ಸೌದಿಯಲ್ಲಿ ನಿಜಕ್ಕೂ ಭಾರ ತೀಯರಿಗೆ ಅದರಲ್ಲೂ ನೆರೆಯ ರಾಜ್ಯವಾದ ಕೇರಳ ಹಾಗೂ ಕರಾವಳಿಯ ಮಂದಿಗೆ ತೊಂದರೆಯಾಗಿದೆಯಾ..? ಇಲ್ಲಿಂದ ಹಣ ಗಳಿಸಲು ಹೋದವರು ಅಲ್ಲಿ ಹೇಗೆ ಬದುಕುತ್ತಿದ್ದಾರೆ... ನಿತಾಕತ್ ಕಾನೂನಿನಿಂದ ಏನೆಲ್ಲ ಆಗಿದೆ ಎನ್ನುವ ವರದಿ ಇಲ್ಲಿದೆ...
"
ಸ್ಟೀವನ್ ರೇಗೊ, ದಾರಂದಕುಕ್ಕು.

ಗಲ್ಫ್ ಎನ್ನುವ ಒಂದು ಪದವನ್ನು ನೆಚ್ಚಿಕೊಂಡಿರುವ ಅದೆಷ್ಟೋ ಕುಟುಂಬಗಳು ನಮ್ಮ ಕರಾವಳಿ ಮತ್ತು ನೆರೆಯ ಕೇರಳ ರಾಜ್ಯದಲ್ಲಿವೆ. ಕನಸಿನ ಗುಚ್ಛವನ್ನು ತೆಗೆದುಕೊಂಡು "ಮಾನ ಹತ್ತಿದವರು ಅದೆಷ್ಟೋ ಜನ . ಮನೆಯ ಸಾಲ ,ತಂಗಿಯ ಮದುವೆ, ತಮ್ಮನ "ದ್ಯಾಬ್ಯಾಸ "ಗೆ ಹಲವು ಸಮಸ್ಯೆ ಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಹೊರಟ ಲಕ್ಷಾಂತರ ಜನ ನಮ್ಮ ಕಣ್ಣ ಮುಂದೆ ಇದ್ದಾರೆ . ಕೆಲವರಿಗೆ ಗಲ್ಫ್ ಸ್ವರ್ಗವಾದರೆ ಇನ್ನು ಕೆಲವರಿಗೆ ನರಕ ದ ದಾರಿಯನ್ನು ತೋರಿಸಿದೆ .
ಪ್ರಸ್ತುತ ಸೌದಿ ಅರೇಬಿಯದಲ್ಲಿ ಬಂದಿರುವ ನಿತಾಕಾತ್ ( ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಸ್ವದೇಶೀಕರಣ ) ಕಾನೂನಿನ ಬಗ್ಗೆ ಕರಾವಳಿಯ ಜನರಿಗೆ ಬಹಳಷ್ಟು ಗೊಂದಲಗಳಿವೆ.
ಗಲ್ಫ್ ಕನಸು ಹೊತ್ತು ಹೊರಡುವ ಅನೇಕರ ಮನಸ್ಸಿಗೆ ನಿತಾಕಾತ್ ಕಾನೂನು ಕಣ್ಣ ಮುಂದೆ ಬರುವುದು ಸುಳ್ಳಲ್ಲ . ಆದರೆ ಈ ನಿತಾಕತ್ ಕಾನೂನು ಏನು ಅನ್ನೋದನ್ನ ಸರಿಯಾಗಿ ಅರ್ಥುಸಿಕೊಂಡರೆ ಸೌದಿ ಸರಕಾರ ಮಾಡಿರುವ ಈ ಕಾನೂನು ಸರಿ ಎಂದೆನಿಸುತ್ತದೆ . ಸೌದಿಯಲ್ಲಿ ಅದೆಷ್ಟೋ ಜನ ಹಲವು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದು ಸೌದಿ ಸರಕಾರಕ್ಕೆ ದೊಡ್ಡ ತಲೆನೋವಾಗಿತ್ತು.
ಅದರಲ್ಲೂ ಇತಿಯೋಪಿಯಾ, ನೈಜಿರಿಯಾದ ಜನ ಅಕ್ರಮವಾಗಿ ಸೌದಿ ಯಲ್ಲಿ ನೆಲೆಸಿದ್ದರು . ಹೊಸ ಕಾನೂನಿನ ಪ್ರಕಾರ ಅಕ್ರಮವಾಗಿ ನೆಲೆಸಿರುವ ಕಾ"ಕರು ತಮ್ಮ ಕೆಲಸವನ್ನ ಹಾಗೂ ಸೌದಿಯಲ್ಲಿ ತನ್ನ ಇರು"ಕೆಯನ್ನು ಸಕ್ರಮ ಗೊಳಿಸುವಂತೆ ಸೌದಿ ಸರಕಾರ ಸೂಚಿಸಿತ್ತು. ಅದಕ್ಕಾಗಿ ಬಹಳಷ್ಟು ಕಾಲಾವಕಾಶಗಳನ್ನು ನೀಡಿತ್ತು ಅನೇಕ ಮಂದಿ ಅದರ ಸದುಪಯೋಗ ಪಡೆದುಕೊಂಡು ತಮ್ಮ ಕೆಲಸವನ್ನು ಹಾಗೂ ಸೌದಿಯಲ್ಲಿ ನೆಲೆಸಲು ಕಾನೂನು ಪ್ರಕಾರ ಏನೆಲ್ಲಾ ಬೇಕು ಅದನ್ನೆಲ್ಲ ಸರಿ ಪಡಿಸಿಕೊಂಡಿದ್ದರು . ಸೌದಿ ಸರಕಾರ ಸುಮಾರು ೯ ತಿಂಗಳು ಕಾಲಾವಕಾಶ ನೀಡಿತ್ತು. ಆ ಅವಧಿ ನವೆಂಬರ್ ೪ಕ್ಕೆ ಕೊನೆಗೊಂಡಿದ್ದು, ಅದರ ನಂತರ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ಬಂಧಿಸಿ ಶಿಕ್ಷೆ ನೀಡಲು ಸೌದಿ ಸರಕಾರ ಮುಂದಾಗಿದೆ .
ಭಾರತೀಯರ ಬಗ್ಗೆ ಮೃದು ಧೋರಣೆ:
ಭಾರತೀಯರ ಬಗ್ಗೆ ಮೃದು ಧೋರಣೆ - ಸೌದಿ ಸರಕಾರದ ಟಾರ್ಗೆಟ್ ನೇರವಾಗಿ ಇತಿಯೋಪಿಯಾ ,ನೈಜೀರಿಯಾ, ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಿಯರ ಮೇಲೆ . ಇತಿಯೋಪಿಯಾ ಜನರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ . ಜೊತೆಗೆ ಅಕ್ರಮವಾಗಿ ಇಕಾಮ ಇಲ್ಲದೆ (Sಚಿuಜi ಖe*iಜeಟಿಛಿe Iಆ) ನೆಲೆಸಿರುವ ಯಾವುದೇ ರಾಷ್ಟ್ರದ ಜನರನ್ನ ಹುಡುಕಿ ದೇಶದಿಂದ ಹೊರದಬ್ಬುವ ಕೆಲಸವನ್ನ ಸೌದಿ ಪೊಲೀಸರು ಮಾಡುತ್ತಿದ್ದಾರೆ . ಸೌದಿ ಸರಕಾರ ವೃತ್ತಿಪರ(ಠಿಡಿoಜಿe**ioಟಿಚಿಟ ಛಿhಚಿಟಿg ) ಬದಲಾವಣೆ ಗೆ ಇನ್ನು ಅವಕಾಶ ನೀಡಿದೆ .ಮೊದಲೆಲ್ಲ ಹೇಗಿತ್ತು ಅಂದ್ರೆ ಆತನ ವೃತ್ತಿಪರ(ಠಿಡಿoಜಿe**ioಟಿಚಿಟ )ಒಂದಾದರೆ ಆತ ಕೆಲಸ ಮಾಡುತ್ತಿರುವುದು ಬೇರೆ ಯಾವುದೋ ಅದಕ್ಕೆ ಸೌದಿ ಸರಕಾರದ ಹೊಸ ಕಾನೂನು ಅಂತ್ಯ ಹಾಡಿದೆ. ಇಕಾಮ ದಲ್ಲಿ (Sಚಿuಜi ಖe*iಜeಟಿಛಿe Iಆ) ಯಾವ ವೃತ್ತಿಪರ(ಠಿಡಿoಜಿe**ioಟಿಚಿಟ )ಇದೆಯೋ ಆತ ಅದೇ ಕೆಲಸವನ್ನು ಮಾಡಬೇಕು .
ಸೌದಿ ನಿತಾಕತ್ ಕಾನೂನು ಸೌದಿ ಅರೇಬಿಯಾಕ್ಕೆ ಒಂದು ಗೌರವವನ್ನು ತಂದುಕೊಟ್ಟಿದೆ. ಸೌದಿಯಲ್ಲಿ ಇನ್ನೂ ಒಂದು ವರ್ಷದೊಳಗಡೆ ಕಾನೂನು ಬದ್ಧವಾಗಿ ನೆಲೆಸಿರುವ ಕಾ"ಕರನ್ನು ನೋಡಬಹುದು .
ನಿತಾಕತ್ ಕಾನೂನು ವರ್ಸಸ್ ಕರಾವಳಿ ಮಂದಿ:
ನಿತಾಕತ್ ಕಾನೂನಿನಿಂದಾಗಿ ಸೌದಿಯಲ್ಲಿ ದುಡಿಯುವ ಅನೇಕ ಕರಾವಳಿ ಕುಟುಂಬಗಳಿಗೆ ಹೇಳಿಕೊಳ್ಳುವಂತ ದೊಡ್ಡ ಸಮಸ್ಯೆಗಳು ಉದ್ಭವವಾಗಿಲ್ಲ. ಕಾರಣ ಇಷ್ಟೇ ಕರಾವಳಿಗರು ತಮ್ಮ ಅಕ್ರಮ ವಲಸೆಯನ್ನು ಈಗಾಗಲೇ ಸೌದಿ ಸರಕಾರ ನೀಡಿರುವ ಡೆಡ್‌ಲೈನ್ ಒಳಗಡೆ ಸಕ್ರಮ ಮಾಡಿಕೊಂಡಿದ್ದಾರೆ. ಭಾರತೀಯ ಕುರಿತು ಸೌದಿ ಸರಕಾರಕ್ಕೊಂದು ಮೃದು ಧೋರಣೆ ಈಗಾಗಲೇ ಜಾಗೃತವಾಗಿದೆ. ಈ ಕಾರಣದಿಂದಾಗಿ ಕೇರಳ ಹಾಗೂ ಕರಾವಳಿಂದ ಬಂದವರನ್ನು "ಶೇಷವಾಗಿ ತಪಾಸಣೆ ಮಾಡುವುದನ್ನು ಸೌದಿ ಸರಕಾರ ಕಡಿಮೆ ಮಾಡುತ್ತಿದೆ.
ಸೌದಿಯ ರಾಜಧಾನಿ ರಿಯಾದ್‌ನಲ್ಲಂತೂ "ಶೇಷವಾಗಿ ಭಾರತೀಯರು ಅದರಲ್ಲೂ ಕೇರಳಿಗರಿಂದ ಹಾಗೂ ಕರಾವಳಿಗರಿಂದ ತುಂಬಿ ಹೋಗಿದೆ. ಇಲ್ಲಿನ ಪ್ರತಿಯೊಂದು ದುಕೂನುಗಳಲ್ಲಿ ಕಣ್ಣಿಟ್ಟುಕೊಂಡು ನೋಡಿದರೂ ಅಲ್ಲಿ ಭಾರತೀಯನೊಬ್ಬ ಕಾಣ ಸಿಗುತ್ತಾನೆ. ತನ್ನ ಪಾಡಿಗೆ ದುಡಿದು ಊರಿನಲ್ಲಿರುವ ತನ್ನ ಕುಟುಂಬವನ್ನು ನೆಮ್ಮದಿಯ ಬದುಕು ಕೊಡುವತ್ತಾ ಗಮನ ಇಟ್ಟುಕೊಂಡಿರುವ ಇವರು ಪ್ರಾಮಾಣಿಕತೆಯ ಬದುಕು ಕಚ್ಚಿಕೊಂಡವರು.
ಆದರೆ ನೈಜೀರಿಯಾ ಸೇರಿದಂತೆ "ಶ್ವದ ಗರೀಬೀ ರಾಷ್ಟ್ರಗಳಲ್ಲಿರುವ ಮಂದಿ ದರೋಡೆ, ಸುಲಿಗೆ "ಗೆ ನಾನಾ ಅಕ್ರಮಗಳಲ್ಲಿ ತೊಡಗಿರುವುದರಿಂದ ಸೌದಿ ರಾಷ್ಟ್ರಕ್ಕೆ ಇವರನ್ನು "ಡಿದಿಟ್ಟುಕೊಳ್ಳುವುದು ಒಂದು ದೊಡ್ಡ ತಲೆ ನೋವಾಗಿತ್ತು. ಇದೇ ಕಾರಣದಿಂದ ನಿತಾಕತ್ ಕಾನೂನು ತರುವ ಮೂಲಕ ಅವರನ್ನು ದೇಶದಿಂದ ಹೊರ ಹಾಕುವ ಕೆಲಸ ನಡೆಯುತ್ತಿದೆ ಎನ್ನೋದು ಸೌದಿಯಲ್ಲಿ ದುಡಿಯುತ್ತಿರುವ ಪುತ್ತೂರು ಮೂಲದ ಪ್ರಶಾಂತ್ "ನೇಜಸ್ ಅವರ ಮಾತು.
ಕಟ್ಟ ಕಡೆಯ ಪ್ರಯತ್ನ:
ನವೆಂಬರ್ ೪ ನಿತಾಕತ್ ಕಾನೂನು ಮೂಲಕ ಅಂತಿಮ ಗಡುವಾಗಿದ್ದರೂ ಕೂಡ ಜನವರಿಯಲ್ಲಿ ಸೌದಿ ಸರಕಾರ "ಶೇಷ ಪರೀಕ್ಷೆಯೊಂದನ್ನು ಕೇವಲ ಶಿಕ್ಷಕರಿಗೆ "ಸಲಿಟ್ಟಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಮತ್ತೆ ಸೌದಿಯಲ್ಲಿ ಉಳಿಯುವ ಅವಕಾಶ ಲಭ್ಯವಾಗುತ್ತದೆ. ಈಗಾಗಲೇ ಸೌದಿಯ ಬಹಳಷ್ಟು ಕಡೆಗಳಲ್ಲಿ ನಡೆಯುವ ಶಿಕ್ಷಣದಲ್ಲಿ ಭಾರತೀಯರು ಅದರಲ್ಲೂ ಕೇರಳ, ಕರಾವಳಿಯ ಶಿಕ್ಷಕಿಯರು ದುಡಿಯುತ್ತಿದ್ದಾರೆ. ಆದರೆ ಅವರು ತಮ್ಮ ಪತಿಯಂದಿರ "ಸಾದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ಕಾರಣದಿಂದ ಅವರನ್ನು ಸೌದಿ ಸರಕಾರದ ಅಧೀನದಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳಿಂದ ಕಿತ್ತು ಹಾಕಲಾಗಿದ್ದು, ಜನವರಿಯಲ್ಲಿ ಪರೀಕ್ಷೆ ಬರೆಯುವ ಮೂಲಕ ಮತ್ತೆ ಸೌದಿಯಲ್ಲಿ ಉಳಿಯುವಂತೆ ಅವಕಾಶವನ್ನು ತೆರೆದಿದೆ ಎನ್ನುತ್ತಾರೆ ಸೌದಿಯಲ್ಲಿ ದುಡಿಯುತ್ತಿರುವ ಮಂಗಳೂರು ಮೂಲದ ಗೀತಾ ಶೆಟ್ಟಿ.
ನಿತಾಕತ್ ಕಾನೂನು "ರುದ್ಧವಾಗಿ ಬದುಕು ಕಟ್ಟುತ್ತಿರುವ ಅಕ್ರಮ ವಲಸಿಗರಿಗೆ ೧೦ ವರ್ಷಗಳ ಕಾಲ ಸೌದಿ ದೇಶಕ್ಕೆ ಮರು ಪ್ರವೇಶ"ಲ್ಲ. ಜತೆಗೆ ೨ ವರ್ಷಗಳ ಕಾಲ ಸೆರೆಮನೆ ಶಿಕ್ಷೆಯನ್ನು "ಧಿಸಲಾಗುತ್ತದೆ. ಬರೀ ನಿತಾಕತ್ ಕಾನೂನು ಮಾತ್ರ ಸೌದಿಯಲ್ಲಿ ಕಟ್ಟು ನಿಟ್ಟಾಗಿ ಇಲ್ಲಿನ ಉಳಿದ ಎಲ್ಲ ಕಾನೂನುಗಳು ತೀರಾ ಕಟ್ಟುನಿಟ್ಟಿನಿಂದ ಕೂಡಿರುತ್ತದೆ ಎನ್ನುತ್ತಾರೆ ರಿಯಾದ್ ಸೆಂಟ್ರಲ್ ಪೊಲೀಸ್ ಅಧಿಕಾರಿ ಶರೀಫ್ ಖಾಲಿದ್ ಮೂಸಾ ಅವರು.
ಕೋಟ್ಸ್........
*"ಸೌದಿ ಅರೇಬಿಯಾದ ಸರಕಾರ ಅಲ್ಲಿನ ನಿರುದ್ಯೋಗಿ ಯುವಜನತೆಯ ಪರವಾಗಿ ನಿಂತು ಯೋಚನೆ ಮಾಡಿರೋದು ಒಳ್ಳೆಯ ಬೆಳವಣಿಗೆ. ಆದರೆ ಬಿಲಿಯನ್ ಸಂಖ್ಯೆಯಲ್ಲಿ ಸೌದಿಯಲ್ಲಿ ದುಡಿಯುತ್ತಿರುವ ಭಾರತೀಯರಿಗಂತೂ ಸಂಕಷ್ಟವೇ ಸರಿ.
-ಪ್ರಶಾಂತ್
ಮೂಲತ ಃ ಪುತ್ತೂರಿನ ಸೇಡಿಯಾಪು"ನವರು. ಈಗ ಸೌದಿಯ ಜಿದ್ದಾದಲ್ಲಿ ಕೆಲಸ ಮಾಡುತ್ತಿದ್ದಾರೆ.
.............
*ಸೌದಿ ಅರೇಬಿಯಾದಲ್ಲಿರುವ ಕಂಪನಿಗಳಲ್ಲಿ ಶೇ.೩೦ರಷ್ಟು ಸೌದಿ ಉದ್ಯೋಗಿಗಳನ್ನು ದುಡಿಸಿಕೊಳ್ಳಬೇಕು ಎನ್ನುವ ನಿಯಮ ಇಟ್ಟುಕೊಂಡಿದೆ. ಈ ಕಾನೂನು ಈ "ಂದೆ ಕೂಡ ಚಾಲ್ತಿಯಲ್ಲಿತ್ತು. ಆದರೆ ಅದರ ಬಳಕೆ ನಡೆದಿರೋದು ಈಗ ಮಾತ್ರ. ಶೇ.೩೦ಕ್ಕಿಂತ ಕಡಿಮೆ ಸೌದಿ ಕೆಲಸಗಾರರನ್ನು ಹೊಂದಿರುವ ಕಂಪನಿಯ ಪರವಾನಿಗಿ ಹಾಗೂ ಮನೆಯ ಪರವಾನಗಿ( ಇಕ್ಮಾ) ರದ್ದು ಮಾಡುವ ಸಾಧ್ಯತೆ ಇದೆ. ಆದರೆ ನನ್ನ ಕಂಪನಿಯಲ್ಲಿ ಈಗಾಗಲೇ ೧೦೦೦ಕ್ಕಿಂತ ಅಧಿಕ ಸೌದಿ ಮ"ಳೆಯರು ಹಾಗೂ ೪೦೦೦ಕ್ಕಿಂತ ಅಧಿಕ ಸೌದಿ ಪುರುಷರು ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಕಂಪನಿಯ ಜತೆಗೆ ನಾವು ಕೂಡ ಸುರಕ್ಷಿತವಾಗಿದ್ದೇವೆ.
-ರ"ಶ್ ಜೈನ್
ಮೂಲತ ಃ ಪುತ್ತೂರು ಕೋಡಿಂಬಾಡಿಯವರು. ಈಗ ಸೌದಿಯಲ್ಲಿ ಮಾಲ್ ಮ್ಯಾನೇಜರ್ ಆಗಿ ದುಡಿಯುತ್ತಿದ್ದಾರೆ.
..............
* ಸೌದಿಯಲ್ಲಿ ಬಹಳಷ್ಟು ಮಂದಿ ಕರಾವಳಿ ಸೇರಿದಂತೆ ಕೇರಳಿಗರ ಸಂಖ್ಯೆ ಜಾಸ್ತಿ ಇದೆ. ಕೇರಳದಲ್ಲಿ ಸೌದಿಂದ ಬಂದವರೇ ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆ. ಸೌದಿಯ ಹಣ ಇಲ್ಲದೇ ಕೇರಳವೇ ಸುಮ್ಮನೆ ಎನ್ನುವ ಸ್ಥಿತಿ ಇದೆ. ಇಂತಹ ಸಮಯದಲ್ಲಿ ಸೌದಿಯ ಈ ಕಾನೂನು ಭಾರತದ ಅದರಲ್ಲೂ ಕೇರಳವನ್ನು ಅಲುಗಾಡಿಸಿ ಬಿಡುವುದರಲ್ಲಿ ಯಾವುದೇ ಸಂದೇಹ ಇಲ್ಲ. ಸೌದಿಯ ಯುವಜನತೆ ಶಿಕ್ಷಿತರಾಗಿದ್ದರೂ ಕೂಡ ನಿರುದ್ಯೋಗಿಗಳಾಗಿದ್ದಾರೆ. ಈ ಕಾನೂನು ಸೌದಿಯ ಪ್ರಕಾರ ಸರಿಯಾಗಿದೆ.
- ನಿತಿನ್ ರೈ ಕುಕ್ಕುವಳ್ಳಿ
ಪುತ್ತೂರು ಕುಕ್ಕುವಳ್ಳಿ ನಿವಾಸಿ. ಪ್ರಸ್ತುತ ಸೌದಿಯಲ್ಲಿ ದುಡಿಯುತ್ತಿದ್ದಾರೆ.
..............
ಸೌದಿಯಲ್ಲಿ ಕರ್ನಾಟಕದವರು ಸುರಕ್ಷಿತ
ಸೌದಿ ಅರೇಬಿಯಾದಲ್ಲಿರುವ ಹೊಸ ಉದ್ಯೋಗ ನೀತಿಂದ ಕರ್ನಾಟಕದ ಜನ ದಿಗಿಲು ಬೀಳಬೇಕಾದ ಅಗತ್ಯ"ಲ್ಲ. ಯಾಕೆಂದರೆ ಇತರ ವಲಸಿಗರಿಗೆ ಹೋಲಿಸಿದರೆ ಕರ್ನಾಟಕ ನೌಕರರು ಹೆಚ್ಚು ಪರಿಶ್ರ"ಗಳು, ಪ್ರಾಮಾಣಿಕರು ಮತ್ತು ಪರಿಣಿತರು. ಅಕ್ರಮ ವಲಸಿಗರ ಪಟ್ಟಿಯಲ್ಲಿ ಅಥವಾ ಸೌದಿ ಜೈಲುಗಳಲ್ಲಿ ಇದುವರೆಗೆ ರಾಜ್ಯದ ಯಾವುದೇ ಕಾ"ಕರ ಹೆಸರು ಕಂಡು ಬಂದಿಲ್ಲ.
ಸೌದಿಯ ಹೊಸ ಕಾನೂನಿನಿಂದ ಅಕ್ರಮ ಪ್ರವೇಶಿಸುವವರಿಗೆ ಮಾತ್ರ ತೊಂದರೆ. ಕಾನೂನುಬದ್ಧವಾದ ಅಧಿಕೃತ ದಾಖಲೆ ಪತ್ರಗಳೊಂದಿಗೆ ಹೋಗುವವರಿಗೆ ಏನೂ ತೊಂದರೆಲ್ಲ. ಯಾವುದೇ "ಸಾ ದೊರೆತರೂ ಅದರ ಪ್ರತಿಯನ್ನು ರಾಯಭಾರಿ ಕಚೇರಿಗೆ ಮುಂಚಿತವಾಗಿ ಕಳು"ಸಿ ಸತ್ಯಾಸತ್ಯತೆ ಪರಿಶೀಲಿಸಿಕೊಂಡರೆ ಯಾರಿಗೂ ಅಪಾಯ"ರುವುದಿಲ್ಲ. ಜಿಲ್ಲಾಡಳಿತೆಗಳು ಪಾಸ್‌ಪೋರ್ಟ್ ಮೇಲೆ ನಿಗಾ ಇರಿಸುವಂತೆ "ಸಾ ಏಜೆಂಟರನ್ನು ಕಾನೂನಿನ "ಡಿತಕ್ಕೆ ತರಬೇಕು. ಸೌದಿಯಲ್ಲಿ ಅಕ್ರಮ ವಲಸಿಗರ ಪ್ರಮಾಣ ಶೇ.೫ರ‍್ಟದೆ ಎಂದು ಗುರುತಿಸಲಾಗಿದೆ. ಇದುವರೆಗೆ ಪತ್ತೆಯಾದ ಶೇ.ಒಂದರಷ್ಟು ಮಾತ್ರ. ಇದರಲ್ಲಿ ಕರ್ನಾಟಕದವರಾರೂ ಇಲ್ಲ. ಸೆರೆ ಸಿಕ್ಕುವ ವಲಸಿಗರ ರಾಜ್ಯದ ಬಗ್ಗೆ ತಿಳಕೊಂಡು ರಾಯಭಾರ ಕಚೇರಿ ಆಯಾಯ ರಾಜ್ಯಕ್ಕೆ ಮಾ"ತಿ ಕಳು"ಸುತ್ತಿದೆ.
........................
( vijyanext 29.11.2013 my lead article)