Friday, July 26, 2013
ಭಟ್ಟರದು ಹರಿದು ಹೋದ ಪೋಸ್ಟರ್ ಕತೆ
ಈಗ ಕಾಲ ಬದಲಾಗುತ್ತಿದೆ. ಎಲ್ಲ ಕೆಲಸಕ್ಕೂ ಮೆಷಿನ್‌ಗಳು ಬಂದು ಬಿಟ್ಟಿದೆ. ಆದರೆ ನನ್ನ ಕೆಲಸಕ್ಕಂತೂ ಯಾವುದೇ ಯಂತ್ರಗಳು ಬರಲು ಸಾಧ್ಯವಿಲ್ಲ. ಒಂದು ವೇಳೆ ಬಂದು ನಿಂತರೆ ಕೂಡ ಅವರಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಮಾರಾಯ್ರೆ. ಅಂದಹಾಗೆ ನನ್ನ ವೃತ್ತಿ ಉರೂರು ಸುತ್ತಾಡಿಕೊಂಡು ಸಿನಿಮಾಗಳ ಪೋಸ್ಟರ್‌ಗಳನ್ನು ಅಂಟಿಸುವುದು. ಯಾವ ಗೋಡೆಯಲ್ಲಿ ಯಾವ ಮಾದರಿಯ ಪೋಸ್ಟರ್, ಹೇಗೆ ಅಂಟಿಸಿದರೆ ಜನರು ಗುರುತಿಸುತ್ತಾರೆ ಮೊದಲಾದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಈ ಕಾರಣದಿಂದ ಕಳೆದ ೪೦ ವರ್ಷಗಳಿಂದ ಇದೇ ನನ್ನ ಹೊಟ್ಟೆ ತುಂಬಿಸುವ ವೃತ್ತಿ. ಅದನ್ನು ಬಿಟ್ಟರೆ ನನಗೆ ಬೇರೆ ಕೆಲಸ ಗೊತ್ತಿಲ್ಲ.
ಅಂದಹಾಗೆ ನನ್ನೂರು ಮಂಗಳೂರು. ಹೆತ್ತವರು ಪ್ರೀತಿಯಿಂದ ಬಾಲ್ಯದಲ್ಲಿ ಕರೆಯುತ್ತಿದ್ದ ಹೆಸರು ‘ವೆಂಕು ’ ಮತ್ತೆ ಶಾಲೆಗೆ ಬಂದಾಗ ಅಲ್ಲಿನ ರಿಜಿಸ್ಟ್ರಾರ್‌ನಲ್ಲಿ ಕಾಣಿಸಿಕೊಂಡದ್ದು ಬಿ. ವೆಂಕಟೇಶ್ ಭಟ್ಟ . ಆದರೆ ಈ ಎರಡು ಹೆಸರುಗಳು ಈಗ ಉಳಿದಿಲ್ಲ. ಈಗ ಉಳಿದಿರೋದು ಪೋಸ್ಟರ್ ಭಟ್ಟರು. ಇದೇ ಹೆಸರಿನಲ್ಲೇ ಎಲ್ಲರೂ ಕರೆಯುವುದು.
ನನ್ನ ಬದುಕಿನ ಮೊದಲ ಸೋಲು ಕಾಣಿಸಿಕೊಂಡಿದ್ದು ಬಾಲ್ಯದಲ್ಲಿ...ಅದರಲ್ಲೂ ನಾನು ನಾಲ್ಕನೇ ತರಗತಿಯಲ್ಲಿರುವಾಗ ವಿದ್ಯಾರ್ಥಿಯೊಬ್ಬನ ಹೆತ್ತವರು ಹಣ ಕೊಟ್ಟರು ಎನ್ನುವ ಕಾರಣಕ್ಕೆ ನನ್ನನ್ನು ಫೇಲ್ ಮಾಡಿ ಅವನನ್ನು ಪಾಸ್ ಮಾಡಿದ್ರು.. ನನ್ನನ್ನು ಅದೇ ತರಗತಿಯಲ್ಲಿ ಕುಳ್ಳರಿಸಿದರು. ಈ ಕುರಿತು ಯಾರು ಕೂಡ ಕೇಳಿಲ್ಲ. ನಾನಾ ತೀರಾ ಬಡ ಕುಟುಂಬದಿಂದ ಬಂದವ ಆದರೂ ನನ್ನ ತಂದೆಯಂತೂ ಸಿಕ್ಕಾಪಟ್ಟೆ ಸ್ವಾಭಿಮಾನಿ. ಈ ವಿಚಾರ ಅವರಿಗೆ ತಿಳಿಯುತ್ತಿದ್ದಂತೆ ಅಲ್ಲಿಂದ ಬಿಡಿಸಿ ಮತ್ತೊಂದು ಶಾಲೆಗೆ ಭರ್ತಿ ಮಾಡಿದರು. ಅಲ್ಲೂ ನಾನು ಬಡವ ಎನ್ನುವ ಕಾರಣಕ್ಕೆ ಕಿರುಕುಳ ಆರಂಭವಾಯಿತು. ಹೀಗೇ ಮತ್ತೊಂದು ಶಾಲೆಗೆ ಭರ್ತಿಯಾದೆ. ಆದರೆ ಏಳರ ಘಟ್ಟ ಏರುತ್ತಿದ್ದಂತೆ ಫೇಲ್ ಆಗಿ ಹೋದೆ. ಇದು ನನ್ನ ಸೋಲಿನ ಮೊದಲ ಅಧ್ಯಾಯ ಎನ್ನುವುದು ನನಗೆ ತಿಳಿಯದೇ ಹೋದೆ.
ನನ್ನ ತಂದೆಗೆ ಐವರು ಮಕ್ಕಳು ತಮ್ಮ ಪಾಡಿಗೆ ಕಲಿತು ಈಗ ಮಂಗಳೂರಿನ ಅಸುಪಾಸಿನಲ್ಲಿ ಬದುಕು ಕಟ್ಟುತ್ತಿದ್ದಾರೆ. ಆದರೆ ನಾನು ಕಲಿಯದೇ ತಂದೆ ಜತೆಯಲ್ಲಿ ಸೇರಿಕೊಂಡೆ. ಅಂದಹಾಗೆ ಅವರೇನು ದೊಡ್ಡ ವೃತ್ತಿಯಲ್ಲಿ ಇರಲಿಲ್ಲ. ಊರೂರು ಸುತ್ತಾಡಿಕೊಂಡು ಅಡುಗೆ ಭಟ್ಟರ ಕೆಲಸ ಮಾಡುತ್ತಿದ್ದರು. ನಾನು ಶಾಲೆ ಬಿಟ್ಟಾಗ ಮಂಗಳೂರಿನ ಬಂದರಿನ ಹತ್ತಿರ ಪುಟ್ಟ ಹೋಟೆಲ್ ತೆರೆದರು. ನಾನು ಅಲ್ಲಿಯೇ ಸೇರಿಕೊಂಡೆ. ಕೆಲವು ಸಮಯ ಹೋಟೆಲ್ ವಹಿವಾಟು ಸಾಧಾರಣ ಮಟ್ಟಿಗೆ ನಡೆಯುತ್ತಿತ್ತು.
ಆದರೆ ಹೋಟೆಲ್ ವ್ಯವಹಾರದಲ್ಲಿ ನಮಗೆ ಸಾಕಷ್ಟು ಅನುಭವ ಇರಲಿಲ್ಲ. ಕಾರ್ಮಿಕರೇ ನಮ್ಮನ್ನು ಬೀದಿಗೆ ತಂದರು. ತಂದೆ ಮತ್ತೆ ಅಡುಗೆ ಭಟ್ಟರಾಗಿ ಊರೂರು ಪ್ರಯಾಣ ಮಾಡುತ್ತಿದ್ದರು. ನಾನು ಹನುಮಂತನಂತೆ ಅವರ ಹಿಂದೆ ಬಿದ್ದೆ. ಅವರ ಜತೆಯಲ್ಲಿ ಅಡುಗೆ ಸಹಾಯಕನಾಗಿ ಸೇರಿಕೊಂಡು ಮುಂದೆ ಬಂದೆ. ಕೆಲವೊಂದು ಸಲ ನನ್ನನ್ನು ಬಾಡಿಗೆ ರೂಂನಲ್ಲಿ ಬಿಟ್ಟು ಹೋಗುತ್ತಿದ್ದರು. ರೂಂನಲ್ಲೂ ತಿನ್ನಲು ಅನ್ನವೊಂದೇ ಇರುತ್ತಿತ್ತು. ಆದರೆ ಅದಕ್ಕೆ ಬೇಕಾದ ಪದಾರ್ಥವಂತೂ ಇರಲಿಲ್ಲ. ಗೆಳೆಯನೊಬ್ಬ ಕಡಿಮೆ ಬೆಲೆಗೆ ಒಣಮೀನು ಬರುತ್ತೆ.. ಒಳ್ಳೆಯ ಭರ್ಜರಿ ಊಟ ಮಾಡಬಹುದು ಎನ್ನುವ ಸಲಹೆಯನ್ನು ಕೊಡುತ್ತಿದ್ದ. ಒಣ ಮೀನು ತಂದು ಬೆಂಕಿಯಲ್ಲಿ ಸುಟ್ಟುಕೊಂಡು ತಿನ್ನುತ್ತಿದ್ದೆ. ಇಲ್ಲಿಂದಲೇ ನಾನು ಮಾಂಸ, ಮೀನು ಎಲ್ಲವನ್ನು ತಿನ್ನಲು ಆರಂಭ ಮಾಡಿದೆ. ಈ ವಿಚಾರಗಳು ಮನೆಯವರಿಗೆ ತಿಳಿಯುತ್ತಿರಲಿಲ್ಲ. ಇದೇ ಸಮಯದಲ್ಲಿ ತಂದೆ ನಮ್ಮನ್ನು ಬಿಟ್ಟು ಹೋದರು. ನನಗೆ ಕುಟುಂಬ ನಿರ್ವಹಣೆ ಮಾಡಲು ಕೆಲಸಕ್ಕೆ ಹೋಗಲೇ ಬೇಕಿತ್ತು. ನಾನು ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ಹತ್ತಿರ ಇರುವ ಜನಸೇವಾ ಸಂಘಕ್ಕೆ ತಿಂಗಳಿಗೆ ೬೫ ರೂಪಾಯಿಯಂತೆ ಸಂಬಳಕ್ಕಾಗಿ ಕೆಲಸಕ್ಕೆ ನಿಂತು ಬಿಟ್ಟೆ. ಅಲ್ಲಿ ರಸಗೊಬ್ಬರ ಕೃಷಿಕರಿಗೆ ಕೊಡುವ ಕೆಲಸ. ತುಂಬಾ ಸಮಯ ಉಳಿಕೆಯಾಗುತ್ತಿತ್ತು. ಇದೇ ಸಮಯದಲ್ಲಿ ಪಕ್ಕದಲ್ಲಿದ್ದ ರಾಮಕಾಂತಿ ಥಿಯೇಟರ್‌ನಲ್ಲಿ ಲಾಡು ಮಾರಾಟ ಮಾಡುತ್ತಿದ್ದೆ. ಥಿಯೇಟರ್ ಮಾಲೀಕರು ನನ್ನ ಕೆಲಸ ಹತ್ತಿರದಿಂದ ನೋಡಿದ್ದರು. ಕೆಲವೊಂದು ಸಲ ಟಿಕೇಟ್ ಗೇಟ್ ಕೀಪರ್ ರಜೆ ಹಾಕುತ್ತಿದ್ದಾಗ ನನ್ನನ್ನು ನೇಮಕ ಮಾಡುತ್ತಿದ್ದರು. ಈ ಹಿಂದೆ ಗೇಟ್ ಕೀಪರ್ ನಿಂತವರೇ ಸಿನಿಮಾಗಳ ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತಿದ್ದರು.
ಇದೇ ರಾಮಕಾಂತಿ ಥಿಯೇಟರ್‌ನಲ್ಲಿದ್ದ ಗೇಟ್ ಕೀಪರ್ ರತ್ನಾಕರ ಶೆಟ್ಟಿ ನನಗೆ ಪೋಸ್ಟರ್ ಅಂಟಿಸುವ ಕೆಲಸಕ್ಕೆ ಬರಲು ಹೇಳಿದರು. ಆಗ ನನಗೆ ಹದಿನೆಂಟರ ಹರೆಯ ಜನಸಂಘದ ಕೆಲಸ ಜತೆಯಲ್ಲಿ ಲಾಡು ಮಾರಾಟ ಮಾಡಿ ಉಳಿದ ಸಮಯದಲ್ಲಿ ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತಿದ್ದೆ. ಈ ವಿಚಾರ ಬೇರೆ ಥಿಯೇಟರ್‌ನ ಮಾಲೀಕರಿಗೆ ತಿಳಿಯಿತು. ಅವರು ತಮ್ಮ ಥಿಯೇಟರ್‌ಗಳ ಪೋಸ್ಟರ್ ಅಂಟಿಸುವ ಕೆಲಸವನ್ನು ನನಗೆ ಕೊಟ್ಟರು. ಹೀಗೆ ಒಂದೆರಡು ವರ್ಷದಲ್ಲಿ ಮಂಗಳೂರಿನ ೯ಕ್ಕೂ ಅಧಿಕ ಸಿನಿಮಾ ಥಿಯೇಟರ್‌ಗಳ ಪೋಸ್ಟರ್ ಅಂಟಿಸುವ ಕೆಲಸ ನನಗೆ ಬಂತು.
ಈ ಹಿಂದೆ ಸಿನಿಮಾ ಪೋಸ್ಟರ್‌ಗಳು ಚೆನ್ನೈ ಹಾಗೂ ಬೆಂಗಳೂರಿನಿಂದ ಸಿನಿಮಾ ವಿತರಕರ ಮೂಲಕ ಪ್ರತಿ ಭಾನುವಾರ ಮಂಗಳೂರು ಬಂದು ಸೇರುತ್ತಿತ್ತು. ಒಂದೆರಡು ಸಾವಿರ ಸಿನಿಮಾ ಪೋಸ್ಟರ್‌ಗಳನ್ನು
ಸೈಕಲ್‌ನ ಹಿಂಬದಿಯ ಕೇರಿಯರ್‌ನಲ್ಲಿ ಇಟ್ಟುಕೊಂಡು ಬೆಳಗ್ಗಿನ ಜಾವ ಮೂರರಿಂದ ರಾತ್ರಿ ಹತ್ತರ ತನಕ ನಿರಂತರ ಸೈಕಲ್‌ನಲ್ಲಿ ೨೫೦ರಿಂದ ೩೦೦ ಕಿ.ಮೀ ಪ್ರಯಾಣ ಮಾಡುತ್ತಿದ್ದೆ. ದೇಹ ತಣಿದಾಗ ಎಲ್ಲಿ ಜಾಗ ಸಿಗುತ್ತೋ ಅಲ್ಲಿಯೇ ಮಲಗಿ ಹೋಗುತ್ತಿದ್ದೆ. ಯಾರೋ ಬಂದು ಎಬ್ಬಿಸಿದಾಗ ಎಚ್ಚರಗೊಂಡು ಮತ್ತೆ ಸೈಕಲ್ ಏರಿ ಹೋಗುತ್ತಿದ್ದೆ. ಹೀಗೆ ಪ್ರತಿ ಸೋಮವಾರದಿಂದ ಗುರುವಾರ ತನಕ ಪೋಸ್ಟರ್ ಅಂಟಿಸುತ್ತಾ ಶುಕ್ರವಾರ ಮಂಗಳೂರು ಮುಟ್ಟುತ್ತಿದ್ದೆ.
ಹೀಗೆ ನೂರಾರು ಕಿ.ಮೀ ಸೈಕಲ್ ಪ್ರಯಾಣದಿಂದ ದೇಹ ತೀರಾ ದಣಿಯುತ್ತಿತ್ತು. ಊಟವಂತೂ ಸೇರುತ್ತಿರಲಿಲ್ಲ. ದೇಹದ ನೋವು ಮರೆಯಲು ಕುಡಿಯಲು ಆರಂಭ ಮಾಡಿದೆ. ನೈಂಟಿ ಹಾಕಿಯೇ ಸೈಕಲ್ ಏರುತ್ತಿದ್ದೆ. ಅಂದಹಾಗೆ ಪೋಸ್ಟರ್ ಅಂಟಿಸುವ ಕಾಯಕದಿಂದ ದೊಡ್ಡ ಮೊತ್ತವೇನೂ ಬರುತ್ತಿರಲಿಲ್ಲ. ಆದರೆ ಕುಟುಂಬ ನಿರ್ವಹಣೆ ಆಗಿ ಹೋಗುತ್ತಿತ್ತು. ನನ್ನ ಕುಡಿತದಿಂದ ಬಂದ ಹಣವೆಲ್ಲ ಶರಾಬು ಅಂಗಡಿ ಸೇರುತ್ತಿತ್ತು.
ಒಂದು ಪೋಸ್ಟರ್‌ಗೆ ೧೨ ಪೈಸೆಯಿಂದ ಆರಂಭವಾಗಿ ಈಗ ಒಂದು ರೂಪಾಯಿಗೆ ಬಂದು ನಿಂತಿದೆ. ಆದರೂ ಮೈಲುತುತ್ತು, ರತಲ್ ಪೌಡರ್, ಮೈದಾ ಅವುಗಳನ್ನು ಒಟ್ಟಿಗೆ ಸೇರಿಸಲು ಬೇಕಾದ ಬೆಂಕಿ ಹೊತ್ತಿಸಲು ಕಟ್ಟಿಗೆ ಎಲ್ಲವೂ ಸೇರಿದಾಗ ಲಾಭವೇ ಇಲ್ಲ. ಆದರೂ ಅದೊಂದು ವೃತ್ತಿ. ಅರೆಹೊಟ್ಟೆಯನ್ನಾದರೂ ತುಂಬಿಸಿ ಬಿಡುತ್ತದೆ ಎನ್ನುವ ಧೈರ್ಯದಿಂದ ಕಳೆದ ೪೦ ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ.
ಈ ಪೋಸ್ಟರ್ ವೃತ್ತಿಯಲ್ಲಿ ನನಗೆ ಬಹಳಷ್ಟು ಕಹಿ ಘಟನೆಗಳು ಬಂದು ಹೋಗಿದೆ. ಒ ಂದು ಬಾರಿ ವಾರವಿಡೀ ಕರಾವಳಿಯನ್ನು ಸುತ್ತಾಡಿಕೊಂಡು ಪೋಸ್ಟರ್ ಅಂಟಿಸಿದೆ. ಆದರೆ ಶುಕ್ರವಾರ ಈ ಸಿನಿಮಾದ ಬದಲು ಬೇರೆ ಸಿನಿಮಾ ಹಾಕಿದ್ರು.. ನನಗಂತೂ ಹಣ ಬಂತು. ಆದರೆ ನನ್ನ ಕೆಲಸ ಹಾಳಾಗಿ ಹೋಗಿತ್ತು. ಕೆಲವೊಂದು ಮಂದಿ ತಮ್ಮ ಗೋಡೆಗಳಿಗೆ ಪೋಸ್ಟರ್ ಅಂಟಿಸಬಾರದು ಎನ್ನುವ ಕಾರಣಕ್ಕೆ ಗೋಡೆಯಲ್ಲಿ ಮೊಳೆ ಬಡಿದು ಬಿಡುತ್ತಿದ್ದರು. ಬೆಳಗ್ಗಿನ ಜಾವದ ಮಂಪರು ಕಣ್ಣಿನಲ್ಲಿ ಪೋಸ್ಟರ್ ಅಂಟಿಸಲು ಹೋದಾಗ ಮೊಳೆ ಕೈಗೆ ತಗುಲಿ ರಕ್ತ ಹರಿದ ಘಟನೆಗಳು ಬೇಕಾದಷ್ಟಿವೆ. ಮೈಲುತುತ್ತು, ಮೈದಾ, ರತಲ್ ಪೌಡರ್‌ನಿಂದ ಈ ರಕ್ತ ಮರೆಯಾಗುತ್ತಿತ್ತು. ಈ ವೃತ್ತಿಯಲ್ಲಿ ನಾಲ್ಕೈದು ಸಲ ಏಣಿಯಲ್ಲಿ ಏರಿ ಪೋಸ್ಟರ್ ಅಂಟಿಸುತ್ತಿದ್ದಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದೇನೆ. ಒಂದಲ್ಸವಂತೂ ೧೮ ಅಡಿಯಿಂದ ಕೆಳಗೆ ಬಿದ್ದು ಬಿಟ್ಟೆ. ಏನಾಯಿತು ಎನ್ನೋದು ನನಗೂ ಅರಿವಿಗೆ ಬಂದಿರಲಿಲ್ಲ. ಸೀದಾ ಸೈಕಲ್ ಏರಿಕೊಂಡು ಶರಾಬು ಅಂಗಡಿಗೆ ಹೋಗಿ ನೈಂಟಿ ಏರಿಸಿ ಮನೆಗೆ ಹೋದೆ. ಆದರೆ ನೋವು ಜಾಸ್ತಿಯಾಯಿತು. ೧೦೮ಕ್ಕೆ ಕರೆ ಮಾಡಿ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಾದೆ. ಈ ಸಂದರ್ಭದಲ್ಲಂತೂ ಯಾವ ಥಿಯೇಟರ್ ಮಾಲೀಕನೂ ನನ್ನ ನೆರವಿಗೆ ಬರಲಿಲ್ಲ. ಕೆಲವು ಥಿಯೇಟರ್ ಮಾಲೀಕರು ಅಂಟಿಸಿದ ಪೋಸ್ಟರ್‌ಗಳಿಗೆ ಹಣ ಕೊಡದೇ ಮೋಸ ಮಾಡಿದ್ರು..
ಮತ್ತೊಂದೆಡೆ ನನ್ನ ತಾಯಿ ಕೈ ಬಿಟ್ಟು ಹೋದರು. ನನಗೆ ಮದುವೆಯಾಯಿತು. ನಾಲ್ಕು ಮಕ್ಕಳಾದರು. ನಂಬಿಕೆ ಇಟ್ಟು ಮಾಡಿದ ಸಿನಿಮಾ ಪೋಸ್ಟರ್‌ಗಳಿಂದ ನನ್ನ ಬದುಕು ಸೀದಾ ಆಗಲೇ ಇಲ್ಲ. ಇದ್ದ ಬದುಕು ಮೂರಾಬಟ್ಟೆಯಾಗಿ ಮೂಲೆಗೆ ಬಿತ್ತು. ಅದಕ್ಕೆ ಈಗ ಅದನ್ನು ಬಿಟ್ಟು ಬೇರೆ ಪೋಸ್ಟರ್‌ಗಳನ್ನು ಅಂಟಿಸುವ ಕೆಲಸ ಮಾಡುತ್ತಿದ್ದೇನೆ. ಮಗನೊಬ್ಬ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈಗಲೂ ಕೆಲವೊಂದು ಸಿನಿಮಾ ನಿರ್ಮಾಪಕರೇ ಬಂದು ಪೋಸ್ಟರ್ ಅಂಟಿಸಿ ಎಂದಾಗ ಎದ್ದು ಹೋಗುತ್ತೇನೆ. ಸುಣ್ಣ ಬಳಿದ ಶುಭ್ರ ಗೋಡೆಗಳು ಪೋಸ್ಟರ್‌ಗಾಗಿ ಕಾದು ಕೂತಿದೆ ಎನ್ನುವ ಭ್ರಮೆಯಲ್ಲಿಯೇ ಪೋಸ್ಟರ್ ಅಂಟಿಸಿಕೊಂಡು ಬರುತ್ತೇನೆ. ಅಲ್ಲಿ ಹುಟ್ಟಿದ ಹಣ ಮತ್ತೆ ಶರಾಬು ಅಂಗಡಿ ಸೇರಿ ಬಿಡುತ್ತದೆ. ಹೀಗೆ ಬದುಕು ನನ್ನ ಬದುಕು ಹರಿದ ಪೋಸ್ಟರ್‌ನಂತೆ ಯಾವಾಗಲೂ ಕಣ್ಣಿಗೆ ಬಡಿಯುತ್ತದೆ.
.....
ಮಾತು : ವೆಂಕಟೇಶ ಭಟ್ಟ
ನಿರೂಪಣೆ: ಸ್ಟೀವನ್ ರೇಗೊ, ದಾರಂದಕುಕ್ಕು
(ಇದು ವಿಜಯ ಕರ್ನಾಟಕದ ಹೆಮ್ಮೆಯ ಅಂಕಣವಾದ ‘ಬದುಕು ಜಟಕಾ ಬಂಡಿ’ಯಲ್ಲಿ ೨೫.೦೭.೨೦೧೩ ಪ್ರಕಟವಾದ ಲೇಖನ)
Monday, June 17, 2013
ಫ್ಯಾಶನ್ ಖಾನ್ ಸಮೀರ್ ಖಾನ್
* ಸ್ಟೀವನ್ ರೇಗೊ
ಇದು ತೀರಾ ಹಳ್ಳಿ ಏರಿಯಾ..ಪುತ್ತೂರು ಸಿಟಿಯಿಂದ ಬರೋಬರಿ 9 ಕಿ.ಮೀ. ದೂರದಲ್ಲಿದ್ದರೂ ಇಲ್ಲಿಗೆ ಇಂದಿಗೂ ಏಳೆಂಟು ಖಾಸಗಿ ಬಸ್‌ಗಳಲ್ಲೇ ಮೈ ಮುರಿದುಕೊಂಡು ಬರುವ ಜನರಿದ್ದಾರೆ. ಮೊಬೈಲ್ ಎನ್ನುವ ಮಾಂತ್ರಿಕ ಕೂಡ ಇಲ್ಲಿಗೆ ಬಂದಾಗ ಮೌನವಾಗಿ ಬಿಡುತ್ತಾನೆ. ಎಲ್ಲಕ್ಕೂ ಮುಖ್ಯವಾಗಿ ಕೃಷಿ, ತೋಟಗಾರಿಕೆಯ ನಡುವೆ ದಿನ ಕಳೆದು ಬಿಡುವ ಕೃಷಿಕರೇ ಈ ಊರಿನ ಗತ್ತಿನ ವಿಷಯ.
ಅಂದಹಾಗೆ ಇದು ಪುತ್ತೂರಿನಿಂದ ಪಾಣಾಜೆ ಕಡೆ ಸಾಗುವ ಬುಲೇರಿಕಟ್ಟೆ ಎನ್ನುವ ಹಳ್ಳಿಯ ಮಾತು. ಇದೇ ತೋಟ, ಗದ್ದೆಯಲ್ಲಿ ಓಡಾಡಿಕೊಂಡು ಸರಕಾರಿ ಶಾಲೆಯಲ್ಲಿ ಓದಿದ ಇದೇ ಊರಿನ ಹುಡುಗನೊಬ್ಬ ಫ್ಯಾಶನ್ ಲೋಕದಲ್ಲಿ ದೊಡ್ಡ ಬ್ರಾಂಡ್ ಎಂದರೆ ಯಾರಾದರೂ ನಂಬಲು ಸಾಧ್ಯವಿಲ್ಲ. ಹತ್ತನೇ ತರಗತಿ ನೇಮ್ ಪ್ಲೇಟ್ ನೋಡಿದಾಕ್ಷಣ ಶಿಕ್ಷಣಕ್ಕೆ ಗುಡ್‌ಬಾಯ್ ಹೇಳಿ ಬೆಂಗಳೂರಿಗೆ ಓಡಿಬಂದ ಹುಡುಗನೊಬ್ಬ ಈಗ ಫ್ಯಾಶನ್ ಲೋಕದಲ್ಲಿ ಗುರುವಾಗಿ ಹೊರಬಂದಿದ್ದಾನೆ. ಇದು ಸಮೀರ್ ಖಾನ್ ಎನ್ನುವ ಫ್ಯಾಶನ್ ಕೊರಿಯೋಗ್ರಾಫರ್ ಫ್ಲಾಶ್‌ಬ್ಯಾಕ್.
ಬುಲೇರಿಕಟ್ಟೆ ಎನ್ನುವ ಹಳ್ಳಿ ಶಾಲೆಯ ಕೋಣೆಯ ಬೆಂಚಿನಲ್ಲಿ ಕೂತು ಫಸ್ಟ್ ಕ್ಲಾಸ್ ರಿಸಲ್ಟ್ ತರುತ್ತಿದ್ದ ಹುಡುಗನಿಗೆ ಫ್ಯಾಶನ್ ಲೋಕದಲ್ಲಿ ಏನೋ ಸಾಧಿಸಬೇಕೆನ್ನುವ ಕಿಚ್ಚಿತ್ತು. ಬೆಂಗಳೂರಿಗೆ ಬಂದವರೇ ಹೋಟೆಲೊಂದರಲ್ಲಿ ವೃತ್ತಿ ಹಿಡಿದರು. ಅಲ್ಲಿಗೆ ಬರುತ್ತಿದ್ದ ಫ್ಯಾಶನ್ ಲೋಕದವರ ಟಚ್‌ನಿಂದಾಗಿ ಆಗಾಗ ರ‌್ಯಾಂಪ್‌ವಾಕ್, ಪ್ರಾಡಕ್ಟ್‌ಗಾಗಿ ಮೊಡೆಲಿಂಗ್ ಮಾಡುತ್ತಾ ಫ್ಯಾಶನ್ ಲೋಕದ ಬಾಗಿಲುಬಡಿದರು. ಇದು ಫ್ಯಾಶನ್ ಲೋಕದಲ್ಲಿ ಸಮೀರ್ ಖಾನ್ ಎಂಟ್ರಿಯಾದ ಪುಟ್ಟ ಕತೆ. ಎರಡು ಮೂರು ವರ್ಷ ಫ್ಯಾಶನ್ ಲೋಕದಲ್ಲಿ ಮೊಡೆಲ್ ಆಗಿ ಗುರುತಿಸಿಕೊಂಡ ಸಮೀರ್ ಈ ನಂತರ ನಡೆದದ್ದೇ ಹಾದಿ ಎನ್ನುವ ಕತೆಯಾಯಿತು.
2004ರಲ್ಲಿ ಫ್ಯಾಶನ್ ಲೋಕದಲ್ಲಿ ರಾರಾಜಿಸುವ ಮೊಡೆಲ್‌ಗಳನ್ನು ಬೆಳೆಸುವ 'ಎಲೈಟ್ ಮೊಡೆಲ್ ಫ್ಲಾಟ್' ಎನ್ನುವ ಕಂಪನಿಯೊಂದನ್ನು ಬೆಂಗಳೂರಿನಲ್ಲಿ ಹುಟ್ಟುಹಾಕಿದ ಸಮೀರ್ ಈ ಮೂಲಕ ಸರಿಸುಮಾರು 400ಕ್ಕೂ ಅಧಿಕ ಫ್ಯಾಶನ್ ಶೋಗಳಿಗೆ ಫ್ಯಾಶನ್ ಕೊರಿಯೋಗ್ರಾಫರ್, ಗ್ರೂಮರ್ ಆಗಿ ಕೆಲಸ ಮಾಡಿದರು. 1000ಕ್ಕೂ ಅಧಿಕ ಮೊಡೆಲ್‌ಗಳಿಗೆ ತರಬೇತಿ ಕೊಟ್ಟು ಫ್ಯಾಶನ್ ಲೋಕದಲ್ಲಿ ಬಿಂದಾಸ್ ರ‌್ಯಾಂಪ್‌ವಾಕ್‌ಗೆ ಇಳಿಸಿಬಿಟ್ಟರು.
ಈ ಬಳಿಕ ದೇಶದ ಖ್ಯಾತ ಫ್ಯಾಶನ್ ಶೋಗಳಾದ ಮಿಸ್ ಕ್ವೀನ್ ಆಫ್ ಇಂಡಿಯಾ, ಮಿಸ್ ಸೌತ್ ಇಂಡಿಯಾ ಮೊದಲಾದವುಗಳಲ್ಲಿ ಸಮೀರ್ ಹೆಸರು ನಿಲುಕಾಡುತ್ತದೆ.
ಹೊಸ ಮೊಡೆಲ್‌ಗಳಿಗೆ ರ‌್ಯಾಂಪ್ ಮೇಲೆ ನಡೆಯುವುದು, ಫೋಕಸಿಂಗ್, ಅವರ ವರ್ತನೆ, ಮಾತನಾಡುವ ಕಲೆ, ಕ್ಯಾಮಾರಾ ಎಕ್ಸ್‌ಪ್ರೆಶನ್, ಮೈಕ್ ಹಿಡಿಯುವ ರೀತಿ, ಪಾರ್ಟಿ ಬಿಹೇವಿಯರ್ ಹೀಗೆ ನಾನಾ ವಿಚಾರಗಳಲ್ಲಿ ಒಂದು ತಿಂಗಳ ತರಬೇತಿ ನೀಡಲಾಗುತ್ತದೆ. ಇದು ಮಾಡೆಲ್‌ಗಳಿಗೆ ಆ ಕಿಲ್ಲಿಂಗ್ ಇನ್‌ಸ್ಟಿಂಕ್ಟ್ ಕೊಡುವ ಬಗೆ. ಆದರೆ ಈ ಎಲ್ಲ ಕೆಲಸಗಳ ನಡುವೆ ಸಮೀರ್ ಎನ್ನುವ ಫ್ಯಾಶನ್ ಕಲಾವಿದ ಎಲ್ಲೋ ಮರೆಯಾಗುತ್ತಾರೆ. ಆತನ ಫ್ಯಾಶನ್ ಲೋಕದ ತರಬೇತಿಗಳು ಎಲ್ಲರ ಗಮನ ಸೆಳೆಯುತ್ತಾ ಹೋದರು ಸಮೀರ್ ಮಾತ್ರ ವೇದಿಕೆಯ ಹಿಂದೆ ಉಳಿದು ಬಿಡುತ್ತಾರೆ.
'ಫ್ಯಾಶನ್ ಎನ್ನೋದು ನನ್ನ ಆತ್ಮ. ಅಲ್ಲಿನ ಸಣ್ಣ ಪುಟ್ಟ ತಪ್ಪುಗಳು ನನ್ನನ್ನು ಕುಗ್ಗಿಸಿ ಬಿಡುತ್ತದೆ. ಎಲ್ಲವೂ ಪರ್‌ಫೆಕ್ಟ್ ಆಗಬೇಕೆಂದರೆ ತರಬೇತಿ ಪರ್‌ಫೆಕ್ಟ್ ಆಗಿರಬೇಕು. ಅದಕ್ಕೆ ತಕ್ಕಂತೆ ರ‌್ಯಾಂಪ್ ಮೇಲೆ ಕೂಡ ಅದನ್ನೇ ಬಯಸುತ್ತೇನೆ'
- ಸಮೀರ್ ಖಾನ್, ಫ್ಯಾಶನ್ ಕೊರಿಯೋಗ್ರಾಫರ್
vk lvk published dis article on 18.06.2013)

Saturday, June 8, 2013
ತೆಪ್ಪದಲ್ಲಿ ‘ಮೌನ’ವಾದ ಬದುಕು !
ಇವರು ಮರಾಠಿ ಜನಾಂಗದವರು. ಕೂಳೂರಿನಲ್ಲಿ ಹರಿಯುತ್ತಿರುವ ಗುರುಪುರ ನದಿಯೇ ಇವರ ಪಾಲಿಗೆ ಮೂಲ ಬಂಡವಾಳ. ಈ ಹರಿಯುವ ನದಿಯಲ್ಲಿರುವ ಮೀನುಗಳೇ ಇವರಿಗೆ ಆದಾಯ. ತೆಪ್ಪವೇ ಇವರಿಗೆ ಬದುಕುವ ಊರು ಗೋಲು.
* ಸ್ಟೀವನ್ ರೇಗೊ, ದಾರಂದಕುಕ್ಕು
ತೆಪ್ಪ ಇವರ ಪಾಲಿಗೆ ನದಿ ದಾಟುವ ಸಾಧನವಲ್ಲ. ಅದೊಂದು ಬದುಕು ಕೊಡುವ ದೇವರು. ವರ್ಷವಿಡೀ ಈ ತೆಪ್ಪದಲ್ಲಿಯೇ ಕಾಲ ಕಳೆಯುತ್ತಾ ಇರುವ ಇವರಿಗೆ ತೆಪ್ಪ, ನೀರು, ಮೀನು ಈ ಮೂರು ವಿಚಾರಗಳಲ್ಲಿಯೇ ಬದುಕಿನ ಲೆಕ್ಕಚಾರಗಳು ನಡೆಯುತ್ತದೆ. ಇದರಲ್ಲಿ ಒಂದು ಕೂಡ ಕಡಿಮೆಯಾದರು ಬದುಕು ಮೂರಾಬಟ್ಟೆಯಾಗಿ ಹೋಗುತ್ತದೆ. ಇದೇ ಕಾರಣದಿಂದ ಕಳೆದ ೩೦-೪೦ ವರ್ಷಗಳಿಂದ 

ತೆಪ್ಪವನ್ನು ಬಿಟ್ಟು ಅವರು ಬದುಕೇ ಕಂಡಿಲ್ಲ. ಅಜ್ಜ, ಮಗ, ಮೊಮ್ಮಗ ಎನ್ನುವ ಸರಣಿಮಾಲಿಕೆಯೊಳಗೆ ಇವರದು ನದಿಯನ್ನು ನಂಬಿಕೊಂಡು ಕಾಲ ಕಳೆಯುವ ಪರಂಪರೆ.
ಅಂದಹಾಗೆ ಇವರು ಮರಾಠಿ ಜನಾಂಗದವರು. ಕೂಳೂರಿನಲ್ಲಿ ಹರಿಯುತ್ತಿರುವ ಗುರುಪುರ ನದಿಯೇ ಇವರ ಪಾಲಿಗೆ ಮೂಲ ಬಂಡವಾಳ. ಈ ಹರಿಯುವ ನದಿಯಲ್ಲಿರುವ ಮೀನುಗಳೇ ಇವರಿಗೆ ಆದಾಯ. ತೆಪ್ಪವೇ ಇವರಿಗೆ ಬದುಕುವ ಊರು ಗೋಲು. ಇವರು ಮೂಲತಃ ಚಿಕ್ಕಮಗಳೂರಿನ ಕಡೂರಿನಿಂದ ಮಂಗಳೂರಿಗೆ ವಲಸೆ ಬಂದವರು. ಅಲ್ಲಿಯ ಸಣ್ಣಪುಟ್ಟ ಕೃಷಿ ಭೂಮಿಯನ್ನು ಬಿಟ್ಟು ಇವರು ಗುರುಪುರದ ನದಿ ನೀರನ್ನು ನೆಚ್ಚಿಕೊಂಡರು. ಇಲ್ಲಿಯ ನೀರು ಇವರ ಕೈ ಬಿಡಲಿಲ್ಲ. ಬದುಕು ರೂಪಿಸಿ ಹಾಕಿತು ಎನ್ನುವುದು ಮರಾಠಿ ಜನಾಂಗದವರ ಅನುಭವದ ಮಾತು.
ಮರಾಠವಾಡದಲ್ಲಿ ಶಿವಾಜಿ ಆಳ್ವಿಕೆಯಲ್ಲಿ ನಮ್ಮ ಪೂರ್ವಿಕರು ಮಹಾರಾಷ್ಟ್ರದಿಂದ ಚಿಕ್ಕಮಗಳೂರು ಕಡೆಗೆ ಬಂದರು. ಮರಾಠವಾಡದ ಕಾರಣ ಮರಾಠಿ ನಮ್ಮ ಜನಾಂಗದ ಮಾತೃಭಾಷೆಯಾಗಿ ಉಳಿದು ಹೋಯಿತು. ೩೦-೪೦ ವರ್ಷಗಳಿಂದ ಮಂಗಳೂರಿನಲ್ಲೇ ಬದುಕುತ್ತಿದ್ದೇವೆ. ಆಗಾಗ ಚಿಕ್ಕಮಗಳೂರಿಗೆ ಹೋಗಿ ಬರುತ್ತಿದ್ದೇವು. ಆದರೆ ಕಳೆದ ೨೦ ವರ್ಷಗಳಿಂದ ನಾವು ಇಲ್ಲಿಯೇ ವಾಸವಾಗಿದ್ದೇವೆ ಎನ್ನುತ್ತಾರೆ ಮರಾಠಿ ಜನಾಂಗದ ಪಕೀರಪ್ಪ.
ಭದ್ರಾವತಿಯ ತೆಪ್ಪ, ಕುಡ್ಲದ ಬಲೆ :
ಮರಾಠಿ ಜನಾಂಗದ ಕರಿಸ್ವಾಮಿ ಹೇಳುವ ಮಾತು ಹೀಗೆ : ನಮಗೆ ಬೇಕಾದ ತೆಪ್ಪಗಳು ಇಲ್ಲಿ ಎಲ್ಲೂ ಸಿಗೋಲ್ಲ. ಕುಡ್ಲದಲ್ಲಿ ಬಹಳಷ್ಟು ಕಡೆ ಹುಡುಕಾಡಿದೇವು.. ಆದರೆ ತೆಪ್ಪ ಬದಲು ಬೋಟ್ ಮಾಡಿ ಕೋಡ್ತೀವಿ ಅಂತಾ ಹೇಳುತ್ತಾರೆ. ಇದು ನಮ್ಮ ವೃತ್ತಿಗೆ ಸರಿ ಆಗೋದಿಲ್ಲ. ಇದರಿಂದ ಭದ್ರಾವತಿಯಿಂದ ನಾಲ್ಕೈದು ಸಾವಿರ ರೂ. ಕೊಟ್ಟು ತೆಪ್ಪ ತರುತ್ತೇವೆ. ಮೂರು ಸಾವಿರ ರೂ ಕೊಟ್ಟು ಇಲ್ಲಿಯೇ ಬಲೆ ಸಿದ್ಧ ಪಡಿಸುತ್ತೇವೆ.
ಜನಾಂಗದ ಅಣ್ಣಯ್ಯ ಹೇಳುವಂತೆ: ಈ ಮೀನು ವ್ಯಾಪಾರದಲ್ಲಿ ಕೆಲವೊಂದು ಸಲ ಲಾಭ ಬಂದರೆ ಬಹಳಷ್ಟು ಸಲ ನಷ್ಟವೇ ಬಂದು ಹೋಗುತ್ತದೆ. ನೀರಿನ ಹರಿವಿನ ಅಂದಾಜು ಲೆಕ್ಕಚಾರದಲ್ಲಿ ಮೀನುಗಾರಿಕೆಗೆ ಇಳಿಯಬೇಕು. ಒಂದೊಂದು ಬಾರಿ ಎರಡು- ಮೂರು ಸಾವಿರ ಬಂದರೆ ಇನ್ನು ಕೆಲವು ಸಲ ಐನೂರು ರೂ. ಮೀನುಗಳಲ್ಲಿ ತೃಪ್ತಿ ಕಾಣಬೇಕು. ಎಲ್ಲವೂ ಮಲ್ಲಮ್ಮ ದೇವಿಯನ್ನು ನಂಬಿಕೊಂಡು ಮೀನುಗಾರಿಕೆಗೆ ಇಳಿಯುತ್ತೇವೆ. ಹತ್ತಿರದ ಮಾರುಕಟ್ಟೆಯಲ್ಲಿ ನದಿ ಮೀನುಗಳಿಗೆ ಬಾರಿ ಡಿಮ್ಯಾಂಡ್ ಇರುತ್ತದೆ. ಹೆಚ್ಚಾಗಿ ತೇಡೆ ಮೀನು, ಬೆರಕ್ಕೆ ಮೀನುಗಳೇ ಜಾಸ್ತಿ ಬಂದು ಬೀಳುತ್ತದೆ.
ತೆಪ್ಪದವರಿಗೆ ಸವಲತ್ತುಗಳು ಗಗನ ಕುಸುಮ :
ಮಳೆ, ಬಿಸಿಲು, ಚಳಿ ಈ ಮೂರು ಕಾಲದಲ್ಲೂ ಮೀನುಗಾರಿಕೆಯಂತೂ ನಿಲ್ಲಿಸೋದೇ ಇಲ್ಲ. ಎಷ್ಟೇ ಜೋರಾಗಿ ಮಳೆ ಬಂದರೂ ತೆಪ್ಪ ನದಿಗೆ ಬಿಟ್ಟು ಮೀನು ಹಿಡಿಯುತ್ತೇವೆ. ಎಲ್ಲವೂ ದೇವರ ಮೇಲೆ ಭಾರ. ಬದುಕು ಕೊಡುವವನು ಅವನು... ಬದುಕು ಕಿತ್ತುಕೊಳ್ಳೋವವನು ಅವನು...ಎನ್ನುವ ಮಾತಿನಲ್ಲೇ ನಮಗೆ ನಂಬಿಕೆ ಎನ್ನುತ್ತಾರೆ ಪಕೀರಪ್ಪ.
ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಈ ವೃತ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಶಾಲೆಗೆ ಹೋದವರು ಬಹಳ ಕಡಿಮೆ. ಎಲ್ಲರೂ ಎರಡು- ಮೂರು ತರಗತಿಯಲ್ಲೇ ಶಾಲೆ ಬಿಟ್ಟು ಮೀನು ಹಿಡಿಯುವ ಕಸಬಿಗೆ ಅಂಟಿಕೊಂಡರು ಎನ್ನುವುದು ಕರಿಸ್ವಾಮಿಯ ಮಾತು.
ರೇಷನ್ ಕಾರ್ಡ್, ಮತದಾನದ ಹಕ್ಕು ಹೀಗೆ ಸರಕಾರದಿಂದ ಸಿಗುವ ಯಾವುದೇ ಸವಲತ್ತುಗಳು ಇವರನ್ನು ಹರಸಿಕೊಂಡು ಬಂದಿಲ್ಲ. ನಾವು ಇದ್ದೇವೆ ಎನ್ನುವುದಕ್ಕೂ ನಮ್ಮ ಬಳಿಯಲ್ಲಿ ದಾಖಲೆಗಳೇ ಇಲ್ಲ. ಆದ್ರೂ ನಾವು ಬೇಡಿಕೊಂಡು ಎಲ್ಲಿಗೂ ಹೋಗೋದಿಲ್ಲ. ನಮಗೆ ದೇವರು ದುಡಿಯಲು ಶಕ್ತಿ ಕೊಟ್ಟಿದ್ದಾನೆ. ಇದೇ ನಮಗೆ ದೊಡ್ಡ ಕೊಡುಗೆ ಎಂದು ಬಿಡುತ್ತಾರೆ ಪಕೀರಪ್ಪ.
ಟೋಟಲಿ ತೆಪ್ಪದಲ್ಲಿ ಅರಳುವ ಇವರ ಬದುಕು ಒಂದು ರೋಚಕತೆ ನಡುವೆ ನೋಡುಗರನ್ನು ಮೌನಕ್ಕೆ ಶರಣು ಹೊಡೆಯುವಂತೆ ಮಾಡಿ ಬಿಡುತ್ತದೆ. ಎಲ್ಲಕ್ಕೂ ಸರಕಾರವೇ ಮಾಡಬೇಕು ಎನ್ನುವ ಮಾತಿನಲ್ಲೇ ಬದುಕುವ ಸಮಾಜಕ್ಕೆ ಈ ಮೀನುಗಾರರು ಭಿನ್ನತೆಯ ಪಾಠ ಹೇಳಿಕೊಡುತ್ತಾರೆ.
ಸಿನಿಮಾ ಅಂದ್ರೆ ಪಂಚಪ್ರಾಣ:
ಕನ್ನಡ, ಹಿಂದಿ ಸಿನಿಮಾಗಳೆಂದರೆ ನಮ್ಮವರಿಗೆ ಪಂಚಪ್ರಾಣ. ಮನೆಯಲ್ಲಂತೂ ಟಿವಿ ಇಲ್ಲ ಎಲ್ಲವೂ ಎಫ್‌ಎಂಗಳಿಗೆ ಮೊರೆ ಹೋಗುತ್ತೇವೆ. ದಿನಕ್ಕೆರಡು ಬಾರಿ ನದಿಗೆ ಇಳಿದರೆ ಉಳಿದ ಸಮಯ ಎಲ್ಲವೂ ನಮಗೆ ಫ್ರಿಯಾಗಿ ಹಾಡು ಕೇಳುತ್ತಾ ಬದುಕು ದೂಡುತ್ತೇವೆ. ಪೋಸ್ಟರ್‌ಗಳನ್ನು ನೋಡುತ್ತಾ ಸಿನಿಮಾಗಳನ್ನು ಆಯ್ಕೆ ಮಾಡುವ ನಾವು ಶಿವರಾಜ್ ಕುಮಾರ್ ನಟಿಸಿದ ಗಡಿಬಿಡಿ ಅಳಿಯದಲ್ಲಿ ನಟಿಸಿದ್ದೇವೆ ಎನ್ನುತ್ತಾರೆ ಪಕೀರಪ್ಪ.
(vk nammkaravali published dis story on 9.06.2013)
................

Monday, June 3, 2013
ತುಳು ಫಿಲಂಗೆ ರಮೇಶ್
ಸ್ಟೀವನ್ ರೇಗೊ
ವರ್ಷದಲ್ಲಿ ಒಂದೆರಡು ಚಿತ್ರಗಳಿಗೆ ಸುಮ್ಮನಾಗುತ್ತಿದ್ದ ಕೋಸ್ಟಲ್‌ವುಡ್‌ನಲ್ಲಿ ಈಗ ಭರ್ಜರಿ ಫಸಲಿನ ಕಾಲ ಬಂದಿದೆ. ಮತ್ತೊಂದೆಡೆ ತುಳು ಚಿತ್ರದಲ್ಲಿ ನಟಿಸಲು ಸ್ಯಾಂಡಲ್‌ವುಡ್ ನಟ, ನಟಿಯರು ಮುಂದೆ ಬರುತ್ತಿರುವುದು ಕೋಸ್ಟಲ್‌ವುಡ್ ಮಾರುಕಟ್ಟೆ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಇಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ 'ನಿರೆಲ್'( ನೆರಳು) ಚಿತ್ರದಲ್ಲಿ ಪಂಚಭಾಷೆ ನಟ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲುಗು ಚಿತ್ರಗಳಲ್ಲಿ ಪ್ರಬುದ್ಧ ನಟನೆ ಮೂಲಕ ಖ್ಯಾತಿಗಳಿಸಿರುವ ರಮೇಶ್ ಅರವಿಂದ್‌ಗೆ ಇದು ಮೊದಲ ತುಳು ಚಿತ್ರ. ತುಳು ಭಾಷೆಯಲ್ಲೂ ಇದೊಂದು ಉತ್ತಮ ಪ್ರಯೋಗ ಎನ್ನುತ್ತಿದೆ ಚಿತ್ರತಂಡ. ನಿರೆಲ್ ಚಿತ್ರದ ಬಹುಭಾಗ ಚಿತ್ರೀಕರಣಗೊಳ್ಳುತ್ತಿರುವುದು ವಿದೇಶದ ರಮಣೀಯ ತಾಣಗಳಲ್ಲಿ. ಈ ಕಾರಣದಿಂದ ತುಳುವಿನ ಮೊದಲ ಹಾಗೂ ಭರ್ಜರಿ ವೆಚ್ಚದ ಚಿತ್ರ ಎನ್ನುವ ಹಣೆಪಟ್ಟಿ ಈ ಚಿತ್ರಕ್ಕೆ ದೊರಕಿದೆ. ಬಹುತೇಕ ಚಿತ್ರೀಕರಣ ದುಬೈನಲ್ಲಿ ನಡೆಯಲಿದೆ.
ಮಂಗಳೂರಿನ ಬಜಪೆಯ ರಂಜಿತ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ದುಬಾಯಿಯಲ್ಲಿ ಕೆಲಸ ಮಾಡುತ್ತಿರುವ ರಂಜಿತ್ ಪಾಲಿಗೆ ಇದು ಮೊದಲ ಚಿತ್ರ. ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಶೋಧನ್ ಪ್ರಸಾದ್ ವಹಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶನದ ಹೊಣೆಯನ್ನು ಅಭಿಷೇಕ್ ಹಾಗೂ ಚಿತ್ರದಲ್ಲಿ ಮಂಗಳೂರು ಮೂಲದ ರೂಪದರ್ಶಿ ರಿಯಾ ಡಿಸೋಜ, ದೀಪ್ತಿ, ಅನೂಪ್, ವರುಣ್ ಶೆಟ್ಟಿ ಅಭಿನಯಿಸಲಿದ್ದಾರೆ. ಚಿತ್ರ ಈ ವರ್ಷದ ಕೊನೆ ಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎನ್ನೋದು ಚಿತ್ರತಂಡದ ಮಾತು.
'ನಿರೆಲ್ ಚಿತ್ರದಲ್ಲಿ ನನ್ನ ಪಾತ್ರ ಕುರಿತು ಹೇಳುವುದಕ್ಕಿಂತ ಹೆಚ್ಚಾಗಿ ಚಿತ್ರತಂಡದ ಕುರಿತು ಹೇಳುವುದು ಬಹಳಷ್ಟಿದೆ. ಎಲ್ಲರೂ ಯುವಕರು ಅದಕ್ಕೂ ಹೆಚ್ಚಾಗಿ ವಾರವಿಡೀ ವಿದೇಶದಲ್ಲಿ ದುಡಿದು ರಜೆಯ ದಿನ ಚಿತ್ರೀಕರಣಕ್ಕೆ ಇಳಿಯುತ್ತಾರೆ. ಚಿತ್ರದಲ್ಲಿ ನಾನು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನಗೆ ತುಳು ಭಾಷೆ ಬರೋದಿಲ್ಲ. ಆದ್ರೂ ಡೈಲಾಗ್‌ಗಳನ್ನು ಕೊಟ್ಟಿದ್ದಾರೆ. ಚಿತ್ರದ ನಾಯಕನಿಗೆ ನೆರವಾಗುವ ಪಾತ್ರ ನನಗೆ ಬಹಳ ಇಷ್ಟವಾಯಿತು. ಈ ಕಾರಣದಿಂದ ಚಿತ್ರ ಮಾಡಲು ಒಪ್ಪಿಕೊಂಡೆ' ಎನ್ನುತ್ತಾರೆ ರಮೇಶ್ ಅರವಿಂದ್.
ರಮೇಶ್ ಅರವಿಂದ್ ಇನ್ನಷ್ಟೂ ತುಳು ಚಿತ್ರಗಳಲ್ಲಿ ನಟಿಸಲು ಇಷ್ಟಪಟ್ಟಿದ್ದಾರಂತೆ. ಆದರೆ ಅವರಿಗೆ ಒಪ್ಪುವಂತಹ ಸಬ್ಜೆಕ್ಟ್ ಇರಲೇಬೇಕು. ಅದಕ್ಕೂ ಮುಖ್ಯವಾಗಿ ಚಿತ್ರದಲ್ಲಿ ಅವರಿಗೆ ಲಾಯಕ್ಕಾದ ಪಾತ್ರ ಬೇಕು. ಅದೇ ಅವರ ಕರಾರು. ಸದ್ಯಕ್ಕೆ 'ಮಂಗನ ಕೈಯಲ್ಲಿ ಮಾಣಿಕ್ಯ' ಹಾಗೂ ತಮಿಳಿನಲ್ಲಿ 'ಮಚ್ಚಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲೂ ಇನ್ನೆರಡು ಚಿತ್ರಗಳು ಇವೆಯಂತೆ.
'ಇದು ನನಗೆ ಹೊಸ ಅನುಭವ. ಹೊಸ ಭಾಷೆ, ಸಂಸ್ಕೃತಿಯನ್ನು ಅರಿಯುವುದು ನನಗೆ ಇಷ್ಟವಾಗಿರುವುದರಿಂದ ನಿರೆಲ್ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಚಿತ್ರದಲ್ಲಿ ಸಣ್ಣ ಪಾತ್ರ. ಅದಕ್ಕೂ ಮುಖ್ಯವಾಗಿ ಇಷ್ಟವಾಗುವ ಪಾತ್ರ'
-ರಮೇಶ್ ಅರವಿಂದ್
vk lvk published dis ariticle on 4.05.2013
Sunday, May 19, 2013
ರಾಕಿಂಗ್ ಕುಡ್ಲದಲ್ಲಿ ಮಿಂಚಿದ ಫ್ಯಾಶನ್ ಪರೇಡ್ !
* ಸ್ಟೀವನ್ ರೇಗೊ, ದಾರಂದಕುಕ್ಕು
ಕುಡ್ಲದಲ್ಲಿ ಫ್ಯಾಶನ್ ಪರೇಡ್ ಎನ್ನುವ ಕಲ್ಪನೆಯೇ ಒಂದು ಗಟ್ಟಿತನದ ಮಾತು. ಟೋಟಲಿ ಸೂಕ್ಷ್ಮ ಕೇಂದ್ರಗಳಲ್ಲಿ ಒಂದು ಎಂದು ಪರಿಗಣಿಸುವ ಕುಡ್ಲದ ಸಿಟಿ ಲೈಫ್‌ನಲ್ಲಿ ಯುವಕ-ಯುವತಿಯರ ಕಣ್ಮನ ಸೆಳೆಯುವ ಬೆಳಕಿನಲ್ಲಿ ರ‍್ಯಾಂಪ್‌ವಾಕ್ ಮಾಡಿಕೊಂಡು ಕಂಗೋಳಿಸಿದ್ದು.. ನಿಮ್ಗೆ ಗೊತ್ತಾ..?.. ಹೌದು ಇದು ಮಿಸ್ ಮಂಗಳೂರು ಆಂಡ್ ಮಿಸ್ಟರ್ ಮಂಗಳೂರು ಎನ್ನುವ ವಿನೂತನ ಸ್ಪರ್ಧೆಯ ಒಂದು ರಂಗೀನ್ ನೋಟದ ಮಾತು.
ಮಂಗಳೂರಿನ ಉಳ್ಳಾಲದಲ್ಲಿರುವ ಸಮ್ಮರ್ ಸ್ಯಾಂಡ್‌ನಲ್ಲಿ ಸಿದ್ಧಗೊಂಡಿದ್ದ ಭವ್ಯ ವೇದಿಕೆಯ ಮೇಲೆ ೧೫ ಮೊಡೆಲ್‌ಗಳು ರ‍್ಯಾಂಪ್‌ವಾಕ್‌ನಲ್ಲಿ ಕಂಗೋಳಿಸಿದರು. ಮತ್ತೊಂದೆಡೆ ಯುವಕರು ಕೂಡ ತಮ್ಮ ಸೌಂದರ್ಯವನ್ನು ಬಿಚ್ಚಿಡಲು ರ‍್ಯಾಂಪ್‌ವಾಕ್‌ನ ಆಸರೆಗೆ ಮೊರೆ ಹೋದರು. ಮಿರಿಮಿರಿ ಮಿನುಗುವ ಬಣ್ಣದ ದೀಪಗಳು ಇಡೀ ವೇದಿಕೆಯನ್ನು ರಾಕಿಂಗ್ ಮಾಡಿ ಹಾಕಿತ್ತು.
ವೆಸ್ಟರ್ನ್ ಹಾಗೂ ಶಾಸ್ತ್ರೀಯ ಸಂಗೀತದ ಹದವಾದ ಮಿಶ್ರಣದಲ್ಲಿ ಮೂಡು ಬರುತ್ತಿದ್ದ ಹಾಡುಗಳ ತಾಳಕ್ಕೆ ಮೊಡೆಲ್‌ಗಳು ಕ್ಯಾಟ್‌ವಾಕ್ ಭಿನ್ನ ಲೋಕದ ಪ್ರಯಾಣದಲ್ಲಿ ಸಾಥ್ ಕೊಡುವಂತಿತ್ತು. ರ‍್ಯಾಂಪ್‌ವಾಕರ್‌ಗಳ ಮೋಹಕ ನಡೆಗೆ ದಂಗಾಗಿ ವೇದಿಕೆಯ ಕೆಳಗೆ ಕೂತ ಪ್ರೇಕ್ಷಕರು ಟೋಟಲಿ ಬೋಲ್ಡ್ ಆಗಿ ಉಳಿದು ಹೋದರು. ಸದಾ ಕಾಲ ಹೊಸ ಹವಾ ಸೃಷ್ಟಿ ಮಾಡಿಕೊಂಡು ಮುನ್ನುಗ್ಗುತ್ತಿರುವ ಕುಡ್ಲದಲ್ಲಿ ಇದೇ ಮೊದಲ ಬಾರಿಗೆ ಮಿಸ್ ಮಂಗಳೂರು, ಮಿಸ್ಟರ್ ಮಂಗಳೂರು ಎನ್ನುವ ವಿನೂತನ ಸ್ಪರ್ಧೆ ಕಡಲತಡಿಯ ಫ್ಯಾಶನ್ ಪ್ರಿಯರ ಹೃದಯಕ್ಕೆ ಲಗ್ಗೆ ಹಾಕಿತ್ತು.
ಎಲ್ಲಿಯ ಮೊಡೆಲ್‌ಗಳು ಅಂತೀರಾ:
ಮಂಗಳೂರು ಅದರಲ್ಲೂ ತುಳುನಾಡಿನಲ್ಲಿ ಹುಟ್ಟಿ ನಂತರ ದೇಶ- ವಿದೇಶದಲ್ಲಿರುವ ನಾನಾ ಸುಂದರ ಯುವಕ-ಯುವತಿಯರನ್ನು ಒಂದು ಅಂರ್ತಜಾಲ ತಾಣದ ಮೂಲಕ ಬರೆ ಸೆಳೆದು ಅಲ್ಲಿ ಮತದಾನ ಮಾಡಿ ಅಲ್ಲಿ ಗೆದ್ದು ಬಂದ ೧೫ ಮೊಡೆಲ್‌ಗಳನ್ನು ಫೈನಲ್‌ಗೆ ಆಯ್ಕೆ ಮಾಡಿಕೊಂಡು ಅಲ್ಲಿ ರ‍್ಯಾಂಪ್‌ವಾಕ್ ಜತೆಗೆ ಪ್ರಶ್ನೆ- ಉತ್ತರಗಳ ಮೂಲಕ ವಿಜೇತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿತ್ತು. ಮಂಗಳೂರು ಮೂಲದ ಡ್ರೀಮ್ ಕ್ರಾಪ್ಟ್ ಹಾಗೂ ಮುಂಬಯಿ ಇವೆಂಟ್ ಮ್ಯಾನೇಜರ್ ತಂಡ ಔರಾ ಸಿನಿ ವೇಸ್ತಾ ಈ ಸ್ಪರ್ಧೆಯನ್ನು ಆಯೋಜಿಸಿತ್ತು. ಇಲ್ಲಿ ಗೆದ್ದು ಬಂದ ಮಿಸ್ ಮಂಗಳೂರು ವಿನ್ನರ‍್ಸ್ ಗಳಿಗೆ ವಿದೇಶ ಪ್ರಯಾಣ, ಸಿನಿಮಾದಲ್ಲಿ ನಟನೆ ಹಾಗೂ ಬ್ರಾಂಡ್ ಅಂಬಾಸೀಡರ್ ಆಗುವ ಅವಕಾಶ ಲಭ್ಯವಾಗಲಿದೆ. ಇದರ ಜತೆಯಲ್ಲಿ ಸೌತ್ ಮಿಸ್ ಇಂಡಿಯಾ-೨೦೧೪ಗೆ ನೇರ ಪ್ರವೇಶ ಸಿಗಲಿದೆ. ರನ್ನರ‍್ಸ್‌ಗಳಿಗೆ ದೇಶ ನಾನಾ ರಾಜ್ಯಗಳಿಗೆ ಪ್ರವಾಸದ ಅವಕಾಶ ಸಿಗಲಿದೆ.
ಕೋಟ್ ಕಾರ್ನರ್:
‘ಕುಡ್ಲದಲ್ಲಿ ಇಂತಹ ಸ್ಪರ್ಧೆ ಮಾಡೋದು ಅಷ್ಟೊಂದು ಸುಲಭದ ಮಾತು ಆಗಿರಲಿಲ್ಲ. ಇಲ್ಲಿ ಇಂತಹ ಸ್ಪರ್ಧೆಯ ಮೂಲಕ ಸೌಂದರ್ಯ ಲೋಕದ ಅನಾವರಣ ಮಾಡುವ ಕೆಲಸ ನಡೆದಿದೆ. ಕರಾವಳಿ ಬರೀ ಆಚಾರ- ವಿಚಾರಗಳ ಜತೆಗೆ ಸೌಂದರ್ಯ ಸ್ಪರ್ಧೆಗಳಿಗೂ ಮನ್ನಣೆ ಸಿಗಬೇಕು’
ಚರಣ್ ಸುವರ್ಣ
ಮಿಸ್ ಮಂಗಳೂರು ಆಯೋಜಕರು
...
ಕೋಟ್ ಕಾರ್ನರ್
‘ಮಿಸ್ ಮಂಗಳೂರಿಗೆ ಈ ಬಾರಿ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ. ಮಿಸ್ ಮಂಗಳೂರಿಗೆ ಸರಿಸುಮಾರು ೨೭೦ಕ್ಕೂ ಅಧಿಕ ಎಂಟ್ರಿಗಳು ಬಂದಿತ್ತು. ಮಿಸ್ಟರ್ ಮಂಗಳೂರಿಗೆ ೭೦ ಎಂಟ್ರಿ ಬಂದಿತ್ತು. ಅದರಲ್ಲಿ ಆಯ್ಕೆ ಮಾಡೋದು ಸುಲಭದ ವಿಚಾರವಲ್ಲ. ಅದಕ್ಕಾಗಿಯೇ ವಿಶೇಷ ತಜ್ಞರ ತಂಡವನ್ನೇ ತೀರ್ಪುಗಾರರಾಗಿ ಆಯ್ಕೆ ಮಾಡಿಕೊಂಡಿದ್ದೇವು. ಎಂಟ್ರಿಗಳಲ್ಲಿ ಕರಾವಳಿ ಮೂಲದ ಬೆಂಗಳೂರು, ಮೈಸೂರು, ಮುಂಬಯಿಯಿಂದ ಸ್ಫರ್ಧಿಗಳು ಕಾಣಿಸಿಕೊಂಡಿದ್ದು ವಿಶೇಷ’
-
ಮುಖ್ಯಸ್ಥರು, ಡ್ರೀಮ್ ಕ್ರಾಪ್ಟ್ ಮಂಗಳೂರು.
ಸೌಂದರ್ಯ ಸ್ಪರ್ಧೆಯ ವಿನ್ನರ‍್ಸ್
ಮಿಸ್ಟರ್ ಮಂಗಳೂರು ಕಿರೀಟ:
ಶೈನಿ ಶೆಟ್ಟಿ, ಮಂಗಳೂರು
ಮಿಸ್ ಮಂಗಳೂರು ಕಿರೀಟ:
ಅದಿತಿ ಶೆಟ್ಟಿ, ಮುಂಬಯಿ
ಸೆಲೆಬ್ರಿಟಿ ಗೆಸ್ಟ್ ಆಪಿರೀಯನ್ಸ್
ಶಿವಾಸ್ ಮುಂಬಯಿಯ ಶಿವರಾಮ್ ಭಂಡಾರಿ
ಫ್ಯಾಶನ್ ಕೊರಿಯೋಗ್ರಾಫರ್ ಸಮೀರ್ ಖಾನ್
ಮಿಸ್ ಸೌತ್ ಇಂಡಿಯಾದ ಹೆಡ್ ಅಜಿತ್ ರವಿ
Sunday, April 21, 2013
ಪೂಜಾ ಗುಪ್ತಾ ಹೊಸ ರಂಗು !
* ಸ್ಟೀವನ್ ರೇಗೊ, ದಾರಂದಕುಕ್ಕು
ಪಕ್ಕಾ ವೆಜ್ ಹುಡುಗಿ ಆದರೂ ಹಾಟ್‌ನೆಸ್ ಎನ್ನುವ ಮಂತ್ರ ಅವಳನ್ನು ನೋಡಿದಾಗ ಪಠಿಸಿ ಹೋಗುತ್ತದೆ. ತೆಳ್ಳಗೆ ಬೆಳ್ಳಗೆ ಇರುವ ಈ ಬಳುಕಿನ ಬಳ್ಳಿಯ ಹೆಸರೇ ಪೂಜಾ ಗುಪ್ತಾ. ಬಾಲಿವುಡ್ ಪಡಸಾಲೆಯಲ್ಲಿ ಹೊಸ ಎಂಟ್ರಿ ಎನ್ನುವುದಾದರೆ ಅದು ಟೋಟಲಿ ತಪ್ಪು. ಕೋರಿಯೋಗ್ರಾಫರ್ ರೆಮೋ ಡಿ ಸೋಜರ 'ಫಾಲ್ತೂ' ಸಿನಿಮಾದಲ್ಲಿ ಪೂಜಾ ಚಾನ್ಸ್ ಗಿಟ್ಟಿಸಿಕೊಂಡು ಗೆದ್ದು ಬಂದಿದ್ದಳು. ಇದೇ ಪೂಜಾ ನಾನ್ ವೆಜ್ ಎಂದಿಗೂ ಮುಟ್ಟುವುದೇ ಇಲ್ಲ ಎಂದುಕೊಂಡು ಪೇಟಾ ಇಂಡಿಯಾದ ಲೋಗೋ ಅಂಟಿಸಿಕೊಂಡಿದ್ದಳು.
ಅಂದಹಾಗೆ 2007ರಲ್ಲಿ ಪೂಜಾ ಎಕ್ಸ್ ಮಿಸ್ ಇಂಡಿಯಾ ಯೂನಿವರ್ಸ್ ಎನ್ನುವ ಕಿರೀಟ ಹೊತ್ತುಕೊಂಡು ಮೆರದಾಕೆ ಅದರಲ್ಲೂ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 9 ಸ್ಥಾನದಲ್ಲಿ ಕೂತು ಬೆರಗು ಮೂಡಿಸಿದ್ದಳು. ಪೂಜಾ ದಿಲ್ಲಿಯ ಗಲ್ಲಿಯಲ್ಲಿ ಓದಿದ್ದು, ಬೆಳೆದಿದ್ದು. ಆದರೆ ರ‌್ಯಾಂಪ್ ಮೇಲೆ ಓಡಿದ್ದು ಮಾತ್ರ ಮುಂಬಯಿ ಎನ್ನುವ ಬಣ್ಣದ ನಗರಿಯಲ್ಲಿ. ಜರ್ಮನಿಯಲ್ಲಿ ಭಾರತೀಯ ಪ್ರವಾಸೋದ್ಯಮ ರಾಯಬಾರಿ ಸೇರಿದಂತೆ ಏಡ್ಸ್ ಕುರಿತಾಗಿ ಜಾಗೃತಿ ಹುಟ್ಟುಹಾಕುವ ಕೆಲಸದಲ್ಲೂ ಪೂಜಾ ಸಿಕ್ಕಾಪಟ್ಟೆ ಕೆಲಸ ಮಾಡಿಕೊಂಡು ಬಂದಿದ್ದಾರೆ.
ಮಹಿಳೆಯರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಂಡು ಸ್ವತಂತ್ರವಾಗಿ ಬದುಕಬೇಕು ಎನ್ನುವ ವಾದದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪೂಜಾ ಗುಪ್ತಾ, ಮಾರ್ಶಲ್ ಆರ್ಟ್ಸ್ ಕಲೆಯನ್ನು ಜಪಾನಿನಿಂದ ಕಲಿತುಕೊಂಡು ಬಂದಿದ್ದಾರೆ. ಮಾರ್ಶಲ್ ಆರ್ಟ್ಸ್ ಗೆ ಸಂಬಂಧಪಟ್ಟ ಬಹುತೇಕ ಪಂದ್ಯಾಟಗಳಲ್ಲಿ ಪ್ರಶಸ್ತಿ ಗೆದ್ದು ಬಂದಿರುವ ಪೂಜಾಳ ಮನೆಯ ತುಂಬಾ ಗೆದ್ದುಕೊಂಡಿರುವ ಪ್ರಶಸ್ತಿಗಳ ಸಾಲೇ ಕೂತಿದೆ. ಈಗ ಪೂಜಾ ಬಟ್ಟಲಿನಲ್ಲಿ ಎರಡು ಚಿತ್ರಗಳಿವೆ. ಒಂದು ಗೋ ಗೋ ಗೋವಾ ಹಾಗೂ ಸುಸೈ ಗಣೇಶನ್ ಅವರ ಶಾರ್ಟ್‌ಕಟ್ ರೋಮಿಯೋ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎರಡು ಚಿತ್ರಗಳು ಇದೇ ತಿಂಗಳಲ್ಲಿ ಥಿಯೇಟರ್‌ಗೆ ಬಡಿಯುವ ಸಾಧ್ಯತೆ ಇದೆ.
ಸೈಫ್, ನೀಲ್ ನಿತಿನ್ ಪೂಜಾರ ಬೆಸ್ಟ್ ಫ್ರೆಂಡ್ಸ್:
ಗೋ ಗೋ ಗೋವಾ ಸಿನಿಮಾದಲ್ಲಿ ಒಟ್ಟಾದ ಪೂಜಾ ಹಾಗೂ ಸೈಫ್ ತುಂಬಾನೇ ಕ್ಲೋಸ್ ಫ್ರೆಂಡ್ಸ್. ಸೈಫ್ ಕುರಿತು ಪೂಜಾ ಹೇಳುವುದಿಷ್ಟು: ತುಂಬಾನೇ ನೇರವಾಗಿ ಮಾತಿಗೆ ಇಳಿಯುವ ಸೈಫ್ ಪಾತ್ರದಲ್ಲೂ ಅಷ್ಟೇ ಆಳವಾಗಿ ನುಗ್ಗಿ ಬಿಡುತ್ತಾರೆ. ಗೋ ಗೋ ಗೋವಾದಲ್ಲಿ ನಮ್ಮಿಬ್ಬರ ಕೆಮೆಸ್ಟ್ರಿ ತುಂಬಾನೇ ಚೆನ್ನಾಗಿ ವರ್ಕ್ ಆಗಿದೆ ಎನ್ನೋದು ಚಿತ್ರದ ಪ್ರೋಮೋಗಳನ್ನು ನೋಡಿದ ಪ್ರೇಕ್ಷಕರು ಹೇಳುವ ಮಾತು ಎನ್ನುತ್ತಾರೆ ಪೂಜಾ.
ಶಾರ್ಟ್‌ಕಟ್ ನಲ್ಲೂ ನೀಲ್ ನಿತಿನ್ ಮುಕೇಶ್ ತುಂಬಾ ಒಳ್ಳೆಯ ಗೆಳೆಯ. ನಟನೆ ಕುರಿತು ನನಗೆ ಆಗಾಗ ಟಿಪ್ಸ್ ಕೊಡುತ್ತಾ ಇರುತ್ತಾರೆ. ಚಿತ್ರವನ್ನು ಕೀನ್ಯಾದಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ ಮಾಸಾಮೀರಾದಲ್ಲಿ 45 ಡಿಗ್ರಿ ಉಷ್ಣಾಂಶ ಇತ್ತು. ಚಿತ್ರ ಕಾಡಿನ ನಡುವೆ ನಡೆಯುತ್ತಿತ್ತು. ಅಲ್ಲಿ ಯಾವುದೇ ಏರ್‌ಕಂಡೀಷನ್, ತಂಪು ನೀರು ಇರಲೇ ಇರಲಿಲ್ಲ. ನಾಲ್ಕು ದಿನಗಳ ಕಾಲ ಈ ಚಿತ್ರೀಕರಣದಲ್ಲಿ ನನಗೆ ಹಾಗೂ ನೀಲ್‌ಗೆ ಸನ್ ಬ್ರನ್ಸ್ ಉಂಟಾಗಿತ್ತು. ಇಲ್ಲಿ ನಾವಿಬ್ಬರೂ ಕಲಿತುಕೊಂಡ ಪಾಠ ಇಷ್ಟೇ: ನಾವು ಸಣ್ಣ ಪುಟ್ಟ ವಿಚಾರಗಳಿಗೆ ಸೋತು ಕೂರದೆ ಸವಾಲಿನ ರೀತಿಯಲ್ಲಿ ಸ್ವೀಕರಿಸಿಕೊಂಡು ಮುನ್ನಡೆಯಬೇಕು. ಆಗ ಮಾತ್ರ ನಾವು ಬಲಿಷ್ಠರಾಗಲು ಸಾಧ್ಯ ವಾಗುತ್ತದೆ.
ಪೂಜಾ ಇಷ್ಟ- ಕಷ್ಟ ಏನ್ ಗೊತ್ತಾ..?
ಪೂಜಾ ಗುಪ್ತಾಳಿಗೆ ಮೊಬೈಲ್ ಬಿಟ್ಟು ಬದುಕೋದು ತುಂಬಾನೇ ಕಷ್ಟವಂತೆ. ಯಾವ ಕಡೆ ಹೋದರೂ ಕೂಡ ಪೂಜಾಳ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತದೆ. ಯಾವುದೇ ಕೆಲಸಗಳು ಇಲ್ಲದೇ ಇದ್ದಾಗ ಪೂಜಾ ಗುಪ್ತಾ ಪೈಟಿಂಗ್ ಮಾಡುತ್ತಾರೆ. ಅವರ ಪೇಂಟಿಂಗ್‌ಗಳ ಪ್ರದರ್ಶನ ಕೂಡ ದಿಲ್ಲಿಯಲ್ಲಿ ನಡೆದಿತ್ತು. ಟ್ರಾವೆಲಿಂಗ್, ಕುದರೆ ಸವಾರಿ, ಯೋಗ, ಕತೆ ಬರೆಯೋದು ಪೂಜಾಳಿಗೆ ಇಷ್ಟ. ಬಾಲಿವುಡ್ ನಲ್ಲಿ ಪೂಜಾ ಇಷ್ಟ ಪಡುವ ಹುಡುಗ ಅರ್ಜುನ್ ರಾಂಪಾಲ್. ಅರ್ಜುನ್ ಮೊಡೆಲಿಂಗ್ ದುನಿಯಾದಿಂದ ಬಂದವರು ಅವರನ್ನೇ ರೋಲ್ ಮಾಡೆಲ್ ರೀತಿಯಲ್ಲಿಯೇ ತೆಗೆದುಕೊಂಡು ಮುಂದೆ ಹೋಗುತ್ತಿದ್ದಾರೆ.
' ಪೂಜಾ ಗುಪ್ತಾ ತುಂಬಾ ಪ್ರತಿಭಾವಂತ ಹುಡುಗಿ. ಶಾರ್ಟ್‌ಕಟ್ ರೋಮಿಯೋನಲ್ಲಿ ಅವಳಿಗೆ ಹೇಳಿ ಮಾಡಿಸಿ ಪಾತ್ರವೊಂದಿದೆ. ಮೋಸ, ಅಪ್ರಾಮಾಣಿಕತೆಯ ನಡುವೆ ನಡೆಯುವ ಕತೆಯಲ್ಲಿ ಪೂಜಾ ಪಾತ್ರಕ್ಕೆ ತಕ್ಕ ಹುಡುಗಿಯಾಗಿದ್ದಾರೆ. ಗ್ಲಾಮರ್ ಜತೆಯಲ್ಲಿ ನಟನೆಗೂ ಪೂಜಾ ನ್ಯಾಯ ಒದಗಿಸಿದ್ದಾಳೆ. ಈ ಕಾರಣದಿಂದ ಶಾರ್ಟ್ ಕಟ್ ರೋಮಿಯೋ ತಮಿಳಿಗೂ ತಂದರೂ ಅಲ್ಲಿ ಅವಳೇ ನಾಯಕಿಯಾಗುತ್ತಾಳೆ.
-ಸುಸೈ ಗಣೇಶನ್
ಖ್ಯಾತ ತಮಿಳು ಚಿತ್ರ ನಿರ್ದೇಶಕ ಹಾಗೂ ಶಾರ್ಟ್‌ಕಟ್ ರೋಮಿಯೋ ನಿರ್ದೇಶಕ
(vk lvk ublished dis aricle)
Friday, April 19, 2013
ಕಿನಾರೆ ಮನ: ಬಾರ್ನಾ ಇನ್ ಗೋವಾ
* ಸ್ಟೀವನ್ ರೇಗೊ, ದಾರಂದಕುಕ್ಕು
ಅಮಲಿನ ಕಡಲಿನಲ್ಲಿ ತೇಲಿಸಿ ಬಿಡುವ ಸೌಂದರ್ಯದ ಗಣಿ. ತುಟಿ ಅಂಚಿನಲ್ಲಿ ಮಿಂಚಿ ಮರೆಯಾಗುವ ನಗು. ದುಂಡುಮೊಗದಲ್ಲಿ ತುಂಬಿದ ಸೌಮ್ಯತೆ. ಯಾರನ್ನೋ ಹುಡುಕುತ್ತಿರುವ ದುಂಡು ಬಟ್ಟಲಿನ ನಯನಗಳು; ಎಲ್ಲವೂ ಜತೆಯಾಗಿ ಸೇರಿಕೊಂಡರೆ, ಆಕೆಯೇ ರಮ್ಯಾ ಬಾರ್ನಾ.
ಗ್ಲಾಮರ್ ಲೋಕದ ಬಳುಕಿನ ಜತೆಗೆ ಆ್ಯಕ್ಟಿಂಗ್‌ನ ಪಾಠಗಳನ್ನು ಸರಿಯಾಗಿ ಕಲಿತುಕೊಂಡು ನಟಿಸಲು ಬಂದ ರಮ್ಯಾ ಬಾರ್ನಾ ಬರೀ ಕನ್ನಡ ಸಿನಿಮಾಗಳಿಗೆ ಸೀಮಿತವಾದ ಹುಡುಗಿಯಲ್ಲ ಅನ್ನೋದು ಕರಾವಳಿಗರ ಮಾತು. ಕಾರಣ ತುಳುವಿನಲ್ಲಿ ಭರ್ಜರಿಯಾಗಿ ಓಡಿದ ಚಿತ್ರ 'ಒರಿಯರ್ದೊರಿ ಅಸಲ್'ನ ಪ್ರೀತಿಯ ರೋಲ್‌ನಲ್ಲಿ ರಮ್ಯಾ ಬಾರ್ನಾ ಕಾಣಿಸಿಕೊಂಡಿದ್ದು ತುಳುವರಿಗೆ ತುಂಬಾನೇ ಲೈಕ್ ಆಗಿದೆ. ಜತೆಗೆ ಚಿತ್ರದ ಪಾತ್ರ ಸಿಕ್ಕಾಪಟ್ಟೆ ಕ್ಲಿಕ್ ಆಗಿದೆ.
ಮದಿರೆ ಗ್ರಾಮದ ಅನುಭವ:
ಇಂತಹ ರಮ್ಯಾ ಬಾರ್ನಾಗೆ ಗೋವಾ ಇಷ್ಟದ ಟೂರಿಂಗ್ ಸ್ಪಾಟ್. ವರ್ಷದಲ್ಲಿ ಒಂದೆರಡು ಬಾರಿ ಗೋವಾದ ಬೀಚ್‌ನ ಮರಳಿನಲ್ಲಿ ಹೊರಳಾಡಿಕೊಂಡು ಬರಲೇ ಬೇಕು. ವರ್ಷದ ಆರಂಭದ ತಿಂಗಳಲ್ಲಿ ಒಂದ್ ಸಾರಿ ಹೋದರೆ ಮತ್ತೊಂದು ಸಲ ವರ್ಷದ ಕೊನೆಯ ಭಾಗದಲ್ಲಿ ಗೋವಾದ ಪ್ರಮುಖ ಬೀಚ್‌ಗಳಿಗೆ ರೌಂಡ್ ಹಾಕಿಕೊಂಡು ಬರುತ್ತಾರೆ.
ಈ ಬಾರಿ ಗೋವಾದ ಪಣಜಿಯಲ್ಲಿರುವ ಅಂಜುಮ್ ಬೀಚ್‌ನಲ್ಲಿ ರಮ್ಯಾ ಬಾರ್ನಾ ಠಿಕಾಣಿ ಹೂಡಿದ್ದರು. ಗದಗದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಬಂದಿದ್ದ ರಮ್ಯಾ ತಮ್ಮ ಸ್ನೇಹಿತೆಯ ಬರ್ತ್‌ಡೇ ಪಾರ್ಟಿಗೆ ಆಯ್ಕೆ ಮಾಡಿಕೊಂಡದ್ದು ಅಂಜುಮ್ ಬೀಚ್‌ನ್ನು. ಇಲ್ಲಿಯ ಸೂರ್ಯಾಸ್ತಮಾನದ ದೃಶ್ಯವನ್ನು ರಮ್ಯಾ ವರ್ಣನೆ ಮಾಡಿದ್ದು ಹೀಗೆ 'ಗೋವಾ ನನಗೆ ಸಿಕ್ಕಾಪಟ್ಟೆ ಇಷ್ಟ. ಅದರಲ್ಲೂ ಬೀಚ್‌ನಲ್ಲಿ ನಿಂತು ಸಂಜೆ ಸೂರ್ಯಾಸ್ತಮಾನದ ಆಟಗಳು ಇನ್ನೂ ಚೆನ್ನಾಗಿ ಇರುತ್ತೆ. ಸೂರ್ಯ ಬೀಚ್‌ನ ಕೊನೆಯಲ್ಲಿ ಎಲ್ಲೋ ಬಿದ್ದು ಹೋಗುತ್ತಿದ್ದಾನೆಂಬ ಭಾಸವಾಗುತ್ತದೆ ಎನ್ನುತ್ತಾರೆ.
'ಈ ಬಾರಿ ಎರಡ್ಮೂರು ದಿನ ಮಾತ್ರ ಗೋವಾದಲ್ಲಿ ಉಳಿಯುವ ಅವಕಾಶ ಬಂತು. ಉಳಿದಂತೆ ಯಾವಾಗಲೂ ಒಂದು ವಾರವಾದರೂ ನಿಂತು ಬರುತ್ತೇನೆ. ಇಲ್ಲಿನ ಸೀ ಫುಡ್ಡಂತೂ ರಿಯಲಿ ಸೂಪರ್ ಆಗಿರುತ್ತದೆ. ಮಂಗಳೂರು ಬಿಟ್ಟರೆ ನನಗೆ ಸೀ ಫುಡ್ ರುಚಿ ಹತ್ತಿಸಿದ ಊರು ಗೋವಾ. ಇಲ್ಲಿನ ಮಸಾಲೆಯಲ್ಲಿ ಹುರಿದ ಸಿಗಡಿ ಮೀನು ಬೊಂಬಾಟ್ ಟೇಸ್ಟ್. ಬೆಂಗಳೂರಿಗೆ ಬಂದ ನಂತರವೂ ಈ ಮೀನಿನ ಅಡುಗೆ ಮಾಡಲು ಪ್ರಯತ್ನಿಸಿ ಸೋತು ಹೋದೆ. ಗೋವಾದ ಸೀಫುಡ್ ಟೇಸ್ಟ್ ಅಲ್ಲಿಗೆ ಮಾತ್ರ ಮೀಸಲು' ಎನ್ನುತ್ತಾರೆ ರಮ್ಯಾ.
ಗೋವಾ ಬಿಟ್ಟರೆ ರಮ್ಯಾರಿಗೆ ರಾಜಸ್ತಾನ ಇಷ್ಟವಾದ ಟೂರಿಂಗ್ ಸ್ಪಾಟ್. ರಾಜ್ಯದಲ್ಲಿ ಕೂರ್ಗ್‌ನ ಕಾಫಿ ತೋಟಗಳ ನಡುವೆ ಇರೋದು ಕೂಡ ಬಹಳ ಇಷ್ಟ. ರಾಜಸ್ತಾನದಲ್ಲಿರುವ ಐತಿಹಾಸಿಕ ಸ್ಥಳಗಳಿಗೆ ಆಗಾಗ ಭೇಟಿ ಕೊಟ್ಟು ಬರುವುದು ಇದೆ. ವಿದೇಶದಲ್ಲಿ ದುಬಾಯಿ, ಹಾಂಕಾಂಗ್ ಮೆಚ್ಚಿನ ತಾಣಗಳ ಲೀಸ್ಟ್‌ನಲ್ಲಿದೆ. ಸಿನಿಮಾ ಚಿತ್ರೀಕರಣ ಇಲ್ಲದೇ ಇದ್ದಾಗ ಟೂರಿಂಗ್ ಸ್ಪಾಟ್‌ಗಳನ್ನು ಹುಡುಕುವುದು ರಮ್ಯಾ ಖಯಾಲಿ. 'ಚಿತ್ರೀಕರಣದ ಒತ್ತಡಗಳ ನಡುವೆ ಕೊಂಚ ಸಮಯ ಫ್ಯಾಮಿಲಿ, ಫ್ರೆಂಡ್ಸ್‌ಗಳ ಜತೆಯಲ್ಲಿ ಕಳೆಯುವುದು ಒಳ್ಳೆಯದು' ಅಂತಾರೆ.
ಸಿನಿಮಾಗ್ರಫಿ
ರಮ್ಯಾ ಬಾರ್ನಾ ಸದ್ಯಕ್ಕೆ 'ನಟೋರಿಯಸ್' ಸಿನಿಮಾ ಮುಗಿಸಿದ್ದಾಗಿದೆ. ಇನ್ನೂ ರಾಜಕಾರಣಿ ಜಮೀರ್ ಆಹ್ಮದ್ ಪುತ್ರನ ಜತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕರಾವಳಿಯ ಕೋಸ್ಟಲ್‌ವುಡ್‌ನಲ್ಲಿ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್‌ರ ಹೊಸ ಚಿತ್ರ ಮದಿಮೆ ಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಈ ವರ್ಷ ಇನ್ನೆರಡು ಸಿನಿಮಾಗಳಿಗೆ ಬುಕ್ ಆಗಿದ್ದಾರೆ. ಟೋಟಲಿ ಬಿಝಿ ಸಿನಿಮಾ ಲೈಫ್‌ನಲ್ಲಿ ರಮ್ಯಾ ಬಾರ್ನಾ ಟೂರ್ ಸ್ಪಾಟ್‌ಗಳಿಗೂ ಸಮಯ ಮೀಸಲಿಡುತ್ತಾರೆ.
ಚಿಟ್ ಚಾಟ್
ಗ್ಲಾಮರ್ ಹಾಗೂ ಎಕ್ಸ್‌ಪೋಸಿಂಗ್ ಎರಡು ತುಂಬಾನೇ ಭಿನ್ನ ಸಬ್ಜೆಕ್ಟ್. ಗ್ಲಾಮರ್ ಎನ್ನೋದು ಪ್ರತಿಯೊಬ್ಬ ಸಿನಿಮಾ ನಟಿಗೆ ಇರಬೇಕಾದ ಆಭರಣ. ರಮ್ಯಾ ಬಾರ್ನಾ ಎರಡರಲ್ಲಿ ಯಾವ ಸೈಡ್ ನಿಲ್ಲುತ್ತಾರೆ ಎಂದರೆ ರಮ್ಯಾ ಹೀಗೇಳುತ್ತಾರೆ. ಪಾತ್ರಗಳೇ ಎಕ್ಸಪೋಸ್ ಬಯಸಿದಾಗ ಖಂಡಿತವಾಗಿಯೂ ಆ ನಿಟ್ಟಿನಲ್ಲಿ ಯೋಚನೆ ಮಾಡುತ್ತೇನೆ. ಆದರೆ ಅನಗತ್ಯ ಎಕ್ಸ್‌ಪೋಸಿಂಗ್ ನನಗೆ ಇಷ್ಟವಿಲ್ಲ. ಪಾತ್ರದ ಬೇಡಿಕೆಗೆ ತಕ್ಕಂತೆ ಎಕ್ಸ್‌ಪೋಸಿಂಗ್ ಇರಬೇಕು. ಐಟಂ ಸಾಂಗ್‌ನಲ್ಲಿ ಕುಣಿಯುವ ನಾಯಕಿ ಗ್ಲಾಮರಸ್ ಆಗಿ ಕಂಡರೆ ಸಾಲದು. ಎಕ್ಸ್‌ಪೋಸ್ ಮಾಡಬೇಕು ಎಂದು ಐಟಂ ಸಾಂಗ್ ಬಯಸುತ್ತದೆ.
ಬಿಡುವಾದಾಗ ಫ್ರೆಂಡ್ಸ್‌ಗಳ ಜತೆಯಲ್ಲಿ ಶಾಪಿಂಗ್ ಮಾಡುತ್ತೇನೆ. ಗೆಳೆಯರ ಜತೆಗೆ ಸಿನಿಮಾ ನೋಡುತ್ತೇನೆ. ತುಂಬಾನೇ ಫ್ರೀ ಟೈಮ್ ಇತ್ತು ಅಂದ್ರೆ ಹೆತ್ತವರ, ಗೆಳೆಯರ ಜತೆಯಲ್ಲಿ ಲಾಂಗ್ ಟೂರ್‌ಗೆ ಹೋಗಿ ಬರುತ್ತೇನೆ. ಕಾಲೇಜ್‌ನಲ್ಲಿದ್ದಾಗ ಹೆಚ್ಚು ಕಾದಂಬರಿಗಳನ್ನು ಓದುತ್ತಿದ್ದೆ ಆದರೆ ಈಗ ಓದಲು ಟೈಮ್ ಸಿಕ್ತಿಲ್ಲ .
- ರಮ್ಯಾ ಬಾರ್ನಾ
(vk lvk pblished dis article on 20.04.2013)
Subscribe to:
Posts (Atom)