Tuesday, September 25, 2012

ಬಾಲಿವುಡ್ ಹೀರೋಯಿನ್ ಸೂಪರ್ ಲಾಸ್ !

ಬಾಲಿವುಡ್ ಅಂಗಳದಲ್ಲಿ ತೀರಾ ನಿರೀಕ್ಷೆ ಇಟ್ಟುಕೊಂಡು ಬಂದ ಹೀರೋಯಿನ್ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ನ ನಾಡಿ ಮಿಡಿತದ ಅಧ್ಯಯನದಿಂದ ಹೊರ ಬಂದ ವರದಿ ಏನಪ್ಪಾ ಅಂದರೆ ಮಧುರ್ ಪಾಲಿಗೆ ಹೀರೋಯಿನ್ ನಿಜಕ್ಕೂ ಕೈ ಕೊಟ್ಟಿದೆ. * ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ ಕರ್ ಚಿತ್ರ ಎಂದಾಕ್ಷಣ ಬಾಲಿವುಡ್ ಅಂಗಳದಲ್ಲಿರುವ ಇತರ ಸಿನಿಮಾಗಳ ಪಾಲಿಗೊಂದು ಹಕಿ ಸುದ್ದಿಯೇ ಆಗಿ ಬಿಡುತ್ತದೆ ಎನ್ನುವ ಮಾತು ಪ್ರಚಲಿತದಲ್ಲಿತ್ತು. ಆದರೆ ಈ ಎಲ್ಲ ಮಾತುಗಳು ಸುಳ್ಳಾಗುತ್ತಿರುವ ಸಾಧ್ಯತೆಗಳು ದಟ್ಟವಾಗುತ್ತಿದೆ. ಕಾರಣ ಇಷ್ಟೇ.. ಬಾಲಿವುಡ್ ಅಂಗಳದಲ್ಲಿ ತೀರಾ ನಿರೀಕ್ಷೆ ಇಟ್ಟುಕೊಂಡು ಬಂದ ಹೀರೋಯಿನ್ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ನ ನಾಡಿ ಮಿಡಿತದ ಅಧ್ಯಯನದಿಂದ ಹೊರ ಬಂದ ವರದಿ ಏನಪ್ಪಾ ಅಂದರೆ ಮಧುರ್ ಪಾಲಿಗೆ ಹೀರೋಯಿನ್ ನಿಜಕ್ಕೂ ಕೈ ಕೊಟ್ಟಿದೆ. ವಿಶ್ವದ ಹಿರಿತೆರೆಯ ಮೇಲೆ ಹೀರೋಯಿನ್ ಹೇಳುವಷ್ಟರ ಮಟ್ಟಿಗೆ ತನ್ನ ಚಮಕ್ ತೋರಿಸಿಲ್ಲ. ಬಿಡುಗಡೆಯಾಗಿ ಒಂದು ವಾರದ ಕಲೆಕ್ಷನ್ ತೀರಾ ಕುಸಿತ ಕಂಡಿದೆ. ಜತೆಯಲ್ಲಿ ಆಡಿಯನ್ಸ್ ಲೇವೆಲ್ ಫೋಲ್ ನಲ್ಲೂ ಹೀರೋಯಿನ್ ಟೋಟಲಿ ಉಲ್ಟಾಪಲ್ಟಾ ಆಗಿದೆ. 32 ಕೋಟಿ ರೂಪಾಯಿಗಳಲ್ಲಿ ಸಿದ್ಧಗೊಂಡ ಹೀರೋಯಿನ್ ವಾರದ ಕಲೆಕ್ಷನ್ ಗ್ಲೋಬಲ್ ಮಾರುಕಟ್ಟೆಯಲ್ಲಿ ಬರೀ 25 ಕೋಟಿ ರೂಪಾಯಿ ಮಾತ್ರ ! ಆದರೆ ಚಿತ್ರದ ನಿಜವಾದ ಓಟ ಆರಂಭವಾಗೋದೆ ಚಿತ್ರ ಬಿಡುಗಡೆ ಕಂಡ ಮೊದಲ ವಾರದಲ್ಲಿ ಚಿತ್ರಕ್ಕೆ ಹಾಕಿದ ಬಜೆಟ್ ಮತ್ತೆ ನಿರ್ಮಾಪಕನ ಕೈ ಸೇರುತ್ತದೆ. ಹೀರೋಯಿನ್ ಮಾತ್ರ ಈ ಕೆಲಸವನ್ನು ನೆಟ್ಟಗೆ ಮಾಡಿಲ್ಲ. ಹೀರೋಯಿನ್ ಹುಟ್ಟುವ ಮೊದಲು ಸುದ್ದಿ: ರಿಯಾಲಿಟಿ ವಸ್ತು ವಿಚಾರಗಳ ಮೇಲೆ ಪಡಿಯಚ್ಚು ತೆಗೆಯುವುದರಲ್ಲಿ ಸದಾ ಸಿದ್ಧ ಹಸ್ತರೆಂದೇ ಗುರುತಿಸಿಕೊಳ್ಳುವ ನಿರ್ದೇಶಕ ಮಧುರ್ ಈ ಚಿತ್ರದಲ್ಲಿ ಹಾಲಿವುಡ್ ನಾಯಕಿಯೊಬ್ಬರನ್ನು ಬಾಲಿವುಡ್ ರಂಗದ ನಾಯಕಿಯ ಜತೆಗೆ ತುಲನೆ ಮಾಡಿಕೊಂಡು ಮಾಡಿದ ಸಿನಿಮಾ ಎನ್ನುವ ಕಾರಣಕ್ಕೆ ಚಿತ್ರ ಬಿಡುಗಡೆ ಕಾಣುವ ಮೊದಲೇ ಸುದ್ದಿಯಾಗಿತ್ತು. ಚಿತ್ರದ ಆರಂಭದಲ್ಲಿ ಹೀರೋಯಿನ್ ಪಟ್ಟಕ್ಕೆ ಸಿದ್ಧಗೊಂಡವರು ಬಿಗ್ ಬಿ ಸೊಸೆ ಐಶ್ವರ್ಯಾ ರೈ ಬಚ್ಚನ್. ಚಿತ್ರದ ಕತೆಗೂ ಐಶ್ ಬದುಕಿಗೂ ಒಂದು ಲಿಂಕ್ ಇತ್ತು ಎನ್ನುವ ಕಾರಣಕ್ಕೆ ನಿರ್ದೇಶಕ ಮಧುರ್ ಐಶ್ ರನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ದುರಾದೃಷ್ಟವೆಂದರೆ ಹೀರೋಯಿನ್ ನಾಯಕಿ ಐಶ್ವರ್ಯಾ ರೈ ಎಂದು ಘೋಷಣೆ ಮಾಡುತ್ತಿದ್ದಾಗಲೇ ಐಶ್ ಗರ್ಭಿಣಿ ಎನ್ನುವ ಸುದ್ದಿ ಬಂತು. ಈ ವಿಚಾರದಿಂದ ನಿರ್ದೇಶಕ ಮಧುರ್ ಗೆ ಮೊದಲು ಹೊಡೆತ ಬಿದ್ದ ಬಳಿಕ ಹೀರೋಯಿನ್ ಜಾಗಕ್ಕೆ ಬಂದವರು ಕರೀನಾ ಕಪೂರ್. ಈ ಚಿತ್ರದ ಸಂಭಾವನೆ ಮೂಲಕ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಕರೀನಾ ಮೊದಲ ಸ್ಥಾನಕ್ಕೆ ಸಲ್ಲಿಕೆಯಾದರು. ಚಿತ್ರದಲ್ಲಿರುವ ಹಲ್ಕಟ್ ಜವಾನಿ ಹಾಡಿನ ಮೂಲಕ ಯುಟ್ಯೂಬ್ ನಲ್ಲಿ ಕರೀನಾ ಕಪೂರ್ ಮತ್ತೊಬ್ಬ ನಟಿ ಕತ್ರಿನಾ ಕೈಫ್ ಹಿಂದಿನ ಹಾಡು ಶೀಲಾಕೀ ಜವಾನಿಗೆ ಟಾಂಗ್ ಕೊಟ್ಟಳು. ಈ ಬಳಿಕ ಚಿತ್ರದ ಆರಂಭದಿಂದ ಕೊನೆಯವರೆಗೂ ಒಂದಲ್ಲ ಒಂದು ಸುದ್ದಿಯ ಮೂಲಕ ಹೀರೋಯಿನ್ ಪ್ರಚಾರದ ಅಂಗಳದಲ್ಲಿಯೇ ವರ್ಷ ಪೂರ್ತಿ ನಿಂತು ಹೋದಳು. ಹೀರೋಯಿನ್ ಸೋತದದ್ದು ಯಾಕೆ? ಮಧುರ್ ಚಿತ್ರಗಳ ವಿಶೇಷತೆಯಲ್ಲಿ ಕತೆಗೆ ಮೊದಲ ಸ್ಥಾನ ಇದ್ದೆ ಇರುತ್ತದೆ. ಈ ಕತೆಯನ್ನು ಮಧುರ್ ತಮ್ಮ ಶೈಲಿಗೆ ಅನ್ವಯಿಸಿಕೊಂಡು ಪ್ರೇಕ್ಷಕರ ಮುಂದೆ ಭಿನ್ನ ರೀತಿಯಲ್ಲಿ ಇಟ್ಟಾಗ ಪ್ರೇಕ್ಷಕನಿಗಂತೂ ವಿಶಿಷ್ಟ ರೀತಿಯ ಅನುಭವ ಚಿತ್ರದ ಮೂಲಕ ಲಭ್ಯವಾಗುತ್ತಿರುವುದು ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ವಿಚಾರ. ಆದರೆ ನಾಯಕಿಯೊಬ್ಬಳ ಬದುಕಿನ ಚಿತ್ರಣವನ್ನು ಈ ಬಾರಿ ಮಧುರ್ ತನ್ನ ಚಿತ್ರದಲ್ಲಿ ಸರಿಯಾಗಿ ಇಟ್ಟಿಲ್ಲ. ಚಿತ್ರ ವಿಮರ್ಶಕರ ಪ್ರಕಾರ ಇದು ಮಧುರ್ ಚಿತ್ರವಲ್ಲ ಕರೀನಾ ಚಿತ್ರ ಎಂದು ಹೇಳಿಕೊಂಡಿದ್ದರು. ಚಿತ್ರ ಬಿಡುಗಡೆಯ ಮೊದಲು ವಿಶೇಷವಾದ ಪ್ರಚಾರ ತಂತ್ರಗಳು ಕೂಡ ಚಿತ್ರದ ಸೋಲಿಗೆ ಕಾರಣವಾಗಿದೆ. ಪ್ರೇಕ್ಷಕ ಸಮೂಹ ವಿಶೇಷವಾದ ನಿರೀಕ್ಷೆ ಇಟ್ಟುಕೊಂಡು ಥಿಯೇಟರ್ ಗಳಿಗೆ ಹೋಗಿದ್ದರು. ಆದರೆ ಚಿತ್ರದ ಸಪ್ಪೆಯಾದ ಕತೆ ಪ್ರೇಕ್ಷಕರಿಗೆ ನಿರಾಶೆ ಮೂಡಿಸಿತ್ತು. ಇತ್ತ ಕಡೆ ಬಾಲಿವುಡ್ ನಲ್ಲಿ ಭರ್ಜರಿ ಕಲೆಕ್ಷನ್ ಕಾಣುತ್ತಿರುವ ಬರ್ಫಿಯ ರಾಕೆಟ್ ವೇಗದ ಮುಂದೆ ಹೀರೋಯಿನ್ ಮಲಗಿಯೇ ಹೋದಳು. ಬಾಲಿವುಡ್ ಲೆಕ್ಕಚಾರದ ಪ್ರಕಾರ ಬಿಡುಗಡೆ ಕಂಡ ಚಿತ್ರವೊಂದು ಸಕ್ಸಸ್ ಫುಲ್ ಆಗಿ ಓಡುತ್ತಿರುವಾಗ ಮತ್ತೊಂದು ಚಿತ್ರ ಬಿಡುಗಡೆ ಮಾಡಿದರೆ ಗೆಲುವು ಸಾಧಿಸುವ ಸಾಧ್ಯತೆಗಳು ಬಹಳ ಕಡಿಮೆ ಎನ್ನುವ ಮಾತಿದೆ. ಇದು ಬರ್ಫಿ ಹಾಗೂ ಹೀರೋಯಿನ್ ಪಾಲಿನ ವಿಚಾರದಲ್ಲಿ ಸರಿಯಾಗಿದೆ. ಚಿತ್ರದ ನಾಯಕಿ ಕರೀನಾ ಕಪೂರ್ ಚಿತ್ರ ಬಿಡುಗಡೆ ಕಾಣುವ ಮೊದಲೇ ಸೈಫ್ ಅಲಿಖಾನ್ ಅವರನ್ನು ಮದುವೆಯಾಗುವ ಕುರಿತು ಮಾಧ್ಯಮಗಳಲ್ಲಿ ಹೇಳಿದ ನೀಡಿಕೆ ಕೂಡ ಕರೀನಾ ವೃತ್ತಿ ಬದುಕಿಗೆ ಉಲ್ಟಾ ಆಗಿದೆ. ಮದುವೆಯಾಗುತ್ತಿರುವ ನಾಯಕಿಯನ್ನು ಪ್ರೇಕ್ಷಕರು ತುಂಬು ಮನಸ್ಸಿನಿಂದ ಸ್ವೀಕಾರ ಮಾಡುವ ಪ್ರಮೇಯಗಳು ಬಾಲಿವುಡ್ ನಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಕಾಣ ಸಿಕ್ಕಿದೆ. ಕರೀನಾ ಮದುವೆ ಹೀರೋಯಿನ್ ಗೆ ಮೈನಸ್ ಪಾಯಿಂಟ್. ಯೂ ಟಿವಿ ಮೋಶನ್ ಪಿಕ್ಟರ್ ಆಡಿಯಲ್ಲಿ ಬಂದ ಹೀರೋಯಿನ್ ಚಿತ್ರದ ಪ್ರಚಾರದಲ್ಲಿ ಮಾಡಿದ ಎಡವಟ್ಟು. ಆರಂಭದ ಹೀರೋಯಿನ್ ಚಿತ್ರಕ್ಕೆ ಐಶ್ ರನ್ನು ಇಳಿಸುವ ಇರಾದೆಯಿಂದ ಯುಟಿವಿ ಚಿತ್ರ ನಿರ್ಮಾಣ ಸಂಸ್ಥೆ ಐಶ್ ರನ್ನೇ ಬಂಡವಾಳ ಇಟ್ಟುಕೊಂಡು ಪ್ರಚಾರಕ್ಕೆ ಇಳಿಯಿತು. ಆದರೆ ಚಿತ್ರದ ನಾಯಕಿ ಬದಲಾದ ನಂತರ ಚಿತ್ರದ ಪ್ರಚಾರದಲ್ಲಿ ಕರೀನಾ ಅವರನ್ನು ಬಳಸಿಕೊಂಡು ಯಾವುದೇ ಗಿಮಿಕ್ ಮಾಡಲು ಯುಟಿವಿ ಮುಂದೆ ಬರಲಿಲ್ಲ. ಇತ್ತ ಕಡೆ ಬಾಲಿವುಡ್ ನಲ್ಲಿ ಬಂದ ಏಜೆಂಟ್ ವಿನೋದ್ ಚಿತ್ರದಲ್ಲೂ ಕರೀನಾ ಪ್ಲಾಪ್ ನಾಯಕಿಯಾಗಿಯೇ ಗುರುತಿಸಿಕೊಂಡಳು. ಅದು ಹೀರೋಯಿನ್ ಪಾಲಿಗೆ ಶಾಪವಾಯಿತು. ಟೋಟಲಿ ಹೀರೋಯಿನ್ ಪಾಲಿನ ಸೋಲು ನಿಜಕ್ಕೂ ಕರೀನಾಗೆ ತಟ್ಟುತ್ತಾ ಅಥವಾ ನಿರ್ದೇಶಕ ಮಧುರ್ ಬದುಕಿಗೆ ಮುಳ್ಳಾಗುತ್ತಾ ಎನ್ನೋದು ಚಿತ್ರ ನೋಡಿ ಹೊರ ಬಂದ ಪ್ರೇಕ್ಷರನ್ನು ಕಾಡಿದ ಪ್ರಶ್ನೆ.

No comments:

Post a Comment