Tuesday, October 2, 2012

ಮಣಿ ಕೈಯಲ್ಲಿ ಈಗ ಐಶ್ವರ್ಯಾ !

* ಸ್ಟೀವನ್ ರೇಗೊ, ದಾರಂದಕುಕ್ಕು
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಣಿರತ್ನಂ ಅವರ ಮಾತಿಗೆ ಜಗದೇಕ ಸುಂದರಿ ಐಶ್ವರ್ಯಾ ರೈ ತಕ್ಷಣ ಒಪ್ಪಿಕೊಳ್ಳಲು ಇರುವ ಕಾರಣ ಏನೂ ಎಂಬ ಪ್ರಶ್ನೆ ಬಹಳ ಮಂದಿಯನ್ನು ಕಾಡುತ್ತಿರಬಹುದು. ಬಾಲಿವುಡ್ ಬಿಗ್ ಬಿ ಸೊಸೆಯ ರೀ ಎಂಟ್ರಿ ಭರ್ಜರಿಯಾಗಿರಬೇಕು ಎಂದುಕೊಂಡು ಹತ್ತಾರು ಬಾಲಿವುಡ್ ನ ಚಿತ್ರ ನಿರ್ಮಾಣ ಬ್ಯಾನರ್ ಗಳು ಜತೆಗೆ ನಿರ್ದೇಶಕರು ತುದಿ ಕಾಲಿನಲ್ಲಿ ನಿಂತಿದ್ದರೂ ಕೂಡ ಐಶ್ ಬೇಬಿಯ ಕಾಲ್ ಶೀಟ್ ಮಣಿರತ್ನಂ ಎನ್ನುವ ನಿರ್ದೇಶಕನ ಪಾಲಿಗೆ ಸಿಗಲು ಕಾರಣ ಏನೂ ಎಂಬುದಕ್ಕೆ 1997ರಲ್ಲಿ ಬಿಡುಗಡೆ ಕಂಡ ಇರುವರ್ ಚಿತ್ರ ಹೇಳುತ್ತದೆ. ಒಂದಲ್ಲ ಎರಡಲ್ಲ ಬರೋಬರಿ 10 ತಿಂಗಳ ಕಾಲ ಯಾವುದೇ ಬಣ್ಣದ ಲೋಕದ ಟಚ್ ಬಿಟ್ಟುಕೊಂಡು ಬದುಕು ಕಟ್ಟೋದು ಅಂದರೆ ಹೇಳುವಂತೆ ಸುಲಭದ ಮಾತಲ್ಲ. ಪ್ರತಿದಿನ ಶೂಟಿಂಗ್ ಬ್ಯುಸಿಯ ಓಡಾಟ, ಹತ್ತಾರು ಜಾಹೀರಾತು ಕಂಪನಿಗಳ ನಿರಂತರ ಶೂಟಿಂಗ್ ಅಲ್ಲೊಂದು ಇಲ್ಲೊಂದು ಅಂತಹ ಹೇಳಿಕೊಂಡು ಸಮಾಜ ಸೇವೆಯ ಕೆಲಸಗಳು ಎಲ್ಲವೂ ಬಿಟ್ಟು ಬದುಕಿನ ಶಕ್ತಿ ನಟಿಗೆ ಬಂದು ಬಿಟ್ಟರೆ ಆಕೆ ಮತ್ತೆ ಸಿನಿಮಾ ಫೀಲ್ಡ್ ಗೆ ಎಂಟ್ರಿ ಕೊಡುವುದು ಬಾಲಿವುಡ್ ಲೆಕ್ಕಚಾರದ ಪ್ರಕಾರ ತೀರಾನೇ ಕಡಿಮೆ. ಈ ಪಟ್ಟಿಯಲ್ಲಿ ಕುಡ್ಲದ ಕುವರಿ ಐಶ್ವರ್ಯಾ ರೈ ಬಂದಿದ್ದಾರೆ. ತೀರಾ ಇತ್ತೀಚೆಗೆ ವಿಶ್ವ ಸಂಸ್ಥೆಯ ಪರವಾಗಿ ಆಂದೋಲನವೊಂದಕ್ಕೆ ಐಶ್ ರಾಯಭಾರಿ ಆಗುವುದರ ಜತೆಗೆ ಚಿನ್ನಾಭರಣ ಕಂಪನಿಯೊಂದಕ್ಕೆ ಬ್ರಾಂಡ್ ಅಂಬಾಸೀಡರ್ ಆಗಿದ್ದು ಕೂಡ ಈಗ ಬಹಳ ಹಳಸಲು ಸುದ್ದಿ. ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ನಂತರ ಐಶ್ವರ್ಯಾ ರೈ ಆರಾಧ್ಯಳ ತಾಯಿಯಾಗಿ, ಜಾಹೀರಾತು ಕಂಪನಿಗೆ ರೂಪದರ್ಶಿಯಾಗುವುದರ ಬೆನ್ನಿಗೆ ಮತ್ತೆ ಬಣ್ಗದ ಲೋಕಕ್ಕೆ ರೀ ಎಂಟ್ರಿ ಕೊಡುತ್ತಿರುವ ವಿಚಾರ ಇಡೀ ಬಾಲಿವುಡ್ ಚಿತ್ರರಂಗಕ್ಕೆ ಬಹಳ ದೊಡ್ಡ ಸುದ್ದಿ ಅಲ್ವಾ..? ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಗುಜಾರಿಶ್' ನಂತರ ಐಶ್ ಗೆ ಮಧುರ್ ಭಂಡಾರ್ ಕರ್ ಅವರ ಹೀರೋಯಿನ್ ನಲ್ಲೂ ಅವಕಾಶ ಬಂದಿತ್ತು. ಇದೇ ಸಮಯದಲ್ಲಿ ಐಶ್ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಈ ಜಾಗದಲ್ಲಿ ಕರೀನಾ ಕಪೂರ್ ಬಂದು ನಿಂತಿದ್ದರು. ಅಲ್ಲಿಗೆ ಐಶ್ ಪತಿ, ಮಗು ಹಾಗೂ ಮಾವ- ಮತ್ತೆ ಎನ್ನುವ ಸಂಬಂಧಗಳ ನಡುವೆ ಕಾಲ ಕಳೆಯುತ್ತಾರೆ ಎಂದೇ ಅವರ ಅಭಿಮಾನಿಗಳು ಎಂದುಕೊಂಡು ಬಿಟ್ಟಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ಐಶ್ ಮರಳಿ ಸಿನಿಮಾಕ್ಕೆ ಬರುವ ಮಾತು ಆಡಿದ್ದಾರೆ. ಮಣಿಯಲ್ಲಿ ಅರಳಿದ ಐಶ್ವರ್ಯಾ: ಅಂದಹಾಗೆ ಐಶ್ ಬೇಬಿ ಮತ್ತೆ ಸಿನಿಮಾ ರಂಗಕ್ಕೆ ಕಾಲಿಡಲು ಕಾರಣ ಮಣಿರತ್ಣಂ. ಹೌದು. ಆಂಗ್ಲ ಕಾದಂಬರಿಗಾರ ಡ್ಯಾಫ್ನೇ ಡೂ ಮೂರಿಯರ್ ಅವರ ಖ್ಯಾತ ಕಾದಂಬರಿ "ರೆಬೇಕಾ' ಈಗ ಮಣಿರತ್ನಂ ಅವರ ಕೈಯಲ್ಲಿ ಅರಳಲಿರುವ ಚಿತ್ರ. ಈಗಾಗಲೇ ಐಶ್ ಜತೆಯಲ್ಲಿ ಚಿತ್ರದ ಕುರಿತಾಗಿ ಮಾತುಕತೆಗಳು ಮುಗಿದಿದೆ. ಚಿತ್ರಕ್ಕೆ ತಕ್ಕಂತೆ ಶೂಟಿಂಗ್ ಸ್ಪಾಟ್ ಗಳನ್ನು ಗುರುತಿಸುವ ಕೆಲಸ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಇನ್ನೂಳಿದಂತೆ ರೆಬೇಕಾ ಚಿತ್ರಕ್ಕೆ ನಾಯಕ ಯಾರು ಎನ್ನೋದು..? ಈ ಪ್ರಶ್ನೆಗೆ ಉತ್ತರ ನೀಡಲು ಮಣಿ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ವಿಚಾರ ಕೂಡ ಹೊರಬಂದಿದೆ. ಮಣಿರತ್ನಂ ಅವರ ಕಳೆದ ಎರಡು ಚಿತ್ರಗಳಲ್ಲಿ ಐಶ್ವರ್ಯಾ ರೈ ಗೆ ನಾಯಕನಾಗಿ ಅಭಿಷೇಕ್ ಅವರನ್ನು ಬಳಸಿಕೊಂಡಿದ್ದರು. ಈ ಚಿತ್ರದಲ್ಲೂ ಇದೇ ನಾಯಕ- ನಾಯಕಿ ಮುಂದವರಿಸುವ ಕುರಿತು ಚಿಂತನೆ ನಡೆದಿದೆ ಎನ್ನುವ ಮಾತುಗಳು ಮುಂಬಯಿ ಗಲ್ಲಿಯಲ್ಲಿ ಕೇಳಿಸಿಕೊಂಡಿದೆ. ಐಶ್ ಯಾಕೆ ಮಣಿ ಚಿತ್ರಕ್ಕೆ ಒಪ್ಪಿಕೊಂಡಳು: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಣಿರತ್ನಂ ಅವರ ಮಾತಿಗೆ ಜಗದೇಕ ಸುಂದರಿ ಐಶ್ವರ್ಯಾ ರೈ ತಕ್ಷಣ ಒಪ್ಪಿಕೊಳ್ಳಲು ಇರುವ ಕಾರಣ ಏನೂ ಎಂಬ ಪ್ರಶ್ನೆ ಬಹಳ ಮಂದಿಯನ್ನು ಕಾಡುತ್ತಿರಬಹುದು. ಬಾಲಿವುಡ್ ಬಿಗ್ ಬಿ ಸೊಸೆಯ ರೀ ಎಂಟ್ರಿ ಭರ್ಜರಿಯಾಗಿರಬೇಕು ಎಂದುಕೊಂಡು ಹತ್ತಾರು ಬಾಲಿವುಡ್ ನ ಚಿತ್ರ ನಿರ್ಮಾಣ ಬ್ಯಾನರ್ ಗಳು ಜತೆಗೆ ನಿರ್ದೇಶಕರು ತುದಿ ಕಾಲಿನಲ್ಲಿ ನಿಂತಿದ್ದರೂ ಕೂಡ ಐಶ್ ಬೇಬಿಯ ಕಾಲ್ ಶೀಟ್ ಮಣಿರತ್ನಂ ಎನ್ನುವ ನಿರ್ದೇಶಕನ ಪಾಲಿಗೆ ಸಿಗಲು ಕಾರಣ ಏನೂ ಎಂಬುದಕ್ಕೆ 1997ರಲ್ಲಿ ಬಿಡುಗಡೆ ಕಂಡ ಇರುವರ್ ಚಿತ್ರ ಹೇಳುತ್ತದೆ. 1994ರಲ್ಲಿ ಜಗದೇಕ ಸುಂದರಿ ಕಿರೀಟ ಹೊತ್ತ ಐಶ್ವರ್ಯಾ ರೈ ನಂತರ ನಾನಾ ಸಿನಿಮಾಗಳಿಗೆ ನಾಯಕಿ ಸ್ದಾನಕ್ಕೆ ಅವಕಾಶ ಕೇಳಿಕೊಂಡಿದ್ದಳು. ಆದರೆ ನಿರ್ದೇಶರು ಐಶ್ ಅವರನ್ನು ಬರೀ ಸುಂದರ ಗೊಂಬೆಯಾಗಿ ಮಾತ್ರ ನೋಡಲು ಬಯಸಿದ್ದರು. ಇದೇ ಸಮಯದಲ್ಲಿ ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ತನ್ನ ಇರುವರ್ ಚಿತ್ರದಲ್ಲಿ ನಟಿಸಲು ಐಶ್ ಗೆ ಅವಕಾಶ ಮಾಡಿಕೊಟ್ಟರು. ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಐಶ್ ಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಐಶ್ ಈ ಚಿತ್ರದಲ್ಲಿ ಕಲ್ಪನಾ, ಕನಕವಳ್ಳಿಯ ಪಾತ್ರದಲ್ಲಿ ಎಲ್ಲ ಪ್ರೇಕ್ಷಕರಿಗೂ ಇಷ್ಟವಾದಳು. ಇತ್ತ ಕಡೆ ಐಶ್ ಗೆ ಎಲ್ಲ ಚಿತ್ರರಂಗದಿಂದಲೂ ಅವಕಾಶಗಳು ಬರಲು ಆರಂಭವಾಯಿತು. ನಂತರ ಮಣಿರತ್ನಂ ತನ್ನ ಚಿತ್ರಗಳಿಗೆ ಹೊಸ ನಾಯಕ- ನಾಯಕಿರನ್ನು ಬಳಸಿಕೊಂಡು ಸಕ್ಸಸ್ ಕಾಣುತ್ತಿದ್ದಾರೆ. ಇತ್ತ ಕಡೆ ಐಶ್ ತಮ್ಮದೇ ಸಿನಿಮಾ ಗುಂಗಿನಲ್ಲಿ ಕಾಲಕಳೆಯುತ್ತಿದ್ದರು. ಐಶ್- ಅಭಿಯನ್ನು ಒಂದು ಮಾಡಿದ ಮಣಿ: ನಿರ್ದೇಶಕ ಮಣಿರತ್ನಂ ಐಶ್ ಬದುಕಿನಲ್ಲಿ ಬಹಳ ದೊಡ್ಡದಾದ ಪಾತ್ರದಲ್ಲಿದ್ದಾರೆ. ಐಶ್ ನ ಆರಂಭದ ಚಿತ್ರದಿಂದ ಹಿಡಿದು ಕೊನೆಗೆ ಮದುವೆಯ ವರೆಗೂ ಮಣಿ ಐಶ್ ಗೆ ಸಾಥ್ ನೀಡಿದ್ದರು. ಇರುವರ್ ಚಿತ್ರದ ಮೂಲಕ ಮಣಿರತ್ನಂ ಐಶ್ವರ್ಯಾ ರೈ ಸಿನಿಮಾ ಬದುಕಿನ ಮೊದಲ ಅಧ್ಯಾಯ ತೆರೆದರು. 2007ರಲ್ಲಿ ಗುರು ಸಿನಿಮಾದಲ್ಲಿ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ ಅವರನ್ನು ತನ್ನ ಚಿತ್ರ ಗುರು ಗೆ ಜತೆ ಸೇರಿಸಿಕೊಳ್ಳುವ ಮೂಲಕ ಇಬ್ಬರ ನಡುವೆ ಪ್ರೀತಿಯ ಬೆಸುಗೆ ಹಾಕಿದ್ದರು. ಇದೇ ಸಮಯದಲ್ಲಿ ಅಭಿ ಹಾಗೂ ಐಶ್ ಅವರ ಮದುವೆಯಾಗಿತ್ತು. ಈ ಬಳಿಕ 2010ರಲ್ಲಿ ರಾವಣ್ ಚಿತ್ರದಲ್ಲಿ ಮತ್ತೆ ಇಬ್ಬರನ್ನು ಒಟ್ಟು ಸೇರಿಸುವ ಮೂಲಕ ಅರಾಧ್ಯ ಬಚ್ಚನ್ ಬಿಗ್ ಬಿ ಕುಟುಂಬಕ್ಕೆ ಮೊಮ್ಮಗಳನ್ನು ಪಡೆಯುವಂತೆ ಆಯಿತು. ಈ ಎಲ್ಲ ವಿಚಾರಗಳ ಹಿಂದೆ ಮಣಿರತ್ನಂ ಇದ್ದರು. ಈಗ ಚಿತ್ರರಂಗಕ್ಕೆ ಐಶ್ ಅವರನ್ನು ರೀ ಎಂಟ್ರಿ ಕೊಡಿಸುವ ಮೂಲಕ ಮತ್ತೆ ಗುರುವಾಗಿ ಮೆರೆದಿದ್ದಾರೆ. ಮೂರನೇ ಚಿತ್ರ ರೆಬೇಕಾದ ಮೂಲಕ ಐಶ್- ಮಣಿ ಕೆಮೆಸ್ಟ್ರಿ ಒಳ್ಳೆಯ ರೀತಿಯಲ್ಲಿ ವರ್ಕ್ ಔಟ್ ಆಗಲಿ ಎನ್ನೋದು ಪ್ರೇಕ್ಷಕ ಪ್ರಭು ಮಾಡಿಕೊಳ್ಳುವ ಮನವಿ.

No comments:

Post a Comment