನ್ ಸಂಗೀತ ಸಂಯೋಜನೆ ಮಾಡಿದ್ದು, ರಾಮಲಿಂಗಮ್ ನಿರ್ದೇಶಿಸಿದ್ದಾರೆ. ಸ್ಫೋಟಕ ಆಟಗಾರ ವೀರೇಂದ್ರ ಸೆಹವಾಗ್ ಕುರಿತ ವೀಡಿಯೋಗಳನ್ನು ಕೂಡಾ ಪ್ರಭುದೇವ್ ಬಿಡುಗಡೆ ಮಾಡಿದ್ದಾರೆ. ಇವೀಗ ಯೂ-ಟ್ಯೂಬ್‌ನಲ್ಲಿ ಕ್ಲಿಕ್ ಆಗುತ್ತಿದೆ. ದಿನದಿಂದ ದಿನಕ್ಕೆ ಈ ಹಾಡನ್ನು ನೋಡುವವರ ಸಂಖ್ಯೆ ಜ್ವರದಂತೆ ಏರಿಕೆ ಕಂಡಿದೆ. ಟೋಟಲಿ ಪ್ರಭುದೇವ ಸಿನಿಮಾದ ಜತೆಯಲ್ಲಿ ಹಾಡಿನ ಮೂಲಕ ಮತ್ತೊಂದು ಸಲ ಹಿಟ್ ಆಗುತ್ತಿದ್ದಾರೆ ಎನ್ನೋದು ಅವರ ಅಭಿಮಾನಿಗಳಿಗೆ ಖುಷಿಯ ವಿಚಾರ. ( vk lvk published dis article on 9.1.2013)

ಕಡಲ್ ಮಣಿ ಕಟ್ಟಿದ ಕಡಲ್ !

* ಸ್ಟೀವನ್ ರೇಗೊ, ದಾರಂದಕುಕ್ಕು ಮಣಿರತ್ನಂ ನಿರೀಕ್ಷಿತ ಚಿತ್ರ ಕಡಲ್ ಫೆಬ್ರವರಿಯ ಮೊದಲ ವಾರದಲ್ಲಿ ಬಿಡುಗಡೆ ಕಾಣುವ ಭವಿಷ್ಯ ಹೇಳಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕಡಲ್ ಹತ್ತು ಹಲವು ಕಾರಣಗಳಿಂದ ನಿರೀಕ್ಷೆ ಖುದ್ದು ಮಣಿಗಿಂತ ಜಾಸ್ತಿ ಅವರನ್ನು ನೆಚ್ಚಿಕೊಂಡಿರುವ ಅಭಿಮಾನಿಗಳಿಗೆ ಇದ್ದೆ ಇದೆ. ಕಡಲ್ ನಲ್ಲಿ ತೇಲುತ್ತಾರಾ ಮಣಿ..?
ತಮಿಳಿನ ಖ್ಯಾತ ನಟ ಕಾರ್ತಿಕ್ ಪುತ್ರ ಗೌತಮ್ ಕಾರ್ತಿಕ್ ನನ್ನು ಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಡುವಂತೆ ಮಾಡುವ ಪ್ರಯತ್ನ ಕಡಲ್ ನಲ್ಲಿ ನಡೆಯುತ್ತಿದೆ. ಇದರ ಜತೆಯಲ್ಲಿ ಖ್ಯಾತ ನಟಿ ರಾಧಾ ಅವರ ಪುತ್ರಿ ತುಳಸಿ ಕೂಡ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಮೀನುಗಾರನೊಬ್ಬನ ನಂಬಿಕೆ ಹಾಗೂ ಮಾನವೀಯತೆಯ ನುಡುವಿನ ಒಂದು ಸೂಕ್ಷ್ಮವಾದ ಎಳೆಯನ್ನು ಇಟ್ಟುಕೊಂಡು ಮಣಿ ಕಡಲ್ ಚಿತ್ರವನ್ನು ಸುಂದರವಾಗಿ ಪೋಣಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಸಂಗೀತದಿಂದ ಹೊರ ಬಂದ ಕಡಲ್ ಈಗಾಗಲೇ ಯೂಟ್ಯೂಬ್ ರೌಂಡ್ ಟೇಬಲ್ ಮೇಲೆ ಹಿಟ್ ಮ್ಯಾಲೆ ಹಿಟ್ ಆಗುತ್ತಿದೆ. ಚಿತ್ರದಲ್ಲಿ ಅರ್ಜುನ್ ಸರ್ಜಾ ಜತೆಯಲ್ಲಿ ಮಣಿಯ ನೆಚ್ಚಿನ ಶಿಷ್ಯ ಅರವಿಂದ ಸ್ವಾಮಿ ಮತ್ತೆ ನಟನೆಗೆ ಇಳಿದುಬಿಟ್ಟಿದ್ದಾರೆ. ಈಗಾಗಲೇ ಅರವಿಂದ ಸ್ವಾಮಿ ತನ್ನ ಸಿನಿಮಾ ಬದುಕಿನಿಂದ ದೂರ ಉಳಿದುಬಿಟ್ಟಿದ್ದರು. ಕಡಲ್‌ಗೆ ನಾಯಕಿಯರದ್ದೇ ಕಾಟ : ಮಣಿರತ್ನಂ ಚಿತ್ರಗಳೆಂದರೆ ಅಲ್ಲಿ ನಾಯಕಿಯರಿಗೂ ಸಾಕಷ್ಟು ಅವಕಾಶಗಳಿರುತ್ತದೆ ಎನ್ನುವುದಕ್ಕೆ ಅವರ ನಿರ್ದೇಶನದ ಚಿತ್ರಗಳೇ ಸಾಕ್ಷಿ ನೀಡುತ್ತದೆ. ಈ ಮಾತು ಕಡಲ್‌ಗೂ ಅನ್ವಯಿಸುತ್ತದೆ. ಕಡಲ್ ಚಿತ್ರಕ್ಕೆ ನಟ ಕಮಲ್ ಹಾಸನ್ ಅವರ ಪುತ್ರಿ ಅಕ್ಷರಾ ಹಾಸನ್ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಹೊರಬಂದಿತ್ತು. ಆದರೆ ಅಕ್ಷರಾ ನಟಿಸುವುದಿಲ್ಲ ಎಂದು ಮಾಧ್ಯಮಗಳಲ್ಲಿ ಬಾಯಿಬಿಟ್ಟರು. ಈ ಬಳಿಕ ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಮ್ ಕಪೂರ್ ಹೆಸರು ಕೂಡ ಓಡಾಡಿಕೊಂಡಿತ್ತು. ಆದರೆ ನಂತರ ಸೋನಮ್ ತಂದೆ ಅನಿಲ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವುದರಿಂದ ಮಣಿ ಸೋನಮ್ ಕೈ ಬಿಡಬೇಕಾಯಿತು. ಈ ಬಳಿಕ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಹಾಗೂ ನಟಿ ಶ್ರೀದೇವಿಯ ಪುತ್ರಿ ಜಾನ್ವಿ ಹೆಸರು ಕೇಳಿ ಬಂದಿತ್ತು. ಆದರೆ ನಂತರ ತೆಲುಗು ನಟಿ ಸಮಂತಾ ನಾಯಕಿ ಎನ್ನುವ ಘೋಷಣೆ ಹೊರಬಂತು. ಇತ್ತಕಡೆ ಸಮಂತಾ ಇತರ ಚಿತ್ರಗಳ ಡೇಟ್ ಗಳು ಒಂದಕ್ಕೊಂದು ತಾಳೆ ಹಾಕುವುದಿಲ್ಲ ಎಂದು ಗೊತ್ತಾದ ತಕ್ಷಣ ಸಮಂತಾ ಕೂಡ ಮಣಿಯ ಕೈ ಯಿಂದ ಜಾರಿ ಹೋದಳು. ಈ ಬಳಿಕವೇ ನಟಿ ರಾಧಾ ಪುತ್ರಿ ತುಳಸಿ ನಾಯರ್ ಎ್ನವ ಬೆಡಗಿ ಕಡಲ್ ಚಿತ್ರಕ್ಕೆ ನಾಯಕಿಯಾಗಿ ಕಾಣಿಸಿಕೊಂಡರು. ಕಡಲ್ ಫಸ್ಟ್ ಲುಕ್‌ನಲ್ಲಿ ಪ್ರೇಕ್ಷಕ ಫಿದಾ ! ಡಿಸೆಂಬರ್ ತಿಂಗಳ ನಡು ಭಾಗದಲ್ಲಿ ಕಡಲ್ ಚಿತ್ರಕ್ಕೆ ಸಂಬಂಧಿಸಿದ ಚಿತ್ರಗಳು ಮಾಧ್ಯಮಗಳಲ್ಲಿ ಹೊರಬಂದಿತ್ತು. ಇದೇ ಚಿತ್ರಗಳು ಗೂಗಲ್ ಹಾಗೂ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಸರ್ಚ್ ಮಾಡುವ ಗೀಳು ಪ್ರೇಕ್ಷಕ ವಲಯದಲ್ಲಿ ಮೂಡಿತ್ತು ಎನ್ನುವ ಮಾತು ಹರಿದಾಡುತ್ತಿದೆ. ಈ ಚಿತ್ರದಲ್ಲಿನ ತುಳಸಿಗೆ ನಾಯರ್ ಗೆ ಸಂಬಂಧಿಸಿದ ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆ ಮಾಡಿದ ನಂತರ ಪ್ರೇಕ್ಷಕರು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ. ಫಸ್ಟ್ ಲುಕ್ ಬಿಡುಗಡೆ ಸಂದರ್ಭದಲ್ಲಿ ತುಳಸಿ ಮಾತನಾಡುತ್ತಾ, ನನ್ನ ಫೋಟೋಗಳನ್ನು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ನೋಡಿಕೊಳ್ಳಬೇಕು ಎಂದು ಅದೆಷ್ಟೋ ದಿನಗಳಿಂದ ಕನಸು ಕಾಣುತ್ತಿದ್ದೆ. ಈಗದು ನನಸಾಗಿದೆ ಎಂದಿದ್ದರು. ನಟನೆ ಎಂದರೆ ತುಂಬಾ ಇಷ್ಟ. ನನ್ನ ಸಂಭಾಷಣೆಯನ್ನು ನಾನೇ ಹೇಳಿಕೊಳ್ಳಬೇಕು. ಮನೆಪಾಠಕ್ಕೆ ಹೋಗಿ ತಮಿಳು, ತೆಲುಗು ಭಾಷೆಗಳನ್ನು ಕಲಿತೆ. ಮಣಿರತ್ನಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವುದು ನಿಜಕ್ಕೂ ನನ್ನ ಪಾಲಿನ ಅತಿದೊಡ್ಡ ಅದಷ್ಟ ಎಂದು ತುಳಸಿ ಮಣಿರತ್ನಂರನ್ನು ಸಿಕ್ಕಾಪಟ್ಟೆ ಹೊಗಳಿದ್ದರು. ( lvk published dis article on 8.1.2013)