Tuesday, January 17, 2012

ಕುಡ್ಲ ಸಿಟಿಯಲ್ಲಿ ಫ್ಯೂಶನ್ ಗುರು ಹರಿಹರ



ಹರಿಹರನ್ ಹಾಡುಗಳು ಜಾಸ್ತಿ ಸೌಂಡ್ ಮಾಡಲ್ಲ. ಪ್ರೀತಿಸುವ ಹೃದಯಕ್ಕೆ ಸಾಂತ್ವನ ನೀಡುತ್ತದೆ. ಏಕಾಂಗಿ ಬದುಕಿಗೆ ಊರುಗೋಳಾಗಿ ನೆರವು ನೀಡುತ್ತದೆ. ಅದರಲ್ಲೂ ನಿಜವಾಗಿಯೂ ಸಂಗೀತ ಬಯಸುವ ಕಿವಿಗೆ ಇಂಪು ತಂದುಕೊಡುತ್ತದೆ. ಇಂತಹ ಹರಿಹರನ್ ಲವಲವಿಕೆಯ ಜತೆಯಲ್ಲಿ ಚಿಟ್‌ಚಾಟ್ ಮಾಡಿದ್ದಾರೆ.


ಹರಿಹರನ್ ಹಾಡುಗಳು ಜಾಸ್ತಿ ಸೌಂಡ್ ಮಾಡಲ್ಲ. ಪ್ರೀತಿಸುವ ಹೃದಯಕ್ಕೆ ಸಾಂತ್ವನ ನೀಡುತ್ತದೆ. ಏಕಾಂಗಿ ಬದುಕಿಗೆ ಊರುಗೋಳಾಗಿ ನೆರವು ನೀಡುತ್ತದೆ. ಅದರಲ್ಲೂ ನಿಜವಾಗಿಯೂ ಸಂಗೀತ ಬಯಸುವ ಕಿವಿಗೆ ಇಂಪು ತಂದುಕೊಡುತ್ತದೆ. ಭಾರತೀಯ ಸಂಗೀತ ಜತೆಯಲ್ಲಿ ವೆಸ್ಟರ್ನ್ ಮ್ಯೂಸಿಕ್‌ನ್ನು ಲಿಂಕ್ ಕೊಟ್ಟು ಫ್ಯೂಶನ್ ಗಾಯಕ ಎಂದೇ ಕರೆಯಲ್ಪಡುವ ಹರಿಹರನ್ ಘಜಲ್ ಗೀತೆಗಳಿಗೂ ಜೀವ ತುಂಬಬಲ್ಲ ಸಮರ್ಥರು.
ಮಲಯಾಳಂ, ತಮಿಳು, ಕನ್ನಡ, ಹಿಂದಿ, ತೆಲುಗು, ಭೋಜ್‌ಪುರಿ, ಮರಾಠಿಯಲ್ಲಿ ಸಾವಿರಕ್ಕೂ ಅಕ ಹಾಡುಗಳನ್ನು ಹಾಡಿದ ಹರಿಹರನ್ ರೋಜಾ, ಬಾಂಬೆ ಸಿನ್ಮಾಗಳ ಹಾಡಿನ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಕಂಠಕ್ಕೂ ಬೆಲೆ ತಂದುಕೊಂಡಿದ್ದಾರೆ. ಎ.ಆರ್. ರೆಹಮಾನ್ ಎನ್ನುವ ಸಂಗೀತ ನಿರ್ದೇಶಕನ ಗಾಯಕರ ಪಟ್ಟಿಯಲ್ಲಿ ಹರಿಹರನ್ ಯಾವಾಗಲೂ ಮೊದಲ ಸ್ಥಾನದಲ್ಲಿರುವ ಗಾಯಕ ಎನ್ನುವ ಖ್ಯಾತಿಯೂ ಅವರ ಬೆನ್ನಿಗಿದೆ. ಬಾರ್ಡರ್ ಚಿತ್ರದ ‘ಮೇರೇ ದುಶ್ಮಾನ್ ಮೇರೇ ಭಾಯಿ’ ಎನ್ನುವ ಹಾಡಿಗೆ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
೩೦ಕ್ಕೂ ಅಕ ಘಜಲ್ ಆಲ್ಬಂಗಳನ್ನು ಹೊರ ತಂದಿರುವ ಹರಿಹರನ್ ಯಾವಾಗಲೂ ಘಜಲ್ ಗಾಯನಾಗಲು ಇಷ್ಟ ಪಡುತ್ತಾರಂತೆ. ೧೯೯೪ರಲ್ಲಿ ಆಶಾ ಬೊಂಸ್ಲೆ ಅವರ ಜತೆಯಲ್ಲಿ ಹಾಡಿದ ‘ಅಬಾಸರ್ ಈ- ಘಜಲ್’ ಎನ್ನುವ ಆಲ್ಬಂ ಈಗಲೂ ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿದೆ. ೨೦೦೮ರಲ್ಲಿ ಬಂದ ‘ಲಾಫ್ಸ್’ ಘಜಲ್ ಆಲ್ಬಂ ನಂತರ ಹರಿಹರನ್ ಘಜಲ್ ಗಾಯನದಿಂದ ಹೊರಬಂದು ಫ್ಯೂಶನ್ ಕಡೆ ಜಾಸ್ತಿ ಒಲವು ತೋರಿಸಿದರು.
೧೯೯೬ರಲ್ಲಿ ಲೆಸ್ಲಿ ಲೂಯಿಸ್ ಜತೆ ಸೇರಿಕೊಂಡು ‘ಕಲೋನಿಯಲ್ ಕಸೀನ್ಸ್’ ಎನ್ನುವ ಆಲ್ಬಂ ಮೂಲಕ ದೇಶದಲ್ಲಿ ಮೊತ್ತ ಮೊದಲ ಬಾರಿಗೆ ‘ಫ್ಯೂಶನ್’ ಆಲ್ಬಂಗೆ ಅಡಿಪಾಯ ಹಾಕಿಕೊಟ್ಟ ಹರಿಹರನ್ ನಂತರದ ದಿನಗಳಲ್ಲಿ ‘ಕಲೋನಿಯಲ್ ಕಸೀನ್ಸ್’ ಮ್ಯೂಸಿಕ್ ಬ್ಯಾಂಡ್ ಕಟ್ಟಿಕೊಂಡು ದೇಶ- ವಿದೇಶದ ಅಭಿಮಾನಿಗಳ ಕಿವಿಯನ್ನು ತಣಿಸುತ್ತಿದ್ದಾರೆ. ತಮಿಳಿನ ಒಂದೆರಡು ಸಿನ್ಮಾಗಳಿಗೆ ಬ್ಯಾಕ್‌ಗ್ರೌಂಡ್ ಸ್ಕೋರ್ ಕೊಟ್ಟು ತಮಿಳು ಸಂಗೀತ ಲೋಕದಲ್ಲೂ ಹೊಸ ‘ವೇ’ ಸೃಷ್ಟಿ ಮಾಡಲು ಹೊರಟಿರುವ ಹರಿಹರನ್ ರಾಷ್ಟ್ರೀಯ ಯುವಜನೋತ್ಸವ ಕಾರ‍್ಯಕ್ರಮಕ್ಕಾಗಿ ಮಂಗಳೂರಿಗೆ ಬಂದಿದ್ದಾಗ ಎಲ್‌ವಿಕೆಯ ಜತೆ ಕೊಂಚ ಟೈಮ್ ಚಿಟ್‌ಚಾಟ್ ಮಾಡಿದರು.
* ಘಜಲ್, ಫ್ಯೂಶನ್ ಎರಡರಲ್ಲಿ ಯಾವುದು ಇಷ್ಟ ?
- ಘಜಲ್ ಹಾಡುಗಳು ನೆಮ್ಮದಿ ಕೊಟ್ಟರೆ.. ಫ್ಯೂಶನ್ ಹಾಡುಗಳು ಖ್ಯಾತಿ ಕೊಟ್ಟಿದೆ. ಒಂದನ್ನು ಬಿಟ್ಟು ಮತ್ತೊಂದು ಇರದು. ಮನುಷ್ಯನಿಗೆ ಕಣ್ಣುಗಳಿದ್ದಾಗೆ ಅಂತೇನೆ...
* ಎ.ಆರ್. ರೆಹಮಾನ್ ಎಂದರೆ ನಿಮ್ಮ ಪಾಲಿಗೆ ಏನು?
- ಜಸ್ಟ್ ವನ್ ವರ್ಡ್‌ನಲ್ಲಿ ಹೇಳುವುದಾದರೆ ಈ ವಾಸ್ ಎ ಗ್ರೇಟ್ ಮ್ಯೂಶಿಯನ್. ನನ್ನ ಹಾಗೂ ರೆಹಮಾನ್‌ರ ಕೆಲಸಗಳು ಸಂಗೀತ ಲೋಕದಲ್ಲಿ ವರ್ಕ್ ಆಗಿದೆ. ಅದಕ್ಕಿಂತಲೂ ಮುಖ್ಯವಾಗಿ ರೆಹಮಾನ್ ಜತೆಯಲ್ಲಿ ಕೆಲಸ ಮಾಡಲು ನಾನು ಜಾಸ್ತಿ ಬಯಸುತ್ತೇನೆ. ವರ್ಕ್ ವಿದ್ ಕಂಪಾರ್ಟ್ ಎರಡು ಅಂಶಗಳು ರೆಹಮಾನ್ ಟೀಮ್‌ನಲ್ಲಿದೆ.
* ಉರ್ದು ನಂತರ ಹೊಸ ಭಾಷೆ ಕಲಿಯುತ್ತಿದ್ದೀರಾ..?
- ಘಜಲ್ ಹಾಡುಗಳನ್ನು ಹಾಡುವಾಗ ನನಗೆ ಉರ್ದು ಭಾಷೆ ಅಗತ್ಯವಾಗಿತ್ತು. ಬಹಳಷ್ಟು ಘಜಲ್‌ಗಳನ್ನು ನಾನು ಉರ್ದುವಿನಿಂದ ನನ್ನ ಆಲ್ಬಂಗಳಿಗೆ ಇಳಿಸಿದ್ದೇನೆ. ಅದಕ್ಕಾಗಿ ಈ ಭಾಷೆ ಕಲಿಯಬೇಕಾಯಿತು. ಈಗ ಹೊಸ ಭಾಷೆ ಕಲಿಯುವುದರಲ್ಲಿ ಆಸಕ್ತಿ ಇಲ್ಲ.
* ಕಲೋನಿಯಲ್ ಕಸೀನ್ಸ್ ಮ್ಯೂಸಿಕ್ ಬ್ಯಾಂಡ್ ಕಟ್ಟಿದ್ದು ಯಾಕೆ?
- ಭಾರತೀಯ ಸಂಗೀತವನ್ನು ಹೊಸ ಪೀಳಿಗೆಯವರು ನೇರವಾಗಿ ಸ್ವೀಕರಿಸುವ ಧೈರ್ಯ ತೋರಲಿಲ್ಲ. ಈ ಸಂದರ್ಭದಲ್ಲಿ ಲೆಸ್ಲಿ ಲೂಯಿಸ್ ನನಗೊಂದು ಉಪಾಯ ಹೇಳಿದರು. ಪಾಶ್ಚಿಮಾತ್ಯ ಸಂಗೀತವನ್ನು ಭಾರತೀಯ ಸಂಗೀತದ ಜತೆ ಲಿಂಕ್ ಕೊಟ್ಟು ಹಾಡುವ ಈ ಮೂಲಕ ಹೊಸ ಪರಂಪರೆಯೊಂದು ಸೃಷ್ಟಿಯಾಗುತ್ತದೆ ಎಂದರು ನಾನು ಒಪ್ಪಿದೆ. ಅದಕ್ಕಾಗಿ ಫ್ಯೂಶನ್ ಆಲ್ಬಂವೊಂದನ್ನು ಮಾರುಕಟ್ಟೆಯಲ್ಲಿ ಬಿಟ್ಟು ತಮಾಷೆ ನೋಡಿದೇವು.. ಯುವಜನತೆ ಫ್ಯೂಶನ್ ಸಂಗೀತವನ್ನು ಬಹಳವಾಗಿ ಇಷ್ಟಪಟ್ಟಿತು. ಮುಂದೆ ಟೀಮ್ ಬೆಳೆಯುತ್ತಾ ಹೋಯಿತು.
* ಹೊಸ ಆಲ್ಬಂ, ಘಜಲ್ ಆಲ್ಬಂ ತರುವ ಪ್ಲ್ಯಾನ್ ಇದೆಯಾ?
- ಹೊಸ ಆಲ್ಬಂ ಮಾಡಬೇಕು ಅಂದುಕೊಂಡಿದ್ದೇನೆ. ಈ ಆಲ್ಬಂ ‘ಕಲೋನಿಯಲ್ ಕಸೀನ್ಸ್’ ಮೂಲಕ ಹೊರ ತರುವ ಕುರಿತು ಯೋಜನೆ ನಡೆಯುತ್ತಿದೆ. ಈ ವರ್ಷದ ಕೊನೆಯಲ್ಲಿ ಹೊಸ ಆಲ್ಬಂ ಮಾರುಕಟ್ಟೆಗೆ ಬಿಡುತ್ತೇನೆ. ಹೆಸರು ಇನ್ನೂ ಇಟ್ಟಿಲ್ಲ. ಆರು ಹಾಡುಗಳು ಕಂಪ್ಲೀಟ್ ಆಗಿದೆ.
* ಸಂಗೀತದ ಹೊರತು ಹರಿಹರನ್ ಏನೂ ಮಾಡುತ್ತಿದ್ದರು?
- ಈ ಪ್ರಶ್ನೆ ನನ್ನನ್ನು ಬಾಲ್ಯದಿಂದಲೂ ಕಾಡುತ್ತಾ ಬಂದಿದೆ. ಹೆತ್ತವರು ಸಂಗೀತವನ್ನು ಒಪ್ಪಿ ಅಪ್ಪಿಕೊಂಡಿದ್ದರು. ನಾನು ಕೂಡ ಇದೇ ಸಂಗೀತವನ್ನು ಅಪ್ಪಿಕೊಂಡೇ.. ಬದುಕಿನಲ್ಲಿ ನನಗೆ ಬೇರೆಯೇನೂ ಬೇಕಾಗಿರಲಿಲ್ಲ. ಸಂಗೀತಗಾರನ ಹೊರತು ನಾನು ಏನೂ ಆಗಲೂ ಬಯಸುತ್ತಿರಲಿಲ್ಲ, ಬಯಸುತ್ತಿಲ್ಲ.
.....
ಚಿತ್ರ: ಸುಧಾಕರ್ ಎರ್ಮಾಳ್
( vk lvk puravani published dis article on 18.01.2012)

No comments:

Post a Comment