
ಅದ್ನಾನ್ ಗಾಯನಕ್ಕೆ ಕೊಂಚ ಬ್ರೇಕ್ ಕೊಟ್ಟು ಯಾವ ರೀತಿ ‘ವೈಟ್ ಲೂಸ್’ ಮಾಡಬಹುದು ಎನ್ನುವ ಕುರಿತು ತನ್ನ ಆಪ್ತರಿಗೆ ಸಲಹೆ ಕೊಡುತ್ತಿದ್ದಾರೆ. ಅದರಲ್ಲೂ ತಾನು ಯಾವ ರೀತಿ ವೈಟ್ ಲೂಸ್ ಮಾಡಿದ್ದೇನೆ ಎನ್ನುವ ರಹಸ್ಯವನ್ನು ಮೊದಲ ಬಾರಿಗೆ ಪುಸ್ತಕ ರೂಪದಲ್ಲಿ ಸಿಕ್ರೇಟ್‌ವೊಂದನ್ನು ಬಿಚ್ಚಿಡಲು ಅದ್ನಾನ್ ರೆಡಿಯಾಗಿದ್ದಾರೆ.
ಬಾಲಿವುಡ್ ಇರಲಿ ಯಾವುದೇ ವುಡ್‌ಗಳಿರಲಿ ಅದ್ನಾನ್ ಸಾಮಿ ಸಂಗೀತ ಪ್ರೇಮಿಗಳನ್ನು ಎಂದಿಗೂ ಕೈಬಿಟ್ಟಿಲ್ಲ. ತನ್ನ ಆಲ್ಬಂಗಳಲ್ಲಿ ವಿರಹ ತುಂಬಿದ ಗೀತೆಗಳನ್ನು ಸುರಿಸಿ ಭಗ್ನ ಪ್ರೇಮಿಗಳಿಗೆ ಧೈರ್ಯ ತುಂಬಿದ್ದು ಇದೇ ಅದ್ನಾನ್ ಸಾಮಿ. ಲಿಫ್ಟ್ ಮಾಡಲು ಸಾಧ್ಯವಿಲ್ಲದೇ ಒದ್ದಾಡುವ ಟನ್‌ಗಟ್ಟಲೆ ತೂಗುವ ದೇಹ. ಮುದ್ದೆಯನ್ನು ಬೀಟ್ ಮಾಡಿ ಬಿಡುವ ಮುದ್ದು ಮುದ್ದಾದ ಮೊಗ. ಹುಡುಗಿಯರು ಫೀದಾ ಆಗುವ ನಗು. ಭಗ್ನ ಪ್ರೇಮಿಗಳನ್ನು ತಣ್ಣನೆ ಮಾಡಿಬಿಡುವಂತಹ ವಾಯ್ಸ್ ಇದು ಬಾಲಿವುಡ್ ಸಿಂಗರ್ ಅದ್ನಾನ್ ಸಾಮಿಯ ಈ ಹಿಂದಿನ ಜಸ್ಟ್ ಇಂಟರ್‌ಡಕ್ಷನ್.
ಆದರೆ ಅದ್ನಾನ್ ಗಾಯನಕ್ಕೆ ಕೊಂಚ ಬ್ರೇಕ್ ಕೊಟ್ಟು ಯಾವ ರೀತಿ ‘ವೈಟ್ ಲೂಸ್’ ಮಾಡಬಹುದು ಎನ್ನುವ ಕುರಿತು ತನ್ನ ಆಪ್ತರಿಗೆ ಸಲಹೆ ಕೊಡುತ್ತಿದ್ದಾರೆ. ಅದರಲ್ಲೂ ತಾನು ಯಾವ ರೀತಿ ವೈಟ್ ಲೂಸ್ ಮಾಡಿದ್ದೇನೆ ಎನ್ನುವ ರಹಸ್ಯವನ್ನು ಮೊದಲ ಬಾರಿಗೆ ಪುಸ್ತಕ ರೂಪದಲ್ಲಿ ಸಿಕ್ರೇಟ್‌ವೊಂದನ್ನು ಬಿಚ್ಚಿಡಲು ಅದ್ನಾನ್ ರೆಡಿಯಾಗಿದ್ದಾರೆ.
ಅದ್ನಾನ್ ನಿಜಕ್ಕೂ ಭಾರತದವನೇನಲ್ಲ. ಆದರೆ ಭಾರತದ ಸಂಗೀತ ಪ್ರೇಮಿಗಳು ಆತನಿಗೆ ಪ್ರೀತಿಯನ್ನು ತುಂಬಿ ತುಂಬಿಕೊಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಹುಟ್ಟಿದ ಭಾರತದಲ್ಲಿ ವಾಸಿಸುತ್ತಿದ್ದ ತಂದೆ ಮತ್ತು ಭಾರತೀಯ ಮುಸ್ಲಿಂ ತಾಯಿಗೆ ಲಂಡನ್‌ನಲ್ಲಿ ಹುಟ್ಟಿದ ಮಗ ಅದ್ನಾನ್ ಸಾಮಿ. ಯಾವಾಗಲೂ ಕೀಬೋರ್ಡ್ ಜತೆಯಲ್ಲಿ ಪ್ರೀತಿ ಇರುವ ಕಾರಣ ಬದುಕಿನಲ್ಲಿ ಗಾಯಕನಾಗಿ ಬಿಟ್ಟ ಎನ್ನುವುದು ಅದ್ನಾನ್‌ನ ಆಪ್ತ ಗೆಳೆಯರ ಮಾತು.
ಲೂಸ್ ವೈಟ್ ಕತೆ:
ಅದ್ನಾನ್ ಸಾಮಿ ತನ್ನ ದೇಹದ ತೂಕ ಇಳಿಸಲು ಮಾಡಿದ ಪ್ರಯತ್ನಗಳನ್ನು ಒಂದು ಕಡೆ ಜೋಪಾನವಾಗಿ ಜೋಡಿಸಿಕೊಂಡು ಪುಸ್ತಕಕ್ಕೆ ಇಳಿಸುತ್ತಿದ್ದಾರೆ. ಆರಂಭದಲ್ಲಿ ೨೩೦ ಕೆ.ಜಿ. ತೂಕ ಇದ್ದ ಅದ್ನಾನ್ ದೇಹದ ತೂಕ ಈಗ ತೂಕದ ಮುಳ್ಳು ನಿಂತಿರೋದು ಬರೀ ೮೫ ಕೆ.ಜಿಯಲ್ಲಿಯಂತೆ ! ಅದ್ನಾನ್ ಹೇಳುವಂತೆ ಯಾವಾಗಲೂ ದೇಹದ ತೂಕ ಇಳಿಸುವ ವಿಚಾರಗಳನ್ನು ಬೇರೆ ಯಾರಲ್ಲೂ ಹಂಚಿಕೊಳ್ಳಬಾರದು ಅಂದುಕೊಂಡಿದ್ದೆ. ಆದರೆ ನನ್ನಂತೆಯೇ ಬಹಳಷ್ಟು ಜನ ದೇಹದ ತೂಕದಿಂದ ಜರ್ಜರಿತವಾಗಿದ್ದಾರೆ. ಅವರಿಗೆ ನಾನು ಮಾಡಿದ ಉಪಾಯಗಳನ್ನು ಹೇಳಿಕೊಂಡರೆ ಕೊಂಚ ರಿಲ್ಯಾಕ್ಸ್ ಆಗಬಹುದು ಎಂದುಕೊಂಡಿದ್ದೇನೆ ಎನ್ನುತ್ತಾರೆ.
ಆರಂಭದಲ್ಲಿ ನನಗೆ ವೈದ್ಯರು ಭಾರ ಇಳಿಸಲು ಹೇಳುತ್ತಿದ್ದರು. ಭಾರ ಇಳಿಸದೇ ಹೋದರೆ ಆರು ತಿಂಗಳಲ್ಲಿ ಹೃದಯಕ್ಕೆ ಸಂಬಂತ ಕಾಯಿಲೆಗಳು ಮುತ್ತಿಕೊಳ್ಳುತ್ತದೆ ಎಂದು ಹೆದರಿಕೆ ಹುಟ್ಟಿಸಿದ್ದರು. ನನ್ನ ಮುಂದೆ ಬೇರೆ ಯಾವುದೇ ದಾರಿಗಳಿರಲಿಲ್ಲ. ನಾನು ದೇಹದ ತೂಕ ಇಳಿಸಲೇ ಬೇಕಿತ್ತು ಎನ್ನುವುದು ಅದ್ನಾನ್ ಮಾತು.
ದೇಹದ ತೂಕ ಇಳಿಸುವ ವಿಚಾರಗಳನ್ನು ಎರಡು ರೀತಿಯಲ್ಲಿ ನಾನು ಅಧ್ಯಯನ ಮಾಡಿದೆ. ಮೊದಲು ತೂಕ ಯಾವ ಕಾರಣಕ್ಕೆ ಹೆಚ್ಚಾಗುತ್ತಿದೆ. ನಂತರ ತೂಕ ಇಳಿಸಲು ಏನು ಮಾಡಬೇಕು ಎನ್ನುವ ಎರಡು ಪ್ರಶ್ನೆಗಳ ಉತ್ತರದಲ್ಲಿ ದೇಹದ ತೂಕದ ಲೆಕ್ಕಚಾರವಿದೆ ಎನ್ನುವುದು ಅದ್ನಾನ್ ಮಾತು. ನನ್ನ ದೇಹದ ತೂಕದಿಂದಾಗಿ ನಾನು ಏರ್‌ಕ್ರಾಫ್ಟ್‌ಗಳಲ್ಲಿ ಸರಿಯಾಗಿ ಕೂರುವಂತಿರಲಿಲ್ಲ.
ಒಂದೇ ಉಸಿರಿನಲ್ಲಿ ಹೆಚ್ಚು ಮಾತನಾಡುವಂತಿರಲಿಲ್ಲ. ಇಂತಹ ನಾನಾ ಸಮಸ್ಯೆಗಳನ್ನು ನಾನು ಬದುಕಿನಲ್ಲಿ ಕಂಡಿದ್ದೆ. ಈ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಎನ್ನುವುದಕ್ಕಾಗಿ ಭಾರ ಇಳಿಸುವ ನಿರ್ಧಾರಕ್ಕೆ ಬಂದೆ. ನಾನು ಬರೆಯಲು ಹೊರಟಿರುವ ಕೃತಿಯಲ್ಲಿ ಈ ಎಲ್ಲ ವಿಚಾರಗಳಿಗೆ ಮದ್ದು ಇದೆ. ಕೃತಿಯನ್ನು ಎರಡು ಭಾಗವಾಗಿ ವಿಂಗಡಿಸಿಕೊಂಡಿದ್ದೇನೆ. ಒಂದು ಭಾಗದಲ್ಲಿ ಭಾರ ಇಳಿಸಲು ಇರುವ ಆಹಾರ ಪಥ್ಯಗಳು ಹಾಗೂ ಮತ್ತೊಂದು ಭಾಗದಲ್ಲಿ ಯಾವ ರೀತಿ ತೂಕ ಇಳಿಸಬಹುದು ಎನ್ನುವ ವಿಚಾರಗಳಿಗೆ ಗಮನ ಕೊಡಲಾಗಿದೆ.
ಮೊದಲ ಭಾಗದಲ್ಲಿ ನಾನು ಭಾರ ಇಳಿಸಲು ಮಾಡಿದ ಎಲ್ಲ ಕಸರತ್ತುಗಳು ಇರಲಿವೆ. ಮತ್ತೊಂದು ಭಾಗದಲ್ಲಿ ಕುಕ್ ಬುಕ್ ರೀತಿಯಲ್ಲಿದೆ. ನಾನೊಬ್ಬ ತಿಂಡಿಪೋತ ಜತೆಯಲ್ಲಿ ಒಳ್ಳೆಯ ಕುಕ್ ಕೂಡ ಆಗಿದ್ದೇನೆ. ಅದಕ್ಕಾಗಿ ಹೊಸ ರೀತಿಯ ಅಡುಗೆ ರೆಸಿಪಿಗಳನ್ನು ಕೂಡ ಈ ಕೃತಿಯಲ್ಲಿ ನೀಡಲಿದ್ದೇನೆ. ಅಂದಹಾಗೆ ಈ ಕೃತಿ ಆರು ತಿಂಗಳೊಳಗಾಗಿ ದೇಶದ ಎಲ್ಲ ಪುಸ್ತಕ ಅಂಗಡಿಗಳಲ್ಲಿ ಸಿಗಲಿದೆ. ಅಲ್ಲಿವರೆಗೂ ಅದ್ನಾನ್ ಸಾಮಿಯ ಕೃತಿಗಾಗಿ ಕಾದು ಕೂರುವ ಕಾಯಕ ಮುಂದುವರಿಸಬೇಕು.
(vk daily lvk puravani published dis article on 27.1.2012)
No comments:
Post a Comment