Tuesday, January 17, 2012

ಕುಡ್ಲ ಸಿಟಿಯಲ್ಲಿ ಫ್ಯೂಶನ್ ಗುರು ಹರಿಹರ



ಹರಿಹರನ್ ಹಾಡುಗಳು ಜಾಸ್ತಿ ಸೌಂಡ್ ಮಾಡಲ್ಲ. ಪ್ರೀತಿಸುವ ಹೃದಯಕ್ಕೆ ಸಾಂತ್ವನ ನೀಡುತ್ತದೆ. ಏಕಾಂಗಿ ಬದುಕಿಗೆ ಊರುಗೋಳಾಗಿ ನೆರವು ನೀಡುತ್ತದೆ. ಅದರಲ್ಲೂ ನಿಜವಾಗಿಯೂ ಸಂಗೀತ ಬಯಸುವ ಕಿವಿಗೆ ಇಂಪು ತಂದುಕೊಡುತ್ತದೆ. ಇಂತಹ ಹರಿಹರನ್ ಲವಲವಿಕೆಯ ಜತೆಯಲ್ಲಿ ಚಿಟ್‌ಚಾಟ್ ಮಾಡಿದ್ದಾರೆ.


ಹರಿಹರನ್ ಹಾಡುಗಳು ಜಾಸ್ತಿ ಸೌಂಡ್ ಮಾಡಲ್ಲ. ಪ್ರೀತಿಸುವ ಹೃದಯಕ್ಕೆ ಸಾಂತ್ವನ ನೀಡುತ್ತದೆ. ಏಕಾಂಗಿ ಬದುಕಿಗೆ ಊರುಗೋಳಾಗಿ ನೆರವು ನೀಡುತ್ತದೆ. ಅದರಲ್ಲೂ ನಿಜವಾಗಿಯೂ ಸಂಗೀತ ಬಯಸುವ ಕಿವಿಗೆ ಇಂಪು ತಂದುಕೊಡುತ್ತದೆ. ಭಾರತೀಯ ಸಂಗೀತ ಜತೆಯಲ್ಲಿ ವೆಸ್ಟರ್ನ್ ಮ್ಯೂಸಿಕ್‌ನ್ನು ಲಿಂಕ್ ಕೊಟ್ಟು ಫ್ಯೂಶನ್ ಗಾಯಕ ಎಂದೇ ಕರೆಯಲ್ಪಡುವ ಹರಿಹರನ್ ಘಜಲ್ ಗೀತೆಗಳಿಗೂ ಜೀವ ತುಂಬಬಲ್ಲ ಸಮರ್ಥರು.
ಮಲಯಾಳಂ, ತಮಿಳು, ಕನ್ನಡ, ಹಿಂದಿ, ತೆಲುಗು, ಭೋಜ್‌ಪುರಿ, ಮರಾಠಿಯಲ್ಲಿ ಸಾವಿರಕ್ಕೂ ಅಕ ಹಾಡುಗಳನ್ನು ಹಾಡಿದ ಹರಿಹರನ್ ರೋಜಾ, ಬಾಂಬೆ ಸಿನ್ಮಾಗಳ ಹಾಡಿನ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಕಂಠಕ್ಕೂ ಬೆಲೆ ತಂದುಕೊಂಡಿದ್ದಾರೆ. ಎ.ಆರ್. ರೆಹಮಾನ್ ಎನ್ನುವ ಸಂಗೀತ ನಿರ್ದೇಶಕನ ಗಾಯಕರ ಪಟ್ಟಿಯಲ್ಲಿ ಹರಿಹರನ್ ಯಾವಾಗಲೂ ಮೊದಲ ಸ್ಥಾನದಲ್ಲಿರುವ ಗಾಯಕ ಎನ್ನುವ ಖ್ಯಾತಿಯೂ ಅವರ ಬೆನ್ನಿಗಿದೆ. ಬಾರ್ಡರ್ ಚಿತ್ರದ ‘ಮೇರೇ ದುಶ್ಮಾನ್ ಮೇರೇ ಭಾಯಿ’ ಎನ್ನುವ ಹಾಡಿಗೆ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
೩೦ಕ್ಕೂ ಅಕ ಘಜಲ್ ಆಲ್ಬಂಗಳನ್ನು ಹೊರ ತಂದಿರುವ ಹರಿಹರನ್ ಯಾವಾಗಲೂ ಘಜಲ್ ಗಾಯನಾಗಲು ಇಷ್ಟ ಪಡುತ್ತಾರಂತೆ. ೧೯೯೪ರಲ್ಲಿ ಆಶಾ ಬೊಂಸ್ಲೆ ಅವರ ಜತೆಯಲ್ಲಿ ಹಾಡಿದ ‘ಅಬಾಸರ್ ಈ- ಘಜಲ್’ ಎನ್ನುವ ಆಲ್ಬಂ ಈಗಲೂ ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿದೆ. ೨೦೦೮ರಲ್ಲಿ ಬಂದ ‘ಲಾಫ್ಸ್’ ಘಜಲ್ ಆಲ್ಬಂ ನಂತರ ಹರಿಹರನ್ ಘಜಲ್ ಗಾಯನದಿಂದ ಹೊರಬಂದು ಫ್ಯೂಶನ್ ಕಡೆ ಜಾಸ್ತಿ ಒಲವು ತೋರಿಸಿದರು.
೧೯೯೬ರಲ್ಲಿ ಲೆಸ್ಲಿ ಲೂಯಿಸ್ ಜತೆ ಸೇರಿಕೊಂಡು ‘ಕಲೋನಿಯಲ್ ಕಸೀನ್ಸ್’ ಎನ್ನುವ ಆಲ್ಬಂ ಮೂಲಕ ದೇಶದಲ್ಲಿ ಮೊತ್ತ ಮೊದಲ ಬಾರಿಗೆ ‘ಫ್ಯೂಶನ್’ ಆಲ್ಬಂಗೆ ಅಡಿಪಾಯ ಹಾಕಿಕೊಟ್ಟ ಹರಿಹರನ್ ನಂತರದ ದಿನಗಳಲ್ಲಿ ‘ಕಲೋನಿಯಲ್ ಕಸೀನ್ಸ್’ ಮ್ಯೂಸಿಕ್ ಬ್ಯಾಂಡ್ ಕಟ್ಟಿಕೊಂಡು ದೇಶ- ವಿದೇಶದ ಅಭಿಮಾನಿಗಳ ಕಿವಿಯನ್ನು ತಣಿಸುತ್ತಿದ್ದಾರೆ. ತಮಿಳಿನ ಒಂದೆರಡು ಸಿನ್ಮಾಗಳಿಗೆ ಬ್ಯಾಕ್‌ಗ್ರೌಂಡ್ ಸ್ಕೋರ್ ಕೊಟ್ಟು ತಮಿಳು ಸಂಗೀತ ಲೋಕದಲ್ಲೂ ಹೊಸ ‘ವೇ’ ಸೃಷ್ಟಿ ಮಾಡಲು ಹೊರಟಿರುವ ಹರಿಹರನ್ ರಾಷ್ಟ್ರೀಯ ಯುವಜನೋತ್ಸವ ಕಾರ‍್ಯಕ್ರಮಕ್ಕಾಗಿ ಮಂಗಳೂರಿಗೆ ಬಂದಿದ್ದಾಗ ಎಲ್‌ವಿಕೆಯ ಜತೆ ಕೊಂಚ ಟೈಮ್ ಚಿಟ್‌ಚಾಟ್ ಮಾಡಿದರು.
* ಘಜಲ್, ಫ್ಯೂಶನ್ ಎರಡರಲ್ಲಿ ಯಾವುದು ಇಷ್ಟ ?
- ಘಜಲ್ ಹಾಡುಗಳು ನೆಮ್ಮದಿ ಕೊಟ್ಟರೆ.. ಫ್ಯೂಶನ್ ಹಾಡುಗಳು ಖ್ಯಾತಿ ಕೊಟ್ಟಿದೆ. ಒಂದನ್ನು ಬಿಟ್ಟು ಮತ್ತೊಂದು ಇರದು. ಮನುಷ್ಯನಿಗೆ ಕಣ್ಣುಗಳಿದ್ದಾಗೆ ಅಂತೇನೆ...
* ಎ.ಆರ್. ರೆಹಮಾನ್ ಎಂದರೆ ನಿಮ್ಮ ಪಾಲಿಗೆ ಏನು?
- ಜಸ್ಟ್ ವನ್ ವರ್ಡ್‌ನಲ್ಲಿ ಹೇಳುವುದಾದರೆ ಈ ವಾಸ್ ಎ ಗ್ರೇಟ್ ಮ್ಯೂಶಿಯನ್. ನನ್ನ ಹಾಗೂ ರೆಹಮಾನ್‌ರ ಕೆಲಸಗಳು ಸಂಗೀತ ಲೋಕದಲ್ಲಿ ವರ್ಕ್ ಆಗಿದೆ. ಅದಕ್ಕಿಂತಲೂ ಮುಖ್ಯವಾಗಿ ರೆಹಮಾನ್ ಜತೆಯಲ್ಲಿ ಕೆಲಸ ಮಾಡಲು ನಾನು ಜಾಸ್ತಿ ಬಯಸುತ್ತೇನೆ. ವರ್ಕ್ ವಿದ್ ಕಂಪಾರ್ಟ್ ಎರಡು ಅಂಶಗಳು ರೆಹಮಾನ್ ಟೀಮ್‌ನಲ್ಲಿದೆ.
* ಉರ್ದು ನಂತರ ಹೊಸ ಭಾಷೆ ಕಲಿಯುತ್ತಿದ್ದೀರಾ..?
- ಘಜಲ್ ಹಾಡುಗಳನ್ನು ಹಾಡುವಾಗ ನನಗೆ ಉರ್ದು ಭಾಷೆ ಅಗತ್ಯವಾಗಿತ್ತು. ಬಹಳಷ್ಟು ಘಜಲ್‌ಗಳನ್ನು ನಾನು ಉರ್ದುವಿನಿಂದ ನನ್ನ ಆಲ್ಬಂಗಳಿಗೆ ಇಳಿಸಿದ್ದೇನೆ. ಅದಕ್ಕಾಗಿ ಈ ಭಾಷೆ ಕಲಿಯಬೇಕಾಯಿತು. ಈಗ ಹೊಸ ಭಾಷೆ ಕಲಿಯುವುದರಲ್ಲಿ ಆಸಕ್ತಿ ಇಲ್ಲ.
* ಕಲೋನಿಯಲ್ ಕಸೀನ್ಸ್ ಮ್ಯೂಸಿಕ್ ಬ್ಯಾಂಡ್ ಕಟ್ಟಿದ್ದು ಯಾಕೆ?
- ಭಾರತೀಯ ಸಂಗೀತವನ್ನು ಹೊಸ ಪೀಳಿಗೆಯವರು ನೇರವಾಗಿ ಸ್ವೀಕರಿಸುವ ಧೈರ್ಯ ತೋರಲಿಲ್ಲ. ಈ ಸಂದರ್ಭದಲ್ಲಿ ಲೆಸ್ಲಿ ಲೂಯಿಸ್ ನನಗೊಂದು ಉಪಾಯ ಹೇಳಿದರು. ಪಾಶ್ಚಿಮಾತ್ಯ ಸಂಗೀತವನ್ನು ಭಾರತೀಯ ಸಂಗೀತದ ಜತೆ ಲಿಂಕ್ ಕೊಟ್ಟು ಹಾಡುವ ಈ ಮೂಲಕ ಹೊಸ ಪರಂಪರೆಯೊಂದು ಸೃಷ್ಟಿಯಾಗುತ್ತದೆ ಎಂದರು ನಾನು ಒಪ್ಪಿದೆ. ಅದಕ್ಕಾಗಿ ಫ್ಯೂಶನ್ ಆಲ್ಬಂವೊಂದನ್ನು ಮಾರುಕಟ್ಟೆಯಲ್ಲಿ ಬಿಟ್ಟು ತಮಾಷೆ ನೋಡಿದೇವು.. ಯುವಜನತೆ ಫ್ಯೂಶನ್ ಸಂಗೀತವನ್ನು ಬಹಳವಾಗಿ ಇಷ್ಟಪಟ್ಟಿತು. ಮುಂದೆ ಟೀಮ್ ಬೆಳೆಯುತ್ತಾ ಹೋಯಿತು.
* ಹೊಸ ಆಲ್ಬಂ, ಘಜಲ್ ಆಲ್ಬಂ ತರುವ ಪ್ಲ್ಯಾನ್ ಇದೆಯಾ?
- ಹೊಸ ಆಲ್ಬಂ ಮಾಡಬೇಕು ಅಂದುಕೊಂಡಿದ್ದೇನೆ. ಈ ಆಲ್ಬಂ ‘ಕಲೋನಿಯಲ್ ಕಸೀನ್ಸ್’ ಮೂಲಕ ಹೊರ ತರುವ ಕುರಿತು ಯೋಜನೆ ನಡೆಯುತ್ತಿದೆ. ಈ ವರ್ಷದ ಕೊನೆಯಲ್ಲಿ ಹೊಸ ಆಲ್ಬಂ ಮಾರುಕಟ್ಟೆಗೆ ಬಿಡುತ್ತೇನೆ. ಹೆಸರು ಇನ್ನೂ ಇಟ್ಟಿಲ್ಲ. ಆರು ಹಾಡುಗಳು ಕಂಪ್ಲೀಟ್ ಆಗಿದೆ.
* ಸಂಗೀತದ ಹೊರತು ಹರಿಹರನ್ ಏನೂ ಮಾಡುತ್ತಿದ್ದರು?
- ಈ ಪ್ರಶ್ನೆ ನನ್ನನ್ನು ಬಾಲ್ಯದಿಂದಲೂ ಕಾಡುತ್ತಾ ಬಂದಿದೆ. ಹೆತ್ತವರು ಸಂಗೀತವನ್ನು ಒಪ್ಪಿ ಅಪ್ಪಿಕೊಂಡಿದ್ದರು. ನಾನು ಕೂಡ ಇದೇ ಸಂಗೀತವನ್ನು ಅಪ್ಪಿಕೊಂಡೇ.. ಬದುಕಿನಲ್ಲಿ ನನಗೆ ಬೇರೆಯೇನೂ ಬೇಕಾಗಿರಲಿಲ್ಲ. ಸಂಗೀತಗಾರನ ಹೊರತು ನಾನು ಏನೂ ಆಗಲೂ ಬಯಸುತ್ತಿರಲಿಲ್ಲ, ಬಯಸುತ್ತಿಲ್ಲ.
.....
ಚಿತ್ರ: ಸುಧಾಕರ್ ಎರ್ಮಾಳ್
( vk lvk puravani published dis article on 18.01.2012)

ನಾನ್‌ವೆಜ್ ಹುಡುಗಿಯ ವೆಜ್ ಕತೆ


ಬಾಲ್ಯದಲ್ಲಿ ನಾನ್‌ವೆಜ್ ಐಟಂಗಳನ್ನು ಜಾಸ್ತಿಯಾಗಿ ತಿಂದರೆ ದೇಹದ ಭಾರ ಹೆಚ್ಚುತ್ತದೆ ಎಂದು ಹೆಚ್ಚು ಭಾರವಾಗಿದ್ದ ಹುಡುಗಿ ನಮಿತಾಳನ್ನು ನೋಡಿ ಅವರ ಗೆಳತಿಯರು ಹೇಳಿಕೊಂಡು ತಮಾಷೆ ಮಾಡುತ್ತಿದ್ದರಂತೆ... ಬನ್ನಿ ನಮಿತಾಳ ವೆಜ್ ಕತೆ ಇಲ್ಲಿದೆ...

ಪಕ್ಕಾ ನಾಜ್‌ವೇಜ್ ಸ್ಟೇಟಸ್‌ನಿಂದ ಬಂದ ಹುಡುಗಿ ಎಂದುಕೊಂಡು ಅವಳ ಕುರಿತು ಗಂಟೆಗಟ್ಟಲೆ ಮಾತನಾಡಿಕೊಂಡರೇ ಅದೆಲ್ಲ ಟೋಟಲಿ ವೇಸ್ಟ್. ನಮಿತಾ ಎನ್ನುವ ಗ್ಲಾಮರ್ ಗೊಂಬೆಗೆ ಹಿಡಿಸುವುದೆಲ್ಲ ವೆಜಿಟೇರಿಯನ್. ವೆಜ್‌ನಲ್ಲೂ ಈ ಪಾಟಿ ದೇಹ ಬೆಳೆಸಲು ಸಾಧ್ಯನಾ ಎಂದರೆ ಅದು ಕೂಡ ನಮಿತಾಳಿಂದ ಸಾಧ್ಯ ಎನ್ನುವ ಮಾತು ಬಂದು ಬಿಡುತ್ತದೆ.
ಬೇಸಿಕಲಿ ನಮಿತಾ ಗುಜರಾತ್ ಹುಡುಗಿ. ಮನೆಯಲ್ಲಿ ಎಲ್ಲರೂ ನಾನ್‌ವೆಜ್ ಐಟಂಗಳನ್ನು ಮುಕ್ಕಿಕೊಂಡು ತಿನ್ನುತ್ತಾರೆ. ಆದರೆ ನಮಿತಾ ಮಾತ್ರ ನಾನ್ ವೆಜ್ ಮುಟ್ಟುತ್ತಿಲ್ಲವಂತೆ. ಅವಳಿಗೆ ಮಾತ್ರ ತರಕಾರಿ ಸೊಪ್ಪು, ಪಲ್ಯಗಳೆಂದರೆ ಮಾತ್ರ ಮಾಡಿದ ಊಟ ಹೊಟ್ಟೆ ಸೇರೋದು ಎನ್ನುವುದು ವರ ತಂದೆ ಟೈಕ್ಸ್‌ಟೈಲ್ ಉದ್ಯಮಿ ಮುಕೇಶ್ ಅವರ ಮಾತು.
ಬಾಲ್ಯದಿಂದಲೇ ನಮಿತಾಳಿಗೆ ನಾನ್‌ವೆಜ್ ಎಂದರೆ ಅಷ್ಟಕಷ್ಟೇ ಆದರೂ ನಾವು ಕೆಲವೊಮ್ಮೆ ತಿನ್ನಿಸುವ ಪ್ರಯತ್ನ ಮಾಡಿದ್ದೇವು. ಆದರೆ ನಮಿತಾ ವೆಜ್ ಐಟಂಗಳಿಗೆ ಅಂಟಿಕೊಂಡಿದ್ದಾಗ ಟೋಟಲಿ ನಾವು ನಾನ್‌ವೆಜ್ ತಿನ್ನಿಸುವ ಪ್ರಯತ್ನ ಬಿಟ್ಟುಕೊಂಡು ವೆಜ್‌ಟೇರಿಯನ್ ಐಟಂಗಳಿಗೆ ಶಿಫ್ಟ್ ಮಾಡಿದ್ದೇವು ಎನ್ನುತ್ತಾರೆ ನಮಿತಾಳ ತಾಯಿ.
ವೆಜ್ ಯಾಕಿಷ್ಟಾ :
ನಮಿತಾ ಟೋಟಲಿ ವೆಜ್‌ಗೆ ಬಲಿಯಾಗಲು ಬಹುಮುಖ್ಯ ಕಾರಣ ದಢೂತಿತನವಂತೆ. ಬಾಲ್ಯದಲ್ಲಿ ನಾನ್‌ವೆಜ್ ಐಟಂಗಳನ್ನು ಜಾಸ್ತಿಯಾಗಿ ತಿಂದರೆ ದೇಹದ ಭಾರ ಹೆಚ್ಚುತ್ತದೆ ಎಂದು ಹೆಚ್ಚು ಭಾರವಾಗಿದ್ದ ಹುಡುಗಿ ನಮಿತಾಳನ್ನು ನೋಡಿ ಅವರ ಗೆಳತಿಯರು ಹೇಳಿಕೊಂಡು ತಮಾಷೆ ಮಾಡುತ್ತಿದ್ದರಂತೆ. ಅದೇ ತಮಾಷೆ ಮಾತುಗಳನ್ನು ಸೀರಿಯಸ್ ಆಗಿ ತೆಗೆದುಕೊಂಡು ಬಂದ ನಮಿತಾ ಮುಂದೆ ವೆಜ್‌ಟೇರಿಯನ್ ಫುಡ್‌ಗಳಿಗೆ ಬಾಯಿ ಬಿಡುವಂತೆ ಮಾಡಿತು ಎನ್ನುವುದು ನಮಿತಾರ ಸೀಕ್ರೇಟ್ ಮಾತು.
ಅದರಲ್ಲೂ ನಮಿತಾಳಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಪ್ರಾಣಿದಯಾ ಸಂಘದ ಜತೆಯಲ್ಲಿ ನಮಿತಾ ಇಲ್ಲದೇ ಹೋದರೂ ಪ್ರಾಣಿಗಳನ್ನು ಪ್ರೀತಿಯಿಂದ ಕಾಣುವ ಹೃದಯವಂತಿಕೆ ಅವರಲ್ಲಿ ಇದೆ ಎನ್ನೋದು ಅವರ ಆಪ್ತ ಗೆಳೆಯರ ಮಾತು. ಇದೇ ಒಂದು ಕಾರಣ ನಾನ್‌ವೆಜ್‌ಟೇರಿಯನ್‌ನಿಂದ ನಮಿತಾಳನ್ನು ಸಾಕಷ್ಟು ದೂರ ಮಾಡಿದೆ ಎಂಬ ಮಾತು ನಮಿತಾಳ ಖಾಸಾ ಗೆಳೆಯರು ಹೇಳಿಕೊಳ್ಳುತ್ತಾರೆ.
ವೆಜ್‌ನಲ್ಲೂ ಫಿಗರ್ :
ನಮಿತಾಳನ್ನು ಇಷ್ಟಪಟ್ಟು ೨೫೦೦ ಅಭಿಮಾನಿಗಳ ಸಂಘಗಳು ದೇಶದ ನಾನಾ ಭಾಗಗಳಲ್ಲಿ ತಲೆ ಎತ್ತಿಕೊಂಡು ಕೆಲಸ ಮಾಡುತ್ತಿದೆ. ಇವರೆಲ್ಲರಿಗೂ ಒಂದೇ ಡೌಟ್ ನಮಿತಾ ದೇಹ ಇಷ್ಟೊಂದು ಊದಿಕೊಳ್ಳಲು ವೆಜ್ ಕಾರಣನಾ..? ಎನ್ನೋದು. ಅದಕ್ಕೆ ನಮಿತಾ ಹೇಳುವುದಿಷ್ಟೇ: ನನಗೆ ವೆಜ್ ಇಷ್ಟ. ಆದರೆ ಇದು ನನ್ನ ದೇಹದ ಬೆಳವಣಿಗೆಯಲ್ಲಿ ಈ ಪಾಟಿ ಕೆಲಸ ಮಾಡುತ್ತದೆ ಅನ್ನೋದು ನನಗೆ ಗೊತ್ತಿಲ್ಲ. ಆದರೂ ಸ್ಲಿಮ್ ಆಗಲು ಡಯಾಟ್ ಕಡೆ ಮುಖ ಮಾಡುತ್ತಿದ್ದೇನೆ. ಕೆಲವರಿಗೆ ನನ್ನ ಫಿಗರ್ ಇದೇ ಇರಬೇಕು ಎನ್ನುವುದು ಇದೆ ಎನ್ನುವುದು ನಮಿತಾಳ ಮಾತು.
ಸಿಕ್ರೇಟ್ ಮಾತು:
ನಮಿತಾ ತುಂಬಾನೇ ಆಧ್ಯಾತ್ಮಿಕ ವ್ಯಕ್ತಿ. ದೇವರ ಕುರಿತು ಅಪಾರ ನಂಬಿಕೆ ಇಟ್ಟುಕೊಂಡಿರುವ ಭಕ್ತೆ. ದಿನಾಲೂ ಹನುಮಾನ್ ಚಾಲೀಸಾ ಪಠಣ ಮಾಡದೇ ಇತರ ಕಾರ‍್ಯಗಳನ್ನು ಮಾಡುವುದಿಲ್ಲ. ಮಲಯಾಳಂ, ಹಿಂದಿ, ತೆಲುಗು, ತಮಿಳು, ಕನ್ನಡ ಭಾಷೆಗಳಲ್ಲಿ ನಟಿಸಿರುವ ನಮಿತಾ ತನ್ನ ಚಿತ್ರಗಳಿಗೆ ಖುದ್ದು ಡಬ್ ಮಾಡುವುದಿಲ್ಲವಂತೆ. ಬದುಕಿನಲ್ಲಿರುವ ಬಹುದೊಡ್ಡ ಕನಸ್ಸು ಎಂದರೆ ತನ್ನ ಚಿತ್ರಗಳಿಗೆ ತಾನೇ ಚಿತ್ರಗಳಿಗೆ ತಾನೇ ಡಬ್ ಮಾಡಬೇಕು ಎಂದಿರುವುದು. ಅದರಲ್ಲೂ ಯಾರಾದರೂ ನಮಿತಾಳನ್ನು ಸೆಕ್ಸ್ ಸಿಂಬಲ್ ಎಂದು ಕರೆದರೆ ಅವಳಿಗೆ ಎಲ್ಲಿಲ್ಲದ ಖುಷಿ.
(vk lvk puravani published dis article on 18.1.2012)

Monday, January 2, 2012

ವೈಸಿಐಎಂ ಬನ್ನೂರುನಿಂದ ರೇಗೊಗೆ ಸನ್ಮಾನಿಸಲಾಯಿತು






ಸಂತ.ಅಂತೋನಿಯವರ ದೇವಾಲಯ ಬನ್ನೂರು ಹಾಗೂ ಭಾರತೀಯ ಕಥೋಲಿಕ್ ಯುವ ಸಂಚಾಲನ(ಐ.ವೈಸಿ.ಎಂ)ಬನ್ನೂರು ಘಟಕದ ವತಿಯಿಂದ ನ್ಯೂ ಇಯರ್ ಈವ್ ಕಾರ‍್ಯಕ್ರಮದಲ್ಲಿ ಪತ್ರಿಕೋದ್ಯಮದಲ್ಲಿ ವಿಶೇಷ ಸೇವೆಗಾಗಿ ಮಂಗಳೂರು ವಿಜಯ ಕರ್ನಾಟಕ ಪತ್ರಿಕೆಯ ಉಪಸಂಪಾದಕ ಸ್ಟೀವನ್ ರೇಗೊ, ದಾರಂದಕುಕ್ಕು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಬನ್ನೂರು ಚರ್ಚ್‌ನ ಧರ್ಮಗುರು ಫಾ. ನಿಕೋಲಸ್ ಡಿಸೋಜ, ಫಾ. ಫ್ರಾನ್ಸಿಸ್ ಅಸ್ಸೀಸಿ ಡಿ ಆಲ್ಮೇಡಾ, ಟೋನಿ ಲೋಬೊ, ಐ.ವೈ.ಸಿ.ಎಂನ ಬನ್ನೂರು ಘಟಕ ಅಧ್ಯಕ್ಷ ವಿಶ್ವಾಸ್ ಲೋಬೊ, ಉಪಾಧ್ಯಕ್ಷ ಜೈಸನ್ ಪ್ರವೀಣ್ ಡಿಸೋಜ, ದೀಕ್ಷಿತ್ ಗೊನ್ಸಾಲ್ವೀಸ್, ವೆಸ್ಲೀ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.

Wednesday, December 21, 2011

ಗೃಹಪ್ರವೇಶ ಸೂಪರ್ರೋ ಸೂಪರ್ !




ಇಮ್ಯಾನುವೆಲ್( ಬೈಬಲ್ ಆಧಾರಿತ ಶಬ್ದ) ದೇವರು ಜತೆಗಿದ್ದಾನೆ ಎನ್ನುವ ಅರ್ಥ ನೀಡುವ ದಾರಂದಕುಕ್ಕುವಿನ ನನ್ನ ಮನೆಯ ಗೃಹಪ್ರವೇಶ ಬೊಂಬಾಟಾಗಿ ಡಿ.೧೮ರ ಭಾನುವಾರ ನಡೆದಿದೆ. ಗೃಹಪ್ರವೇಶ ದಿನ ಬಂದವರೆಲ್ಲರೂ ಗೋಡೆಯನ್ನು ನೋಡಿ ನಕ್ಕು ಹೋಗಿದ್ದಾರೆ. ಯಾಕೆ ಅಂತೀರಾ..? ಖ್ಯಾತ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿ ತಮ್ಮ ಬ್ಯುಸಿ ಶೆಡ್ಯುಲ್‌ಗಳ ನಡುವೆ ದಾರಂದಕುಕ್ಕುವಿಗೆ ಬಂದು ಒಂದು ಗೋಡೆಗೆ ಮ್ಯೂರಲ್ ಆರ್ಟ್ ಮಾಡಿ ಹೋಗಿದ್ದಾರೆ.
ಈ ರೀತಿಯ ಮ್ಯೂರಲ್ ಆರ್ಟ್ ಇರುವ ಮನೆ ದ.ಕ. ಜಿಲ್ಲೆಯಲ್ಲಿ ಬಿಡಿ. ಇಡೀ ರಾಜ್ಯದಲ್ಲಿ ಸಿಗುವುದು ತೀರಾ ಅಪರೂಪ ಎನ್ನುವುದು ನನ್ನ ನಂಬಿಕೆಯಲ್ಲ ಪ್ರಕಾಶ್ ಶೆಟ್ಟರ ಮಾತು ಕೂಡ ಹೌದು. ಏನೇ ಇರಲಿ ನನ್ನ ಸಹೋದರ ಸೈನ್ಯದಿಂದ ಮನೆಗೆ ರಜೆಯಲ್ಲಿ ಓಡಿ ಬರೋದು, ತಂದೆ ಪುಟ್ಟ ಅಂಗಡಿಯಲ್ಲಿ ವ್ಯಾಪಾರ ಮಾಡಲು ಚೀಟಿ ರೆಡಿ ಮಾಡೋದು, ತಾಯಿ ಅಡುಗೆ ಮನೆಯಲ್ಲಿ ನಿರತರಾಗಿರುವುದು, ಪತ್ರಕರ್ತ ಅನ್ನಿಸಿಕೊಂಡ ನಾನು ಸೋಪಾದ ಮೇಲೆ ಕೂತು ಬರೆಯುವ ಕೆಲಸ ಈ ಮ್ಯೂರಲ್ ಆರ್ಟ್‌ನಲ್ಲಿ ನಡೆದಿದೆ. ಇಂತಹ ಮಜಬೂತಾದ ಸೀನ್ ನೋಡಬೇಕಾದರೆ ಒಂದ್ ಸಾರಿ ನನ್ನ ಮನೆಗೆ ಬಂದು ನೋಡಿ ಅನ್ನೋದು ನನ್ನ ಸಿಂಪಲ್ ರಿಕ್ವೇಸ್ಟ್ ಮಾರಾಯ್ರೆ...