Friday, October 5, 2012

<ಸತ್ಯ ಮೇವಾ ಜಯತೇ ಎಡವಟ್ಟು ಆಮೀರ್ ತಲಾಶ್ ಶುರು !

ಇಂಟ್ರೋ: ಭಾರತೀಯ ಸಿನಿಮಾ ಇಂಡಸ್ಟ್ರಿಯ ಇತ್ತೀಚಿನ ಸಿನಿಮಾಗಳ ಬೆಳವಣಿಗೆಯಲ್ಲಿ ಒಂದು ಚಿತ್ರದ ಕಥೆಯನ್ನು ಮೂರು ಬಾರಿ ಬದಲಾವಣೆ ಮಾಡಿದ ಖ್ಯಾತಿಗೆ "ತಲಾಶ್' ಭಾಜನವಾಗಿದೆ. ಅದರಲ್ಲೂ ಆಮೀರ್ ಖಾನ್ ಒಂದು ಬಾರಿ ನಟಿಸಿದ ನಾಯಕಿಯರ ಜತೆಯಲ್ಲಿ ಮತ್ತೊಂದು ಸಲ ಕೆಲಸ ಮಾಡಲು ಇಷ್ಟ ಪಡುವುದಿಲ್ಲ ಎನ್ನುವುದಕ್ಕೆ ಅವರ ಹಿಂದಿನ ಚಿತ್ರಗಳ ನಾಯಕಿಯ ಬದಲಾವಣೆಯನ್ನೇ ಗಮನಿಸಿದರೆ ತಿಳಿದು ಬರುತ್ತದೆ. ಆದರೆ ತಲಾಶ್ ನಲ್ಲಿ ಎಲ್ಲವೂ ಉಲ್ಟಾ- ಪಲ್ಟಾ .. ಏನ್ ಅಂತಾ ಕೇಳ್ತೀರಾ..? ಇಂಟ್ರೋ: * ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಇರಲಿ ಇತರ ಯಾವುದೇ ಭಾರತೀಯ ಸಿನಿಮಾ ಇಂಡಸ್ಟ್ರಿ ಇರಲಿ ಆಮೀರ್ ಖಾನ್ ಅಂದಾಕ್ಷಣ ಕುತೂಹಲದ ಕರಿ ನೆರಳು ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ. ಇದು ಈ ಹೆಸರಿಗೆ ಇರುವ ಕಿಮ್ಮತ್ತು ಎಂದುಕೊಂಡರೂ ಅದು ತಪ್ಪಿಲ್ಲ. ಯಾಕೆಂದರೆ ಬಾಲಿವುಡ್ ಸಿನಿಮಾ ರಂಗದಲ್ಲಿ ಆಮೀರ್ ಎಂದರೆ ನೂರಕ್ಕೆ ನೂರು ಪರ್ಫೆಕ್ಟ್ ಕಾಂಬೀನೇಶನ್. ಅದು ಚಿತ್ರ ಇರಲಿ ಅಥವಾ ಆಮೀರ್ ಬದುಕಿನ ಯಾವುದೇ ಸಾಮಾಜಿಕ ವಿಚಾರಗಳಿರಲಿ ಎಲ್ಲ ವಿಚಾರದಲ್ಲೂ ಎತ್ತಿದ ಕೈ. ಅಂದಹಾಗೆ ಆಮೀರ್ ಖಾನ್ 2000 ಇಸವಿಯ ಮೊದಲು ಹೇಗಿದ್ದರೋ ಆ ವಿಚಾರವನ್ನು ಸೈಡ್ ಗೆ ಇಟ್ಟುಕೊಂಡು ನೋಡಿ 2000 ಇಸವಿಯ ನಂತರ ಆಮೀರ್ ನಟಿಸಿದ ಹಾಗೂ ನಿರ್ಮಾಪಕನಾಗಿ ಮಾಡಿದ ಎಲ್ಲ ಚಿತ್ರಗಳು ಸಾಮಾಜಿಕ ವಿಚಾರಗಳನ್ನೇ ಎತ್ತಿಕೊಂಡು ಮಾಡಿದ್ದು ಚಿತ್ರದ ಮೂಲಕ ಜನರಲ್ಲಿ ಜಾಗೃತಿ ಹುಟ್ಟು ಹಾಕುವ ಸಿನಿಮಾಗಳಿಗೆ ಆಮೀರ್ ಮೊದಲ ಆದ್ಯತೆ ನೀಡುತ್ತ ಬಂದ ಕಲಾವಿದ. ಆಮೀರ್ ಖಾನ್ ನಟಿಸಿದ "ಲಗಾನ್', "ಮಂಗಲ್ ಪಾಂಡೆ', "ರಂಗ್ ದೇ ಬಸಂತಿ', "ತಾರೆ ಜಮೀನ್ ಪರ್', "ಗಜನಿ", "ತ್ರಿ ಇಡಿಯಡ್ಸ್', "ಧೋಬಿ ಘಾಟ್' ಈಗ "ತಲಾಶ್" ಚಿತ್ರದ ಸರಣಿಯನ್ನೇ ತೆಗೆದುಕೊಂಡರೂ ಎಲ್ಲವೂ ಸಾಮಾಜಿಕ ವಿಚಾರಗಳಿಂದ ಸಿಡಿದು ಎದ್ದ ಕತೆ ಹಾಗೂ ಚಿತ್ರದ ಮೂಲಕ ಸಂದೇಶ ಕೊಡುವ ಪ್ರಯತ್ನ ಆಮೀರ್ ಮಾಡುತ್ತಾ ಬರುತ್ತಿದ್ದಾರೆ. ಈ ಎಲ್ಲ ಚಿತ್ರ ಗಳು ಕೂಡ ಒಂದೊಂದು ವರ್ಷದ ಅಂತರ ಕಾಯ್ದುಕೊಂಡು ಬಂದಿದೆ. ಈ ಮೂಲಕ ಆಮೀರ್ ಚಿತ್ರ ಆಯ್ಕೆ ಮೊದಲು ಕೂಡ ಬಹಳಷ್ಟು ಅಧ್ಯಯನ ಮಾಡಿಕೊಂಡು ಇಳಿಯುತ್ತಾರೆ ಎಂಬ ವಿಚಾರವನ್ನು ಈ ಘಟನೆಗಳು ಸಾಕ್ಷಿ ನೀಡುತ್ತದೆ. ತಲಾಶ್ ಹುಟ್ಟು ಹಾಕಿದ ಕ್ರೇಜ್ : ಬಾಲಿವುಡ್ ನ ಇತ್ತೀಚಿನ ಸಿನಿಮಾ ಗಳನ್ನು ಟೋಟಲಿ ಅಧ್ಯಯನ ಮಾಡಿದರೂ ಚಿತ್ರದ ಮುಹೂರ್ತ ಹಾಗೂ ಬಿಡುಗಡೆ ಅವಧಿ ಅಬ್ಬಾಬ್ಬ ಅಂದರೂ 6 ತಿಂಗಳಿನಿಂದ ಒಂದೂವರೆ ವರ್ಷ ಹಿಡಿದು ಬಿಡುತ್ತದೆ. ಆದರೆ "ತಲಾಶ್ ' ಚಿತ್ರದ ಕತೆನೇ ಬೇರೆ ಯಾಕ್ ಅಂತೀರಾ ಈ ಚಿತ್ರ ಅಧಿಕೃತವಾಗಿ ಆರಂಭವಾಗಿದ್ದು 2010ರ ಕೊನೆ ಭಾಗದಲ್ಲಿ ಈ ಬಳಿಕ 2011 ನವೆಂಬರ್ ಹೊತ್ತಿಗೆ ಆಮೀರ್ ಖಾನ್ ಖುದ್ದಾಗಿ ಈ ಚಿತ್ರಕ್ಕೆ ಟೈಟಲ್ ಸೂಟ್ ಮಾಡಿದ್ದರು. ಚಿತ್ರದ ನಿರ್ದೇಶಕಿ ರೀಮಾ ಕಾಡ್ಗಿ ಚಿತ್ರದ ಚಿತ್ರೀಕರಣ ಮುಕ್ಕಾಲು ಭಾಗ ಕೊನೆಗೊಂಡಾಗ ಇಡೀ ಚಿತ್ರದ ಕತೆಯನ್ನೇ ಬದಲಾವಣೆ ಮಾಡಲು ಯೋಚನೆಗೆ ಇಳಿದರು. ಇದೇ ಸಮಯದಲ್ಲಿ ಬಂದ ವಿದ್ಯಾ ಬಾಲನ್ ಚಿತ್ರ ಕಹಾನಿ ಹಾಗೂ ತಲಾಶ್ ಚಿತ್ರ ಕತೆಗೂ ಹೋಲಿಕೆ ಇದೆ ಎನ್ನುವ ಮಾತುಗಳು ಹೊರಗಡೆ ಬರುತ್ತಿದ್ದಾಗಲೇ ರೀಮಾ ಹಾಗೂ ಆಮೀರ್ ಜತೆ ಸೇರಿ ತಲಾಶ್ ಚಿತ್ರದ ಕತೆಗೆ ಮತ್ತೆ ಟ್ವೀಸ್ಟ್ ತಂದರು. ಈ ಮೂಲಕ ಭಾರತೀಯ ಸಿನಿಮಾ ಇಂಡಸ್ಟ್ರಿಯ ಇತ್ತೀಚಿನ ಸಿನಿಮಾಗಳ ಬೆಳವಣಿಗೆಯಲ್ಲಿ ಒಂದು ಚಿತ್ರದ ಕಥೆಯನ್ನು ಮೂರು ಬಾರಿ ಬದಲಾವಣೆ ಮಾಡಿದ ಖ್ಯಾತಿಗೆ "ತಲಾಶ್' ಭಾಜನವಾಗಿದೆ. ಅದರಲ್ಲೂ ಆಮೀರ್ ಖಾನ್ ಒಂದು ಬಾರಿ ನಟಿಸಿದ ನಾಯಕಿಯರ ಜತೆಯಲ್ಲಿ ಮತ್ತೊಂದು ಸಲ ಕೆಲಸ ಮಾಡಲು ಇಷ್ಟ ಪಡುವುದಿಲ್ಲ ಎನ್ನುವುದಕ್ಕೆ ಅವರ ಹಿಂದಿನ ಚಿತ್ರಗಳ ನಾಯಕಿಯ ಬದಲಾವಣೆಯನ್ನೇ ಗಮನಿಸಿದರೆ ತಿಳಿದು ಬರುತ್ತದೆ. ಆದರೆ ತಲಾಶ್ ವಿಚಾರದಲ್ಲಿ ಇದೆಲ್ಲವೂ ಉಲ್ಟಾ-ಪಲ್ಟಾ. ಕಾರಣ ಬಾಲಿವುಡ್ ನ 90ರ ದಶಕದಲ್ಲಿ ಬಂದ ಹಿಂದಿ ಚಿತ್ರ ಗುಲಾಮ್ ನಾಯಕಿ ರಾಣಿ ಮುಖರ್ಜಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಉಳಿದಂತೆ ತ್ರಿ ಇಡಿಯಟ್ಸ್ ಖ್ಯಾತಿ ಕರೀನಾ ಕಪೂರ್ ಕೂಡ ಆಮೀರ್ ಖಾನ್ ರ ತಲಾಶ್ ಗೆ ಸಾಥ್ ನೀಡಲಿದ್ದಾರೆ. ಇದು ಚಿತ್ರ ಮತ್ತೊಂದು ಮಗ್ಗಲು. ತಲಾಶ್ ಗೆ ಹೊಡೆದ ನೀಡಿದ ಆಮೀರ್ ಸತ್ಯ: ಚಿತ್ರದ ಆರಂಭದ ಬಹುತೇಕ ದೃಶ್ಯಗಳು ಮುಂಬಯಿಯ ರೆಡ್ ಲೈಟ್ ಏರಿಯಾದಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಕರೀನಾ ಕಪೂರ್ ಈ ಚಿತ್ರದಲ್ಲಿ ರೋಸಿ ಎನ್ನುವ ವೇಶ್ಯೆಯೊಬ್ಬರ ಪಾತ್ರದಲ್ಲಿ ಕಾಣಿಇಸಕೊಳ್ಳಲಿದ್ದಾರೆ ಎಂದು ಚಿತ್ರದ ಮುಹೂರ್ತ ಸಂದರ್ಭ ನಿರ್ದೇಶಕಿ ರೀಮಾ ಮಾಧ್ಯಮಗಳಿಗೆ ಹೇಳಿದ್ದರು. ಈ ಬಳಿಕ ಚಿತ್ರದ ಕತೆ ಹಾಗೂ ಉಳಿದ ಮಾಹಿತಿಗಳನ್ನು ಮುಚ್ಚಿಟ್ಟುಕೊಂಡಿದ್ದರು. ಚಿತ್ರದ ಎರಡನೇ ಹಂತವನ್ನು ತಮಿಳುನಾಡಿನ ಪಾಂಡಿಚೇರಿಯಲ್ಲಿ ನಡೆಸಿ ಉಳಿದಂತೆ ರಾಯಘಡದ ಕಪೋಲಿ ಪ್ರದೇಶದಲ್ಲಿ ಚಿತ್ರೀಕರಣ ನಡೆಯಿತು. ಇದೆಲ್ಲವೂ ನಡೆಯುತ್ತಿದ್ದಾಗ ಚಿತ್ರದ ಕತೆಯೇ ಬದಲಾವಣೆ ಕಂಡಿತ್ತು. ನವೆಂಬರ್ 2011ರ ಹೊತ್ತಿನಲ್ಲಿ ಚಿತ್ರದ ಬಹುತೇಕ ಭಾಗ ಮರು ಚಿತ್ರೀಕರಣ ನಡೆಸಿ ಕೆಲವೊಂದು ಬಾಕಿ ದೃಶ್ಯಗಳ ಚಿತ್ರೀಕರಣಕ್ಕಾಗಿ ಆಮೀರ್ ಖಾನ್ ಗೆ ಕಾದು ಕೂರಲಾಯಿತು. ಇದೇ ಸಮಯದಲ್ಲಿ ಆಮೀರ್ ತನ್ನ ರಿಯಾಲಿಟಿ ಶೋ ಸತ್ಯ ಮೇವ ಜಯತೇ ಯಲ್ಲಿ ಬ್ಯುಸಿಯಾಗಿದ್ದರು. ಈಗ ಚಿತ್ರದ ಚಿತ್ರೀಕರಣ ನಡೆದು ಮಾಧ್ಯಮಗಳಿಗೆ ಪ್ರೋಮೊಗಳನ್ನು ಬಿಡುಗಡೆ ಮಾಡಲಾಗಿದೆ. ನವೆಂಬರ್ ಕೊನೆಯ ಹೊತ್ತಿನಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶ ಚಿತ್ರದ ನಿರ್ಮಾಪಕರದ್ದು ಕಾರಣ ಆಮೀರ್ ಖಾನ್ ಚಿತ್ರಗಳು ವರ್ಷದ ಕೊನೆ ಭಾಗದಲ್ಲಿ ಸಿನಿಮಾ ಥಿಯೇಟರ್ ಗೆ ಬಂದರೆ ಅದು ಆಮೀರ್ ಪಾಲಿಗೆ ಅದೃಷ್ಟ ವಾಗಿರುತ್ತದೆ ಎನ್ನುವ ನಂಬಿಕೆಯ ಮಾತು ಬಾಲಿವುಡ್ ಅಂಗಳದಲ್ಲಿ ಚಾಲ್ತಿಯಲ್ಲಿದೆ. ಖುದ್ದು ಆಮೀರ್ ಸೇರಿದಂತೆ ರಿತೇಶ್ ಸಿದ್ವಾನಿ, ಫರ್ಹಾನ್ ಅಕ್ತರ್, ಶರಣ್ ವಾಲ್ಕರ್ ಚಿತ್ರದ ನಿರ್ಮಾಪಕರ ಸ್ಥಾನದಲ್ಲಿದ್ದಾರೆ. ಆರುಷಿ ಕೊಲೆ ಪ್ರಕರಣವೇ ತಲಾಶ್ ಕತೆನಾ? ಸಮಾಜದಲ್ಲಿರುವ ನೈಜ ಘಟನೆಗಳನ್ನೇ ತನ್ನ ಚಿತ್ರಕ್ಕೆ ಬಂಡವಾಳ ಮಾಡಿಕೊಂಡು ಬರುತ್ತಿರುವ ಆಮೀರ್ ತ್ನ ಹೊಸ ಚಿತ್ರ ತಲಾಶ್ ನಲ್ಲೂ ಇದೇ ಪ್ರಯೋಗ ಮಾಡಿದ್ದಾರೆ ಎನ್ನುವ ಮಾತಿದೆ. ತೀರಾ ಇತ್ತೀಚೆಗೆ ಬಹಳ ಸುದ್ದಿಯಾದ ಾರುಷಿ ಕೊಲೆ ಪ್ರಕರಣವನ್ನೇ ಚಿತ್ರದ ಕತೆಯಾಗಿ ಸೇರಿಸಿಕೊಂಡಿದ್ದಾರೆ ಎಂಬ ಗುಸುಗುಸು ಬಾಲಿವುಡ್ ಅಂಗಳದಲ್ಲಿ ಓಡಾಡುತ್ತಿದೆ. ದಿಲ್ಲಿಯ ನೊಯಿಡಾ ಪ್ರದೇಶದಲ್ಲಿ ನಡೆದ ಆರುಷಿ ಕೊಲೆ ಪ್ರಕರಣವನ್ನು ಆರಂಭದಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಅದು ಸಿಬಿಐ ಕೈ ಸೇರಿದ ಕತೆಯನ್ನೇ "ತಲಾಶ್' ಹೊಂದಿದೆ ಎನ್ನಲಾಗುತ್ತಿದೆ. 14ರ ಬಾಲೆ ಆರುಷಿಯನ್ನು 16 ಮೇ 2008ರಲ್ಲಿ ತನ್ನ ನೋಯಿಡಾ ನಿವಾಸದಲ್ಲಿ ಕೊಲೆ ಮಾಡಲಾಗಿತ್ತು. ಪೊಲೀಸರ ತನಿಖೆಯ ಸಂದರ್ಭ ಆರುಷಿ ಹೆತ್ತವರೇ ಅದನ್ನು ಮುಚ್ಚಿ ಹಾಕಲು ಪ್ರಯತ್ನ ಪಟ್ಟು ಸೆರೆ ಸಿಕ್ಕಿದ್ದು ಇದೇ ಮೂಲ ಎಳೆಯಿಂದ ತಲಾಶ್ ಚಿತ್ರ ಓಡಲಿದೆ . ಈಗಾಗಲೇ ಬಾಲಿವುಡ್ ನಲ್ಲಿ ಬಂದ "ನೋ ವನ್ ಕಿಲ್ಡ್ ಜೇಸಿಕಾ' ಚಿತ್ರ ಕೂಡ ಸಮಾಜದಲ್ಲಿ ನಡೆದ ನೈಜ ಅಪರಾಧ ಕತೆಯನ್ನೇ ಹೊಂದಿತ್ತು. ತಲಾಶ್ ಚಿತ್ರದ ನಿರ್ದೇಶಕಿ ರೀಮಾ ಕೂಡ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಹಾಗೂ ಪೊಲೀಸರ ಜತೆಯಲ್ಲಿ ಮಾತುಕತೆ ನಡೆಸಿದ್ದಾರೆ. ಕೊಲೆ ಪ್ರಕರಣದಲ್ಲಿ ಕಾಣಿಇಸಕೊಂಡ ತಿರುವು ಎಲ್ಲವೂ ರಿಮಾ ತನ್ನ ತಲಾಶ್ ನಲ್ಲಿ ಆಳವಡಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಮಾತು ಮಾಧ್ಯಮಗಳು ಬಾಯಿ ಬಿಟ್ಟಿದೆ. ಟೋಟಲಿ ಬಾಲಿವುಡ್ ನ ದೊಡ್ಡ ಪರದೆಯ ಮೇಲೆ ತಲಾಶ್ ಬಿಡುಗಡೆಯಾಗುವ ಮೊದಲು ಏನೂ ಹೇಳುವಂತಿಲ್ಲ. ಕಾರಣ ಬಾಲಿವುಡ್ ನ ಪರ್ಫೆಕ್ಟ್ ಮ್ಯಾನ್ ಎಂದು ಕರೆಯುವ ಆಮೀರ್ ಚಿತ್ರದ ಮೂಲ ಕತೆಯಲ್ಲಿ ಬದಲಾವಣೆ ಮಾಡದೇ ಇರುತ್ತಾರಾ..? ಎನ್ನುವ ಪ್ರಶ್ನೆ ಚಿತ್ರ ಪ್ರೇಮಿಗಳಲ್ಲಿ ಎದುರಾಗಿದೆ.

No comments:

Post a Comment