Wednesday, February 15, 2012

ಕಾಲಿವುಡ್‌ಗೆ ‘ವರ’ಲಕ್ಷ್ಮೀ


ವರಲಕ್ಷ್ಮೀಯ ಹಿಂದಿರುವ ಬ್ಯಾಕ್‌ಗ್ರೌಂಡ್ ತುಂಬಾನೇ ರೋಚಕ. ವರಲಕ್ಷ್ಮೀ ಕಾಲಿವುಡ್‌ನ ಸ್ಟಾರ್ ನಟ ಶರತ್ ಕುಮಾರ್ ಅವರ ಪ್ರೀತಿಯ ಮಗಳು. ಇದೇ ಒಂದು ಹೆಸರು ವರಲಕ್ಷ್ಮೀಯನ್ನು ಜನಪ್ರಿಯತೆಯ ಮಗ್ಗಲಲ್ಲಿ ಮಲಗಿಸಲು ಸಾಕು ಅಲ್ವಾ..? ಆದರೆ ಅದೆಲ್ಲ ಬೇಡ ಎನ್ನೋದು ವರಳ ಮಾತು..

೨೪ ಕ್ಯಾರೆಟ್ ಮುಗ್ದ ನಗು. ತಂದೆಯಂತೆ ಅಗಲವಾದ ಕಣ್ಣುಗಳು. ತಾಯಿಯಂತೆ ಮಾತು. ಟೋಟಲಿ ಸಿಂಪಲ್ ಆಂಡ್ ಸ್ಟೀಟ್ ಎನ್ನುವ ಟ್ಯಾಗ್‌ಲೈನ್ ಅಂಟಿಸಿಕೊಂಡು ಬರುತ್ತಿರುವ ಹುಡುಗಿ ವರಲಕ್ಷ್ಮೀ. ಹೆಸರಿನಲ್ಲಿಯೇ ‘ವರ’ ಇರುವುದರಿಂದ ಕಾಲಿವುಡ್‌ನಲ್ಲಿ ಈ ವರ್ಷ ಸಖತ್ ಎಂಟರ್‌ಟೈನ್‌ಮೆಂಟ್ ಸಿಗುವುದು ಖಾತರಿಯಾಗಿದೆ. ಅದರಲ್ಲೂ ವರಲಕ್ಷ್ಮೀಯ ಹಿಂದಿರುವ ಬ್ಯಾಕ್‌ಗ್ರೌಂಡ್ ತುಂಬಾನೇ ರೋಚಕ. ವರಲಕ್ಷ್ಮೀ ಕಾಲಿವುಡ್‌ನ ಸ್ಟಾರ್ ನಟ ಶರತ್ ಕುಮಾರ್ ಅವರ ಪ್ರೀತಿಯ ಮಗಳು. ಇದೇ ಒಂದು ಹೆಸರು ವರಲಕ್ಷ್ಮೀಯನ್ನು ಜನಪ್ರಿಯತೆಯ ಮಗ್ಗಲಲ್ಲಿ ಮಲಗಿಸಲು ಸಾಕು.
ಆದರೆ ವರಲಕ್ಷ್ಮೀ ಟೋಟಲಿ ಭಿನ್ನ ಹುಡುಗಿ. ತಂದೆಯ ಹೆಸರನ್ನು ತನ್ನ ಹೆಸರಿನ ಜತೆಯಲ್ಲಿ ಲಿಂಕ್ ಮಾಡದೇ ಆಕ್ಟಿಂಗ್ ಮೇಲೆ ಫೋಕಸ್ ಆಗುವ ಬೆಡಗಿ ಎನ್ನುವುದು ಕಾಲಿವುಡ್ ಪಂಡಿತರ ಮಾತು. ಶರತ್ ಕುಮಾರ್ ಅವರ ಮೊದಲ ಪತ್ನಿ ಛಾಯಾ ಅವರ ಮಗಳು ವರಲಕ್ಷ್ಮೀ. ಶರತ್ ಕುಮಾರ್ ಅವರ ನಾಲ್ಕು ಜನ ಮಕ್ಕಳಲ್ಲಿ ವರ ತುಂಬಾನೇ ಚೂಟಿ ಹಾಗೂ ಓದಿನಲ್ಲೂ ಬಹಳ ಮುಂದಿದ್ದ ಹುಡುಗಿ. ಸಿನ್ಮಾದ ಬಗ್ಗೆ ಅಂತಹ ದೊಡ್ಡ ಕನಸ್ಸುಗಳನ್ನು ಇಟ್ಟುಕೊಂಡು ಕಾಲಿವುಡ್ ಇಂಡಸ್ಟ್ರಿಗೆ ಎಂಟ್ರಿಯಾದ ಹುಡುಗಿಯಲ್ಲ. ವರ ನಿಜಕ್ಕೂ ಮುಂದೆ ಓದಬೇಕು ಅಂದುಕೊಂಡಿದ್ದಳು. ಆದರೆ ತಂದೆಯ ಬಣ್ಣದ ಟಚ್ ವರನಿಗೂ ಆಕರ್ಷಣೆ ಮಾಡಿತು ಎನ್ನುವುದು ಅವರ ಆಪ್ತರ ಮಾತು.
ಪ್ರೇಮಿಗಳ ದಿನಕ್ಕೆ ಚಿತ್ರ:
ಕಾಲಿವುಡ್‌ನಲ್ಲಿ ಫೆಬ್ರವರಿ ೧೪ರ ಪ್ರೇಮಿಗಳ ದಿನದಂದು ನಿರ್ದೇಶಕ ವಿಘ್ನೇಶ್ ಶಿವನ್ ಅವರ ‘ಪೋಡಾ ಪೋಡಿ’ ಚಿತ್ರದಲ್ಲಿ ಶಿಲಬರಸನ್ ಆಲಿಯಾಸ್ ಶಿಂಬುವಿಗೆ ಲೀಡ್ ನಾಯಕಿಯಾಗಿ ವರ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಕುರಿತು ಭರ್ಜರಿ ಪ್ರಚಾರ ಕಾರ‍್ಯ ನಡೆಯುತ್ತಿದೆ. ಅದರಲ್ಲೂ ಕಳೆದ ವರ್ಷ ಶಿಂಬು ನಟಿಸಿದ ಬಹಳಷ್ಟು ಚಿತ್ರಗಳು ಕಾಲಿವುಡ್‌ನಲ್ಲಿ ಒಳ್ಳೆಯ ರೇಟಿಂಗ್ ಪಡೆದುಕೊಂಡಿತ್ತು. ಹೊಸ ವರ್ಷದ ಆರಂಭದಲ್ಲಿ ‘ಪೋಡಾ ಪೋಡಿ’ ಕಾಮಿಡಿ ವಿದ್ ರೋಮ್ಯಾನ್ಸ್ ಬರಿತ ಚಿತ್ರವಾಗಿದ್ದರಿಂದ ಮತ್ತಷ್ಟೂ ಕ್ರೇಜ್ ಹುಟ್ಟಿಸಿ ಓಡಾಡುವ ಲಕ್ಷಣಗಳನ್ನು ಬಿಟ್ಟು ಕೊಟ್ಟಿದೆ.
‘ಪೋಡಾಪೋಡಿ’ ಚಿತ್ರದಲ್ಲಿ ವರಲಕ್ಷ್ಮೀ ಬ್ಯಾಲೆ ಡ್ಯಾನ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ವಿದೇಶ ಕೆಲವು ಬ್ಯಾಲೆ ಕ್ಲಾಸ್‌ಗಳಿಗೂ ಸುತ್ತು ಹೊಡೆದು ಬ್ಯಾಲೆ ನೃತ್ಯವನ್ನು ಕಲಿತು ಬಂದಿದ್ದಾರೆ. ಶಿಂಬು ಚಿತ್ರದಲ್ಲಿ ಸಾಲ್ಸಾ ಡ್ಯಾನ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಟೈಟಲ್‌ನ್ನು ಮೂರು ಬಾರಿ ಬದಲಾಯಿಸಿಕೊಂಡು ಕೊನೆಗೆ ‘ಪೋಡಾಪೋಡಿ’ಯಲ್ಲಿ ತೃಪ್ತಿ ಕಾಣುವಂತಾಗಿದೆ.
ಶಿಂಬುವಿನ ಡೇಟ್ಸ್ ಕ್ಲ್ಯಾಶ್‌ಗಳಿಂದ ಚಿತ್ರದ ಆರಂಭವೇ ಸರಿಯಾಗಿ ನಡೆದಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಚಿತ್ರದ ಚಿತ್ರೀಕರಣ ವೇಗ ಪಡೆದುಕೊಂಡಿತ್ತು. ಅದರಲ್ಲೂ ಚಿತ್ರದ ಬಹುಭಾಗ ಚಿತ್ರೀಕರಣ ಕೆನಡಾದ ಸುಂದರ ತಾಣಗಳಲ್ಲಿ ನಡೆದಿತ್ತು. ಅಲ್ಲಿನ ಹವಾಮಾನ ಚಿತ್ರೀಕರಣಕ್ಕೆ ಬಹಳಷ್ಟು ತಡೆ ಮಾಡಿತ್ತು. ಜತೆಯಲ್ಲಿ ವರಲಕ್ಷ್ಮೀಯನ್ನು ಸಿನ್ಮಾಕ್ಕೆ ಇಳಿಸುವ ಕುರಿತು ನಟ ಶರತ್ ಕುಮಾರ್ ಕೂಡ ಹಿಂದೇಟು ಹಾಕಿದ್ದರು. ಹೀಗಾಗಿ ಮೂರು ವರ್ಷಗಳ ಬಳಿಕ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ ಎನ್ನೋದು ನಿರ್ದೇಶಕರ ಮಾತು.
ವರಲಕ್ಷ್ಮೀಗೆ ಡಬ್ಬಲ್ ಚಾನ್ಸ್:
ವರಲಕ್ಷ್ಮೀ ಅಭಿನಯದ ‘ಪೋಡಾಪೋಡಿ’ ಚಿತ್ರ ಇನ್ನೂ ಥಿಯೇಟರ್‌ಗೆ ಬಂದು ಬಿದ್ದಿಲ್ಲ. ಆದರೆ ಅದಕ್ಕಿಂತಲೂ ಮೊದಲು ಎರಡು ಚಿತ್ರಗಳ ನಾಯಕಿ ಸ್ಥಾನಕ್ಕೆ ವರ ಬುಕ್ ಆಗಿದ್ದಾಳೆ. ಚಿತ್ರವೊಂದು ಬಿಡುಗಡೆಗೂ ಮುನ್ನ ಮತ್ತರೆಡು ಚಿತ್ರಗಳಿಗೆ ಸೆಲೆಕ್ಟ್ ಆಗೋದು ಕಾಲಿವುಡ್‌ನಲ್ಲಿ ತೀರಾ ಅಪರೂಪದ ಪ್ರಸಂಗ ಎನ್ನೋದು ಬಲ್ಲವರ ಮಾತು.
ಅಂದಹಾಗೆ ವರಲಕ್ಷ್ಮೀ ಸೆಲೆಕ್ಟ್ ಆಗಿರೋದು ಖ್ಯಾತ ತೆಲುಗು ನಟ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ನಟಿಸುತ್ತಿರುವ ‘ಗೌರವಂ’ ಚಿತ್ರಕ್ಕೆ, ಈ ಚಿತ್ರವನ್ನು ಖುದ್ದು ನಾಗಾರ್ಜುನ ತಮ್ಮ ಹೋಮ್ ಬ್ಯಾನರ್ ಅನ್ನಪೂರ್ಣ ಸ್ಟುಡಿಯೋ ಮೂಲಕ ತರಲಿದ್ದಾರೆ. ಖ್ಯಾತ ನಿರ್ದೇಶಕ ರಾಧಾ ಮೋಹನ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಫೋಟೋ ಶೂಟ್‌ಗಳು ನಡೆದಿದೆ. ಇನ್ನೂಳಿದಂತೆ ಬರುವ ತಿಂಗಳಿನಿಂದ ಚಿತ್ರದ ಚಿತ್ರೀಕರಣ ನಡೆಯಲಿದೆ. ಈ ನಂತರ ವರ ಮತ್ತೊಂದು ತಮಿಳು ಸಿನ್ಮಾಕ್ಕೆ ಬುಕ್ ಆಗಿದ್ದಾಳೆ. ಚಿತ್ರದ ಡಿಟೇಲ್‌ಗಳು ಇನ್ನೂ ಹೊರಬಿದ್ದಿಲ್ಲ. ಟೋಟಲಿ ವರ ಲಕ್ಷ್ಮೀಯ ಸಿನ್ಮಾ ಬಿಡುಗಡೆಯ ಮೊದಲೇ ಲಕ್ ಕುದುರಿದೆ. ಇದು ಖಾಯಂ ಆಗಿ ಉಳಿದು ಹೋಗುತ್ತಾ ಎನ್ನುವ ಡೌಟ್ ಪೋಡಾಪೋಡಿಯ ಬಿಡುಗಡೆಯ ನಂತರವೇ ತಿಳಿದೀತು ಅಲ್ವಾ...?
(vk lvk puravani published dis article on 14.02.2012)

ಸೀಲ್ ಮುರಿದು ಹೋಯಿತು !


ಹಾಲಿವುಡ್ ದುನಿಯಾದಲ್ಲಿ ನಾಲ್ಕೈದು ದಿನಗಳಿಗೆ ನಟ-ನಟಿಯರ ಅದಲು-ಬದಲು, ಬ್ರೇಕ್ ಆಫ್, ಲಿಂಕ್ ಆಫ್‌ಗಳ ಸುದ್ದಿಯಲ್ಲಿದ್ದವರಿಗೂ ಹೊಟ್ಟೆಕಿಚ್ಚು ತರುವಂತೆ ನಡೆದುಕೊಂಡವರು ಈಗ ಬೇರೆಯಾಗಲು ನಿರ್ಧಾರ ಮಾಡಿದ್ದಾರೆ. ಈ ವಿಷ್ಯಾ ಕೇಳಿದ ಕೂಡಲೇ ಅವರನ್ನು ಮಾದರಿಯಾಗಿ ಇಟ್ಟುಕೊಂಡವರ ಹೃದಯ ನೊಂದು ಬಿಡುತ್ತದೆ. ಮನಸ್ಸು ಭಾರವಾಗಿ ಬಿಡುತ್ತದೆ.

ಒಂದಲ್ಲ ಎರಡಲ್ಲ ಬರೋಬರಿ ಏಳು ವರ್ಷ. ತುಂಬಾನೇ ಸುಂದರವಾಗಿ ಬದುಕು ಕಟ್ಟಿಕೊಂಡವರು. ನನಗೆ ನೀನು ನಿನಗೆ ನಾನು ಜತೆಗೆ ಮೂವರು ಮಕ್ಕಳು ಎನ್ನುವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡವರು. ಹಾಲಿವುಡ್ ದುನಿಯಾದಲ್ಲಿ ನಾಲ್ಕೈದು ದಿನಗಳಿಗೆ ನಟ-ನಟಿಯರು ಅದಲು-ಬದಲು, ಬ್ರೇಕ್ ಆಫ್, ಲಿಂಕ್ ಆಫ್‌ಗಳ ಸುದ್ದಿಯಲ್ಲಿದ್ದವರಿಗೂ ಹೊಟ್ಟೆಕಿಚ್ಚು ತರುವಂತೆ ನಡೆದುಕೊಂಡವರು ಈಗ ಬೇರೆಯಾಗಲು ನಿರ್ಧಾರ ಮಾಡಿದ್ದಾರೆ. ಈ ವಿಷ್ಯಾ ಕೇಳಿದ ಕೂಡಲೇ ಅವರನ್ನು ಮಾದರಿಯಾಗಿ ಇಟ್ಟುಕೊಂಡವರ ಹೃದಯ ನೊಂದು ಬಿಡುತ್ತದೆ. ಮನಸ್ಸು ಭಾರವಾಗಿ ಬಿಡುತ್ತದೆ.
ಇದು ಅಮೆರಿಕದ ಸೂಪರ್ ಮೊಡೆಲ್ ಹೈಡಿ ಕ್ಲುಮ್ ಹಾಗೂ ಅಮೆರಿಕದ ಸೋಲೋ ಗಾಯಕ ಎಂದೇ ಖ್ಯಾತಿ ಉತ್ತುಂಗದಲ್ಲಿರುವ ಸೀಲ್ ದಂಪತಿಗಳ ಬ್ರೇಕ್ ಆಫ್ ಕತೆ. ಇಬ್ಬರು ಸೆಲೆಬ್ರಿಟಿಯ ಕಾಲಂಗಳಲ್ಲಿ ಮಿಂಚುತ್ತಿದ್ದವರು ಯಾಕೋ ಗೊತ್ತಿಲ್ಲ.... ನೀನು ಬೇರೆ ಇದ್ದುಬಿಡು ನಾನು ಬೇರೆಯಾಗಿ ಬದುಕುತ್ತೇನೆ ಎನ್ನುವ ಏಕಾಂಗಿತನದ ಮಾತುಗಳನ್ನು ಜತೆಯಲ್ಲಿಯೇ ಕೋರಸ್ ಹಾಡುತ್ತಿದ್ದಾರೆ. ಆದರೆ ಈ ಇಬ್ಬರು ಬೇರೆಯಾಗುವ ನಿರ್ಧಾರದಿಂದ ಬಡಪಾಯಿ ಮೂರು ಮಕ್ಕಳಿಗೆ ಹೆತ್ತವರು ಇದ್ದರೂ ಇಲ್ಲದಂತೆ ಬದುಕುವ ಸ್ಥಿತಿ.
‘ನಾವಿಬ್ಬರೂ ಏಳು ವರ್ಷಗಳ ಕಾಲ ಜತೆಯಾಗಿ ಬದುಕು ಕಟ್ಟಿದ್ದೇವೆ. ಪ್ರೀತಿ, ಪ್ರಾಮಾಣಿಕತೆ ಎಲ್ಲವೂ ನಮ್ಮ ವೈವಾಹಿಕ ಸಂಬಂಧದಲ್ಲಿ ಜತೆಯಲ್ಲಿತ್ತು. ಆದರೆ ವೈವಾಹಿಕ ಬದುಕು ಸಾಕು ಎನ್ನಿಸುತ್ತಿದೆ. ಯಾವುದೇ ರಸ ಇಲ್ಲದ ಸಂಸಾರದೊಂದಿಗೆ ನಾವಿಬ್ಬರೂ ಬದುಕುವುದು ಇನ್ನೂ ಸುಲಭವಿಲ್ಲ ಎನ್ನುವ ನಿರ್ಧಾರಕ್ಕೆ ಬಂದು ಮುಟ್ಟಿದ್ದೇವೆ. ಅದಕ್ಕಾಗಿ ನಾವಿಬ್ಬರೂ ಬೇರೆ ಬೇರೆಯಾಗಿ ಇರಲು ನಿರ್ಧಾರ ಮಾಡಿದ್ದೇವೆ. ನಮ್ಮ ಏಳು ವರ್ಷಗಳ ಸಂಬಂಧದ ಕುರಿತು ನನಗೆ ಅಪಾರ ಗೌರವವಿದೆ. ಇನ್ನೂ ಮುಂದೆನೂ ಇಬ್ಬರ ನಡುವೆ ಅದೇ ರೀತಿಯ ಗೌರವ, ಪ್ರೀತಿಯ ಭಾವನೆ ಇದ್ದೇ ಇದೆ. ಆದರೆ ಜತೆಯಾಗಿ ಮಾತ್ರ ಬದುಕುವುದು ಸಾಧ್ಯವಿಲ್ಲ ಎಂದು ಸೂಪರ್ ಮೊಡೆಲ್ ಹೈಡಿ ಕ್ಲುಮ್ ಮಾಧ್ಯಮಗಳಲ್ಲಿ ಬಾಯಿ ಬಿಟ್ಟಿದ್ದಾರೆ.
ಅಂದಹಾಗೆ ವಿಕ್ಟೋರಿಯಾ ಸಿಕ್ರೇಟ್ ಫೇಮ್ ಹೈಡಿಗೆ ಈ ಮೊದಲೇ ಮದುವೆಯಾಗಿತ್ತು. ಮೊದಲ ಮದುವೆಯಲ್ಲಿ ಒಂದು ಹೆಣ್ಣು ಮಗು ಕೂಡ ಇದೆ. ನಂತರ ಹೈಡಿ ಸೋಲ್ ಸಿಂಗರ್ ಸೀಲ್ ಜತೆಯಲ್ಲಿ ೨೦೦೫ರಲ್ಲಿ ಮೆಕ್ಸಿಕೋದಲ್ಲಿ ಮದುವೆಯಾಯಿತು. ಕೆಲವು ತಿಂಗಳ ನಂತರ ಇಬ್ಬರೂ ಭಾರತಕ್ಕೆ ಪ್ರವಾಸ ಬಂದಿದ್ದಾಗ ಇಲ್ಲಿಯೇ ಶಾಸ್ತ್ರ ಬದ್ಧವಾಗಿ ಮದುವೆ ಕೂಡ ಆಗಿದ್ದರು. ಆದರೆ ಹಾಲಿವುಡ್‌ನಲ್ಲಿ ದಂಪತಿಗಳು ಬೇರೆಯಾಗುವುದು ತೀರಾ ಕಾಮನ್. ಆದರೆ ಮದುವೆಯ ಲಾಂಗ್ ಜರ್ನಿಯಲ್ಲಿದ್ದ ದಂಪತಿಗಳಿಬ್ಬರು ಬೇರೆಯಾಗುತ್ತಿರುವುದು ಮಾತ್ರ ತುಂಬಾ ಬೇಸರದ ವಿಷ್ಯಾ .
ಹೈಡಿಯ ರಂಗೀನ್ ಬದುಕು:
ಸೂಪರ್ ಮೊಡೆಲ್ ಹೈಡಿ ನಿಜಕ್ಕೂ ರಂಗೀನ್ ದುನಿಯಾ ಕಂಡ ಹುಡುಗಿ. ಹೈಡಿಯ ಮೊದಲ ಮದುವೆ ಸ್ಟೈಲಿಷ್ಟ್ ರಿಚಿ ಪಿಪಿನೋ ಜತೆಯಲ್ಲಿ ನಡೆದಿತ್ತು. ಅದು ಬಹಳ ಕಾಲ ಬಾಳ್ವಿಕೆ ಬಂದಿರಲಿಲ್ಲ. ಇದೇ ಹೊತ್ತಲ್ಲಿ ಫಾರ್ಮೂಲಾ ವನ್ ಟೀಮ್‌ವೊಂದನ್ನು ಇಟ್ಟುಕೊಂಡು ಉದ್ಯಮಿಯಾಗಿದ್ದ ಫ್ಲೆವಿಯೋ ಜತೆಯಲ್ಲೂ ಲಿಂಕ್ ಆಫ್ ಕಾಣಿಸಿಕೊಂಡು ಹೈಡಿ ಗರ್ಭಿಣೆಯಾಗಿದ್ದಳು. ಇದೇ ಹೊತ್ತಲ್ಲಿ ಅಮೆರಿಕದ ಸೋಲ್ ಸಿಂಗರ್ ಸೀಲ್ ಕೂಡ ಹೈಡಿಯ ಮೋಹಕ್ಕೆ ಸಿಕ್ಕಿಕೊಂಡು ಏಳು ವರ್ಷಗಳ ಕಾಲ ಸಂಸಾರದ ರಥವನ್ನು ಓಡಿಸಿದ. ಈಗ ಹೈಡಿ ಬೇರೆಯೊಬ್ಬನ ತೆಕ್ಕೆಯನ್ನು ಬಯಸುತ್ತಿದ್ದಾಳೆ ಎನ್ನೋದು ಅಮೆರಿಕದ ಪಾಪರಾಜಿಗಳ ಮಾಹಿತಿ.
ಆದರೆ ಕಲೆ, ಫ್ಯಾಶನ್, ಸಮಾಜ ಸೇವೆಯಂತಹ ನಾನಾ ಚಟುವಟಿಕೆಗಳಲ್ಲಿ ಬ್ಯುಸಿ ಇರುವ ಹೈಡಿ ನಿಜಕ್ಕೂ ಸೀಲ್‌ನನ್ನು ಅರ್ಧದಲ್ಲಿಯೇ ಬಿಟ್ಟು ಹೋಗುತ್ತಿರುವುದು ಯಾಕೆ ಎನ್ನುವ ರಹಸ್ಯವಾದ ವಿಚಾರವನ್ನು ಎಲ್ಲೂ ಹೇಳಿಕೊಂಡಿಲ್ಲ. ಆದರೆ ಹೈಡಿ ಹೇಳುತ್ತಿರುವುದು ಒಂದೇ ವಿಷ್ಯಾ ಮಾರಾಯ್ರೆ. ನನಗೆ ಈಗ ಸಾಂಗಾತಿ ಜೀವನ ಸಾಕಾಗಿ ಹೋಗಿದೆ. ಬದುಕಿನಲ್ಲಿ ಹೊಸತನದ ಹುಡುಕಾಟ ಮಾಡುತ್ತಿದ್ದೇನೆ. ಅಂದಹಾಗೆ ಇದು ಹೊಸ ಸಾಂಗಾತಿಯ ಹುಡುಕಾಟ ಸೂಚನೆ ಅಲ್ಲ ತಾನೇ..? ಎನ್ನುವ ಕುತೂಹಲ ಅವರ ಮಾಜಿ ಪತಿ ಸೀಲ್‌ಗೆ ಬರದೇ ಹೋದರೂ, ಅವರ ಅಭಿಮಾನಿಗಳ ಮೂಗಿಗಂತೂ ಬಡಿದಿರುವುದು ದಿಟ ಅಲ್ವಾ..?

ಪಾಕ್ ಹುಡುಗಿಯ ‘ಎದೆ’ಗಾರಿಕೆ


ಪಾಕ್‌ನ ಮೊಡರ್ನ್ ಮಹಿಳೆಯರು ತಮ್ಮ ದೇಹಸಿರಿಯನ್ನು ನಾಲ್ಕು ಗೋಡೆಗಳ ಮಧ್ಯೆ ಬಿಚ್ಚುವ ಬದಲು ತೆರೆದ ಮೈದಾನದಲ್ಲಿ ಬಿಚ್ಚುವ ಎದೆಗಾರಿಕೆ ತೋರಿಸುತ್ತಿದ್ದಾರೆ. ವೀಣಾ ಮಲ್ಲಿಕ್ ನಂತರ ಈಗ ಇರಾನಿಯನ್ ನಟಿ ಗೋಲ್ಶ್‌ಪ್ತ್ ಫರ‍್ಹಾನಿ ‘ಮೈ’ದಾನ ಮಾಡಿದ್ದಾಳೆ. ಈ ಮೂಲಕ ಬೆತ್ತಲೆ ಚಿತ್ರವನ್ನು ಹುಡುಕಾಡುವ ನೂರಾರು ಕೈಗೆಗಳಿಗೆ ಗಟ್ಟಿ ವಸ್ತೊಂದು ಸಿಕ್ಕಿದೆ.

ಪಾಕಿಸ್ತಾನ ಎನ್ನುವ ಹೆಸರಿನ ಹಿಂದೆ ಕಟ್ಟರ್ ಸಂಪ್ರದಾಯವಾದಿ ಎನ್ನುವ ಬಿಲ್ಲೆ ಕುತ್ತಿಗೆಯಲ್ಲಿ ಸಯನೈಡ್ ಕುಪ್ಪಿಯಂತೆ ಜೋತು ಬಿದ್ದಿದೆ. ಅಲ್ಲಿನ ಆಚಾರ- ವಿಚಾರ, ಸಂಪ್ರದಾಯ, ಸಂಸ್ಕೃತಿ ಎಲ್ಲವೂ ಮುಸುಕುಧಾರಿಯಂತೆ ಹೊಳಪು ನೀಡುತ್ತದೆ. ಅದರಲ್ಲೂ ಪಾಕಿಸ್ತಾನದ ಮಹಿಳೆಯರು ಎಂದ ಕೂಡಲೇ ಸ್ಕಾರ್ಪ್‌ಧಾರಿಣಿಯಾಗಿರುವುದೇ ಹೆಚ್ಚು.
ಆದರೆ ಕಳೆದ ಒಂದರೆಡು ವರ್ಷಗಳಿಂದ ಪಾಕಿಸ್ತಾನದ ಮಣ್ಣು, ನೀರು, ಹೆಣ್ಣು ಮೂರು ಬದಲಾವಣೆಗೆ ಗುರಿಯಾಗಿದೆ. ಎಲ್ಲವೂ ಸಂಪ್ರದಾಯಗಳಿಗೆ ವಿರುದ್ಧವಾಗಿ ಗ್ಲೋಬಲ್ ಟಚ್ ರಾಷ್ಟ್ರಗಳ ವಸ್ತುಗಳಂತೆ ಚಮಕ್ ತೋರಿಸುತ್ತಿದೆ. ಅದರಲ್ಲೂ ಪಾಕ್‌ನ ಮೊಡರ್ನ್ ಮಹಿಳೆಯರು ತಮ್ಮ ದೇಹಸಿರಿಯನ್ನು ನಾಲ್ಕು ಗೋಡೆಗಳ ಮಧ್ಯೆ ಬಿಚ್ಚುವ ಬದಲು ತೆರೆದ ಮೈದಾನದಲ್ಲಿ ಬಿಚ್ಚುವ ಎದೆಗಾರಿಕೆ ತೋರಿಸುತ್ತಿದ್ದಾರೆ.
ತೀರಾ ಇತ್ತೀಚೆಗೆ ಪಾಕಿಸ್ತಾನದ ನಟಿ ಕಮ್ ಬಾಲಿವುಡ್ ಬೆಡಗಿ ವೀಣಾ ಮಲ್ಲಿಕ್ ಖ್ಯಾತ ಮಾಸಿಕವೊಂದರ ಮುಖಪುಟದಲ್ಲಿಯೇ ಮೈ ಚಳಿ ಬಿಟ್ಟು ಬೆತ್ತಲಾಗಿ ಪಡ್ಡೆ ಹೈಕಳ ಗೋಡೆಯಲ್ಲಿ ರಾರಾಜಿಸಿಕೊಂಡಿರುವ ವಿಚಾರದ ಬೆನ್ನಲ್ಲೆ ಈಗ ಮತ್ತೊಂದು ಹುಡುಗಿ ತಾನು ಕೂಡ ಬಿಚ್ಚುವಾಟಕ್ಕೆ ರೆಡಿ ಎಂದುಕೊಂಡು ದೇಹಸಿರಿಯನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಿಕರಿ ಹಾಕಿದ್ದಾಳೆ.
ಪಾಕ್‌ನಂತೆ ಮತ್ತೊಂದು ಕಟ್ಟರ್ ಮುಸ್ಲಿಂ ರಾಷ್ಟ್ರ ಪರ್ಶಿಯಾ ಮೂಲದ ಇರಾನಿಯನ್ ನಟಿ ಗೋಲ್ಶ್‌ಪ್ತ್ ಫರ‍್ಹಾನಿ ಫ್ರೆಂಚ್ ಮಾಸಿಕವೊಂದಕ್ಕೆ ತನ್ನ ತೆರೆದ ಎದೆಗಾರಿಕೆ ತೋರಿಸಿ ಸಂಪ್ರದಾಯವಾದಿಗಳ ಇರಿಸುಮುರಿಸುವಿಗೆ ಕಾರಣವಾಗಿ ತನ್ನ ಮೂಲ ರಾಷ್ಟ್ರಕ್ಕೆ ಮತ್ತೊಂದು ಕಾಲಿಡಬಾರದು ಎನ್ನುವ ಫತ್ವಾಕ್ಕೆ ಗುರಿಯಾಗಿದ್ದಾಳೆ.
ಫ್ರೆಂಚ್ ಭಾಷೆಯ ಅತ್ಯಂತ ಜನಪ್ರಿಯ ಮಾಸಿಕ ಎಂದು ಹಣೆಪಟ್ಟಿಕಟ್ಟಿಕೊಂಡು ಬೀಗುತ್ತಿರುವ ‘ಮೇಡಂ ಲೀ ಫಿಗ್‌ರ್ರೋ’ ಮ್ಯಾಗಜೀನ್‌ಗೆ ೨೯ರ ಹರೆಯದ ಫರ‍್ಹಾನಿ ಮುಖಪುಟದ ಸುಂದರಿಯಾಗಿದ್ದರು. ಅದರಲ್ಲೂ ಫರ‍್ಹಾನಿ ಮುಖಪುಟದಲ್ಲಿ ಮಾಡಿದ ಬಿಚ್ಚಾಟಕ್ಕೆ ಸಂಪ್ರದಾಯವಾದಿಗಳು ಇನ್ನೂ ಮುಂದೆ ಫ್ರಾನ್ಸ್‌ನಲ್ಲಿಯೇ ಇದ್ದು ಬಿಡಮ್ಮಾ . ನಮ್ಮ ದೇಶಕ್ಕಂತೂ ಬರಬೇಡ. ಇಲ್ಲಿ ಇದ್ದ ಮಹಿಳೆಯರು ನಿನ್ನಂತೇ ಬಿಚ್ಚಾಟ ಮಾಡಲು ರೆಡಿಯಾದರೆ... ನಮಗೇನೂ ಕಿಮ್ಮತ್ತಿಲ್ಲ ಎಂದು ಒಕ್ಕಾಣೆ ಇರುವ ಜಾಹೀರಾತನ್ನು ಖ್ಯಾತ ಟೆಲಿಗ್ರಾಫ್ ಪತ್ರಿಕೆಯಲ್ಲಿ ಸಂಪ್ರದಾಯವಾದಿಗಳು ಹಾಕಿದ್ದಾರೆ.
ಈ ಜಾಹೀರಾತು ನೋಡಿ ಕೆಂಡಮಂಡಲವಾದ ನಟಿ ಗೋಲ್ಶ್‌ಪ್ತ್ ಫರ‍್ಹಾನಿ ಗರಂ ಆಗಿ ಪ್ರತಿಕ್ರಿಯೆ ನೀಡಿ ‘ ಇಂತಹ ಫತ್ವಾ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ. ಬಿಚ್ಚಾಟ ಮಾಡುವುದು ಆಧುನಿಕ ಸಮಾಜದಲ್ಲಿ ಎಲ್ಲಿಯೂ ತಪ್ಪು ಎಂದು ತೋರಿಸಿಲ್ಲ. ಸಂಪ್ರದಾಯವಾದಿಗಳು ಬದಲಾಗಬೇಕು. ಇಂತಹ ಸನ್ನಿವೇಶಗಳನ್ನು ಉದಾರತೆಯಿಂದ ತೆಗೆದುಕೊಳ್ಳಬೇಕು’ ಎಂದಿದ್ದಾಳೆ.
ಅಷ್ಟಕ್ಕೂ ಮ್ಯಾಗಜೀನ್‌ನಲ್ಲಿ ಹಾಕಿಕೊಂಡಿರುವ ಮುಖಪುಟದ ಚಿತ್ರದಲ್ಲಿ ನಟಿ ಗೋಲ್ಶ್‌ಪ್ತ್ ಫರ‍್ಹಾನಿ ಕಪ್ಪು- ಬಿಳುಪು ಬ್ಯಾಕ್‌ಗ್ರೌಂಡ್‌ನಲ್ಲಿ ಫ್ರೆಂಚ್ ಭಾಷೆಯಲ್ಲಿ ‘ಕ್ರೋಪ್ಸ್ ಇಟ್ ಏಮ್ಸ್ ’ ಎಂದರೆ ಮನಸ್ಸು ಹಾಗೂ ದೇಹ ಮುಕ್ತವಾಗಿರಲಿ ಎನ್ನುವ ಸಂದೇಶಕ್ಕೆ ರೂಪದರ್ಶಿಯಾಗಿ ಕಂಗೋಳಿಸಿದ್ದಾರೆ. ಇದರಲ್ಲಿ ಅಂತಹ ದೊಡ್ಡ ತಪ್ಪು ಇಲ್ಲ ಎನ್ನೋದು ಗೋಲ್ಶ್‌ಪ್ತ್ ಫರ‍್ಹಾನಿ ಅವರನ್ನು ಓಲೈಸಿಕೊಂಡಿರುವವರ ಮಾತು.
ಅಂದಹಾಗೆ ಈ ಬಿಚ್ಚಾಟದ ನಡುವೆ ಹಾಲಿವುಡ್‌ನಲ್ಲಿ ಗೋಲ್ಶ್‌ಪ್ತ್ ಫರ‍್ಹಾನಿ ನಟಿಸಿರುವ ಬಿಡುಗಡೆಗೆ ಸಿದ್ಧವಾಗಿ ನಿಂತಿರುವ ‘ಬೋಡಿ ಆಫ್ ಲೇಸ್’ ಚಿತ್ರದ ಪ್ರಚಾರಕ್ಕಾಗಿ ಈ ರೀತಿಯ ಕಳಪೆ ಗಿಮಿಕ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ‘ಬೋಡಿ ಆಫ್ ಲೇಸ್’ ಚಿತ್ರದಲ್ಲಿ ಅಮೆರಿಕದ ಸಿಕ್ರೇಟ್ ಏಜೆಂಟ್ ಗಾಯಗೊಂಡು ಮುಸ್ಲಿಂ ರಾಷ್ಟ್ರಕ್ಕೆ ಬಂದಾಗ ಅವನ ಶುಶ್ರೂಷೆ ಮಾಡಿ ಪುನಃ ಅಮೇರಿಕಕ್ಕೆ ಕಳುಹಿಸಲು ನೆರವಾಗುವ ದಾದಿಯ ಪಾತ್ರದಲ್ಲಿ ಗೋಲ್ಶ್‌ಪ್ತ್ ಫರ‍್ಹಾನಿ ನಟಿಸಿದ್ದಾರೆ.
ಟೋಟಲಿ ಗೋಲ್ಶ್‌ಪ್ತ್ ಫರ‍್ಹಾನಿ ಬರೀ ಮ್ಯಾಗಜೀನ್ ಲೇವೆಲ್ ಬಿಟ್ಟು ಫೇಸ್‌ಬುಕ್‌ನಲ್ಲೂ ತನ್ನ ಬೆತ್ತಲಾದ ಚಿತ್ರವನ್ನು ಹಾಕಿಕೊಂಡು ಭರ್ಜರಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ನಟಿ ಗೋಲ್ಶ್‌ಪ್ತ್ ಫರ‍್ಹಾನಿ ಬೆತ್ತಲಾಗಿರುವ ಹಿಂದೆ ಚಿತ್ರದ ಪ್ರಚಾರದ ಗುಟ್ಟು ಅಡಗಿದೆಯಾ..? ಮ್ಯಾಗಜೀನ್‌ವೊಂದು ತನ್ನ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮಾಡಿರುವ ತಂತ್ರನಾ ಎನ್ನುವ ಹತ್ತಾರು ಪ್ರಶ್ನೆಗಳಿಗೆ ಉತ್ತರವಂತೂ ಸಿಕ್ಕಿಲ್ಲ. ಆದರೆ ಬೆತ್ತಲೆ ಚಿತ್ರವನ್ನು ಹುಡುಕಾಡುವ ನೂರಾರು ಕೈಗೆಗಳಿಗೆ ಗಟ್ಟಿ ವಸ್ತೊಂದು ಸಿಕ್ಕಿರುವುದರಲ್ಲಿ ಯಾವುದೇ ಡೌಟ್ ಇಲ್ಲ ಅಲ್ವಾ..?

ನನ್ನ ಪತ್ರಿಕೆ ನನ್ನ ಬರಹ-50


(vk lvk puravani published dis aricle on 03.02.2012)

ನನ್ನ ಪತ್ರಿಕೆ ನನ್ನ ಬರಹ-49


(vk daily main page published dis article on yuvagarnaje 15.02.2012)

Monday, February 13, 2012

ಅನ್‌ಲಕ್ಕಿ ಹುಡುಗನ ಹುಡುಕಾಟ


ಬಾಲಿವುಡ್ ಅಂಗಣದಲ್ಲಿ ರಾಜಾನಂತೆ ಮಿಂಚಬೇಕಾದ ಹುಡುಗ ವಿರಹ ಗೀತೆ ಹಾಡುವಷ್ಟು ಅವನ ಕಾಲ ಕೆಟ್ಟುಹೋಗಿ ಗ್ಯಾರೇಜ್ ಸೇರಿದೆ. ಅತ್ತ ಪ್ರೀತಿಸಿದ ಹುಡುಗಿ ಕೈಕೊಟ್ಟಳು. ಇತ್ತ ಖುದ್ದು ತಂದೆಯೇ ಬಂದು ಚಿತ್ರ ನಿರ್ಮಾಣ, ನಿರ್ದೇಶನ ಮಾಡಿದರೂ ಹುಡುಗ ಮೇಲೆ ಬೀಳಲೇ ಇಲ್ಲ ಎನ್ನೋದು ಅನ್‌ಲಕ್ಕಿಯ ವಿಷ್ಯಾ.

ಯಾಕೋ ಗೊತ್ತಿಲ್ಲ ಮಾರಾಯ್ರೆ. ಈ ಪಾಟಿನೂ ಅದೃಷ್ಟ ಕೈ ಕೊಡುತ್ತೆ ಎನ್ನೋದು ಖುದ್ದು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಗೊಂದಲ ಮೂಡಬಹುದು. ಬಾಲಿವುಡ್ ಅಂಗಣದಲ್ಲಿ ರಾಜಾನಂತೆ ಮಿಂಚಬೇಕಾದ ಹುಡುಗ ವಿರಹ ಗೀತೆ ಹಾಡುವಷ್ಟು ಅವನ ಕಾಲ ಕೆಟ್ಟುಹೋಗಿ ಗ್ಯಾರೇಜ್ ಸೇರಿದೆ. ಅತ್ತ ಪ್ರೀತಿಸಿದ ಹುಡುಗಿ ಕೈಕೊಟ್ಟಳು. ಇತ್ತ ಖುದ್ದು ತಂದೆಯೇ ಬಂದು ಚಿತ್ರ ನಿರ್ಮಾಣ, ನಿರ್ದೇಶನ ಮಾಡಿದರೂ ಹುಡುಗ ಮೇಲೆ ಬೀಳಲೇ ಇಲ್ಲ ಎನ್ನೋದು ಅನ್‌ಲಕ್ಕಿಯ ವಿಷ್ಯಾ.
ಅಂದಹಾಗೆ ಈ ಹುಡುಗ ಬೇರೆ ಯಾರು ಅಲ್ಲ. ಬಾಲಿವುಡ್ ನಟ ಕಮ್ ನಿರ್ಮಾಪಕ, ನಿರ್ದೇಶಕ ಎನ್ನುವ ಹಣೆಪಟ್ಟಿಕಟ್ಟಿಕೊಂಡು ಸಿನ್ಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಪಂಕಜ್ ಕಪೂರ್ ಅವರ ಸನ್ ಶಾಹೀದ್ ಕಪೂರ್. ಬಾಲಿವುಡ್‌ನಲ್ಲಿ ಆರಂಭದ ಇನ್ನಿಂಗ್ಸ್ ಆಡಲು ಬಂದ ಶಾಹೀದ್‌ಗೆ ಬಹಳ ಬೇಡಿಕೆ ಇತ್ತು. ಮೊದಲ ಚಿತ್ರವೇ ಶಾಹೀದ್‌ನನ್ನು ಒಬ್ಬ ‘ಲವರ್‌ಬಾಯ್’ ಆಗಿ ಫೋಕಸ್ ಮಾಡಿಬಿಟ್ಟಿತ್ತು.
ಬಾಲಿವುಡ್‌ನ ಸೈಜ್‌ಝೀರೋ ಹುಡುಗಿ ಕರೀನಾಳ ಜತೆ ಸುತ್ತಾಡುವುದಕ್ಕಾಗಿ ತಾನು ಪಕ್ಕಾ ವೆಜ್ ಹುಡುಗ ಅಂತಾ ಹೇಳಿ ಖುದ್ದು ಮನೆಯಲ್ಲಿ ಬಡಿಸಿಟ್ಟ ನಾನ್‌ವೆಜ್ ಐಟಂಗಳನ್ನು ಪಕ್ಕಕ್ಕೆ ಇಟ್ಟು ಕರೀನಾಳ ಮನೆಯಲ್ಲಿ ವೆಜ್ ಊಟಕ್ಕೆ ಬಿದಿದ್ದ. ಕೊನೆಗೂ ಕರೀನಾ ಶಾಹೀದ್‌ನನ್ನು ವೆಜ್ ಹುಡುಗನಾಗಿಯೇ ಬಿಟ್ಟುಹೋದಳು. ಇದು ಶಾಹೀದ್‌ನ ಮೊದಲ ಅನ್‌ಲಕ್ಕಿ ಸೀಸನ್ ಆರಂಭದ ಗಂಟೆ.
ಆದರೆ ಕರೀನಾಳನ್ನು ಕಳೆದುಕೊಂಡ ಶಾಹೀದ್ ಬಾಲಿವುಡ್‌ನಲ್ಲಿ ಬೆರಳೆಣಿಕೆಯ ಚಿತ್ರಗಳಲ್ಲಿ ಕಂಗೋಳಿಸಿದ್ದು ಬಿಟ್ಟರೆ ಉಳಿದ ಚಿತ್ರಗಳು ತೋಪಾಗಿ ಬಿದ್ದು ಹೋಯಿತು. ಕರೀನಾ ವರ್ಸಸ್ ಶಾಹೀದ್ ಬ್ರೇಕ್ ಸೀಸನ್‌ನಲ್ಲಿ ಬಂದು ಹೋದ ‘ಜಬ್ ವೀ ಮೆಟ್’ ಚಿತ್ರವೊಂದನ್ನು ಬಿಟ್ಟರೆ ಶಾಹೀದ್ ಬಾಲಿವುಡ್ ಕಡಿದುಕಟ್ಟಿ ಹಾಕಿದ ಯಾವುದೇ ಚಿತ್ರಗಳಿಲ್ಲ ಎನ್ನೋದು ಅವರ ಆಪ್ತ ವಲಯದ ಮಾತೇ ಇದೆ.
ಅದೃಷ್ಟ ಇಲ್ಲವೇ ಇಲ್ಲ:
ಶಾಹೀದ್ ಕಪೂರ್ ೨೦೧೨ರಲ್ಲಿ ಟೋಟಲ್ ಫ್ರಿಯಾಗಿದ್ದಾರೆ ಎನ್ನೋದು ಅವರ ಪಿಎ ಹೇಳುವ ಮಾತು. ೨೦೧೧ರಲ್ಲಿ ಶಾಹೀದ್ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಅದರಲ್ಲಿ ‘ಹೌಸ್‌ಫುಲ್-೨’, ‘ವನ್ಸ್ ಆಫನ್ ಟೈಮ್ ಇನ್ ಮುಂಬಯಿ-೨’, ‘ತೇರಿ ಮೇರಿ ಕಹಾನಿ’ ಈ ಚಿತ್ರಗಳ ಚಿತ್ರೀಕರಣ ಭಾಗಶಃ ಪೂರ್ತಿಯಾಗಿದೆ. ಉಳಿದಂತೆ ಥಿಯೇಟರ್‌ಗೆ ಬಂದು ಬೀಳುವ ದಿನಗಳು ಬಾಕಿ ಉಳಿದಿದೆ. ಆ ಬಳಿಕ ಶಾಹೀದ್‌ನ ನಿರುದ್ಯೋಗಿ ಪರ್ವ ಆರಂಭವಾಗುತ್ತದೆ. ಇದು ಅನ್‌ಲಕ್ಕಿ ಸೀಸನ್‌ನ ಎರಡನೇ ಗಂಟೆ.
ಈ ವಿಚಾರವನ್ನು ಖುದ್ದು ಶಾಹೀದ್ ಒಪ್ಪಿಕೊಂಡು ಟ್ವಿಟ್ಟರ್‌ನಲ್ಲಿ ಹೇಳಿಕೊಂಡ ಮಾತು ಇಲ್ಲಿದೆ. ‘ಚಿತ್ರದ ನಿರ್ಮಾಪಕ ಬಂದು ಚಿತ್ರಕ್ಕೆ ನೀನು ಆಯ್ಕೆಯಾಗಿದ್ದಿ ಎಂದು ಪ್ರಕಟಿಸುವ ವರೆಗೂ ನನ್ನ ಕೈಯಲ್ಲಿ ಯಾವುದೇ ಚಿತ್ರಗಳಿರುವುದಿಲ್ಲ. ಅದಕ್ಕಾಗಿ ನನಗೆ ನಿರುದ್ಯೋಗಿ ಎನ್ನುವ ಟೈಟಲ್ ಸರಿಯಾಗಿದೆ. ಆದರೆ ೨೦೧೩ವಂತೂ ನನ್ನ ಕೈಯಲ್ಲಿ ಉಳಿದು ಹೋಗಲಿದೆ ಎನ್ನುವ ಆತ್ಮವಿಶ್ವಾಸ ಮಾತ್ರ ನನ್ನ ಬಳಿಯಲ್ಲಿದೆ’ ಎಂದಿದ್ದಾರೆ.
ಮದುವೆಯಿಂದ ಲಕ್ ಬರುತ್ತೆ:
೨೦೧೨ರಲ್ಲಿ ನನ್ನ ಬಳಿ ಹೇಳಿಕೊಳ್ಳುವಂತಹ ಯಾವುದೇ ಚಿತ್ರಗಳು ಕೈಯಲ್ಲಿ ಇಲ್ಲ. ಇರುವ ಮೂರು ಚಿತ್ರಗಳ ಮೇಲೆ ನನ್ನ ವೃತ್ತಿ ಬದುಕು ನಿಂತಿದೆ. ಅದಕ್ಕಾಗಿ ಈ ವರ್ಷವೇ ಮದುವೆಯಾಗಬೇಕೆಂದುಕೊಂಡಿದ್ದೇನೆ. ಈ ಮೂಲಕವಾದರೂ ಅದೃಷ್ಟ ನನ್ನ ಬಳಿಯಲ್ಲಿ ಇರುತ್ತದೆ ಎನ್ನೋದು ಶಾಹೀದ್ ಕಪೂರ್‌ನ ನಂಬಿಕೆ.
ಮದುವೆಯ ನಂತರ ಬಾಲಿವುಡ್‌ನಲ್ಲಿ ನೆಲೆ ನಿಂತವರು ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಬಾಲಿವುಡ್ ನಟ ಶಾರೂಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಅಜೇಯ್ ದೇವಗನ್, ಹೃತಿಕ್ ರೋಷನ್ ಬಹಳಷ್ಟು ಜನರು ತಮ್ಮ ಮದುವೆಯ ನಂತರ ಬಾಲಿವುಡ್‌ನಲ್ಲಿ ಕ್ಲಿಕ್ ಆಗಿದ್ದಾರೆ. ಅವರ ರೂಲ್‌ಗಳನ್ನೇ ಫಾಲೋ ಮಾಡೋಣ ಅಂತಾ ಯೋಚನೆ ಮಾಡುತ್ತಿದ್ದೇನೆ ಎನ್ನೋದು ಶಾಹೀದ್ ಕಪೂರ್‌ನ ಓಪನ್ ಮಾತು.
‘ಬರೀ ಮದುವೆಯಿಂದ ಲಕ್ ಬರುತ್ತೆ ಎನ್ನುವ ನನ್ನ ವಾದದಲ್ಲೂ ಬೇರೆ ವಿಚಾರಗಳು ಅಡಗಿದೆ. ಸಿಂಗಲ್ ಇದ್ದಾಗ ನಿಮ್ಮ ಬಗ್ಗೆ ಪ್ರೀತಿ ತೋರಿಸುವ ಕೈಗಳು ಇರೋದಿಲ್ಲ. ನಿಮ್ಮ ಸುಖ ದುಃಖಗಳಲ್ಲಿ ಎಂಟ್ರಿಯಾಗುವ ಬಂಧುಗಳು ಸಿಗೋದಿಲ್ಲ. ಅದಕ್ಕಾಗಿ ಫೈನಲ್ ಮದುವೆಯಲ್ಲಿ ಎಲ್ಲವೂ ಸಿಗುತ್ತದೆ’ ಎನ್ನೋದು ಶಾಹೀದ್ ಕಪೂರ್‌ರ ವಾದ.
‘ಮದುವೆಯಾಗುತ್ತಿದ್ದೇನೆ ಎಂದಾಗ ಹುಡುಗಿ ಎಲ್ಲಿ ಎಂದು ಕೇಳುವವರು ಜಾಸ್ತಿ. ಈ ಕುರಿತು ಯಾವುದೇ ಯೋಚನೆ ಮಾಡಿಲ್ಲ. ನನಗೆ ಯಾವುದಾದರೂ ಒಳ್ಳೆಯ ಹುಡುಗಿ ಇದ್ದಾರೆ ಹೇಳಿ ಬಿಡಿ. ನಾನು ಮದುವೆಯಾಗಲು ಸಿದ್ಧ’ ಎಂದು ಶಾಹೀದ್ ಹುಡುಗಿಯರಿಗೆ ಆಫರ್ ರೇಟ್ ಕೊಟ್ಟು ಬಿಟ್ಟಿದ್ದಾರೆ. ಮದುವೆಯ ಮೂಲಕವಾದರೂ ಶಾಹೀದ್ ಕಪೂರ್‌ನ ಲಕ್ ಚೇಂಜ್ ಕಾಣುತ್ತೆ ಎಂದು ನಂಬಿಕೆ ಇಟ್ಟುಕೊಂಡಿರುವುದು ಮಾತ್ರ ಟೋಟಲಿ ಗ್ರೇಟ್ ಕಣ್ರಿ...
(vk lvk puravani published dis aritcle on 7.02.2012)

ಶಿಂಬು ಕೈಯಲ್ಲಿ ಲವ್ ಆಂಥೆಮ್


ಇದು ಬರೀಯ ಪ್ರೀತಿಯ ಹಾಡಲ್ಲ. ಇದೊಂದು ವಿಶ್ವ ಶಾಂತಿಯನ್ನು ಬಯಸುವ ಹಾಡು. ಪ್ರೀತಿಸುವ ಹೃದಯಕ್ಕೂ ಈ ಹಾಡಿನಲ್ಲಿ ಮದ್ದು ಇದೆ. ಕಾಲಿವುಡ್ ಸ್ಟಾರ್ ಶಿಂಬು ಈಗಾಗಲೇ ಈ ಹಾಡನ್ನು ಸಾಮಾಜಿಕ ತಾಣಗಳೆಂದು ಫೇಮಸ್ ಆದ ಯೂಟ್ಯೂಬ್ ಹಾಗೂ ಫೇಸ್‌ಬುಕ್‌ಗಳಲ್ಲಿ ಹಾಕಿದ್ದಾರೆ. ಒಂದ್ ಸಾರಿ ಕ್ಲಿಕ್ ಮಾಡಿ ನೋಡಿ...

‘ಕೊಲೆವೆರಿ ಡಿ’ ಹಾಡು ಈಗಲೂ ಸೂಪರ್ ರೋಮಿಂಗ್‌ನಲ್ಲಿದೆ. ಈ ಹಾಡನ್ನು ಕೇಳುವ ಕಿವಿಗಳು ಇನ್ನೂ ತಣಿದಿಲ್ಲ. ಡ್ಯಾನ್ಸ್ ಮಾಡಲು ಅಣಿಯಾಗುವ ಕಾಲುಗಳು ಇನ್ನೂ ನೆಲದ ಮೇಲೆ ನಿಲ್ಲಲು ರೆಡಿ ಇಲ್ಲ. ಆದರೆ ಈಗ ಇಂತಹ ಹಾಡನ್ನು ಸೈಡ್‌ಗೆ ಬಿಟ್ಟು ಮತ್ತೊಂದು ಹಾಡು ರೂಪುಗೊಂಡಿದೆ. ಅದರಲ್ಲೂ ಈ ಹಾಡು ಕಾಲಿವುಡ್‌ನಲ್ಲಿ ತಯಾರಾಗಿರೋದು ಮತ್ತೊಂದು ವಿಷ್ಯಾ. ಆದರೆ ಈ ಹಾಡು ಯುವಜನತೆಯನ್ನು ಮತ್ತೇರಿಸುವುದಿಲ್ಲ. ಬದಲಾಗಿ ಇಡೀ ವಿಶ್ವಕ್ಕೆ ಪ್ರೀತಿಯ ಸಂದೇಶ ಸಾರಲು ಅಣಿಯಾಗಿದೆ.
ಅಂದಹಾಗೆ ಪ್ರೀತಿಸುವ ಹೃದಯಕ್ಕೂ ಈ ಹಾಡಿನಲ್ಲಿ ಮದ್ದು ಇದೆ. ಟೋಟಲಿ ಹಾಡು ಬರೀ ಕಾಲಿವುಡ್‌ಗೆ ಮಾತ್ರ ಸೀಮಿತವಾಗಿಲ್ಲ. ಇಡೀ ವಿಶ್ವದಲ್ಲಿ ಈ ಹಾಡನ್ನು ಓಡಿಸುವ ಯೋಜನೆಯೊಂದು ಕಾಲಿವುಡ್ ಜಗುಲಿಯಲ್ಲಿ ಸಿದ್ಧವಾಗಿರೋದು ಖುಷಿಯ ವಿಷ್ಯಾ. ಕಾಲಿವುಡ್‌ನ ಯಂಗ್ ಸೂಪರ್ ಸ್ಟಾರ್ ಶಿಂಬು ಆಲಿಯಾಸ್ ಟಿ. ಆರ್. ಶಿಲಬರಸನ್ ಈ ಹಾಡಿನ ಹಿಂದಿರುವ ಮ್ಯಾಜಿಕ್ ದಂಡ. ಶಿಂಬು ಈಗಾಗಲೇ ಈ ಹಾಡನ್ನು ಸಾಮಾಜಿಕ ತಾಣಗಳೆಂದು ಫೇಮಸ್ ಆದ ಯೂಟ್ಯೂಬ್ ಹಾಗೂ ಫೇಸ್‌ಬುಕ್‌ಗಳಲ್ಲಿ ಹಾಕಿದ್ದಾರೆ. ಪ್ರೀತಿಯನ್ನು ಹಂಬಲಿಸುವ ಮನಸ್ಸುಗಳು ಈಗಾಗಲೇ ಸಾಕಷ್ಟು ಕ್ಲಿಕ್ ಮಾಡಿಕೊಂಡು ಹೋಗಿದ್ದಾರೆ ಎನ್ನುವುದು ರೆಕಾರ್ಡ್ ಬುಕ್ ಹೇಳುತ್ತಿದೆ.
ಶಿಂಬು ತನ್ನ ಫೇಸ್ ಬುಕ್‌ನಲ್ಲಿ ಹೇಳಿಕೊಂಡಿರುವಂತೆ : ಪ್ರೀತಿಯ ಮಾಧ್ಯಮ ಬಂಧುಗಳಲ್ಲಿ ಕೆಲವೊಂದು ವಿಚಾರವನ್ನು ಹೇಳ ಬಯಸುತ್ತೇನೆ. ಖ್ಯಾತ ಪಾಪ್ ಗಾಯಕಿ ಶಕೀರಾ ‘ಪೋಡಾ- ಪೋಡಿ’ ಎಂದು ಹಾಡು ಹೇಳಿಕೊಂಡು ಕುಣಿದಾಡೋದಿಲ್ಲ. ಅದಕ್ಕಾಗಿ ನಾವೊಂದು ಲವ್ ಆಂಥೆಮ್ ಸಿದ್ಧಪಡಿಸಿದ್ದೇವೆ. ಇದು ಬರೀಯ ಪ್ರೀತಿಯ ಹಾಡಲ್ಲ. ಇದೊಂದು ವಿಶ್ವ ಶಾಂತಿಯನ್ನು ಬಯಸುವ ಹಾಡು. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎನ್ನೋದು ನನ್ನ ಅಭಿಪ್ರಾಯ. ಯುವಜನತೆ ಈ ಹಾಡಿಗೆ ಧ್ವನಿಗೂಡಿಸುತ್ತಾರೆ ಎನ್ನುವುದು ನನ್ನ ನಂಬಿಕೆ. ನಾವು ಭಾರತೀಯರು/ ತಮಿಳರೆಂದು ಹೆಮ್ಮೆಪಡಿ. ಎಲ್ಲರೂ ಬಯಸೋದು ಪ್ಯಾರ್, ಪ್ರೇಮ್, ಕಾದಲ್ ಹಾಗೂ ಎಲ್ಲರ ಸಹಕಾರಕ್ಕೂ ನನ್ನ ಧನ್ಯವಾದಗಳು. ನೀವು ಇಲ್ಲದೇ ನಾನಿಲ್ಲ....
ಹಾಡಿನಲ್ಲಿ ಏನಿದೆ ಅಂತೀರಾ..?
ವಿಶ್ವ ಶಾಂತಿ, ಪ್ರೇಮಕ್ಕಾಗಿ ತುಡಿಯುವ ಮನಸ್ಸುಗಳು ಈಗ ಬಹಳ ವಿರಳವಾಗುತ್ತಿದೆ. ಅದರಲ್ಲೂ ಒಬ್ಬರು ಇನ್ನೊಬ್ಬರನ್ನು ಪ್ರೀತಿಯಿಂದ ಕಾಣುವ ಸ್ಥಿತಿ ಇಲ್ಲದೇ ಹೋಗಿದೆ. ಇಂತಹ ಸಮಯದಲ್ಲಿ ವಿಶ್ವವೇ ಶಾಂತಿ, ಪ್ರೇಮವನ್ನು ಬಯಸುವ ಗೀತೆ ಬೇಕಾಗಿದೆ ಎನ್ನೋದು ನನ್ನ ಬಹಳ ದಿನಗಳ ಕನಸ್ಸು ಎಂದು ಶಿಂಬು ತನ್ನ ಫೇಸ್‌ಬುಕ್‌ನಲ್ಲಿ ಅಭಿಮಾನಿಗಳಿಗೆ ಹೇಳಿಕೊಂಡಿದ್ದಾರೆ.
ಕಾಲಿವುಡ್‌ನ ಹಾಡಿನಿಂದ ವಿಶ್ವ ಪ್ರೇಮ ಸಾಧ್ಯನಾ..ಎನ್ನುವ ಪ್ರಶ್ನೆಗೆ ಶಿಂಬು ಕೊಡುವ ಉತ್ತರ ಇಲ್ಲಿದೆ: ಈ ಹಾಡಿನಿಂದ ವಿಶ್ವ ಶಾಂತಿ, ಪ್ರೇಮ ನಿರ್ಮಾಣವಾಗುತ್ತದೆ ಎನ್ನುವ ಪ್ರಶ್ನೆಗೆ ನನ್ನ ಬಳಿ ಸದ್ಯಕ್ಕಂತೂ ಉತ್ತರವಿಲ್ಲ. ಆದರೆ ಇಂತಹ ಪ್ರಯೋಗಗಳು ಮುಂದೆ ಕೂಡ ನಡೆಯಲಿ ಎನ್ನುವ ಸದಾಶಯ ನನ್ನದು. ಹೊಸ ಯೋಚನೆ, ಚಿಂತನೆಗಳು ಯುವಜನರಲ್ಲಿ ಇನ್ನಷ್ಟೂ ಮೂಡಿ ಬರಲಿ ಎನ್ನುವ ಕಾರಣಕ್ಕೆ ಈ ಹಾಡನ್ನು ಸಿದ್ಧಪಡಿಸಿದ್ದೇನೆ ಎನ್ನುವುದು ಶಿಂಬು ಮಾತು.
ಈ ಹಾಡಿನ ಸಂಪೂರ್ಣ ಹೊಣೆಗಾರಿಕೆಯನ್ನು ಎಲಾನ್ ಮೋರಿಸನ್ ವಹಿಸಿಕೊಂಡಿದ್ದಾರೆ. ಈಗಾಗಲೇ ಎಲಾನ್ ಹೊಸ ಹಾಡುಗಾರರನ್ನು ಹುಡುಕಾಡಿಕೊಂಡು ಸಂಗೀತ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಹಾಡಿಗೆ ದೃಶ್ಯಗಳನ್ನು ಪೋಣಿಸುವ ಕೆಲಸ ಲಾಸ್ ಏಂಜೇಲಿಸ್ ಸ್ಟುಡಿಯೋದಲ್ಲಿ ನಡೆದಿತ್ತು. ಟೋಟಲಿ ಈ ಹಾಡು ಲೋಕಲ್ ಲೆವಲ್‌ನಲ್ಲಿ ಸಿದ್ಧಪಡಿಸಿಕೊಂಡಿದ್ದರೂ ಕೂಡಾ ಇಂಟರ್‌ನ್ಯಾಷನಲ್ ಲೆವಲ್‌ನಲ್ಲಂತೂ ಹೆಸರು ಮಾಡುತ್ತೆ ಎನ್ನುವ ಧೈರ‍್ಯ ಶಿಂಬು ಮನಸ್ಸಿನಲ್ಲಿ ಬಂದು ಕೂತಿದೆ. ಟೋಟಲಿ ಈ ವರ್ಷವಂತೂ ಈ ಹಾಡಿನ ಗುಂಗು ಕಿವಿಯಲ್ಲಿ ಕೇಳಿಸುವುದಂತೂ ಖಾಯಂ ಆಗಿದೆ ಬಿಡಿ.
(vk lvk puravani publised dis article 0n 10.2.2012)