Saturday, August 13, 2011

ಬಿರಿಯಾನಿ ಹುಡುಗಿ ಸಾನಿಯಾ


ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದ ಮಹಿಳೆಯರು ಈ ಪಾಟಿ ಟೆನಿಸ್ ಆಡುತ್ತಾರೆ ಎಂದು ಹುಡುಗರಿಗೆ ಗೊತ್ತಾಗಿದ್ದು ಇದೇ ಸಾನಿಯಾ ಮಿರ್ಜಾರಿಂದ ಅಂತೆ ! ಈಗ ಸಾನಿಯಾ ಮಿರ್ಜಾ ದೇಹ ಊದಿಕೊಳ್ಳುತ್ತಿದೆ ಎಂದು ಖುದ್ದು ಟ್ವಿಟ್ವರ್ನಲ್ಲಿ ಟ್ವಿಟ್ ಮಾಡಿದ್ದಾಳೆ.

‘ಶೋಯಿ ಪ್ರೀತಿಯಿಂದ ನಾನು -ಟ್ ಆಗುತ್ತಿದ್ದೇನೆ. ಪ್ರಾಕ್ಟೀಸ್ ಮಾಡುವ ಟೈಮ್ನಲ್ಲಿ ಸುತ್ತಾಡೋಣ ಅಂತಾ ಹೇಳಿ ತಿರುಗಾಡಿ ಬರುತ್ತೇವೆ. ಅಲ್ಲಿ ಇಲ್ಲಿ ತಿನಿಸುಗಳನ್ನು ತಿಂದು ತೂಕ ಹೆಚ್ಚುತ್ತಿದೆ ಎಂಬ ಭಯ ಕಾಡುತ್ತಿದೆ ಎಂದು ಟ್ವಿಟ್ವರ್ನಲ್ಲಿ ಹೇಳಿಕೊಂಡಿದ್ದು ಬೇರೆ ಯಾರು ಅಲ್ಲ ಹೈದರಾಬಾದ್ ಬಿರಿಯಾನಿ ಹುಡುಗಿ ಸಾನಿಯಾ ಮಿರ್ಜಾ.
ಅಂದಹಾಗೆ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದ ಮಹಿಳೆಯರು ಈ ಪಾಟಿ ಟೆನಿಸ್ ಆಡುತ್ತಾರೆ ಎಂದು ಹುಡುಗರಿಗೆ ಗೊತ್ತಾಗಿದ್ದು ಇದೇ ಸಾನಿಯಾ ಮಿರ್ಜಾರಿಂದ ಅಂತೆ ! ಸಾನಿಯಾ ಟೆನಿಸ್ ಕೋರ್ಟ್ಗೆ ಇಳಿದು ಬಂದಿದ್ದಾಳೆ ಅಂತಾ ಗೊತ್ತಾದ ತಕ್ಷಣ ಕೋರ್ಟ್ ಗ್ಯಾಲರಿಯಲ್ಲಿ ಹುಡುಗರು ಬಂದು ನಿಲ್ಲುತ್ತಿದ್ದರು. ಸಾನಿಯಾಳ ಟೆನಿಸ್ ಮ್ಯಾಚ್ ಇದೆ ಎಂದು ಗೊತ್ತಾದ ತಕ್ಷಣ ೨೪ ಇಂಚಿನ ಟಿವಿಗಳು ರನ್ ಆಗುತ್ತಿತ್ತು.
ಎಲ್ಲ ವಯೋಮಾನದವರು ಟಿವಿ ಮುಂದೆ ಕೂತು ಸಾನಿಯಾರ ಮ್ಯಾಚ್ ವಿದ್ ಡ್ರೆಸ್ ಸೆನ್ಸ್ ಕುರಿತು ಗಂಟೆಗಟ್ಟಳೆ ಮಾತಿಗೆ ಇಳಿಯುತ್ತಿದ್ದರು. ಕೆಲವೇ ವರ್ಷಗಳಲ್ಲಿ ಸಾನಿಯಾ ಟೆನಿಸ್ ಕೋರ್ಟ್ಗಿಂತ ಹೆಚ್ಚಾಗಿ ಹುಡುಗರ ಪಾಲಿನ ಆರಾಧ್ಯ ದೇವತೆಯಾಗಿ ಹೋದಳು. ಸಾನಿಯಾ ಟೆನಿಸ್ ಲೋಕದಲ್ಲಿ ಏರಿಳಿತ ಕಂಡ ಹುಡುಗಿ ಸದಾ ಕಾಲ ಸುದ್ದಿಮನೆಯಲ್ಲಿ ಆಟವಾಡುತ್ತಿದ್ದಳು.
ಈಗ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲ್ಲಿಕ್( ಶೋಯಿ) ಜತೆ ಮದುವೆಯಾಗಿ ಮಸ್ತ್ ಆಗಿದ್ದಾರೆ. ಆದರೆ ಶೋಯೆಬ್ ಮಲ್ಲಿಕ್ ತನ್ನ ಪತ್ನಿ ಸಾನಿಯಾ ಮಿರ್ಜಾರನ್ನು ಲೆಕ್ಕಕ್ಕಿಂತ ಜಾಸ್ತಿ ಪ್ರೀತಿಸುತ್ತಾರಂತೆ ! ಈ ಪ್ರೀತಿಯಿಂದ ಸಾನಿಯಾ ದಢೂತಿಯಾಗುವ ಭಯವನ್ನು ಟ್ವಿಟ್ವರ್ನಲ್ಲಿ ತನ್ನ ಅಭಿಮಾನಿಗಳ ಜತೆಯಲ್ಲಿ ಹೇಳಿಕೊಂಡಿದ್ದಾರೆ.
ಸಾನಿಯಾ ಭಾರತದಲ್ಲಿದ್ದಾಗ ಅತೀ ಹೆಚ್ಚು ಇಷ್ಟ ಪಡುತ್ತಿದ್ದ ಆಹಾರವೆಂದರೆ ಹೈದರಾಬಾದ್ ಬಿರಿಯಾನಿ. ಈ ಬಿರಿಯಾನಿ ಪಾಕ್ನಲ್ಲಿ ಎಲ್ಲಿ ಎಲ್ಲ ಸಿಗುತ್ತೋ ಎಂದು ಪಟ್ಟಿ ತಯಾರಿಸಿ ಹೋಟೆಲ್ಗಳಿಗೆ ಹೋಗಿ ತಿನ್ನೋದು ಈಗ ಇಬ್ಬರ ದೈನಂದಿನ ಕೆಲಸವಾಗಿ ಬಿಟ್ಟಿದೆಯಂತೆ ! ಪ್ರಾಕ್ಟೀಸ್ ಮಾಡುವ ಹೊತ್ತಿನಲ್ಲಿ ಹೋಟೆಲ್ನಲ್ಲಿ ಕೂತು ತಿಂದರೆ ದೇಹದಲ್ಲಿ ಎಲ್ಲಿ ಕೊಬ್ಬು ಬೆಳೆದುಬಿಡುತ್ತೋ ಎಂಬ ಹೆದರಿಕೆಯಲ್ಲಿ ಸಾನಿಯಾ ಟ್ವಿಟ್ವರ್ ಮೂಲಕ ತನ್ನ ಅಭಿಮಾನಿಗಳಿಂದ ಪ್ಯಾಟ್ ಇಳಿಸುವ ಸಲಹೆಗಳನ್ನು ಕೇಳಿದ್ದಾರೆ.
ಸ್ಲಿಮ್ಗಾಗಿ ಸಾನಿಯಾ ಈಗಾಗಲೇ ಕೆಲವೊಂದು ಟಿಪ್ಸ್ಗಳನ್ನು ಪಡೆದುಕೊಂಡು ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ಟಿಪ್ಸ್ಗಳಿಂದ ಸಾನಿಯಾ ಮಿರ್ಜಾ ‘ಜೀರೋ ಸೈಜ್’ಗೆ ಇಳಿದು ಬಿಡುತ್ತಾರಾ ಎನ್ನೋದು ಕ್ವಶನ್ ಮಾರ್ಕ್ ಆಗಿ ಮುಂದೆ ನಿಂತಿದೆ. ಸಾನಿಯಾರ ಅಚ್ಚುಮೆಚ್ಚಿನ -ಡ್ ಐಟಂನಿಂದ ‘ಹೈದರಾಬಾದ್ ಬಿರಿಯಾನಿ’ ಡಿಲೀಟ್ ಆಗಬಹುದು ಅಲ್ವಾ..? ಅದಕ್ಕೂ ಮುಂಚೆ ಸಾನಿಯಾ ಅಭಿಮಾನಿಗಳು ಮೈ ಭಾರ ಇಳಿಸುವ ಟಿಪ್ಸ್ಗಳನ್ನು ಕೊಟ್ಟು ಬಿಡಿ.

ಸಾನಿಯಾ ಸಿಕ್ರೇಟ್ಸ್:
ಸಾನಿಯಾ ಮಿರ್ಜಾ ಟೆನಿಸ್ ಟೂರ್ನಿಗಳು ಇಲ್ಲದೇ ಇದ್ದಾಗ ಏನೂ ಮಾಡುತ್ತಾರೆ ಎನ್ನುವ ಕುತೂಹಲ ಅವರ ಬಹುಸಂಖ್ಯಾತ ಅಭಿಮಾನಿಗಳಲ್ಲಿ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ. ಬಾಲಿವುಡ್, ಟಾಲಿವುಡ್ ಸಿನ್ಮಾಗಳ ಹಾಡುಗಳನ್ನು ಕೇಳುವುದು. ಅದರಲ್ಲೂ ಹಿಪ್-ಹಾಪ್, ರ್ಯಾಪ್ ಹಾಗೂ ಹಿಂದಿ ರಿಮಿಕ್ಸ್ ಸಾಂಗ್ಸ್ಗಳೆಂದರೆ ಸಾನಿಯಾರಿಗೆ ಬಹಳ ಖುಷಿಯಂತೆ.
ಇನ್ನೂ ಟೈಮ್ ಉಳಿತ ಅಂದ್ರೆ ತನ್ನ ಸ್ನೇಹಿತರ ಜತೆಯಲ್ಲಿ ಗಂಟೆಗಟ್ಟಳೆ ಹರಡುತ್ತಾಳೆ. ಕಾರ್ಟೂನ್ ನೆಟ್ವರ್ಕ್ನ ಚಾನೆಲ್ಗಳಲ್ಲಿ ಬರುವ ಟಾಮ್ ಆಂಡ್ ಜೆರ್ರಿ, ಟ್ವೀಟಿ ಕಾರ್ಟೂನ್ಗಳೆಂದರೆ ಸಾನಿಯಾರಿಗೆ ಅಚ್ಚುಮೆಚ್ಚು. ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ಮೂವೀಸ್ ಜತೆಯಲ್ಲಿ ಬ್ರಾಂಡ್ ಪಿಟ್ ಚಿತ್ರಗಳು ಖುಷಿ ಕೊಡುತ್ತದೆಯಂತೆ. ಶಾರೂಕ್ ಖಾನ್ರ ಡಿಡಿಎಲ್ಜೆ( ದಿಲ್ ವಾಲೇ ದುಲ್ಹಾನೀಯಾ ಲೇ ಜಾಹೇಂಗೆ) ಚಿತ್ರವನ್ನು ೧೦೦ಕ್ಕಿಂತ ಸಲ ಸಾನಿಯಾ ನೋಡಿದ್ದಾರೆ.
ನ್ಯೂಯಾರ್ಕ್ ಸಿಟಿ ಎಂದರೆ ಸಾನಿಯಾರ ಪೇವರಿಟ್ ಟೂರಿಸ್ಟ್ ಸ್ಪಾಟ್. ಕೆಂಪು ಬಣ್ಣ ಎಂದರೆ ಸಾನಿಯಾರಿಗೆ ಖುಷಿ. ಮೂಗುತಿ ಹಾಗೂ ತನ್ನ ನೆಚ್ಚಿನ ಜುವೆಲ್ಲರಿಗಳನ್ನು ಸಾನಿಯಾ ಜತೆಯಲ್ಲಿಯೇ ಇಟ್ಟಿರುತ್ತಾರೆ. ಕ್ಲೇವಿನ್ ಕೇಲಿನ್ ಈಪೋರಿಯಾ ಇಷ್ಟ ಪಡುವ ಪರ್ಪ್ಯುಮ್. ಬ್ಲ್ಯಾಕ್ಬೆರ್ರಿ, ಐಪೋನ್, ಮ್ಯಾಕ್ ಬುಕ್ ಸದಾ ಜತೆಯಲ್ಲಿಯೇ ಇರುತ್ತದೆ. ಬಿಎಂಡಬ್ಲ್ಯೂ೭ ಸಿರೀಸ್ ಹಾಗೂ ಮರ್ಸೆಡೀಸ್ ಕಾರು ಸಾನಿಯಾ ಮೆಚ್ಚಿನ ಕಾರುಗಳು. ಟೆನಿಸ್ ಎಂದರೆ ಸಾನಿಯಾರಿಗೆ ಪಂಚಪ್ರಾಣ. ಆದರೆ ಕ್ರಿಕೆಟ್ ಕೂಡ ಅಷ್ಟೇ ಇಷ್ಟ

Thursday, August 11, 2011

ಬೆಲೆ ಬಾಳುವ ‘ಹೀರೋಯಿನ್’


ಬಾಲಿವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ರೊಬೋಟ್ ಚಿತ್ರಕ್ಕಾಗಿ ಐಶ್ವರ್ಯಾ ರೈ ಪಡೆದುಕೊಂಡ ಸಂಭಾವನೆ ೬.೫ ಕೋಟಿ. ಈಗ ಕರೀನಾ ಕಪೂರ್ ‘ಹೀರೋಯಿನ್’ ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ ಬರೀ ೮ ಕೋಟಿಯಂತೆ !

ಹೋದಲ್ಲಿ, ಬಂದಲ್ಲೆಲ್ಲ ಭಾರೀ ಸುದ್ದಿಗೆ ಗ್ರಾಸವಾಗುತ್ತಿರುವ ಕರೀನಾ ಕಪೂರ್ ಮತ್ತು ಸೈಫ್ ಆಲಿ ಖಾನ್ ಮದುವೆಮಾಡಿಕೊಳ್ಳಲು ಮನಸ್ಸು ಮಾಡಿ ಅದೆಷ್ಟೋ ದಿನಗಳೇ ಆಗಿವೆ. ಆದರೆ, ಆಗಿರಲಿಲ್ಲ. ಸಿನಿಮಾ ಮೇಲೆ ಸಿನಿಮಾ ಒಪ್ಪಿಕೊಳ್ಳುತ್ತಾ ಅದರ ಶೂಟಿಂಗ್ನಲ್ಲೇ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿತ್ತು ಈ ಜೋಡಿ. ಕೊನೆಗೂ, ಈಗ ತಮ್ಮ ಮದುವೆಗೆ ಮುಹೂರ್ತ ಪಿಕ್ಸ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಕರೀನಾ ಮತ್ತು ಸೈಫ್.
ಅದೂ, ಮುಂದಿನ ವರ್ಷ. ಫೆಬ್ರವರಿಗೆ ನಿಶ್ಚಿತಾರ್ಥ, ಅಕ್ಟೋಬರ್ ಹೊತ್ತಿಗೆ ಮದುವೆ. ಕರೀನಾ ಕಪೂರ್ ಮತ್ತು ಸೈಫ್ ಆಲಿ ಖಾನ್ ಅವರ ನಿಶ್ಚಿತಾರ್ಥ ತುಂಬಾ ಅದ್ದೂರಿಯಾಗಿಯೇ ನಡೆಯಲಿದೆ. ಈ ಕುರಿತು, ಎರಡು ಕುಟುಂಬಗಳು ಈಗಾಗಲೇ ಚರ್ಚೆ ನಡೆಸಿದ್ದು ಪೂರ್ವ ತಯಾರಿ ಕಡೆ ಗಮನ ಕೊಟ್ಟಿದ್ದಾರಂತೆ.
ಭೋಪಾಲ್ನಲ್ಲಿ ನಡೆಯಲಿರುವ ಈ ತಾರಾ ಜೋಡಿ ಎಂಗೇಜ್ಮೆಂಟ್ ಗೆ ಬಾಲಿವುಡ್ ಸ್ಟಾರ್ಗಳಷ್ಟೇ ಅಲ್ಲದೇ, ಖಾನ್ತ್ರಯರೂ ಆಗಮಿಸಲಿದ್ದಾರಂತೆ.
ಶಾರುಖ್, ಅಮೀರ್ ಮತ್ತು ಸಲ್ಮಾನ್ ಖಾನ್ ಮೂವರೊಟ್ಟಿಗೂ ಕರೀನಾ ಅಭಿನಯಿಸಿದ್ದಾರೆ. ಹಾಗಾಗಿ, ಈ ಮೂವರನ್ನು ತಮ್ಮ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ಫೆಬ್ರವರಿ ೧೪ಕ್ಕೆ ಕರೀನಾ-ಸೈಫ್ ಎಂಗೇಜ್ಮೆಂಟ್ ನಡೆಯಲಿದೆಯಂತೆ. ಪ್ರೇಮಿಗಳ ದಿನವಾಗದಿದ್ದರೆ, ಫೆಬ್ರವರಿ ಅಂತ್ಯಕ್ಕಂತೂ ಗ್ಯಾರಂಟಿ. ಇದು ಮುಗಿದ ಒಂಬತ್ತು ತಿಂಗಳಿಗೆ ಸರಿಯಾಗಿ ಹಸೆಮಣೆಯೇರಲು ಈ ಜೋಡಿ ನಿರ್ಧರಿಸಿದೆ. ಅಷ್ಟರೊಳಗೆ, ತಾವು ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿಕೊಟ್ಟು ‘ವಿರಾಮ’ವಾಗಿ ಹನಿಮೂನ್ಗೆ ರೆಡಿಯಾಗಲು ತಯಾರಿ ನಡೆಸಿದ್ದಾರಂತೆ ಕರೀನಾ.
ಅಂದಹಾಗೆ, ಕರೀನಾ ಮತ್ತು ಸೈಫ್ ಎಂಗೇಜ್ಮೆಂಟ್ಗೆ ೧೫ ದಿನ, ಮದುವೆಗೆ ೧೦ದಿನ ರಜೆ ಘೋಷಿಸಿಕೊಂಡಿದ್ದಾರೆ !
ಮತ್ತೊಂದು ವಿಷಯ ಏನಪ್ಪಾ ಅಂದ್ರೆ ಐಶ್ವರ್ಯಾ ರೈ ತಾಯಿಯಾಗುವ ಖುಷಿಯಲ್ಲಿ ಬಿಟ್ಟುಹೋದ ‘ಹೀರೋಯಿನ್’ ಪಟ್ಟಕ್ಕೆ ಕರೀನಾ ಕಪೂರ್ ಎಂಟ್ರಿ ಕೊಟ್ಟಿದ್ದಾರೆ ಎನ್ನೋದು ತುಂಬಾ ಓಲ್ಡ್ ನ್ಯೂಸ್ ಅಲ್ವಾ..? ಈಗ ಬಂದಿರುವ ಗರಂ ಗರಂ ಸುದ್ದಿಯೆಂದರೆ ಮಧುರ್ ಭಂಡಾರ್ ಕರ್ ನಿರ್ದೇಶನದ ಈ ಚಿತ್ರಕ್ಕೆ ಕರೀನಾ ಬರೋಬ್ಬರಿ ಎಂಟು ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.
ಅದರಲ್ಲೂ ಮೊದಲು ೧೦ ಕೋಟಿಯ ಮಾತುಕತೆ ನಡೆದಿತ್ತು. ಯುಟಿವಿ ಬ್ಯಾನರ್ನ ನಿರ್ಮಾಪಕ ದೊರೆಗಳು ಈಗ ೮ ಕೋಟಿ ಕೊಡುತ್ತೇವೆ ಉಳಿದ ಹಣವನ್ನು ಚಿತ್ರ ಬಿಡುಗಡೆಯ ಟೈಮ್ನಲ್ಲಿ ಕೊಟ್ಟು ಬಿಡುತ್ತೇವೆಂದು ಒಪ್ಪಂದ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಕರೀನಾನೂ ಓಕೆ ಎಂದುಕೊಂಡು ೮ ಕೋಟಿ ಪಡೆದುಕೊಂಡಿದ್ದಾರೆ. ಆ ಮೂಲಕ, ಬಾಲಿವುಡ್ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ‘ಹೀರೋಯಿನ್’ ಆಗಿ ಹೊರಹೊಮ್ಮಿದ್ದಾರೆ ಕರೀನಾ.
ಅಂದಹಾಗೆ ಮಧುರ್ ಭಂಡಾರ್ಕರ್ ಅವರ ‘ಹೀರೋಯಿನ್’ಚಿತ್ರಕ್ಕೆ ಐಶ್ ನಂತರ ನಾಯಕಿಯ ಪಟ್ಟ ಪ್ರಿಯಾಂಕಾ ಚೋಪ್ರಾ, ವಿದ್ಯಾ ಬಾಲನ್ಗೆ ಒಳಿದಿತ್ತು. ಆದರೆ ಪ್ರಿಯಾಂಕಾ ಮಧುರ್ ಅವರ ‘ಫ್ಯಾಶನ್’ ಚಿತ್ರದಲ್ಲಿ ನಟಿಸಿರುವುದರಿಂದ ಇದೇ ರೀತಿಯ ಕತೆ ಹೊಂದಿರುವ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲು ಇಷ್ಟ ಪಡಲಿಲ್ಲ. ಉಳಿದಂತೆ ವಿದ್ಯಾ ಬಾಲನ್ ಏಕ್ತಾ ಕಪೂರ್ ಬ್ಯಾನರ್ನ ‘ಡರ್ಟಿ ಪಿಕ್ಚರ್’ನಲ್ಲಿ ಫುಲ್ ಬ್ಯುಸಿಯಾಗಿರುವುದರಿಂದ ಈ ಚಿತ್ರ ಕರೀನಾರ ಪಾಲಿಗೆ ಒಳಿದಿತ್ತು.
ಮಧುರ್ ಭಂಡಾರ್ ಕರ್ಗೂ ಕರೀನಾ ಈ ಚಿತ್ರಕ್ಕೆ ಸರಿಯಾದ ನಟಿ ಎಂದೇ ಚಿತ್ರದ ಕಥೆಯನ್ನು ರಚಿಸಿಕೊಂಡಿದ್ದರಂತೆ ! ಕರೀನಾ ಈಗಾಗಲೇ ‘ಬಾಡಿಗಾರ್ಡ್’ ‘ಏಜೆಂಟ್ ವಿನೋದ್’ ಮತ್ತು ‘ಒನ್ಸ್ ಆಫನ್ ಟೈಮ್ ಇನ್ ಮುಂಬಯಿ-೨’ಯಲ್ಲಿ ಬ್ಯುಸಿ ಇರುವ ನಟಿ. ಮಧುರ್ ಹೇಳಿದ ಕೂಡಲೇ ಚಿತ್ರಕ್ಕೆ ನಾನೇ ಹೀರೋಯಿನ್ ಆಗ್ತೀನಿ ಎಂದು ಕರೀನಾ ಒಪ್ಪಿಗೆ ಕೊಟ್ಟಿದ್ದರಂತೆ.
ಅಲ್ಲಿಗೆ, ಕರೀನಾ ಮದುವೆ ಖರ್ಚಿನ ಬಗ್ಗೆ ಅವರಪ್ಪ ತಲೆ ಕೆಡಿಸಿಕೊಳ್ಳವಂತಿಲ್ಲ ಬಿಡಿ. ಝೀರೋ ಸೈಜ್ ‘ಹೀರೋಯಿನ್’ನ ಸಂಭಾವನೆಯನ್ನೇ ಇಲ್ಲಿ ವ್ಯಯಿಸಿದರಾಯಿತು ಎನ್ನುವ ಮಾತುಗಳು ಮುಂಬಯಿಯ ಗಲ್ಲಿಯಲ್ಲಿ ಠಪೋರಿಗಳು ಹೇಳಿಕೊಂಡು ತಿರುಗಾಡುತ್ತಿದ್ದಾರಂತೆ !

ಬಾಲಿವುಡ್ನಲ್ಲಿ ಬಿಗ್ ಸಂಭಾವನೆ

* ಶಂಕರ್ ನಿರ್ದೇಶನದ ರಜನಿಕಾಂತ್ ಅಭಿನಯದ ‘ರೊಬೋಟ್’ ಚಿತ್ರಕ್ಕಾಗಿ ಐಶ್ವರ್ಯಾ ರೈ ಬಚ್ಚನ್ ಪಡೆದುಕೊಂಡ ಸಂಭಾವನೆ ೬.೫ ಕೋಟಿ ರೂಪಾಯಿ.
* ಹ್ಯಾರಿ ಬೇವಾಜಾ ಅವರ ‘ಲವ್ ಸ್ಟೋರಿ-೨೦೫೦’ಯ ನಟನೆಗಾಗಿ ಪ್ರಿಯಾಂಕಾ ಚೋಪ್ರಾ ೧.೫ ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ.
* ದೀಪಕ್ ಚೋಪ್ರಾ ನಿರ್ದೇಶನದ ‘ಹೇ ಜಿದಾಂಗೀ ಹೈ ಪ್ಯಾರ್ ಕೇ’ಯಲ್ಲಿ ಪ್ರೀತಿ ಜಿಂಟಾ ಹತ್ತು ವರ್ಷಗಳ ಹಿಂದೆ ಪಡೆದುಕೊಂಡ ಸಂಭಾವನೆ ೯೧ ಲಕ್ಷ. ಇದೇ ಚಿತ್ರಕ್ಕೆ ಕರೀನಾರ ಆಯ್ಕೆ ಕೂಡ ನಡೆದಿತ್ತು. ಹೊಸ ಮುಖ ಎಂಬ ಕಾರಣಕ್ಕೆ ಕರೀನಾ ಚಿತ್ರದಿಂದ ಹೊರಗೆ ಉಳಿದಿದ್ದರು.

Wednesday, August 10, 2011

ಡಿಸೈನಿಗೂ ಕತ್ರಿನಾ !


‘ಮೇರಿ ಬ್ರದರ್ ಕೀ ದುಲ್ಹಾನ್’ನ ವಸ್ತ್ರ ವಿನ್ಯಾಸಕ ರಾಕಿ ಜತೆಯಲ್ಲಿ ಕತ್ರಿನಾ ಡಿಸೈನಿಂಗ್ ಪಾಠಗಳನ್ನು ಹೇಳಿಸಿಕೊಳ್ಳುತ್ತಿದ್ದಾರೆ. ಯಶ್ರಾಜ್ ಬ್ಯಾನರ್ನ ಮತ್ತೊಂದು ಚಿತ್ರದಲ್ಲಿ ಕತ್ರಿನಾ ಕೈಫ್ ನಟನೆಯ ಜತೆಗೆ ‘ಕತ್ತರಿ’ನೂ ಹಿಡಿತಾರೆಯಂತೆ !

ಬಾಲಿವುಡ್ ಇಂಡಸ್ಟ್ರಿಯ ಬಾರ್ಬಿ ಡಾಲ್ ಕತ್ರಿನಾ ಕೈಫ್ ಗೊತ್ತಾಲ್ಲ. ಹಿಂದಿ ಬರೋಲ್ಲ ಅಂತಾ ಹೇಳಿಕೊಂಡು ಬರೋಬರಿ ಹತ್ತು ನಿಮಿಷ ಬಿಡದೇ ಹಿಂದಿಯಲ್ಲಿ ಮಾತನಾಡಿ ದಂಗು ಮೂಡಿಸುತ್ತಿದ್ದ ಅದೇ ಹುಡುಗಿ ಇನ್ನೂ ಮುಂದೆ ತನ್ನ ಸಿನ್ಮಾಗಳಲ್ಲಿ ನಟಿಸುವ ಜತೆಯಲ್ಲಿ ತನ್ನ ಪಾತ್ರಗಳಿಗೆ ತಾನೇ ವಸ್ತ್ರವಿನ್ಯಾಸ ಮಾಡುತ್ತೇನೆ ಎಂದು ಕೂತುಬಿಟ್ಟಿದ್ದಾಳೆ.
ಈ ಮೂಲಕ ಇಷ್ಟರವರೆಗೆ ಕತ್ರಿನಾ ಸಿನ್ಮಾಗಳಿಗೆ ಡಿಸೈನ್ ಮಾಡುತ್ತಿದ್ದ ಡಿಸೈನರ್ಗಳಿಗೆ ಕತ್ರಿನಾ ಕತ್ರಿ ಕೊಡುಬಿಟ್ಟಿದ್ದಾಳೆ ಎಂದು ಮುಂಬಯಿ ಗಲ್ಲಿಯಲ್ಲಿ ಮಾತು ಹರಡಿದೆ. ಅಂದಹಾಗೆ ಕತ್ರಿನಾ ಕೈಫ್ ಸಿನ್ಮಾ ಇಂಡಸ್ಟ್ರಿಗೆ ಬರುವ ಮೊದಲು ಲಂಡನ್ನಲ್ಲಿ ಮೊಡೆಲಿಂಗ್ ಮಾಡಿಕೊಂಡಿದ್ದರು. ಬರೀ ೧೪ರ ಹರೆಯದಲ್ಲಿ ರ್ಯಾಂಪ್ ಮೇಲೆ ನಡೆದು ಸಭಿಕರನ್ನು ದಂಗು ಮೂಡಿಸಿದ್ದರು. ಲಂಡನ್ ಫ್ಯಾಶನ್ ವೀಕ್ನಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಮೂಲಕ ಮೊಡೆಲಿಂಗ್ ಜತೆಯಲ್ಲಿ ಡಿಸೈನಿಂಗ್ ಫೀಲ್ಡ್ನಲ್ಲೂ ಕೈಯಾಡಿಸಿದ್ದರು.
ಒಂದ್ ಸಾರಿ ರ್ಯಾಂಪ್ ಮೇಲೆ ಬೆಕ್ಕಿನ ಹೆಜ್ಜೆ ಹಾಕುತ್ತಿದ್ದ ಕತ್ರಿನಾ ಲಂಡನ್ ಮೂಲದ ಚಿತ್ರ ನಿರ್ದೇಶಕ ಕಾಜೀದ್ರ ಕಣ್ಣಿಗೆ ಬಿದ್ದು ಬಿಟ್ಟರು. ಅಲ್ಲಿಂದ ‘ಬೂಮ್’ ಚಿತ್ರದ ಮೂಲಕ ಸಿನ್ಮಾ ಇಂಡಸ್ಟ್ರಿಗೆ ಲ್ಯಾಂಡಿಗೆ ಆದರು. ಬಾಲಿವುಡ್ ಸೇರಿದಂತೆ ಕಾಲಿವುಡ್, ಟಾಲಿವುಡ್, ಮೊಲಿವುಡ್ಗಳಲ್ಲೂ ಬೇಡಿಕೆಯ ನಟಿಯಾಗಿ ಕತ್ರಿನಾ ಮಿಂಚಿದ್ದರು. ಈಗ ನಟನೆಯ ಜತೆಯಲ್ಲಿ ತನ್ನ ಪಾತ್ರಗಳಿಗೇ ತಾನೇ ವಸ್ತ್ರ ವಿನ್ಯಾಸಕಿಯಾಗಿ ಆಗಿ ಕತ್ರಿನಾ ಬರುತ್ತಿದ್ದಾಳೆ.
ಬಾಲಿವುಡ್ನ ದೊಡ್ಡ ಬ್ಯಾನರ್ ಯಶ್ರಾಜ್ ಅಡಿಯಲ್ಲಿ ಬರುತ್ತಿರುವ ಶಾರೂಕ್ ಖಾನ್ ಅಭಿನಯದ ಚಿತ್ರದಲ್ಲಿ ಕತ್ರಿನಾ ವಸ್ತ್ರ ವಿನ್ಯಾಸದ ಕೆಲಸಕ್ಕೂ ರೆಡಿಯಾಗಿದ್ದಾಳೆ. ಈಗಾಗಲೇ ಬಿಡುಗಡೆಯ ಹಾದಿಯಲ್ಲಿರುವ ‘ಮೇರಿ ಬ್ರದರ್ ಕೀ ದುಲ್ಹಾನ್’ನ ವಸ್ತ್ರ ವಿನ್ಯಾಸಕ ರಾಕಿ ಜತೆಯಲ್ಲಿ ಕತ್ರಿನಾ ಡಿಸೈನಿಂಗ್ ಪಾಠಗಳನ್ನು ಹೇಳಿಸಿಕೊಳ್ಳುತ್ತಿದ್ದಾರೆ. ಜತೆಯಲ್ಲಿ ಕ್ಲೋತ್ ಡಿಸೈನಿಂಗ್ಗೆ ಬೇಕಾದ ಅರ್ಧದಷ್ಟೂ ಬಟ್ಟೆಗಳನ್ನು ತನ್ನ ಮನೆಯಲ್ಲಿ ತಂದು ಹಾಕಿದ್ದಾರೆ.
ಡಿಸೈನರ್ ರಾಕಿಯ ನೆರವು ಕತ್ರಿನಾ ಫುಲ್ ಜೋಶ್ನಿಂದ ಯಶ್ರಾಜ್ ಬ್ಯಾನರ್ನ ಮತ್ತೊಂದು ಚಿತ್ರಕ್ಕೆ ತಾನೇ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡುತ್ತೇನೆಂದು ಯಶ್ರಾಜ್ ಬ್ಯಾನರ್ನ ಆದಿತ್ಯ ಚೋಪ್ರಾರಲ್ಲಿ ವಿನಂತಿಸಿಕೊಂಡಿದ್ದಾಳೆ. ಚಿತ್ರದ ನಿರ್ಮಾಪಕ ಆದಿತ್ಯನೂ ಕತ್ರಿನಾರ ಬಯಕೆಗೆ ಓಕೆ ಎಂದಿದ್ದಾರೆ. ಈ ಮೂಲಕ ಕತ್ರಿನಾ ಬಾಲಿವುಡ್ ಸಿನ್ಮಾ ಇಂಡಸ್ಟ್ರಿಯ ಮೊದಲ ನಟಿ ಕಮ್ ಫ್ಯಾಶನ್ ಡಿಸೈನರ್ ಎನ್ನಿಸಿಕೊಂಡಿದ್ದಾರೆ.
‘ನಾನು ಬಾಲ್ಯದಿಂದಲೂ ಫ್ಯಾಶನ್ ಲೋಕವನ್ನು ಬಹಳ ಇಷ್ಟಪಡುತ್ತಿದ್ದೆ. ರ್ಯಾಂಪ್ ಮೇಲೆ ನಾನಾ ಡಿಸೈನರ್ಗಳ ಡಿಸೈನ್ಡ್ ಬಟ್ಟೆಗಳನ್ನು ಹಾಕುತ್ತಾ ನಡೆಯುತ್ತಿದ್ದಾಗ ನಾನು ಕೂಡ ಫ್ಯಾಶನ್ ಡಿಸೈನರ್ ಆಗಬೇಕೆಂದು ಕನಸ್ಸು ಕಾಣುತ್ತಿದೆ. ನಟನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳದಿದ್ದಾರೆ ಒಳ್ಳೆಯ ಫ್ಯಾಶನ್ ಡಿಸೈನರ್ ಆಗುತ್ತಿದ್ದೆ . ಯಶ್ರಾಜ್ರ ಮತ್ತೊಂದು ಚಿತ್ರದಲ್ಲಿ ನನ್ನ ಪಾತ್ರಗಳಿಗೆ ನಾನೇ ಡಿಸೈನ್ ಮಾಡುತ್ತಿದ್ದೇನೆ ಎಂದು ಕತ್ರಿನಾ ಕೈಫ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
‘ಜಿಂದಿಗಿ ನಾ ಮಿಲೇಗಿ ದುಬಾರಾ’ ಹಾಗೂ ‘ಮೇರಿ ಬ್ರದರ್ ಕೀ ದುಲ್ಹಾನ್’ ಚಿತ್ರದಲ್ಲಿ ಕತ್ರಿನಾ ಕೈಫ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕತ್ರಿನಾ ಬಟ್ಟೆಗಳ ಕುರಿತು ತುಂಬಾ ಸಿರೀಯಸ್ ಆಗಿದ್ದಾರೆ ಎಂಬ ಸೂಚನೆ ಈ ಚಿತ್ರಗಳ ಮೂಲಕ ನೀಡಿದ್ದಾರೆ. ದೇಶಿ ಉಡುಪುಗಳ ಜತೆಯಲ್ಲಿ ವಿದೇಶಿ ಬಟ್ಟೆಗಳ ಮಿಶ್ರಣದಲ್ಲಿ ಮೂಡುವ ಬಟ್ಟೆಗಳನ್ನು ಜಾಸ್ತಿ ಲೈಕ್ ಮಾಡುವ ಕತ್ರಿನಾ ತಾನು ನಟಿಸುವ ಮುಂದಿನ ಎಲ್ಲ ಚಿತ್ರಗಳಿಗೂ ಡಿಸೈನಿಂಗ್ ಮಾಡುತ್ತಾರಾ ಎನ್ನುವುದು ಮಾತ್ರ ಇನ್ನೂ ಕೂಡ ಗೊತ್ತಾಗಿಲ್ಲ.