
Monday, March 25, 2013
ವಿಕದ ಬಲು ಅಪರೂಪದ ಎಡಿಟರ್ ರಾಘವನ್ !
ಎರಡು ವರ್ಷದ ಹಿಂದಿನ ಮಾತು.
ಈ.ರಾಘವನ್ ಎನ್ನುವ ಹಿರಿಯ ಪತ್ರಕರ್ತ ಕನ್ನಡದ ನಂಬರ್ ವನ್ ಪತ್ರಿಕೆ ವಿಜಯ ಕರ್ನಾಟಕದ ಸಂಪಾದಕರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ ಎನ್ನುವ ಮಾಹಿತಿ ಹೊತ್ತ ಕಂಪನಿಯ ಇಮೇಲ್ ನನ್ನ ಇನ್ ಬಾಕ್ಸ್ ನಲ್ಲಿ ಕೂತಿದ್ದಾಗ ನನಗೆ ಮಾತ್ರವಲ್ಲ ಲಕ್ಷಾಂತರ ಓದುಗ ಬಂಧುಗಳಿಗೂ ರಾಘವನ್ ಸರ್ ಪರಿಚಯವೇ ಇಲ್ಲ. ಟೈಮ್ಸ್ ಕಂಪನಿಯ ಇಟಿ( ಎಕಾನಮಿಕ್ಸ್ ಟೈಮ್ಸ್) ನಲ್ಲಿ ದುಡಿದು ಬಂದ ಹಿರಿಯ ಪತ್ರಕರ್ತ ಎನ್ನುವ ಪುಟ್ಟ ಮಾಹಿತಿ ಬಿಟ್ಟರೆ ಬೇರೆನೂ ಇರಲಿಲ್ಲ. ಅವರು ಬರುವ ಕಾಲದಲ್ಲಿ ವಿಕದಲ್ಲಿ ಬದಲಾವಣೆಯ ಪರ್ವ ಕಾಣಿಸಿಕೊಂಡಿತ್ತು. ಈ ಪರಿಸ್ಥಿತಿಯಲ್ಲಿ ರಾಘವನ್ ಸರ್ ಮುಂದೆ ಬೆಟ್ಟದಷ್ಟೂ ಸವಾಲುಗಳು ಎದುರಿಗಿತ್ತು. ಆದರೆ ಅವರು ನಂಬಿದ್ದು ವಿಕದಲ್ಲಿರುವ ಯುವಕರ ಪಡೆಯನ್ನು ಬರುವಾಗಲೇ ಯುವಘರ್ಜನೆ ಎನ್ನುವ ಯುವ ಸಾಧಕರ ಸಾಧನೆಯ ಆಂದೋಲನವನ್ನು ಪತ್ರಿಕೆಯಲ್ಲಿ ತಂದರು. ನೆನಪಿನ ಬುಟ್ಟಿಯಲ್ಲಿ ತೆಗೆದು ನೋಡಿದರೆ ಕರಾವಳಿ ಭಾಗದಿಂದ ನನ್ನ ೧೫ಕ್ಕೂ ಹೆಚ್ಚು ಯುವಕರ ಸಾಧನೆಯ ಮಾಲಿಕೆಯನ್ನು ವಿಕದಲ್ಲಿ ಪ್ರಕಟಿಸುವ ಮೂಲಕ ನನಗೆ ರಾಜ್ಯಮಟ್ಟದಲ್ಲಿ ಒಳ್ಳೆಯ ಹೆಸರು ತಂದು ಕೊಟ್ಟಿದ್ದರು. ಪದೇ ಪದೇ ಅವರಿಂದ ಬರುತ್ತಿದ್ದ ಸ್ಪೂರ್ತಿಯ ಮಾತುಗಳು ನನ್ನ ವಿಕದ ಬೆಳವಣಿಗೆಯಲ್ಲಿ ಒಂದು ಅದ್ಬುತವಾದ ಮೈಲಿಗಲ್ಲು ಎಂದೇ ನಾನು ವೃತ್ತಿ ಪತ್ರಕರ್ತನಾಗಿ ಭಾವಿಸಿದ್ದೇನೆ.
ಎರಡು ವರ್ಷದ ಇಂದಿನ ಮಾತು..
ವಿಜಯಕರ್ನಾಟಕ ದಿನಪತ್ರಿಕೆಯ ಈ ಹಿಂದಿನ ಸಂಪಾದಕರಾಗಿದ್ದ ಈ. ರಾಘವನ್ ಅವರು ತೀರಿಕೊಂಡು ಇಂದಿಗೆ ಒಂದು ವರ್ಷ. ಈ.ರಾಘವನ್ ನಾನು ಪ್ರತಿ ದಿನ ನೆನಪಿಸುವ ಒಳ್ಳೆಯ ಸಂಪಾದಕರಲ್ಲಿ ಒಬ್ಬರು. ಅವರು ನಿಧನರಾಗುವ ಒಂದು ದಿನ ಮೊದಲು ನನಗೆ ಪ್ರಶಸ್ತಿ ಬಂದ ಕುರಿತು ದೂರವಾಣಿಯಲ್ಲಿ ಮಾತನಾಡಿದ್ದೆ. ೨೦೧೨ರಲ್ಲಿ ದಕ್ಷಿಣ ಕನ್ನಡ ಪತ್ರಕರ್ತರ ಸಂಘ ನೀಡುವ ಪ. ಗೋ ಪ್ರಶಸ್ತಿ ಕುರಿತು ಅವರು ಹೇಳಿದಿಷ್ಟು: ಪ.ಗೋ ಹಾಗೂ ನಾನು ಬಹಳ ಒಳ್ಳೆಯ ಗೆಳೆಯರಾಗಿದ್ದೇವು.. ಚಹಾ ಕುಡಿಯಲು ರಾಘವನ್ ಅವರು ಪ. ಗೋ ಮನೆಗೆ ಹೋಗುತ್ತಿದ್ದ ಕತೆ, ಜತೆಗೆ ಅವರ ಪ್ರಾಮಾಣಿಕತೆಯ ಕುರಿತು ನನ್ನ ಜತೆ ಮಾತನಾಡಿದ್ದರು. ಬೆಂಗಳೂರಿನಂತಹ ವಿಕ ಮಾಧ್ಯಮ ಸಮುದ್ರದಲ್ಲಿ ಸ್ವಾತಂತ್ರ್ಯವಾಗಿ ನನಗೆ ಈಜಾಲು ಬಿಟ್ಟ ರಾಘವನ್ ಸರ್... ನನಗೆ ಯಾವಾಗಲೂ ಸ್ಪೂರ್ತಿಯ ಚಿಲುಮೆ. ಇಂತಹ ರಾಘವನ್ ಮತ್ತೆ ಹುಟ್ಟಿ ಮಾಧ್ಯಮಕ್ಕೆ ಬರಬೇಕು ಎನ್ನೋದು ನನ್ನ ಆಶಯ.

Subscribe to:
Post Comments (Atom)
No comments:
Post a Comment