Monday, January 23, 2012

ಮಲ್ಲಿಯ ‘ಮುತ್ತಿ’ನ ಮಾತು



ಹುಡುಗರು ಹುಡುಗಿಯರಿಗೆ ಮುತ್ತು ಕೊಡುವ ವಿಚಾರದಲ್ಲಿ ಬಹಳಷ್ಟು ಎಡವಿ ಬೀಳುತ್ತಿದ್ದಾರೆ. ಇಂತಹ ಎಡವಟ್ಟು ಕಾರ‍್ಯಗಳಿಂದ ಹುಡುಗಿಯರು ಹುಡುಗರನ್ನು ಒಂದೇ ಸಲಕ್ಕೆ ರಿಜೆಕ್ಟ್ ಮಾಡುವ ಸಾಧ್ಯತೆ ಇದೆ. ಅದರಲ್ಲೂ ಹುಡುಗರಿಗೆ ಈ ಮುತ್ತು ಹೊಸ ಇಮೇಜ್ ಬಿಲ್ಡ್ ಮಾಡುವುದರಲ್ಲಿ ಯಾವುದೇ ಡೌಟ್ ಇಲ್ಲ ಎನ್ನೋದು ಅನುಭವಸ್ಥ ಮಲ್ಲಿಕಾಳ ವಾದ.

ಮಲ್ಲಿಕಾ ಹೆಸರಿನ ಜತೆಯಲ್ಲಿಯೇ ಹಾಟ್‌ನೆಸ್ ಇದೆ. ಕೂಲ್ ಏರಿಯಾದಲ್ಲೂ ಗರ್‌ಮೀ ಉದ್ಭವವಾಗಿ ಬಿಡುತ್ತದೆ. ಚೂರುಪಾರು ಬಿಚ್ಚಾಟದಲ್ಲಿಯೇ ಬಿಟ್ಟಿ ಪ್ರಚಾರ ಪಡೆದುಕೊಂಡು ಬರುತ್ತಿದ್ದ ಮಲ್ಲಿಕಾ ಇತ್ತೀಚೆಗಂತೂ ಫೀಲ್ಡ್‌ನಿಂದ ಔಟ್ ಆಗಿದ್ದಾಳೆ ಎನ್ನುವ ಮಾತುಗಳು ಮುಂಬಯಿಯ ಗಲ್ಲಿಯಲ್ಲಿ ಹರಿದಾಡುತ್ತಿದೆ. ಕಳೆದ ವರ್ಷ ಬಾಲಿವುಡ್‌ನಲ್ಲಿ ಬಂದ ಬಹಳಷ್ಟು ಚಿತ್ರಗಳಲ್ಲಿ ಮಲ್ಲಿಕಾಳನ್ನು ಹಾಟ್ ಆಗಿ ತೋರಿಸಿ ಮಕಾಡೆ ಮಲಗಿದವರ ಸಂಖ್ಯೆನೇ ಜಾಸ್ತಿ ಇದೆ ಎನ್ನೋದು ರಿಪೋರ್ಟ್ ಕಾರ್ಡ್ ಕೂಡ ಹೊರ ಬಂದಿದೆ.
ಈಗ ಮಲ್ಲಿಕಾ ಫೀಲ್ಡ್‌ನಲ್ಲಿ ಉಳಿಯಲು ಇನ್ನಿಲ್ಲದ ಕಸರತ್ತಿನಲ್ಲಿ ನಿರತವಾಗಿರುವ ಜತೆಯಲ್ಲಿ ಹುಡುಗರಿಗೆ ಹಾಗೂ ಹುಡುಗಿಯರಿಗೆ ಮುತ್ತು ಕೊಡುವ ವಿಚಾರಕ್ಕೆ ಸಂಬಂಸಿ ವಿಶೇಷ ಪಾಠಗಳನ್ನು ಹೇಳಲು ಮುಂದೆ ಬಂದಿದ್ದಾರೆ. ಅದರಲ್ಲೂ ಮಲ್ಲಿಕಾ ಹುಡುಗರಿಗೆ ಈ ವಿಚಾರವನ್ನು ಜಾಸ್ತಿಯಾಗಿ ತಿಳಿಸಲು ತುಂಬಾನೇ ಇಂಟರೆಸ್ಟ್ ತೋರಿಸುತ್ತಿದ್ದಾರೆ. ಯಾಕೆ ಹುಡುಗಿಯರನ್ನು ಬಿಟ್ಟು ಹುಡುಗರಿಗೆ ಕಡೆ ಮಲ್ಲಿಕಾ ಮುಖ ಮಾಡಿದ್ದಾಳೆ ಅಂತೀರಾ..? ಇದಕ್ಕೆ ಮಲ್ಲಿಕಾಳ ಅನ್ಸರ್ ಇಲ್ಲಿದೆ.
ಹುಡುಗರು ಹುಡುಗಿಯರಿಗೆ ಮುತ್ತು ಕೊಡುವ ವಿಚಾರದಲ್ಲಿ ಬಹಳಷ್ಟು ಎಡವಿ ಬೀಳುತ್ತಿದ್ದಾರೆ. ಇಂತಹ ಎಡವಟ್ಟು ಕಾರ‍್ಯಗಳಿಂದ ಹುಡುಗಿಯರು ಹುಡುಗರನ್ನು ಒಂದೇ ಸಲಕ್ಕೆ ರಿಜೆಕ್ಟ್ ಮಾಡುವ ಸಾಧ್ಯತೆ ಇದೆ. ಮೊದಲ ಮುತ್ತು ಯಾವತ್ತೂ ದಂತ ಭಗ್ನವಾಗಕೂಡದು. ಅದರಲ್ಲೂ ಹುಡುಗರಿಗೆ ಈ ಮುತ್ತು ಹೊಸ ಇಮೇಜ್ ಬಿಲ್ಡ್ ಮಾಡುವುದರಲ್ಲಿ ಯಾವುದೇ ಡೌಟ್ ಇಲ್ಲ ಎನ್ನೋದು ಅನುಭವಸ್ಥ ಮಲ್ಲಿಕಾಳ ವಾದ.
ಮುತ್ತು ತುಂಬಾನೇ ಗಮ್ಮತ್ತು:
ಮುತ್ತಿನ ವಿಚಾರದಲ್ಲಿ ಹುಡುಗರು ತುಂಬಾನೇ ಫಾಸ್ಟ್. ಆದರೆ ಹುಡುಗಿಯರು ಆಗಲ್ಲ ತುಂಬಾನೇ ನಿಧಾನ. ಅವಳಿಗೆ ಮುತ್ತಿನ ಕುರಿತು ಸರಿಯಾದ ಕಲ್ಪನೆ ಬೆಳೆದುಕೊಂಡಿರುವುದಿಲ್ಲ. ಹುಡುಗನೇ ಮುಂದೆ ಹೋಗಿ ಮುತ್ತು ಕೊಡುವಾಗ ಸರಿಯಾದ ರೂಲ್ಸ್‌ಗಳನ್ನು ಫಾಲೋ ಮಾಡಿಕೊಂಡು ಮುಂದುವರಿಯಬೇಕು. ಅಂದಹಾಗೆ ಈ ಎಲ್ಲ ವಿಚಾರಗಳನ್ನು ನಾನು ನನ್ನ ಮೊದಲ ವಿದ್ಯಾರ್ಥಿ ಬಾಲಿವುಡ್ ನಟ ವಿವೇಕ್ ಒಬೆರಾಯ್‌ಗೆ ತಿಳಿಸಿದ್ದೇನೆ. ಅವನಿಗೆ ಮುತ್ತಿನ ವಿಚಾರದಲ್ಲಿ ತುಂಬಾನೇ ಡೌಟ್‌ಗಳು ಉಳಿದುಕೊಂಡಿದ್ದವು.. ಅವನೆಲ್ಲ ಸಂದೇಹಗಳಿಗೆ ಪರಿಹಾರ ಕೊಟ್ಟಿದ್ದೇನೆ ಎನ್ನುತ್ತಾಳೆ ಮುತ್ತುಗಳ ತಜ್ಞೆ ಮಲ್ಲಿಕಾ ಶೆರವಾತ್.
ಅಂದಹಾಗೆ ಈ ಮುತ್ತಿನ ಕುರಿತು ಪಾಠ ಮಾಡಲು ಇರುವ ಬಹಳ ದೊಡ್ಡ ಕಾರಣವೆಂದರೆ ವಿವೇಕ್ ಒಬೆರಾಯ್ ಹಾಗೂ ಮಲ್ಲಿಕಾ ಶೆರವಾತ್ ನಟಿಸಿರುವ ಚಿತ್ರ ‘ಕಿಸ್ಮತ್, ಲವ್, ಪೈಸಾ, ದಿಲ್ಲಿ( ಕೆಎಲ್‌ಪಿಡಿ)ಯಲ್ಲಿ ವಿವೇಕ್ ಹಾಗೂ ಮಲ್ಲಿಕಾ ಶೆರವಾತ್‌ರ ದಾಖಲೆ ಸರದಿಯಲ್ಲಿ ಮುತ್ತುಗಳ ವಿಲೇವಾರಿಯ ದೃಶ್ಯ ಇದೆ ಎನ್ನೋದು ಚಿತ್ರ ತಂಡದ ಮಾತು. ಈ ಮುತ್ತುಗಳ ವಿಲೇವಾರಿಯ ದೃಶ್ಯದಲ್ಲಿ ವಿವೇಕ್ ಬಹಳಷ್ಟು ಎಡವಟ್ಟು ಮಾಡಿಕೊಂಡಿದ್ದರು. ಆದರೆ ಸೀರಿಯಲ್ ಕಿಸ್ಸರ್ ಎಂದೇ ಬಿಂಬಿತ ಮಲ್ಲಿಕಾ ಈ ಎಲ್ಲ ಮುತ್ತುಗಳು ಭರ್ಜರಿ ಸ್ವೀಕರಿಸಿ ವಿವೇಕ್‌ಗೆ ಸರಿಯಾಗಿ ಪಾಠ ಹೇಳಿಕೊಟ್ಟು ನಾಲಗೆ ಚಪ್ಪರಿಸಿಕೊಂಡರಂತೆ ! ವಿವೇಕ್ ಒಬೆರಾಯ್ ತನ್ನ ಪತ್ನಿ ಪ್ರಿಯಾಂಕಾ ಒಬೆರಾಯ್‌ಗೆ ಬಿಟ್ಟರೆ ತೆರೆಯ ಮೇಲೆ ಮುತ್ತಿನ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ತೀರಾ ಅಪರೂಪ.
ಹೊಸದಿಲ್ಲಿಯ ಬುದ್ದ ಗಾರ್ಡನ್ಸ್‌ನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ಅಲ್ಲಿ ಬಹಳಷ್ಟು ಪ್ರೇಮಿಗಳು ಮುತ್ತಿನ ವಿಲೇವಾರಿಯಲ್ಲಿ ತೊಡಗಿಕೊಂಡಿದ್ದರು. ಈ ಸನ್ನಿವೇಶವೇ ಮಲ್ಲಿಕಾಳಿಗೆ ಪ್ರೇರಣೆಯಾಗಿ ಸೀನ್ ಓಕೆ ನಂತರನೂ ವಿವೇಕ್‌ಗೆ ಎರ್ರಾಬಿರ್ರಿಯಾಗಿ ಮುತ್ತಿನ ಮಳೆ ಸುರಿಸಿದ್ದಾಳೆ. ಚಿತ್ರದಲ್ಲಿ ವಿವೇಕ್ ಒಬೆರಾಯ್ ದಿಲ್ಲಿಯ ಹುಡುಗನ ಪಾತ್ರ ಮಾಡಿದರೆ, ಮಲ್ಲಿಕಾ ಹರಿಯಾಣಿ ಹುಡುಗಿಯ ಪಾತ್ರ ಮಾಡಿದ್ದಾರೆ. ಇಬ್ಬರೂ ಪ್ರೇಮಕ್ಕೆ ಬಿದ್ದು ಸಿಕ್ಕ ಸಿಕ್ಕ ಬೀದಿಬದಿಯಲ್ಲಿ ಮುತ್ತಿನ ದೃಶ್ಯಗಳು ಚಿತ್ರದ ತುಂಬಾ ಕಾಣಸಿಗಲಿದೆ. ಟೋಟಲಿ ಹುಡುಗರಿಗಂತೂ ಮುತ್ತಿನ ಪಾಠವೊಂದನ್ನು ಮಲ್ಲಕಿಆ ಬಿಟ್ಟಿಯಾಗಿ ಮಾಡಿ ಹೋಗಿದ್ದಾಳೆ.

No comments:

Post a Comment