Tuesday, September 25, 2012

ಬಾಲಿವುಡ್ ಹೀರೋಯಿನ್ ಸೂಪರ್ ಲಾಸ್ !

ಬಾಲಿವುಡ್ ಅಂಗಳದಲ್ಲಿ ತೀರಾ ನಿರೀಕ್ಷೆ ಇಟ್ಟುಕೊಂಡು ಬಂದ ಹೀರೋಯಿನ್ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ನ ನಾಡಿ ಮಿಡಿತದ ಅಧ್ಯಯನದಿಂದ ಹೊರ ಬಂದ ವರದಿ ಏನಪ್ಪಾ ಅಂದರೆ ಮಧುರ್ ಪಾಲಿಗೆ ಹೀರೋಯಿನ್ ನಿಜಕ್ಕೂ ಕೈ ಕೊಟ್ಟಿದೆ. * ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ ಕರ್ ಚಿತ್ರ ಎಂದಾಕ್ಷಣ ಬಾಲಿವುಡ್ ಅಂಗಳದಲ್ಲಿರುವ ಇತರ ಸಿನಿಮಾಗಳ ಪಾಲಿಗೊಂದು ಹಕಿ ಸುದ್ದಿಯೇ ಆಗಿ ಬಿಡುತ್ತದೆ ಎನ್ನುವ ಮಾತು ಪ್ರಚಲಿತದಲ್ಲಿತ್ತು. ಆದರೆ ಈ ಎಲ್ಲ ಮಾತುಗಳು ಸುಳ್ಳಾಗುತ್ತಿರುವ ಸಾಧ್ಯತೆಗಳು ದಟ್ಟವಾಗುತ್ತಿದೆ. ಕಾರಣ ಇಷ್ಟೇ.. ಬಾಲಿವುಡ್ ಅಂಗಳದಲ್ಲಿ ತೀರಾ ನಿರೀಕ್ಷೆ ಇಟ್ಟುಕೊಂಡು ಬಂದ ಹೀರೋಯಿನ್ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ನ ನಾಡಿ ಮಿಡಿತದ ಅಧ್ಯಯನದಿಂದ ಹೊರ ಬಂದ ವರದಿ ಏನಪ್ಪಾ ಅಂದರೆ ಮಧುರ್ ಪಾಲಿಗೆ ಹೀರೋಯಿನ್ ನಿಜಕ್ಕೂ ಕೈ ಕೊಟ್ಟಿದೆ. ವಿಶ್ವದ ಹಿರಿತೆರೆಯ ಮೇಲೆ ಹೀರೋಯಿನ್ ಹೇಳುವಷ್ಟರ ಮಟ್ಟಿಗೆ ತನ್ನ ಚಮಕ್ ತೋರಿಸಿಲ್ಲ. ಬಿಡುಗಡೆಯಾಗಿ ಒಂದು ವಾರದ ಕಲೆಕ್ಷನ್ ತೀರಾ ಕುಸಿತ ಕಂಡಿದೆ. ಜತೆಯಲ್ಲಿ ಆಡಿಯನ್ಸ್ ಲೇವೆಲ್ ಫೋಲ್ ನಲ್ಲೂ ಹೀರೋಯಿನ್ ಟೋಟಲಿ ಉಲ್ಟಾಪಲ್ಟಾ ಆಗಿದೆ. 32 ಕೋಟಿ ರೂಪಾಯಿಗಳಲ್ಲಿ ಸಿದ್ಧಗೊಂಡ ಹೀರೋಯಿನ್ ವಾರದ ಕಲೆಕ್ಷನ್ ಗ್ಲೋಬಲ್ ಮಾರುಕಟ್ಟೆಯಲ್ಲಿ ಬರೀ 25 ಕೋಟಿ ರೂಪಾಯಿ ಮಾತ್ರ ! ಆದರೆ ಚಿತ್ರದ ನಿಜವಾದ ಓಟ ಆರಂಭವಾಗೋದೆ ಚಿತ್ರ ಬಿಡುಗಡೆ ಕಂಡ ಮೊದಲ ವಾರದಲ್ಲಿ ಚಿತ್ರಕ್ಕೆ ಹಾಕಿದ ಬಜೆಟ್ ಮತ್ತೆ ನಿರ್ಮಾಪಕನ ಕೈ ಸೇರುತ್ತದೆ. ಹೀರೋಯಿನ್ ಮಾತ್ರ ಈ ಕೆಲಸವನ್ನು ನೆಟ್ಟಗೆ ಮಾಡಿಲ್ಲ. ಹೀರೋಯಿನ್ ಹುಟ್ಟುವ ಮೊದಲು ಸುದ್ದಿ: ರಿಯಾಲಿಟಿ ವಸ್ತು ವಿಚಾರಗಳ ಮೇಲೆ ಪಡಿಯಚ್ಚು ತೆಗೆಯುವುದರಲ್ಲಿ ಸದಾ ಸಿದ್ಧ ಹಸ್ತರೆಂದೇ ಗುರುತಿಸಿಕೊಳ್ಳುವ ನಿರ್ದೇಶಕ ಮಧುರ್ ಈ ಚಿತ್ರದಲ್ಲಿ ಹಾಲಿವುಡ್ ನಾಯಕಿಯೊಬ್ಬರನ್ನು ಬಾಲಿವುಡ್ ರಂಗದ ನಾಯಕಿಯ ಜತೆಗೆ ತುಲನೆ ಮಾಡಿಕೊಂಡು ಮಾಡಿದ ಸಿನಿಮಾ ಎನ್ನುವ ಕಾರಣಕ್ಕೆ ಚಿತ್ರ ಬಿಡುಗಡೆ ಕಾಣುವ ಮೊದಲೇ ಸುದ್ದಿಯಾಗಿತ್ತು. ಚಿತ್ರದ ಆರಂಭದಲ್ಲಿ ಹೀರೋಯಿನ್ ಪಟ್ಟಕ್ಕೆ ಸಿದ್ಧಗೊಂಡವರು ಬಿಗ್ ಬಿ ಸೊಸೆ ಐಶ್ವರ್ಯಾ ರೈ ಬಚ್ಚನ್. ಚಿತ್ರದ ಕತೆಗೂ ಐಶ್ ಬದುಕಿಗೂ ಒಂದು ಲಿಂಕ್ ಇತ್ತು ಎನ್ನುವ ಕಾರಣಕ್ಕೆ ನಿರ್ದೇಶಕ ಮಧುರ್ ಐಶ್ ರನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ದುರಾದೃಷ್ಟವೆಂದರೆ ಹೀರೋಯಿನ್ ನಾಯಕಿ ಐಶ್ವರ್ಯಾ ರೈ ಎಂದು ಘೋಷಣೆ ಮಾಡುತ್ತಿದ್ದಾಗಲೇ ಐಶ್ ಗರ್ಭಿಣಿ ಎನ್ನುವ ಸುದ್ದಿ ಬಂತು. ಈ ವಿಚಾರದಿಂದ ನಿರ್ದೇಶಕ ಮಧುರ್ ಗೆ ಮೊದಲು ಹೊಡೆತ ಬಿದ್ದ ಬಳಿಕ ಹೀರೋಯಿನ್ ಜಾಗಕ್ಕೆ ಬಂದವರು ಕರೀನಾ ಕಪೂರ್. ಈ ಚಿತ್ರದ ಸಂಭಾವನೆ ಮೂಲಕ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಕರೀನಾ ಮೊದಲ ಸ್ಥಾನಕ್ಕೆ ಸಲ್ಲಿಕೆಯಾದರು. ಚಿತ್ರದಲ್ಲಿರುವ ಹಲ್ಕಟ್ ಜವಾನಿ ಹಾಡಿನ ಮೂಲಕ ಯುಟ್ಯೂಬ್ ನಲ್ಲಿ ಕರೀನಾ ಕಪೂರ್ ಮತ್ತೊಬ್ಬ ನಟಿ ಕತ್ರಿನಾ ಕೈಫ್ ಹಿಂದಿನ ಹಾಡು ಶೀಲಾಕೀ ಜವಾನಿಗೆ ಟಾಂಗ್ ಕೊಟ್ಟಳು. ಈ ಬಳಿಕ ಚಿತ್ರದ ಆರಂಭದಿಂದ ಕೊನೆಯವರೆಗೂ ಒಂದಲ್ಲ ಒಂದು ಸುದ್ದಿಯ ಮೂಲಕ ಹೀರೋಯಿನ್ ಪ್ರಚಾರದ ಅಂಗಳದಲ್ಲಿಯೇ ವರ್ಷ ಪೂರ್ತಿ ನಿಂತು ಹೋದಳು. ಹೀರೋಯಿನ್ ಸೋತದದ್ದು ಯಾಕೆ? ಮಧುರ್ ಚಿತ್ರಗಳ ವಿಶೇಷತೆಯಲ್ಲಿ ಕತೆಗೆ ಮೊದಲ ಸ್ಥಾನ ಇದ್ದೆ ಇರುತ್ತದೆ. ಈ ಕತೆಯನ್ನು ಮಧುರ್ ತಮ್ಮ ಶೈಲಿಗೆ ಅನ್ವಯಿಸಿಕೊಂಡು ಪ್ರೇಕ್ಷಕರ ಮುಂದೆ ಭಿನ್ನ ರೀತಿಯಲ್ಲಿ ಇಟ್ಟಾಗ ಪ್ರೇಕ್ಷಕನಿಗಂತೂ ವಿಶಿಷ್ಟ ರೀತಿಯ ಅನುಭವ ಚಿತ್ರದ ಮೂಲಕ ಲಭ್ಯವಾಗುತ್ತಿರುವುದು ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ವಿಚಾರ. ಆದರೆ ನಾಯಕಿಯೊಬ್ಬಳ ಬದುಕಿನ ಚಿತ್ರಣವನ್ನು ಈ ಬಾರಿ ಮಧುರ್ ತನ್ನ ಚಿತ್ರದಲ್ಲಿ ಸರಿಯಾಗಿ ಇಟ್ಟಿಲ್ಲ. ಚಿತ್ರ ವಿಮರ್ಶಕರ ಪ್ರಕಾರ ಇದು ಮಧುರ್ ಚಿತ್ರವಲ್ಲ ಕರೀನಾ ಚಿತ್ರ ಎಂದು ಹೇಳಿಕೊಂಡಿದ್ದರು. ಚಿತ್ರ ಬಿಡುಗಡೆಯ ಮೊದಲು ವಿಶೇಷವಾದ ಪ್ರಚಾರ ತಂತ್ರಗಳು ಕೂಡ ಚಿತ್ರದ ಸೋಲಿಗೆ ಕಾರಣವಾಗಿದೆ. ಪ್ರೇಕ್ಷಕ ಸಮೂಹ ವಿಶೇಷವಾದ ನಿರೀಕ್ಷೆ ಇಟ್ಟುಕೊಂಡು ಥಿಯೇಟರ್ ಗಳಿಗೆ ಹೋಗಿದ್ದರು. ಆದರೆ ಚಿತ್ರದ ಸಪ್ಪೆಯಾದ ಕತೆ ಪ್ರೇಕ್ಷಕರಿಗೆ ನಿರಾಶೆ ಮೂಡಿಸಿತ್ತು. ಇತ್ತ ಕಡೆ ಬಾಲಿವುಡ್ ನಲ್ಲಿ ಭರ್ಜರಿ ಕಲೆಕ್ಷನ್ ಕಾಣುತ್ತಿರುವ ಬರ್ಫಿಯ ರಾಕೆಟ್ ವೇಗದ ಮುಂದೆ ಹೀರೋಯಿನ್ ಮಲಗಿಯೇ ಹೋದಳು. ಬಾಲಿವುಡ್ ಲೆಕ್ಕಚಾರದ ಪ್ರಕಾರ ಬಿಡುಗಡೆ ಕಂಡ ಚಿತ್ರವೊಂದು ಸಕ್ಸಸ್ ಫುಲ್ ಆಗಿ ಓಡುತ್ತಿರುವಾಗ ಮತ್ತೊಂದು ಚಿತ್ರ ಬಿಡುಗಡೆ ಮಾಡಿದರೆ ಗೆಲುವು ಸಾಧಿಸುವ ಸಾಧ್ಯತೆಗಳು ಬಹಳ ಕಡಿಮೆ ಎನ್ನುವ ಮಾತಿದೆ. ಇದು ಬರ್ಫಿ ಹಾಗೂ ಹೀರೋಯಿನ್ ಪಾಲಿನ ವಿಚಾರದಲ್ಲಿ ಸರಿಯಾಗಿದೆ. ಚಿತ್ರದ ನಾಯಕಿ ಕರೀನಾ ಕಪೂರ್ ಚಿತ್ರ ಬಿಡುಗಡೆ ಕಾಣುವ ಮೊದಲೇ ಸೈಫ್ ಅಲಿಖಾನ್ ಅವರನ್ನು ಮದುವೆಯಾಗುವ ಕುರಿತು ಮಾಧ್ಯಮಗಳಲ್ಲಿ ಹೇಳಿದ ನೀಡಿಕೆ ಕೂಡ ಕರೀನಾ ವೃತ್ತಿ ಬದುಕಿಗೆ ಉಲ್ಟಾ ಆಗಿದೆ. ಮದುವೆಯಾಗುತ್ತಿರುವ ನಾಯಕಿಯನ್ನು ಪ್ರೇಕ್ಷಕರು ತುಂಬು ಮನಸ್ಸಿನಿಂದ ಸ್ವೀಕಾರ ಮಾಡುವ ಪ್ರಮೇಯಗಳು ಬಾಲಿವುಡ್ ನಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಕಾಣ ಸಿಕ್ಕಿದೆ. ಕರೀನಾ ಮದುವೆ ಹೀರೋಯಿನ್ ಗೆ ಮೈನಸ್ ಪಾಯಿಂಟ್. ಯೂ ಟಿವಿ ಮೋಶನ್ ಪಿಕ್ಟರ್ ಆಡಿಯಲ್ಲಿ ಬಂದ ಹೀರೋಯಿನ್ ಚಿತ್ರದ ಪ್ರಚಾರದಲ್ಲಿ ಮಾಡಿದ ಎಡವಟ್ಟು. ಆರಂಭದ ಹೀರೋಯಿನ್ ಚಿತ್ರಕ್ಕೆ ಐಶ್ ರನ್ನು ಇಳಿಸುವ ಇರಾದೆಯಿಂದ ಯುಟಿವಿ ಚಿತ್ರ ನಿರ್ಮಾಣ ಸಂಸ್ಥೆ ಐಶ್ ರನ್ನೇ ಬಂಡವಾಳ ಇಟ್ಟುಕೊಂಡು ಪ್ರಚಾರಕ್ಕೆ ಇಳಿಯಿತು. ಆದರೆ ಚಿತ್ರದ ನಾಯಕಿ ಬದಲಾದ ನಂತರ ಚಿತ್ರದ ಪ್ರಚಾರದಲ್ಲಿ ಕರೀನಾ ಅವರನ್ನು ಬಳಸಿಕೊಂಡು ಯಾವುದೇ ಗಿಮಿಕ್ ಮಾಡಲು ಯುಟಿವಿ ಮುಂದೆ ಬರಲಿಲ್ಲ. ಇತ್ತ ಕಡೆ ಬಾಲಿವುಡ್ ನಲ್ಲಿ ಬಂದ ಏಜೆಂಟ್ ವಿನೋದ್ ಚಿತ್ರದಲ್ಲೂ ಕರೀನಾ ಪ್ಲಾಪ್ ನಾಯಕಿಯಾಗಿಯೇ ಗುರುತಿಸಿಕೊಂಡಳು. ಅದು ಹೀರೋಯಿನ್ ಪಾಲಿಗೆ ಶಾಪವಾಯಿತು. ಟೋಟಲಿ ಹೀರೋಯಿನ್ ಪಾಲಿನ ಸೋಲು ನಿಜಕ್ಕೂ ಕರೀನಾಗೆ ತಟ್ಟುತ್ತಾ ಅಥವಾ ನಿರ್ದೇಶಕ ಮಧುರ್ ಬದುಕಿಗೆ ಮುಳ್ಳಾಗುತ್ತಾ ಎನ್ನೋದು ಚಿತ್ರ ನೋಡಿ ಹೊರ ಬಂದ ಪ್ರೇಕ್ಷರನ್ನು ಕಾಡಿದ ಪ್ರಶ್ನೆ.

Monday, September 24, 2012

ಪ್ರೇಕ್ಷಕರ ಮನಕರಗಿಸಿದ ಬರ್ಫಿ !

ಬರ್ಫಿ ಬಾಲಿವುಡ್ ನ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ಎರಡರಲ್ಲೂ ಗೆದ್ದುಕೊಂಡು ಬಂದಿದೆ. ರಣಬೀರ್ ಕಪೂರ್-ಪ್ರಿಯಾಂಕಾ ಚೋಪ್ರಾ-ಇಲಿಯಾನ ಡಿ ಕ್ರೂಝ್ ನಟನೆಯಿಂದ ಬರ್ಫಿ ಪ್ರೇಕ್ಷಕನ ಭರವಸೆಯನ್ನು ಹುಸಿ ಮಾಡಿಲ್ಲ ಎನ್ನುವುದು ಚಿತ್ರ ಬಿಡುಗಡೆಯ ನಂತರ ಕೇಳಿ ಬರುತ್ತಿರುವ ಒಳ್ಳೆಯ ಮಾತು. * ಸ್ಟೀವನ್ ರೇಗೊ
ಆಸ್ಕರ್ ಪ್ರಶಸ್ತಿ ಪ್ರತಿಯೊಬ್ಬ ನಿರ್ದೇಶಕನ ಕನಸ್ಸಿನ ಕೂಸು. ತಾನು ನಿರ್ದೇಶನ ಮಾಡಿದ ಎಲ್ಲ ಚಿತ್ರಗಳು ಕೂಡ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ನಾಮಕಿಂತಗೊಳ್ಳಬೇಕು ಎನ್ನೋದು ನಿರ್ದೇಶಕನ ಬದುಕಿನ ತುಂಬಾ ಚಡಪಡಿಕೆ. ಆದರೆ ದುರಾದೃಷ್ಟವೆಂದರೆ ಎಲ್ಲ ಚಿತ್ರಗಳು ಈ ಪಾಟಿಗೆ ಸಕ್ಸಸ್ ಕಾಣೋದಿಲ್ಲ. ಅದಕ್ಕೂ ಮುಖ್ಯವಾಗಿ ಆಸ್ಕರ್ ಪಟ್ಟಿಯೊಳಗೆ ಸೇರಿಕೊಳ್ಳುವ ಮಾತು ಕೂಡ ಬಹಳ ಕಷ್ಟ. ಅದರಲ್ಲೂ ಭಾರತೀಯ ಚಿತ್ರರಂಗದಲ್ಲಂತೂ ಎಲ್ಲರೂ ಒಪ್ಪಿಕೊಳ್ಳಬೇಕಾದ ಒರಿಜಿನಾಲಿಟಿ ಮಾತು. ಇದೇ ಆಸ್ಕರ್ ಪಟ್ಟಿಯಲ್ಲಿ ಬಾಲಿವುಡ್ ನ ಬರ್ಫಿ ಚಿತ್ರ ಸೇರಿಕೊಂಡಿದೆ. ಭಾರತೀಯ ಚಿತ್ರರಂಗದ ಹತ್ತಾರು ಚಿತ್ರಗಳು ಬಾಲಿವುಡ್ ನ ವಿದ್ಯಾ ಬಾಲನ್ ನಟಿಸಿದ ‘ಕಹಾನಿ’, ‘ಡರ್ಟಿ ಪಿಕ್ಚರ್’ ಜತೆಗೆ ಸುದೀಪ್ ನಟನೆಯ ‘ಈಗ’, ತಮಿಳಿನ ‘ಏಳಾಂ ಅರಿವು’ ಮತ್ತು ‘ವಳಕ್ಕು ಎನ್ನ’ ಚಿತ್ರಗಳು ಆಸ್ಕರ್ ಪಟ್ಟಿಯಲ್ಲಿ ನಾಮಕಿಂತಗೊಂಡಿದೆ. ಆದರೆ ತಂತ್ರಜ್ಞಾನ, ಕತೆ, ನಟನೆ ಎಲ್ಲವೂ ಲೆಕ್ಕಚಾರ ಮಾಡಿಕೊಂಡು ಫಿಲ್ಮಾ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್ ಐ) ಆಸ್ಕರ್ ಗಾಗಿ ಚಿತ್ರಗಳನ್ನು ಆಯ್ಕೆ ಮಾಡುತ್ತದೆ. ಈ ಎಲ್ಲ ವಿಚಾರಗಳನ್ನು ಸೈಡ್‌ಗೆ ಇಟ್ಟುಕೊಂಡರೂ ಕೂಡ ಬರ್ಫಿ ಬಾಲಿವುಡ್ ನ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ಎರಡರಲ್ಲೂ ಗೆದ್ದುಕೊಂಡು ಬಂದಿದೆ. ರಣಬೀರ್ ಕಪೂರ್-ಪ್ರಿಯಾಂಕಾ ಚೋಪ್ರಾ-ಇಲಿಯಾನ ಡಿ ಕ್ರೂಝ್ ನಟನೆಯಿಂದ ಬರ್ಫಿ ಪ್ರೇಕ್ಷಕನ ಭರವಸೆಯನ್ನು ಹುಸಿ ಮಾಡಿಲ್ಲ ಎನ್ನುವುದು ಚಿತ್ರ ಬಿಡುಗಡೆಯ ನಂತರ ಕೇಳಿ ಬರುತ್ತಿರುವ ಒಳ್ಳೆಯ ಮಾತು. ಚಿತ್ರ ಯಾಕೆ ನೋಡಬೇಕು: ಬಾಲಿವುಡ್ ಪ್ರತಿಭಾವಂತ ನಿರ್ದೇಶಕ ಅನುರಾಗ್ ಬಸು ಬರ್ಫಿ ಚಿತ್ರ ತಯಾರಿಸುವ ಹೊತ್ತಿನಲ್ಲೇ ವಿಚಿತ್ರ ಪ್ರೋಮೋಗಳ ಮೂಲಕ ಸುದ್ದಿಯಾಗಿತ್ತು. ಚಿತ್ರದಲ್ಲಿರುವ ವಿಶಿಷ್ಟ ಕತೆ, ನಟನೆ ಜತೆಗೆ ಮುದನೀಡುವ ಹಾಡುಗಳಿಂದ ಬರ್ಫಿ ಚಿತ್ರ ಓಡಿದೆ ಎನ್ನೋದು ಎಲ್ಲರೂ ಹೇಳಿಕೊಂಡು ತಿರುಗಾಡುವ ಮಾತು. ಆದರೆ ಒರಿಜಿನಾಲಿಟಿಯಾಗಿ ಹೇಳುವುದಾದರೆ ಬರ್ಫಿ ಸೂಪರ್ ಚಿತ್ರ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿರುವ ಕಿವುಡ, ಮೂಗ ಹುಡುಗನ ಕತೆಯೇ ಚಿತ್ರದ ತುಂಬಾ ಓಡಾಡುತ್ತದೆ. ಈ ಪಾತ್ರವನ್ನು ರಣಬೀರ್ ಕಪೂರ್ ಮಾಡಿದ್ದಾರೆ. ಇಬ್ಬರು ನಾಯಕಿಯಲ್ಲಿ ಪ್ರಿಯಾಂಕಾ ಹಾಗೂ ಇಲಿಯಾನಾ ಪಾತ್ರ ವರ್ಗಕ್ಕೆ ಪ್ರಾಣ ತುಂಬಿದ್ದಾರೆ. ಸಮಾಜದಲ್ಲಿರುವ ಭಿನ್ನರ ಬದುಕಿನಲ್ಲಿ ಪಾಸಿಟಿವ್ ಆಶಾಕಿರಣ ಮೂಡಿಸುವ ಚಿತ್ರವಾಗಿರುವುದರಿಂದ ಬಿಡುಗಡೆಯ ಮೊದಲೇ ಗೆಲ್ಲುವ ಸೂಚನೆ ಬರ್ಫಿಯಲ್ಲಿತ್ತು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ರಣಬೀರ್ ನಂತರ ಇಬ್ಬರು ಹುಡುಗಿಯರನ್ನು ಭೇಟಿಯಾಗುವ ಸನ್ನಿವೇಶದಿಂದಲೇ ಚಿತ್ರ ಆರಂಭ ಸಾಗುತ್ತದೆ. ಎರಡು ಹಂತದಲ್ಲಿ ಸಾಗುವ ಬರ್ಫಿ ಇಂಗ್ಲೀಷ್ ಚಿತ್ರದಿಂದ ಪ್ರೇರಿತವಾಗಿದೆ ಎನ್ನೋದು ಸುಳ್ಳಲ್ಲ. ಮಸಾಲೆ, ಪ್ರೇಮ ಸಲ್ಲಾಪಗಳ ಚಿತ್ರಗಳಿಂದ ರೋಸಿ ಹೋದ ಚಿತ್ರ ಪ್ರೇಕ್ಷಕರಂತೂ ಬರ್ಫಿಯಲ್ಲಿ ಭಿನ್ನ ಶೈಲಿಯ ಕತೆ, ನಟರ ನಟನೆಯಿಂದ ಕಡ್ಡಾಯವಾಗಿ ಚಿತ್ರ ನೋಡಬೇಕು ಎನ್ನಿಸಿಬಿಡುತ್ತದೆ. ವಿಚಿತ್ರ ಪರಿಸ್ಥಿತಿಯಲ್ಲಿ ಬೆಳಯುವ ಪ್ರಿಯಾಂಕಾ ಚೋಪ್ರಾರನ್ನು ತನ್ನ ಮಗಳೆಂದು ಒಪ್ಪಿಕೊಳ್ಳಲು ರೆಡಿ ಇಲ್ಲದ ಹೆತ್ತವರು, ರಣಬೀರ್‌ನ ಮುದ್ದು ಮುದ್ದು ನಟನೆ, ಇಲಿಯಾನಾರ ಮತ್ತೇ ಮತ್ತೇ ನೋಡುವಂತೆ ಮಾಡುವ ಪಾತ್ರ ಎಲ್ಲವೂ ಚಿತ್ರದ ಪ್ಲಸ್ ಪಾಯಿಂಟ್‌ಗಳು. ಮಾತಿಲ್ಲದ ಕತೆಯಿಲ್ಲದ ಬರೀ ಆಂಗಿಕ ಭಾಷೆಯಿಂದಲೇ ಓಡುವ ಬರ್ಫಿ ಚಿತ್ರಕ್ಕಂತೂ ಸಧ್ಯದ ಮಾರುಕಟ್ಟೆಯಲ್ಲಿ ಸಖತ್ ಭವಿಷ್ಯವಂತೂ ಇದ್ದೇ ಇದೆ ಎನ್ನುವುದು ಪ್ರೇಕ್ಷಕ ವರ್ಗದ ಮಾತು. ಯೂಟಿವಿ ಮೋಶನ್ ಪಿಕ್ಚರ್ ಬ್ಯಾನರ್ ನಲ್ಲಿ ಸಿದ್ಧಾರ್ಥ ರಾಯ್ ಕಪೂರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸೋತು ನಂತರ ಮತ್ತೇ ಬದ್ದು ಬರಲು ಪ್ರಯತ್ನ ಪಟ್ಟ ಅನುರಾಗ್ ಬಸು ಹೊಸ ಪ್ರಯತ್ನ ಎಲ್ಲರಿಗೂ ಹಿಡಿಸಿದೆ ಎನ್ನುವುದರ ಪುರಾವೆ ಬರ್ಫಿ ಚಿತ್ರ ಓಡುತ್ತಿರುವ ಓಟವೇ ಸಾಕ್ಷಿ ನೀಡುತ್ತದೆ. ಬರ್ಫಿ ಕಲೆಕ್ಷನ್‌ನಲ್ಲೂ ಸೂಪರ್: ರೊಮ್ಯಾಂಟಿಕ್, ಕಾಮಿಡಿ ಬೇಸ್ಡ್ ಮೇಲೆ ನಿರೂಪಿತರಾದ ಬರ್ಫಿ ಚಿತ್ರ ಬಿಡುಗಡೆಯಾದ ಪ್ರಥಮ ವಾರಾಂತ್ಯಕ್ಕೆ ೩೪.೬ ಕೋಟಿ ರೂ. ಬಾಚಿಕೊಂಡಿದೆ. ಚಿತ್ರವನ್ನು ೩೦ ಕೋಟಿ ರೂ. ಬಜೆಟ್ ನಲ್ಲಿ ತಯಾರಿಸಲಾಗಿತ್ತು. ಚಿತ್ರ ಬಿಡುಗಡೆಯ ಮೊದಲ ದಿನವೇ ೯.೨೦ ಕೋಟಿ ರೂ., ಎರಡನೇ ದಿನ ೧೧.೫೦ ಕೋಟಿ ರೂ., ೩ನೇ ದಿನ ೧೩.೫ ಕೋಟಿ ರೂ. ಸಂಪಾದಿಸಿದೆ. ಚಿತ್ರ ಭಾರತದಲ್ಲಿನ ಸುಮಾರು ೧೩೦೦ ಸಿನೆಮಾ ಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ದೊಡ್ಡ ಚಿತ್ರಗಳಿಗೆ ಹೋಲಿಸಿದರೆ ಇದು ಕಡಿಮೆ ಸಂಖ್ಯೆಯ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬರ್ಫಿಗೆ ದೊರಕಿರುವ ಪ್ರತಿಕ್ರಿಯೆ ಅದ್ಭುತವಾಗಿದೆ ಎನ್ನುವುದು ನಿರ್ಮಾಪಕ ಸಿದ್ಧಾರ್ಥ ರಾಯ್ ಕಪೂರ್ ಹೇಳುತ್ತಾರೆ. ಚಿತ್ರವನ್ನು ಇತರ ಚಿತ್ರಗಳಿಗಿಂತ ಭಿನ್ನವಾಗಿ ರೂಪಿಸಲು ಸಂಗೀತ ನಿರ್ದೇಶಕ ಪ್ರೀತಮ್ ಸಾಕಷ್ಟು ಕೆಲಸ ಮಾಡಿದ್ದಾರೆ. ಖುದ್ದು ಹಾಡಲು ಬರೋದಿಲ್ಲ ಎಂದು ಕೂರುವ ರಣಬೀರ್‌ನನ್ನು ಹಾಡಿಸಿದ ಪಾಟಿಪಟಿ ಹಾಡು ಈಗಾಗಲೇ ಯೂಟ್ಯೂಬ್ ಪ್ರೇಕ್ಷಕರನ್ನು ಮೋಡಿ ಮಾಡಿದೆ.

Sunday, September 23, 2012

ಮೋನಿಕಾ ಓ ಮೈ ಡಾರ್ಲಿಂಗ್ !

ಎಸ್.. ಅವಳು ಮತ್ತೆ ಫೀಲ್ಡ್ ಗೆ ಬಂದಿದ್ದಾಳೆ. ಇಡೀ ಅಮೇರಿಕದ ಮಂದಿಯೇ ಅವಳು ಏನೂ ಹೇಳುತ್ತಾಳೆ ಎನ್ನುವ ವಿಚಾರಕ್ಕೆ ಕಿವಿ ನೆಟ್ಟಗೆ ಮಾಡಿಕೊಂಡು ಕೂತಿದ್ದಾರೆ. ಇತ್ತ ಕಡೆ ಅಮೇರಿಕದ ಅಧ್ಯಕ್ಷರುಗಳೇ ಮತ್ತೊಂದು ಇಂತಹ ತಪ್ಪುಗಳು ನಡೆಯಕೂಡದು ಎಂದು ಪಣ ತೊಟ್ಟು ಬಿಟ್ಟಿದ್ದಾರೆ. ಅಮೇರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಬದುಕಿನಲ್ಲಂತೂ ಇವಳ ಮಾತಿನಿಂದ ಮತ್ತೊಂದು ಸುನಾಮಿ ಎದ್ದು ಬಿಡುವ ಸಾಧ್ಯತೆಗಳೇ ಜಾಸ್ತಿಯಾಗಿದೆ. ಇವಳೇ ಮೋನಿಕಾ ಸ್ಯಾಮ್ಲಿ ಲೆವೆನ್ಸ್ಕೀ.
ಎಸ್.. ಅವಳು ಮತ್ತೆ ಫೀಲ್ಡ್ ಗೆ ಬಂದಿದ್ದಾಳೆ. ಇಡೀ ಅಮೇರಿಕದ ಮಂದಿಯೇ ಅವಳು ಏನೂ ಹೇಳುತ್ತಾಳೆ ಎನ್ನುವ ವಿಚಾರಕ್ಕೆ ಕಿವಿ ನೆಟ್ಟಗೆ ಮಾಡಿಕೊಂಡು ಕೂತಿದ್ದಾರೆ. ಇತ್ತ ಕಡೆ ಅಮೇರಿಕದ ಅಧ್ಯಕ್ಷರುಗಳೇ ಮತ್ತೊಂದು ಇಂತಹ ತಪ್ಪುಗಳು ನಡೆಯಕೂಡದು ಎಂದು ಪಣ ತೊಟ್ಟು ಬಿಟ್ಟಿದ್ದಾರೆ. ಅಮೇರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಬದುಕಿನಲ್ಲಂತೂ ಇವಳ ಮಾತಿನಿಂದ ಮತ್ತೊಂದು ಸುನಾಮಿ ಎದ್ದು ಬಿಡುವ ಸಾಧ್ಯತೆಗಳೇ ಜಾಸ್ತಿಯಾಗಿದೆ. ಇವಳೇ ಮೋನಿಕಾ ಸ್ಯಾಮ್ಲಿ ಲೆವೆನ್ಸ್ಕೀ. ಶಾರ್ಟ್ ನಲ್ಲಿ ಹೇಳಿ ಬಿಡೋದಾದರೆ ಮೋನಿಕಾ ಲೆವೆನ್ಸ್ಕೀ. ಇಡೀ ಜಗತ್ತಿಗೆ ಅಮೇರಿಕದ ದೇಶದ ಹೆಸರಿನ ಜತೆಯಲ್ಲಿ ಮೋನಿಕಾ ಹೆಸರು ಕೂಡ ಅಷ್ಟೇ ಫೇಮಸ್ಸ್. ಕ್ಲಿಂಟನ್- ಮೋನಿಕಾ ರಸಲೀಲೆ ಎನ್ನುವ ಪುಟ್ಟ ನಾಲ್ಕು ಅಕ್ಷರಗಳನ್ನು ಜತೆಯಾಗಿ ಕಂಪೋಸ್ ಮಾಡಿ ಗೂಗಲ್ ಬ್ರಡ್ಮಾಂಡದಲ್ಲಿ ಹರಿಯಬಿಟ್ಟರೆ ಸಾಕು. ನೂರಾರು ಪುಟಗಳು ತೆರೆದು ಕೂರತ್ತೆ. ಹತ್ತಾರು ವಿಚಾರಗಳು ಕೂಲ್ ಆಗಿ ಓಪನ್ ಆಗಿ ನೋಡುವ ವಲಯವನ್ನೇ ದಂಗು ಮೂಡಿಸಿಬಿಡುತ್ತದೆ. ಅದೇ ಈ ಹೆಸರಿಗೆ ಇರುವ ಕಿಮ್ಮತ್ತು. ಅಂದಹಾಗೆ ಮೋನಿಕಾ ಯಾರು ಎನ್ನುವ ಕುತೂಹಲ ಕೆರಳುತ್ತಿದ್ದಾರೆ ಕೇಳಿ ಇಲ್ಲಿ. ಅಮೇರಿಕ ವೈಟ್ ಹೌಸ್ ನ ಹತ್ತಾರು ಗೋಡೆಗಳು ಅವಳ ಕುರಿತು ಬಾಯಿ ಬಡಿದುಕೊಳ್ಳುತ್ತದೆ. ೧೯೯೫ ನವೆಂಬರ್ ನಿಂದ ೧೯೯೭ ಮಾರ್ಚ್ ಅವಧಿಯಲ್ಲಿ ಅಮೇರಿಕದ ಅಧ್ಯಕ್ಷ ಪಟ್ಟಗೆ ಬಂದ ಬಿಲ್ ಕ್ಲಿಂಟನ್ ಅವರ ಆಪ್ತ ಸಹಾಯಕಿಯಾಗಿ ಸೇರಿಕೊಂಡ ಮಹಿಳೆಯೇ ಈ ಮೋನಿಕಾ . ಈ ಅವಧಿಯಲ್ಲಿಯೇ ಬಿಲ್ ಕ್ಲಿಂಟನ್ ರ ಅಕ್ರಮ ಸಂಬಂಧಗಳನ್ನು ಮೊತ್ತ ಮೊದಲ ಬಾರಿಗೆ ಇಡೀ ವಿಶ್ವದ ಮುಂದೆ ಬಾಯಿಬಡಿದುಕೊಂಡವಳು ಕೂಡ ಇದೇ ಮೋನಿಕಾ. ಜಾಗತಿಕ ವಲಯದಲ್ಲಿ ದೊಡ್ಡಣ್ಣ ಎಂದು ಬೀಗುತ್ತಿದ್ದ ಅಮೇರಿಕದ ನಾಯಕನನ್ನು ಮುಖ ತೋರಿಸಿಕೊಂಡು ಓಡಾಡದಂತೆ ಮಾಡಿದ ದಿಟ್ಟ ಮಹಿಳೆ ಮೋನಿಕಾ ಎಂದು ಎಲ್ಲರಿಗೂ ಗೊತ್ತಿದೆ. ಮೋನಿಕಾ ಕುಟುಕು ಕ್ಲಿಂಟನ್ ಟೆಲ್ ಆಲ್: ಅಮೆರಿಕದ ಮಾಜಿ ಅಧ್ಯಕ್ಷರನ್ನು ಸಾಕಷ್ಟು ಮುಜುಗರಕ್ಕೀಡಾಗುವಂತೆ ಮಾಡಿದ್ದ ಮೋನಿಕಾ, ಸದ್ಯಕ್ಕೆ ಹೊಸ ಬಾಂಬ್ ಹಾಕಲಿದ್ದಾಳೆ. ತನ್ನ ಮತ್ತು ಕ್ಲಿಂಟನ್ ನಡುವಿನ ಸಂಬಂಧದ ಇನ್ನಷ್ಟು ಗುಟ್ಟಿನ ವಿಚಾರಗಳನ್ನು ಯಥಾವತ್ತಾಗಿ ಪುಸ್ತಕದ ರೂಪದಲ್ಲಿ ಜಗತ್ತಿನ ಮುಂದೆ ಇಡಲಿದ್ದಾಳೆ. ಅದಕ್ಕಾಗಿ ಅವಳು ಈ ಕೃತಿಗೆ ಇಟ್ಟ ಹೆಸರೇ ಕ್ಲಿಂಟನ್ ಟೆಲ್-ಆಲ್ ಎನ್ನುವುದು. ಈ ಕೃತಿಯ ಮೂಲಕ ತನ್ನ ಮತ್ತು ಕ್ಲಿಂಟನ್ ನಡುವಿನ ಪ್ರೇಮ ವ್ಯವಹಾರಗಳನ್ನು ಬಿಚ್ಚಿಡಲು ಮೋನಿಕಾ ನಿರ್ಧರಿಸಿದ್ದಾಳೆ. ಈ ಕೃತಿ ಕ್ಲಿಂಟನ್ ನ ವಿವಾಹ ಬಾಂಧವ್ಯವನ್ನು ಮುರಿದು ಹಾಕುವ ನಿಟ್ಸಿನಲ್ಲಿದೆ ಮತ್ತು ೨೦೧೬ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಫರ್ಧಿಸಲಿರುವ ಹಿಲರಿಯ ಯೋಜನೆಗಳ ಮೇಲೂ ಪರಿಣಾಮ ಬೀರುವ ಎಲ್ಲ ಸೂಚನೆಗಳು ಕಾಣಿಸಿಕೊಂಡಿದೆ. ಈಗಾಗಲೇ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಕ್ಲಿಂಟನ್ ಗೆ ಈ ಕೃತಿ ಇನ್ನಷ್ಟು ಆರೋಗ್ಯ ಸಮಸ್ಯೆಗಳನ್ನು ಹುಟ್ಟು ಹಾಕಬಹುದು ಎನ್ನುವ ಮಾತುಗಳು ಅಮೇರಿಕದ ತುಂಬಾ ಕೇಳಲು ಆರಂಭವಾಗಿದೆ. ಕೆಲವು ಮಾಧ್ಯಮಗಳು ಆಕೆಯ ಪುಸ್ತಕ ಕೇವಲ ಪ್ರತೀಕಾರದಂತಿಲ್ಲ. ಅದು ಅವರನ್ನು ಸಾಯಿಸಲು ಸಾಕು! ಎನ್ನುವಂತೆ ಅಮೇರಿಕದ ಮಾಧ್ಯಮಗಳು ಬರೆದುಕೊಳ್ಳುತ್ತಿದೆ. ಈ ತಿಂಗಳ ಆರಂಭದಲ್ಲಿ ಕ್ಲಿಂಟನ್ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಯಶಸ್ವೀ ಭಾಷಣ ಮಾಡಿದ ಬಳಿಕ ಈ ಪುಸ್ತಕ ಹೊರಬರುತ್ತಿರುವ ಸುದ್ದಿ ಹೊರ ಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ. ತನ್ನ ಹಳೆಯ ನೆನಪುಗಳನ್ನು ಮರುಕಳಿಸುತ್ತಿರುವುದಕ್ಕಾಗಿ ಆಕೆಗೆ ೧೨ ಮಿಲಿಯನ್ ಡಾಲರ್ ಸಂಪಾದನೆಯಾಗುವ ಸಾಧ್ಯತೆಗಳಿವೆ ಎಂದು ಈ ಕೃತಿಯನ್ನು ಹೊರ ತರುವ ಪ್ರಕಾಶಕರು ಹೇಳಿಕೊಂಡಿದ್ದಾರೆ. ಮುಖ್ಯವಾಗಿ ತನ್ನ ಮತ್ತು ಕ್ಲಿಂಟನ್ ನಡುವಿನ ಪ್ರೇಮ ಪತ್ರಗಳನ್ನು ಬಹಿರಂಗ ಪಡಿಸುವುದಾಗಿ ಮೋನಿಕಾ ಹೇಳಿಕೊಂಡಿರುವುದರ ಜತೆಯಲ್ಲಿ ಕ್ಲಿಂಟನ್ ಗೆ ತನ್ನ ಪತ್ನಿ ಹಿಲರಿ ಬಗ್ಗೆ ಇದ್ದ ತಾತ್ಸಾರದ ಕುರಿತೂ ಬಹಿರಂಗ ಪಡಿಸಲಿದ್ದಾಳೆ. ಹಿಲರಿಗೂ ಅಕ್ರಮ ಸಂಬಂಧ ಹೊಂದುವ ಬಗ್ಗೆ ಆಸಕ್ತಿಯಿದೆ ಎಂದು ತಾನು ಭಾವಿಸುವುದಾಗಿ ಬಿಲ್ ಕ್ಲಿಂಟನ್ ತನ್ನ ಬಳಿ ಹೇಳಿಕೊಂಡಿದ್ದುದಾಗಿ ಮೋನಿಕಾ ಈ ಪುಸ್ತಕದಲ್ಲಿ ಬಹಿರಂಗ ಪಡಿಸಲಿದ್ದಾಳೆ ಎನ್ನುವ ಮಾತುಗಳು ಹೊರಬಂದಿದೆ. ಕ್ಲಿಂಟನ್ ಗೆ ಇತ್ತು ಕಾಮತೃಷೆ: ಅಮೇರಿಕದ ಡೆಮಾಕ್ರಟಿಕ್ ಪಕ್ಷದ ಮೂಲಕ ಆಯ್ಕೆಯಾದ ಬಿಲ್ ಕ್ಲಿಂಟನ್ಗೆ ಲೈಂಗಿಕ ವಿಚಾರಗಳ ಮೇಲೆ ಅತೀಯಾದ ಮೋಹವಿತ್ತು ಎನ್ನುವುದು ಮೋನಿಕಾ ಕೃತಿಯಲ್ಲಿ ಅಡಕವಾಗಿರುವ ಪ್ರಧಾನ ವಿಚಾರ. ಲೈಂಗಿಕ ಚಟುವಟಿಕೆಗಳಿಗೆ ಬರೀ ಹೆಣ್ಣುಗಳು ಇದ್ದರೆ ಮಾತ್ರ ಸಾಧ್ಯವಿಲ್ಲ ಎನ್ನುವ ಮನೋಭಾವನೆಯಲ್ಲಿ ಕ್ಲಿಂಟನ್ ಇದ್ದರೂ ಎನ್ನುತ್ತಾಳೆ ಮೋನಿಕಾ. ಆದರೆ ಮೈ ಲೈಫ್ ತ್ರೀ ಇಯರ್ ಲೇಟರ್ ಮೋನಿಕಾ ಎನ್ನುವ ಕೃತಿಯಲ್ಲಿ ಬಿಲ್ ಕ್ಲಿಂಟನ್ ತನ್ನ ಆತ್ಮಕತೆಯಲ್ಲಿ ಸುಳ್ಳು ಹೇಳಿಕೊಂಡಿದ್ದಾರೆ ಅದಕ್ಕಾಗಿ ಈ ಕೃತಿಯಲ್ಲಿ ಎಲ್ಲ ಸಾಕ್ಷ್ಯಾಗಳನ್ನು ನೀಡಿದ್ದೇನೆ ಎನ್ನುವುದು ಮೋನಿಕಾ ಮಾತು. ಕ್ಲಿಂಟನ್ ಸೆಕ್ಸ್ ಹಗರಣಗಳ ನಂತರ ಮೋನಿಕಾ ೨೦೦೫ರಲ್ಲಿ ಇಂಗ್ಲೆಂಡ್ ಗೆ ಬಂದು ಖಾಸಗಿ ಚಾನೆಲ್ ವೊಂದರಲ್ಲಿ ವರದಿಗಾರ್ತಿಯಾಗಿ ಸೇರಿಕೊಂಡಿದ್ದರು. ಅಲ್ಲಿಯೇ ಈ ಕೃತಿ ಬರೆಯುವ ಹುಮ್ಮಸ್ಸು ಸಿಕ್ಕಿತ್ತು ಎಂದು ಮೋನಿಕಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕ್ಲಿಂಟನ್ ಅವರ ೯ ಪತ್ರಗಳ ಜತೆಯಲ್ಲಿ ಬಹಳಷ್ಟು ರಹಸ್ಯ ವಿಚಾರ ಈ ಕೃತಿಯ ಮೂಲಕ ಸ್ಫೋಟಗೊಳ್ಳುವ ಸಾಧ್ಯತೆ ಇದೆಯಂತೆ. ಮೋನಿಕಾ ಎನ್ನುವ ಬಾಂಬ್: ಮೋನಿಕಾ ಹುಟ್ಟಿ ಬೆಳೆದದ್ದು ಅಮೇರಿಕದ ಸ್ಯಾನ್ ಪ್ರಾನ್ಸಿಸ್ಕೋ ಎನ್ನುವ ನಗರದಲ್ಲಿ ತಂದೆ ತಾಯಿ ಇಬ್ಬರು ಯೆಹೂದಿಗಳಾಗಿದ್ದರು. ಮೋನಿಕಾ ಹುಟ್ಟುವ ಸಂದರ್ಭ ಯೆಹೂದಿ ಕೃತಿಯೊಂದು ತುಂಬಾನೇ ಫೇಮಸ್ ಆಗಿತ್ತು. ಇದೇ ಕಾರಣಕ್ಕೆ ಈ ಕೃತಿಯ ಹೆಸರನ್ನು ಹುಟ್ಟಿದ ಹುಡುಗಿಗೆ ಇಟ್ಟುಕೊಂಡರು. ಆದರೆ ಕೆಲವೇ ಸಮಯದಲ್ಲಿ ಹೆತ್ತವರು ಬೇರೆ ಬೇರೆಯಾಗಿ ಉಳಿದುಬಿಟ್ಟರು. ತಂದೆ ಮತ್ತೊಂದು ತಾಯಿಯನ್ನು ಕರೆದುಕೊಂಡು ಮನೆಗೆ ಬಂದರು. ಈ ಸಮಯದಲ್ಲಿ ಮೋನಿಕಾಳಿಗೆ ಮಲತಾಯಿ ಕಿರುಕುಳ ನೀಡಲು ಆರಂಭಿಸಿದಳು. ಮೋನಿಕಾಳ ಬೆಳವಣಿಗೆಯಲ್ಲಿ ಈ ವಿಚಾರ ತೀರನೇ ಘಾಸಿಗೊಳಿಸಿತು. ಇತ್ತ ಕಡೆ ತಾಯಿ ಕೂಡ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಉಳಿದುಕೊಂಡರು. ಇಬ್ಬರ ಪ್ರೀತಿಯಿಂದ ವಂಚಿತಳಾದ ಮೋನಿಕಾ ಬದುಕಿನಲ್ಲಿ ಆರಂಭದ ಅಧ್ಯಾಯಗಳೇ ಕಿರಿಕಿರಿ ಎನ್ನಿಸುವಂತೆ ಇತ್ತು. ನಾನಾ ಕಡೆ ಶಿಕ್ಷಣ ಪಡೆದುಕೊಂಡು ಕೆಲಸ ಮಾಡುತ್ತಾ ೧೯೯೫ರ ಹೊತ್ತಿಗೆ ಅಮೇರಿಕದ ವೈಟ್ ಹೌಸ್ ನಲ್ಲಿ ಕೆಲಸಕ್ಕೆ ಸೇರಿಕೊಂಡಳು. ಇದೇ ಸಮಯದಲ್ಲಿ ಬಿಲ್ ಕ್ಲಿಂಟನ್ ನ ಸೆಕ್ಸ್ ಹಗರಣವನ್ನು ಮೀನಿಕಾ ಹೊರತಂದಳು. ಇದು ಈಗ ವಿಶ್ವದ ತುಂಬಾ ಲೆವೆನ್ಸ್ಕೀ ಹಗರಣ ಎಂದೇ ಕರೆಸಿಕೊಂಡಿದೆ. ಈ ಹಗರಣದ ನಂತರ ಮೋನಿಕಾ ರಾಜಕೀಯ, ಮಾಧ್ಯಮಗಳ ವಲಯದಲ್ಲಿ ಸಿಕ್ಕಾಪಟ್ಟೆ ಗುರುತಿಸಿಕೊಂಡರು. ಖಾಸಗಿ ವಾಹಿನಿಯೊಂದು ಇವರ ಸಂದರ್ಶನ ಪ್ರಸಾರ ಮಾಡಿದಾಗ ವಿಶ್ವದ ೭೦ ಮಿಲಯ ಮಂದಿ ವಾಹಿನಿ ಕಡೆ ಮುಖ ಮಾಡಿ ಕೂತಿದ್ದರು. ಮೋನಿಕಾ ಹೇಳಿದ ವಿಚಾರಗಳನ್ನು ಬಂಡವಾಳವಾಗಿಟ್ಟುಕೊಂಡು ಮಾರ್ಟನ್ ಎನ್ನುವ ಕೃತಿಕಾರ ತಯಾರಿಸಿದ ಕ್ಲಿಂಟನ್ ಆಫೇರ್ ಇನ್ ಮೋನಿಕಾ ಸ್ಟೋರಿ ಇಡೀ ವಿಶ್ವದ ಪುಸ್ತಕ ಮಾರುಕಟ್ಟೆಯಲ್ಲಿ ಕೋಲಾಹಲ ಎಬ್ಬಿಸಿತ್ತು. ಈ ಬಳಿಕ ಮೋನಿಕಾ ರನ್ನು ಮಾಧ್ಯಮ, ಕೃತಿಕಾರರು, ರಾಜಕೀಯ ರಂಗ ಎಲ್ಲರೂ ಬಳಿಸಿಕೊಂಡು ತಮ್ಮ ಸಂಪಾದನೆಯಲ್ಲಿ ತೊಡಗಿಕೊಂರುವ ಎನ್ನುವುದೇ ಮಹಾನ್ ದುರಂತಗಳಲ್ಲಿ ಒಂದು ಎಂದು ವಿಮರ್ಶಕರು ಹೇಳುತ್ತಾರೆ.