
Tuesday, January 7, 2014
ಕ್ಯಾಂಪಸ್ ಯುವಜನತೆಯನ್ನು ಮೋಡಿ ಮಾಡಲು ಸ್ಟೈಲ್ ಮಂತ್ರ!
*ಸ್ಟೀವನ್ ರೇಗೊ, ದಾರಂದಕುಕ್ಕು
ಕುಡ್ಲದ ಯೂತ್ ಬ್ರಿಗೇಡ್ ಮತ್ತೆ ರಾಕಿಂಗ್ ಮೂಡ್‌ಗೆ ತಲುಪುವ ಸುದ್ದಿಯೊಂದು ಕುಡ್ಲದ ಗಲ್ಲಿಯಲ್ಲಿ ಜೋರಾಗಿ ಕೇಳಿಸಿಕೊಳ್ಳಲು ಆರಂಭವಾಗಿದೆ. ಅದರಲ್ಲೂ ಕಾಲೇಜು ಮೆಟ್ಟಿಲು ಹತ್ತಿದ ಬರೋಬರಿ ೧೮ರಿಂದ ೨೮ರ ಅಸುಪಾಸಿನ ವಿದ್ಯಾರ್ಥಿಗಳಿಗಂತೂ ಈ ಸ್ಟೈಲ್ ಮಂತ್ರದಲ್ಲಿ ತಮ್ಮ ಚಮಕ್‌ಗಿರಿ ತೋರಿಸುವ ಚಾನ್ಸ್ ಇದೆ. ಈಗಾಗಲೇ ಮಿಕ್ಸಿಂಗ್ ಕಲ್ಚರ್‌ನಲ್ಲಿ ತಲೆತೂಗುತ್ತಿರುವ ಕುಡ್ಲ ಫ್ಯಾಶನ್ ಹಬ್ ಆಗಿ ಬದಲಾಗುತ್ತಿದೆ.
ಈಗಾಗಲೇ ನಗರದಲ್ಲಿ ಫ್ಯಾಶನ್ ಪರೇಡ್‌ಗಳು, ಮೊಡೆಲ್ ಗಳ ರ‍್ಯಾಂಪ್‌ವಾಕ್ ಎಲ್ಲವೂ ಫ್ಯಾಶನ್ ಲೋಕದ ಮಬ್ಬು ಕವಿಸಿದೆ. ಇದರ ಜತೆ ಜತೆಗೆ ರಾಜ್ಯದಲ್ಲಿ ಮೊದಲ ಫ್ಯಾಶನ್ ಟ್ರೈನಿಂಗ್ ಸಂಸ್ಥೆ ಕೂಡ ಮಂಗಳೂರಿನಲ್ಲಿ ಹುಟ್ಟಿಕೊಂಡು ರೂಪದರ್ಶಿಗಳನ್ನು ತಯಾರು ಮಾಡುತ್ತಿದೆ. ಇದೆಲ್ಲವನ್ನು ಕೌಂಟ್ ಲೀಸ್ಟ್‌ನಲ್ಲಿ ತೂಗಿ ಹಾಕುವಾಗ ಕುಡ್ಲದ ಯೂತ್ ಬ್ರಿಗೇಡ್ ಸ್ಟೈಲ್ ಮಂತ್ರಕ್ಕೆ ಶರಣಾಗುತ್ತಿದೆ ಎನ್ನುವುದು ಸ್ವಷ್ಟವಾಗುತ್ತಿದೆ.
ಏನಿದು ಸ್ಟೈಲ್ ಮಂತ್ರ:
ಸ್ಟೈಲ್ ಮಂತ್ರ ಇದೊಂದು ನಾನಾ ಪದಗಳ ಸಮ್ಮಿಲನ. ಈ ಪದಗಳ ಪುಂಜಗಳು ಜತೆಗೂಡಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸುವುದೇ ಈ ಸ್ಟೈಲ್ ಮಂತ್ರದ ಹೊಸ ವ್ಯಾಖ್ಯೆ. ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಶೈಲಿಯ ಕುರಿತಾಗಿ ಪ್ರಶ್ನೆ ಕೇಳಿ ಅದಕ್ಕೆ ಉತ್ತರ ಪಡೆದು ತಮ್ಮ ಡ್ರೆಸಿಂಗ್ ಸ್ಟೈಲ್, ಹಾವಭಾವಗಳ ಕುರಿತು ಬಿಂದಾಸ್ ಆಗಿ ಹೇಳುವುದು ಈ ಸ್ಟೈಲ್ ಮಂತ್ರದ ಹಕೀಕತ್ತು. ಅಂದಹಾಗೆ ಇದರಲ್ಲಿ ಗೆದ್ದವರಿಗೆ ನಾನಾ ಬಹುಮಾನಗಳ ಜತೆಗೆ ಮೂರು ದಿನಗಳ ಪ್ರವಾಸ ಹಾಗೂ ಮಿಸ್ಟರ್ ಆಂಡ್ ಮಿಸ್ಸಿ ೨೦೧೪ ಸ್ಪರ್ಧೆಗೆ ನೇರ ಪ್ರವೇಶ ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗೆ ಫ್ಯಾಶನ್ ಎಬಿಸಿಡಿ ಮೊದಲ ಮಹಡಿ, ಎಂಪಾಯರ್ ಮಾಲ್, ಎಂ.ಜಿ. ರೋಡ್ ಮಂಗಳೂರು ಇವರನ್ನು ಸಂಪರ್ಕಿಸಬಹುದು.
ಕೋಟ್ ಕಾರ್ನರ್
‘ಮಂಗಳೂರಿನ ಯುವಜನತೆ ತಮ್ಮದೇ ಸ್ಟೈಲ್ ಮಂತ್ರಗಳನ್ನು ಹೊಂದಿದ್ದಾರೆ. ಆದರೆ ಅವರಿಗೊಂದು ವೇದಿಕೆಯ ಕೊರತೆ ಇದ್ದೇ ಇದೆ. ತಮ್ಮ ಬದುಕಿನ ಶೈಲಿ, ಟ್ರೆಂಡ್ ಸೆಟ್ಟಿಂಗ್ ವಿಚಾರಗಳಿಂದ ಯುವಜನತೆ ಫ್ಯಾಶನ್ ದುನಿಯಾದಲ್ಲಿ ಹೊಂದಿರುವ ಆಸಕ್ತಿಯನ್ನು ತಿಳಿದುಕೊಳ್ಳಲು ಇದು ಸಹಕಾರಿಯಾಗಲಿದೆ’
ಅನುಪಮ ಸುವರ್ಣ, ಮುಖ್ಯಸ್ಥರು
ಫ್ಯಾಶನ್ ಎಬಿಸಿಡಿ, ಮಂಗಳೂರು.
(vk nammakarvali magazine carried on 8.1.2014)

Subscribe to:
Posts (Atom)