Monday, August 8, 2011

ಮೆಟ್ರೋದಲ್ಲಿ ‘ಕುಡ್ಲ’ ಸಿಟಿ !


ಬೆಂಗಳೂರುನಂತಹ ಮೆಟ್ರೋ ಸಿಟಿಯಲ್ಲಿ ನಿಂತು ಕರಾವಳಿಯ ನಾನಾ ವೈರೆಟಿಯ ಮೀನು ಹಿಡಿಯುವ ಮೊಗವೀರ ಸಮಾಜವನ್ನು ನೋಡಬಹುದು. ಅರೇ ಇಷ್ಟೆಲ್ಲಾ ನಡೆಯಬೇಕಾದರೆ..ಬೆಂಗಳೂರಿಗೆ ಯಾವಾಗ ಕರಾವಳಿಯ ಸಮುದ್ರ ಬಂತು ಅಂತಾ ಕೇಳಬೇಡಿ ! ಇದೆಲ್ಲ ಸಾಧ್ಯವಾಗಿರೋದು ಮಾತ್ರ ಪ್ರಕಾಶ್ ಶೆಟ್ಟಿಯ ಮ್ಯೂರಲ್ ಆರ್ಟ್ನಿಂದಾಗಿ ಬನ್ನಿ ನೋಡಿ ಬರೋಣ...

ಬೆಂಗಳೂರು ನಂತಹ ಮೆಟ್ರೋ ಸಿಟಿಯಲ್ಲಿ ನಿಂತು ಕರಾವಳಿಯ ನಾನಾ ವೈರೆಟಿಯ ಮೀನು ಹಿಡಿಯುವ ಮೊಗವೀರ ಸಮಾಜವನ್ನು ನೋಡಬಹುದು. ಕರಾವಳಿಯ ಬಂದರಿನೊಳಗೆ ಎಂದಿಗೂ ಕಾಲಿಡದ ಮಂದಿನೂ ಬಂದರಿನಲ್ಲಿ ನಡೆಯುವ ಮೀನಿನ ವ್ಯವಹಾರ ಕಾಣಬಹುದು. ಸ್ಟೇಟ್ ಬ್ಯಾಂಕ್ನ ಮುಂಭಾಗದಲ್ಲಿ ಕೂತು ಮೀನಿಗಾಗಿ ಅರಚಾಡುವ ಗಟ್ಟಿ ಮುಟ್ಟಾದ ಮಹಿಳಾ ಮಣಿಗಳ ದರ್ಶನ ಭಾಗ್ಯ ಬೆಂಗಳೂರಿನಲ್ಲಿಯೇ ಕೂತು ಪಡೆಯಬಹುದು. ಅರೇ ಇಷ್ಟೆಲ್ಲಾ ನಡೆಯಬೇಕಾದರೆ..ಬೆಂಗಳೂರಿಗೆ ಯಾವಾಗ ಕರಾವಳಿಯ ಸಮುದ್ರ ಬಂತು ಅಂತಾ ಕೇಳಬೇಡಿ ! ಇದೆಲ್ಲ ಸಾಧ್ಯವಾಗಿರೋದು ಮಾತ್ರ ಗ್ಯಾರಂಟಿ ಮಾರಾಯ್ರೆ.
ಇಡೀ ಕರಾವಳಿಯ ಪ್ರತಿಷ್ಠಿತ ವಿಚಾರಗಳೆಲ್ಲವೂ ಬೆಂಗಳೂರಿಗೆ ಬಂದು ಮುಟ್ಟಿದೆ. ನವರಾತ್ರಿ ಟೈಮ್ನಲ್ಲಿ ಕರಾವಳಿಯಲ್ಲಿ ಕಾಣಸಿಗುವ ಹುಲಿವೇಷಧಾರಿಗಳು, ನಗರದ ಹಳೇ ಚರ್ಚ್ಗಳಲ್ಲಿ ಒಂದಾದ ಮಿಲಾಗ್ರಿಸ್ ಚರ್ಚ್ನ ಧಾರ್ಮಿಕ ಕಾರ್ಯಗಳು, ಕರಾವಳಿಯ ಕೋಣಗಳ ಕಂಬಳ, ಕೋರಿಕಟ್ಟ(ಕಾಕ್ ಪೈಟ್), ಹಂಪನಕಟ್ಟೆಯ ಬ್ಯುಸಿ ಟ್ರಾಫಿಕ್ ಜಾಮ್, ಬಾವುಟಗುಡ್ಡೆಯಲ್ಲಿರುವ ಪಡ್ಡೆ ಹೈಕಳ ಠಾಗೋರ್ ಪಾರ್ಕ್ ಎಲ್ಲವೂ ಬೆಂಗಳೂರಿನ ಪ್ರೇಜರ್ಟೌನ್ನಲ್ಲಿರುವ ‘ಮಂಗಳೂರು ಪೆರ್ಲ್’ನಲ್ಲಿ ಮೀನು ಪ್ರೈ, ಮಸಾಲ ಅರ್ಡರ್ ಮಾಡುತ್ತಾ ಕಾರ್ಟೂನ್ ಮಜಾ ಉಡಾಯಿಸಬಹುದು.
ಇದು ಮ್ಯೂರಲ್ ಕಾರ್ಟೂನ್. ದೇವಾಲಯದಲ್ಲಿರುವ ಮ್ಯೂರಲ್ ಪೈಟಿಂಗ್ಸ್(ಗೋಡೆ ಮೇಲಿನ ರಚನೆ)ನಂತೆ ಇದೊಂದು ಹೊಸ ಪ್ರಯೋಗ. ಭಾರತದಲ್ಲಂತೂ ತುಂಬಾನೇ ಅಪರೂಪದ ಆರ್ಟ್ ಎಂದೇ ಕರೆಯಲಾಗುತ್ತದೆ. ಇಡೀ ಭಾರತದಲ್ಲಿ ಮಂಗಳೂರು ಮೂಲದ ಖ್ಯಾತ ಕಾರ್ಟೂನಿಷ್ಟ್ ಪ್ರಕಾಶ್ ಶೆಟ್ಟಿ ಮಾತ್ರ ಇಂತಹ ಮ್ಯೂರಲ್ ಕಾರ್ಟೂನ್ಗಳ ಹಿಂದೆ ಬಿದ್ದಿದ್ದಾರೆ.
ಅಂದಹಾಗೆ ಕರ್ನಾಟಕದಲ್ಲಂತೂ ಇಂತಹ ಮ್ಯೂರಲ್ ಆರ್ಟ್ ಜಸ್ಟ್ ಸೆಕೆಂಡ್. ಮಂಗಳೂರಿನ ಪಬ್ವೊಂದರಲ್ಲಿ ಇಂತಹ ಕಾರ್ಟೂನ್ಗಳು ಗೋಡೆಯನ್ನು ಆಲಂಕರಿಸಿದ್ದು ಮಾತ್ರವಲ್ಲ ಪೆಗ್ ಏರಿಸುವವರನ್ನು ಕಾರ್ಟೂನ್ ಮೂಲಕ ನಶೆ ಏರಿಸಿದ ಪ್ರಸಂಗಗಳು ನಡೆದಿವೆ. ಈಗ ಬೆಂಗಳೂರಿನ ‘ಮಂಗಳೂರು ಪೆರ್ಲ್’ನಲ್ಲಿ ಸುಮಾರು ೧೩೦ಅಡಿ ಉದ್ದ ಹಾಗೂ ೩ ಅಡಿ ಎತ್ತರದಲ್ಲಿ ಈ ಮ್ಯೂರಲ್ ಕಾರ್ಟೂನ್ಗಳನ್ನು ಕಾಣಬಹುದು.
ಒಂದು ಲೆಕ್ಕಚಾರದ ಪ್ರಕಾರ ರಾಜ್ಯದಲ್ಲಿ ಮ್ಯೂರಲ್ ಕಾರ್ಟೂನ್ಗಳಿಗೆ ಜೀವಕೊಡುವ ಪ್ರಕಾಶ್ ಶೆಟ್ಟಿ ಹೇಳುವಂತೆ ಬಹುಶಃ ದೇಶದ ಯಾವೊಬ್ಬ ವ್ಯಂಗ್ಯ ಚಿತ್ರಕಾರನೂ ಗೋಡೆಯ ಮೇಲೆ ಬೃಹತ್ ಆಕಾರದಲ್ಲಿ ಸ್ವಯಂ ಆಗಿ ಕಾರ್ಟೂನ್ ರಚಿಸಿಲ್ಲ. ಈ ಡಿಜಿಟಲ್ ಯುಗದಲ್ಲಿ ಕಲಾವಿದರು ಬೃಹತ್ ರಚನೆಯ ಕಷ್ಟ ತೆಗೆದುಕೊಳ್ಳಬೇಕಾಗಿಲ್ಲ. ಆದರೆ ನಾನೀಲ್ಲಿ ಒರಿಜಿನಲ್ ಆರ್ಟ್ಗೆ ಅದರದ್ದೇ ಆದ ಮಹತ್ವ ಇರುವುದರಿಂದ ಈ ರೀತಿಯ ಪ್ರಯೋಗಕ್ಕೆ ಇಳಿದಿದ್ದೇನೆ ಎನ್ನುತ್ತಾರೆ ಅವರು.
‘ನಾನು ಮೂಲತಃ ಮಂಗಳೂರಿನ ಕ್ಯಾಥೋಲಿಕ್ ಸಮುದಾಯದಿಂದ ಬಂದವ. ನನಗೆ ಹುಟ್ಟಿ ಬೆಳೆದ ಮಂಗಳೂರು ಇಡೀಯಾಗಿ ನನ್ನ ಹೋಟೆಲ್ನಲ್ಲಿ ತೋರಿಸಬೇಕು ಎನ್ನುವ ಕನಸ್ಸಿತ್ತು. ಪ್ರಕಾಶ್ ಶೆಟ್ಟಿ ಇಂತಹ ಮ್ಯೂರಲ್ ಕಾರ್ಟೂನ್ಗಳಿಗೆ ತುಂಬಾನೇ ಪೇಮಸ್ ಎನ್ನುವ ವಿಚಾರ ಗೊತ್ತಾದ ಕೂಡಲೇ ಅವರನ್ನು ಸಂಪರ್ಕಿಸಿ ಕಾರ್ಟೂನ್ಸ್ ಬಿಡಿಸಲು ಹೇಳಿದೆ. ಅವರು ಬ್ಯುಸಿ ಶೆಡ್ಯುಲ್ ಮಧ್ಯೆನೂ ಬಂದು ಕಾರ್ಟೂನ್ಸ್ ಬಿಡಿಸಿದ್ದಾರೆ. ಹೋಟೆಲ್ಗೆ ಭೇಟಿ ನೀಡುವವರು ಇದನ್ನು ನೋಡಿ ಮನಸ್ಸು ಪೂರ್ತಿ ನಗಲಿ ಎನ್ನುವುದು ನನ್ನ ಉದ್ದೇಶ’ ಎನ್ನುತ್ತಾರೆ ಮಂಗಳೂರು ಪೆರ್ಲ್ ಮಾಲೀಕ ಸ್ಟೀವನ್ ಪಿಂಟೋ.
ಬೆಂಗಳೂರಿನ ನೂರಾರು ಹೋಟೆಲ್ಗಳ ನಡುವೆ ‘ಮಂಗಳೂರು ಪೆರ್ಲ್’ ತನ್ನ ಕ್ರೇಜಿ ಐಡಿಯಾದಿಂದ ಡಿಪರೆಂಟ್ ಇಮೇಜ್ ಕ್ರಿಯೇಟ್ ಮಾಡಿದೆ ಎನ್ನುವುದು ಗಮನಿಸಬೇಕಾದ ವಿಷ್ಯಾ. ಟೋಟಲಿ ಪ್ರಕಾಶ್ ಶೆಟ್ಟರು ಕ್ಯಾನ್ವಾಸ್ ಬಿಟ್ಟು ಗೋಡೆಗಳಿಗೆ ಜೋರಾಗಿ ಅಂಟಿಬಿಟ್ಟಿದ್ದಾರೆ ಎನ್ನಬಹುದು ಅಲ್ವಾ..? ಸೊರಗಿ ಹೋಗುತ್ತಿರುವ ವ್ಯಂಗ್ಯಚಿತ್ರಕಲೆಯನ್ನು ಶೆಟ್ಟರು ಈ ರೀತಿ ಬಳಸುತ್ತಿರುವುದರಂದ ಅದರ ಮೌಲ್ಯ ಹೆಚ್ಚಾಗುತ್ತಿದೆ ಎಂಬುದಕ್ಕೆ ಯಾವುದೇ ಡೌಟ್ ಉಳಿದಿಲ್ಲ.

Sunday, August 7, 2011

‘ನಿಖಿಲ್’ ಅದ್ವಾನ !



ಯಶಸ್ಸು ಎಂಬ ಮಂತ್ರ ನಿಖಿಲ್ ಅಡ್ವಾನಿಗೆ ಮಾಡಿದ ಮೂರು ಚಿತ್ರಗಳಲ್ಲಿ ಪಠಿಸಲು ಸಿಗಲೇ ಇಲ್ಲ. ಆದರೂ ಮತ್ತೆ ಫೀನಿಕ್ಸ್ ಹಕ್ಕಿಯಂತೆ ‘ಡೆಲ್ಲಿ ಸಫಾರಿ’ಯಲ್ಲಿ ಬರುತ್ತಿದ್ದಾರೆ.

ಒಂದಲ್ಲ ಎರಡಲ್ಲ ಬರೋಬರಿ ಮೂರು ಚಿತ್ರಗಳು ಬಾಲಿವುಡ್ ಪಡಸಾಲೆಗೆ ಇಳಿದು ವಾರ ಮುಗಿಯುವುದರೊಳಗೆ ಡಬ್ಬಾ ಪೆಟ್ಟಿಗೆ ಸೇರಿ ಹೋಯಿತು. ಆದರೂ ಸಿನ್ಮಾ ನನ್ನ ಖಯಾಲಿ ಮಾಡಿಯೇ ಸಿದ್ಧ. ಸತತ ಸೋಲು ಗೆಲುವಿನ ಹಾದಿಗೆ ಮುನ್ನುಡಿ ಎಂದುಕೊಂಡು ಈಗಲೂ ಬಾಲಿವುಡ್ ಬಿಡದ ಹುಡುಗ ನಿರ್ದೇಶಕ ನಿಖಿಲ್ ಅಡ್ವಾನಿ.
ಈಗ ಯಾಕೋ ೩ಡಿ ಸಿನ್ಮಾ ಇಟ್ಟುಕೊಂಡು ಮುಂಬಯಿಗೆ ಮತ್ತೆ ಬಂದು ನಿಂತಿದ್ದಾರೆ. ಚಿತ್ರ ಬಾಕ್ಸಾಫೀಸ್ನಲ್ಲಿ ಗೆಲುತ್ತಾ ಇಲ್ಲವೇ ಮಕಾಡೆ ಬಿದ್ದು ನರಳುತ್ತಾ ಎನ್ನುವುದು ಕಾದು ನೋಡಬಹುದು. ಆದರೆ ನಿಖಿಲ್ ಅಡ್ವಾನಿ ಎಂಬ ಹುಡುಗನ ಕತೆ ಮಾತ್ರ ಎಲ್ಲೂ ಕೇಳಿಸಲು ಸಿಗೋಲ್ಲ. ನಿಖಿಲ್ ಅಡ್ವಾನಿ ನಿಜಕ್ಕೂ ಲಕ್ಕಿಬಾಯ್. ಬಾಲಿವುಡ್ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ನ ಅಡಿಯಲ್ಲಿ ‘ಕುಚ್ ಕುಚ್ ಹೋತಾ ಹೈ’, ‘ಕಬೀ ಕುಷಿ ಕಬೀ ಗಮ್’ನಂತಹ ಚಿತ್ರಗಳಿಗೆ ಸಹ ನಿರ್ದೇಶಕನ ಸ್ಥಾನದಲ್ಲಿ ಕೂತು ಕೆಲಸ ಮಾಡುವ ಅವಕಾಶ ನಿಖಿಲ್ಗೆ ಒಳಿದಿತ್ತು.
ಆದರೆ ಧರ್ಮ ಪ್ರೊಡಕ್ಷನ್ ಅಡಿಯಲ್ಲಿ ಬಂದ ‘ಕಲ್ ಹೋ ನಾ ಹೋ’ ತನ್ನ ನಿರ್ದೇಶನದ ಚಿತ್ರ ಬಾಲಿವುಡ್ನಲ್ಲಿ ಯಾರ್ರಾ ಬಿರ್ರಿ ಹಿಟ್ ಅನ್ನಿಸಿಕೊಂಡಿದ್ದೆ ತಡ ನಿಖಿಲ್ ಒಂದೇ ಬಾರಿ ಸ್ಟಾರ್ ನಿರ್ದೇಶಕನ ಪಟ್ಟಕ್ಕೆ ಸೂಟೇಬಲ್ ವ್ಯಕ್ತಿ ಅನ್ನಿಸಿಕೊಂಡರು.
ಆದರೆ ಯಾಕೋ ಗೊತ್ತಿಲ್ಲ . ನಿಖಿಲ್ ನಂತರ ನಿರ್ದೇಶನ ಮಾಡಿದ ‘ಸಲಾಂ-ಇ- ಈಷ್ಕ್’ ದೊಡ್ಡ ಸ್ಟಾರ್ ನಟರ ದಂಡೇ ಇತ್ತು. ಬರೋಬರಿ ಎರಡು ವಾರಗಳ ಓಟ ಆರಂಭ ಮಾಡುತ್ತಿದ್ದಾಗಲೇ ಥಿಯೇಟರ್ಗೆ ಪ್ರೇಕ್ಷಕ ಮಾತ್ರ ಬರಲಿಲ್ಲ ಎಂದುಕೊಂಡು ಚಿತ್ರ ಅಲ್ಲಿಂದ ಥಿಯೇಟರ್ ಮಾಲೀಕರು ಸಿನ್ಮಾವನ್ನು ಎತ್ತಿಬಿಟ್ಟ್ರು. ೨೦೦೯ರಲ್ಲಿ ಮತ್ತೊಂದು ಪ್ರಯತ್ನ ಮಾಡಿಬಿಡೋಣ ಎಂದುಕೊಂಡು ಅಕ್ಷಯ್ ಕುಮಾರ್ ಹಾಗೂ ದೀಪಿಕಾ ಪಡುಕೋಣೆ ಇರುವ ‘ಚಾಂದಿನಿ ಚೌಕ್ ಟು ಚೈನಾ’ ಚಿತ್ರ ನಿರ್ದೇಶನ ಮಾಡಿಬಿಟ್ಟ್ರು ನಿಖಿಲ್ ಅಲ್ಲೂ ಗೆಲುವು ಕೈ ಕೊಟ್ಟಿತ್ತು.
ಎರಡು ವರ್ಷಗಳ ನಂತರ ಮತ್ತೊಂದು ಚಿತ್ರ ‘ಪಾಟಿಯಾಲ ಹೌಸ್’ ಬಂತು. ಅಕ್ಷಯ್ ಕುಮಾರ್ ಈ ಕಾಲದಲ್ಲಿ ಓಡುವ ಕುದುರೆ ಎಂದೇ ಪರಿಗಣಿಸಲಾಗಿತ್ತು. ಅಂತಹ ನಟನ ಜತೆಯಲ್ಲಿ ಅನುಷ್ಕಾ ಶರ್ಮ ನಟಿಸಿದರೂ ಚಿತ್ರ ಆರಂಭದಲ್ಲಿಯೇ ಮುಗ್ಗರಿಸಿ ಬಿತ್ತು. ಅಲ್ಲೂ ಯಶಸ್ಸು ಎಂಬ ಮಂತ್ರ ನಿಖಿಲ್ ಅಡ್ವಾನಿಗೆ ಪಠಿಸಲು ಸಿಗಲೇ ಇಲ್ಲ. ನಿಖಿಲ್ ಅಡ್ವಾನಿ ಬಾಲಿವುಡ್ ಮಂದಿಗೆ ಮಾತ್ರ ಐರಾನ್ಲೆಗ್ಯಾಗಿ ಉಳಿದು ಹೋದರು.
ಡೆಲ್ಲಿಗೆ ಸಫಾರಿ:
೨೦೦೮ರಲ್ಲಿ ಬಾಲಿವುಡ್ ಇಂಡಸ್ಟ್ರಿಯೇ ೩ಡಿ ಸಿನ್ಮಾಗಳಿಗೆ ಕೈ ಹಾಕದ ಟೈಮ್ನಲ್ಲಿ ನಿಖಿಲ್ ‘ಡೆಲ್ಲಿ ಸಫಾರಿ’ ಎನ್ನುವ ೩ಡಿ ಚಿತ್ರ ನಿರ್ಮಾಣ, ನಿರ್ದೇಶನ ಮಾಡುವ ಕನಸ್ಸು ಕಂಡಿದ್ದರು. ೨೦೦೮ರಲ್ಲಿ ಆರಂಭವಾದ ‘ಡೆಲ್ಲಿ ಸಫಾರಿ’ ಚಿತ್ರ ನಿರ್ಮಾಣ ಕಾರ್ಯ ಈಗ ಪೂರ್ತಿಯಾಗಿದೆ. ಆಗಸ್ಟ್ ತಿಂಗಳ ಕೊನೆ ಭಾಗದಲ್ಲಿ ‘ಡೆಲ್ಲಿ ಸಫಾರಿ’ ಸಿನ್ಮಾ ಥಿಯೇಟರ್ಗಳಿಗೆ ಏಕ್ದಂ ನುಗ್ಗಲಿದೆ. ಒಂದು ಲೆಕ್ಕಚಾರದ ಪ್ರಕಾರ ಭಾರತೀಯ ಸಿನ್ಮಾ ಇಂಡಸ್ಟ್ರಿಯಲ್ಲಿಯೇ ೩ಡಿ ಸಿನ್ಮಾ ನಿರ್ದೇಶನ ಮಾಡುತ್ತಿರೋದು ನಿಖಿಲ್ ಅಡ್ವಾನಿ ಮೊದಲಿಗರು.
ಚಿತ್ರದ ಪ್ರಮುಖ ಪಾತ್ರಗಳಿಗೆ ಬಾಲಿವುಡ್ನ ಸ್ಟಾರ್ ನಟರಾದ ಅಕ್ಷಯ್ ಖನ್ನಾ, ಗೋವಿಂದ, ಸುನಿಲ್ ಶೆಟ್ಟಿ, ಬೊಮ್ಮನ್ ಇರಾನಿ, ಉರ್ಮಿಳಾ ಮಾಂತೋಡ್ಕರ್ ಧ್ವನಿಗೂಡಿಸಿದ್ದಾರೆ. ಪರಿಸರ ನಾಶದ ಕುರಿತಾಗಿ ಬೋರಿವಿಲಿಯ ಅರಣ್ಯದಲ್ಲಿರುವ ೫ ಪ್ರಾಣಿಗಳು ಮುಂಬಯಿಯಿಂದ ದಿಲ್ಲಿಯಲ್ಲಿರುವ ರಾಜಕಾರಣಿಗಳಿಗೆ ಪರಿಸರ ನಾಶದ ಕುರಿತಾಗಿ ಮನವಿ ಕೊಡುವ ಸಾರಾಂಶ ಹೊಂದಿರುವ ಈ ಚಿತ್ರ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಶಂಕರ್-ಎಸಾನ್- ಲಾಯ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಮೀರ್ ಲೇಖನಿಯಿಂದ ಒಳ್ಳೆಯ ಹಾಡುಗಳು ಮೂಡಿದೆ.
ಆದರೆ ಇಂತಹ ಚಿತ್ರವನ್ನು ಪ್ರೇಕ್ಷಕರು ಇಷ್ಟಪಡುತ್ತಾರಾ..? ನಿಖಿಲ್ ಈ ಚಿತ್ರದ ಮೂಲಕವಾದರೂ ಗೆದ್ದು ಬರುತ್ತಾರಾ..? ಎಂಬ ಪ್ರಶ್ನೆಗಳ ಮೂಟೆ ಚಿತ್ರ ನೋಡುವ ಎಲ್ಲರಲ್ಲೂ ಇದೆ. ಆದರೆ ಈ ಚಿತ್ರ ಕೈ ಕೊಟ್ಟರೆ ನಿಖಿಲ್ ಅಡ್ವಾನಿ ಏನೂ ಮಾಡುತ್ತಾರೆ ಗೊತ್ತಾ? ಮತ್ತೊಂದು ಬಾಲಿವುಡ್ ಚಿತ್ರ ಮಾಡಿ ದಂಗು ಮೂಡಿಸುತ್ತಾರೆಯಂತೆ ! ಇದು ಖುದ್ದು ನಿಖಿಲ್ ತಮ್ಮ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದ ಮಾತು. ಅದೇ ಕಣ್ರಿ ಸೋಲುವ ಹುಡುಗ ಮತ್ತೆ ಮತ್ತೆ ಕನಸ್ಸುಗಳ ಮೂಲಕ ಗೆಲ್ಲಲು ಹೊರಟಿರೋದು ಗಮನಿಸಬೇಕಾದ ವಿಷ್ಯಾ.

Friday, August 5, 2011

ಸಂಪಾದಕರ ಮೇಜಿನಿಂದ ‘ರೇಗೊ’ ಬರೆಯುತ್ತಾರೆ


‘ರೇಗೊ ಬಾಲ್ಕನಿ’ ನನ್ನ ಬ್ಲಾಗ್ ಸಖತ್ ಹಿಟ್ ಆಗುತ್ತಿದೆ. ಈಗಾಗಲೇ ೫ ಸಾವಿರದ ಓಟ ಮುಗಿಸಿ ಇನ್ನೂ ಓಡುತ್ತಿದೆ. ನಿಲ್ಲುವ ಮಾತೇ ಕೇಳುತ್ತಿಲ್ಲ. ಬ್ಲಾಗ್ ಹಿಟ್ ಆಗುತ್ತಿರೋ ಖುಷಿ ಒಂದು ಕಡೆಯಾದರೆ ಬ್ಲಾಗ್ ನೋಡಿ ಮೊಬೈಲ್ ಡಯಲ್ ಮಾಡುವ ಸಂಖ್ಯೆನೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಲ್ಲರಿಗೂ ಥ್ಯಾಂಕ್ಸ್ ...ಇನ್ನೂ ಇಂತಹ ಹತ್ತಾರು ಶುಭ ಹಾರೈಕೆಗಳ ಎಸ್ಎಂಎಸ್ಗಳು ನನ್ನ ಮೊಬೈಲ್ನ ಇನ್ಬಾಕ್ಸ್ನಲ್ಲಿ ಭದ್ರವಾಗಿ ಕೂತು ಬಿಟ್ಟಿದೆ. ಎಲ್ಲವನ್ನು ಇಲ್ಲಿ ಕೊಟ್ಟಿಲ್ಲ. ಕೆಲವೇ ಕೆಲವು ಇಲ್ಲಿ ಕೊಟ್ಟಿದ್ದೇನೆ ಉಳಿದವುಗಳು ನಂತರದ ದಿನಗಳಲ್ಲಿ ಬ್ಲಾಗ್ನಲ್ಲಿ ತುಂಬಿಸಿಬಿಡುತ್ತೇನೆ.

ನಿಮ್ಮವ
ಸ್ಟೀವನ್ ರೇಗೊ, ದಾರಂದಕುಕ್ಕು


‘ಎದುರಿಗೆ ಸಿಕ್ಕಾಗ ಮಾತಾಡೋ ಥರವೇ ಬರಹದ ಮೂಲಕ ಓದುಗರನ್ನು ಮುತ್ತುವ ನಿಮ್ಮ ಶೈಲಿ ಬಹಳ ಇಷ್ಟವಾಯಿತು. ಗ್ಲಾಮರ್ ಜಗತ್ತಿನ ಹೊರತ್ತಾಗಿ ನಿಮ್ಮ ಸುತ್ತಲಿರುವ ಇಂಟೆರೆಸ್ಟಿಂಗ್ ವಿಷ್ಯಾಗಳ ಮೇಲೆ ಹೆಚ್ಚು ಬೆಳಕು ಚೆಲ್ಲಿ ಇದೊಂದು ನನ್ನ ಕೋರಿಕೆ.
- ಸುರೇಶ್ ಕೆ.
ಹಿರಿಯ ಸಿನಿಮಾ ಪತ್ರಕರ್ತರು ಬೆಂಗಳೂರು
-

‘ರೇಗೊ ನಿಮ್ಮ ಸ್ಟೋರಿಗಳು ನನಗೆ ಬಹಳ ಲೈಕ್ ಆಗುತ್ತಿದೆ. ಬಣ್ಣದ ಲೋಕದಲ್ಲಿ ತೆರೆಮರೆಗೆ ಸರಿದವರನ್ನು ಹುಡುಕಿ ಬರೆಯುವ ನಿಮ್ಮ ಪ್ರಯತ್ನ ನನಗೆ ಖುಷಿ ಕೊಡುವ ವಿಷ್ಯಾ. ನಿಮ್ಮ ಬರಹದಲ್ಲಿ ಮಾತನಾಡಿಸುವ ಶೈಲಿ ಇದೆ. ಶ್ರೀಸಾಮಾನ್ಯನಿಗೂ ಅದು ಇಷ್ಟವಾಗುತ್ತದೆ. ಅದೇ ನಿಮ್ಮ ಸಕ್ಸಸ್ ಮಂತ್ರ.
- ಗಣೇಶ್ ಕಾಸರಗೋಡು
ಹಿರಿಯ ಸಿನಿಮಾ ಪತ್ರಕರ್ತ, ಬೆಂಗಳೂರು
-

‘ಮಂಗಳೂರಿನಲ್ಲಿ ನಿಂತು ಹೇಗೆ ಅಷ್ಟೊಂದು ಸ್ಟೋರಿ ಮಾಡುತ್ತೀರಿ..? ಬೆಂಗಳೂರು ಕಡೆ ಬಂದುಬಿಡಿ. ನಿಮ್ಮ ಬರಹದ ಶೈಲಿ ನನಗೆ ಮೆಚ್ಚುಗೆಯಾಗಿದೆ’
- ವಾಸು,
ಹಿರಿಯ ಸಿನಿಮಾ ಪತ್ರಕರ್ತ, ಬೆಂಗಳೂರು


‘ಮಗಾ ಬ್ಲಾಗ್ ಸಖತ್ ಉಂಟು ಮಾರಾಯ. ಕುಡ್ಲದಲ್ಲಿ ಕೂತು ಮೆಟ್ರೋ ಸಿಟಿಗೆ ಲಗ್ಗೆ ಹಾಕುವ ನಿನ್ನ ಸ್ಟೋರಿಗಳು ನನಗೆ ಬಹಳ ಇಷ್ಟ. ಲವಲವಿಕೆ ನೋಡುವಾಗ ನಿನ್ನದೇ ಮುಖ ಬಂದು ಬಿಡುತ್ತದೆ.
- ರವಿ ಪ್ರಕಾಶ್ ರೈ
ಸಿನಿಮಾ ಪತ್ರಕರ್ತ, ಬೆಂಗಳೂರು

ನನ್ನ ಪತ್ರಿಕೆ ನನ್ನ ಬರಹ-9



( vk daily lvk puravani published dis article on 05.08.2011)

Monday, August 1, 2011

ನೀವಿನ್ನೂ ಈ ‘ಬಾಲ್ಕನಿ’ ಗೆ ಬಂದಿಲ್ಲವೇ?


ಬಾಲ್ಕನಿ ಅಂದರೆ ಯಾರಿಗಿಷ್ಟ ಇಲ್ಲ ಹೇಳಿ? ಕನ್ನಡ ಬ್ಲಾಗ್
ಲೋಕದಲ್ಲೊಂದು ಅಂತಹ ಒಂದು ಬಾಲ್ಕನಿ ಇದೆ.
ಅದಕ್ಕೆ ‘ರೇಗೊ ಬಾಲ್ಕನಿ’ ಎಂಬ ಹೆಸರಿದೆ. ಇಲ್ಲಿ ನಿಂತುಕೊಂಡರೆ
ನಮಗೆ ಕಾಣುವುದು ಓಹ್!....ಅಬ್ಬ!.... ಅಹುದೇನೋ!....
ಅನ್ನುವಂತಹ ಕುತೂಹಲಕಾರಿ ವಿಷಯಗಳೇ. ನಿಜ, ಈ ಬ್ಲಾಗ್ನಲ್ಲಿ
ಕಣ್ಣರಳಿಸಿ ಓದಿಸಿಕೊಂಡು ಹೋಗುವ ಬರಹಗಳಿವೆ.
‘ರೇಗೊ ಬಾಲ್ಕನಿ’ ಯ ವಾರಸುದಾರರು ಬೇರಾರೂ ಅಲ್ಲ. ‘ವಿಜಯ
ಕರ್ನಾಟಕ’ ದಿನಪತ್ರಿಕೆಯಲ್ಲಿ ಆಗಾಗ ‘ಸ್ಟೈಲಿಶ್’ ಆಗಿ ಬರೆಯುವ
ಸ್ಟೀವನ್ ರೇಗೊ. ವಿ.ಕ. ದ ಓದುಗರಲ್ಲದವರು, ವಿ.ಕ.ದ
ಓದುಗರಾಗಿದ್ದು ಓದಲು ಮರೆತವರು, ವಿದೇಶಿ ಕನ್ನಡಿಗರು,
ಎಲ್ಲರೂ ಈ ‘ಬಾಲ್ಕನಿ’ಯಲ್ಲಿ ಬಂದು ನಿಂತರೆ ಸಾಕು.
ಸ್ಟೀವನ್ ರ ವಿಶೇಷ ಏನೆಂದರೆ ಮಂಗಳೂರಿನಲ್ಲಿದ್ದುಕೊಂಡೇ
ಮಂಗಳೂರು ಮೂಲದ, ಹೊರನಾಡಲ್ಲಿ ಖ್ಯಾತರಾದವರನ್ನು
ಹೆಕ್ಕಿ ಅವರ ಬಗ್ಗೆ ಸಮಸ್ತ ಕನ್ನಡಿಗರಿಗೂ ಇಷ್ಟವಾಗುವಂತೆ
ಬರೆಯುತ್ತಾರೆ. ಹಾಗೇ ಅವರ ಬರಹಗಳು ‘ಲೋಕಲೈಸ್ಡ್
ಐಟಂ’ ಅಂತ ತಪ್ಪಿಸಿಕೊಂಡು ಭಲೇ ಅನ್ನಿಸಿ ಬಿಡುತ್ತವೆ.
ಅಂದ ಹಾಗೇ ‘ರೇಗೋ ಬಾಲ್ಕನಿ’ ಬಗ್ಗೆ ಬರೆಯಲು ಇವಷ್ಟೇ
ಕಾರಣವಲ್ಲ. ಹುಟ್ಟಿದ ಐದೇ ತಿಂಗಳಲ್ಲಿ
ಭರ್ಜರಿ ಜನಪ್ರಿಯತೆ ಪಡೆದಿದೆ. ಅಂದರೆ ಬರೋಬ್ಬರಿ ೫೦೦೦
ನೋಡುಗರ ಸಂಖ್ಯೆಗೆ ಮುಟ್ಟಿದೆ! ಕನ್ನಡದ ಮಟ್ಟಿಗೆ ಇದು
ಸಾಧಾರಣ ಸಾಧನೆಯೇನಲ್ಲ. ನಮ್ಮ ಬಾಕಿ ಪತ್ರಕರ್ತತಲೆಗಳ ನಡುವೆ ಭಿನ್ನವಾಗಿ
ನಿಲ್ಲುವ ಸ್ಟೀವನ್ ರೇಗೋರ ಬಾಲ್ಕನಿಗೆ ಬರುವವರು
ಜಾಸ್ತಿಯಾಗುತ್ತಲೇ ಹೋಗಬಹುದು. ಸ್ಟೀವನ್ ಅವರ
ಉತ್ಸುಕತೆಯೂ ಹಾಗೇ ಏರುತ್ತಲೇ ಹೋಗಬೇಕು.

*ಪ್ರಕಾಶ್ ಶೆಟ್ಟಿ, ವ್ಯಂಗ್ಯಚಿತ್ರಕಾರರು.
( ಇದು ‘ರೇಗೊ ಬಾಲ್ಕನಿಯ’ ಕುರಿತು ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ ತಮ್ಮ ಬ್ಲಾಗ್ ‘ಪ್ರಕಾಶ್ ಶೆಟ್ಟಿ ಪಂಚ್’ನಲ್ಲಿ ಹೇಳಿಕೊಂಡಿದ್ದಾರೆ. ಜತೆಯಲ್ಲಿ ನನ್ನ ಕ್ಯಾರಿಕೇಚರ್ ಕೂಡ ಕಳುಹಿಸಿದ್ದಾರೆ.)