Sunday, February 3, 2013

ಬಾಲಿವುಡ್‌ಗೆ ಹಿಮ್ಮತ್ ಕೊಡುವ ಖಾನ್

ಗಬ್ಬರ್ ಪಾತ್ರಕ್ಕೆ ಅಮ್ಜಾದ್ ಖಾನ್‌ರೇ ಸೂಟೇಬಲ್ ಮ್ಯಾನ್ ಎಂದೇ ನೂರು ವರ್ಷ ತುಂಬಿದ ಹಿಂದಿ ಸಿನಿಮಾ ರಂಗ ಕನವರಿಕೆ ಮಾಡಿಕೊಳ್ಳುತ್ತಿದೆ. ಅಂದಹಾಗೆ ಈಗ ಅಮ್ಜಾದ್ ಖಾನ್ ಮತ್ತೇ ಸಿನಿಮಾ ರಂಗದಲ್ಲಿಲ್ಲ. ಆದರೆ ಅಮ್ಜಾದ್ ಖಾನ್ ಅವರ ಕೊನೆಯ ಪುತ್ರ ಸೀಮಾಬ್ ಖಾನ್ ಚಿತ್ರರಂಗದಲ್ಲಿ ಅಂಬೆಕಾಲು ಹಾಕುತ್ತಿದ್ದಾರೆ. * ಸ್ಟೀವನ್ ರೇಗೊ, ದಾರಂದಕುಕ್ಕು
ಅಮ್ಜಾದ್ ಖಾನ್ ಇಡೀ ಬಾಲಿವುಡ್ ಅಂಗಳದಲ್ಲಿ ಅಬ್ಬರಿಸಿದ ನಟ. ಶೋಲೆಯ ಗಬ್ಬರ್‌ಸಿಂಗ್ ಪಾತ್ರವಂತೂ ಅಮ್ಜಾದ್ ಖಾನ್‌ನನ್ನು ಪದೇ ಪದೇ ಜೀವಂತವಾಗಿಡುತ್ತಿದೆ. ಅಮ್ಜಾದ್ ಖಾನ್ ಸಿನಿಮಾ ಲೋಕ ಬಿಟ್ಟು ಹತ್ತಾರು ವರ್ಷಗಳೇ ಆಗಿರಬಹುದು ಆದರೆ ಶೋಲೆಯ ಪಾತ್ರವಂತೂ ಸಿನಿಮಾ ಪ್ರೇಕ್ಷಕನಿಗೆ ಸದಾ ಕಾಡುತ್ತಾ ಸಾಗುತ್ತಿದೆ. ಇದು ಸಿನಿಮಾಕ್ಕೆ ಇರುವ ಶಕ್ತಿಯೋ ಇಲ್ಲವೇ ಅಮ್ಜಾದ್‌ಗೆ ಇರುವ ತಾಕತ್ತೋ ಗೊತ್ತಿಲ್ಲ. ಗಬ್ಬರ್ ಪಾತ್ರಕ್ಕೆ ಅಮ್ಜಾದ್ ಖಾನ್‌ರೇ ಸೂಟೇಬಲ್ ಮ್ಯಾನ್ ಎಂದೇ ನೂರು ವರ್ಷ ತುಂಬಿದ ಹಿಂದಿ ಸಿನಿಮಾ ರಂಗ ಕನವರಿಕೆ ಮಾಡಿಕೊಳ್ಳುತ್ತಿದೆ. ಅಂದಹಾಗೆ ಈಗ ಅಮ್ಜಾದ್ ಖಾನ್ ಮತ್ತೇ ಸಿನಿಮಾ ರಂಗದಲ್ಲಿಲ್ಲ. ಆದರೆ ಅಮ್ಜಾದ್ ಖಾನ್ ಅವರ ಕೊನೆಯ ಪುತ್ರ ಸೀಮಾಬ್ ಖಾನ್ ಚಿತ್ರರಂಗದಲ್ಲಿ ಅಂಬೆಕಾಲು ಹಾಕುತ್ತಿದ್ದಾರೆ. ಯಾಕೋ ಗೊತ್ತಿಲ್ಲ . ಅಪ್ಪ ಹೇಳಿಕೊಟ್ಟ ನಟನೆಯನ್ನು ಬಿಟ್ಟು ನಿರ್ದೇಶಕನಾಗಿ ಕುಳಿತುಕೊಳ್ಳಲು ಸೀಮಾಬ್ ಖಾನ್ ಯೋಚನೆ ಮಾಡಿದ್ದಾರೆ. ಅದರಲ್ಲೂ ಸಹಾಯಕ ನಿರ್ದೇಶಕನಾಗಿ ಈಗ ಸಿನಿಮಾವೊಂದನ್ನು ಹಿರಿತೆರೆಗೆ ತರುತ್ತಿದ್ದಾರೆ ಎನ್ನೋದು ಗಮನಿಸಬೇಕಾದ ವಿಷ್ಯಾ. ಹಿಮ್ಮತ್‌ವಾಲಾದಲ್ಲಿ ಖಾನ್ ವರಸೆ: ಬಾಲಿವುಡ್ ನಲ್ಲಿ ಸದ್ಯಕ್ಕೆ ಸುದ್ದಿಯಾಗುತ್ತಿರುವ ಚಿತ್ರ ‘ಹಿಮ್ಮತ್‌ವಾಲಾ’ ಕಾರಣ ಈ ಹಿಂದೆ ಇದೇ ಚಿತ್ರ ಹಿಂದಿಯಲ್ಲಿ ಬಂದಿತ್ತು. ಅದಕ್ಕೂ ಮುಖ್ಯವಾಗಿ ಖ್ಯಾತ ನಟ ಜೀತೇಂದ್ರ ಹಾಗೂ ಶ್ರೀದೇವಿಯ ಭರ್ಜರಿ ನಟನೆಯಿಂದ ಚಿತ್ರವಂತೂ ಬಾಕ್ಸಾಫೀಸ್‌ನಲ್ಲಿ ಲಗ್ಗೆ ಹಾಕಿತ್ತು. ನಂತರ ಇಬ್ಬರ ಜೋಡಿ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೇ ಬೇಡಿಕೆ ಕೂಡ ಗಳಿಸಿದ್ದು ಈಗ ಒಂದು ತಿಹಾಸ ಸೇರಬೇಕಾದ ಪುಟ. ಆದರೆ ಬಾಲಿವುಡ್ ನಿರ್ದೇಶಕ ಸಜೀದ್ ಖಾನ್ ಇದೇ ಹೆಸರಿನಲ್ಲಿ ಚಿತ್ರವನ್ನು ಹೊರತರುತ್ತಿದ್ದಾರೆ. ಅಲ್ಲಿ ಜಿತೇಂದ್ರ ಕಾಣಿಸಿಕೊಂಡರೆ ಇಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡಿದ್ದಾರೆ. ಶ್ರೀದೇವಿಯ ಜಾಗದಲ್ಲಿ ತಮ್ನಾನಾ ಬಂದು ಕೂತಿದ್ದಾಳೆ. ಕತೆಯಲ್ಲೂ ಕೊಂಚ ಮಸಾಲೆ ಅರಿಯಲಾಗಿದೆ. ಈ ಹಿಂದೆ ಹಿಂದಿಯಲ್ಲಿ ಬಂದಿದ್ದ ‘ಅಗ್ನಿಪಥ್’ ಸಿನಿಮಾ ದಂತೆ ಇದರಲ್ಲೂ ಎರ್ರಾಬಿರ್ರಿಯಾಗಿ ಹೊಸತನದ ಅಂಟು ಮೆತ್ತಿಸಲಾಗಿದೆ. ನಿರ್ದೇಶಕ ಸಜೀದ್ ಖಾನ್ ಎಂದಾಗಲೇ ಅಲ್ಲಿ ಮಸಾಲೆ ಜತೆಯಲ್ಲೂ ಕೊಂಚ ಕಾಮಿಡಿಗೂ ಜಾಗ ನೀಡಲಾಗುತ್ತದೆ ಎನ್ನುವ ಗ್ಯಾರಂಟಿ ಮಾತು ಸಜೀದ್ ಖಾನ್‌ರ ಈ ಹಿಂದಿನ ಮಾತುಗಳು ಬಲಿಷ್ಟಗೊಳ್ಳುತ್ತದೆ. ಸಜೀದ್ ಹಿಡಿದ ಪ್ರತಿಭಾವಂತ ಖಾನ್:
ಬಾಲಿವುಡ್ ಅಂಗಳದಲ್ಲಿ ದೂರವೇ ನಿಂತು ನೋಡುತ್ತಿದ್ದ ಅಮ್ಜಾದ್ ಖಾನ್‌ರ ಕೊನೆಯ ಪುತ್ರ ಸೀಮಾಬ್ ಖಾನ್ ಅವರನ್ನು ಹುಡುಕಾಡಿಕೊಂಡು ಬಂದದ್ದು ಬೇರೆ ಯಾರು ಅಲ್ಲ. ‘ಹಿಮ್ಮತ್‌ವಾಲಾ’ದ ನಿರ್ದೇಶಕ ಸಜೀದ್ ಖಾನ್. ಸಜೀದ್‌ಗೆ ಅಮ್ಜಾದ್ ಖಾನ್ ಎನ್ನುವ ಹಿರಿಯ ನಟನ ಮೇಲೆ ವಿಶೇಷ ಪ್ರೀತಿ. ಅದಕ್ಕೂ ಮುಖ್ಯವಾಗಿ ಹಿರಿಯ ನಟನ ಪುತ್ರ ಸಿನಿಮಾದಿಂದ ದೂರ ಉಳಿದುಬಿಡೋದು ಸಜೀದ್‌ಗೆ ಸುತಾರಂ ಇಷ್ಟವಿರಲಿಲ್ಲ. ಈ ಕಾರಣವನ್ನೇ ಮುಂದೆ ಹಾಕಿಕೊಂಡು ಸೀಮಾಬ್ ರನ್ನು ತನ್ನ ಚಿತ್ರದ ಸಹಾಯಕ ನಿರ್ದೇಶಕನ ಕುರ್ಚಿಯಲ್ಲಿ ತಂದು ಕೂರಿಸಿದ್ದಾರೆ. ಚಿತ್ರ ಈಗಾಗಲೇ ಸಂಪೂರ್ಣವಾಗಿ ತೆರೆಗೆ ದಾಳಿ ಮಾಡಲು ರೆಡಿಯಾಗಿದೆ. ಮತ್ತೊಂದೆಡೆ ಸಜೀದ್‌ರ ಖಾಸಾ ಗೆಳೆಯ ಸಾಬಾಬ್ ಕೂಡ ಈ ಚಿತ್ರದ ಹಿಂದೆ ನಿಂತಿದ್ದಾರೆ. ಅಂದಹಾಗೆ ಸಾಬಾಬ್ ಬೇರೆ ಯಾರು ಅಲ್ಲ. ಸೀಮಾಬ್ ಅವರ ಹಿರಿಯ ಸಹೋದರ. ಅಮ್ಜಾದ್ ಖಾನ್‌ರ ಹಿರಿಯ ಪುತ್ರ. ಸೀಮಾಬ್ ಮುಂಬಯಿ ವಿವಿಯ ಕ್ರಿಕೆಟ್ ಟೀಮ್‌ನಲ್ಲಿ ಬೌಲರ್ ಆಗಿದ್ದವರು. ಸಿನಿಮಾ ರಂಗಕ್ಕೆ ಕಾಣಿಸಿಕೊಳ್ಳದಿದ್ದಾರೆ ಸೀಮಾಬ್ ಕ್ರಿಕೆಟ್ ರಂಗದಲ್ಲಿ ಮಿಂಚುತ್ತಿದ್ದರು. ಚಿತ್ರದ ಕುರಿತು ಸೀಮಾಬ್ ಅವರಲ್ಲಿ ಕೇಳಿದಾಗ ‘ ನನ್ನ ತಂದೆ ಈ ಹಿಂದಿ ಚಿತ್ರದಲ್ಲಿ ಪಾತ್ರ ಮಾಡಿದ್ದರು. ಅದೇ ಪಾತ್ರವನ್ನು ನಿರ್ದೇಶಕ ಮಹೇಶ್ ಮಾಂಜ್ರೇಕರ್ ಮಾಡುತ್ತಿದ್ದಾರೆ. ತಂದೆಯ ಚಿತ್ರದಲ್ಲಿ ಸಹಾಯಕನಾಗಿ ದುಡಿದಿದ್ದೇನೆ. ಅದೇ ಅನುಭವ ಇಲ್ಲೂ ಅಳವಡಿಸಿದ್ದೇನೆ ಎನ್ನುತ್ತಾರೆ ಅವರು. ಟೋಟಲಿ ಹಿರಿಯ ನಟನ ಪುತ್ರನೊಬ್ಬ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರೋದು ಅಮ್ಜಾದ್ ಅಭಿಮಾನಿಗಳಿಗೆ ಖುಷಿಕೊಡಬಹುದು. (vk lvk publishe dis ariticle on 5.02.2013)

ನನ್ನ ಲೇಖನ ನನ್ನ ಪತ್ರಿಕೆ- ವಿಜಯ ನೆಕ್ಸ್ಟ್ ೧

(vijayanext published dis article on 1.02.2013)

Friday, February 1, 2013

ಕತ್ತಲ ಬದುಕಿಗೆ ಬೆಳಕು ಕೊಟ್ಟ ಹುಡುಗರು !

* ಸ್ಟೀವನ್ ರೇಗೊ, ದಾರಂದಕುಕ್ಕು
ಮಂಗಳೂರು: ಕರಾವಳಿ ಯಾಕೆ ಇಡೀ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತಲೆಯೆತ್ತಿ ಕುಣಿದಾಡುತ್ತಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಪವರ್ ಕಟ್ ಸಮಸ್ಯೆಯಿಂದ ಬೆಳಕು ಕಾಣದ ದಿನಗಳು ಗಟ್ಟಿಯಾಗುತ್ತಿದೆ. ಅಂದಹಾಗೆ ಇವುಗಳ ನಡುವೆ ಮನೆಯಲ್ಲಿ ವಿದ್ಯುತ್ ಸಂಪರ್ಕವೇ ಕಾಣದ ಅದೆಷ್ಟೋ ಮುಖಗಳು ಇನ್ನೂ ಕೂಡ ಕಪ್ಪು ಕತ್ತಲಿನಲ್ಲಿ ಬದುಕು ಕಳೆಯುತ್ತಿದೆ. ಬೀದಿ ದೀಪಗಳನ್ನು ಕಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಈ ಚಿಮಣಿ ದೀಪದ ಬಡವರಿಗೆ ಬೆಳಕು ಕೊಡುವ ಯುವಕರ ತಂಡವೊಂದು ಕರಾವಳಿಯ ಕುಗ್ರಾಮಗಳಲ್ಲಿ ದುಡಿಯುತ್ತಿದೆ. ಹೌದು. ಇದು ಸ್ಟ್ರೀ (ಸಬ್‌ಸ್ಟೆನೇಬಲ್ ಟೆಕ್ನಾಲಜಿ ಆಂಡ್ ರೀನೇವೇಬಲ್ ಎನರ್ಜಿ ಫಾರ್ ಅರ್ಥ್) ಎನ್ನುವ ಸಂಸ್ಥೆಯೊಂದನ್ನು ಹುಟ್ಟುಹಾಕಿಕೊಂಡು ತಮ್ಮದೇ ಮೂಲ ಸಂಪನ್ಮೂಲಗಳನ್ನು ಹುಟ್ಟುಹಾಕಿಕೊಂಡು ಗ್ರಾಮಾಂತರ ಪ್ರದೇಶದಲ್ಲಿರುವ ಅದರಲ್ಲೂ ಬಡತನ ರೇಖೆಗಿಂತಲೂ ಕೆಳಗಿರುವ ಮನೆಗಳನ್ನು ಹುಡುಕಾಡಿಕೊಂಡು ಸೌರಶಕ್ತಿಯ ಮೂಲಕ ಬೆಳಕು ನೀಡುವ ಕೆಲಸವನ್ನು ಯುವಕರು ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಹುಟ್ಟಿದ ಸಂಸ್ಥೆ:
ನಾಲ್ಕು ವರ್ಷಗಳ ಹಿಂದೆ ಮೂಡುಬಿದರೆಯ ಆಳ್ವಾಸ್ ಹಾಸ್ಟೆಲ್‌ನ ನಾನಾ ರೂಮ್‌ಗಳಲ್ಲಿ ತಂಗಿದ್ದ ಯುವಕರ ತಂಡವೊಂದು ಬಡವರಿಗೆ ಬೆಳಕು ಕೊಡಲು ಯೋಜನೆ ರೂಪಿಸಿದ್ದರು. ಅಲ್ಲಿಯೇ ದುಡಿಯುತ್ತಿದ್ದ ಕೆಲಸದಾಳುಗಳ ಮನೆಗಳಿಗೆ ತಮ್ಮ ಪಾಕೆಟ್ ಮನಿಯನ್ನು ಜೋಡಿಸಿಕೊಂಡು ಸೌರಶಕ್ತಿಯ ಮೂಲಕ ಬೆಳಕು ಕೊಟ್ಟರು. ನಂತರ ಇಂತಹ ನಾನಾ ಕುಟುಂಬಗಳ ಹುಡುಕಾಟ ಆರಂಭವಾಯಿತು. ಅಲ್ಲಿಯೇ ಹುಟ್ಟಿದ್ದು ಸ್ಟ್ರೀ (ಸಬ್‌ಸ್ಟೆನೇಬಲ್ ಟೆಕ್ನಾಲಜಿ ಆಂಡ್ ರೀನೇವೇಬಲ್ ಎನರ್ಜಿ ಫಾರ್ ಅರ್ಥ್) ಎಂಜಿನಿಯರ್ ವಿದ್ಯಾರ್ಥಿಗಳಾದ ಮೈಸೂರಿನ ಅಖಿಲ್, ಪವನ್, ವಿಶಾಲ್, ಶಾಶ್ವತ್, ಪುತ್ತೂರಿನ ಸಾಯಿಗಣೇಶ್, ನಿಂತಿಕಲ್ಲಿನ ಶೌಕತ್ ಎಲ್ಲರೂ ಸೇರಿಕೊಂಡು ಈ ಸಂಸ್ಥೆಯನ್ನು ಕಟ್ಟಿಬೆಳೆಸಿದರು. ಕರಾವಳಿಯಲ್ಲೇ ಐದು ಪ್ರಾಜೆಕ್ಟ್:
ಎಂಜಿನಿಯರಿಂಗ್ ಕಲಿಯುತ್ತಿರುವ ಆರು ಮಂದಿ ಯುವಕರು ತಮ್ಮ ರಜಾ ಅವಧಿಯಲ್ಲೇ ಇಂತಹ ಸೌರಶಕ್ತಿಯ ಪ್ರಾಜೆಕ್ಟ್‌ಗೆ ಇಳಿಯುತ್ತಾರೆ. ಕರಾವಳಿಯಲ್ಲಿರುವ ತೀರಾ ಹಿಂದುಳಿದ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ ಬಿಪಿಎಲ್ ಕಾರ್ಡ್‌ದಾರರನ್ನು ಹುಡುಕಾಡಿ ವಿದ್ಯುತ್ ಸಂಪರ್ಕ ಇದೆಯೇ ಇಲ್ಲವೇ ಎನ್ನುವ ಖಾತರಿ ಪಡಿಸಿಕೊಂಡು ಯುವಕರು ಯೋಜನೆ ರೂಪಿಸುತ್ತಾರೆ. ಮುಖ್ಯವಾಗಿ ಬಿಪಿಎಲ್ ಪಟ್ಟಿಯಲ್ಲಿರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಆರಂಭದಲ್ಲಿ ಮೂಡುಬಿದರೆಯ ಎರಡು ಮನೆಗಳಿಗೆ ಸೌರಶಕ್ತಿ ಮೂಲಕ ಬೆಳಕು ಕೊಟ್ಟರು. ಈ ಬಳಿಕ ಪುತ್ತೂರಿನ ಕುಂಬುರ್ಗ, ಬೀರಹ್ನಿತ್ಲುನ ಆರು ಮನೆಗಳು, ಸವಣೂರಿನ ಆರು ಮನೆಗಳು, ಮೈಸೂರು ಎಚ್.ಡಿ ಕೋಟೆ ಪಂಜದಲ್ಲಿರುವ ಬಲ್ಪ ಗ್ರಾಮದ ೩೦ ಮನೆಗಳಿಗೆ ಸೌರಶಕ್ತಿಯಿಂದ ಬೆಳಕು ನೀಡಿದ್ದಾರೆ. ಮುಂದೆ ಕುಂದಾಪುರದಲ್ಲಿರುವ ಇಡೀ ಗ್ರಾಮಕ್ಕೆ ಬೆಳಕು ನೀಡುವ ಯೋಜನೆ ರೂಪಿಸಿದ್ದಾರೆ. ಬೆಳಕು ನೋಡದ ಮುಖದಲ್ಲಿ ಅರಳಿದ ಸಂತಸ: ಪಂಜದಿಂದ ಸ್ವಲ್ಪ ದೂರದಲ್ಲಿರುವ ಬಲ್ಪ ಗ್ರಾಮದ ಕೇನ್ಯಾ ಪ್ರದೇಶದ ನೇಲ್ಯಡ್ಕ, ಐನಡ್ಕ, ಕಣ್‌ಕಾಲಿನ ೩೦ ಬಿಪಿಎಲ್ ಪಟ್ಟಿಯಲ್ಲಿರುವ ಮನೆಗಳು ಎಂದಿಗೂ ಚಿಮಣಿ ದೀಪದಿಂದ ಹೊರಬಂದವರಲ್ಲ. ಬೀದಿ ದೀಪಗಳನ್ನೇ ನೋಡಿ ಮನದಲ್ಲಿ ಸಂತಸ ತುಂಬಿಕೊಂಡಿದ್ದರು. ಬೆಳಕು ಎನ್ನೋದು ಶ್ರೀಮಂತರಿಗೆ ಮಾತ್ರ ಇರುವ ಸವಲತ್ತು ಎಂದುಕೊಂಡೇ ತಮ್ಮ ಮಕ್ಕಳಿಗೆ ಚಿಮಣಿ ದೀಪಗಳನ್ನು ತೋರಿಸಿ ಮಲಗಿಸುತ್ತಿದ್ದರು. ಆದರೆ ಈಗ ಕೇನ್ಯಾದ ಚಿಮಣಿ ದೀಪಗಳು ನಂದಿ ಹೋಗಿದೆ. ಅವುಗಳ ಜಾಗದಲ್ಲಿ ಪಳಪಳ ಹೊಳೆಯುವ ಸೌರಶಕ್ತಿಯ ಬಲ್ಬ್‌ಗಳು ಜಾಗಪಡೆದುಕೊಂಡಿದೆ. ಈ ಯುವಕರು ೩೦ ಮನೆಗಳ ಮುಂಭಾಗದಲ್ಲಿ ಸೋಲಾರ್ ಪ್ಯಾನೆಲ್ ಹಾಕಿಕೊಂಡು ಮನೆಯೊಳಗೆ ಬಲ್ಬ್ ಹೊತ್ತಿಸುತ್ತಿದ್ದಾರೆ. ಒಂದು ಬಲ್ಬ್, ಸೋಲಾರ್ ಪ್ಯಾನೆಲ್, ಬ್ಯಾಟರಿ ಕೊಟ್ಟು ಮನೆಯ ಮೂಲೆಯಲ್ಲಿರುವ ಮಗು ಈಗ ಬೆಳಕು ನೋಡಿ ಕುಣಿಯುವಂತಾಗಿದೆ. ಅಂದಹಾಗೆ ೩೦ ಮನೆಗಳಿಗೆ ಬೆಳಕು ನೀಡಲು ಧನ ಸಹಾಯ ಮಾಡಿದವರು ಮೈಸೂರಿನ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಪಿ.ಸಿ. ರಾಜು ಎನ್ನುವವರು. ಹೀಗೆ ಕರಾವಳಿಯ ಕುಗ್ರಾಮದಲ್ಲಿರುವ ಒಂದು ಪುಟ್ಟ ಮನೆಯಲ್ಲಿ ಬೆಳಕು ಕೊಡಲು ಮೈಸೂರಿನ ಮಂದಿ ತಮ್ಮ ಉದಾರತೆಯನ್ನು ಮೆರೆದಿದೆ. ಜಿಲ್ಲೆಯಲ್ಲಿ ಐದು ಪ್ರಾಜೆಕ್ಟ್‌ಗಳನ್ನು ಮಾಡಿದ್ದೇವೆ. ಆರು ತಿಂಗಳಿಗೊಮ್ಮೆ ಈ ಯೋಜನೆ ರೂಪಿಸಿದ ಹಳ್ಳಿಗಳಿಗೆ ಹೋಗಿ ಬ್ಯಾಟರಿ ಚೆಕ್ ಮಾಡಿಕೊಂಡು ಅವರಿಗೆ ಮತ್ತೊಂದು ಬಲ್ಬ್ ಹಾಗೂ ಮೊಬೈಲ್ ಚಾರ್ಜರ್ ಕೊಟ್ಟು ಬರುತ್ತೇವೆ. ಕರಾವಳಿಯಲ್ಲಿ ಇಂತಹ ಯೋಜನೆ ರೂಪಿಸಿದಾಗ ಹೊರ ಜಿಲ್ಲೆಯವರೇ ಪ್ರೋತ್ಸಾಹ ನೀಡುತ್ತಾರೆ ಎನ್ನುತ್ತಾರೆ ತಂಡದ ಸದಸ್ಯ ಶೌಕತ್. ಇಡೀ ರಾಜ್ಯದಲ್ಲಿ ಇಂತಹ ಸೌರ ಶಕ್ತಿಯ ಯೋಜನೆಯನ್ನು ರೂಪಿಸಬೇಕು ಎನ್ನೋದು ತಂಡದ ಕನಸ್ಸು. ರಾಜ್ಯದ ನಾನಾ ಕಡೆ ಇರುವ ಪರ್ಯಾಯ ಇಂಧನಗಳ ಶಕ್ತಿಗಳಾದ ಪವನ ಶಕ್ತಿ, ಹೈಡ್ರೋವನ್ನು ಬಳಕೆ ಮಾಡಿಕೊಂಡು ಬಡವರಿಗೆ ಬೆಳಕು ನೀಡಬೇಕು ಎನ್ನುವ ಯೋಜನೆ ಇದೆ. ಈ ಮೂಲಕ ವಿದ್ಯುತ್ ಕೊರತೆಯ ಸಮಯದಲ್ಲೂ ಇತತ ಇಂಧನಗಳಿಗೆ ಮೊರೆ ಹೋಗಬಹುದು ಎನ್ನೋದು ತಂಡದ ಮುಖ್ಯಸ್ಥ ಅಖಿಲ್ ಅವರ ಮಾತು.
ನಾವು ಬದುಕಿನಲ್ಲಿ ನಮ್ಮ ನಮ್ಮ ಮನೆಗಳಲ್ಲಿ ಬೆಳಕು ನೋಡುತ್ತೇವೆ ಎನ್ನುವ ಯೋಜನೆ ಕೂಡ ಇರಲಿಲ್ಲ. ಬೆಳಕು ಎನ್ನೋದು ಬರೀ ಕೆಲವರಿಗೆ ಮಾತ್ರ ಸೀಮಿತವಾಗಿದೆ ಎಂದುಕೊಂಡಿದ್ದೆ. ಆದರೆ ಈ ಹುಡುಗರು ರಾತ್ರಿ- ಹಗಲು ದುಡಿದು ಬೆಳಕು ಕೊಟ್ಟಿದ್ದಾರೆ ಎನ್ನುತ್ತಾರೆ ನೇಲ್ಯಡ್ಕದ ಚೋಮ ಹೇಳುತ್ತಾರೆ. ಪಕ್ಕದ ಮನೆಯಲ್ಲಿರುವಂತೆ ನಮ್ಮ ಮನೆಯಲ್ಲೂ ಟಿವಿ ನೋಡಬೇಕು. ಬಲ್ಬ್‌ನ ಅಡಿಯಲ್ಲಿ ಕೂತು ಪಾಠ ಓದಬೇಕು. ಚಿಮಣಿ ದೀಪ ನೋಡಿದಾಗಲೆಲ್ಲ ನಿದ್ದೆ ಬಂದು ಬಿಡುತ್ತದೆ ಎಂದು ಎರಡನೇ ತರಗತಿ ಗಣೇಶ ಹೇಳಿದ ಮಾತು. ಕುಗ್ರಾಮದಲ್ಲಿರುವ ಬಡವರ ಮನೆಗಳಿಗೆ ಬೆಳಕು ಕೊಟ್ಟು ಹುಡುಗರು ತಮ್ಮ ಸಾಧನೆ ಮೆರೆದಿದ್ದಾರೆ ಎನ್ನೋದು ಈ ಮೂಲಕ ಖಾತರಿ ಆಗುತ್ತದೆ. ( vk main edition- 2.02.2013)

Friday, January 25, 2013

‘ಲಿಟಲ್ ಹಾರ್ಟ್’ ಮೌನ ಒಡೆದು ಮಾತಾಯಿತು!

ಸಿನಿಮಾ ಎಂದರೆ ಬೇಕುಗಳ ಸಮುದ್ರ ಎನ್ನೋದು ಸಿನಿಮಾ ಪಂಡಿತರ ಮಾತು. ಒಂದು ಸಿನಿಮಾ ನಿರ್ಮಾಣವಾಗಬೇಕಾದರೆ ಬಂಡವಾಳ ಬೇಕು, ನಟ-ನಟಿಯರು ಬೇಕು, ಭರ್ಜರಿ ಲೊಕೇಷನ್ ಬೇಕು, ಮಾತು ಬೇಕು... ಆದರೆ ಇವು ಇಲ್ಲದೇ ಸಿನಿಮಾ ಮಾಡಬಹುದು ಎನ್ನೋದಕ್ಕೆ ಕರಾವಳಿ ಹುಡುಗರು ಇಲ್ಲಿದ್ದಾರೆ. * ಸ್ಟೀವನ್ ರೇಗೊ, ದಾರಂದಕುಕ್ಕು
ಸಿನಿಮಾ ಎಂದರೆ ಬೇಕುಗಳ ಸಮುದ್ರ ಎನ್ನೋದು ಸಿನಿಮಾ ಪಂಡಿತರ ಮಾತು. ಒಂದು ಸಿನಿಮಾ ನಿರ್ಮಾಣವಾಗಬೇಕಾದರೆ ಬಂಡವಾಳ ಬೇಕು, ನಟ-ನಟಿಯರು ಬೇಕು, ಭರ್ಜರಿ ಲೊಕೇಷನ್ ಬೇಕು, ಮಾತು ಬೇಕು... ಹೀಗೆ ಬೇಕುಗಳ ನಡುವೆ ಸಿನಿಮಾ ನಿರ್ಮಾಣವಾಗಿ ಹೊರಬರುವ ಪ್ರಸಂಗಗಳೇ ಜಾಸ್ತಿ. ಆದರೆ ವಿಪರ‍್ಯಾಸ ಎಂದರೆ ಈ ಬೇಕುಗಳಿಲ್ಲದೇ ಸಿನಿಮಾ ನಿರ್ಮಾಣ ಮಾಡಬಹುದು ಎನ್ನುವ ಸತ್ಯ ಮಾತ್ರ ಅರಿವಿಗೆ ಬರೋದು ಬಹಳ ಕಷ್ಟ. ಆದರೆ ಕರಾವಳಿಯಲ್ಲಿ ಇಂತಹ ಬೇಕುಗಳನ್ನು ಬದಿಗೊತ್ತಿದ ಯುವಕರು ಸದ್ದು ಮಾಡಿದ್ದಾರೆ. ಲಿಟಲ್ ಹಾರ್ಟ್ ಮಾತುಗಳೇ ಇಲ್ಲದ ಸುಂದರ ಚಿತ್ರವೊಂದು ಈಗಾಗಲೇ ಯೂ ಟ್ಯೂಬ್‌ನಲ್ಲಿ ಸಖತ್ ಕ್ಲಿಕ್ ಆಗುತ್ತಿದೆ. ಯುವಕರು ಮಾಡಿದ ಪುಟ್ಟ ಚಿತ್ರವೊಂದು ಬಹಳಷ್ಟು ಮಂದಿಯನ್ನು ಮೋಡಿ ಮಾಡಿದೆ ಎನ್ನುವುದಕ್ಕೆ ಕ್ಲಿಕ್ ಆಗುತ್ತಿರುವ ಸಂಖ್ಯೆಯ ಲೆಕ್ಕಚಾರವೇ ಹೇಳುತ್ತಿದೆ. ಮೌನ ಹೇಗೆ ಮಾತಾಯಿತು: ‘ಲಿಟಲ್ ಹಾರ್ಟ್’ ಬರೀ ಹನ್ನೆರಡು ನಿಮಿಷಗಳ ಪುಟ್ಟ ಚಿತ್ರ. ಅಂದಹಾಗೆ ಇಲ್ಲಿ ಮೈಲು ಉದ್ದ ಗಾತ್ರದ ಸಂಭಾಷಣೆಗಳಿಲ್ಲ. ಪ್ರೇಕ್ಷಕರನ್ನು ಕಿರಿಕಿರಿ ಮಾಡುವ ಪದ ಪ್ರಯೋಗಗಳಿಲ್ಲ. ಇಲ್ಲಿ ಇರುವುದು ಬರೀ ಮೌನ. ಚಿತ್ರದ ಜತೆಯಲ್ಲಿ ಸಾಗುವ ಹಿನ್ನೆಲೆ ಸಂಗೀತ ನೋಡುವ ಪ್ರೇಕ್ಷಕನನ್ನು ಮೋಡಿ ಮಾಡುತ್ತದೆ. ಭಿಕ್ಷುಕ ಹುಡುಗ (ಬಸಪ್ಪ) ಮತ್ತು ಸಾಮಾನ್ಯ ಮಧ್ಯಮ ವರ್ಗದ ಹುಡುಗ(ಶಾನನ್)ನ ಮುಗ್ಧತೆ ಮತ್ತು ತೀರಾ ವಿರಳ ಎನ್ನುವಂತಹ ಗೆಳೆತನವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಸ್ನೇಹಕ್ಕೆ, ಮಾನವೀಯತೆಗೆ ಜಾತಿ, ಧರ್ಮ, ಹಣ, ಅಂತಸ್ತಿನ ಅಡ್ಡಿಯಿಲ್ಲ ಎನ್ನುವುದನ್ನು ಈ ಕಿರು ಚಿತ್ರ ಮತ್ತೇ ಮತ್ತೇ ಗಟ್ಟಿಯಾಗಿ ಹೇಳುವಂತಿದೆ. ಈ ಜಗತ್ತಿನಲ್ಲಿ ನಮಗೆ ಹತ್ತಿರವಾದವರು ಎಷ್ಟೇ ಜನ ಇದ್ದರೂ ಕೆಲವೊಬ್ಬರು ಮಾತ್ರ ಮರೆಯಲಾರದಷ್ಟು ಹತ್ತಿರವಾಗುತ್ತಾರೆ. ಬಹುಶಃ ಇಂತಹ ಮನಸ್ಥಿತಿ ಹೆಚ್ಚಾಗಿ ಮಕ್ಕಳಲ್ಲಿ ಮಾತ್ರ ಮೂಡಿಬರಲು ಸಾಧ್ಯ ಎನ್ನೋದು ಕಿರುಚಿತ್ರ ಹೇಳುತ್ತಿರುವ ಮಾತು. ಚಿತ್ರದಲ್ಲಿ ಬಿಜಾಪುರದ ಪ್ರಸ್ತುತ ಮಂಗಳೂರಿನಲ್ಲಿ ಹೈಸ್ಕೂಲ್ ಓದುತ್ತಿರುವ ಬಸಪ್ಪ, ಅತ್ತಾವರದ ಶಾನನ್ ವಿದ್ಯಾರ್ಥಿಗಳಾದ ಆರನ್ ಮತ್ತು ಅನುಷ್, ಚಂದ್ರಹಾಸ್,ಲತಾ, ನಿತಿನ್ ನಟಿಸಿದ್ದಾರೆ. ಚಿತ್ರವನ್ನು ಟ್ರೈಬಲ್ ಇಮ್ಯಾಜಿನೇಶನ್ ಫಿಲಂಸ್ ನಿರ್ಮಾಣ ಮಾಡಿದೆ. ಕ್ಯಾಮೆರಾದಲ್ಲಿ ಆರ್.ಕೆ .ಮಂಗಳೂರು, ಸಂಗೀತದಲ್ಲಿ ಪುಷ್ಪರಾಜ್ . ಆರ್ .ಎಸ್, ಕಲಾ ನಿರ್ದೇಶನದಲ್ಲಿ ವಿಕಾಸ್ ಮತ್ತು ಮೊನೀಶ್ ಶೆಟ್ಟಿ ಹಾಗೂ ಪ್ರಾಜೆಕ್ಟ್ ಅಂಡ್ ಟೆಕ್ನಿಕಲ್ ಹೆಡ್‌ಗಳಾಗಿ ಪ್ರದೀಪ್ ರಾಯ್ ,ಸಂತೋಷ್ ಶೆಟ್ಟಿ , ಪುಷ್ಪರಾಜ್ .ಆರ್.ಎಸ್ ಹಾಗೂ ಕಥೆ ,ಚಿತ್ರಕಥೆ ,ನಿರ್ದೇಶನದಲ್ಲಿ ನಾಗೇಶ್ ಪುತ್ತೂರು ದುಡಿದಿದ್ದಾರೆ. ನಾಗೇಶ್ ಎನ್ನುವ ಪ್ರತಿಭಾವಂತ: ಮಂಗಳೂರಿನ ಎಂಜಿ ರಸ್ತೆಯಲ್ಲಿರುವ ಟ್ರೈಬಲ್ ಟ್ಯಾಟೂವಿನಲ್ಲಿ ದುಡಿಯುತ್ತಿರುವ ನಾಗೇಶ್ ಪುತ್ತೂರು ಪ್ರತಿಭಾವಂತ ಹುಡುಗ. ಟ್ಯಾಟೂ ಸೇರಿದಂತೆ ೩ಡಿಯಲ್ಲಿ ವಿಶೇಷ ಪರಿಣತಿಯನ್ನು ಪಡೆದಿರುವ ನಾಗೇಶ್ ಈ ಹಿಂದೆ ಕೂಡ ಇಂತಹ ಕಿರುಚಿತ್ರಗಳ ಹಾಗೂ ಚಿತ್ರಗಳ ನಿರ್ಮಾಣದಲ್ಲಿ ದುಡಿದವರು. ತಮ್ಮ ಸ್ನೇಹಿತರ ಬೆಂಬಲದಿಂದ ಕಡಿಮೆ ಖರ್ಚಿನಲ್ಲಿ ‘ಲಿಟಲ್ ಹಾರ್ಟ್’ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಕನ್ನಡದ ಹಿರಿಯ ನಟ ವಿಷ್ಣುವರ್ಧನ್ ಅವರ ಮೂರನೇ ಪುಣ್ಯತಿಥಿಯ ಅಂಗವಾಗಿ,ವಿಭಾ ಚಾರಿಟೇಬಲ್ ಟ್ರಸ್ಟ್ , ಡ್ಯುಯಲ್ ಥಾಟ್ಸ್ ನ ಸಹಯೋಗದೊಂದಿಗೆ ನಡೆದ ‘ಕಿರುಚಿತ್ರ ಸ್ಪರ್ಧೆ’ಯಲ್ಲಿ ‘ಲಿಟಲ್ ಹಾರ್ಟ್’ ಕಿರುಚಿತ್ರ ಮಕ್ಕಳಿಗಾಗಿ ರಚಿಸಲಾದ ಅತ್ಯುತ್ತಮ ಕಿರುಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಬಹುಮಾನ ಲಭಿಸಿದೆ. ೫೦ ಸಾವಿರಕ್ಕೂ ಅಧಿಕ ಎಂಟ್ರಿಗಳ ನಡುವೆ ಮೊದಲ ಸುತ್ತಿನಲ್ಲಿ ೪೩ ಹಾಗೂ ಎರಡನೇ ಸುತ್ತಿನಲ್ಲಿ ೧೦ ಆಯ್ಕೆಗಳ ಜತೆಯಲ್ಲಿ ಲಿಟಲ್ ಹಾರ್ಟ್ ವಿಶೇಷ ಬಹುಮಾನ ಪಡೆದಿದೆ. ಟೋಟಲಿ ಕಡಿಮೆ ಖರ್ಚಿನಲ್ಲೂ ಸಿನಿಮಾ ಮಾಡಿ ತೋರಿಸಬಹುದು ಎನ್ನುವುದಕ್ಕೆ ಈ ಹುಡುಗರೇ ದೊಡ್ಡ ಸ್ಯಾಂಪಲ್. ...

Tuesday, January 22, 2013

ಟ್ವಿಟ್ಟರ್ ಹುಡುಗ ಜಸ್ಟಿನ್ !

ಅಮೆರಿಕದ ಸಂಗೀತ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ ‘ಮೈ ವಲ್ಡ್ ’ ಸಂಗೀತ ಆಲ್ಬಂವಂತೂ ಜಸ್ಟಿನ್ ಎನ್ನುವ ಪೋರನನ್ನು ಪಾಪ್ ಲೋಕದ ಧ್ರುವ ತಾರೆಯನ್ನಾಗಿ ಮಾಡಿತು. ಅಂದಹಾಗೆ ಜಸ್ಟಿನ್ ಈಗಷ್ಟೇ ೧೮ರ ಅಸುಪಾಸಿನಲ್ಲಿರುವ ಹುಡುಗ. ಆದರೆ ಆತನ ಫಾಲೋ ಗ್ರೂಫ್ ನೋಡಿದರೆ ದಂಗು ಮೂಡುತ್ತದೆ. ಸ್ಟೀವನ್ ರೇಗೊ, ದಾರಂದಕುಕ್ಕು
ಪಾಪ್ ಲೋಕದಲ್ಲಿ ಜಸ್ಟಿನ್ ಬೀಬರ್ ಹೆಸರು ತೀರಾ ಪರಿಚಿತ. ಆತ ಪಾಪ್ ಲೋಕದಲ್ಲಿ ಮಾಡಿದ ಕೆಲಸಗಳೆಲ್ಲವೂ ಸಿಕ್ಕಾಪಟ್ಟೆ ಹಿಟ್ ಮೇಲೆ ಹಿಟ್. ಅದರಲ್ಲೂ ಅಮೆರಿಕದ ಸಂಗೀತ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ ‘ಮೈ ವಲ್ಡ್ ’ ಸಂಗೀತ ಆಲ್ಬಂವಂತೂ ಜಸ್ಟಿನ್ ಎನ್ನುವ ಪೋರನನ್ನು ಪಾಪ್ ಲೋಕದ ಧ್ರುವ ತಾರೆಯನ್ನಾಗಿ ಮಾಡಿತು. ಅಂದಹಾಗೆ ಜಸ್ಟಿನ್ ಈಗಷ್ಟೇ ೧೮ರ ಅಸುಪಾಸಿನಲ್ಲಿರುವ ಹುಡುಗ. ಆದರೆ ಆತನ ಫಾಲೋ ಗ್ರೂಫ್ ನೋಡಿದರೆ ದಂಗು ಮೂಡುತ್ತದೆ. ಅದರಲ್ಲೂ ಸಾಮಾಜಿಕ ತಾಣಗಳಲ್ಲಿ ಒಂದಾದ ಟ್ವಿಟ್ಟರ್ ಸಾಮಾಜಿಕ ತಾಣದಲ್ಲಿ ಅವನಿಗೆ ಇರುವ ಅಭಿಮಾನಿಗಳ ಸಂಖ್ಯೆ ಎಷ್ಟು ಗೊತ್ತಾ..? ಬರೋಬ್ಬರಿ ೩೩,೩೨೬,೬೨೪. ಇದು ಟ್ವಟ್ಟಿರ್ ನಲ್ಲಿಯೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ವ್ಯಕ್ತಿ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತೇ ಇರಲು ಸಾಧ್ಯವಿಲ್ಲ. ಕಾರಣ ಜಸ್ಟಿನ್ ಸಾಮಾಜಿಕ ತಾಣಗಳಲ್ಲಿ ಅತೀ ಹೆಚ್ಚು ಜನಪ್ರಿಯ ವ್ಯಕ್ತಿ. ಆತನ ಹಾಡುಗಳು ಎಷ್ಟು ಜನಪ್ರಿಯವಾಗಿರುತ್ತದೆಯೋ ಅದೇ ರೀತಿಯಲ್ಲಿ ಆತನ ಟ್ವಿಟ್ಟ್‌ಗಳು ಅಷ್ಟೇ ಮಜಬೂತಾಗಿರುತ್ತದೆ. ಇದೇ ಜನಪ್ರಿಯವನ್ನೇ ಬಂಡವಾಳ ಇಟ್ಟುಕೊಂಡು ಬಂದಿರುವ ಜಸ್ಟಿನ್ ಬೀಬರ್ ‘ಬೀಲಿವ್ ಅಕೋಸ್ಟಿಕ್’ ಎನ್ನುವ ಹೊಸ ಆಲ್ಬಂವೊಂದನ್ನು ಈ ವರ್ಷ ಬಿಡುಗಡೆ ಮಾಡುವ ಸರದಿಯಲ್ಲಿ ನಿಂತಿದ್ದಾನೆ. ಅಂದಹಾಗೆ ಇತನ ಜತೆಯಲ್ಲಿ ಟ್ವಿಟ್ಟರ್‌ನಲ್ಲಿ ಸ್ಪರ್ಧೆಗೆ ಬಿದ್ದಿರೋದು ಬೇರೆ ಯಾರು ಅಲ್ಲ. ಪಾಪ್ ಲೋಕದ ತಾರೆ ಲೇಡಿ ಗಾಗಾ, ಇವರ ಜತೆಗೆ ಹಾಲಿವುಡ್ ನಟಿ ಕೇಟ್ ಪೆರ್ರಿ, ಪಾಪ್ ಗಾಯಕಿ ರಿಹಾನಾ, ಬರಾಕ್ ಒಬಾಮಾ, ಬ್ರಿಟ್ನಿ ಸ್ಪಿಯರ್, ಟೇಲರ್ ಸ್ಫೀಟ್, ಶಕೀರಾ, ಕಿಮ್ ಕದರ್ಶಿಯನ್ ಎಲ್ಲರೂ ಒಂದರ ಹಿಂದೆ ಒಬ್ಬರನ್ನು ಫಾಲೋ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಯುವ ಜನತೆಗೆ ಮಾದರಿ ಜಸ್ಟಿನ್ : ಪಾಪ್ ಲೋಕದ ಜಸ್ಟಿನ್ ಬೀಬರ್ ಒಂದು ಲೆಕ್ಕಚಾರದ ಪ್ರಕಾರ ಯೂತ್ ಬ್ರಿಗೇಡ್ ಗೆ ರೋಲ್ ಮಾಡೆಲ್. ಕಾರಣ ಅತೀ ಸಣ್ಣ ವಯಸ್ಸಿನಲ್ಲೇ ಬೀಬರ್ ಪಾಪ್ ಲೋಕದಲ್ಲಿ ಮೆರೆದಾಡಿದ್ದು ನೋಡಿದರೆ ಪಾಪ್ ಲೋಕದಲ್ಲಿದ್ದವರು ಕೂಡ ಬೀಬರ್ ಕಂಡು ಬೆರಗು ಗೊಂಡಿದ್ದರು. ೨೦೧೨ರ ಫ್ರೋಬ್ಸ್ ಮ್ಯಾಗಜೀನ್ ಕವರ್ ಪೇಜ್‌ನಲ್ಲಿ ಬೀಬರ್ ಚಿತ್ರ ಹಾಕಿ ವಿಶ್ವದ ಪ್ರಬಲ ವ್ಯಕ್ತಿಗಳ ಸಾಲಿನಲ್ಲಿ ತಂದು ಕೂರಿಸಲಾಯಿತು. ಬೀಬರ್ ಅಲ್ಬಂಗಳಂತೂ ಒಂದಕ್ಕಿಂತ ಒಂದು ಹಿಟ್ ಕೊಡುವ ಮೂಲಕ ಒಂದೇ ವರ್ಷದಲ್ಲಿ ೧೫ ಬಿಲಿಯನ್ ಆಲ್ಬಂಗಳನ್ನು ಬಿಕರಿ ಮಾಡುವ ಮೂಲಕ ದಾಖಲೆ ಮಾಡಿದ ಪೋರ. ಒಂದೇ ವರ್ಷದಲ್ಲಿ ೫೫ ಮಿಲಿಯನ್ ಡಾಲರ್ ತನ್ನ ಕೆಲಸಕ್ಕೆ ಪಡೆದ ಸಾಹಸಿ ಬೀಬರ್ ಟ್ವಿಟ್ಟರ್ ಲೋಕದಲ್ಲಿ ಭಿನ್ನ ಸಾಹಸಿಗ ಅದರಲ್ಲೂ ಆತನ ಒಂದು ಟ್ವಿಟ್ ವಿಶ್ವದಲ್ಲಿಯೇ ಬಹಳ ಕೋಲಾಹಲ ಮಾಡಿತ್ತು. ಜಸ್ಟಿನ್ ಹೇಳುವಂತೆ ‘ ನೀವು ಯಾರ ಜತೆಯಲ್ಲೂ ಸೆಕ್ಸ್ ಮಾಡಲು ಇಚ್ಚಿಸುತ್ತೀರಿ ಎಂದಾದರೆ ನೀವು ಅವರನ್ನು ಪ್ರೀತಿಸುತ್ತೀರಿ ಎಂದಾರ್ಥ’ ಇದು ಟ್ವಿಟ್ ಮಾತುಗಳು ಜಸ್ಟಿನ್ ಟ್ವಿಟ್ಟರ್ ಅಕೌಂಟ್‌ನ್ಲಲಿ ಬೇಜಾನ್ ಕಾಣ ಸಿಗುತ್ತದೆ. ಅದಕ್ಕೂ ಮುಖ್ಯವಾಗಿ ಜಸ್ಟಿನ್ ಬೀಬರ್ ತನ್ನ ಟ್ವಿಟ್ ಗಳ ಮೂಲಕ ಹರೆಯದವರಿಗೂ ಇಷ್ಟವಾಗುತ್ತಾನೆ. ... ಚಿತ್ರ: ಜಸ್ಟಿನ್ ಬೀಬರ್ ....... (vk lvk published dis article on 24.1.2013)

Sunday, January 20, 2013

ಬಾಲಿವುಡ್‌ನ ವಿವೇಕ ಸ್ವಾಮಿ !

ಭಕ್ತಿಯ ಭಾವದ ನಡುವೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಒಂಚೂರು ಭಿನ್ನವಾಗಿ ನಿಲ್ಲುತ್ತಾರೆ. ಕಾರಣ ಇಷ್ಟೇ ವಿವೇಕ್‌ಗೆ ದೇವರ ಮೇಲೆ ಅಪಾರ ನಂಬಿಕೆ. ಯಾವುದೇ ಕೆಲಸಗಳಲ್ಲೂ ವಿವೇಕ್ ದೇವರನ್ನು ನಂಬಿಕೆ ಇಟ್ಟುಕೊಂಡೇ ಮುಂದುವರಿಯುತ್ತಾರೆ. * ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಎಂದಾಕ್ಷಣ ಇಲ್ಲಿ ನಂಬಿಕೆ ಎನ್ನುವ ಪದಕ್ಕೆ ಜಾಸ್ತಿ ಅರ್ಥ ಇರುತ್ತದೆ ಎನ್ನೋದು ಬಾಲಿವುಡ್ ಪಂಡಿತರ ಮಾತು. ಇದೇ ನಂಬಿಕೆಯ ಮೇಲೆಯೇ ಬಾಲಿವುಡ್‌ನಲ್ಲಿ ಚಿತ್ರಗಳ ನಿರ್ಮಾಣ, ವಿತರಣೆ, ಸೋಲು- ಗೆಲುವು ಎಲ್ಲವೂ ಲೆಕ್ಕಚಾರಗಳು ನಡೆಯುತ್ತದೆ. ಈ ನಂಬಿಕೆಯ ಜತೆಯಲ್ಲಿ ಬಾಲಿವುಡ್ ನಟ- ನಟಿಯರಿಗೆ ದೇವರ ಮೇಲೆ ಅಪಾರ ನಂಬಿಕೆ ಇದೆ. ಮುಂಬಯಿಯ ಗಣೇಶೋತ್ಸವದಲ್ಲಿ ಬಾಲಿವುಡ್ ನಟ-ನಟಿಯರು ಹಮ್ಮಿಕೊಳ್ಳುವ ಗಣಪತಿ ಹಬ್ಬದ ಸಂಭ್ರಮ ಕಳೆಕಟ್ಟುತ್ತದೆ. ಆದರೆ ಇಂತಹ ಭಕ್ತಿಯ ಭಾವದ ನಡುವೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಒಂಚೂರು ಭಿನ್ನವಾಗಿ ನಿಲ್ಲುತ್ತಾರೆ. ಕಾರಣ ಇಷ್ಟೇ ವಿವೇಕ್‌ಗೆ ದೇವರ ಮೇಲೆ ಅಪಾರ ನಂಬಿಕೆ. ಯಾವುದೇ ಕೆಲಸಗಳಲ್ಲೂ ವಿವೇಕ್ ದೇವರನ್ನು ನಂಬಿಕೆ ಇಟ್ಟುಕೊಂಡೇ ಮುಂದುವರಿಯುತ್ತಾರೆ. ಅದರಲ್ಲೂ ದೇಶದಲ್ಲಿರುವ ಎಲ್ಲ ಪುಣ್ಯಕ್ಷೇತ್ರಗಳಿಗೆ ವಿವೇಕ್ ಹೋಗಿ ಬಂದಿದ್ದಾರೆ. ಇಷ್ಟರಲ್ಲೂ ಕೇರಳದಲ್ಲಿರುವ ಶಬರಿಮಲೆಯ ಸ್ವಾಮಿ ಅಯ್ಯಪ್ಪ ಎಂದರೆ ವಿವೇಕ್‌ಗೆ ಒಂಚೂರು ಭಕ್ತಿ ಜಾಸ್ತಿ. ಇದೇ ಕಾರಣದಿಂದ ವಿವೇಕ್ ಒಬೆರಾಯ್ ತಪ್ಪದೇ ಕಳೆದ ೧೨ ವರ್ಷಗಳಿಂದ ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಈ ಬಾರಿಯ ವಿವೇಕ ದರ್ಶನ ರಹಸ್ಯ ಏನೂ: ತೀರಾ ಇತ್ತೀಚೆಗೆ ಮುಂಬಯಿಯಲ್ಲಿ ವಿವೇಕ್ ಸಹೋದರಿ ಮೇಘನಾ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ ಮತ್ತೊಂದೆಡೆ ಫೆಬ್ರವರಿ ಮಧ್ಯಭಾಗದಲ್ಲಿ ವಿವೇಕ್ ಪತ್ನಿ ಪ್ರಿಯಾಂಕಾ ಕೂಡ ಡೆಲಿವರಿ ಡೇಟ್ ಗಳು ಸನಿಹಕ್ಕೆ ಬಂದು ನಿಂತಿದೆ. ಪ್ರಿಯಾಂಕಾ ಹಾಗೂ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಲು ವಿವೇಕ್ ಈ ಬಾರಿ ಶಬರಿಮಲೆಯ ಆಯ್ಯಪ್ಪ ಸ್ವಾಮಿಯ ದರ್ಶನ ಮಾಡುತ್ತಿದ್ದಾರೆ ಎನ್ನೋದು ಸಿಕ್ರೇಟ್ ಮಾತು. ಇತ್ತಕಡೆ ಈ ಕುರಿತು ವಿವೇಕ್ ಒಬೆರಾಯ್ ಮಾತ್ರ ಯಾವುದೇ ಮಾತಿಗೆ ತಲೆಯಾಡಿಸುತ್ತಿಲ್ಲ. ದೇವರ ದರ್ಶನವೇ ತನ್ನ ಮೂಲ ಪ್ರಯಾಣದ ಉದ್ದೇಶ . ಈ ಕಾರಣದಿಂದ ನನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಶಬರಿಮಲೆಯ ಯಾತ್ರೆ ಕೈಗೊಳ್ಳುತ್ತಿದ್ದೇನೆ ಎಂದು ವಿವೇಕ್ ಒಬೆರಾಯ್ ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿದ್ದಾರೆ. ಬಾಲಿವುಡ್ ನಟ ವಿವೇಕ್ ಒಬೆರಾಯ್ ಈ ಬಾರಿ ೧೩ ವರ್ಷನೇ ಆಯ್ಯಪ್ಪ ಸ್ವಾಮಿಯ ಭಕ್ತನಾಗಿ ಮಲೆ ಕಡೆಗೆ ಹೋಗಿದ್ದರು. ಅಂದಹಾಗೆ ಅವರು ಪ್ರತಿ ಬಾರಿಯೂ ಮಕರ ಸಂಕ್ರಾಂತಿ ಸಮಯದಲ್ಲಿಯೇ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ೪೧ ದಿನಗಳ ಕಾಲ ಮಾಲೆ ಧರಿಸುವ ವಿವೇಕ್ ಒಬೆರಾಯ್ ಅಯ್ಯಪ್ಪ ಭಕ್ತನೊಬ್ಬ ಯಾವ ರೀತಿಯ ಕಟ್ಟು ನಿಟ್ಟು ಪಾಲಿಸುತ್ತಾರೋ ಅಷ್ಟೇ ಕಟ್ಟುನಿಟ್ಟಿನ ಬದುಕಿಗೆ ವಿವೇಕ್ ಶರಣಾಗುತ್ತಾರೆ. ಶಬರಿಮಲೆಯ ಕುರಿತು ವಿವೇಕ್ ಒಬೆರಾಯ್ ಈ ರೀತಿ ಹೇಳುತ್ತಾರೆ : ಶಬರಿಮಲೆಯ ಯಾತ್ರೆ ಒಂದು ಮನಸ್ಸಿಗೆ ತೃಪ್ತಿ ನೀಡುವ ಕೇಂದ್ರ. ಮನಸ್ಸೊಂದು ಮೊಬೈಲ್ ಬ್ಯಾಟರಿಯಂತಿರುತ್ತದೆ. ಶಬರಿಮಲೆ ಚಾರ್ಜ್ ಮಾಡುವ ಸ್ಟೇಷನ್‌ನಂತಿರುತ್ತದೆ. ಇಂತಹ ಚಾರ್ಜಿಂಗ್ ಸ್ಟೇಷನ್‌ನಿಂದ ನನ್ನ ಮನಸ್ಸು ಶಾಂತಿಯ ಕಡೆ ಕೇಂದ್ರೀಕೃತವಾಗುತ್ತದೆ. ಧನಾತ್ಮಕ ಚಿಂತನೆಗಳನ್ನು ಜಾಸ್ತಿಯಾಗಿ ಚಿಂತಿಸುವಂತೆ ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಈ ವರ್ಷ ಇಡೀ ಯಶಸ್ಸು ನನ್ನ ಕೈಯಲ್ಲಿರುತ್ತದೆ ಎನ್ನುವ ನಂಬಿಕೆ ಬೆಳೆಯುತ್ತದೆ. ಕಪ್ಪು ಬಟ್ಟೆ ಧರಿಸಿಕೊಂಡು ಅಯ್ಯಪ್ಪ ಸ್ವಾಮಿಯ ಯಾತ್ರೆ ಕೈಗೊಳ್ಳುವ ಪರಂಪರೆ ವಿವೇಕ್ ಮುಂದೇನೂ ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನೋದು ಅವರ ಮಾತು. (vk lvk published dis articl on 21.01.2013)

ಶರ್ಲಿನ್ ಬೋಲ್ಡ್ ಸೂತ್ರ !

*ಸ್ಟೀವನ್ ರೇಗೊ, ದಾರಂದಕುಕ್ಕು ಬಾಲಿವುಡ್ ನಲ್ಲಿ ನಗ್ನತೆಗೆ ವಿಶೇಷ ಮನ್ನಣೆ ಇದೆ. ಮಲ್ಲಿಕಾ ಶೆರವಾತ್, ಪೂನಂ ಪಾಂಡೆ, ರಾಖಿ ಸಾವಂತ್ ಎನ್ನುವ ಬಿಚ್ಚು ನಟಿಯರ ಮುಂದೆ ಶರ್ಲಿನ್ ಎನ್ನುವ ಹಾಟ್ ಹುಡುಗಿ ಬಂದು ನಿಂತಿದ್ದಾಳೆ. ಅದು ಕೂಡ ಹೇಗೆ ಅಂತೀರಾ ಟೋಟಲಿ ನೇಕೇಡ್ !
ನಗ್ನತೆ ಎನ್ನೋದು ಸಿನಿಮಾ ನಗರಿಗೆ ಹೊಸ ವ್ಯಾಖೆಯಲ್ಲ. ಸಿನಿಮಾದ ಜತೆಯಲ್ಲಿ ನಗ್ನತೆಗೂ ಗಟ್ಟಿಯಾದ ತಳಹದಿ ಇದೆ. ಸಿನಿಮಾದ ಜತೆಯಲ್ಲಿ ಮಸಾಲೆ ಹಾಗೂ ಕೊಂಚ ನಗ್ನತೆ ಎನ್ನುವ ಎರಡು ಐಟಂಗಳು ಜತೆಗೂಡಿದಾಗ ಸಿನಿಮಾ ಒಂದು ರೀತಿಯ ಪ್ರಚಾರಕ್ಕೆ ಬಂದು ಮುಟ್ಟುತ್ತದೆ ಎನ್ನೋದು ಸಿನಿಮಾ ಮಂದಿಯ ಅನುಭವ ನುಡಿಗಟ್ಟು. ಅದರಲ್ಲೂ ಬಾಲಿವುಡ್ ನಲ್ಲಿ ನಗ್ನತೆಗೆ ವಿಶೇಷ ಮನ್ನಣೆ ಇದೆ. ಮಲ್ಲಿಕಾ ಶೆರವಾತ್, ಪೂನಂ ಪಾಂಡೆ, ರಾಖಿ ಸಾವಂತ್ ಎನ್ನುವ ಬಿಚ್ಚು ನಟಿಯರ ಮುಂದೆ ಶರ್ಲಿನ್ ಎನ್ನುವ ಹಾಟ್ ಹುಡುಗಿ ಬಂದು ನಿಂತಿದ್ದಾಳೆ. ಅದು ಕೂಡ ಹೇಗೆ ಅಂತೀರಾ ಟೋಟಲಿ ನೇಕೇಡ್ ! ಹೌದು. ಶರ್ಲಿನ್ ಚೋಪ್ರಾ ಹೆಸರಿನ ಜತೆಯಲ್ಲಿಯೇ ಹಾಟ್‌ನೆಸ್ ಸೇರಿಕೊಳ್ಳುತ್ತದೆ. ಬಾಲಿವುಡ್ ಪಡಸಾಲೆಯಲ್ಲಿ ಏನೋ ನಟಿಯಾಗಬೇಕು ಎನ್ನುವ ಕನಸ್ಸುಗಳನ್ನು ಕಟ್ಟಿಕೊಂಡು ಬಂದ ಹುಡುಗಿಯೊಬ್ಬಳು ಮುಂಬಯಿ ಗಲ್ಲಿಯಲ್ಲಿಯೇ ಬೆತ್ತಲಾಗಿ ಕಾಣಿಸಿಕೊಂಡಳು. ಸಿನಿಮಾಗಳಲ್ಲಿ ಅವಕಾಶ ಇಲ್ಲ ಎನ್ನುವ ನೇಮ್ ಪ್ಲೇಟ್ ನೋಡಿದ ಹುಡುಗಿ ಹಾಲಿವುಡ್ ಮಟ್ಟದಲ್ಲೂ ಬಿಚ್ಚಾಟದಲ್ಲಿ ಯಾರಿಗೂ ಕಮ್ಮಿಯಿಲ್ಲ ಎನ್ನುವ ಪುರಾವೆ ಈ ಹಿಂದೆ ಕೂಡ ಹೊರ ಬಂದಿತ್ತು. ಪದೇ ಪದೇ ಬಟ್ಟೆ ಬಿಚ್ಚು ಖಯಾಲಿಯ ಶರ್ಲಿನ್ ಚೋಪ್ರಾ ಈಗ ಕಾಮಸೂತ್ರ ೩ಡಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಹಾಟ್ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ. ಈ ಫೋಟೋದಲ್ಲಿ ಶೆರ್ಲಿನ್ ಸಂಪೂರ್ಣ ನಗ್ನವಾಗಿದ್ದು, ತಮ್ಮ ಚಿತ್ರದ ಗುಟ್ಟುಗಳನ್ನು ಒಂದೊಂದೇ ಬಿಚ್ಚಿಟ್ಟಿದ್ದಾರೆ. ಚಿತ್ರದ ಹೆಸರೇ ಕಾಮಸೂತ್ರ. ಪ್ರೇಕ್ಷಕರು ಇನ್ನೇನು ನಿರೀಕ್ಷಿಸಲು ಸಾಧ್ಯ. ಅವರ ನಿರೀಕ್ಷೆಗೆ ತಕ್ಕಂತೆ ಶೆರ್ಲಿನ್ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದಾರೆ. ರುಪೇಶ್ ಪೌಲ್ ಎಂಬ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಕ್ಯಾನೆ ಚಿತ್ರೋತ್ಸವದಲ್ಲಿ ಈ ಚಿತ್ರದ ಬಗ್ಗೆ ಈಗಾಗಲೇ ಪ್ರಕಟಿಸಲಾಗಿದೆ. ಶೆರ್ಲಿನ್ ಚೋಪ್ರಾ ಜೊತೆ ಬಾಲಿವುಡ್ ನ ಇನ್ನಿಬ್ಬರು ತಾರೆಗಳು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರಂತೆ. ವಾತ್ಸಾಯನ ಬರೆದ ಭಾರತದ ಅತ್ಯಂತ ಪ್ರಾಚೀನ ಗ್ರಂಥ ‘ಕಾಮಸೂತ್ರ’ ಮೂಲಾಧಾರವಾಗಿಟ್ಟುಕೊಂಡು ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಶರ್ಲಿನ್ ಯಾಕೆ ಬಿಚ್ಚುತ್ತಾರೆ ಗೊತ್ತಾ? : ಹಾಟ್ ಬೆಡಗಿಯರಾದ ಪೂನಂ ಪಾಂಡೆ ಹಾಗೂ ವೀಣಾ ಮಲಿಕ್ ಪ್ರವರ್ಧಮಾನಕ್ಕೆ ಬಂದ ಮೇಲಂತೂ ಶರ್ಲಿನ್‌ರನ್ನು ಮೂಸಿ ನೋಡುವವರೇ ಇಲ್ಲದಂತಾಗಿತ್ತು. ಇದ್ದಕ್ಕಿದ್ದಂತೆ ಈಕೆ ಮೈಮೇಲೆ ರತಿಮನ್ಮಥರನ್ನು ಆವಾಹಿಸಿಕೊಂಡಂತೆ ಆಡುತ್ತಿದ್ದಾರೆ ಶೆರ್ಲಿನ್ ಅಂತಾರಾಷ್ಟ್ರೀಯ ಪುರುಷರ ನಿಯತಕಾಲಿಕೆ ಪ್ಲೇಬಾಯ್ ಗೆ ಹುಟ್ಟುಡುಗೆಯ ಫೋಟೋಗಳನ್ನು ನೀಡುವ ಮೂಲಕ ಪಡ್ಡೆಗಳ ಹೃದಯಕ್ಕೆ ಲಗ್ಗೆ ಹಾಕಿದ್ದಾರೆ. ಇದುವರೆಗೂ ಬಹಳಷ್ಟು ಬಾಲಿವುಡ್ ತಾರೆಗಳು ಪ್ಲೇಬಾಯ್ ಮುಖಪುಟ ಅಲಂಕರಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಆದರೆ ಶೆರ್ಲಿನ್ ವಿಶೇಷ ಎಂದರೆ ಪ್ಲೇಬಾಯ್ ಮುಖಪುಟ ಅಲಂಕರಿಸುತ್ತಿರುವ ಮೊಟ್ಟ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆ ಪಾತ್ರರಾಗಿರುವುದು. ಪ್ಲೇಬಾಯ್ ನಿಯತಕಾಲಿಕೆಯಲ್ಲಿ ತಮ್ಮ ದೇಹ ಸೌಂದರ್ವವನ್ನು ಪ್ರದರ್ಶಿಸಬೇಕು ಎಂದು ಬಹಳಷ್ಟು ಮಂದಿ ಮಹಿಳೆಯರು ಕನಸು ಕಾಣುತ್ತಲೇ ಇದ್ದಾರೆ. ಆದರೆ ಎಲ್ಲರ ಕನಸು ನೆರವೇರಲ್ಲ. ಬಟ್ಟೆ ಬಿಚ್ಚುವವರನ್ನೆಲ್ಲಾ ಪ್ಲೇಬಾಯ್ ಪ್ರದರ್ಶಿಸುವುದೂ ಇಲ್ಲ. ಇದುವರೆಗೂ ತನ್ನನ್ನು ತಾನು ಪ್ಲೇಬಾಯ್ ಗರ್ಲ್ ಎಂದೇ ಶೆರ್ಲಿನ್ ಬಿಂಬಿಸಿಕೊಂಡಿದ್ದರು. ಸೆಕ್ಸ್ ನನಗೆ ಬಹಳ ಇಷ್ಟ: ಒಂದು ಕಾಲದಲ್ಲಿ ತಾನು ಹಲವರೊಂದಿಗೆ ಹಾಸಿಗೆ ಹಂಚಿಕೊಂಡಿದ್ದೇನೆ. ಆದರೆ ಅದು ದುಡ್ಡಿಗಾಗಿ ಎಂಬ ಸತ್ಯವನ್ನು ಹೇಳಿಕೊಳ್ಳುವ ಮೂಲಕ ಶರ್ಲಿನ್ ಚೋಪ್ರಾ ಬಿರುಗಾಳಿ ಎಬ್ಬಿಸಿದ್ದರು. ಈ ರೀತಿ ಹೇಳಿಕೊಳ್ಳುತ್ತಿರುವುದು ಯಾವುದೇ ಸಾರ್ವಜನಿಕ ಅನುಕಂಪಕ್ಕಾಗಲಿ ಅಥವಾ ಯಾರನ್ನಾದರೂ ಹುಬ್ಬೇರಿಸುವುದಾಗಲಿ ಅಥವಾ ಕೆಟ್ಟ ಹುಡುಗಿ ಒಳ್ಳೆಯಳಾದಳು ಎನ್ನಿಸಿಕೊಳ್ಳಲಾಗಲಿ ಅಲ್ಲವೇ ಅಲ್ಲ. ಕೆಲವೊಂದು ವಿಷಯಗಳನ್ನು ಹೇಳಬೇಕಾಗಿತ್ತು ಅಷ್ಟೇ. ಅದಕ್ಕಾಗಿ ಹೇಳುತ್ತಿದ್ದೇನೆ ಎನ್ನುವ ಮೂಲಕ ತಮ್ಮ ಧೈರ್ಯ ಮೆರೆದಿದ್ದಳು. ತಾನು ಬೋಲ್ಡ್ ಆಗಿ ಇರಲು ಇಷ್ಟಪಡುತ್ತೇನೆ. ಕಾಮಕೆರಳಿಸುವ ಛಾಯಾಚಿತ್ರಗಳಲ್ಲಿ ಹಾಗೂ ವಿಡಿಯೋಗಳಲ್ಲಿ ಕಾಣಿಸಿಕೊಳ್ಳಲು ಆನಂದಿಸುತ್ತೇನೆ. ಚುಡಾಯಿಸುವುದೆಂದರೆ ನಂಗಿಷ್ಟ. ಒಂದು ವೇಳೆ ತಡೆದುಕೊಳ್ಳಲಾರದಷ್ಟು ಕಾಮ ಬಯಕೆ ಅಥವಾ ಆಕರ್ಷಣೆ ಉಂಟಾದರೆ ಸೆಕ್ಸ್ ನಲ್ಲಿ ಪಾಲ್ಗೊಳ್ಳುತ್ತೇನೆ. ಆದರೆ ದುಡ್ಡಿಗಾಗಿ ಮಾತ್ರ ಇಲ್ಲ ಎಂದು ಬಿಚ್ಚು ಮಾತನಾಡಿ ಶರ್ಲಿನ್ ಪಡ್ಡೆ ಹೈಕಳನ್ನು ಒದ್ದೆ ಮಾಡಿದ್ದರು. ಇಂತಹ ಶರ್ಲಿನ್ ಈಗ ಕಾಮಸೂತ್ರದಲ್ಲಿ ಬಂದಿದ್ದಾರೆ. ಮುಂದಿನ ಶರ್ಲಿನ್ ಅವತಾರ ಕಾದು ನೋಡಬೇಕು.