Monday, March 24, 2014

ಕೊಚಾಡಿಯನ್‌ನಲ್ಲಿ ‘ಮಂಗಳೂರು’ ಸ್ಟೋರಿ ! exclusive in regobalcony

* ಸ್ಟೀವನ್ ರೇಗೊ, ದಾರಂದಕುಕ್ಕು ‘ಕೊಚಾಡಿಯನ್’ ಈಗ ಭಾರತೀಯ ಸಿನಿಮಾರಂಗವೇ ಎದುರು ನೋಡುತ್ತಿದೆ. ಈ ಚಿತ್ರದ ಉದ್ದಕ್ಕೂ ೩ಡಿಯನ್ನು ಆಳವಡಿಸಿಕೊಂಡಿರುವ ಕಾರಣ ಭಾರತೀಯ ಚಿತ್ರರಂಗದಲ್ಲಿಯೇ ಇದೊಂದು ವಿಶಿಷ್ಟ ಪ್ರಯೋಗ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯುವುದಿಲ್ಲ. ಅದಕ್ಕೂ ಮಿಗಿಲಾಗಿ ಚಿತ್ರರಂಗದ ಸೂಪರ್‌ಸ್ಟಾರ್ ರಜನೀಕಾಂತ್ ಇಂತಹ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಇದೇ ಮೊದಲ ಸಲವಾಗಿರುವ ಕಾರಣ ನಿರೀಕ್ಷೆಯ ಪೊಟ್ಟಣ ಬಿಚ್ಚಿಕೊಂಡಿದೆ. ಅಂದಹಾಗೆ ‘ಕೊಚಾಡಿಯನ್’ ಸಿನಿಮಾ
ವೇ ಒಂದು ಐತಿಹಾಸಿಕ ಸ್ಟೋರಿ ಲೈನ್ ಸಿನಿಮಾ. ಇದರ ಆರಂಭ ತಮಿಳುನಾಡಿನ ಪಾಂಡ್ಯ ದೊರೆಯಾದ ಕೊಚಾಡಿಯನ್ ರಣಧೀರನ್ ಎಂಬವನಿಂದ ಚಿತ್ರದ ಕತೆ ಶುರುವಾಗುತ್ತದೆ. ಈತ ತಮಿಳುನಾಡಿನಲ್ಲಿ ಆಳ್ವಿಕೆ ನಡೆಸುತ್ತಾ ಕೇರಳ ಹಾಗೂ ತಂಜವೂರು ಪ್ರದೇಶಗಳಲ್ಲಿ ಆಳ್ವಿಕೆ ನಡೆಸಿಕೊಂಡು ಬರುತ್ತಿದ್ದ ಚೇರ ಹಾಗೂ ಚೋಳ ರಾಜಮನೆತನ ರಾಜರನ್ನು ಗೆದ್ದುಕೊಂಡು ಮೆರೆದಾಡುತ್ತಿದ್ದ. ಅದರಲ್ಲೂ ಪಾಂಡ್ಯ ರಾಜಮನೆತನ ರಣಧೀರನ್ ಸಮಯದಲ್ಲಿ ಉತ್ತುಂಗಕ್ಕೆ ತಲುಪಿತ್ತು. ಇಂತಹ ಒಂದು ರಾಜಮನೆತನದ ದೊರೆ ರಣಧೀರನ್ ಕತೆಯೇ ‘ಕೊಚಾಡಿಯನ್’ ಚಿತ್ರಕ್ಕೆ ಮೂಲ ಬಂಡವಾಳ ಎನ್ನಲಾಗುತ್ತಿದೆ. ಆದರೆ ಈ ಕುರಿತು ರಜನೀಕಾಂತ್ ಪುತ್ರಿ ನಿರ್ದೇಶಕಿ ಸೌಂದರ್ಯ, ಚಿತ್ರದ ಕತೆಗಾರ ಕೆ.ಎಸ್.ರವಿಕುಮಾರ್ ರಣಧೀರನ್ ಕತೆಗೂ ಚಿತ್ರದ ಕತೆಗೂ ಸಂಬಂಧವಿಲ್ಲ. ಆದರೆ ಚಿತ್ರದ ಓಟದಲ್ಲಿ ಪಾಂಡ್ಯ ಮನೆತನದ ವಿಷ್ಯಾವಂತೂ ಬಂದು ಹೋಗುತ್ತದೆ ಎಂದು ಈ ಹಿಂದೆ ತಮಿಳುನಾಡಿನಲ್ಲಿ ಚಿತ್ರದ ಕುರಿತಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಕೊಚಾಡಿಯನ್‌ನಲ್ಲಿ ಮಂಗಳಪುರಂ: ‘ಕೊಚಾಡಿಯನ್’ ಸಿನಿಮಾದಲ್ಲಿ ‘ಮಂಗಳಪುರಂ’ ಎಂದರೆ ಈಗೀನ ಮಂಗಳೂರಿನ ಕತೆ ಅಡಕವಾಗಿದೆ. ಮಂಗಳೂರು ಪಟ್ಟಣವನ್ನು ಈ ಹಿಂದೆ ಮಂಗಳಪುರಂ ಎಂದೇ ಕರೆಯಲಾಗುತ್ತಿತ್ತು.‘ಮಂಗಳಪುರಂ’ ಎನ್ನುವ ಹೆಸರನ್ನು ಕೂಡ ಪಾಂಡ್ಯ ದೊರೆಯಾದ ಚೆಟ್ಟಯೇನ್ ಇಟ್ಟಿದ್ದರು. ಇದೇ ನಗರವನ್ನು ಮುಖ್ಯ ಪಟ್ಟಣವಾಗಿ ಪಾಂಡ್ಯ ಮನೆತನದ ಅಧೀನದಲ್ಲಿ ಉಳಿದಿತ್ತು. ಇವನ ನಂತರ ಬಂದ ಪಾಂಡ್ಯ ದೊರೆಗಳು ಕೂಡ ‘ಮಂಗಳಪುರಂ’ವನ್ನು ಮುಖ್ಯ ಪಟ್ಟಣವಾಗಿ ಇಟ್ಟುಕೊಂಡೇ ಆಳ್ವಿಕೆ ನಡೆಸಿದರು. ಕೊಂಚಾಡಿಯನ್ ರಣಧೀರನ್‌ಗೂ ಈ ಪಟ್ಟಣ ಅತೀಯಾಗಿ ಇಷ್ಟವಾಯಿತು.ಬಹುತೇಕ ಸಮಯವನ್ನು ‘ಮಂಗಳಪುರಂ’ನಲ್ಲಿಯೇ ಕಳೆಯುತ್ತಿದ್ದ ಎಂದು ಇತಿಹಾಸದ ಪುಟಗಳು ಹೇಳುತ್ತಿದೆ. ಕೊಚಾಡಿಯನ್ ಸಿನಿಮಾದ ಆರಂಭದ ದೃಶ್ಯಗಳು ಕೂಡ ‘ಮಂಗಳಪುರಂ’ನಿಂದಲೇ ಆರಂಭವಾಗುತ್ತದೆ ಎನ್ನುವ ಚಿತ್ರತಂಡದ ಮಾತು. ಅದಕ್ಕೂ ಮುಖ್ಯವಾಗಿ ಮಂಗಳಪುರಂ ಉಳಿವಿನ ಹೋರಾಟದಲ್ಲಿ ಕೊಚಾಡಿಯನ್ ರಣಧೀರನ್ ತೋರಿಸುವ ಸಾಮರ್ಥ್ಯ ಕೂಡ ಮಂಗಳೂರು ಕತೆಯ ಮಹತ್ವವನ್ನು ಚಿತ್ರದಲ್ಲಿ ಒತ್ತಿ ಹೇಳುತ್ತಿದೆ. ಟೋಟಲಿ ಭಾರತೀಯ ಚಿತ್ರರಂಗದಲ್ಲಿಯೇ ವಿಭಿನ್ನ ೩ಡಿ ಹಾಗೂ ಖರ್ಚುವೆಚ್ಚದ ದೃಷ್ಟಿಯಿಂದ ಕೊಚಾಡಿಯನ್ ಸಿನಿಮಾವಂತೂ ಶುರುವಾಗುವ ಹಂತದಿಂದ ಹಿಡಿದು ಕೊನೆಗೆ ಥಿಯೇಟರ್‌ನ ಬಾಗಿಲು ಬಡಿಯುವ ತನಕನೂ ಒಂದಲ್ಲ ಒಂದು ರೀತಿಯಲ್ಲಿ ಪ್ರಚಾರಗಿಟ್ಟಿಸಿಕೊಳ್ಳುತ್ತಿದೆ. ಅದಕ್ಕೂ ಮುಖ್ಯವಾಗಿ ರಜನೀಕಾಂತ್ ಅಭಿಮಾನಿಗಳಲ್ಲೂ ಚಿತ್ರದ ಕುರಿತು ಹವಾವೊಂದು ಸೃಷ್ಟಿಯಾಗಿದೆ.

No comments:

Post a Comment