Monday, September 24, 2012

ಪ್ರೇಕ್ಷಕರ ಮನಕರಗಿಸಿದ ಬರ್ಫಿ !

ಬರ್ಫಿ ಬಾಲಿವುಡ್ ನ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ಎರಡರಲ್ಲೂ ಗೆದ್ದುಕೊಂಡು ಬಂದಿದೆ. ರಣಬೀರ್ ಕಪೂರ್-ಪ್ರಿಯಾಂಕಾ ಚೋಪ್ರಾ-ಇಲಿಯಾನ ಡಿ ಕ್ರೂಝ್ ನಟನೆಯಿಂದ ಬರ್ಫಿ ಪ್ರೇಕ್ಷಕನ ಭರವಸೆಯನ್ನು ಹುಸಿ ಮಾಡಿಲ್ಲ ಎನ್ನುವುದು ಚಿತ್ರ ಬಿಡುಗಡೆಯ ನಂತರ ಕೇಳಿ ಬರುತ್ತಿರುವ ಒಳ್ಳೆಯ ಮಾತು. * ಸ್ಟೀವನ್ ರೇಗೊ
ಆಸ್ಕರ್ ಪ್ರಶಸ್ತಿ ಪ್ರತಿಯೊಬ್ಬ ನಿರ್ದೇಶಕನ ಕನಸ್ಸಿನ ಕೂಸು. ತಾನು ನಿರ್ದೇಶನ ಮಾಡಿದ ಎಲ್ಲ ಚಿತ್ರಗಳು ಕೂಡ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ನಾಮಕಿಂತಗೊಳ್ಳಬೇಕು ಎನ್ನೋದು ನಿರ್ದೇಶಕನ ಬದುಕಿನ ತುಂಬಾ ಚಡಪಡಿಕೆ. ಆದರೆ ದುರಾದೃಷ್ಟವೆಂದರೆ ಎಲ್ಲ ಚಿತ್ರಗಳು ಈ ಪಾಟಿಗೆ ಸಕ್ಸಸ್ ಕಾಣೋದಿಲ್ಲ. ಅದಕ್ಕೂ ಮುಖ್ಯವಾಗಿ ಆಸ್ಕರ್ ಪಟ್ಟಿಯೊಳಗೆ ಸೇರಿಕೊಳ್ಳುವ ಮಾತು ಕೂಡ ಬಹಳ ಕಷ್ಟ. ಅದರಲ್ಲೂ ಭಾರತೀಯ ಚಿತ್ರರಂಗದಲ್ಲಂತೂ ಎಲ್ಲರೂ ಒಪ್ಪಿಕೊಳ್ಳಬೇಕಾದ ಒರಿಜಿನಾಲಿಟಿ ಮಾತು. ಇದೇ ಆಸ್ಕರ್ ಪಟ್ಟಿಯಲ್ಲಿ ಬಾಲಿವುಡ್ ನ ಬರ್ಫಿ ಚಿತ್ರ ಸೇರಿಕೊಂಡಿದೆ. ಭಾರತೀಯ ಚಿತ್ರರಂಗದ ಹತ್ತಾರು ಚಿತ್ರಗಳು ಬಾಲಿವುಡ್ ನ ವಿದ್ಯಾ ಬಾಲನ್ ನಟಿಸಿದ ‘ಕಹಾನಿ’, ‘ಡರ್ಟಿ ಪಿಕ್ಚರ್’ ಜತೆಗೆ ಸುದೀಪ್ ನಟನೆಯ ‘ಈಗ’, ತಮಿಳಿನ ‘ಏಳಾಂ ಅರಿವು’ ಮತ್ತು ‘ವಳಕ್ಕು ಎನ್ನ’ ಚಿತ್ರಗಳು ಆಸ್ಕರ್ ಪಟ್ಟಿಯಲ್ಲಿ ನಾಮಕಿಂತಗೊಂಡಿದೆ. ಆದರೆ ತಂತ್ರಜ್ಞಾನ, ಕತೆ, ನಟನೆ ಎಲ್ಲವೂ ಲೆಕ್ಕಚಾರ ಮಾಡಿಕೊಂಡು ಫಿಲ್ಮಾ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್ ಐ) ಆಸ್ಕರ್ ಗಾಗಿ ಚಿತ್ರಗಳನ್ನು ಆಯ್ಕೆ ಮಾಡುತ್ತದೆ. ಈ ಎಲ್ಲ ವಿಚಾರಗಳನ್ನು ಸೈಡ್‌ಗೆ ಇಟ್ಟುಕೊಂಡರೂ ಕೂಡ ಬರ್ಫಿ ಬಾಲಿವುಡ್ ನ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ಎರಡರಲ್ಲೂ ಗೆದ್ದುಕೊಂಡು ಬಂದಿದೆ. ರಣಬೀರ್ ಕಪೂರ್-ಪ್ರಿಯಾಂಕಾ ಚೋಪ್ರಾ-ಇಲಿಯಾನ ಡಿ ಕ್ರೂಝ್ ನಟನೆಯಿಂದ ಬರ್ಫಿ ಪ್ರೇಕ್ಷಕನ ಭರವಸೆಯನ್ನು ಹುಸಿ ಮಾಡಿಲ್ಲ ಎನ್ನುವುದು ಚಿತ್ರ ಬಿಡುಗಡೆಯ ನಂತರ ಕೇಳಿ ಬರುತ್ತಿರುವ ಒಳ್ಳೆಯ ಮಾತು. ಚಿತ್ರ ಯಾಕೆ ನೋಡಬೇಕು: ಬಾಲಿವುಡ್ ಪ್ರತಿಭಾವಂತ ನಿರ್ದೇಶಕ ಅನುರಾಗ್ ಬಸು ಬರ್ಫಿ ಚಿತ್ರ ತಯಾರಿಸುವ ಹೊತ್ತಿನಲ್ಲೇ ವಿಚಿತ್ರ ಪ್ರೋಮೋಗಳ ಮೂಲಕ ಸುದ್ದಿಯಾಗಿತ್ತು. ಚಿತ್ರದಲ್ಲಿರುವ ವಿಶಿಷ್ಟ ಕತೆ, ನಟನೆ ಜತೆಗೆ ಮುದನೀಡುವ ಹಾಡುಗಳಿಂದ ಬರ್ಫಿ ಚಿತ್ರ ಓಡಿದೆ ಎನ್ನೋದು ಎಲ್ಲರೂ ಹೇಳಿಕೊಂಡು ತಿರುಗಾಡುವ ಮಾತು. ಆದರೆ ಒರಿಜಿನಾಲಿಟಿಯಾಗಿ ಹೇಳುವುದಾದರೆ ಬರ್ಫಿ ಸೂಪರ್ ಚಿತ್ರ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿರುವ ಕಿವುಡ, ಮೂಗ ಹುಡುಗನ ಕತೆಯೇ ಚಿತ್ರದ ತುಂಬಾ ಓಡಾಡುತ್ತದೆ. ಈ ಪಾತ್ರವನ್ನು ರಣಬೀರ್ ಕಪೂರ್ ಮಾಡಿದ್ದಾರೆ. ಇಬ್ಬರು ನಾಯಕಿಯಲ್ಲಿ ಪ್ರಿಯಾಂಕಾ ಹಾಗೂ ಇಲಿಯಾನಾ ಪಾತ್ರ ವರ್ಗಕ್ಕೆ ಪ್ರಾಣ ತುಂಬಿದ್ದಾರೆ. ಸಮಾಜದಲ್ಲಿರುವ ಭಿನ್ನರ ಬದುಕಿನಲ್ಲಿ ಪಾಸಿಟಿವ್ ಆಶಾಕಿರಣ ಮೂಡಿಸುವ ಚಿತ್ರವಾಗಿರುವುದರಿಂದ ಬಿಡುಗಡೆಯ ಮೊದಲೇ ಗೆಲ್ಲುವ ಸೂಚನೆ ಬರ್ಫಿಯಲ್ಲಿತ್ತು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ರಣಬೀರ್ ನಂತರ ಇಬ್ಬರು ಹುಡುಗಿಯರನ್ನು ಭೇಟಿಯಾಗುವ ಸನ್ನಿವೇಶದಿಂದಲೇ ಚಿತ್ರ ಆರಂಭ ಸಾಗುತ್ತದೆ. ಎರಡು ಹಂತದಲ್ಲಿ ಸಾಗುವ ಬರ್ಫಿ ಇಂಗ್ಲೀಷ್ ಚಿತ್ರದಿಂದ ಪ್ರೇರಿತವಾಗಿದೆ ಎನ್ನೋದು ಸುಳ್ಳಲ್ಲ. ಮಸಾಲೆ, ಪ್ರೇಮ ಸಲ್ಲಾಪಗಳ ಚಿತ್ರಗಳಿಂದ ರೋಸಿ ಹೋದ ಚಿತ್ರ ಪ್ರೇಕ್ಷಕರಂತೂ ಬರ್ಫಿಯಲ್ಲಿ ಭಿನ್ನ ಶೈಲಿಯ ಕತೆ, ನಟರ ನಟನೆಯಿಂದ ಕಡ್ಡಾಯವಾಗಿ ಚಿತ್ರ ನೋಡಬೇಕು ಎನ್ನಿಸಿಬಿಡುತ್ತದೆ. ವಿಚಿತ್ರ ಪರಿಸ್ಥಿತಿಯಲ್ಲಿ ಬೆಳಯುವ ಪ್ರಿಯಾಂಕಾ ಚೋಪ್ರಾರನ್ನು ತನ್ನ ಮಗಳೆಂದು ಒಪ್ಪಿಕೊಳ್ಳಲು ರೆಡಿ ಇಲ್ಲದ ಹೆತ್ತವರು, ರಣಬೀರ್‌ನ ಮುದ್ದು ಮುದ್ದು ನಟನೆ, ಇಲಿಯಾನಾರ ಮತ್ತೇ ಮತ್ತೇ ನೋಡುವಂತೆ ಮಾಡುವ ಪಾತ್ರ ಎಲ್ಲವೂ ಚಿತ್ರದ ಪ್ಲಸ್ ಪಾಯಿಂಟ್‌ಗಳು. ಮಾತಿಲ್ಲದ ಕತೆಯಿಲ್ಲದ ಬರೀ ಆಂಗಿಕ ಭಾಷೆಯಿಂದಲೇ ಓಡುವ ಬರ್ಫಿ ಚಿತ್ರಕ್ಕಂತೂ ಸಧ್ಯದ ಮಾರುಕಟ್ಟೆಯಲ್ಲಿ ಸಖತ್ ಭವಿಷ್ಯವಂತೂ ಇದ್ದೇ ಇದೆ ಎನ್ನುವುದು ಪ್ರೇಕ್ಷಕ ವರ್ಗದ ಮಾತು. ಯೂಟಿವಿ ಮೋಶನ್ ಪಿಕ್ಚರ್ ಬ್ಯಾನರ್ ನಲ್ಲಿ ಸಿದ್ಧಾರ್ಥ ರಾಯ್ ಕಪೂರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸೋತು ನಂತರ ಮತ್ತೇ ಬದ್ದು ಬರಲು ಪ್ರಯತ್ನ ಪಟ್ಟ ಅನುರಾಗ್ ಬಸು ಹೊಸ ಪ್ರಯತ್ನ ಎಲ್ಲರಿಗೂ ಹಿಡಿಸಿದೆ ಎನ್ನುವುದರ ಪುರಾವೆ ಬರ್ಫಿ ಚಿತ್ರ ಓಡುತ್ತಿರುವ ಓಟವೇ ಸಾಕ್ಷಿ ನೀಡುತ್ತದೆ. ಬರ್ಫಿ ಕಲೆಕ್ಷನ್‌ನಲ್ಲೂ ಸೂಪರ್: ರೊಮ್ಯಾಂಟಿಕ್, ಕಾಮಿಡಿ ಬೇಸ್ಡ್ ಮೇಲೆ ನಿರೂಪಿತರಾದ ಬರ್ಫಿ ಚಿತ್ರ ಬಿಡುಗಡೆಯಾದ ಪ್ರಥಮ ವಾರಾಂತ್ಯಕ್ಕೆ ೩೪.೬ ಕೋಟಿ ರೂ. ಬಾಚಿಕೊಂಡಿದೆ. ಚಿತ್ರವನ್ನು ೩೦ ಕೋಟಿ ರೂ. ಬಜೆಟ್ ನಲ್ಲಿ ತಯಾರಿಸಲಾಗಿತ್ತು. ಚಿತ್ರ ಬಿಡುಗಡೆಯ ಮೊದಲ ದಿನವೇ ೯.೨೦ ಕೋಟಿ ರೂ., ಎರಡನೇ ದಿನ ೧೧.೫೦ ಕೋಟಿ ರೂ., ೩ನೇ ದಿನ ೧೩.೫ ಕೋಟಿ ರೂ. ಸಂಪಾದಿಸಿದೆ. ಚಿತ್ರ ಭಾರತದಲ್ಲಿನ ಸುಮಾರು ೧೩೦೦ ಸಿನೆಮಾ ಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ದೊಡ್ಡ ಚಿತ್ರಗಳಿಗೆ ಹೋಲಿಸಿದರೆ ಇದು ಕಡಿಮೆ ಸಂಖ್ಯೆಯ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬರ್ಫಿಗೆ ದೊರಕಿರುವ ಪ್ರತಿಕ್ರಿಯೆ ಅದ್ಭುತವಾಗಿದೆ ಎನ್ನುವುದು ನಿರ್ಮಾಪಕ ಸಿದ್ಧಾರ್ಥ ರಾಯ್ ಕಪೂರ್ ಹೇಳುತ್ತಾರೆ. ಚಿತ್ರವನ್ನು ಇತರ ಚಿತ್ರಗಳಿಗಿಂತ ಭಿನ್ನವಾಗಿ ರೂಪಿಸಲು ಸಂಗೀತ ನಿರ್ದೇಶಕ ಪ್ರೀತಮ್ ಸಾಕಷ್ಟು ಕೆಲಸ ಮಾಡಿದ್ದಾರೆ. ಖುದ್ದು ಹಾಡಲು ಬರೋದಿಲ್ಲ ಎಂದು ಕೂರುವ ರಣಬೀರ್‌ನನ್ನು ಹಾಡಿಸಿದ ಪಾಟಿಪಟಿ ಹಾಡು ಈಗಾಗಲೇ ಯೂಟ್ಯೂಬ್ ಪ್ರೇಕ್ಷಕರನ್ನು ಮೋಡಿ ಮಾಡಿದೆ.

No comments:

Post a Comment