Sunday, May 19, 2013
ರಾಕಿಂಗ್ ಕುಡ್ಲದಲ್ಲಿ ಮಿಂಚಿದ ಫ್ಯಾಶನ್ ಪರೇಡ್ !
* ಸ್ಟೀವನ್ ರೇಗೊ, ದಾರಂದಕುಕ್ಕು
ಕುಡ್ಲದಲ್ಲಿ ಫ್ಯಾಶನ್ ಪರೇಡ್ ಎನ್ನುವ ಕಲ್ಪನೆಯೇ ಒಂದು ಗಟ್ಟಿತನದ ಮಾತು. ಟೋಟಲಿ ಸೂಕ್ಷ್ಮ ಕೇಂದ್ರಗಳಲ್ಲಿ ಒಂದು ಎಂದು ಪರಿಗಣಿಸುವ ಕುಡ್ಲದ ಸಿಟಿ ಲೈಫ್‌ನಲ್ಲಿ ಯುವಕ-ಯುವತಿಯರ ಕಣ್ಮನ ಸೆಳೆಯುವ ಬೆಳಕಿನಲ್ಲಿ ರ‍್ಯಾಂಪ್‌ವಾಕ್ ಮಾಡಿಕೊಂಡು ಕಂಗೋಳಿಸಿದ್ದು.. ನಿಮ್ಗೆ ಗೊತ್ತಾ..?.. ಹೌದು ಇದು ಮಿಸ್ ಮಂಗಳೂರು ಆಂಡ್ ಮಿಸ್ಟರ್ ಮಂಗಳೂರು ಎನ್ನುವ ವಿನೂತನ ಸ್ಪರ್ಧೆಯ ಒಂದು ರಂಗೀನ್ ನೋಟದ ಮಾತು.
ಮಂಗಳೂರಿನ ಉಳ್ಳಾಲದಲ್ಲಿರುವ ಸಮ್ಮರ್ ಸ್ಯಾಂಡ್‌ನಲ್ಲಿ ಸಿದ್ಧಗೊಂಡಿದ್ದ ಭವ್ಯ ವೇದಿಕೆಯ ಮೇಲೆ ೧೫ ಮೊಡೆಲ್‌ಗಳು ರ‍್ಯಾಂಪ್‌ವಾಕ್‌ನಲ್ಲಿ ಕಂಗೋಳಿಸಿದರು. ಮತ್ತೊಂದೆಡೆ ಯುವಕರು ಕೂಡ ತಮ್ಮ ಸೌಂದರ್ಯವನ್ನು ಬಿಚ್ಚಿಡಲು ರ‍್ಯಾಂಪ್‌ವಾಕ್‌ನ ಆಸರೆಗೆ ಮೊರೆ ಹೋದರು. ಮಿರಿಮಿರಿ ಮಿನುಗುವ ಬಣ್ಣದ ದೀಪಗಳು ಇಡೀ ವೇದಿಕೆಯನ್ನು ರಾಕಿಂಗ್ ಮಾಡಿ ಹಾಕಿತ್ತು.
ವೆಸ್ಟರ್ನ್ ಹಾಗೂ ಶಾಸ್ತ್ರೀಯ ಸಂಗೀತದ ಹದವಾದ ಮಿಶ್ರಣದಲ್ಲಿ ಮೂಡು ಬರುತ್ತಿದ್ದ ಹಾಡುಗಳ ತಾಳಕ್ಕೆ ಮೊಡೆಲ್‌ಗಳು ಕ್ಯಾಟ್‌ವಾಕ್ ಭಿನ್ನ ಲೋಕದ ಪ್ರಯಾಣದಲ್ಲಿ ಸಾಥ್ ಕೊಡುವಂತಿತ್ತು. ರ‍್ಯಾಂಪ್‌ವಾಕರ್‌ಗಳ ಮೋಹಕ ನಡೆಗೆ ದಂಗಾಗಿ ವೇದಿಕೆಯ ಕೆಳಗೆ ಕೂತ ಪ್ರೇಕ್ಷಕರು ಟೋಟಲಿ ಬೋಲ್ಡ್ ಆಗಿ ಉಳಿದು ಹೋದರು. ಸದಾ ಕಾಲ ಹೊಸ ಹವಾ ಸೃಷ್ಟಿ ಮಾಡಿಕೊಂಡು ಮುನ್ನುಗ್ಗುತ್ತಿರುವ ಕುಡ್ಲದಲ್ಲಿ ಇದೇ ಮೊದಲ ಬಾರಿಗೆ ಮಿಸ್ ಮಂಗಳೂರು, ಮಿಸ್ಟರ್ ಮಂಗಳೂರು ಎನ್ನುವ ವಿನೂತನ ಸ್ಪರ್ಧೆ ಕಡಲತಡಿಯ ಫ್ಯಾಶನ್ ಪ್ರಿಯರ ಹೃದಯಕ್ಕೆ ಲಗ್ಗೆ ಹಾಕಿತ್ತು.
ಎಲ್ಲಿಯ ಮೊಡೆಲ್‌ಗಳು ಅಂತೀರಾ:
ಮಂಗಳೂರು ಅದರಲ್ಲೂ ತುಳುನಾಡಿನಲ್ಲಿ ಹುಟ್ಟಿ ನಂತರ ದೇಶ- ವಿದೇಶದಲ್ಲಿರುವ ನಾನಾ ಸುಂದರ ಯುವಕ-ಯುವತಿಯರನ್ನು ಒಂದು ಅಂರ್ತಜಾಲ ತಾಣದ ಮೂಲಕ ಬರೆ ಸೆಳೆದು ಅಲ್ಲಿ ಮತದಾನ ಮಾಡಿ ಅಲ್ಲಿ ಗೆದ್ದು ಬಂದ ೧೫ ಮೊಡೆಲ್‌ಗಳನ್ನು ಫೈನಲ್‌ಗೆ ಆಯ್ಕೆ ಮಾಡಿಕೊಂಡು ಅಲ್ಲಿ ರ‍್ಯಾಂಪ್‌ವಾಕ್ ಜತೆಗೆ ಪ್ರಶ್ನೆ- ಉತ್ತರಗಳ ಮೂಲಕ ವಿಜೇತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿತ್ತು. ಮಂಗಳೂರು ಮೂಲದ ಡ್ರೀಮ್ ಕ್ರಾಪ್ಟ್ ಹಾಗೂ ಮುಂಬಯಿ ಇವೆಂಟ್ ಮ್ಯಾನೇಜರ್ ತಂಡ ಔರಾ ಸಿನಿ ವೇಸ್ತಾ ಈ ಸ್ಪರ್ಧೆಯನ್ನು ಆಯೋಜಿಸಿತ್ತು. ಇಲ್ಲಿ ಗೆದ್ದು ಬಂದ ಮಿಸ್ ಮಂಗಳೂರು ವಿನ್ನರ‍್ಸ್ ಗಳಿಗೆ ವಿದೇಶ ಪ್ರಯಾಣ, ಸಿನಿಮಾದಲ್ಲಿ ನಟನೆ ಹಾಗೂ ಬ್ರಾಂಡ್ ಅಂಬಾಸೀಡರ್ ಆಗುವ ಅವಕಾಶ ಲಭ್ಯವಾಗಲಿದೆ. ಇದರ ಜತೆಯಲ್ಲಿ ಸೌತ್ ಮಿಸ್ ಇಂಡಿಯಾ-೨೦೧೪ಗೆ ನೇರ ಪ್ರವೇಶ ಸಿಗಲಿದೆ. ರನ್ನರ‍್ಸ್‌ಗಳಿಗೆ ದೇಶ ನಾನಾ ರಾಜ್ಯಗಳಿಗೆ ಪ್ರವಾಸದ ಅವಕಾಶ ಸಿಗಲಿದೆ.
ಕೋಟ್ ಕಾರ್ನರ್:
‘ಕುಡ್ಲದಲ್ಲಿ ಇಂತಹ ಸ್ಪರ್ಧೆ ಮಾಡೋದು ಅಷ್ಟೊಂದು ಸುಲಭದ ಮಾತು ಆಗಿರಲಿಲ್ಲ. ಇಲ್ಲಿ ಇಂತಹ ಸ್ಪರ್ಧೆಯ ಮೂಲಕ ಸೌಂದರ್ಯ ಲೋಕದ ಅನಾವರಣ ಮಾಡುವ ಕೆಲಸ ನಡೆದಿದೆ. ಕರಾವಳಿ ಬರೀ ಆಚಾರ- ವಿಚಾರಗಳ ಜತೆಗೆ ಸೌಂದರ್ಯ ಸ್ಪರ್ಧೆಗಳಿಗೂ ಮನ್ನಣೆ ಸಿಗಬೇಕು’
ಚರಣ್ ಸುವರ್ಣ
ಮಿಸ್ ಮಂಗಳೂರು ಆಯೋಜಕರು
...
ಕೋಟ್ ಕಾರ್ನರ್
‘ಮಿಸ್ ಮಂಗಳೂರಿಗೆ ಈ ಬಾರಿ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ. ಮಿಸ್ ಮಂಗಳೂರಿಗೆ ಸರಿಸುಮಾರು ೨೭೦ಕ್ಕೂ ಅಧಿಕ ಎಂಟ್ರಿಗಳು ಬಂದಿತ್ತು. ಮಿಸ್ಟರ್ ಮಂಗಳೂರಿಗೆ ೭೦ ಎಂಟ್ರಿ ಬಂದಿತ್ತು. ಅದರಲ್ಲಿ ಆಯ್ಕೆ ಮಾಡೋದು ಸುಲಭದ ವಿಚಾರವಲ್ಲ. ಅದಕ್ಕಾಗಿಯೇ ವಿಶೇಷ ತಜ್ಞರ ತಂಡವನ್ನೇ ತೀರ್ಪುಗಾರರಾಗಿ ಆಯ್ಕೆ ಮಾಡಿಕೊಂಡಿದ್ದೇವು. ಎಂಟ್ರಿಗಳಲ್ಲಿ ಕರಾವಳಿ ಮೂಲದ ಬೆಂಗಳೂರು, ಮೈಸೂರು, ಮುಂಬಯಿಯಿಂದ ಸ್ಫರ್ಧಿಗಳು ಕಾಣಿಸಿಕೊಂಡಿದ್ದು ವಿಶೇಷ’
-
ಮುಖ್ಯಸ್ಥರು, ಡ್ರೀಮ್ ಕ್ರಾಪ್ಟ್ ಮಂಗಳೂರು.
ಸೌಂದರ್ಯ ಸ್ಪರ್ಧೆಯ ವಿನ್ನರ‍್ಸ್
ಮಿಸ್ಟರ್ ಮಂಗಳೂರು ಕಿರೀಟ:
ಶೈನಿ ಶೆಟ್ಟಿ, ಮಂಗಳೂರು
ಮಿಸ್ ಮಂಗಳೂರು ಕಿರೀಟ:
ಅದಿತಿ ಶೆಟ್ಟಿ, ಮುಂಬಯಿ
ಸೆಲೆಬ್ರಿಟಿ ಗೆಸ್ಟ್ ಆಪಿರೀಯನ್ಸ್
ಶಿವಾಸ್ ಮುಂಬಯಿಯ ಶಿವರಾಮ್ ಭಂಡಾರಿ
ಫ್ಯಾಶನ್ ಕೊರಿಯೋಗ್ರಾಫರ್ ಸಮೀರ್ ಖಾನ್
ಮಿಸ್ ಸೌತ್ ಇಂಡಿಯಾದ ಹೆಡ್ ಅಜಿತ್ ರವಿ
Subscribe to:
Posts (Atom)